ಸಂಮೋಹನ ಶಾಸ್ತ್ರ
ಸಂಮೋಹನ ವು ಮಾನಸಿಕ ಸ್ಥಿತಿ(ಸ್ಥಿತಿ ಸಿದ್ಧಾಂತ)ಅಥವಾ ಮನೋಭಾವನೆಗಳು ಮತ್ತು ನಂಬಿಕೆಗಳ ಗುಂಪಾಗಿದ್ದು(ಸ್ಥಿತಿರಹಿತ ಸಿದ್ಧಾಂತ)ಸಾಮಾನ್ಯವಾಗಿ ಸಂಮೋಹನ ಪ್ರವೇಶ ಎಂಬ ವಿಧಾನದ ಮೂಲಕ ಉಂಟುಮಾಡಲಾಗುತ್ತದೆ.ಇದು ಆರಂಭಿಕ ಅಂತಸ್ಸೂಚನೆ ಮತ್ತು ಸಲಹೆಗಳ ಸುದೀರ್ಘ ಸರಣಿಯನ್ನು ಸಾಮಾನ್ಯವಾಗಿ ಒಳಗೊಂಡಿರುತ್ತದೆ.[೩] ಸಂಮೋಹನಕಾರ ಸಂಮೋಹನದ ಅಂತಸ್ಸೂಚನೆಗಳನ್ನು ವ್ಯಕ್ತಿಯ ಉಪಸ್ಥಿತಿಯಲ್ಲಿ ಪ್ರಯೋಗಿಸಬಹುದು, ಅಥವಾ ಸ್ವತಃ ಪ್ರಯೋಗಿಸಬಹುದು(ಸ್ವ-ಸಲಹೆ ಅಥವಾ 'ಸ್ವಯಂ-ಸಲಹೆ'). ವೈದ್ಯಕೀಯ ಉದ್ದೇಶಗಳಿಗಾಗಿ ಬಳಸುವ ಸಂಮೋಹನ ಶಾಸ್ತ್ರವನ್ನು 'ಸಂಮೋಹನಾ ಚಿಕಿತ್ಸೆ' ಎನ್ನಲಾಗಿದೆ. ಸಂಮೋಹನ ಮತ್ತು ಸಂಮೋಹನ ನಿದ್ರೆ ಎರಡೂ ಪದಗಳು 'ನರ-ಸಂಮೋಹನ ನಿದ್ರೆ (ನರ-ನಿದ್ರೆ) ಎಂಬ ಪದದಿಂದ ಜನ್ಯವಾಗಿದೆ.
ಪದಬಳಕೆ
[ಬದಲಾಯಿಸಿ]- ಈ ಪದವನ್ನು ಸ್ಕಾಟಿಷ್ ಶಸ್ತ್ರಚಿಕಿತ್ಸಾ ವೈದ್ಯ ಜೇಮ್ಸ್ ಬ್ರೇಡ್ 1841ರಲ್ಲಿ ಮೊದಲ ಬಾರಿಗೆ ಹುಟ್ಟುಹಾಕಿದರು. ಫ್ರಾಂಜ್ ಮೆಸ್ಮರ್ ಮತ್ತು ಅವರ ಅನುಯಾಯಿಗಳು("ಮೆಸ್ಮರಿಸಂ" ಅಥವಾ "ಪ್ರಾಣಿ ಆಯಸ್ಕಾಂತತ್ವ") ಅಭಿವೃದ್ಧಿಪಡಿಸಿದ ವಿಧಾನದ ಆಧಾರದ ಮೇಲೆ ಬ್ರೇಡ್ ತಮ್ಮ ಪ್ರಯೋಗಗಳನ್ನು ನಡೆಸಿದರು. ಆದರೆ ಈ ವಿಧಾನವು ಹೇಗೆ ಕೆಲಸ ಮಾಡುತ್ತದೆಂಬ ಅವರ ಸಿದ್ಧಾಂತದಲ್ಲಿ ವ್ಯತ್ಯಾಸ ಹೊಂದಿದ್ದರು.
- ಸಂಮೋಹನ ಸ್ಥಿತಿಯು ನಿದ್ದೆಯನ್ನು ಹೋಲುವಂತಹ ಪ್ರಜ್ಞಾಹೀನಾವಸ್ಥೆಯ ಒಂದು ರೂಪ ಎಂಬ ಸಾರ್ವಜನಿಕ ತಪ್ಪುಕಲ್ಪನೆಗೆ ವಿರುದ್ಧವಾಗಿ, ಸಮಕಾಲೀನ ಸಂಶೋಧನೆಯ ಪ್ರಕಾರ, ಅದು ನಿಜಕ್ಕೂ ಎಚ್ಚರದ ಸ್ಥಿತಿಯಲ್ಲಿದ್ದು, ಗಮನವೆಲ್ಲವೂ ಒಂದೆಡೆ ಕೇಂದ್ರೀಕೃತವಾದ ಸ್ಥಿತಿ,[೪] ಹಾಗೂ ಬಹಳ ಹೆಚ್ಚಿನ ಸೂಚನಾವಶ್ಯತೆ ಜತೆಗೆ;[೫]
- ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ಕುಂದಿದ ಅರಿವು.[೬] ವಿಷಯದ ಕುರಿತು 1843ರಲ್ಲಿ ಪ್ರಕಟಿಸಿದ ತಮ್ಮ ಮೊದಲ ಪುಸ್ತಕ ನ್ಯೂರಿಪ್ನಾಲಜಿ ಯಲ್ಲಿ ಬ್ರೇಡ್ "ಸಂಮೋಹನ"ವನ್ನು ದೈಹಿಕ ವಿಶ್ರಾಂತಿಯೊಂದಿಗೆ ಮನಸ್ಸಿನ ಏಕಾಗ್ರತೆಯ ಸ್ಥಿತಿ(ಅಪಕರ್ಷಣ) ಎಂದು ಅವರು ವಿವರಿಸಿದರು.[೭]
ಗುಣಲಕ್ಷಣಗಳು
[ಬದಲಾಯಿಸಿ]- ಟೀಕಾಕಾರರ ಪ್ರಕಾರ, ಸಂಮೋಹನ ಮತ್ತು ಪ್ಲಸಿಬೊ ಪ್ರಭಾವಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಕಷ್ಟ. ಸಂಮೋಹನ ತಂತ್ರವು ಅಂತಸ್ಸೂಚನೆ ಮತ್ತು ನಂಬಿಕೆಯ ಪರಿಣಾಮಗಳ ಮೇಲೆ ವಿಪರೀತವಾಗಿ ಅವಲಂಬಿಸಿದೆ. ಸಂಮೋಹನದ ಅಧ್ಯಯನಕ್ಕೆ ವಿಶ್ವಾಸಾರ್ಹ ಪ್ಲಸೀಬೊ ನಿಯಂತ್ರಣವನ್ನು ರೂಪಿಸುವುದು ಹೇಗೆ ಸಾಧ್ಯ ಎಂಬುದನ್ನು ಕಲ್ಪಿಸುವುದು ಕಷ್ಟ.[೮]
- ಪ್ಲಸೀಬೊ ಪ್ರಭಾವವನ್ನು ಬಳಸುವುದು ಸಂಮೋಹನದ ಅಂತಸ್ಸೂಚನೆಯ ಸ್ಪಷ್ಟ ಉದ್ದೇಶವಾಗಿದೆ ಎಂದು ಹೇಳುವುದು ಸಾಧ್ಯ. ಉದಾಹರಣೆಗೆ, 1994ರಲ್ಲಿ, ಸಂಮೋಹನಕ್ಕೆ 'ಮೋಸಗೊಳಿಸದ ಮೆಗಾ-ಪ್ಲಸೀಬೊ' ಅರ್ಥಾತ್ 'ಅಂತಸ್ಸೂಚನೆಯನ್ನು ಮುಕ್ತವಾಗಿ ಬಳಸಿ, ಅದರ ಪ್ರಭಾವವನ್ನು ಹೆಚ್ಚಾಗಿಸಲು ಹಲವು ವಿಧಾನಗಳನ್ನು ಬಳಸುವುದು' ಎಂದು ಇರ್ವಿಂಗ್ ಕಿರ್ಷ್ ವ್ಯಾಖ್ಯಾನ ನೀಡಿದ್ದರು.[೯]
ವ್ಯಾಖ್ಯಾನಗಳು
[ಬದಲಾಯಿಸಿ]ಬ್ರೇಡ್ ಸಂಮೋಹನಕ್ಕೆ ಮೊಟ್ಟಮೊದಲ ವ್ಯಾಖ್ಯಾನ ನೀಡಿದ್ದರು. ಅವರು 'ಸಂಮೋಹನ ನಿದ್ರೆ' ಪದವನ್ನು 'ನರಗಳ ಸಂಮೋಹನ ನಿದ್ರೆ' (ಅಥವಾ ನರಮಂಡಲದ ನಿದ್ರೆ) ಎಂಬುದರ ಸಂಕ್ಷಿಪ್ತ ರೂಪ ಎಂದು ಪ್ರಯೋಗಿಸಿದರು. ಇದನ್ನು ಸಹಜ ನಿದ್ದೆಗಿಂತ ಭಿನ್ನವಾಗಿದೆ ಎಂದು ಹೇಳಿ,ವ್ಯಾಖ್ಯಾನಿಸಿದರು:
ನರಮಂಡಲ ವ್ಯವಸ್ಥೆಯ ವಿಶಿಷ್ಟ ಸ್ಥಿತಿ, ಒಂದು ವಸ್ತುವಿನ ಮೇಲೆ ಮಾನಸಿಕ ಮತ್ತು ನೋಟಕ್ಕೆ ಸಂಬಂಧಿಸಿದ ಕಣ್ಣಿನ ಸ್ಥಿರ ಮತ್ತು ಅಮೂರ್ತ ಗಮನದಿಂದ ಇದು ಪ್ರೇರಿತವಾಗಿದೆ.ಇದು ಪ್ರಚೋದಿಸುವ ಸ್ವಭಾವದಿಂದ ಕೂಡಿಲ್ಲ.[೧೦]
ಆನಂತರದ ಸಂಶೋಧನೆಯ ಕುರಿತು ಬ್ರೇಡ್ ಈ ಸಂಕ್ಷಿಪ್ತ ವ್ಯಾಖ್ಯಾನವನ್ನು ವಿವರಿಸಿದರು:
[...] ಸಂಮೋಹನದ ಸ್ಥಿತಿಯ ಮೂಲ ಮತ್ತು ತತ್ತ್ವವೇನೆಂದರೆ, ಅಮೂರ್ತತೆ ಅಥವಾ ಮನಸ್ಸಿನ ಏಕಾಗ್ರತೆಯ ಪ್ರವೃತ್ತಿಯನ್ನು ಅಳವಡಿಸುವುದು.ಇದರಲ್ಲಿ ಹಗಲುಗನಸಿನ ಸ್ಥಿತಿ ಅಥವಾ ಸ್ವಯಂಪ್ರೇರಿತ ಆಮೂರ್ತತೆಯಂತೆ, ಮನಸ್ಸಿನ ಶಕ್ತಿಗಳೆಲ್ಲವು ಒಂದೇ ಕಲ್ಪನೆ ಅಥವಾ ಯೋಚನೆಯಲ್ಲಿ ಮುಳುಗಿಹೋಗಿರುತ್ತದೆ.ತಾತ್ಕಾಲಿಕವಾಗಿ ವ್ಯಕ್ತಿಯಲ್ಲಿ ಪ್ರಜ್ಞಾಹೀನಸ್ಥಿತಿ ಉಂಟುಮಾಡುವುದು ಅಥವ ಆ ವ್ಯಕ್ತಿಯು ಬೇರೆ ಇತರೆ ಕಲ್ಪನೆಗಳು, ಅನಿಸಿಕೆಗಳು ಅಥವಾ ಯೋಚನೆಗಳಿಗೆ ಸ್ಪಂದಿಸದಂತೆ ಮಾಡುವುದು. ಆದ್ದರಿಂದ, ಸಾಮಾನ್ಯ ನಿದ್ದೆಯ ಮುಂಚಿನ ಮತ್ತು ಜತೆಯ ಮಾನಸಿಕ ಮತ್ತು ದೈಹಿಕ ಸ್ಥಿತಿಗೆ ಸಂಮೋಹನದ ನಿದ್ದೆಯು ತದ್ವಿರುದ್ಧವಾಗಿದೆ. [...][೧೧]
ಇದರಿಂದಾಗಿ, ಬ್ರೇಡ್ ಸಂಮೋಹನ ನಿದ್ರೆಯನ್ನು ಮನಸ್ಸಿನ ಏಕಾಗ್ರ ಸ್ಥಿತಿಯಾಗಿದ್ದು 'ನರಗಳ ನಿದ್ರೆ' ಎನ್ನಲಾದ ಮುಂದುವರೆದ ವಿಶ್ರಾಂತ ಸ್ಥಿತಿಗೆ ದಾರಿಕಲ್ಪಿಸುತ್ತದೆ ಎಂದು ವ್ಯಾಖ್ಯಾನಿಸಿದರು. ಆನಂತರ, ತಮ್ಮ ಫಿಸ್ಯಾಲಜಿ ಆಫ್ ಫ್ಯಾಸಿನೇಷನ್ ಕೃತಿಯಲ್ಲಿ, ತಮ್ಮ ಮೂಲತಃ ಪರಿಭಾಷೆಯು ತಪ್ಪುದಾರಿಗೆ ಎಳೆಯುತ್ತದೆ ಎಂದು ಬ್ರೇಡ್ ಒಪ್ಪಿಕೊಂಡರು. ವಿಸ್ಮೃತಿಪ್ರದರ್ಶಿಸುವ ಅಲ್ಪಸಂಖ್ಯಾತ(10%) ವ್ಯಕ್ತಿಗಳಿಗೆ ಮಾತ್ರ 'ಸಂಮೋಹನ ಸ್ಥಿತಿ' ಅಥವಾ 'ನರಗಳ ನಿದ್ದೆ' ಎಂಬ ಉಕ್ತಿಯನ್ನು ಮೀಸಲಿಡಬೇಕು ಎಂದರು. ಈ ಪದವನ್ನು ಒಂದೇ ವಿಷಯದ ಧ್ಯಾನ, ಅಂದರೆ ಒಂದೇ ಕಲ್ಪನೆಯ ಬಗ್ಗೆ ಏಕಾಗ್ರಚಿತ್ತತೆ, ಇತರರು ಅನುಭವಿಸುವ ಹೆಚ್ಚು ಎಚ್ಚರದ ಸ್ಥಿತಿಗೆ ಒಂದು ವಿವರಣೆಯಾಗಿದೆ.ಶೈಕ್ಷಣಿಕ ಮನೋವಿಜ್ಞಾನದಿಂದ ಪಡೆಯಲಾದ ಸಂಮೋಹನದ ಹೊಸ ವ್ಯಾಖ್ಯಾನವನ್ನು 2005ರಲ್ಲಿ ನೀಡಲಾಯಿತು. ಅಮೆರಿಕನ್ ಮನೋವಿಜ್ಞಾನ ಸಂಘದ (APA) 30ನೆಯ ವಿಭಾಗವಾದ ಮನೋವೈಜ್ಞಾನಿಕ ಸಂಮೋಹನಾ ಸಮಾಜವು ಕೆಳಕಂಡ ವ್ಯಾಖ್ಯಾನವನ್ನು ಪ್ರಕಟಿಸಿತು:
New Definition: Hypnosis
The Division 30 Definition and Description of Hypnosis
Hypnosis typically involves an introduction to the procedure during which the subject is told that suggestions for imaginative experiences will be presented. The hypnotic induction is an extended initial suggestion for using one's imagination, and may contain further elaborations of the introduction. A hypnotic procedure is used to encourage and evaluate responses to suggestions. When using hypnosis, one person (the subject) is guided by another (the hypnotist) to respond to suggestions for changes in subjective experience, alterations in perception, sensation, emotion, thought or behavior. Persons can also learn self-hypnosis, which is the act of administering hypnotic procedures on one's own. If the subject responds to hypnotic suggestions, it is generally inferred that hypnosis has been induced. Many believe that hypnotic responses and experiences are characteristic of a hypnotic state. While some think that it is not necessary to use the word "hypnosis" as part of the hypnotic induction, others view it as essential.
Details of hypnotic procedures and suggestions will differ depending on the goals of the practitioner and the purposes of the clinical or research endeavor. Procedures traditionally involve suggestions to relax, though relaxation is not necessary for hypnosis and a wide variety of suggestions can be used including those to become more alert. Suggestions that permit the extent of hypnosis to be assessed by comparing responses to standardized scales can be used in both clinical and research settings. While the majority of individuals are responsive to at least some suggestions, scores on standardized scales range from high to negligible. Traditionally, scores are grouped into low, medium, and high categories. As is the case with other positively-scaled measures of psychological constructs such as attention and awareness, the salience of evidence for having achieved hypnosis increases with the individual's score.[೧೨]
ಪ್ರವೇಶ
[ಬದಲಾಯಿಸಿ]- ಸಾಮಾನ್ಯವಾಗಿ, ಸಂಮೋಹನಕ್ಕೆ ಮುಂಚೆ "ಸಂಮೋಹನ ಪ್ರವೇಶ" ತಂತ್ರವನ್ನು ನಡೆಸಲಾಗುತ್ತದೆ. ಸಾಂಪ್ರದಾಯಿಕವಾಗಿ, ವ್ಯಕ್ತಿಯನ್ನು ಸಂಮೋಹನ ಸ್ಥಿತಿಗೆ ಒಳಪಡಿಸುವ ರೀತಿ ಎಂದು ಅರ್ಥೈಸಲಾಗಿತ್ತು. ಆದರೆ, ಆನಂತರದ "ಸ್ಥಿರರಹಿತ " ಸಿದ್ಧಾಂತಿಗಳು, 'ಗ್ರಾಹಕರ ನಿರೀಕ್ಷೆಗಳನ್ನು ಹೆಚ್ಚಿಸಲು, ಅವರ ಪಾತ್ರವನ್ನು ವ್ಯಾಖ್ಯಾನಿಸಲು, ಗಮನವನ್ನು ಕೇಂದ್ರೀಕರಿಸಲು ಇತ್ಯಾದಿ ತಂತ್ರಗಳಿಗಾಗಿ ಬಳಸಲಾಗಿದೆ ಎಂದು ಇದನ್ನು ಭಿನ್ನವಾಗಿ ಪರಿಗಣಿಸಿದ್ದಾರೆ.
- ಸಂಮೋಹನ ನಿದ್ರೆಯಲ್ಲಿ ಬಳಸಲಾದ ಭಿನ್ನ ತಂತ್ರಗಳಲ್ಲಿ ಹಲವು ವಿಧಗಳಿವೆ. ಇದುವರೆಗೂ, ಮೂಲತಃ ಬ್ರೇಡ್ ಬಳಸಿದ "ಕಣ್ಣಿನ ದೃಷ್ಟಿ ಸ್ಥಿರೀಕರಣ" ತಂತ್ರವೇ ಅತಿ ಪ್ರಭಾವಶಾಲಿ ರೀತಿಯಾಗಿತ್ತು. ಇದಕ್ಕೆ ಬ್ರೇಡಿಸಮ್ ಎನ್ನಲಾಗಿತ್ತು. ಕಣ್ಣು ದೃಷ್ಟಿ ಸ್ಥಿರೀಕರಣ ತಂತ್ರ ಕುರಿತು ಹಲವು ವ್ಯತ್ಯಾಸಗಳುಂಟು. ಇದರಲ್ಲಿ ಸ್ಟ್ಯಾನ್ಫರ್ಡ್ ಸಂಮೋಹನದ ಒಳಗಾಗುವಿಕೆಯ ಮಾಪಕ (SHSS)ದಲ್ಲಿ ಬಳಸುವ ವಿಧಾನ ಸಹ ಸೇರಿದೆ.
- ಸಂಮೋಹನ ನಿದ್ರೆ ಕ್ಷೇತ್ರದಲ್ಲಿ ಇದು ಅತಿ ವ್ಯಾಪಕವಾಗಿ ಬಳಸಲಾದ ಸಂಶೋಧನಾ ಸಾಧನವಾಗಿದೆ. ಬ್ರೇಡ್‌ರ ಪ್ರವೇಶ ತಂತ್ರದ ಮೂಲತಃ ವಿವರಣೆಯು ಕೆಳಕಂಡಂತಿದೆ:
James Braid's Original Eye-Fixation Hypnotic Induction Method
Take any bright object (I generally use my lancet case) between the thumb and fore and middle fingers of the left hand; hold it from about eight to fifteen inches from the eyes, at such position above the forehead as may be necessary to produce the greatest possible strain upon the eyes and eyelids, and enable the patient to maintain a steady fixed stare at the object.
The patient must be made to understand that he is to keep the eyes steadily fixed on the object, and the mind riveted on the idea of that one object. It will be observed, that owing to the consensual adjustment of the eyes, the pupils will be at first contracted: they will shortly begin to dilate, and after they have done so to a considerable extent, and have assumed a wavy motion, if the fore and middle fingers of the right hand, extended and a little separated, are carried from the object towards the eyes, most probably the eyelids will close involuntarily, with a vibratory motion. If this is not the case, or the patient allows the eyeballs to move, desire him to begin anew, giving him to understand that he is to allow the eyelids to close when the fingers are again carried towards the eyes, but that the eyeballs must be kept fixed, in the same position, and the mind riveted to the one idea of the object held above the eyes. It will generally be found, that the eyelids close with a vibratory motion, or become spasmodically closed.[೧೩]
- ಆನಂತರ, ಸಂಮೋಹನ ಪ್ರವೇಶ ತಂತ್ರವನ್ನು ಪ್ರತಿಯೊಂದು ನಿದರ್ಶನದಲ್ಲಿಯೂ ಬಳಸುವ ಅಗತ್ಯವಿಲ್ಲ ಎಂದು ಬ್ರೇಡ್ ಸ್ವತಃ ಒಪ್ಪಿಕೊಂಡರು. ತರುವಾಯದ ಸಂಶೋಧಕರು ಸಂಮೋಹಕ ಅಂತಸ್ಸೂಚನೆಗಳ ಪರಿಣಾಮಕ್ಕೆ ಇದು ಸರಾಸರಿಯಾಗಿ ಮುಂಚೆ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಕೊಡುಗೆ ನೀಡುತ್ತದೆಂದು ಕಂಡುಹಿಡಿದರು.(q.v., ಬಾರ್ಬರ್, ಸ್ಪಾನೊಸ್ & ಚೇವೆಸ್, 1974). ಆನಂತರ, ಮೂಲತಃ ಸಂಮೋಹನ ಪ್ರವೇಶ ತಂತ್ರಗಳಿಗೆ ಹಲವು ವ್ಯತ್ಯಾಸರೂಪಗಳು ಮತ್ತು ಪರ್ಯಾಯಗಳನ್ನು ಅಭಿವೃದ್ಧಿಪಡಿಸಲಾಯಿತು.
- ಆದರೂ, ಬ್ರೇಡ್ ಈ ತಂತ್ರವನ್ನು ಪರಿಚಯಿಸಿ ಸರಿಯಾಗಿ 100 ವರ್ಷಗಳ ನಂತರ, ಇನ್ನೊಬ್ಬ ತಜ್ಞರು ಸಂಮೋಹನದ ಬಗ್ಗೆ ಹೀಗೆ ಹೇಳಲು ಸಾಧ್ಯ 'ಹತ್ತು ಸಂಮೋಹನ ತಂತ್ರಗಳಲ್ಲಿ ಒಂಬತ್ತರಲ್ಲಿ ಮಲಗುವ ಭಂಗಿ, ಸ್ನಾಯುಗಳ ಸಡಿಲತೆ, ಕಣ್ಣುದೃಷ್ಟಿಯ ಸ್ಥಿರೀಕರಣ, ನಂತರ ಕಣ್ಣು ಮುಚ್ಚುವಿಕೆಯ ಹಂತಗಳು ಎಂದು ಸುರಕ್ಷಿತವಾಗಿ ಹೇಳಬಹುದು' [೧೪]
ಅಂತಸ್ಸೂಚನೆ
[ಬದಲಾಯಿಸಿ]- ಜೇಮ್ಸ್ ಬ್ರೇಡ್ ಮೊದಲ ಬಾರಿಗೆ ಸಂಮೋಹನವನ್ನು ವ್ಯಾಖ್ಯಾನಿಸಿದಾಗ, ಅವರು "ಅಂತಸ್ಸೂಚನೆ" ಎಂಬ ಉಕ್ತಿಯನ್ನು ಬಳಸಲಿಲ್ಲ, ಆದರೆ ವ್ಯಕ್ತಿಯ ಜಾಗ್ರತ ಮನಸ್ಸನ್ನು ಒಂದೇ ಕಲ್ಪನೆಯ ಮೇಲೆ ಕೇಂದ್ರೀಕರಿಸುವ ಕ್ರಿಯೆಯನ್ನು ಬದಲಿಗೆ ಉಲ್ಲೇಖಿಸಿದರು. ಬ್ರೇಡ್‌ರ ಮುಖ್ಯ ಚಿಕಿತ್ಸಾತ್ಮಕ ರೂಪುರೇಖೆಯಲ್ಲಿ ಶರೀರದ ವಿವಿಧ ಭಾಗಗಳಲ್ಲಿ ಶರೀರವೈಜ್ಞಾನಿಕ ಕ್ರಿಯೆಗಳನ್ನು ಉದ್ದೀಪನಗೊಳಿಸುವ ಅಥವಾ ಕಡಿಮೆಗೊಳಿಸುವ ತಂತ್ರಗಳನ್ನು ಒಳಗೊಂಡಿತ್ತು.
- ತಮ್ಮ ಆನಂತರದ ಕೃತಿಗಳಲ್ಲಿ, ಅಂತಸ್ಸೂಚನೆಯ ವಿವಿಧ ಶಾಬ್ದಿಕ ಮತ್ತು ಅಶಾಬ್ದಿಕ ರೂಪಗಳ ಬಳಕೆಗೆ ಬ್ರೇಡ್ ಹೆಚ್ಚಿನ ಮಹತ್ವ ನೀಡಿದರು.ಇದರಲ್ಲಿ "ಎಚ್ಚೆತ್ತುಕೊಳ್ಳುವ ಅಂತಸ್ಸೂಚನೆ" ಮತ್ತು ಸ್ವಯಂ-ಸಂಮೋಹನ ಸಹ ಸೇರಿವೆ. ತರುವಾಯ, [[ಹಿಪೊಲೈಟ್ ಬರ್ನ್‌ಹೇಮ್|ಹಿಪೊಲೈಟ್ ಬರ್ನ್‌ಹೇಮ್]] ಸಂಮೋಹನದ ಭೌತಿಕ ಸ್ಥಿತಿಯ ಮೇಲಿನ ಮಹತ್ವವನ್ನು ಶಾಬ್ದಿಕ ಅಂತಸ್ಸೂಚನೆಯ ಮನೋವೈಜ್ಞಾನಿಕ ಪ್ರಕ್ರಿಯೆಯತ್ತ ಸ್ಥಳಾಂತರಿಸಿದರು.
ಸಂಮೋಹನ ಸ್ಥಿತಿ ಎಂದರೆ, 'ಅಂತಸ್ಸೂಚನೆಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುವ ಒಂದು ವಿಚಿತ್ರ ಮಾನಸಿಕ ಸ್ಥಿತಿಯೊಳಗೆ ಪ್ರವೇಶ' ಎಂದು ನಾನು ವ್ಯಾಖ್ಯಾನಿಸುವೆ. (ಸಂಮೋಹನ) ನಿದ್ರೆಯು ಅಂತಸ್ಸೂಚನೆಯನ್ನು ಸುಗಮಗೊಳಿಸುತ್ತದೆ ಎಂಬುದು ಸಾಮಾನ್ಯವಾಗಿ ನಿಜ. ಆದರೆ ಅದು ಅಗತ್ಯ ಪೂರ್ವಭಾವಿಯಲ್ಲ. ಅಂತಸ್ಸೂಚನೆಯು ಸಂಮೋಹನವನ್ನು ನಿರ್ವಹಿಸುತ್ತದೆ. (ಹಿಪ್ನೊಸಿಸ ^ ಸಗೆಷನ್ಸ್, 1884: 15) (ಹಿಪ್ನೋಸಿಸ್ & ಸಜೆಷನ್, 1884: 15)
ಇಪ್ಪತನೆಯ ಶತಮಾನದುದ್ದಕ್ಕೂ, ಸಂಮೋಹನದಲ್ಲಿ ಶಾಬ್ದಿಕ ಅಂತಸ್ಸೂಚನೆಯ ಪ್ರಾಮುಖ್ಯತೆಯ ಕುರಿತು ಬರ್ನ್‌ಹೇಮ್‌ರ ಪರಿಕಲ್ಪನೆಯು ಮೇಲುಗೈ ಪಡೆಯಿತು. ಇದರಿಂದಾಗಿ ಬರ್ನ್‌ಹೇಮ್‌ರಿಗೆ ಆಧುನಿಕ ಸಂಮೋಹನ ವಿಜ್ಞಾನದ ಜನಕ ಎಂಬ ಬಿರುದು ದೊರೆಯಿತು. (ವೇಜೆನ್ ಹೊಫ ರ್, 2000) ಸಮಕಾಲೀನ ಸಂಮೋಹನವು ಅಂತಸ್ಸೂಚನೆಯ ಹಲವು ವಿವಿಧ ರೀತಿಗಳನ್ನು ಬಳಸುತ್ತದೆ. ಇದರಲ್ಲಿ ಶಾಬ್ದಿಕ ಅಂತಸ್ಸೂಚನೆ, ಪರೋಕ್ಷ ಶಾಬ್ದಿಕ ಅಂತಸ್ಸೂಚನೆಗಳು (ವಿನಂತಿಗಳು ಅಥವಾ ಪರೋಕ್ಷ ಸೂಚನೆಗಳು), ರೂಪಾಲಂಕಾರಗಳು ಮತ್ತು ಇತರೆ ಆಲಂಕಾರಿಕ ವಾಕ್ಯಶೈಲಿಗಳು, ಹಾಗೂ ಮಾನಸಿಕ ಚಿತ್ರಣ, ಧ್ವನಿಯ ಬದಲಾವಣೆ ಹಾಗೂ ದೈಹಿಕ ಸ್ಪರ್ಶ ಸಹ ಸೇರಿವೆ. ಅನುಮತಿಯೊಂದಿಗೆ ನೀಡಲಾದ ಅಂತಸ್ಸೂಚನೆಗಳು ಹಾಗೂ ಇನ್ನೂ ಅಧಿಕಾರವಾಣಿಯಲ್ಲಿ ನೀಡಲಾದ ಅಂತಸ್ಸೂಚನೆಗಳ ನಡುವೆ ಸಾಮಾನ್ಯವಾಗಿ ವ್ಯತ್ಯಾಸಗಳನ್ನು ಮಾಡಲಾಗಿದೆ. ಕೆಲವು ಸಂಮೋಹನ ಅಂತಸ್ಸೂಚನೆಗಳು ಕೂಡಲೇ ಪ್ರತಿಕ್ರಿಯೆಗಳನ್ನು ಸೆಳೆಯುವ ಇಚ್ಛೆಯನ್ನು ಹೊಂದಿದೆ. ಇನ್ನೂ ಕೆಲವು (ಸಂಮೋಹನ ನಂತರದ ಅಂತಸ್ಸೂಚನೆಗಳು) ಸ್ವಲ್ಪ ವಿಳಂಬದ ನಂತರ ಪ್ರತಿಕ್ರಿಯೆಗಳನ್ನು ಸೆಳೆಯುವ ಉದ್ಧೇಶ ಹೊಂದಿದೆ. ಈ ವಿಳಂಬವು ಕೆಲವು ವರದಿಯಾದ ಪ್ರಕರಣಗಳ ರೀತಿಯಲ್ಲಿ ಕೆಲವು ನಿಮಿಷಗಳಿಂದ ಹಿಡಿದು ಹಲವು ವರ್ಷಗಳ ತನಕ ಹಿಡಿಯಬಹುದು.
ಜಾಗ್ರತ vs. ಅಜಾಗ್ರತ ಮನಸ್ಸು
[ಬದಲಾಯಿಸಿ]- ಅಂತಸ್ಸೂಚನೆಗಳೆಂದರೆ ಸಂಮೋಹನಾಧೀನ ವ್ಯಕ್ತಿಯ ಜಾಗ್ರತ ಮನಸ್ಸಿಗೆ ನೇರವಾಗಿ ರವಾನಿಸಲಾಗುವ ಸಂವಹನ ಎಂದು ಕೆಲವು ಸಂಮೋಹನಕಾರರು ನಂಬಿದ್ದಾರೆ. ಇನ್ನೊಂದೆಡೆ ಕೆಲವರು ಅಂತಸ್ಸೂಚನೆಯನ್ನು ಅಜಾಗೃತ ಅಥವಾ "ಸುಪ್ತ"ಮನಸ್ಸಿನೊಂದಿಗೆ ಸಂವಹನ ನಡೆಸುವ ಒಂದು ಸ್ಥಿತಿ ಎಂದಿದ್ದಾರೆ. ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ ಸಿಗ್ಮಂಡ್ ಫ್ರಾಯ್ಡ್ ಹಾಗೂ ಪಿಯರ್ ಜೇನೆಟ್ ಈ ಪರಿಕಲ್ಪನೆಗಳನ್ನು ಸಂಮೋಹನ ತಂತ್ರದಲ್ಲಿ ಪರಿಚಯಿಸಿದರು.
- ಬ್ರೇಡ್ ಮತ್ತು ಬರ್ನ್‌ಹೇಮ್ ಸೇರಿದಂತೆ ಇತರೆ ಮೂಲತಃ ವಿಕ್ಟೋರಿಯನ್ ಹರಿಕಾರರು ಇಂತಹ ಪರಿಕಲ್ಪನೆಗಳನ್ನು ಬಳಸಲಿಲ್ಲ, ಆದರೆ, ವ್ಯಕ್ತಿಯ ಜಾಗೃತ ಮನಸ್ಸಿಗೆ ಕಳುಹಿಸಬೇಕಾದ ಸಂಮೋಹನ ಅಂತಸ್ಸೂಚನೆಗಳನ್ನು ಪರಿಗಣಿಸಿದರು. ವಾಸ್ತವಿಕವಾಗಿ, ಬ್ರೇಡ್ ಸಂಮೋಹನವನ್ನು ಪ್ರಬಲವಾದ ಕಲ್ಪನೆ ಅಥವಾ ಅಂತಸ್ಸೂಚನೆಯತ್ತ ಕೇಂದ್ರೀಕರಿಸಿದ (ಜಾಗ್ರತ) ಗಮನ ಎಂದು ವ್ಯಾಖ್ಯಾನಿಸಿದ್ದಾರೆ. ಮನಸ್ಸಿನ ಸ್ವಭಾವದ ಕುರಿತು ವಿಭಿನ್ನ ಅಭಿಪ್ರಾಯಗಳು ಅಂತಸ್ಸೂಚನೆಯ ವಿವಿಧ ಪರಿಕಲ್ಪನೆಗಳಿಗೆ ಕಾರಣವಾಗಿದೆ.
- ಅಜಾಗೃತ ಮನಸ್ಸಿನ ಮೂಲಕ ಈ ಪ್ರತಿಕ್ರಿಯೆಗಳನ್ನು ನಿರ್ವಹಿಸಲಾಗುತ್ತದೆ ಎಂದು ನಂಬಿದ ಮಿಲ್ಟನ್ ಎರಿಕ್ಸನ್‌ನಂತಹ ಸಂಮೋಹನಕಾರರು, ರೂಪಕಗಳು ಅಥವಾ ಕಥೆಗಳ ಮೂಲಕ ಪರೋಕ್ಷ ಅಂತಸ್ಸೂಚನೆಗಳನ್ನು ಹೆಚ್ಚಾಗಿ ಬಳಸಿದರು. ಇವುಗಳ ಉದ್ದೇಶಿತ ಅರ್ಥವನ್ನು ಸಂಮೋಹನಾಧೀನ ವ್ಯಕ್ತಿಯ ಜಾಗೃತ ಮನಸ್ಸಿನಿಂದ ಅವಿತಿಡಲಾಗುತ್ತಿತ್ತು.
- ಪ್ರಜ್ಞಾಪೂರ್ವ ಅಂತಸ್ಸೂಚನೆಯ ಪರಿಕಲ್ಪನೆಯು ಸಹ ಮನಸ್ಸಿನ ಈ ನಿಲುವನ್ನು ಅವಲಂಬಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಅಂತಸ್ಸೂಚನೆಗಳಿಗೆ ಪ್ರತಿಕ್ರಿಯೆಗಳು ಪ್ರಾಥಮಿಕವಾಗಿ ಜಾಗೃತ ಮನಸ್ಸಿನ ಮೂಲಕ ನಿರ್ವಹಿಸಲಾಗಿದೆ ಎಂದು ನಂಬಿದ ಥಿಯೊಡೊರ್ ಬಾರ್ಬರ್ ಮತ್ತು ನಿಕಾಲಸ್ ಸ್ಪಾನೊಸ್‌ರಂತಹ ಸಂಮೋಹನಕಾರರು ನೇರವಾದ ಶಾಬ್ದಿಕ ಅಂತಸ್ಸೂಚನೆಗಳು ಮತ್ತು ಆದೇಶಗಳನ್ನು ಹೆಚ್ಚಾಗಿ ಬಳಸುತ್ತಿದ್ದರು.
ಐಡಿಯೊ-ಡೈನಾಮಿಕ್ ಪ್ರತಿವರ್ತನ
[ಬದಲಾಯಿಸಿ]- ಸಂಮೋಹನ ಅಂತಸ್ಸೂಚನೆಯ ಮೊದಲ ನರ-ಮನೋವೈಜ್ಞಾನಿಕ ಸಿದ್ಧಾಂತವನ್ನು ಮೊದಲಿಗೆ ಜೇಮ್ಸ್ ಬ್ರೇಡ್ ಪರಿಚಯಿಸಿದರು. ಸಂಮೋಹನದ ವಿಷಯವನ್ನು ಲೆಕ್ಕಿಸಲು, ಅವರು ತಮ್ಮ ಸ್ನೇಹಿತ ಮತ್ತು ಸಹೋದ್ಯೋಗಿ ವಿಲಿಯಮ್ ಕಾರ್ಪೆಂಟರ್‌ರ ಐಡಿಯೊ-ಮೊಟಾರ್ ಪ್ರತಿ ವರ್ತನ ಪ್ರತಿಕ್ರಿಯೆ ಸಿದ್ಧಾಂತವನ್ನು ಆಯ್ದುಕೊಂಡರು.
- ಪ್ರತಿದಿನದ ಅನುಭವದ ಸೂಕ್ಷ್ಮ ಪರೀಕ್ಷೆಯಿಂದ ಕಾರ್ಪೆಂಟರ್ ಗಮನಿಸಿದ್ದೇನೆಂದರೆ, ನಿರ್ದಿಷ್ಟ ಸನ್ನಿವೇಶಗಳಲ್ಲಿ,ಸ್ನಾಯುಗಳ ಚಲನೆಯ ಕೇವಲ ಕಲ್ಪನೆ ಮಾತ್ರ ಅನುವರ್ತಕ ಅಥವಾ ತಾನೇತಾನಾಗಿ ಒಳಗೊಂಡ ಸ್ನಾಯುಗಳ ಸಂಕೋಚನೆ ಅಥವಾ ಚಲನೆಯನ್ನು ಸಣ್ಣ ಪ್ರಮಾಣದಲ್ಲಾದರೂ ಉಂಟುಮಾಡಲು ಸಾಕಾಗುತ್ತದೆ. ಸ್ನಾಯು ಚಲನ-ವಲನವಲ್ಲದೆ, ಇತರೆ ವಿಭಿನ್ನ ದೈಹಿಕ ಪ್ರತಿಕ್ರಿಯೆಗಳ ಮೇಲೆ ಪರಿಣಾಮ ಬೀರಬಹುದು ಎಂಬ ನಿರ್ಣಯವನ್ನು ಸೇರಿಸಿಕೊಳ್ಳಲು ಬ್ರೇಡ್ ಕಾರ್ಪೆಂಟರ್‌ರ ಸಿದ್ಧಾಂತವನ್ನು ವಿಸ್ತರಿಸಿದರು.
- ಉದಾಹರಣೆಗೆ, ನಿಂಬೆಹಣ್ಣನ್ನು ಹೀರಿಕೊಳ್ಳುವ ಕಲ್ಪನೆಯು ಸ್ವಯಂಚಾಲಿತವಾಗಿ ಬಾಯಲ್ಲಿ ನೀರುಸುರಿಸುವ ಪ್ರತಿಕ್ರಿಯೆಯನ್ನು ಉದ್ದೀಪನಗೊಳಿಸುತ್ತದೆ, ಇದು ಗ್ರಂಥಿ ಸ್ರವಿಸುವ ಪ್ರತಿಕ್ರಿಯೆಯಾಗಿದೆ. ಆದ್ದರಿಂದ, ಮನೋ-ಶರೀರವೈಜ್ಞಾನಿಕ ವಿಷಯದ ವಿಶಾಲ ಶ್ರೇಣಿಯನ್ನು ವಿವರಿಸಲು, ಬ್ರೇಡ್ ಐಡಿಯೊ-ಡೈನಾಮಿಕ್ (ಆರ್ಥಾತ್ 'ಕಲ್ಪನೆಯ ಶಕ್ತಿಯಿಂದ') ಎಂಬ ಉಕ್ತಿಯನ್ನು ಆಯ್ದುಕೊಂಡರು.
- ಐಡಿಯೊ-ಡೈನಾಮಿಕ್ ಪ್ರತಿವರ್ತನ ಪ್ರತಿಕ್ರಿಯೆಯನ್ನು ವರ್ಧಿಸಲು, ಸಂಮೋಹನ ಪ್ರಕ್ರಿಯೆಯು ಒಂದೇ ಕಲ್ಪನೆಯ ಮೇಲೆ ಗಮನವನ್ನು ಕೇಂದ್ರೀಕರಿಸುವ ಮೂಲಕ ಕೆಲಸ ಮಾಡುತ್ತದೆಯೆಂಬ ಸಿದ್ಧಾಂತವನ್ನು ಉಲ್ಲೇಖಿಸಲು, ಬ್ರೇಡ್ "ಮೊನೊ-ಐಡಿಯೊಡೈನಾಮಿಕ್" ಎಂಬ ಪದವನ್ನು ಪ್ರತಿಪಾದಿಸಿದರು. ಅಂತಸ್ಸೂಚನೆಯ ಮೂಲಭೂತ ಐಡಿಯೊ-ಮೊಟಾರ್ ಅಥವಾ ಐಡಿಯೊ-ಡೈನಾಮಿಕ್ ಸಿದ್ಧಾಂತಗಳ ಭಿನ್ನರೂಪಗಳು, ಆನಂತರ ಪ್ರತಿಪಾದಿಸಲಾದ ಸಂಮೋಹನದ ಸಿದ್ಧಾಂತಗಳ ಮೇಲೆ ಗಮನಾರ್ಹ ಪ್ರಭಾವ ಹೊಂದಿದೆ.
- ಕ್ಲಾರ್ಕ್ ಎಲ್. ಹಲ್, ಹ್ಯಾನ್ಸ್ ಎಯ್ಸೆನ್ಕ್ ಹಾಗೂ ಅರ್ನೆಸ್ಟ್ ರೊಸ್ಸಿ ಸೇರಿದಂತೆ ಹಲವರು ಇಂತಹ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದರು. ವಿಕ್ಟೊರಿಯನ್ ಮನೋವಿಜ್ಞಾನದಲ್ಲಿ, 'ಕಲ್ಪನೆ (ಐಡಿಯಾ)' ಎಂಬ ಪದವು ಯಾವುದೇ ಮಾನಸಿಕ ನಿರೂಪಣೆಯನ್ನು ಒಳಗೊಳ್ಳುತ್ತದೆ, ಉದಾಹರಣೆಗೆ ಮಾನಸಿಕ ಚಿತ್ರಣ, ಸ್ಮರಣೆ, ಇತ್ಯಾದಿ.
ಸಂಮೋಹನ-ನಂತರದ ಅಂತಸ್ಸೂಚನೆ
[ಬದಲಾಯಿಸಿ]- ಸಂಮೋಹನ ಸ್ಥಿತಿಯಿಂದ ಹೊರಬರುವ ವ್ಯಕ್ತಿಯ ನಡವಳಿಕೆಯನ್ನು ಪರಿವರ್ತಿಸಲು ಸಂಮೋಹನ-ನಂತರದ ಅಂತಸ್ಸೂಚನೆಯನ್ನು ಬಳಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ವ್ಯಕ್ತಿಯೊಬ್ಬರು 'ಕೆಲವು ಸಮಯ ಬಳಿಕ, ಸಂಮೋಹನ ಅವಧಿಯಲ್ಲಿ ತನ್ನೊಳಗೆ ಅಳವಡಿಸಲಾದ ಅಂತಸ್ಸೂಚನೆಯಂತೆ ವರ್ತಿಸಬಹುದು' ಎಂದು ಲೇಖಕರೊಬ್ಬರು ಬರೆದರು.
- ಸಂಮೋಹನ ಚಿಕಿತ್ಸಕರೊಬ್ಬರು, ಸ್ನೇಹಿತನಾಗಿದ್ದ ತಮ್ಮ ರೋಗಿಯೊಬ್ಬರಿಗೆ 'ನಾನು ನಿಮ್ಮ ಬೆರಳ ಮೇಲೆ ಸ್ಪರ್ಶಿಸಿದಾಗ ನೀವು ಕೂಡಲೇ ಸಂಮೋಹಿತನಾಗುತ್ತೀರಿ' ಎಂದು ಹೇಳಿದ್ದರು. ಹದಿನಾಲ್ಕು ವರ್ಷಗಳ ನಂತರ, ಸಂಜೆಯ ಔತಣಕೂಟದಲ್ಲಿ ಅವರು ತಮ್ಮ ಸ್ನೇಹಿತರನ್ನು ಉದ್ದೇಶಪೂರ್ವಕವಾಗಿ ಬೆರಳಿನಿಂದ ಸ್ಪರ್ಶಿಸಿದರು. ಆ ಸ್ನೇಹಿತ ಕೂಡಲೇ ಸಂಮೋಹನಕ್ಕೆ ಒಳಗಾಗಿ ಕುರ್ಚಿಗೆ ಒರಗಿಕೊಂಡರಂತೆ.[೧೫]
ಪ್ರಭಾವಕ್ಕೆ ಒಳಗಾಗುವಿಕೆ
[ಬದಲಾಯಿಸಿ]- ಬ್ರೇಡ್ ಸಂಮೋಹನದ ವಿವಿಧ ಹಂತಗಳ ನಡುವೆ ಸ್ಥೂಲ ವಿಭಿನ್ನತೆಗಳನ್ನು ಸ್ಥೂಲವಾಗಿ ಗುರುತಿಸಿದರು. ಇದನ್ನು ಅವರು ಸಂಮೋಹನ ಸ್ಥಿತಿಯ ಮೊದಲ ಮತ್ತು ಎರಡನೆಯ ಜಾಗೃತ ಹಂತಗಳು ಎಂದು ಬಣ್ಣಿಸಿದರು. ಆನಂತರ ಅವರು ಇದನ್ನು ಬದಲಿಸಿ, ಉಪ-ಸಂಮೋಹನ ಸ್ಥಿತಿ, ಸಂಪೂರ್ಣ ಸಂಮೋಹನ ಸ್ಥಿತಿ ಮತ್ತು ಸಂಮೋಹನ ಸ್ಥಿತಿಯ ಕೊಮಾ ಹಂತಗಳೆಂಬ ಹೊಸ ಉಕ್ತಿಗಳನ್ನು ಬಳಸಿದರು. ಜೀನ್-ಮಾರ್ಟಿನ್ ಚಾರ್ಕಾಟ್ ನಿದ್ರೆ ನಡಿಗೆ, ಆಲಸ್ಯ ಮತ್ತು ಮೂರ್ಛೆರೋಗ ಎಂಬ ಹಂತಗಳ ನಡುವೆ ಇದೇ ರೀತಿಯ ಭಿನ್ನತೆಗಳನ್ನು ಗುರುತಿಸಿದರು. *ಆದರೆ, ಅಬ್ರೊಯಿಸ್ ಅಗಸ್ಟ್ ಲೇಬೊಲ್ಟ್ ಮತ್ತು ಬರ್ನ್‌ಹೇಮ್ ಇನ್ನಷ್ಟು ಸಂಕೀರ್ಣ ಸಂಮೋಹನದ "ಆಳ"ದ ಮಾಪಕಗಳನ್ನು ಪರಿಚಯಿಸಿದ್ದರು. ಇದು ವರ್ತನೆಯ, ಶರೀರವೈಜ್ಞಾನಿಕ ಹಾಗೂ ಮನೋಗ್ರಾಹ್ಯ ಪ್ರತಿಕ್ರಿಯೆಗಳ ಸಂಯೋಜನೆಗಳ ಆಧಾರದ ಮೇಲೆ ಇದನ್ನು ಪರಿಚಯಿಸಿದ್ದರು. ಕೆಲವು ನೇರ ಅಂತಸ್ಸೂಚನೆಗಳಿಂದ ಕಾರಣವಾಗಿದ್ದರೆ,ಇನ್ನೂ ಕೆಲವು ನೇರ ಅಂತಸ್ಸೂಚನೆಗಳಲ್ಲ.
- ಇಪ್ಪತ್ತನೆಯ ಶತಮಾನದ ಮೊದಲ ಕೆಲವು ದಶಕಗಳಲ್ಲಿ, ಇಂತಹ ಆರಂಭಿಕ ವೈದ್ಯಕೀಯ "ಆಳ" ಮಾಪಕಗಳನ್ನು ಪ್ರಾಯೋಗಿಕ ಸಂಶೋಧನೆಯ ಆಧಾರದ ಮೇಲಿನ ಇನ್ನಷ್ಟು ಅತ್ಯಾಧುನಿಕ 'ಸಂಮೋಹನದ ಪ್ರಭಾವಕ್ಕೆ ಒಳಗಾಗುವಿಕೆ' ಮಾಪಕಗಳು ಆಕ್ರಮಿಸಿದವು. ಇವುಗಳಲ್ಲಿ, 1930ರ ದಶಕದಲ್ಲಿ ಅಭಿವೃದ್ಧಿಪಡಿಸಲಾದ ಡೇವಿಸ್-ಹಸ್ಬಂಡ್ ಮತ್ತು ಫ್ರೈಡ್ಲೆಂಡರ್-ಸಾರ್ಬಿನ್ ಮಾಪಕಗಳು ಬಹಳ ಪ್ರಭಾವಶಾಲಿಯಾಗಿದೆ.
- ಇಸವಿ 1959ರಲ್ಲಿ ಆಂಡ್ರೆ ವೇಜೆನ್ಹಾಫರ್ ಮತ್ತು ಅರ್ನೆಸ್ಟ್ ಆರ್ ಹಿಲ್ಗಾರ್ಡ್ ಸಂಮೋಹನದ ಪ್ರಭಾವ ಅಳೆಯುವ ಸ್ಟ್ಯಾನ್ಫರ್ಡ್ ಮಾಪಕವನ್ನು ಅಭಿವೃದ್ಧಿಪಡಿಸಿದರು. ಇದರಲ್ಲಿ ಪ್ರಮಾಣಿತ ಸಂಮೋಹನದ ಕಣ್ಣು-ಸ್ಥಿರೀಕರಣ ಮೂಲಪ್ರತಿಯ ನಂತರ, 12 ಅಂತಸ್ಸೂಚನೆ ಪ್ರಯೋಗದ ವಸ್ತುಗಳನ್ನು ಹೊಂದಿತ್ತು. ಇದು ಸಂಮೋಹನ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಸಲಾದ ಸಂಶೋಧನಾ ಸಾಧನಗಳಲ್ಲಿ ಒಂದಾಗಿದೆ.
- ಇದಾದ ಕೂಡಲೆ, 1962ರಲ್ಲಿ, ರೊನಾಲ್ಡ್ ಷೋರ್ ಮತ್ತು ಎಮಿಲಿ ಕರೊಟಾ ಒರ್ನ್ ಹಾರ್ವಾರ್ಡ್ ಗ್ರೂಪ್ ಸ್ಕೇಲ್ ಆಫ್ ಹಿಪ್ನೊಟಿಕ್ ಸಸೆಪ್ಟಿಬಿಲಿಟಿ (HGSHS) ಎಂಬ ಇದೇ ರೀತಿಯ ಗುಂಪಿನ ಮಾಪನವನ್ನು ಅಭಿವೃದ್ಧಿಪಡಿಸಿದರು.ಸಹಜ ಮರೆವಿನಂತಹ ಗಮನಿಸಬಹುದಾದ ಸಂಕೇತಗಳನ್ನು ಆಧರಿಸಿ ಸಂಮೋಹನಾವಸ್ಥೆಯ ಮಟ್ಟವನ್ನು ನಿರ್ಣಯಿಸಲು ಹಳೆಯ "ಆಳ ಮಾಪಕ"ಗಳು ಯತ್ನಿಸಿದರೆ, ಬಹುತೇಕ ತರುವಾಯದ ಮಾಪಕಗಳು ನಿರ್ದಿಷ್ಟ ಅಂತಸ್ಸೂಚನೆ ಪರೀಕ್ಷೆಗಳಿಗೆ ಗಮನಿಸಿದ ಅಥವ ಸ್ವಯಂ ಮೌಲ್ಯಮಾಪನ ಮಾಡಿದ ಸಂವೇದನಶೀಲತೆ ಯ ಪ್ರಮಾಣವನ್ನು ಅಳೆಯುತ್ತವೆ.ಕೈಸೆಡೆತ(ಅಪಸ್ಮಾರ)ಕ್ಕೆ ನೇರ ಅಂತಸ್ಸೂಚನೆ ನೀಡುವುದು ಮುಂತಾದವು.
- ಸ್ಟ್ಯಾನ್ಫರ್ಡ್, ಹಾರ್ವಾರ್ಡ್, HIP, ಹಾಗೂ ಇತರೆ ಹಲವು ಸಂಮೋಹನದ ಪ್ರಭಾವ ಅಳೆಯುವ ಮಾಪಕಗಳು ವ್ಯಕ್ತಿ ಸಂಮೋಹನದ ಪ್ರಭಾವಕ್ಕೆ ಒಳಗಾಗುವ ಮಟ್ಟವನ್ನು 'ಹೆಚ್ಚು', ಅಥವಾ 'ಮಧ್ಯಮ' ಅಥವಾ 'ಕಡಿಮೆ' ಎಂಬ ಅಂದಾಜಿಗೆ ಸಂಖ್ಯೆಗಳನ್ನು ಪರಿವರ್ತಿಸುತ್ತವೆ. ಸುಮಾರು 80%ರಷ್ಟು ಜನಸಂಖ್ಯೆಯದ್ದು 'ಮಧ್ಯಮ', 10%ರಷ್ಟು ಜನರದ್ದು 'ಹೆಚ್ಚು' ಹಾಗೂ ಉಳಿದ 10%ರಷ್ಟು ಜನರದ್ದು 'ಕಡಿಮೆ' ಮಟ್ಟದಲ್ಲಿದೆ.
- ಇದನ್ನು ಸಹಜವಾದ ಗಂಟೆ-ಆಕಾರದ ರೇಖೆಯಲ್ಲಿ ವಿತರಿಸಲಾಗಿದೆಯೋ ಅಥವಾ ಅದು 'ಹೆಚ್ಚು' ಮಟ್ಟದ ಒಳಗಾಗುವಿಕೆ ಪ್ರದರ್ಶಿಸುವ ಜನರ ಒಂದು ಸಣ್ಣ ಗುರುತನ್ನು ಹೊಂದಿರುವ ಬೈಮಾಡಲ್ ಆಗಿದೆಯೋ ಎಂಬುದರ ಕುರಿತು ವಿವಾದವಿದೆ.[೧೬] ಸಂಮೋಹನಕ್ಕೆ ಒಳಗಾಗುವಿಕೆಯ ಅಂಕಗಳು ವ್ಯಕ್ತಿಯೊಬ್ಬರ ಜೀವಾವಧಿಯಲ್ಲಿ ಬಹುಮಟ್ಟಿಗೆ ಸ್ಥಿರವಾಗಿರುತ್ತವೆ.</ref></ref>
- ಡೈಡ್ರೆ ಬ್ಯಾರೆಟ್ ನಡೆಸಿದ ಸಂಶೋಧನೆಯ ಪ್ರಕಾರ, ಬಹಳಷ್ಟು ಸಂಮೋಹನಕ್ಕೆ ಒಳಗಾಗಬಲ್ಲ ವ್ಯಕ್ತಿಗಳಲ್ಲಿ ಎರಡು ವಿಶಿಷ್ಟ ರೀತಿಗಳಿವೆ. ಈ ಎರಡು ಗುಂಪುಗಳನ್ನು 'ಕಲ್ಪನಾವಿಹಾರಿಗಳು' ಹಾಗೂ 'ವಿಘಟಕರು' ಎಂದು ಆಕೆ ವಿಂಗಡಿಸಿದ್ದಾರೆ. ಕಲ್ಪನಾವಿಹಾರಿಗಳು ಅಬ್‌ಸಾರ್ಪ್ ಶನ್ ಮಾಪನಗಳಲ್ಲಿ 'ಹೆಚ್ಚು' ಅಂಕಗಳಿಸುತ್ತಾರೆ ಮತ್ತು ಸಂಮೋಹನವಿಲ್ಲದೆ ನಿಜ ಜಗತ್ತಿನ ಯಾವುದೇ ಪ್ರಚೋದಕಗಳನ್ನು ಮುಚ್ಚಿಹಾಕುವುದು ಸುಲಭವಾಗುತ್ತದೆ. ಅವರು ಬಹಳ ಹೊತ್ತು ಹಗಲುಗನಸು ಕಂಡು, ಕಾಲ್ಪನಿಕ ಸಂಗಾತಿಗಳನ್ನು ಮಗುವಾಗಿ ಕಾಣುತ್ತಾರೆ.
- ಕಾಲ್ಪನಿಕ ಆಟಗಳಲ್ಲಿ ತೊಡಗುವುದಕ್ಕೆ ಪ್ರೋತ್ಸಾಹಿಸಿದ ಪೋಷಕರ ಜತೆ ಬೆಳೆದಿರುತ್ತಾರೆ. ವಿಘಟಕರು ತಮ್ಮ ಬಾಲ್ಯದಲ್ಲಿ ಬಹಳಷ್ಟು ಹಿಂಸೆ ಅಥವಾ ಇತರೆ ವೇದನೆಯ ಇತಿಹಾಸ ಹೊಂದಿದ್ದರು, ಯಾವುದೇ ಸಂವೇದನೆಯಿಲ್ಲದ ಸ್ಥಿತಿಗೆ ಪಲಾಯನ ಹೂಡಲು ಕಲಿತು, ಅಹಿತಕರ ಘಟನೆಗಳನ್ನು ಮರೆತುಬಿಡಲು ಕಲಿತಿದ್ದರು. “ಹಗಲುಗನಸು“ಗಳೊಂದಿಗೆ ಅವರ ಸಂಬಂಧವೇನೆಂದರೆ ಕೇವಲ ಖಾಲಿಯಾಗಿರುತ್ತಿತ್ತೇ ಹೊರತು,ಸ್ಫುಟವಾಗಿ ನೆನಪಿಗೆ ತರುವ ಕಲ್ಪನೆಗಳಾಗಿರಲಿಲ್ಲ.
- ಎರಡೂ ಗುಂಪುಗಳು ಸಂಮೋಹನಕ್ಕೆ ಒಳಗಾಗುವಿಕೆಯ ಮಾಪನಗಳಲ್ಲಿ ಅತಿ ಹೆಚ್ಚು ಅಂಕ ಗಳಿಸುತ್ತಿದ್ದರು. .[೧೭][೧೮][೧೯]
ಇತಿಹಾಸ
[ಬದಲಾಯಿಸಿ]ಪೂರ್ವವರ್ತಿಗಳು
[ಬದಲಾಯಿಸಿ]ತಮ್ಮ ಲೇಖನಗಳ ಪ್ರಕಾರ, ಸಂಮೋಹನ ಕುರಿತು ತಮ್ಮ ಮೊದಲ ಪ್ರಕಟಣೆ 'ನ್ಯೂರಿಪ್ನಾಲಜಿ ' 1843ರಲ್ಲಿ ಬಿಡುಗಡೆಯಾದ ಕೂಡಲೆ, ವಿವಿಧ ಪೌರಸ್ತ್ಯ ಧ್ಯಾನಸ್ಥ ಆಚರಣೆಗಳಿಗೆ ಸಂಬಂಧಿಸಿದ ಕೆಲವು ವರದಿಗಳು ಬ್ರೇಡ್‌ರಿಗೆ ತಲುಪಿದವು. ಅವರು ಇಂತಹ ಕೆಲವು ಪೌರಸ್ತ್ಯ ಅಭ್ಯಾಸಗಳನ್ನು ಮ್ಯಾಜಿಕ್, ಮೆಸ್ಮರಿಸಂ, ಹಿಪ್ನೊಟಿಸಂ ಎಕ್ಸೆಟ್ರಾ, ಹಿಸ್ಟಾರಿಕಲ್ಲಿ ಅಂಡ್ ಫಿಸಿಯೊಲಾಜಿಕಲ್ಲಿ ಕನ್ಸಿಡರ್ಡ್ ಎಂಬ ಶೀರ್ಷಿಕೆಯ ಲೇಖನ ಸರಣಿಗಳಲ್ಲಿ ಚರ್ಚಿಸಿದರು. ತಮ್ಮದೇ ಆದ ಸಂಮೋಹನ ಆಚರಣೆಗಳು ಹಾಗೂ ಹಿಂದೂ ಯೋಗ ಧ್ಯಾನಗಳ ವಿವಿಧ ರೂಪಗಳು ಮತ್ತು ಇತರೆ ಪುರಾತನ ಆಧ್ಯಾತ್ಮಿಕ ಆಚರಣೆಗಳು (ಇವುಗಳಲ್ಲಿ ವಿಶಿಷ್ಟವಾಗಿ ಸ್ವಯಂಪ್ರೇರಿತ ಹೂಳುವಿಕೆ ಮತ್ತು ಸ್ಪಷ್ಟಮಾನವನ ಚಳಿನಿದ್ರೆ) ನಡುವೆ ಸಾದೃಶ್ಯಗಳನ್ನು ಗುರುತಿಸಿದರು. ದಬಿಸ್ತಾನ್-ಇ-ಮಜಾಹಿಬ್ ನ (ಧರ್ಮಗಳ ಶಾಲೆ) ಎಂಬ ಪರ್ಷಿಯನ್ ಲೇಖನದ ಅಧ್ಯಯನಗಳಿಂದ ಒದಗಿದ ಮಾಹಿತಿಗಳ ಕಾರಣ, ಬ್ರೇಡ್ ಈ ಅಭ್ಯಾಸಗಳಲ್ಲಿ ಬಹಳ ಆಸಕ್ತಿ ವಹಿಸಿದರು. ಈ ಲೇಖನದಲ್ಲಿ ಪೌರತ್ತ್ಯ ವಲಯದ ವಿವಿಧ ಧಾರ್ಮಿಕ ಪದ್ಧತಿಗಳು, ನಂಬಿಕೆಗಳು ಮತ್ತು ಅಭ್ಯಾಸಗಳನ್ನು ವಿವರಿಸಲಾಗಿತ್ತು.
ಕಳೆದ ಮೇ ತಿಂಗಳಲ್ಲಿ [1843], ಬಹಳ ವರ್ಷಗಳ ಕಾಲ ಭಾರತದಲ್ಲಿ ವಾಸಿಸಿದ್ದ, ವೈಯಕ್ತಿವಾಗಿ ನನಗೆ ಪರಿಚಯವಿಲ್ಲದ ಎಡಿನ್ಬರ್ಗ್ ನಿವಾಸಿ ಸಜ್ಜನರೊಬ್ಬರು, ಸಂಮೋಹನ ಮತ್ತು ವಶೀಕರಣದ ವಿದ್ಯಮಾನದ ಸ್ವರೂಪ ಮತ್ತು ಕಾರಣಗಳನ್ನು ಕುರಿತು ನಾನು ಪ್ರಕಟಿಸಿದ ಲೇಖನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಒಂದು ಪತ್ರದ ಮೂಲಕ ಕಳುಹಿಸಿದ್ದರು. ನನ್ನ ಆಭಿಪ್ರಾಯಗಳನ್ನು ದೃಢೀಕರಿಸುವಂತೆ, ಅವರು ಪೌರಸ್ತ್ಯ ವಲಯಗಳಲ್ಲಿ ಗಮನಿಸಿದ್ದನ್ನು ಉಲ್ಲೇಖಿಸಿದರು. ಹೆಚ್ಚುವರಿ ಸಾಕ್ಷ್ಯಗಳಿಗೆ, ಅವರು 'ದಬಿಸ್ತಾನ್' ಎಂದು ಆಗಷ್ಟೇ ಪ್ರಕಟವಾದ ಪುಸ್ತಕವನ್ನು ಓದಲು ನನಗೆ ಶಿಫಾರಸು ಮಾಡಿದರು. ಈ ಶಿಫಾರಸಿನ ಮೇರೆಗೆ, ಕೂಡಲೇ ದಬಿಸ್ತಾನ್‌ನ ಒಂದು ಪ್ರತಿಗಾಗಿ ನಾನು ಕೋರಿಕೆ ಸಲ್ಲಿಸಿದೆ. ಪೂರ್ವದ ಸಂತರು ಸ್ವಯಂ ಸಂಮೋಹನ ಸ್ಥಿತಿಗೆ ಒಳಗಾಗುವ ಸತ್ಯವನ್ನು ದೃಢೀಕರಿಸುವ ಹೇಳಿಕೆಗಳು ಈ ಲೇಖನದಲ್ಲಿದ್ದವು. ಇದೇ ರೀತಿಯ ಉದ್ದೇಶಗಳಿಗೆ ನಾನು ಶಿಫಾರಸು ಮಾಡಿದ ಸಾಧನಗಳನ್ನು ಅವರು ಅಳವಡಿಸಿಕೊಂಡಿದ್ದರು.[೨೦]
ಈ ವಿದ್ಯಮಾನಗಳಿಗೆ ಅತೀಂದ್ರಿಯ/ಅಬೌತಿಕ ವ್ಯಾಖ್ಯಾನಗಳನ್ನು ಬ್ರೇಡ್ ನೇರವಾಗಿ ತಳ್ಳಿಹಾಕಿದರು. ಆದರೂ, 'ಸಂಮೋಹನದ ಪ್ರಭಾವಗಳನ್ನು ಏಕಾಂತತೆಯಲ್ಲಿ, ಯಾರ ಉಪಸ್ಥಿತಿ ಇಲ್ಲದ ಸ್ಥಿತಿಯಲ್ಲಿ ಅನುಭವಿಸಲು ಸಾಧ್ಯ' ಎಂಬುದನ್ನು ಪೌರಸ್ತ್ಯ ಆಚರಣೆಗಳ ಇಂತಹ ವಿವರಣೆಗಳು ತಮ್ಮ ಅಭಿಪ್ರಾಯವನ್ನು ಸಮರ್ಥಿಸಿವೆ ಎಂದು ಒಪ್ಪಿಕೊಂಡರು.(1841ರಲ್ಲಿ ತಾವು ಸ್ವತಃ ನಡೆಸಿದ ಪ್ರಯೋಗಗಳು ಅವರಿಗೆ ತೃಪ್ತಿ ತಂದಿದ್ದಾಗಿ ಈಗಾಗಲೇ ಸಾಬೀತುಮಾಡಿದ್ದಾರೆ.)ಅನೇಕ ಅಬೌತಿಕ ಪೌರಸ್ತ್ಯ ಆಚರಣೆಗಳು ಮತ್ತು ಅವರ ಸ್ವಯಂ ತರ್ಕಬದ್ಧ ನರ-ಸಂಮೋಹನ ಪ್ರಯೋಗದ ನಡುವೆ ಪರಸ್ಪರ ಸಂಬಂಧವನ್ನು ಅವರು ಗಮನಿಸಿದರು. ಹಾಗಾಗಿ ಅವರು ಮೆಸ್ಮರಿಸ್ಟ್‌ಗಳ ಆಚರಣೆಗಳಾದ ದ್ರವ ಸಿದ್ಧಾಂತಗಳು ಮತ್ತು ಆಯಸ್ಕಾಂತೀಯ ಪ್ರಯೋಗಗಳನ್ನು ತಳ್ಳಿಹಾಕಿದರು. ಆವರು ಆನಂತರ ಬರೆದದ್ದು ಹೀಗೆ:
ರೋಗಿಗಳು ತಮ್ಮದೇ ಶ್ರಮದ ಮೂಲಕ ನರನಿದ್ರೆಗೆ ಜಾರಿ, ಮೆಸ್ಮರಿಸಂ ತಂತ್ರಗಳ ಎಲ್ಲಾ ವಿದ್ಯಮಾನವನ್ನು ನೆರವಿಲ್ಲದೇ ಸ್ವಯಂ ಪ್ರಯತ್ನಗಳ ಮೂಲಕ ಪ್ರದರ್ಶಿಸಬಹುದು. ಇವರಂತೆಯೇ,ಅವರು, ಯಾವುದೇ ಒಂದು ಬಿಂದುವಿನ ಮೇಲೆ ಸ್ಥಿರವಾದ ದೃಷ್ಟಿಯನ್ನು ಇರಿಸುವಂತೆ ಮಾಡಿ ನಾನು ಪುನಃ ಪುನಃ ಸಾಬೀತುಮಾಡಿರುವೆ, ದೃಷ್ಟಿಸುವ ವಸ್ತುವಿನ ಮೇಲೆ ಇಡೀ ಮಾನಸಿಕ ಶಕ್ತಿಗಳನ್ನು ಕೇಂದ್ರೀಕರಿಸಿ,ಅಥವಾ ರೋಗಿಗಳು ತಮ್ಮ ಸ್ವಂತ ಕೈಬೆರಳಿನ ಬಿಂದುವಿನ ಮೇಲೆ ದೃಷ್ಟಿಕೇಂದ್ರೀಕರಿಸುವ ಮೂಲಕ ಇದು ಉದ್ಭವಿಸಬಹುದು. ಸುಮಾರು 2,400 ವರ್ಷಗಳಿಂದಲೂ ಪರ್ಷಿಯಾದ ಮ್ಯಾಗಿ ಮತ್ತು ಭಾರತದ ಯೋಗಿಗಳು ತಮ್ಮ ಧಾರ್ಮಿಕ ಉದ್ದೇಶಗಳಿಗಾಗಿ ತಮ್ಮದೇ ಮೂಗಿನ ತುದಿಯ ಮೇಲೆ ಸ್ಥಿರವಾದ ದೃಷ್ಟಿ ನೆಡುವ ಮೂಲಕ ಧ್ಯಾನಪರವಶ ಸ್ಥಿತಿಗಳಿಗೆ ಹೋಗುವ ರೀತಿಯಲ್ಲಿ, ಇದರಿಂದಾಗಿ, ಮೆಸ್ಮರಿಸಂ ವಿದ್ಯಮಾನ ಉತ್ಪಾದಿಸಲು ಯಾವುದೇ ಸರ್ವಗ್ರಾಹ್ಯ ಸಿದ್ಧಾಂತಗಳ ಪ್ರಭಾವದ ಅಗತ್ಯವಿಲ್ಲ ಎನ್ನುವುದು ಸ್ಪಷ್ಟ. […] ಈ ಎಲ್ಲಾ ಪ್ರಕ್ರಿಯೆಗಳಲ್ಲಿನ ಅತಿ ದೊಡ್ಡ ವಸ್ತುವೇನೆಂದರೆ, ಆಮೂರ್ತತೆ ಅಥವಾ ಗಮನದ ಏಕಾಗ್ರತೆಯ ಅಭ್ಯಾಸವನ್ನು ಅಳವಡಿಸುವುದು. ಇದರಲ್ಲಿ ವ್ಯಕ್ತಿಯು ಒಂದೇ ಕಲ್ಪನೆ ಅಥವಾ ಕಲ್ಪನೆಗಳ ಸರಮಾಲೆಯಲ್ಲಿ ಇಡಿಯಾಗಿ ಮಗ್ನರಾಗಿದ್ದು, ಇತರೆ ವಸ್ತು, ಧ್ಯೇಯ ಅಥವಾ ಕ್ರಿಯೆಗಳ ಕುರಿತು ಯಾವುದೇ ಪರಿಜ್ಞಾನವಿರುವುದಿಲ್ಲ ಅಥವಾ ಅರೆ ಪರಿಜ್ಞಾನವನ್ನು ಹೊಂದಿರುತ್ತಾರೆ.[೨೧]
ಫ್ರಾನ್ಜ್ ಮೆಸ್ಮರ್
[ಬದಲಾಯಿಸಿ]- ಬ್ರಹ್ಮಾಂಡದಲ್ಲಿ ಒಂದು ತರಹದ ಆಯಸ್ಕಾಂತೀಯ ಬಲ ಅಥವಾ ದ್ರವವಿದ್ದು, ಮಾನವನ ಶರೀರದ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿತ್ತು ಎಂದು ಫ್ರಾನ್ಜ್ ಮೆಸ್ಮರ್ (1734–1815) ನಂಬಿದ್ದರು. ಈ ಕ್ಷೇತ್ರದ ಮೇಲೆ ಪ್ರಭಾವ ಬೀರಲು ಆಯಸ್ಕಾಂತಗಳೊಂದಿಗೆ ಪ್ರಯೋಗ ನಡೆಸಿ, ಆರೋಗ್ಯದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಯತ್ನಿಸಿದರು. ಸುಮಾರು 1774ರಲ್ಲಿ, ವ್ಯಕ್ತಿಯೊಬ್ಬನ ದೇಹದ ಮುಂದೆ ಸ್ವಲ್ಪ ದೂರದಿಂದ ಕೈಯಾಡಿಸುವ ಮೂಲಕ, ಈ ರೀತಿಯ ಪ್ರಭಾವಗಳನ್ನು ಸೃಷ್ಟಿಸಬಹುದು.
- ಇದಕ್ಕೆ 'ಮೆಸ್ಮರಿಕ್ ಪಾಸಸ್' ಎನ್ನಲಾಯಿತು. ಮೆಸ್ಮರೈಸ್ ಎಂಬ ಇಂಗ್ಲಿಷ್ ಪದವು ಫ್ರಾನ್ಜ್ ಮೆಸ್ಮರ್‌ರ ಹೆಸರಿನಿಂದ ಉದ್ಭವವಾಗಿದೆ. "ಆಯಸ್ಕಾಂತೀಯತೆ" ಎಂಬ ಪಟ್ಟಿಯಡಿ ಹಲವು ವಿವಿಧ 'ದ್ರವ' ಮತ್ತು ಆಯಸ್ಕಾಂತೀಯ' ಸಿದ್ಧಾಂತಗಳಿಂದ ಅದರ ಬಳಕೆದಾರರನ್ನು ಪ್ರತ್ಯೇಕಿಸಲು ಈ ಪದವನ್ನು ಉದ್ದೇಶಪೂರ್ವಕವಾಗಿ ಬಳಸಲಾಯಿತು.ಇಸವಿ 1784ರಲ್ಲಿ, ರಾಜ ಲೂಯಿಸ್ XVI ಕೋರಿಕೆಯ ಮೇರೆಗೆ, ಫ್ರೆಂಚ್ ವೈಜ್ಞಾನಿಕ ಸಮಿತಿಗಳ ಸರಣಿಯು ಸಭೆ ಸೇರಿತು.
- ಇದರಲ್ಲಿ ಅಮೆರಿಕಾದ ಫ್ರೆಂಚ್ ರಾಯಭಾರಿ ಬೆಂಜಮಿನ್ ಫ್ರ್ಯಾಂಕ್ಲಿನ್ ಸಹ ಪಾಲ್ಗೊಂಡಿದ್ದರು. ಈ ಸಮಿತಿಗಳು ಮೆಸ್ಮರ್‌ರ ಸಿದ್ಧಾಂತಗಳನ್ನು ಕೂಲಂಕಷವಾಗಿ ಪರಿಶೀಲಿಸಿದವು. ಮೆಸ್ಮರ್‌ನ ಪರಿಣಾಮಬೀರಿರದ ವಿದ್ಯಾರ್ಥಿ ಚಾರ್ಲ್ಸ್ ಡಿ'ಎಸ್ಲಾನ್ (1750-1786)ರ ಪ್ರಯೋಗಗಳನ್ನು ಸಹ ಈ ಸಮಿತಿಗಳು ಪರಿಶೀಲಿಸಿದವು.
- ಮೆಸ್ಮರ್‌ರ ನಿರ್ಣಯಗಳು ಸಿಂಧುವಾಗಿವೆಯೆಂದು ಸಮಿತಿಗಳು ಒಪ್ಪಿಕೊಂಡಿದ್ದು ನಿಜವಾಗಿದ್ದರೂ, ಡಿ'ಎಸ್ಲಾನ್‌ರ ಪ್ರಯೋಗಗಳ ನಂತರ ಸಮಿತಿಗಳು ನಡೆಸಿದ ಪ್ಲಸೀಬೊ-ನಿಯಂತ್ರಿತ ಪ್ರಯೋಗಗಳು, ಮೆಸ್ಮರಿಸಂ ಎಂಬುದು ಮೆಸ್ಮರಿಸ್ಟ್‌ನ ಶರೀರದಿಂದ ರವಾನೆಯಾದ ಯಾವುದೇ ರೀತಿಯ ಅಗೋಚರ ಶಕ್ತಿ ('ಪ್ರಾಣಿ ಆಯಸ್ಕಾಂತೀಯತೆ') ಬದಲಿಗೆ, ನಂಬಿಕೆ ಮತ್ತು ಕಲ್ಪನೆಯ ಕಾರಣವಾಗಿದೆ ಎನ್ನುವುದು ಅವರಿಗೆ ಮನದಟ್ಟಾಯಿತು.ಇನ್ನೊಂದು ರೀತಿಯಲ್ಲಿ ವಿವರಿಸುವುದಾದರೆ, ಮೆಸ್ಮರ್‌ರ ಪ್ರಯೋಗಗಳು ಫಲಪ್ರದವೆಂದು ಕಂಡುಬಂದಿದ್ದಾಗಿ ಒಪ್ಪಿಕೊಂಡರೂ, ಎರಡೂ ಸಮಿತಿಗಳು ಮೆಸ್ಮರ್‌ರ ಸಿದ್ಧಾಂತಗಳನ್ನು ಸಾರಾಸಗಟಾಗಿ ತಳ್ಳಿಹಾಕಿದವು.
ಜೇಮ್ಸ್ ಬ್ರೇಡ್
[ಬದಲಾಯಿಸಿ]ಫ್ರೆಂಚ್ ಸಮಿತಿಯ ವರದಿಗಳ ನಂತರ, ಸ್ಕಾಟಿಷ್ ಸ್ಕೂಲ್ ಆಫ್ ಕಾಮನ್ ಸೆನ್ಸ್‌ನ ಪ್ರಭಾವಿ ಶೈಕ್ಷಣಿಕ ತತ್ತ್ವವಾದಿ ಡುಗಾಲ್ಡ್ ಸ್ಟೀವರ್ಟ್, ತಮ್ಮ ಕೃತಿ ಎಲಿಮೆಂಟ್ಸ್ ಆಫ್ ದಿ ಫಿಲಾಸಫಿ ಆಫ್ ದಿ ಹ್ಯೂಮನ್ ಮೈಂಡ್ (1827)ರಲ್ಲಿ ಅವರು ಪ್ರಾಣಿ ಆಯಸ್ಕಾಂತೀಯತೆಯ ಅನೈಸರ್ಗಿಕ ಶಕ್ತಿಯ ಬದಲಿಗೆ ಶರೀರವಿಜ್ಞಾನ ಮತ್ತು ಮನೋವಿಜ್ಞಾನದ ಸಾಮಾನ್ಯ ಜ್ಞಾನದ ಆಧಾರದಲ್ಲಿ ಹೊಸದಾಗಿ ವ್ಯಾಖ್ಯಾನಿಸುವ ಮೂಲಕ ಮೆಸ್ಮರಿಸಂ ಶಕ್ತಿಗಳನ್ನು ರಕ್ಷಿಸಲು ಅವರು ವೈದ್ಯರಿಗೆ ಪ್ರೋತ್ಸಾಹಿಸಿದರು. ಸ್ಟೀವರ್ಟ್‌ರ ಲೇಖನದಿಂದ ಕೆಳಕಂಡ ಪಂಕ್ತಿಯನ್ನು ಬ್ರೇಡ್ ಉಲ್ಲೇಖಿಸುತ್ತಾರೆ:[೨೨]
ಮೆಸ್ಮರ್ ವಾಸ್ತವವಾಗಿ ಹೆಮ್ಮೆಯಿಂದ ಕೊಚ್ಚಿಕೊಳ್ಳುವ ವಿಜ್ಞಾನದ(ಪ್ರಾಣಿ ಆಯಸ್ಕಾಂತೀಯತೆ)ಅಸ್ತಿತ್ವ ಪ್ರದರ್ಶಿಸಿದ್ದರೆ ಕಲ್ಪನೆಯ ತತ್ವದ ದೈಹಿಕ ಪರಿಣಾಮಗಳಿಗೆ ಸಂಬಂಧಿಸಿದಂತೆ ಮೆಸ್ಮರ್ ಅಭ್ಯಾಸ ಸ್ಥಿರಪಡಿಸಿದ ಸಾಮಾನ್ಯ ನಿರ್ಣಯಗಳು ಅಸದೃಶವಾಗಿ ಹೆಚ್ಚು ಕುತೂಹಲಕಾರಿ ಎನಿಸುತ್ತಿತ್ತು:ಮೆಸ್ಮರ್ ಪ್ರಯೋಗಿಸಿದ ನೈತಿಕ(ಮಾನಸಿಕ)ಶಕ್ತಿಯ ಸಾಮರ್ಥ್ಯವನ್ನು ಒಪ್ಪಿಕೊಳ್ಳುವ ವೈದ್ಯ,ತಮ್ಮ ವೃತ್ತಿಯ ಅಭ್ಯಾಸದಲ್ಲಿ, ಅವರ ಆದೇಶಕ್ಕೆ ಒಳಪಡುವ ಅಗತ್ಯವಾದ ಪ್ರಕ್ರಿಯೆಗಳನ್ನು ನಕಲು ಮಾಡಲು ಅಳುಕುವುದೇಕೆ,ಅದಕ್ಕಿಂತ ಹೆಚ್ಚಾಗಿ ವಿದ್ಯುತ್ ಅಥವಾ ನೇರವಿದ್ಯುತ್ ಪ್ರಯೋಗದಂತ ಹೊಸ ಬೌತಿಕ ಶಕ್ತಿ ನೇಮಿಸಿಕೊಳ್ಳಲು ಹಿಂಜರಿಕೆಯೇಕೆ ಎನ್ನುವುದರಲ್ಲಿ ಯಾವುದೇ ಕಾರಣವು ತಮಗೆ ತೋಚುತ್ತಿಲ್ಲ.
ಬ್ರೇಡ್‌ರ ಕಾಲದಲ್ಲಿ, ಸ್ಕಾಟಿಷ್ ಸ್ಕೂಲ್ ಆಫ್ ಕಾಮನ್ ಸೆನ್ಸ್ ಶೈಕ್ಷಣಿಕ ಮನೋವಿಜ್ಞಾನದ ಪ್ರಬಲ ಸಿದ್ಧಾಂತಗಳನ್ನು ನೀಡಿತು. ಬ್ರೇಡ್ ತಮ್ಮ ಲೇಖನಗಳುದ್ದಕ್ಕೂ ಈ ಸಂಪ್ರದಾಯದೊಳಗಿನ ಇತರೆ ತತ್ತ್ವಜ್ಞಾನಿಗಳನ್ನು ಉಲ್ಲೇಖಿಸಿದ್ದಾರೆ. ಆದ್ದರಿಂದ ಬ್ರೇಡ್ ಮೆಸ್ಮರಿಸಂನ ಈ ಸಿದ್ಧಾಂತ ಮತ್ತು ಪ್ರಯೋಗಗಳನ್ನು ಪರಿಶೀಲಿಸಿದರು. ಹೆಚ್ಚು ತರ್ಕಬದ್ಧ ಮತ್ತು ಸಾಮಾನ್ಯ ಪರಿಜ್ಞಾನದ ಪರ್ಯಾಯವಾಗಿ ಸಂಮೋಹನದ ತಮ್ಮದೇ ವಿಧಾನವನ್ನು ಅಭಿವೃದ್ಧಿಗೊಳಿಸಿದರು.
ಕೆಳಗಿನ ಪುಟಗಳಲ್ಲಿ ಪದೇಪದೇ ಬಂದಿರುವ 'ಸಂಮೋಹನ' ಅಥವಾ 'ನರ ನಿದ್ರೆ' ಎಂಬ ಪದವು, ನರಗಳ ವ್ಯವಸ್ಥೆಯ ವಿಚಿತ್ರ ಸ್ಥಿತಿ, ಇದು ಹಲವು ಕೃತಕ ರೀತಿಗಳಲ್ಲಿ ಜನ್ಯವಾಗಿ, ಸಾಮಾನ್ಯ ನಿದ್ದೆ ಅಥವಾ ಎಚ್ಚರದ ಸ್ಥಿತಿಗಿಂತಲೂ ಹಲವು ರೀತಿಗಳಲ್ಲಿ ಭಿನ್ನವಾಗಿದೆಯೆಂದು ವಿವರಿಸುವುದು ಅಗತ್ಯವಾಗಿದೆ. ನನ್ನ ಶರೀರದಿಂದ ನನ್ನ ರೋಗಿಯ ಶರೀರದತ್ತ ರವಾನೆಯಾಗುವ ಆಯಸ್ಕಾಂತೀಯ ಅಥವಾ ನಿಗೂಢಶಕ್ತಿಯ ಪ್ರಭಾವದಿಂದ ಈ ಸ್ಥಿತಿಯುಂಟಾಗುತ್ತದೆ ಎಂದು ನಾನು ಹೇಳುತ್ತಿಲ್ಲ; ಮೆಸ್ಮರಿಸ್ಟ್ ವಿದ್ಯಮಾನಕ್ಕಿಂತ ನಾನು ನನ್ನ ಪ್ರಕ್ರಿಯೆಗಳ ಮೂಲಕ ಉನ್ನತ(ಅತಿಮಾನುಷ)ವಿದ್ಯಮಾನವನ್ನು ಉತ್ಪಾದಿಸುತ್ತಿಲ್ಲ. ನನ್ನ ಹಕ್ಕುಸಾಧನೆಗಳು ಇನ್ನಷ್ಟು ವಿನಮ್ರ ಲಕ್ಷಣದಿಂದ ಕೂಡಿದೆ. ಇವೆಲ್ಲವೂ ಶರೀರವೈಜ್ಞಾನಿಕ ಮತ್ತು ಮನೋವೈಜ್ಞಾನಿಕ ವಿಜ್ಞಾನದಲ್ಲಿ ಸಾಮಾನ್ಯವಾಗಿ ಸ್ವೀಕಾರಾರ್ಹ ತತ್ತ್ವಗಳಿಗೆ ಸಂಗತವಾಗಿವೆ. ಆದ್ದರಿಂದ, ಸಂಮೋಹನ ತಂತ್ರವು ಕುಶಲತೆಯಿಲ್ಲದೇ ರೂಪಿತವಾಗಿಲ್ಲ.ವಿವೇಚನಾಶೀಲ ಮೆಸ್ಮರಿಸಂ, ಮೆಸ್ಮರಿಸ್ಟ್‌ಗಳ ಇಂದ್ರಿಯಾತೀತ ಮೆಸ್ಮರಿಸಂಗೆ ತದ್ವಿರುದ್ಧವಾಗಿದೆ.[೨೩]
"ವಿವೇಚನಾಶೀಲ ಮೆಸ್ಮರಿಸಂ" ಎಂಬ ಉಕ್ತಿಯನ್ನು ಆಯ್ದುಕೊಳ್ಳುವ ಇಂಗಿತವನ್ನು ಬ್ರೇಡ್ ಹೊತ್ತಿದ್ದರೂ, ಆನಂತರ ಅವರು ತಮ್ಮ ಮಾರ್ಗದ ವಿಶಿಷ್ಠತೆಯನ್ನು ಪ್ರತಿಪಾದಿಸಿದರು. ವೃತ್ತಿಜೀವನವುದ್ದಕ್ಕೂ, ನಿಸರ್ಗಾತೀತ ಪ್ರಯೋಗಗಳನ್ನು ಒಳಗೊಂಡ ವಾದಗಳನ್ನು ಅಲ್ಲಗಳೆಯಲು ಔಪಚಾರಿಕ ಪ್ರಯೋಗಗಳನ್ನು ನಡೆಸಿದರು.ಅಂತಸ್ಸೂಚನೆ ಮುಂತಾದ ಸಾಮಾನ್ಯ ಶಾರೀರಿಕ ಮತ್ತು ಮಾನಸಿಕ ಪ್ರಕ್ರಿಯೆಗಳನ್ನು ಪಾತ್ರವನ್ನು ಪ್ರದರ್ಶಿಸಿದರು ಹಾಗೂ ಗಮನಸೆಳೆದ ಪರಿಣಾಮಗಳನ್ನು ಉತ್ಪಾದಿಸುವ ಕಡೆ ಗಮನ ಕೇಂದ್ರೀಕರಿಸಿದರು.ತಮ್ಮ ಸ್ನೇಹಿತ ಮತ್ತು ಸಂಗಡಿಗ, ಪ್ರಸಿದ್ಧ ಶರೀರವಿಜ್ಞಾನಿ ಹಾಗು ಆರಂಭಕಾಲಿಕ ನರ-ಮನೋವಿಜ್ಞಾನಿ ವಿಲಿಯಮ್ ಬೆಂಜಮಿನ್ ಕಾರ್ಪೆಂಟರ್ ಜೊತೆಗೂಡಿ ಕಾರ್ಯನಿರ್ವಹಿಸಿದರು. ಕಾರ್ಪೆಂಟರ್ ಅಂತಸ್ಸೂಚನೆಯ ಐಡಿಯೊ-ಮೋಟಾರ್ ಪ್ರತಿವರ್ತನೆಯ ಸಿದ್ಧಾಂತವನ್ನು ಪರಿಚಯಿಸಿದ್ದರು. ಸ್ವಯಂಇಚ್ಛೆಯಿಲ್ಲದೇ ಸ್ನಾಯು ಚಲನೆಯ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಮತ್ತು ಕಲ್ಪನೆಯ ಉದಾಹರಣೆಗಳನ್ನು ಕಾರ್ಪೆಂಟರ್ ಗಮನಿಸಿದ್ದರು. ಮಿಚೆಲ್ ಯುಜೀನ್ ಚೆವ್ರೊಲ್‌ರ ಹೆಸರಿನಲ್ಲಿ ಚೆವ್ರೊಲ್ ಪೆಂಡ್ಯುಲಮ್, ಕ್ರಿಯೆಯಲ್ಲಿರುವ ಐಡಿಯೊ-ಮೋಟಾರ್ ತತ್ತ್ವಕ್ಕೆ ಸೂಕ್ತ ಉದಾಹರಣೆಯಾಗಿದೆ. ಲೋಲಕ ವನ್ನು ಕೇವಲ ಸೂಕ್ತ ಮಟ್ಟದ ಏಕಾಗ್ರತೆಯಿಂದ ಮಾತ್ರ ತೂಗಾಡಿಸಬಹುದು ಎಂದು ಚೆವ್ರೊಲ್ ಹೇಳಿಕೊಂಡರು.ಕಾರ್ಪೆಂಟರ್‌ರ ಅವಲೋಕನಗಳನ್ನು ಬ್ರೇಡ್ ಅಲ್ಪಸಮಯದಲ್ಲಿ ತಮ್ಮ ಸ್ವಂತ ಸಿದ್ಧಾಂತದೊಳಗೆ ಸೇರಿಸಿಕೊಂಡರು. ಗಮನವನ್ನು ಕೇಂದ್ರೀಕರಿಸುವ ಪ್ರಭಾವವು ಐಡಿಯೊ-ಮೋಟಾರ್ ಪ್ರತಿವರ್ತನ ಪ್ರತಿಕ್ರಿಯೆಯನ್ನು ಹೆಚ್ಚಿಸುವುದಾಗಿತ್ತು ಎಂದು ಅರಿತರು. ಇನ್ನಷ್ಟು ಸ್ಥೂಲವಾಗಿ, ಶರೀರದ ಸ್ನಾಯು ವ್ಯವಸ್ಥೆಗಿಂತಲೂ ಮೀರಿ, ಶರೀರದ ಮೇಲೆ ಮನಸ್ಸಿನ ಪ್ರಭಾವವನ್ನು ಒಳಗೊಳ್ಳಲು ಕಾರ್ಪೆಂಟರ್‌ರ ಸಿದ್ಧಾಂತವನ್ನು ಬ್ರೇಡ್ ವಿಸ್ತರಿಸಿದರು. ಆದ್ದರಿಂದ ಇದಕ್ಕೆ ಐಡಿಯೊ-ಡೈನಾಮಿಕ್' ಪ್ರತಿಕ್ರಿಯೆ ಎಂದು ಉಲ್ಲೇಖಿಸಿ, ಸಾಮಾನ್ಯ ಮನಸು/ಶರೀರ ಪರಸ್ಪರಕ್ರಿಯೆಯ ಅಧ್ಯಯನವನ್ನು ಉಲ್ಲೇಖಿಸಲ 'ಮನೊ-ಶರೀರವಿಜ್ಞಾನ' ಎಂಬ ಪದವನ್ನು ಸಹ ಪರಿಚಯಿಸಿದರು.ತಮ್ಮ ಆನಂತರದ ಕಾರ್ಯಗಳಲ್ಲಿ, ವ್ಯಕ್ತಿಗಳು ನಿದ್ರೆಯನ್ನು ಹೋಲುವ ನಿದ್ರಾಹೀನ ಸ್ಥಿತಿಗೆ ಪ್ರವೇಶಿಸಿದ ವ್ಯಕ್ತಿಗಳಿಗಾಗಿ ಮಾತ್ರ, ಬ್ರೇಡ್ ಸಂಮೋಹನ ಎಂಬ ಉಕ್ತಿಯನ್ನು ಮೀಸಲಿಟ್ಟರು. ಉಳಿದವರಿಗೆ, ವ್ಯಕ್ತಿಯ ಗಮನವನ್ನು ಒಂದೇ ಕಲ್ಪನೆ ಅಥವಾ ಯೋಚನೆಯತ್ತ ಕೇಂದ್ರೀಕರಿಸಲು(ಮಾನೋಐಡಿಸಂ) ಬಳಸಲಾದ ಕಣ್ಣು-ದೃಷ್ಟಿ ಸ್ಥಿರೀಕರಣ ತಂತ್ರವನ್ನು ಒತ್ತಿಹೇಳಲು 'ಮೊನೊ-ಐಡಿಯೊಡೈನಾಮಿಕ್' ತತ್ತ್ವದ ಮಾತನ್ನಾಡಿದರು. ಐಡಿಯೊ-ಡೈನಾಮಿಕ್ ತತ್ತ್ವದ ಮೂಲಕ, ಇದು ವ್ಯಕ್ತಿಯ ದೇಹದ ಮೇಲೆ ಆನಂತರದ "ಪ್ರಬಲ ಕಲ್ಪನೆ"ಯ ಪ್ರಭಾವವನ್ನು ಹೆಚ್ಚಿಸಿತು.
ಚಿತ್ತೋನ್ಮಾದ ವಿರುದ್ಧ ಅಂತಸ್ಸೂಚನೆ
[ಬದಲಾಯಿಸಿ]- ಹಲವು ದಶಕಗಳ ಕಾಲ, ಬ್ರೇಡ್‌ರ ಕಾರ್ಯವು ತಮ್ಮ ದೇಶಕ್ಕಿಂತಲೂ ಹೆಚ್ಚಾಗಿ ಇತರೆ ದೇಶಗಳಲ್ಲಿ ಪ್ರಭಾವಶಾಲಿಯಾಯಿತು. ಅವರ ದೇಶದಲ್ಲಿನ ಕೆಲವೇ ಕೆಲವು ಅನುಯಾಯಿಗಳಲ್ಲಿ ಡಾ. ಜಾನ್ ಮಿಲನ್ ಬ್ರ್ಯಾಂವೆಲ್‌ಗಮನಾರ್ಹರು. ಖ್ಯಾತ ನರವಿಜ್ಞಾನಿ ಡಾ. ಜಾರ್ಜ್ ಮಿಲ್ಲರ್ ಬಿಯರ್ಡ್ ಬ್ರೇಡ್‌ರ ಸಿದ್ಧಾಂತಗಳನ್ನು ಅಮೆರಿಕಾಗೆ ಒಯ್ದರು. ಜೆನಾ ವಿಶ್ವವಿದ್ಯಾನಿಲಯದಲ್ಲಿ ಶರೀರವಿಜ್ಞಾನದ ಪ್ರಾಧ್ಯಾಪಕ ವಿಲ್ಹೆಲ್ಮ್ ಟಿ. ಪ್ರೇಯರ್ ಅವರ ಲೇಖನಗಳನ್ನು ಜರ್ಮನ್ ಭಾಷೆಗೆ ಅನುವಾದ ಮಾಡಿದರು.
- ಆನಂತರ ಮನೋವೈದ್ಯ ಆಲ್ಬರ್ಟ್ ಮೊಲ್ ಜರ್ಮನ್ ಸಂಶೋಧನೆಗಳನ್ನು ಮುಂದುವರೆಸಿ, ಹಿಪ್ನೊಟಿಸಮ್ ಎಂಬ ಕೃತಿಯನ್ನು 1889ರಲ್ಲಿ ಪ್ರಕಟಿಸಿದರು. ಖ್ಯಾತ ನರವೈದ್ಯ ಎಟಿಯೆನ್ ಯುಜೇನ್ ಆಜಮ್ ಬ್ರೇಡ್‌ರ ಸಂಶೋಧನೆಯನ್ನು ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್‌ಗೆ ಮಂಡಿಸಿದಾಗ, ಫ್ರಾನ್ಸ್ ಈ ಅಧ್ಯಯನದ ಕೇಂದ್ರಬಿಂದುವಾಯಿತು. ಇಸವಿ 1860ರಲ್ಲಿ ಪ್ರಕಟಿತವಾದ ಬ್ರೇಡ್‌ರ ಕೊನೆಯ ಕೃತಿ ಆನ್ ಹಿಪ್ನಾಟಿಸಂ ನ್ನು ಫ್ರೆಂಚ್ ಭಾಷೆಗೆ ಅನುವಾದ ಮಾಡಿದರು.
- ಆಜಮ್, ಪಾಲ್ ಬ್ರೊಕಾ ಮತ್ತಿತರರ ಕೋರಿಕೆಯ ಮೇರೆಗೆ, 1784ರಲ್ಲಿ ಮೆಸ್ಮರಿಸಂನ್ನು ಪರಿಶೀಲಿಸಿದ ಫ್ರೆಂಚ್ ಅಕ್ಯಾಡೆಮಿ ಆಫ್ ಸೈಯನ್ಸ್, ಬ್ರೇಡ್ ನಿಧನದ ನಂತರ ಬ್ರೇಡ್‌ರ ಲೇಖನಗಳನ್ನು ಪರಿಶೀಲಿಸಿತು.ಸಂಮೋಹನ ಕುರಿತು ಆಜಮ್‌ರ ಆಸಕ್ತಿಯು ಆಂಬ್ರಾಯಿಸ್-ಆಗಸ್ಟ್ ಲಿಯೆಬೂಲ್ಟ್ ಎಂಬ ಗ್ರಾಮೀಣ ವೈದ್ಯರ ಮೇಲೆ ಪ್ರಭಾವ ಬೀರಿತು. ಹಿಪೊಲೈಟ್ ಬರ್ನ್‌ಹೇಮ್ ಲಿಯೆಬೂಲ್ಟ್‌ರ ಪ್ರಖ್ಯಾತ ಸಾಮೂಹಿಕ ಸಂಮೋಹನ ಚಿಕಿತ್ಸಾಲಯವನ್ನು ಪತ್ತೆ ಮಾಡಿದರು.
- ಆನಂತರ ಅವರು ಒಬ್ಬ ಪ್ರಭಾವೀ ಸಂಮೋಹಕರಾದರು. ಸಂಮೋಹನಯ ಅಧ್ಯಯನವು ಅಂತಿಮವಾಗಿ, 19ನೆಯ ಶತಮಾನದ ಸಂಮೋಹನ ಶಾಸ್ತ್ರದ ಇಬ್ಬರು ಪ್ರಭಾವಶಾಲಿ ವ್ಯಕ್ತಿಗಳಾದ ಜೀನ್-ಮಾರ್ಟಿನ್ ಚಾರ್ಕಾಟ್ ಮತ್ತು ಹಿಪೊಲೈಟ್ ಬರ್ನ್‌ಹೇಂ ನಡುವಿನ ಗಹನವಾದ ಚರ್ಚೆಯ ಸುತ್ತ ಸುತ್ತುತ್ತಿತ್ತು.ಚಾರ್ಕಾಟ್ ಪಿಟಿಯೆ ಸಾಲ್ಪೆಟ್ರಿಯೆರ್ ಆಸ್ಪತ್ರೆಯಲ್ಲಿ ಚಿಕಿತ್ಸಾಲಯವನ್ನು ನಡೆಸುತ್ತಿದ್ದರು (ಇದರಿಂದಾಗಿ ಈ ಆಸ್ಪತ್ರೆ 'ಪ್ಯಾರಿಸ್ ಶಾಲೆ' ಅಥವಾ 'ಸಾಲ್ಪೆಟ್ರಿಯೆರ್ ಶಾಲೆ' ಎನ್ನಲಾಯಿತು).
- ಬರ್ನ್‌ಹೇಂ ನ್ಯಾನ್ಸಿಯಲ್ಲಿ ಚಿಕಿತ್ಸಾಲಯವನ್ನು ನಿರ್ವಹಿಸುತ್ತಿದ್ದರು ('ನ್ಯಾನ್ಸಿ ಶಾಲೆ' ಎನ್ನಲಾಗುತ್ತಿತ್ತು). ಚಾರ್ಕಾಟ್ ಮೆಸ್ಮರ್ ಅನುಯಾಯಿಗಳಿಂದ ಹೆಚ್ಚಾಗಿ ಪ್ರಭಾವಿತರಾಗಿದ್ದು, ಸಂಮೋಹನವೆಂಬುದು ನರಗಳ ಕ್ರಿಯೆಯ ಅಪಸಾಮಾನ್ಯ ಸ್ಥಿತಿಯಾಗಿದ್ದು, ಇದು ಕೇವಲ ಚಿತ್ತೋನ್ಮಾದರಾದ ಕೆಲವು ಹೆಂಗಸರಲ್ಲಿ ಮಾತ್ರ ಕಂಡುಬರುತ್ತದೆಂದು ವಾದಿಸಿದರು. ದೈಹಿಕ ಪ್ರತಿಕ್ರಿಯೆಗಳ ಸರಣಿಯಲ್ಲಿ ಇದು ಬಿಂಬಿತವಾಗಿದ್ದು ಇದನ್ನು ಸ್ಪಷ್ಟ ಹಂತಗಳಲ್ಲಿ ವಿಭಜಿಸಬಹುದಾಗಿತ್ತು.
- ಯಾರನ್ನು ಬೇಕಾದರು ಸಂಮೋಹನಕ್ಕೆ ಒಳಗಾಗಿಸಬಹುದು, ಅದು ಸಹಜ ಮನೋವೈಜ್ಞಾನಿಕ ಕ್ರಿಯೆಯ ವಿಸ್ತರಣೆ, ಜೊತೆಗೆ, ಅಂತಸ್ಸೂಚನೆಯ ಕಾರಣ ಇದು ಪ್ರಭಾವ ಬೀರುತ್ತಿತ್ತೆಂದು ಬರ್ನ್‌ಹೇಂ ವಾದಿಸಿದರು. ದಶಕಗಳ ಕಾಲ ಚರ್ಚೆಗಳ ನಂತರ, ಬರ್ನ್‌ಹೇಂರ ಅಭಿಪ್ರಾಯವು ಮೇಲುಗೈ ಪಡೆಯಿತು. ಚಾರ್ಕಾಟ್‌ರ ಸಿದ್ಧಾಂತವು ಇಂದು ಕೇವಲ ಐತಿಹಾಸಿಕ ಕುತೂಹಲವಾಗಿದೆಯಷ್ಟೆ.
ಪಿಯರ್ ಜೇನೆಟ್
[ಬದಲಾಯಿಸಿ]- ಪಿಯೆರ್ ಜೇನೆಟ್ (1859-1947) ಸಂಮೋಹನಗೊಳಗಾದ ವ್ಯಕ್ತಿಯ ಮೇಲಿನ ಅಧ್ಯಯನದ ನಿರ್ಣಯಗಳನ್ನು 1882ರಲ್ಲಿ ಬಹಿರಂಗಪಡಿಸಿದರು. ಆನಂತರ, ಮನೋವೈಜ್ಞಾನಿಕ ಅಪ್ರಜ್ಞಾಕ್ರಿಯೆ ಸಂಬಂಧಿತ ತತ್ತ್ವಶಾಸ್ತ್ರದಲ್ಲಿ ಜೇನೆಟ್ ತಮ್ಮ ಡಾಕ್ಟರೇಟ್ ಪದವಿ ಗಳಿಸಿದ ಬಳಿಕ, ಚಾರ್ಕಾಟ್ ಅವರನ್ನು ಸಾಲ್ಪೆಟ್ರಿಯೆರ್ ಆಸ್ಪತ್ರೆಯ ಮನೋವಿಜ್ಞಾನದ ಪ್ರಯೋಗಾಲಯದ ಮುಖ್ಯಸ್ಥರನ್ನಾಗಿ ನೇಮಿಸಿದರು. ಇಸವಿ 1898ರಲ್ಲಿ ಸೊರ್ಬೊನ್‌ನಲ್ಲಿ ಜೇನೆಟ್‌ರನ್ನು ಮನೋವಿಜ್ಞಾನ ಉಪನ್ಯಾಸಕರಾಗಿ ನೇಮಿಸಲಾಯಿತು.
- ಇಸವಿ 1902ರಲ್ಲಿ ಕಾಲೇಜ್ ಡಿ ಫ್ರಾನ್ಸ್‌ನಲ್ಲಿ ಅವರು ಪ್ರಾಯೋಗಿಕ ಮತ್ತು ತುಲನಾತ್ಮಕ ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾದರು. ಬರ್ನ್‌ಹೇಂ ಮತ್ತು ಅನುಯಾಯಿಗಳ ಅಭಿಪ್ರಾಯಗಳೊಂದಿಗೆ ಜೇನೆಟ್ ತಮ್ಮ ಅಭಿಪ್ರಾಯಗಳ ಅಂಶಗಳನ್ನು ಸರಿಹೊಂದಿಸಿದರು. ಮನೋ ವೈಜ್ಞಾನಿಕ ವಿಘಟನೆಯ ಪರಿಕಲ್ಪನೆಯನ್ನು ಆಧರಿಸಿ, ತಮ್ಮದೇ ಆದ ಅತ್ಯಾಧುನಿಕ ಸಂಮೋಹನ ಮನೋಚಿಕಿತ್ಸೆಯನ್ನು ಅಭಿವೃದ್ಧಿಪಡಿಸಿದರು. ಶತಮಾನದ ತಿರುವಿನಲ್ಲಿ, ಮನೋಚಿಕಿತ್ಸೆಯ ಇನ್ನಷ್ಟು ಸಮಗ್ರ ಸಿದ್ಧಾಂತವನ್ನು ಪ್ರಸ್ತಾಪಿಸುವ ಸಿಗ್ಮಂಡ್ ಫ್ರಾಯ್ಡ್‌ರ ಯತ್ನಕ್ಕೆ ಪೈಪೋಟಿ ಯಾಯಿತು.
ಸಿಗ್ಮಂಡ್ ಫ್ರಾಯ್ಡ್
[ಬದಲಾಯಿಸಿ]- ಮನೋವಿಶ್ಲೇಷಣೆಯ ಸಂಸ್ಥಾಪಕರಾಗಿದ್ದ ಸಿಗ್ಮಂಡ್ ಫ್ರಾಯ್ಡ್, ಪ್ಯಾರಿಸ್ ಶಾಲೆಯಲ್ಲಿ ಸಂಮೋಹನವನ್ನು ಅಧ್ಯಯನ ಮಾಡಿ, ಕೆಲ ಕಾಲ ನ್ಯಾನ್ಸಿ ಶಾಲೆಯಲ್ಲೂ ಸಹ ಇದ್ದರು.ಮೊದಲಿಗೆ, ಸಿಗ್ಮಂಡ್ ಫ್ರಾಯ್ಡ್ ಸಂಮೋಹನದ ಚಿಕಿತ್ಸೆಯ ಪ್ರಬಲ ಸಮರ್ಥಕರಾಗಿದ್ದರು. ಅವರು ಸಂಮೋಹನದ ನಿವರ್ತನ(ಜೀವನದ ಹಿಂದಿನ ಘಟ್ಟಕ್ಕೆ ಒಯ್ಯುವ) ಮತ್ತು ರೇಚಕ ತಂತ್ರಗಳನ್ನು ಚಿಕಿತ್ಸಾ ವಿಧಾನಗಳನ್ನಾಗಿ ಪ್ರತಿಪಾದಿಸತೊಡಗಿದರು.
- ಸಂಮೋಹನ ಶಾಸ್ತ್ರದ ಕುರಿತು ಸಕಾರಾತ್ಮಕ ವಿಶ್ವಕೋಶವನ್ನು ರಚಿಸಿ, ಬರ್ನ್‌ಹೇಮ್‌ರ ಕೃತಿಗಳಲ್ಲೊಂದನ್ನು ಜರ್ಮನ್ ಭಾಷೆಗೆ ಅನುವಾದ ಮಾಡಿದರು. ತಮ್ಮ ಸಹೋದ್ಯೋಗಿ ಜೋಸೆಫ್ ಬ್ರೊಯರ್‌ರೊಂದಿಗೆ ಪ್ರಭಾವಶಾಲಿ ನಿದರ್ಶನ ಅಧ್ಯಯನಗಳನ್ನು (ಕೇಸ್-ಸ್ಟಡೀಸ್) 'ಸ್ಟಡೀಸ್ ಆನ್ ಹಿಸ್ಟೀರಿಯಾ ' ಎಂಬ ಶೀರ್ಷಿಕೆಯಡಿ 1895ರಲ್ಲಿ ಪ್ರಕಟಿಸಿದರು. ಇದು ಆನಂತರ ಮೂಡಿಬಂದ 'ಸಂಮೋಹನ-ವಿಶ್ಲೇಷಣೆ' ಅಥವಾ 'ನಿವರ್ತನ ಸಂಮೋಹನ ಚಿಕಿತ್ಸೆ' ಎಂಬ ಸಾಂಪ್ರದಾಯಿಕ ಚಿಕಿತ್ಸಾ ತಂತ್ರಗಳಿಗೆ ಆಧಾರವಾಯಿತು.
- ಆದರೂ, ಫ್ರಾಯ್ಡ್ ಹಂತ-ಹಂತವಾಗಿ, ಅಜಾಗೃತ ಸ್ಥಿತಿಯ ಮುಕ್ತ ಸಂಬಂಧ ಮತ್ತು ವ್ಯಾಖ್ಯಾನಗಳಿಗೆ ಒತ್ತು ನೀಡುವುದರ ಮೂಲಕ ಮನೋ-ವಿಶ್ಲೇಷಣೆಯನ್ನು ಸಮರ್ಥಿಸತೊಡಗಿ, ಸಂಮೋಹನ ಶಾಸ್ತ್ರವನ್ನು ತ್ಯಜಿಸಿದರು. ಮನೋ-ವಿಶ್ಲೇಷಣೆಗೆ ಹೆಚ್ಚು ಸಮಯ ಬೇಕಾಗಿದೆ ಎಂದು ಮನಗಂಡ ಫ್ರಾಯ್ಡ್, ಚಿಕಿತ್ಸೆ ಬೇಗನೆ ಫಲಕಾರಿಯಾಗಲೆಂದು ಮನೋವಿಶ್ಲೇಷಣೆಯನ್ನು ಸಂಮೋಹನ ಅಂತಸ್ಸೂಚನೆಯೊಂದಿಗೆ ಒಂದುಗೂಡಿಸಬಹುದೆಂದು ಸೂಚಿಸಿದರು.
ನಮ್ಮ ಚಿಕಿತ್ಸೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಅನ್ವಯಿಸುವುದರ ಮೂಲಕ, ಶುದ್ಧ ಚಿನ್ನದಂತಿರುವ ವಿಶ್ಲೇಷಣೆಯನ್ನು ವಿಪುಲವಾಗಿ ತಾಮ್ರದಂತಹ ನೇರ ಸಂಮೋಹನದ ಅಂತಸ್ಸೂಚನೆಯ ಮಿಶ್ರಲೋಹವನ್ನು ಪಡೆಯುವತ್ತ ನಮ್ಮನ್ನು ಸಾಗಿಸುತ್ತದೆ.[೨೪]
ಆದರೆ, ಈ ಸಂಶ್ಲೇಷಣೆಯಲ್ಲಿ ತೊಡಗಲು, ಫ್ರಾಯ್ಡ್‌ರ ಅನುಯಾಯಿಗಳಲ್ಲಿ ಕೆಲವರು ಮಾತ್ರ ತಕ್ಕ ಮಟ್ಟಿಗೆ ಸಂಮೋಹನ ವಿಜ್ಞಾನದಲ್ಲಿ ಅರ್ಹತೆ ಹೊಂದಿದ್ದರು. 'ಸಂಮೋಹನ ನಿವರ್ತನ', 'ಸಂಮೋಹನ ಗತಿವಿಧಾನ', 'ಸಂಮೋಹನ ವಿಶ್ಲೇಷಣೆ' ಎಂದು ವಿವಿಧ ಹೆಸರುಗಳಡಿ ಕರೆಯಲಾದ ಸಂಮೋಹನ-ಚಿಕಿತ್ಸೆಯ ವಿಧಾನಗಳ ಮೇಲೆ ಇವರ ಕಾರ್ಯವು ಸೀಮಿತ ಪ್ರಭಾವ ಹೊಂದಿತ್ತು.
ಎಮಿಲಿ ಕೋ
[ಬದಲಾಯಿಸಿ]- ಎಮಿಲ್ ಕೋ (1857–1926) ನ್ಯಾನ್ಸಿಯಲ್ಲಿ ಎರಡು ವರ್ಷಗಳ ಕಾಲ ಆಂಬ್ರೊಯಿಸ್-ಆಗಸ್ಟ್ ಲೇಬೊಲ್ಟ್‌ರಿಗೆ ಸಹಾಯ-ಸಹಯೋಗ ನೀಡಿದ್ದರು. ಹಲವು ವರ್ಷಗಳ ಕಾಲ ಲೇಬೊಲ್ಟ್ ಮತ್ತು ಬರ್ನ್‌ಹೇಂರ ಚಿಕಿತ್ಸಾ ವಿಧಾನಗಳನ್ನು ಬಳಸಿ ಸಂಮೋಹನಾ ಚಿಕಿತ್ಸಕರಾಗಿ ಕಾರ್ಯ ನಿರ್ವಹಿಸಿದ ನಂತರ, ಎಮಿಲ್ ಕೋ 'ಜಾಗೃತ ಸ್ವಯಂ-ಅಂತಸ್ಸೂಚನೆ' ಎಂಬ ಹೊಸ ವಿಧಾನವನ್ನು ಅಭಿವೃದ್ಧಿಗೊಳಿಸಿದರು.
- ಇಸವಿ 1904ರಲ್ಲಿ ಲೇಬೊಲ್ಟ್ ನಿಧನರಾಗಿ ಹಲವು ವರ್ಷಗಳ ನಂತರ, ಇಂದು 'ನ್ಯೂ ನ್ಯಾನ್ಸಿ ಸ್ಕೂಲ್' ಎಂದು ಹೆಸರಾದ ಸಂಸ್ಥೆಯನ್ನು ಎಮಿಲ್ ಕೋ ಸಂಸ್ಥಾಪಿಸಿದರು. ಲೇಬೊಲ್ಟ್‌ರ ದೃಷ್ಟಿಕೋನವನ್ನು ಸಮರ್ಥಿಸಿ ಉತ್ತೇಜಿಸಿದ ಹಲವು ಚಿಕಿತ್ಸಾತಜ್ಞರ ಸಡಿಲ ಸಹಯೋಗವಾಗಿತ್ತು. ಎಮಿಲ್ ಕೋ ಅವರ ವಿಧಾನವು 'ನಿದ್ರೆ' ಅಥವಾ ಆಳವಾದ ವಿಶ್ರಮ ಸ್ಥಿತಿಯ ಕುರಿತು ಒತ್ತಿ ಹೇಳಲಿಲ್ಲ. ಬದಲಿಗೆ, ಅಂತಸ್ಸೂಚನೆಯ ಪ್ರಯೋಗಗಳ ಸರಣಿಯನ್ನು ಒಳಗೊಂಡ ಸ್ವಯಂ-ಅಂತಸ್ಸೂಚನೆಯ ಮೇಲೆ ಕೇಂದ್ರೀಕೃತವಾಗಿತ್ತು.
- ಅವರು 'ಸಂಮೋಹನ'ವನ್ನು ಇನ್ನೆಂದಿಗೂ ಬಳಸುತ್ತಿಲ್ಲ ಎಂದು ಎಮಿಲ್ ಕೋ ವಾದಿಸಿದರೂ ಸಹ, ಚಾರ್ಲ್ಸ್ ಬಾಡೂಯಿನ್‌ರಂತಹ ಅನುಯಾಯಿಗಳು ಇವರ ವಿಧಾನವನ್ನು ಹಗುರ ಸ್ವ-ಸಂಮೋಹನದ ಒಂದು ವಿಧಾನ ಎಂದು ಅಭಿಪ್ರಾಯಪಟ್ಟರು. ಎಮಿಲ್ ಕೋರ ವಿಧನವು ಖ್ಯಾತ 'ಸ್ವಸಹಾಯ' ಮತ್ತು ಮನೋಚಿಕಿತ್ಸಾ ವಿಧಾನವಾಯಿತು. ಇದು ಮನೋ-ವಿಶ್ಲೇಷಣೆ, ಪೂರ್ವಾಭಾವಿಯಾಗಿ ಕಲ್ಪಿಸಿಕೊಂಡ ಸ್ವ-ಸಂಮೋಹನ ಮತ್ತು ಅರಿವಿಗೆ ಸಂಬಂಧಿಸಿದ ಚಿಕಿತ್ಸೆಗಳಿಗೆ ತದ್ವಿರುದ್ಧದ ವಿಧಾನವಾಯಿತು.
ಕ್ಲಾರ್ಕ್ ಎಲ್. ಹಲ್
[ಬದಲಾಯಿಸಿ]- ಮುಂದಿನ ಪ್ರಮುಖ ಅಭಿವೃದ್ಧಿಯು, ಅಮೆರಿಕನ್ ವಿಶ್ವವಿದ್ಯಾಲಯ ಸಂಶೋಧನೆಯಲ್ಲಿನ 'ವರ್ತನೆಯ ಮನೋವಿಜ್ಞಾನ'ದಿಂದ ಬಂದಿತು. ಅಮೆರಿಕಾದ ಪ್ರಸಿದ್ಧ ಮನೋವಿಜ್ಞಾನಿ ಕ್ಲಾರ್ಕ್ ಎಲ್. ಹಲ್ ಸಂಮೋಹನದ ಕುರಿತು, 'ಹಿಪ್ನೊಸಿಸ್ ಅಂಡ್ ಸೆನ್ಸಿಬಿಲಿಟಿ ' ಪ್ರಯೋಗಾಲಯದ ಅಧ್ಯಯನಗಳ ಮೊದಲ ಪ್ರಮುಖ ಸಂಪುಟವನ್ನು 1933ರಲ್ಲಿ ಪ್ರಕಟಿಸಿದರು. ಇದರಲ್ಲಿ ಅವರು ಸಂಮೋಹನ ಮತ್ತು ನಿದ್ರೆಯ ನಡುವೆ ಯಾವುದೇ ಸಮಾನ ಅಂಶಗಳಿಲ್ಲ ಎಂಬುದನ್ನು ಸಾಬೀತುಪಡಿಸಿದರು.
- ಹಲ್ ಸಂಮೋಹನ ಮತ್ತು ಅಂತಸ್ಸೂಚನೆ ಪ್ರಯೋಗಗಳಿಂದ ಹಲವು ಪರಿಮಾಣಾತ್ಮಕ ಪರಿಶೋಧನೆಗಳನ್ನು ಪ್ರಕಟಿಸಿ, ಮುಖ್ಯವಾಹಿನಿ ಮನೋವಿಜ್ಞಾನಿಗಳಿಗೆ ಸಂಶೋಧನೆಗೆ ಪ್ರೋತ್ಸಾಹಿಸಿದರು. ಹಲ್ ಅವರ ರೂಢಿಸಿದ ಪ್ರತಿವರ್ತನೆ ಕುರಿತ ಸಂಮೋಹನದ ಬಗ್ಗೆ ಮನೋವಿಜ್ಞಾನದ ವ್ಯಾಖ್ಯಾನವು ಅಜಾಗೃತ ರವಾನೆಯನ್ನು ಒತ್ತಿಹೇಳುವ ಫ್ರಾಯ್ಡ್‌ನ ಮನೋ-ಬಲವೈಜ್ಞಾನಿಕ ಅರ್ಥ-ವಿವರಣೆಗೆ ಪೈಪೋಟಿಯೊಡ್ಡಿತು.
ಮಿಲ್ಟನ್ ಎರಿಕ್ಸನ್
[ಬದಲಾಯಿಸಿ]- ಮಿಲ್ಟನ್ ಎರಿಕ್ಸನ್ M.D. ಯುದ್ಧಾನಂತರದ ಅತ್ಯಂತ ಪ್ರಭಾವಶಾಲಿ ಸಂಮೋಹಕ ಚಿಕಿತ್ಸಕರಾಗಿದ್ದರು. ಅವರು ಈ ವಿಷಯದ ಕುರಿತು ಹಲವು ಗ್ರಂಥಗಳು ಮತ್ತು ನಿಯತಕಾಲೀನ ಲೇಖನಗಳನ್ನು ಬರೆದರು. 1960ರ ದಶಕದಲ್ಲಿ, 'ಎರಿಕ್ಸನಿಯನ್ ಸಂಮೋಹನಾ ಚಿಕಿತ್ಸೆ ' ಎಂದು ಖ್ಯಾತವಾದ ಸಂಮೋಹನಾ ಚಿಕಿತ್ಸೆ ಶಾಖೆಯನ್ನು ಎರಿಕ್ಸನ್ ಜನಪ್ರಿಯಗೊಳಿಸಿದರು.
- ವಿಧ್ಯುಕ್ತ ಸಂಮೋಹನಾ ಪ್ರವೇಶ ತಂತ್ರಗಳ ಬದಲಿಗೆ, ಪರೋಕ್ಷ ಅಂತಸ್ಸೂಚನೆ, 'ರೂಪಕಾಲಂಕಾರ' (ವಾಸ್ತವವಾಗಿ ಸಾದೃಶ್ಯಗಳು), ಗೊಂದಲಗೊಳಿಸುವ ವಿಧಾನಗಳು ಮತ್ತು ಡಬಲ್ ಬೈಂಡ್(ಎರಡಕ್ಕಿಂತ ಹೆಚ್ಚು ಭಿನ್ನ ಸಂದೇಶಗಳು) ವಿಧಾನಗಳನ್ನು ಈ ಹೊಸ ಚಿಕಿತ್ಸೆಯು ಒಳಗೊಂಡಿತ್ತು. ಆದರೆ, ಎರಿಕ್ಸನ್‌ರ ವಿಧಾನಗಳು ಮತ್ತು ಸಾಂಪ್ರದಾಯಿಕ ಸಂಮೋಹನ ವಿಜ್ಞಾನದ ನಡುವಿನ ವ್ಯತ್ಯಾಸಗಳಿಂದ, ಎರಿಕ್ಸನ್ ನಿಜಕ್ಕೂ 'ಸಂಮೋಹನ'ವನ್ನು ಅಭ್ಯಸಿಸುತ್ತಿದ್ದಾರೆಯೇ ಎಂದು ಆಂಡ್ರೆ ವೇಜೆನ್ಹಾಫರ್‌ರಂತಹ ಸಮಕಾಲೀನ ಚಿಕಿತ್ಸಕರು ಪ್ರಶ್ನಿಸಲಾರಂಭಿ ಸಿದರು. ಎರಿಕ್ಸನ್‌ರ ಚಿಕಿತ್ಸಾ ವಿಧಾನವು ಇಂದಿಗೂ ಪ್ರಶ್ನಾರ್ಹವಾಗುಳಿದಿದೆ.
ಸಂಮೋಹನಕ್ಕೆ ಒಳಗಾದ ವ್ಯಕ್ತಿಯು ಸಂಮೋಹಿತ ಸ್ಥಿತಿಯಲ್ಲಿದ್ದರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಎರಿಕ್ಸನ್ ಯಾವುದೇ ಸೂಚಿಸಲಾದ ಪ್ರಭಾವವನ್ನು ಸಂಮೋಹನ ಎಂದು ನಿರೂಪಿಸಲು ಹಿಂಜರಿಯುತ್ತಿರಲಿಲ್ಲ. ವಾಸ್ತವವಾಗಿ ಸಂಶಯಾಸ್ಪದವಾಗಿ ಸಂಮೋಹಿತ ಸ್ಥಿತಿಯ ನಡವಳಿಕೆಯನ್ನು ಸಹ ಅವರು ಸಂಮೋಹಿತ ಸ್ಥಿತಿಯೆಂದೇ ಪರಿಗಣಿಸಲು ಹಿಂಜರಿಯುತ್ತಿರಲಿಲ್ಲ.[೨೫]
ಅರಿವಿಗೆ ಸಂಬಂಧಿಸಿದ-ವರ್ತನೆಯ ವಿಧಾನ
[ಬದಲಾಯಿಸಿ]- ಇಪ್ಪತನೆಯ ಶತಮಾನದ ಅಪರಾರ್ಧದಲ್ಲಿ, ಸಂಮೋಹನದ ಅರಿವಿನ-ವರ್ತನೆಯ ವಿಧಾನವು ಅಭಿವೃದ್ಧಿಗೊಳ್ಳಲು ಎರಡು ಅಂಶಗಳಿದ್ದವು. 1. ಸಾರ್ಬಿನ್ [೨೬] ಮತ್ತು ಬಾರ್ಬರ್‌ರ [೨೭]
- ಸಿದ್ಧಾಂತಗಳಿಂದ ಪ್ರಭಾವಿತವಾದ ಸಂಮೋಹನ ಸ್ವಭಾವದ ಅರಿವಿನ ಮತ್ತು ವರ್ತನೆಯ ಸಿದ್ಧಾಂತಗಳು ಹೆಚ್ಚು ಪ್ರಭಾವ ಬೀರಲಾರಂಭಿಸಿದವು. ಸಂಮೋಹನಾ ಚಿಕಿತ್ಸೆ ಮತ್ತು ಅರಿವಿನ-ವರ್ತನೆಯ ಚಿಕಿತ್ಸೆಗಳ ವಿವಿಧ ರೂಪಗಳ ಚಿಕಿತ್ಸಾತ್ಮಕ ಪ್ರಯೋಗಗಳು ಒಂದರ ಮೇಲೊಂದು ಪರಸ್ಪರ ಪ್ರಭಾವ ಬೀರಿದವು.[೨೮] ಸಂಮೋಹನದ ಅರಿವಿನ-ವರ್ತನೆಯ ಸಿದ್ಧಾಂತಗಳು ಸಂಮೋಹನ ಚಿಕಿತ್ಸೆಯ ಅರಿವಿನ-ವರ್ತನೆಯ ವಿಧಾನಗಳಿಗಿಂತ ವ್ಯತ್ಯಾಸವುಳ್ಳದ್ದಾಗಿದ್ದರೂ, ಅವು ಒಂದೇ ರೀತಿಯ ಪರಿಕಲ್ಪನೆ, ಪರಿಭಾಷೆ ಮತ್ತು ಊಹೆಗಳನ್ನು ಹೊಂದಿವೆ.
- ಇರ್ವಿಂಗ್ ಕಿರ್ಷ್, ಸ್ಟೀವೆನ್ ಜೇ ಲಿನ್ ಮತ್ತು ಇತರರಂತಹ ಪ್ರಭಾವೀ ಸಂಶೋಧಕರು ಮತ್ತು ಚಿಕಿತ್ಸಕರಿಂದ ಸಮಗ್ರವಾಗಿದೆ.[೨೯] 1950ರ ದಶಕದಲ್ಲಿ ಅರಿವಿನ-ವರ್ತನೆಯ ಚಿಕಿತ್ಸೆಯಲ್ಲಿ, ಜೊಸೆಫ್ ವೊಲ್ಪ್‌ರಂತಹ [೩೦] ಆರಂಭಕಾಲಿಕ ವರ್ತನಾ ಚಿಕಿತ್ಸಕರು ಸಂಮೋಹನವನ್ನು ಬಳಸುತ್ತಿದ್ದರು.
- ಜೊತೆಗೆ ಆಲ್ಬರ್ಟ್ ಎಲ್ಲಿಸ್‌ರಂತಹ ಆರಂಭಕಾಲಿಕ ಅರಿವಿನ ಚಿಕಿತ್ಸಕರೂ ಸಹ ಸಂಮೋಹನ ವಿಧಾನವನ್ನು ಬಳಸುತ್ತಿದ್ದರು.[೩೧] ಇಸವಿ 1974ರಲ್ಲಿ ಸ್ಥಿತಿರಹಿತ ಸಂಮೋಹನದ ಸಿದ್ಧಾಂತದ ವಿವರಣೆಗೆ ಪ್ರಕಟಿಸಲಾದಹಿಪ್ನೊಟಿಸಮ್: ಇಮ್ಯಾಜಿನೇಷನ್ ಅಂಡ್ ಹ್ಯೂಮನ್ ಪೊಟೆನ್ಷಿಯಲಿಟೀಸ್ ಲೇಖನದಲ್ಲಿ ಬಾರ್ಬರ್, ಸ್ಪಾನೊಸ್ ಮತ್ತು ಚಾವೆಸ್ 'ಅರಿವಿನ-ವರ್ತನೆ' ಎಂಬ ಉಕ್ತಿಯನ್ನು ಪರಿಚಯಿಸಿದರು.[೨೭] ಆದರೂ, ಕ್ಲಾರ್ಕ್ ಎಲ್. ಹಲ್ 1933ರಷ್ಟು ಹಿಂದೆಯೇ ವರ್ತನೆಯ ಮನೋವಿಜ್ಞಾನವನ್ನು ಪರಿಚಯಿಸಿದ್ದರು.
- ಇದಕ್ಕೂ ಮೊದಲು ಇವಾನ್ ಪಾವ್ಲೊವ್ ಪರಿಚಯಿಸಿದ್ದರು.[೩೨] ಸಂಮೋಹನದ ಆರಂಭಿಕ ಸಿದ್ಧಾಂತ ಮತ್ತು ಪ್ರಯೋಗಗಳು,ಬ್ರೇಡ್‌ರದ್ದು ಕೂಡ, ಕೆಲವು ರೀತಿಗಳಲ್ಲಿ ಅರಿವಿನ-ವರ್ತನೆಯ ದೃಷ್ಟಿಕೋನವನ್ನು ಹೋಲುತ್ತವೆ.[೩೩]
ಸಂಮೋಹನಾ ಚಿಕಿತ್ಸೆ
[ಬದಲಾಯಿಸಿ]ಆಧುನಿಕ ಸಂಮೋಹನಾ ಚಿಕಿತ್ಸೆಯನ್ನು ವಿವಿಧ ರೂಪಗಳಲ್ಲಿ ಬಳಸಲಾಗಿದೆ. ಉದಾಹರಣೆಗೆ, ನಿವರ್ತನ ಸಂಮೋಹನ ಚಿಕಿತ್ಸೆ (ಅಥವಾ 'ಸಂಮೋಹನ ವಿಶ್ಲೇಷಣೆ') ಮತ್ತು ಎರಿಕ್ಸನಿಯನ್ ಸಂಮೋಹನ ಚಿಕಿತ್ಸೆ ಸಂಮೋಹನವನ್ನು ಚಿಕಿತ್ಸಾತ್ಮಕವಾಗಿ ಅಧ್ಯಯನ ನಡೆಸಿ, ಭಿನ್ನ ಸಾಫಲ್ಯ ಕಂಡಿದೆ.[೩೪] ಉಪಯೋಗಗಳ ಪೈಕಿ ಕೆಳಕಂಡವು ಹೀಗಿವೆ:
- ನೋವಿನ ನಿರ್ವಹಣೆ:[೩೫]
- ತೂಕದ ಇಳಿತ [೩೬]
- ಚರ್ಮ ರೋಗ [೩೭]
- ಗಾಬರಿಗೊಂಡಿರುವ ಶಸ್ತ್ರಚಿಕಿತ್ಸಾ ರೋಗಿಗಳಿಗೆ ಸಾಂತ್ವನ
- ಮನೋವೈಜ್ಞಾನಿಕ ಚಿಕಿತ್ಸೆ [೩೮]
- ಚಟಗಳ ನಿಯಂತ್ರಣ,[೩೯] ಆರಾಮವಾಗಿರಲು ಒಂದು ರೀತಿ,[೪೦]
- ಕ್ರೀಡೆಗಳಲ್ಲಿ ಸಾಧನೆ.[೪೧] ಸಿಗರೆಟ್ ಸೇವನೆ ಮತ್ತು ಒತ್ತಡ ಕಡಿಮೆಗೊಳಿಸಲು ಸ್ವ-ಸಂಮೋಹನವನ್ನು ವ್ಯಾಪಕವಾಗಿ ಬಳಸಲಾಗಿದೆ. ರಂಗ-ವೇದಿಕೆಯ ಸಂಮೋಹನದ ಮೂಲಕ ಜನರನ್ನು ಅಸಾಮಾನ್ಯವಾದ ಸಾರ್ವಜನಿಕ ಸಾಧನೆಗಳನ್ನು ನಿರ್ವಹಿಸುವಂತೆ ಮನವೊಲಿಸಬಹುದು.[೪೨]
ವೈದ್ಯಕೀಯ ಪ್ರಯೋಜನಗಳು
[ಬದಲಾಯಿಸಿ]ಯಾತನೀಯ ಬೋವೆಲ್ ಸಿಂಡ್ರೋಮ್ ಗೆ ಚಿಕಿತ್ಸೆ ನೀಡಲು ಸಂಮೋಹನಾ ಚಿಕಿತ್ಸೆಯನ್ನು ಬಳಸಲಾಗಿದೆ. ಈ ಕ್ಷೇತ್ರದಲ್ಲಿ ಅತ್ಯುತ್ತಮ ಆಧ್ಯಯನಗಳನ್ನು ಪರಾಮರ್ಶಿಸಿದ ಸಂಶೋಧಕರು ಕೆಳಕಂಡಂತೆ ನಿರ್ಣಯಿಸಿದ್ದಾರೆ:
ಸಂಮೋಹನವು IBSಗೆ ಪರಿಣಾಮಕಾರಿ ಚಿಕಿತ್ಸೆ ಎಂಬ ಪುರಾವೆಯು ಪ್ರೋತ್ಸಾಹದಾಯಕವಾಗಿದೆ. IBSಗಾಗಿ ಸಂಮೋಹನದ ಬಳಕೆಯನ್ನು ವಿಶ್ಲೇಷಿಸಿದ ಮೂರು ಅಧ್ಯಯನಗಳಲ್ಲಿ ಎರಡು ಚೆನ್ನಾಗಿ ರಚನೆಯಾಗಿದ್ದು, ಇದು IBSನ ಸಂಮೋಹನ ಚಿಕಿತ್ಸೆಯ ಪ್ರಭಾವವನ್ನು ಸ್ಪಷ್ಟವಾಗಿ ತೋರಿಸಿದವು.[೪೩]
IBSಗಾಗಿ ಸಂಮೋಹನವು UK ಆರೋಗ್ಯ ಸೇವಾ ಕ್ಷೇತ್ರಕ್ಕಾಗಿ ಪ್ರಕಟಿಸಲಾದ ಚಿಕಿತ್ಸೆಗೆ ಆರೋಗ್ಯ ಮತ್ತು ವೈದ್ಯಕೀಯ ಉತ್ಕೃಷ್ಟತೆಯ ರಾಷ್ಟ್ರೀಯ ಸಂಸ್ಥೆಯ ಮಾರ್ಗದರ್ಶನದಲ್ಲಿ ಸಾಧಾರಣ ಬೆಂಬಲವು ಲಭಿಸಿತ್ತು.[೪೪] ರಾಸಾಯನಿಕ ಅರಿವಳಿಕೆಗೆ [೪೫][೪೬][೪೭]
- ಸಂಮೋಹನವನ್ನು ನೆರವಾಗಿ ಅಥವಾ ಪರ್ಯಾಯ ರೂಪದಲ್ಲಿ ಬಳಸಲಾಗಿದೆ. ಚರ್ಮದ ಬೇನೆಗಳನ್ನು ಶಮನಗೊಳಸಲು ಸಹ ಸಂಮೋಹನ ಚಿಕಿತ್ಸೆ ಕುರಿತು ಅಧ್ಯಯನ ನಡೆಸಲಾಗುತ್ತಿದೆ.[೪೮] ಸುಟ್ಟ-ಗಾಯದ ಶಸ್ತ್ರಚಿಕಿತ್ಸೆ, ಮೂಳೆ-ಮಜ್ಜೆಯ ಸಮಸ್ಯೆ ಹಾಗೂ ಹೆರಿಗೆಯ ಸಮಯದ ನೋವನ್ನು ಶಮನಗೊಳಿಸಲು ಸಂಮೋಹನ ತಂತ್ರವು ಉಪಯುಕ್ತವಾಗಿದೆಯೆಂದು ಹಲವು ಅಧ್ಯಯನಗಳು ತೋರಿಸಿವೆ.
- ಚಿಕಿತ್ಸಾತ್ಮಕ ಮತ್ತು ಪ್ರಾಯೋಗಿಕ ಸಂಮೋಹನದ ಅಂತಾರಾಷ್ಟ್ರೀಯ ಜರ್ನಲ್ 27 ವಿವಿಧ ಪ್ರಯೋಗಗಳಲ್ಲಿ ಭಾಗವಹಿಸಿದ 933 ವ್ಯಕ್ತಿಗಳ ಪೈಕಿ 75%ರಷ್ಟು ಜನರಲ್ಲಿ ಸಂಮೋಹನವು ನೋವು ಕಡಿಮೆಗೊಳಿಸಿತು ಎಂದು ಕಂಡುಬಂದಿತ್ತು.[೪೯] ಕ್ಯಾನ್ಸರ್ ಮತ್ತು ಇತರೆ ದೀರ್ಘಕಾಲಿಕ ರೋಗಗಳಲ್ಲಿ ನೋವನ್ನು ಕಡಿಮೆಗೊಳಿಸಲು ಸಂಮೋಹನವು ಪರಿಣಾಮಕಾರಿಯೆಂದು 1996ರಲ್ಲಿ ರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಘೋಷಿಸಿತು.[೪೯] ವಾಸಿಯಾಗದ ರೋಗಗಳಿಗೆ ಸಂಬಂಧಿತ ವಾಕರಿಕೆ ಮತ್ತು ಇತರೆ ರೋಗಲಕ್ಷಣಗಳನ್ನು ಸಂಮೋಹನ ತಂತ್ರದೊಂದಿಗೆ ಸರಿಯಾಗಿ ನಿಭಾಯಿಸಬಹುದು.[೫೦][೫೧][೫೨][೫೩]
- ಉದಾಹರಣೆಗೆ, ಮೌಂಟ್ ಸಿನೈ ಸ್ಕೂಲ್ ಆಫ್ ಮಡಿಸಿನ್‌ಲ್ಲಿ ನಡೆಸಲಾದ ಸಂಶೋಧನೆಯು, ಸ್ತನದ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಎದುರಿಸುತ್ತಿರುವ ರೋಗಿಗಳ ಎರಡು ಗುಂಪುಗಳ ಅಧ್ಯಯನ ಮಾಡಿತು. ಸಂಮೋಹನ ಚಿಕಿತ್ಸೆ ಪಡೆದ ತಂಡದ ಸದಸ್ಯರು ಕಡಿಮೆ ನೋವು, ವಾಕರಿಕೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ಕಡಿಮೆ ತಳಮಳ ಪ್ರದರ್ಶಿಸಿದರು. ಸರಾಸರಿ ಸಂಮೋಹನ ರೋಗಿಗಾಗಿ ಚಿಕಿತ್ಸಾ ವೆಚ್ಚ ಸರಾಸರಿ $722.00ರಷ್ಟು ಕಡಿಮೆಯಾಗಿತ್ತು.[೫೪][೫೫]
- ನೋವು ಕಡಿಮೆಗೊಳಿಸುವಲ್ಲಿ ಸಂಮೋಹನ, ಸಾಮಾನ್ಯ ಅಂತಸ್ಸೂಚನೆ ಮತ್ತು ಪ್ಲಸೀಬೊಗಳ ಪಾತ್ರವನ್ನು ತುಲನ ಮಾಡಿದ ಅಧ್ಯಯನವೊಂದನ್ನು ಅಮೆರಿಕನ್ ಮನೋವೈಜ್ಞಾನಿಕ ಸಂಘ ಪ್ರಕಟಿಸಿತು. ಅಧ್ಯಯನದ ಪ್ರಕಾರ, ಹೆಚ್ಚು ಅಂತಸ್ಸೂಚನೆಗೆ ಒಳಗಾಗುವ ವ್ಯಕ್ತಿಗಳು ಪ್ಲಸೀಬೊಗೆ ಹೋಲಿಸಿದರೆ ಸಂಮೋಹನದ ಮೂಲಕ ನೋವಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಕಡಿಮೆಯಾಯಿತೆಂದರು. ಕಡಿಮೆ ಅಂತಸ್ಸೂಚನೆಗೆ ಒಳಗಾದ ವ್ಯಕ್ತಿಗಳು ಪ್ಲಸೀಬೋಗೆ ಹೋಲಿಸಿದರೆ ಸಂಮೋಹನ ತಂತ್ರವು ನೋವು ಕಡಿಮೆಗೊಳಿಸಲಿಲ್ಲ ಎಂದರು.
- ಪ್ಲಸೀಬೊಗೆ ಹೋಲಿಸಿದಲ್ಲಿ ಸಂಮೋಹನ ರಹಿತ ಸಾಮಾನ್ಯ ಅಂತಸ್ಸೂಚನೆಯೂ ಸಹ ನೋವು ಕಡಿಮೆಗೊಳಿಸುಲ್ಲಿ ನೆರವಾಯಿತು. ಆದರೆ ಇದು ಸಂಮೋಹನಕ್ಕಿಂತಲೂ ವ್ಯಾಪಕ ಶ್ರೇಣಿಯ ವ್ಯಕ್ತಿಗಳಲ್ಲಿ (ಹೆಚ್ಚು ಅಥವಾ ಕಡಿಮೆ ಅಂತಸ್ಸೂಚನೆ ವ್ಯಕ್ತಿಗಳಲ್ಲಿ) ನೋವು ಕಡಿಮೆ ಮಾಡಬಲ್ಲ ದಾಗಿತ್ತು. ಸಂಮೋಹನದ ಪರಿಸ್ಥಿತಿಯೊಳಗೆ ಇರಲಿ ಅಥವಾ ಇಲ್ಲದಿರಲಿ ಮುಖ್ಯವಾಗಿ,ಅಂತಸ್ಸೂಚನೆಗಳಿಗೆ ವ್ಯಕ್ತಿಗಳ ಸಂವೇದನೆಯು ನೋವನ್ನು ಕಡಿಮೆಗೊಳಿಸಲು ಪ್ರಮುಖ ಕಾರಣವಾಗಿದೆ.[೫೬] ಸಂಮೋಹನದ ಮೂಲಕ ಚರ್ಮರೋಗಗಳ ಚಿಕಿತ್ಸೆ (ಸಂಮೋಹನ-ಚರ್ಮಚಿಕಿತ್ಸೆ) ಬೊಬ್ಬೆಗಳು, ಸೋರಿಯಾಸಿಸ್ ಮತ್ತು ಎಟೊಪಿಕ್ ಚರ್ಮದ ಊತ [೫೭] ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ಎಂದು ಸಾಬೀತಾಗಿದೆ.[೫೮]
- ತೂಕ ಇಳಿಸಿಕೊಳ್ಳಲು ಸಂಮೋಹನ ಚಿಕಿತ್ಸೆಯು ಉಪಯುಕ್ತ ಚಿಕಿತ್ಸೆಯಾಗಿದೆ. ಇಸವಿ 1996ರಲ್ಲಿ ಅರಿವಿನ-ವರ್ತನೆಯ ಚಿಕಿತ್ಸೆಯೊಂದಿಗೆ, ಸಂಮೋಹನದ ಆಧ್ಯಯನ ನಡೆಸಿದ ನಡೆಸಿದ ಮೆಟಾ-ವಿಶ್ಲೇಷಣೆಯ ಪ್ರಕಾರ, ಎರಡೂ ತರಹದ ಚಿಕಿತ್ಸೆ ಪಡೆದ ವ್ಯಕ್ತಿಗಳು ಕೇವಲ CBT ಚಿಕಿತ್ಸೆ ಪಡೆದ ವ್ಯಕ್ತಿಗಳಿಗಿಂತಲೂ ಹೆಚ್ಚು ತೂಕ ಕಳೆದುಕೊಂಡರು.[೫೯]
ಸೇನೆಯಲ್ಲಿ ಬಳಕೆ
[ಬದಲಾಯಿಸಿ]ದಿ ಬ್ಲಾಕ್ ವಾಲ್ಟ್ ಫ್ರೀಡಂ ಆಫ್ ಇನ್ಫಾರ್ಮೇಶನ್ ಆಕ್ಟ್ ದಾಖಲೆಯು ಪಡೆದುಕೊಂಡ ಒಂದು ಇತ್ತೀಚಿನ ವಿವರ್ಗೀಕೃತ ದಾಖಲೆಯು, ಸಂಮೋಹನ ವಿದ್ಯೆಯನ್ನು ಸೈನದ ಉಪಯೋಗಗಳಿಗೂ ಬಳಕೆ ಮಾಡಲಾಗಿದೆಯೆಂದು ತೋರಿಸಿದೆ.[೬೦] ಆದಾಗ್ಯೂ, ಅಧ್ಯಯನದ ಒಟ್ಟಾರೆ ಸಾರಾಂಶವೆಂದರೆ ಸಂಮೋಹನವನ್ನು ಸೈನ್ಯ ಉಪಯೋಗಗಳಿಗೆ ಬಳಕೆ ಮಾಡಿರಬಹುದೆಂಬುದಕ್ಕೆ ಯಾವುದೇ ಪುರಾವೆಯಿಲ್ಲ, ಜೊತೆಗೆ 'ಸಂಮೋಹನ'ವು ವಾಸ್ತವವಾಗಿ ಒಂದು ಸಾಮಾನ್ಯ ಅಂತಸ್ಸೂಚನೆ, ಹೆಚ್ಚಿನ ಪ್ರೇರಣೆ ಹಾಗು ವಿಷಯ ನಿರೀಕ್ಷೆಯ ಹೊರಗೆ ಒಂದು ಸ್ಪಷ್ಟ ನಿರೂಪಣಾ ಸಂಗತಿಯಾಗಿ ಅಸ್ತಿತ್ವದಲ್ಲಿದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಆಧಾರವಿಲ್ಲ. ದಾಖಲೆಯ ಪ್ರಕಾರ,
ಬೇಹುಗಾರಿಕೆಯಲ್ಲಿ ಸಂಮೋಹನದ ಬಳಕೆಯಿಂದಾಗಿ ದವಾಖಾನೆಯಲ್ಲಿ ಅಥವಾ ಪ್ರಯೋಗಾಲಯದಲ್ಲಿ ಎದುರಾಗದ ಕೆಲವು ತಾಂತ್ರಿಕ ಸಮಸ್ಯೆಗಳು ಉದ್ಭವಿಸಬಹುದು. ಒಂದು ವಿರೋಧಿ ಮೂಲದಿಂದ ಬೆಂಬಲವನ್ನು ಗಳಿಸಲು, ಉದಾಹರಣೆಗೆ, ಮೂಲವನ್ನು ಅತ್ಯಗತ್ಯವಾಗಿ ವಿರೋಧಿ ಪರಿಸ್ಥಿತಿಗಳಲ್ಲಿ ಸಂಮೋಹನಕ್ಕೆ ಒಳಪಡಿಸುವುದು ಅವಶ್ಯಕವಾಗಿದೆ. ಇದನ್ನು ಮಾಡಬಹುದೆಂಬ ಯಾವುದೇ, ಪ್ರಾಯೋಗಿಕ ಅಥವಾ ಪರೀಕ್ಷಾರ್ಥಕ ಸಾಕ್ಷಿಗಳಿಲ್ಲ.
ಇನ್ನೂ ಮುಂದುವರಿದಂತೆ, ವರದಿಯು ಈ ಕೆಳಕಂಡಂತೆ ನಿರೂಪಿಸುತ್ತದೆ:
ಒಂದು ಕವಲೊಡೆದ ವೃತ್ತಿಪರ ಅಭಿಪ್ರಾಯ ಹಾಗು ಪರಸ್ಪರ ವಿರುದ್ಧವಾದ ಪ್ರಾಯೋಗಿಕ ಸಾಕ್ಷಿಯಿಂದ ಸುತ್ತುವರಿದ ವೈಜ್ಞಾನಿಕ ಆಸಕ್ತಿಯ ಕ್ಷೇತ್ರವನ್ನು ಕಂಡುಹಿಡಿಯುವುದು ತುಂಬಾ ಕಷ್ಟದ ಕೆಲಸ... ಸಂಮೋಹನವು ಕೆಲವು ಶಾರೀರಿಕ ಹಾಗು ನಿಯಮಾಧೀನ ಪ್ರತಿಕ್ರಿಯಾ ಅಂಶಗಳನ್ನು ಹೊಂದಿರುವ ಒಂದು ಗುಣಾತ್ಮಕವಾದ ವಿಶಿಷ್ಟ ಸ್ಥಿತಿಯೇ ಅಥವಾ ಹೆಚ್ಚಿನ ಪ್ರಚೋದನೆ ಮತ್ತು ಸಂಮೋಹಕ ಹಾಗು ವ್ಯಕ್ತಿಯ ನಡುವೆ ಒಂದು ಸಕಾರಾತ್ಮಕ ಸಂಬಂಧದಿಂದ ಪ್ರೇರಿತವಾದ ಅಂತಸ್ಸೂಚನೆಯ ಒಂದು ರೂಪವೇ ಎನ್ನುವುದನ್ನು ಯಾರೂ ಹೇಳಲು ಸಾಧ್ಯವಿಲ್ಲ...T.X. ಬಾರ್ಬರ್ ಸಂಮೋಹನದಲ್ಲಿ ಕಾಣಸಿಗುವ "ಸಂಮೋಹನಯ ಕಿವುಡುತನ" ಹಾಗು "ಸಂಮೋಹನಯ ಕುರುಡುತನ," ನೋವಳಿಕೆ ಹಾಗು ಇತರ ಪ್ರತಿಕ್ರಿಯೆಗಳನ್ನು ಒದಗಿಸಿದ್ದಾರೆ-ಇದೆಲ್ಲವನ್ನೂ ಸಂಮೋಹನವನ್ನು ಯಾರ ಮೇಲೂ ನಡೆಸದೆ ಕಂಡು ಬಂದ ಪ್ರತಿಕ್ರಿಯೆ...ಓರ್ನೆಯು ಸಂಮೋಹನಕ್ಕೆ ಒಳಪಡದ ಜನರು ಸಹ ಇದೆ ಸಮನಾಗಿ ಪ್ರಚೋದನೆಗೆ ಒಳಪಡುತ್ತಾರೆ ಹಾಗು ಸಂಮೋಹನದಲ್ಲಿ ಕಾಣಸಿಗುವ ಅತಿಮಾನುಷ ದೈಹಿಕ ಸಾಧನೆಗಳನ್ನು ಮೀರಿಸುತ್ತಾರೆ ಎಂದು ತೋರಿಸಿದ್ದಾರೆ.
ಅಧ್ಯಯನವು ಈ ರೀತಿಯಾದ ನಿರ್ಣಯಕ್ಕೆ ಬರುತ್ತದೆ
ಬೇಹುಗಾರಿಕೆಗೆ ಸಂಮೋಹನದ ಸಮರ್ಥ ಬಳಕೆಯು ಸದಾ ತಿಳಿದಿರುವ ಸಂಗತಿಯಾಗಿದ್ದು,ಸಂಮೋಹನದ ದೀರ್ಘಾವಧಿ ಇತಿಹಾಸದಲ್ಲಿ ಅದನ್ನು ಬೇಹುಗಾರಿಕೆ ಸೇವೆಯಲ್ಲಿ ಪರಿಣಾಮಕಾರಿಯಾಗಿ ಬಳಸಿದ ಬಗ್ಗೆ ವಿಶ್ವಾಸಾರ್ಹ ವಿವರಗಳಿಲ್ಲ ಎನ್ನುವುದು ಬಹುಶಃ ಗಮನಾರ್ಹವಾಗಿದೆ.
ಸಂಮೋಹನವು ಸೇನೆಯ ಉಪಯೋಗಗಳಲ್ಲಿ ಬಳಕೆಯಾಗುವ ಬಗ್ಗೆ ನಡೆಸಿದ ಸಂಶೋಧನೆಯ ಬಗ್ಗೆ MKULTRA ಪ್ರಯೋಗವು ಮತ್ತಷ್ಟು ಪರಿಶೀಲನೆ ನಡೆಸಿತು, ಇದನ್ನು CIA ಸಹ ನಡೆಸಿತು.[೬೧] ಕಾಂಗ್ರೆಸ್ ಸಾಕ್ಷ್ಯದ ಪ್ರಕಾರ,ಮನಸ್ಸಿನ ನಿಯಂತ್ರಣಕ್ಕೆ [೬೨] CIA LSD ಹಾಗು ಸಂಮೋಹನವನ್ನು ಬಳಸಿಕೊಂಡು ಪ್ರಯೋಗವನ್ನು ನಡೆಸಿತು. ಈ ರೀತಿಯಾದ ಹಲವು ಕಾರ್ಯಕ್ರಮಗಳನ್ನು ಸ್ಥಳೀಯವಾಗಿ ನಡೆಸಲಾಯಿತು ಹಾಗು ಅಧ್ಯಯನದ ಉದ್ದೇಶಗಳ ಬಗೆಗಾಗಲಿ ಅಥವಾ ಅವರಿಗೆ ಔಷಧಗಳನ್ನು ನೀಡುವ ಬಗ್ಗೆಯಾಗಲಿ ಅವರಿಗೆ ಭಾಗಿಗಳಾದವರಿಗೆ ತಿಳಿಸಲಾಗಿರಲಿಲ್ಲ.[೬೨] ಇಡಿ ಅಧ್ಯಯನವು ಅದರ ಸಂಭಾವ್ಯ ಕಾರ್ಯಾತ್ಮಕ ಬಳಕೆಯ ಸಾಮರ್ಥ್ಯಗಳನ್ನು ಶೋಧಿಸುತ್ತದೆ.[೬೩]
ಮಾನಸಿಕ ಚಿಕಿತ್ಸೆ
[ಬದಲಾಯಿಸಿ]- ಸಂಮೋಹನದ ಚಿಕಿತ್ಸೆ ಎಂದರೆ ಮಾನಸಿಕ ಚಿಕಿತ್ಸೆಯಲ್ಲಿ ಸಂಮೋಹನದ ಬಳಕೆ.[೬೪] ಇದನ್ನು ಪರವಾನಗಿ ಪಡೆದ ವೈದ್ಯರು, ಮನೋವಿಜ್ಞಾನಿಗಳು, ಹಾಗು ಇತರರು ಪ್ರಯೋಗಿಸುತ್ತಾರೆ. ವೈದ್ಯರು ಹಾಗು ಮನೋವೈದ್ಯರು ಸಂಮೋಹನವನ್ನು ಖಿನ್ನತೆ, ಆತಂಕ, ತಿನ್ನುವ ಅವ್ಯವಸ್ಥೆಗಳು, ನಿದ್ರೆಯ ಅವ್ಯವಸ್ಥೆಗಳು, ಒತ್ತಾಯದ ಜೂಜಾಟ, ಹಾಗು ಅಪಘಾತಾನಂತರದ ಒತ್ತಡಕ್ಕೆ ಚಿಕಿತ್ಸೆ ನೀಡಲು ಬಳಸಿಕೊಳ್ಳಬಹುದಾಗಿದೆ.[೬೫][೬೬]
- ವೈದ್ಯರು ಅಥವಾ ಮನೋವೈದ್ಯರಲ್ಲದ ಪ್ರಮಾಣೀಕೃತ ಸಂಮೋಹನದ ಚಿಕಿತ್ಸಕರು ಸಾಮಾನ್ಯವಾಗಿ ಧೂಮಪಾನ ಬಿಡಿಸಲು ಹಾಗು ತೂಕ ನಿರ್ವಹಣೆಗೆ ಇದನ್ನು ಬಳಸಿಕೊಳ್ಳುತ್ತಾರೆ. (ಯಶಸ್ಸಿನ ಪ್ರಮಾಣವು ಬದಲಾಗುತ್ತದೆ: ಒಂದು ಮೆಟಾ-ಅಧ್ಯಯನವು ನಡೆಸಿದ ಸಂಶೋಧನೆಯಲ್ಲಿ, ಧೂಮಪಾನ ಬಿಡಿಸುವ ವಿಧಾನಕ್ಕೆ, ಸಂಮೋಹನವನ್ನು ಒಂದು ಸಾಧನವಾಗಿ ಬಳಸಿಕೊಂಡಾಗ,ಇತರ ಧೂಮಪಾನ ತ್ಯಜಿಸುವ ವಿಧಾನಗಳ ರೀತಿಯಲ್ಲಿ ಶೇಕಡಾ 20 ರಿಂದ 30ರಷ್ಟು ಪ್ರಮಾಣದಲ್ಲಿ ಯಶಸ್ಸನ್ನು ಕಂಡಿತು,[೬೭] *ಕಳೆದ 2007ರಲ್ಲಿ ರೋಗಿಗಳನ್ನು ಆಧರಿಸಿ ನಡೆಸಿದ ಒಂದು ಅಧ್ಯಯನದಲ್ಲಿ ಹೃದಯ ಸಂಬಂಧಿ ತೊಂದರೆಗಳು ಹಾಗು ಶ್ವಾಸಕೋಶದ ಬೇನೆಯ ಕಾರಣದಿಂದ ಆಸ್ಪತ್ರೆಗೆ ದಾಖಲಾದ ಧೂಮಪಾನಿ ರೋಗಿಗಳಲ್ಲಿ ಧೂಮಪಾನ ತ್ಯಜಿಸುವುದಕ್ಕಾಗಿ ಸಂಮೋಹನಕ್ಕೆ ಒಳಪಟ್ಟವರು ತಮ್ಮ ಯಶಸ್ಸಿನ ಅವಕಾಶವನ್ನು ದುಪ್ಪಟ್ಟುಗೊಳಿಸಿಕೊಂಡರು.[೬೮])ಜುಲೈ 2001ರ ಸೈಂಟಿಫಿಕ್ ಅಮೆರಿಕನ್ ಪತ್ರಿಕೆಯಲ್ಲಿ, "ದಿ ಟ್ರೂತ್ ಅಂಡ್ ದಿ ಹೈಪ್ ಆಫ್ ಹಿಪ್ನೋಸಿಸ್" ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ಲೇಖನದಲ್ಲಿ, ಮೈಕಲ್ ನಾಶ್ ಬರೆಯುತ್ತಾರೆ:
...
ಸಂಮೋಹನದ ಬಳಕೆಯಿಂದ, ವಿಜ್ಞಾನಿಗಳು ತಾತ್ಕಾಲಿಕವಾಗಿ ಭ್ರಮೆಗಳು, ನಿರ್ಬಂಧಗಳನ್ನು, ಮರೆಗುಳಿತನದ ಕೆಲವು ವಿಧಗಳು,ಸುಳ್ಳು ನೆನಪುಗಳುಹಾಗೂ ಭ್ರಾಂತಿಗಳನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಿದ್ದು,ಈ ಸಂಗತಿಗಳನ್ನು ಒಂದು ನಿಯಂತ್ರಿತ ಪರಿಸರದೊಳಗೆ ಅಧ್ಯಯನ ನಡೆಸಬಹುದು.[೪೯]
ಸ್ಮರಣಶಕ್ತಿಗಳು ಮರುಕಳಿಸುವುದಕ್ಕೆ ಬಳಸಲಾಗುವ ಸಂಮೋಹನದ ಚಿಕಿತ್ಸೆಯು ವಿವಾದಗಳಿಂದ ಸುತ್ತುವರೆದಿದೆ. ವಿಶೇಷವಾಗಿ ಇದು ಬಾಲ್ಯದ ಅಥವಾ ಪೂರ್ವ-ಜನ್ಮದ ಸ್ಮರಣಶಕ್ತಿಗೆ ಸಂಬಂಧಿಸಿದೆ. ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ಹಾಗು ದಿ ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಶನ್ಬಾಲ್ಯದ ಮಾನಸಿಕ ಆಘಾತದ ಪ್ರಕರಣಗಳಲ್ಲಿ ನಿಗ್ರಹಿತ ಸ್ಮರಣೆ ಚಿಕಿತ್ಸೆಯ ಬಗ್ಗೆ ಎಚ್ಚರಿಕೆ ನೀಡುವುದರ ಜೊತೆಗೆ "ದೃಢೀಕೃತ ಸಾಕ್ಷ್ಯಗಳಿಲ್ಲದೆ, ಒಂದು ನಿಜವಾದ ಸ್ಮರಣೆ ಮತ್ತು ತಪ್ಪುಸ್ಮರಣೆ ನಡುವೆ ಭೇದ ಕಂಡುಹಿಡಿಯಲು ಅಸಾಧ್ಯ" ಎಂದು ಹೇಳಿತು.[೬೯] ಈ ನಡುವೆ, ಪೂರ್ವ ಜನ್ಮದ ನಿವರ್ತನವನ್ನು ಸಾಮಾನ್ಯವಾಗಿ ಸಂದೇಹದ ದೃಷ್ಟಿಯಿಂದ ನೋಡಲಾಗುತ್ತದೆ.[೭೦]
ಸ್ವ-ಸಂಮೋಹನ
[ಬದಲಾಯಿಸಿ]- ಒಬ್ಬ ವ್ಯಕ್ತಿಯು, ಆತನಾಗಲಿ ಅಥವಾ ಆಕೆಯಾಗಲಿ ತನ್ನನ್ನು ತಾನು ಸಂಮೋಹನಕ್ಕೆ ಒಳಪಡಿಸಿಕೊಂಡಾಗ ಸ್ವ-ಸಂಮೋಹನವು ಉಂಟಾಗುತ್ತದೆ, ಇದು ಸಾಮಾನ್ಯವಾಗಿ ಸ್ವಯಂಅಂತಸ್ಸೂಚನೆಯ ಬಳಕೆಯನ್ನು ಒಳಗೊಂಡಿರುತ್ತದೆ. ಈ ತಂತ್ರವನ್ನು ಸಾಮಾನ್ಯವಾಗಿ ಒಂದು ಪಥ್ಯಕ್ಕೆ ಹೆಚ್ಚಿನ ಉತ್ತೇಜನಕ್ಕಾಗಿ, ಧೂಮಪಾನ ತ್ಯಜಿಸಲು, ಅಥವಾ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಬಳಸಲಾಗುತ್ತದೆ. ಸ್ವ-ಸಂಮೋಹನವನ್ನು ಬಳಕೆ ಮಾಡುವ ಜನರಿಗೆ ಕೆಲವು ಬಾರಿ ನೆರವಿನ ಅಗತ್ಯವಿರುತ್ತದೆ;
- ಕೆಲವರು ಈ ಪ್ರಕ್ರಿಯೆಗೆ ಸಹಕಾರಿಯಾದ ಮೈಂಡ್ ಮೆಷಿನ್ ಎಂಬ ಸಾಧನವನ್ನು ಬಳಸುತ್ತಾರೆ, ಮತ್ತೆ ಕೆಲವರು ಸಂಮೋಹಕ ದಾಖಲೆಗಳನ್ನು ಬಳಸುತ್ತಾರೆ.ಸ್ವ-ಸಂಮೋಹನವು ಸಭಾ ಕಂಪನವನ್ನು ತಡೆಗಟ್ಟುವಲ್ಲಿ, ವಿಶ್ರಾಂತಿಗೆ, ಹಾಗು ದೈಹಿಕವಾಗಿ ಆರೋಗ್ಯವಂತರಾಗಿರಲು ಸಹಕಾರಿಯಾಗಿದೆ ಎಂದು ಸಮರ್ಥಿಸಲಾಗಿದೆ.[೭೧]
ಸಭಾ ಸಂಮೋಹನ
[ಬದಲಾಯಿಸಿ]ಸಭಾ ಸಂಮೋಹನವೆಂಬುದು ಮನೋರಂಜನೆಯ ಒಂದು ರೂಪ, ಇದನ್ನು ಸಾಂಪ್ರದಾಯಿಕವಾಗಿ ಒಂದು ಕ್ಲಬ್ ಅಥವಾ ರಂಗಮಂದಿರದಲ್ಲಿ ಪ್ರೇಕ್ಷಕರೆದುರಲ್ಲಿ ಪ್ರಯೋಗಿಸಲಾಗುತ್ತಿದೆ. ಸಭಾ ಸಂಮೋಹನಕಾರರ ಪ್ರದರ್ಶನಾ ಚಾತುರ್ಯದಿಂದ, ಹಲವರು ಸಂಮೋಹನವೆಂಬುದು ಮನಸ್ಸನ್ನು ನಿಯಂತ್ರಿಸುವ ಒಂದು ವಿಧಾನವೆಂದು ಭಾವಿಸುತ್ತಾರೆ. ಆದಾಗ್ಯೂ, ಸಭಾ ಸಂಮೋಹನದ ಪರಿಣಾಮವು ಬಹುಶಃ ಮಾನಸಿಕ ಅಂಶಗಳ ಸಂಯೋಜನೆಯೆಂದು ಹೇಳಬಹುದಾಗಿದೆ, ಉದಾಹರಣೆಗೆ ಒಂದೇ ಮಟ್ಟದ ಒತ್ತಡ, ಸಾಮಾಜಿಕ ಅನುಸರಣೆ, ಪಾಲ್ಗೊಳ್ಳುವವರ ಆಯ್ಕೆ, ಸೂಚನಾವಶ್ಯತೆ, ದೈಹಿಕ ದುರುಪಯೋಗ, ರಂಗಕೌಶಲ, ಹಾಗು ಕುತಂತ್ರದಿಂದ ಉಂಟಾಗಬಹುದು.[೭೨] ಗಮನ ಸೆಳೆಯುವಂತಹ ಅಪೇಕ್ಷೆ, ತಮ್ಮದೇ ಆದ ಭಯದ ಒತ್ತಡಗಳನ್ನು ಮುರಿಯಲು ಒಂದು ನೆಪ ಹಾಗು ಮೆಚ್ಚಿಸಲು ಇರುವ ಒತ್ತಡಗಳ ಮೂಲಕ ಸಂಮೋಹನಕ್ಕೊಳಪಟ್ಟವರನ್ನು 'ಪಾತ್ರವಹಿಸಲು' ಮನಗಾಣಿಸಲಾಗುತ್ತದೆ.[೭೩][page needed] ಸಭಾ ಸಂಮೋಹನಕಾರರ ಪುಸ್ತಕಗಳು ಕೆಲವೊಂದು ಬಾರಿ ತಮ್ಮ ಪ್ರದರ್ಶನದಲ್ಲಿ ಬಳಕೆಯಾಗುವ ವಂಚನೆ ಬಗ್ಗೆ ಖಚಿತ ವಿವರಣೆಯನ್ನು ನೀಡುತ್ತದೆ, ಉದಾಹರಣೆಗೆ, ಓರ್ಮಂಡ್ ಮ್ಯಾಕ್ಗಿಲ್ ರ ನ್ಯೂ ಎನ್ಸೈಕ್ಲೋಪೀಡಿಯ ಆಫ್ ಸ್ಟೇಜ್ ಹಿಪ್ನೋಸಿಸ್ ನಲ್ಲಿ ಒಂದು ಸಂಪೂರ್ಣ "ಕಪಟ ಸಂಮೋಹನ" ಕೃತ್ಯವು ಪ್ರದರ್ಶನದುದ್ದಕ್ಕೂ ವೈಯಕ್ತಿಕ ಪಿಸುಮಾತುಗಳ ಬಳಕೆಯ ಮೇಲೆ ಅವಲಂಬಿಸಿರುತ್ತದೆ ಎಂದು ವಿವರಿಸಲಾಗಿದೆ.
[ಸಂಮೋಹನಕಾರನು ಮೈಕ್ರೋಫೋನ್-ಇಲ್ಲದೆ ಪಿಸುಗುಡುತ್ತಾನೆ:] "ನಾವು ಪ್ರೇಕ್ಷಕರ ಮೇಲೆ ಕೆಲವು ಕುಚೋದ್ಯವನ್ನು ನಡೆಸಿ ಅವರನ್ನು ಮರುಳು ಮಾಡೋಣ...ಹೀಗಾಗಿ ನಾನು ನಿಮಗೆ ಕೆಲವು ಪರಿಹಾಸ್ಯದ ಕೆಲಸವನ್ನು ಮಾಡಲು ಹೇಳಿದಾಗ, ರಹಸ್ಯವಾಗಿ ನಾನು ಹೇಳಿದಂತೆ ನೀವು ನಿಖರವಾಗಿ ಮಾಡಬೇಕು. ಒಪ್ಪಿಗೆಯೇ? ಸರಿಯೇ.” (ನಂತರ ಒಂದು ಸ್ನೇಹಪೂರ್ವಕ ಶೈಲಿಯಲ್ಲಿ ಉದ್ದೇಶಪೂರ್ವಕವಾಗಿ ಪ್ರೇಕ್ಷಕರೆದುರು ಸಂಜ್ಞೆ ಮಾಡುತ್ತಾನೆ.)[೭೪]
ಸಭಾ ಸಂಮೋಹನವು ಸಾಂಪ್ರದಾಯಿಕವಾಗಿ ಮೂರು ಮೂಲಭೂತ ಕಾರ್ಯತಂತ್ರಗಳನ್ನು ಪ್ರಯೋಗಿಸುತ್ತದೆ:
- ಪಾಲ್ಗೊಳ್ಳುವವನ ಅನುವರ್ತನೆ . ವೇದಿಕೆಯ ಮೇಲೆ ಪಾಲ್ಗೊಳ್ಳುವವರು ಅನುವರ್ತನಾ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಏಕೆಂದರೆ ನಿರೀಕ್ಷಿಸುತ್ತಿರುವ ಪ್ರೇಕ್ಷಕರ ಎದುರು ವೇದಿಕೆಯಲ್ಲಿ ನಿರ್ಮಿಸಿದ ಸಾಮಾಜಿಕ ಒತ್ತಡದ ಅನುಭವಕ್ಕೆ ಅವರು ಒಳಗಾಗಿರುತ್ತಾರೆ.
- ಭಾಗವಹಿಸುವವನ ಆಯ್ಕೆ . ಪೂರ್ವಭಾವಿಯಾದ ಸೂಚನಾ ಪರೀಕ್ಷೆಗಳು, ಉದಾಹರಣೆಗೆ ಪ್ರೇಕ್ಷಕರಿಗೆ ತಮ್ಮ ಕೈಗಳನ್ನು ಹಿಡಿದುಕೊಳ್ಳುವಂತೆ ಹೇಳುವುದು ಹಾಗು ಅವನ್ನು ಬೇರ್ಪಡಿಸಲು ಸಾಧ್ಯವಿಲ್ಲವೆಂದು ಸೂಚಿಸುವುದು ಮುಂತಾದ ಸಾಮಾನ್ಯ ತಂತ್ರಗಳನ್ನು ಬಳಸಿಕೊಂಡು ಹೆಚ್ಚಿನ ಸೂಚ್ಯ ಹಾಗು ಅನುವರ್ತನಾ ಶೀಲ ವ್ಯಕ್ತಿಗಳನ್ನು ಪ್ರೇಕ್ಷಕರಲ್ಲಿ ಆಯ್ಕೆ ಮಾಡಲಾಗುತ್ತದೆ. ಕಾರ್ಯಕರ್ತರನ್ನು ವೇದಿಕೆಯೇರಲು ಹೇಳುವುದರ ಜೊತೆಗೆ, ಪ್ರದರ್ಶಕನು ಪ್ರೇಕ್ಷಕರಲ್ಲಿ ಅತ್ಯಂತ ಬಹಿರ್ಮುಖಿ ಸದಸ್ಯರನ್ನು ಆಯ್ಕೆ ಮಾಡುವ ಒಲವನ್ನು ತೋರುತ್ತಾರೆ.
- ಪ್ರೇಕ್ಷಕರನ್ನು ಮೋಸಗೊಳಿಸುವುದು . ಸಭಾ ಸಂಮೋಹನಕಾರರು ಸಾಂಪ್ರದಾಯಿಕವಾಗಿ, ಆದರೆ ಎಂದಾದರೊಮ್ಮೆ,"ಹಸ್ತಕೌಶಲ" ದ ವಿಧಾನವನ್ನು ಪ್ರಯೋಗಿಸುತ್ತಾರೆ. ಇದು ನಾಟಕೀಯ ಪ್ರಭಾವದಿಂದ ಪ್ರೇಕ್ಷಕರನ್ನು ದಾರಿತಪ್ಪಿಸಲು ಬಳಕೆ ಮಾಡುವ ನೈಪುಣ್ಯತೆ.
ಸಾಂಪ್ರದಾಯಿಕ ಸಭಾ ಸಂಮೋಹನದಲ್ಲಿ ಪ್ರಾಯೋಗಿಸಲಾಗುವ ಮೋಸಗೊಳಿಸುವ ನೈಪುಣ್ಯತೆಯನ್ನು ಈ ಕೆಳಕಂಡಂತೆ ವರ್ಗೀಕರಿಸಬಹುದು:
- ಮೈಕ್ರೋಫೋನ್ ಇಲ್ಲದೆ ಪಿಸುಗುಟ್ಟುವಿಕೆ . ಸಂಮೋಹನಕಾರನು ತನ್ನ ಮೈಕ್ರೋಫೋನ್ ತಗ್ಗಿಸಿ, ವೇದಿಕೆಯ ಮೇಲಿರುವ ಭಾಗಿಗೆ ಗುಪ್ತವಾಗಿ ಸೂಚನೆಗಳನ್ನು ಪಿಸುಗುಡುತ್ತಾನೆ, ಇದು ಪ್ರೇಕ್ಷಕರಿಗೆ ಕೇಳಿಸುವುದಿಲ್ಲ. ಇದು "ಪಾತ್ರವಹಿಸುವಂತೆ" ಅಥವಾ ಕೃತಕ ಸಂಮೋಹಕ ಪ್ರತಿಕ್ರಿಯೆಗಳ ಬೇಡಿಕೆಗಳನ್ನು ಒಳಗೊಂಡಿರುತ್ತದೆ.
- ಸವಾಲು ಹಾಕುವಲ್ಲಿ ವಿಫಲವಾಗುವುದು . ಸಭಾ ಸಂಮೋಹನಕಾರನು ಸೂಚನೆಯನ್ನು ಉಲ್ಲಂಘಿಸಲು ಸಂಮೋಹನಕ್ಕೊಳಪಟ್ಟ ಜನರಿಗೆ ಸವಾಲು ಹಾಕುತ್ತಾನೆ, ಉದಾಹರಣೆಗೆ, "ನೀವು ನಿಮ್ಮ ಕುರ್ಚಿಗಳಿಂದ ಏಳಲು ಸಾಧ್ಯವಿಲ್ಲ ಏಕೆಂದರೆ ನಿಮ್ಮ ಹಿಂಭಾಗವು ಗೋಂದಿನಿಂದ ಅಂಟಿಕೊಂಡಿದೆ." ಆದಾಗ್ಯೂ, ತಮ್ಮ ಪ್ರಯತ್ನವನ್ನು ಆರಂಭಿಸಲಿಕ್ಕೆ ಭಾಗಿಗಳಿಗೆ ಯಾವುದೇ ನಿರ್ದಿಷ್ಟ ನಿರ್ದೇಶನವನ್ನು ನೀಡುವುದಿಲ್ಲ ("ಈಗ ಪ್ರಯತ್ನವನ್ನು ಆರಂಭಿಸಿ
!"). ಇದು ಒಂದು ನಿರ್ದಿಷ್ಟ ಸವಾಲನ್ನು ನೀಡಲಾಗಿದೆಯೆಂಬ ಭ್ರಮೆಯನ್ನು ಉಂಟುಮಾಡುವುದರ ಜೊತೆಗೆ ಅದನ್ನು ಉಲ್ಲಂಘಿಸುವ ಪ್ರಯತ್ನವೂ ನಡೆಯುತ್ತದೆ.
- ಮೋಸದ ಸಂಮೋಹನ ತಂತ್ರಗಳು . ಸಭಾ ಸಂಮೋಹನ ವಿದ್ಯೆಯ ಸಾಹಿತ್ಯವು ಹಸ್ತಕೌಶಲಗಳಂತಹ ಒಂದು ದೊಡ್ಡ ತಂತ್ರವನ್ನು ಒಳಗೊಂಡಿದೆ. ಈ ವಿಧಾನಗಳನ್ನು ವೃತ್ತಿಪರ ಗಾರುಡಿಗರು ಬಳಕೆ ಮಾಡುತ್ತಾರೆ. ಇದರಲ್ಲಿ ಯಾವುದೇ ತಂತ್ರಕ್ಕೆ ಯಾವುದೇ ರೀತಿಯ ಸಂಮೋಹನ ಅಥವಾ ಸೂಚನೆಯ ಅಗತ್ಯವಿರುವುದಿಲ್ಲ. ಇದು ದೈಹಿಕ ದುರ್ಬಳಕೆ ಹಾಗು ಪ್ರೇಕ್ಷಕರನ್ನು ಮೊಸಗೊಳಿಸುವುದರ ಮೇಲೆ ಅವಲಂಬಿಸಿದೆ. ಈ ವಿಧಾನದ ಅತ್ಯಂತ ಪ್ರಸಿದ್ಧ ಉದಾಹರಣೆಯೆಂದರೆ "ಮಾನವ ಹಲಗೆ" ಕೌಶಲ. ಇದು ಸಂಮೋಹನಕ್ಕೆ ಒಳಪಟ್ಟ ದೇಹವು ಗಡುಸಾಗುತ್ತದೆ (ಅಪಸ್ಮಾರ) ಹಾಗು ಅವರನ್ನು ಎರಡು ಕುರ್ಚಿಗಳ ನಡುವೆ ಅಡ್ಡಡ್ಡಲಾಗಿ ತೂಗು ಹಾಕಲಾಗುತ್ತದೆ. ಈ ಹಂತದಲ್ಲಿ ಸಂಮೋಹನಕಾರನು ನಾಟಕೀಯ ಪ್ರಭಾವವನ್ನು ಬೀರಲು ಸಾಮಾನ್ಯವಾಗಿ ಅವರ ಎದೆಯ ಮೇಲೆ ನಿಲ್ಲುತ್ತಾನೆ. ಇದು ಯಾವುದೇ ರೀತಿಯಲ್ಲಿ ಸಂಮೋಹನದ ಜೊತೆ ಸಂಬಂಧಿಸಿಲ್ಲ, ಆದರೆ ಸಂಮೋಹನಕ್ಕೊಳಪಟ್ಟ ವ್ಯಕ್ತಿಗಳನ್ನು ಸರಿಯಾದ ಸ್ಥಾನದಲ್ಲಿರಿಸಿದರೆ ಅವರು ಪ್ರೇಕ್ಷಕರು ಭಾವಿಸಿದ್ದಕ್ಕಿಂತ ಹೆಚ್ಚಿನ ತೂಕವನ್ನು ತಡೆಯುತ್ತಾರೆ ಎಂಬ ಸತ್ಯವನ್ನು ಅವಲಂಬಿಸಿದೆ.
ಇತರ ಉಪಯೋಗಗಳು
[ಬದಲಾಯಿಸಿ]- ಸಂಮೋಹನ ವಿದ್ಯೆಯನ್ನು ವಿಧಿವಿಜ್ಞಾನಶಾಸ್ತ್ರದಲ್ಲಿ, ಕ್ರೀಡೆಯಲ್ಲಿ, ಶಿಕ್ಷಣದಲ್ಲಿ, ದೈಹಿಕ ಚಿಕಿತ್ಸೆ ಹಾಗು ಆರೋಗ್ಯದ ಪುನರ್ಸ್ಥಾಪನೆಯಲ್ಲೂ ಸಹ ಬಳಸಲಾಗುತ್ತದೆ.[೭೫] ಸಂಮೊಹನವನ್ನು ಸೃಜನಾತ್ಮಕ ಉದ್ದೇಶಗಳಿಗಾಗಿ ಕಲಾವಿದರು ಸಹ ಬಳಸಿಕೊಳ್ಳುತ್ತಾರೆ.
- ಇದರಲ್ಲಿ ಗಮನಾರ್ಹವಾದವರೆಂದರೆ ಆಂಡ್ರೆ ಬ್ರೆಟನ್ ನ ಅತಿ ವಾಸ್ತವಿಕತಾ ವಾದಿ ವೃತ್ತ. ಇವರು ಸೃಜನಾತ್ಮಕ ಉದ್ದೇಶಗಳಿಗಾಗಿ ಸಂಮೋಹನವನ್ನು ಸ್ವಯಂಚಾಲಿತ ಬರವಣಿಗೆ ಹಾಗು ರೇಖಾ ಚಿತ್ರಗಳಲ್ಲಿ ಬಳಸಿಕೊಂಡರು. ಸಂಮೋಹಕ ವಿಧಾನಗಳನ್ನು ಔಷಧದ ಸ್ಥಿತಿಗಳ ಮರು ಅನುಭವವನ್ನು ಪಡೆಯಲು,[೭೬] ಹಾಗು ಅತೀಂದ್ರಿಯ ಅನುಭವಗಳನ್ನು ವ್ಯಕ್ತಪಡಿಸಲು ಬಳಸಿಕೊಳ್ಳಲಾಗುತ್ತದೆ.[೭೭][೭೮]
ಕೆಲವು ಜನರು ಸಂಮೋಹನದ ಕೆಲವು ಅಂಶಗಳು ಹಾಗೂ ಸಮೂಹ ಸನ್ನಿ,ಧಾರ್ಮಿಕ ಉನ್ಮಾದ ಮತ್ತು ಅನಕ್ಷರ ಬುಡಕಟ್ಟು ಸಂಸ್ಕೃತಿಗಳಲ್ಲಿ ಮತಕ್ರಿಯಾ ವಿಧಿಗಳ ವಶೀಕರಣದ ನಡುವೆ ಸಾಮ್ಯತೆಯನ್ನು ಗುರುತಿಸಿದ್ದಾರೆ.[೭೯][page needed] ಟೈಗರ್ ವುಡ್ಸ್ ನಂತಹ ಹಲವು ಜನಪ್ರಿಯ ಕ್ರೀಡಾ ವ್ಯಕ್ತಿಗಳು ತಮ್ಮ ಸ್ಪರ್ಧೆಗಳಲ್ಲಿ ಮೇಲುಗೈ ಪಡೆಯಲು ಸಂಮೋಹನವನ್ನು ಬಳಸಿಕೊಂಡಿದ್ದಾರೆ. ಇದನ್ನು ಒಬ್ಬ ಕ್ರೀಡಾಪಟುವಿನ ಬದಲಾದ ಪ್ರಜ್ಞಾಪೂರ್ವಕ ಸ್ಥಿತಿಯನ್ನು ತಲುಪುವುದರ ಮೂಲಕ ಸಾಧಿಸಲಾಗುತ್ತದೆ ಜೊತೆಗೆ ಒಂದು ವಿಭಿನ್ನ ಮಾದರಿಯಲ್ಲಿ ಪ್ರಕ್ರಿಯಾ ಮಾಹಿತಿಯನ್ನು ಸಂಯೋಜಿಸಲಾಗುತ್ತದೆ.[೮೦]
ಸ್ಥಿರ ಮನಸ್ಥಿತಿ ಹಾಗು ಅಸ್ಥಿರ ಮನಸ್ಥಿತಿಯ ಚರ್ಚೆ
[ಬದಲಾಯಿಸಿ]- ಕೇಂದ್ರೀಕೃತ ಸೈದ್ಧಾಂತಿಕ ಭಿನ್ನತೆಯನ್ನು "ಸ್ಥಿರ ಮನಸ್ಥಿತಿ ಹಾಗು ಅಸ್ಥಿರ ಮನಸ್ಥಿತಿಯ" ಚರ್ಚೆ ಎಂದು ಕರೆಯಲಾಗಿದೆ. ಬ್ರೈಡ್ ಸಂಮೋಹನ ಶಾಸ್ತ್ರದ ಕಲ್ಪನೆಯನ್ನು ಪರಿಚಯಿಸಿದಾಗ ಆತ ಅದನ್ನು "ಸ್ಥಿರ ಮನಸ್ಥಿತಿ" ಯ ಸ್ವಭಾವಕ್ಕೆ ಇಬ್ಬಂದಿಯಾಗಿ ಮಾತನಾಡುತ್ತಾರೆ. ಕೆಲವೊಂದು ಬಾರಿ ಇದೊಂದು ನಿರ್ದಿಷ್ಟವಾದ ನಿದ್ರಾವಸ್ಥೆ- ಪ್ರಾಣಿಯ ಶಿಶಿರಸುಪ್ತಿ ಅಥವಾ ಯೋಗಿಯ ಧ್ಯಾನಕ್ಕೆ ಹೋಲಿಸಬಹುದಾದ ನಿದ್ರೆಯ ರೀತಿಯಲ್ಲಿರುವ ನರವೈಜ್ಞಾನಿಕ ಸ್ಥಿತಿ ಎಂದು ಕರೆದರೆ, ಮತ್ತೆ ಕೆಲವು ಬಾರಿ ಸಂಮೋಹನ ಶಾಸ್ತ್ರವು ಹಲವಾರು ವಿಭಿನ್ನ ಹಂತಗಳು ಅಥವಾ ಸ್ಥಿತಿಗಳಿಂದ ಸುತ್ತುಗಟ್ಟಿದ್ದು ಇದು ಸಾಮಾನ್ಯವಾದ ಮಾನಸಿಕ ಹಾಗು ಶಾರೀರಿಕ ಪ್ರಕ್ರಿಯೆಯ ಒಂದು ವಿಸ್ತರಣೆ ಎಂದು ಸ್ಪಷ್ಟಪಡಿಸುತ್ತಾರೆ.
- ಒಟ್ಟಾರೆಯಾಗಿ, ಬ್ರೈಡ್ ಸಂಮೋಹನದ ಗ್ರಹಿಕೆಯಲ್ಲಿ ಒಂದು ಹೆಚ್ಚಿನ "ವಿಶೇಷ ಸ್ಥಿತಿ" ಯಿಂದ ಒಂದು ತೀವ್ರ ಜಟಿಲ "ಅಸ್ಥಿರ ಮನಸ್ಥಿತಿಯ" ದೃಷ್ಟಿಕೋನದೆಡೆಗೆ ಹೊರಳಿರುವಂತೆ ಕಂಡು ಬರುತ್ತದೆ. ಸ್ಥಿರ ಮನಸ್ಥಿತಿಯ ಸಿದ್ಧಾಂತಿಗಳು ಸಂಮೋಹನದ ಪರಿಣಾಮಗಳನ್ನು ಮುಖ್ಯವಾಗಿ ಒಂದು ನಿರ್ದಿಷ್ಟ, ಅಸಾಧಾರಣ ಹಾಗು ಏಕರೂಪದ ಮಾನಸಿಕ ಅಥವಾ ಶಾರೀರಿಕ ಸ್ಥಿತಿಯ ವಿವರಣೆಯಿಂದ ಉಂಟಾಗಿದೆ ಎಂದು ವ್ಯಾಖ್ಯಾನಿಸುತ್ತಾರೆ. ಇದನ್ನು ಸಾಮಾನ್ಯವಾಗಿ "ಸಂಮೋಹಕ ಸ್ಥಿತಿ" ಅಥವಾ ಒಂದು "ಜಾಗ್ರತಾವಸ್ಥೆಯ ಬದಲಾದ ಸ್ಥಿತಿ" ಎಂದು ಸೂಚಿಸಲಾಗಿದೆ.
- ಅಸ್ಥಿರ ಮನಸ್ಥಿತಿಯ ಸಿದ್ಧಾಂತಿಗಳು ಸಂಮೋಹಕ ಸ್ಥಿತಿಯ ಕಲ್ಪನೆಯನ್ನು ತಿರಸ್ಕರಿಸುತ್ತಾರೆ ಹಾಗು ಸಂಮೋಹನದ ಪರಿಣಾಮಗಳನ್ನು ಬಹುಕಾರ್ಯ-ನಿರ್ದಿಷ್ಟ ಅಂಶಗಳ ಸಂಯೋಗವೆಂದು ವ್ಯಾಖಾನಿಸುತ್ತಾರೆ-ಸಾಧಾರಣ ಅರಿವಿನ, ವರ್ತನೆಯ ಹಾಗು ಸಾಮಾಜಿಕ ಮನಸ್ಥಿತಿಯಿಂದ ಜನ್ಯವಾದ ನಿರ್ದಿಷ್ಟ ಅಂಶಗಳಾದ ಸಾಮಾಜಿಕ ಪಾತ್ರದ-ಗ್ರಹಿಕೆ ಹಾಗು ಅನುಕೂಲಕರ ಉತ್ತೇಜನ (ಸರ್ಬಿನ್), ಸಕ್ರಿಯ ಕಲ್ಪನಾ ಶಕ್ತಿ ಹಾಗು ಸಕಾರಾತ್ಮಕ ಅರಿವಿನ ಗುಂಪು (ಬಾರ್ಬರ್), ಪ್ರತಿಮನೋವೃತ್ತಿಯ ನಿರೀಕ್ಷೆ (ಕಿರ್ಸ್ಚ್), ಕಾರ್ಯ-ನಿರ್ದಿಷ್ಟ ವೈಯಕ್ತಿಕ ಕಾರ್ಯ ವಿಧಾನಗಳು (ಸ್ಪಾನೋಸ್) ಇದಕ್ಕೆ ಕಾರಣವೆನ್ನುತ್ತಾರೆ. ವ್ಯಕ್ತಿತ್ವ ಮನೋವಿಜ್ಞಾನಿ ರಾಬರ್ಟ್ ವೈಟ್ ಮೊದಲ ಬಾರಿಗೆ ಸಂಮೋಹನದ ಅಸ್ಥಿರ ಮನಸ್ಥಿತಿಯ ವ್ಯಾಖ್ಯಾನಗಳನ್ನು 1941ರ ಲೇಖನದಲ್ಲಿ ಒದಗಿಸಿದ್ದಾರೆಂದು ಹೇಳಲಾಗುತ್ತದೆ:
ಸಂಮೋಹಕ ಸ್ವಭಾವವು ಅರ್ಥಪೂರ್ಣವಾಗಿದೆ, ಗುರಿಯೆಡೆಗೆ ಶ್ರಮಿಸುತ್ತಿದೆ, ಅದರ ಅತ್ಯಂತ ಸಾಮಾನ್ಯ ಗುರಿಯೆಂದರೆ ಸಂಮೋಹನಕೊಳ್ಳಪಟ್ಟ ವ್ಯಕ್ತಿಯಂತೆ ವರ್ತಿಸುವುದು, ಏಕೆಂದರೆ ಇದನ್ನು ನಿಯಂತ್ರಕನು ಸತತವಾಗಿ ನಿರೂಪಿಸುತ್ತಾನೆ ಹಾಗು ಗ್ರಾಹಕನು ಇದನ್ನು ಅರ್ಥೈಸಿಕೊಳ್ಳುತ್ತಾನೆ.[೮೧]
ಸರಳವಾಗಿ ಹೇಳುವುದಾದರೆ, ಹಿಂದಿನ "ವಿಶೇಷ ಸ್ಥಿತಿ" ಯ ವ್ಯಾಖ್ಯಾನವು ಸಂಮೋಹನ ಹಾಗು ಸಾಧಾರಣ ಮಾನಸಿಕ ಪ್ರಕ್ರಿಯೆಯ ನಡುವಿನ ವ್ಯತ್ಯಾಸವನ್ನು ಎತ್ತಿ ಹಿಡಿದರೆ, "ಅಸ್ಥಿರ ಮನಸ್ಥಿತಿಯ" ವ್ಯಾಖ್ಯಾನವು ಅದರ ಸಾಮ್ಯತೆಯನ್ನು ಎತ್ತಿ ಹಿಡಿಯುತ್ತದೆ.ಸಂಮೋಹನಕ್ಕೆ ಒಳಪಟ್ಟ ಹಾಗು ಒಳಪಡದ ವ್ಯಕ್ತಿಗಳ ನಡುವಿನ ಹೋಲಿಕೆಯು, "ಸಂಮೋಹಕ ಸ್ಥಿತಿಯು" ಅಸ್ತಿತ್ವದಲ್ಲಿದ್ದರೆ, ಇದು ಸಂಮೋಹಕ ಅಂತಸ್ಸೂಚನೆಗೆ ಕಾರಣವಾದ ಒಂದು ಸಣ್ಣ ಮಟ್ಟದ ಪರಿಣಾಮಗಳನ್ನು ಉಂಟುಮಾಡುತ್ತದೆ, ಇದರಲ್ಲಿ ಹಲವನ್ನು ಯಾವುದೇ ಸಂಮೋಹಕ ದೃಷ್ಟಾಂತವಿಲ್ಲದೆ ಪುನರಾವರ್ತಿಸಬಹುದಾಗಿದೆ.
ಅತಿಯಾದ ಸೂಚನಾವಶ್ಯತೆ
[ಬದಲಾಯಿಸಿ]ನಂತರದ ಬರವಣಿಗೆಗಳಲ್ಲಿ, ಬ್ರೈಡ್‌ರ ಸಿದ್ಧಾಂತವನ್ನು ಅನುಸರಿಸಿರಬಹುದು, ಸಂಮೋಹನವು ಒಂದು ದೊಡ್ಡ ಮಟ್ಟದಲ್ಲಿ ನಿರೀಕ್ಷೆಯಿಂದ ಹಾಗು ಕೇಂದ್ರೀಕೃತ ಗಮನದಿಂದ ಉಂಟಾದ ಒಂದು ಅತಿಯಾದ ಸೂಚನಾವಶ್ಯತೆಯ ಸ್ಥಿತಿ. ನಿರ್ದಿಷ್ಟವಾಗಿ ಹೇಳಬಹುದಾದರೆ, ಹಿಪ್ಪೋಲೈಟ್ ಬರ್ನ್ಹೆಯಿಮ್ ಸಂಮೋಹನದ "ಅಂತಸ್ಸೂಚನಾ ಸಿದ್ಧಾಂತ"ದ ಪ್ರಮುಖ ಪ್ರತಿಪಾದಕರಾಗಿದ್ದಾರೆ. ಅವರು ಒಂದು ಹಂತದಲ್ಲಿ ಯಾವುದೇ ಸಂಮೋಹಕ ಸ್ಥಿತಿಯು ಇಲ್ಲ, ಕೇವಲ ಅತಿಯಾದ ಸೂಚನಾವಶ್ಯತೆಯಿಂದ ಎಂದು ಘೋಷಿಸಿದ್ದರು. ಒಂದು ಸಾಧಾರಣವಾದ ಬಹುಮತಾಭಿಪ್ರಾಯವೆಂದರೆ ಅತಿಯಾದ ಸೂಚನಾವಶ್ಯತೆಯು ಸಂಮೋಹನದ ಒಂದು ಅವಶ್ಯಕ ಲಕ್ಷಣ.
ಸಂಮೋಹನದ ವಿಧಾನಕ್ಕೆ ಒಳಪಟ್ಟ ನಂತರ ಆ ವ್ಯಕ್ತಿಯು ಯಾವುದೇ ಅಂತಸ್ಸೂಚನೆಗಳಿಗೆ ಒಳಗಾಗುವುದರಲ್ಲಿ ನೈಜ ಹೆಚ್ಚಳವಿಲ್ಲದಿದ್ದರೆ, ಅಂತಹ ವ್ಯಕ್ತಿಯನ್ನು ಸಂಮೋಹನಕ್ಕೆ ಒಳಪಟ್ಟಿರುವನೆಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ರೆಪ್ಪೆಯನ್ನು ಮುಚ್ಚುವುದು ಹಾಗೂ ಹಾಗು ಇತರ ಬಾಹ್ಯ ನಿದ್ರಾ ವರ್ತನೆಯ ಸೂಚನೆಗಳಿಗೆ ಹೇಗೆ ಸಂಪೂರ್ಣವಾಗಿ ಹಾಗು ಕೂಡಲೇ ಪ್ರತಿಕ್ರಯಿಸುತ್ತಾನೆಂಬುದು ಗಣನೆಗೆ ಬರುವುದಿಲ್ಲ.[೮೨]
ನಿಯಮಾಧೀನ ಪ್ರತಿರೋಧ
[ಬದಲಾಯಿಸಿ]ಇವಾನ್ ಪಾವ್ಲೋವ್ ಸಂಮೋಹಕ ಸೂಚನೆಯು ಮಾನವರಲ್ಲಿ ಒಂದು ನಿಯಮಾಧೀನ ಅನುವರ್ತನ ಪ್ರತಿಕ್ರಿಯೆಯ ಉತ್ತಮ ಉದಾಹರಣೆ ಎಂದು ಹೇಳುತ್ತಾರೆ. ಉದಾಹರಣೆಗೆ ಅಂತಸ್ಸೂಚನೆಗಳಿಗೆ ದೊರೆತ ಪ್ರತಿಕ್ರಿಯೆಗಳು ಪದಗಳ ಬಳಕೆಯಿಂದ ಹುಟ್ಟಿದ ಕಲಿತ ಸಂಬಂಧಗಳು. ಪಾವ್ಲೋವ್ ಸ್ವತಃ ಬರೆದಂತೆ:
ಮಾತುಗಾರಿಕೆ, ಮನುಷ್ಯನ ಮುಂಚಿನ ಸಂಪೂರ್ಣ ಜೀವನವನ್ನು ಗಣನೆಗೆ ತೆಗೆದುಕೊಂಡರೆ, ಅದು ಎಲ್ಲ ಆಂತರಿಕ ಹಾಗು ಬಾಹ್ಯ ಪ್ರಚೋದಕದ ಜೊತೆ ಸಂಪರ್ಕ ಹೊಂದಿ ಇದು ಕಾರ್ಟೆಕ್ಸ್ (ಮಿದುಳಿನ ಬೂದು ದ್ರವ್ಯದ ಹೊರಪದರ)ಗೆ ತಲುಪುತ್ತದೆ. ಎಲ್ಲವುದರ ಬಗ್ಗೆ ಸಂಕೇತ ನೀಡುವುದರ ಜೊತೆಗೆ ಎಲ್ಲವನ್ನು ಬದಲಾಗಿ ತರುತ್ತದೆ.ಸಾಮಾನ್ಯವಾಗಿ ನೈಜ ಪ್ರಚೋದಕಗಳು ತಾವೇ ನಿರ್ಣಯಿಸುವ ಜೀವಿಯ ಆ ಎಲ್ಲ ಪ್ರತಿಕ್ರಿಯೆಗಳು ಹೊರಬರುವಂತೆ ಮಾಡುತ್ತದೆ. ಈ ರೀತಿಯಾಗಿ ನಾವು, 'ಅಂತಸ್ಸೂಚನೆ'ಯನ್ನು ಮನುಷ್ಯನಲ್ಲಿರುವ ಒಂದು ವಿಶಿಷ್ಟವಾದ ಅನುವರ್ತನದ ಒಂದು ಅತ್ಯಂತ ಸರಳ ರೂಪವೆಂದು ಪರಿಗಣಿಸುತ್ತೇವೆ.[೮೩]
ಅವರು ಸಂಮೋಹನವೆಂದರೆ ಒಂದು "ಆಂಶಿಕ ನಿದ್ರಾವಸ್ಥೆ" ಎಂದು ಭಾವಿಸಿದ್ದರು, ಎಂದರೆ ಕಾರ್ಟೆಕ್ಸ್ ಕಾರ್ಯನಿರ್ವಹಣೆಯ ಸಾಮಾನ್ಯ ನಿಗ್ರಹ. ಇದನ್ನು ಮಿದುಳಿನ ಎಲ್ಲ ಭಾಗಗಳಿಗೂ ಪಸರಿಸುವಂತೆ ಉತ್ತೇಜಿಸಬಹುದು. ಅವರು ಗಮನಿಸಿದಂತೆ ಸಂಮೋಹನದ ವಿವಿಧ ಹಂತಗಳು ಶಾರೀರಿಕವಾಗಿ ಜಾಗೃತ ಸ್ಥಿತಿಯಿಂದ ಗಮನಾರ್ಹವಾದ ವ್ಯತ್ಯಾಸವನ್ನು ಹೊಂದಿಲ್ಲ. ಜೊತೆಗೆ ಸಂಮೋಹನವು ಪರಿಸರದ ಪ್ರಚೋದನೆಯಿಂದ ಉಂಟಾದ ಗಮನಾರ್ಹವಲ್ಲದ ಬದಲಾವಣೆಗಳನ್ನು ಅವಲಂಬಿಸಿದೆ ಎಂದು ಅವರು ಅಭಿಪ್ರಾಯಪಟ್ಟರು. ಪಾವ್ಲೋವ್, ಸಂಮೋಹಕ ಅನುವರ್ತನ ಕ್ರಿಯೆಯು ಮಿದುಳಿನ ಕೆಳಗಿನ ಕಾಂಡದ ರಚನೆಯನ್ನು ಒಳಗೊಂಡಿದೆ ಎಂದು ಸೂಚಿಸುತ್ತಾರೆ.[೮೪][೮೫] ಪಾವ್ಲೋವ್ ರ ಕಲ್ಪನೆಗಳು ಅವರ ವಿರೋಧಿ ಬೆಖ್ತೆರೆವ್ ಜೊತೆ ಕೂಡಿಕೊಂಡು ಸೋವಿಯತ್ ಒಕ್ಕೂಟದಲ್ಲಿ ಸಮ್ಮೋಹಕ ಮಾನಸಿಕಚಿಕಿತ್ಸೆಗೆ ಆಧಾರವಾಯಿತು. ಇದನ್ನು ಅವರ ಅನುಯಾಯಿ K.I. ಪ್ಲೇಟೋನೊವ್ ತಮ್ಮ ಬರವಣಿಗೆಯ ಮೂಲಕ ದಾಖಲಿಸಿದ್ದಾರೆ. ಸೋವಿಯತ್‌ನ ಸಂಮೋಹಕ ಸಿದ್ದಾಂತಗಳು ತರುವಾಯ ಪಾಶ್ಚಾತ್ಯ ನಡವಳಿಕೆಯನ್ನು ಆಧರಿಸಿದ ಸಂಮೋಹಕ ಚಿಕಿತ್ಸಕರಾದ ಆಂಡ್ರೂ ಸಾಲ್ಟರ್ ಮುಂತಾದವರ ಬರವಣಿಗೆಗಳ ಮೇಲೆ ಪ್ರಭಾವ ಬೀರಿದೆ. ಆದಾಗ್ಯೂ, ನಿಯಮಾಧೀನ ಕಾರ್ಟೆಕ್ಸ್ ನಿಗ್ರಹದ ಒಂದು ನಿರ್ದಿಷ್ಟ ಸ್ಥಿತಿಯ ಈ ಸಿದ್ಧಾಂತವು ಹೆಚ್ಚಿನ ಬೆಂಬಲವನ್ನು ಗಳಿಸಿಲ್ಲ.
ನ್ಯೂರೋಸೈಕಾಲಜಿ
[ಬದಲಾಯಿಸಿ]ನರವೈಜ್ಞಾನಿಕ ಚಿತ್ರ ತಂತ್ರಗಳು ಒಂದು "ಸಮ್ಮೋಹಕ ಸ್ಥಿತಿ"ಯ ಜೊತೆಗೆ ಸಮೀಕರಿಸಬಹುದಾದ ನರವೈಜ್ಞಾನಿಕ ಮಾದರಿಯ ಯಾವುದೇ ಸಾಕ್ಷ್ಯವನ್ನು ಒದಗಿಸುವುದಿಲ್ಲ. ಸಂಮೋಹನಕ್ಕೆ ಒಳಪಟ್ಟ ವ್ಯಕ್ತಿಗಳಲ್ಲಿ ಹೆಚ್ಚಿನ ಸಂವೇದನೆ ತೋರಿದವರ ಮಿದುಳಿನ ಕಾರ್ಯ ಚಟುವಟಿಕೆಯಲ್ಲಿ ಬದಲಾವಣೆಯನ್ನು ಕೆಲವು ಅಧ್ಯಯನಗಳು ಪತ್ತೆ ಮಾಡಿವೆ. ಈ ಬದಲಾವಣೆಗಳು ನೀಡಲಾದ ಅಂತಸ್ಸೂಚನೆ ಮಾದರಿಗಳ ಮೇಲೆ ಅವಲಂಬಿಸಿದೆ.[೮೬][೮೭] ಆದಾಗ್ಯೂ, ಇದರಿಂದ ಸೂಚಿತವಾಗುವ ಪರಿಣಾಮವು ಅಸ್ಪಷ್ಟವಾಗಿದೆ. ಇವು, ಸೂಚನೆಗಳು ಅರಿವಿನಲ್ಲಿ ಅಥವಾ ಅನುಭವದಲ್ಲಿ ಬದಲಾವಣೆಯನ್ನು ನೈಜವಾಗಿ ಉಂಟುಮಾಡುತ್ತದೆ ಎಂಬುದನ್ನು ಸೂಚಿಸಬಹುದು. ಇದು ಕೇವಲ ಮಾನಸಿಕ ಕಲ್ಪನೆಯಿಂದ ಉಂಟಾದುದಲ್ಲ. ಆದಾಗ್ಯೂ, ಸಂಮೋಹನಕ್ಕೊಳಪಡದ ಒಂದು ಸಾಮಾನ್ಯ ಪರಿಸ್ಥಿತಿಯಲ್ಲಿ, ಚಲನೆಯ ಪತ್ತೆಗೆ ಸಂಬಂಧಿಸಿರುವ ಮಿದುಳಿನ ಭಾಗಗಳು, ಚಲನೆಯನ್ನು ನೋಡಿದಾಗ ಹಾಗು ಚಲನೆಯನ್ನು ಕಲ್ಪಿಸಿಕೊಂಡಾಗ ಎರಡೂ ರೀತಿಯಲ್ಲಿ ಸಕ್ರಿಯಗೊಳ್ಳುತ್ತದೆ. ಇದು ವ್ಯಕ್ತಿಗಳ ಅರಿವು ಅಥವಾ ಅನುಭವ ಎರಡರಲ್ಲೂ ಯಾವುದೇ ಬದಲಾವಣೆಯನ್ನು ತರುವುದಿಲ್ಲ.[೮೮] ಆದ್ದರಿಂದ ಇದು ಅತಿಯಾದ ಸೂಚನಾವಶ್ಯತೆಗೆ ಗುರಿಯಾದ ಸಂಮೋಹನಕ್ಕೊಳಪಟ್ಟ ವ್ಯಕ್ತಿಗಳು ಕಲ್ಪನೆಯಲ್ಲಿ ಬಳಸಿಕೊಳ್ಳುವ ಮಿದುಳಿನ ಭಾಗಗಳನ್ನು ದೊಡ್ಡ ಪ್ರಮಾಣದಲ್ಲಿ ಯಾವುದೇ ನೈಜ ಪ್ರತ್ಯಕ್ಷ ಅನುಭವದ ಬದಲಾವಣೆಗಳಿಲ್ಲದೇ ಸುಲಭವಾಗಿ ಕ್ರಿಯಾಶೀಲಗೊಳಿಸುತ್ತಾರೆಂದು ಸೂಚಿಸುತ್ತದೆ.ಮತ್ತೊಂದು ಅಧ್ಯಯನವು ನೀಡಿದ ವಿವರಣೆಯಲ್ಲಿ ಸಂಮೋಹಿತ ವ್ಯಕ್ತಿಗಳಿಗೆ ನೀಡಲಾದ ಬಣ್ಣದ ಭ್ರಾಂತಿಯ ಅಂತಸ್ಸೂಚನೆಯಿಂದ ಆಕ್ಸಿಪಿಟಲ್(ಹಿಂದಲೆಯ) ಕಾರ್ಟೆಕ್ಸ್(ಮಿದುಳಿನ ಬೂದು ದ್ರವ್ಯದ ಹೊರಪದರ) ನ ಬಣ್ಣ-ಸಂಸ್ಕರಣೆ ಭಾಗಗಳು ಸಕ್ರಿಯಗೊಳ್ಳುತ್ತವೆ.[೮೯] ಕಳೆದ 2004ರಲ್ಲಿ ಈ ವಿಷಯದ ಮೇಲೆ ಈಗ ಪ್ರಯೋಗಶಾಲೆಯು ನಡೆಸಿದ ಸಂಶೋಧನೆಯ ವಿಮರ್ಶೆಯು ಈ ರೀತಿಯಾದ ನಿರ್ಣಯಕ್ಕೆ ಬರುತ್ತದೆ:
ಸಂಮೋಹನವು ಒಂದು ಏಕಮಾನದ ಸ್ಥಿತಿಯಲ್ಲ, ಹೀಗಾಗಿ ಇದು EEG ಕಾರ್ಯಚಟುವಟಿಕೆಯ ವಿವಿಧ ಮಾದರಿಗಳನ್ನು ಅದು ಅನುಭವಿಸಿದ ಪ್ರಯೋಗಗಳನ್ನು ಆಧರಿಸಿ ಪ್ರದರ್ಶಿಸುತ್ತದೆ. ಈ ವಿದ್ಯೆಯ ಬಗ್ಗೆ ನಮ್ಮ ನಿರ್ಧಾರವೆಂದರೆ, ಪ್ರಯೋಗದ ಪ್ರದರ್ಶನ ಅಥವಾ ಕೇಂದ್ರೀಕರಿಸುವ ಸಂಮೋಹನದ ಅವಧಿಯಲ್ಲಿ ಹೆಚ್ಚುವರಿ ತೀಟವನ್ನು(theta) ಗಮನಿಸಲಾಗುತ್ತದೆ, ಆದರೆ ತೀವ್ರತರವಾಗಿ ಸಂಮೋಹನಕ್ಕೆ ಒಳಪಟ್ಟ ವ್ಯಕ್ತಿಗಳು ನಿಷ್ಕ್ರಿಯವಾಗಿ ವಿರಮಿಸಿದಾಗ, ಸ್ವಲ್ಪಮಟ್ಟಿನ ನಿದ್ರಾವಸ್ಥೆಯಲ್ಲಿದ್ದಾಗ ಹಾಗು/ಅಥವಾ ತಮ್ಮ ಲಕ್ಷ್ಯದಲ್ಲಿ ಹೆಚ್ಚು ಚದರಿಹೋದಾಗ ಇದು ಸಾಧ್ಯವಿಲ್ಲ.[೯೦]
ಸಂಮೋಹನದ ಪ್ರವೇಶ ಘಟ್ಟವು ಇಚ್ಛೆ ಹಾಗು ಸಂಘರ್ಷದ ಪ್ರಕ್ರಿಯೆಯನ್ನು ನಿಯಂತ್ರಿಸುವ ಮಿದುಳಿನ ಭಾಗದ ಚಟುವಟಿಕೆಗೆ ಹಾನಿಯುಂಟುಮಾಡಬಹುದು. ಅನ್ನಾ ಗೋಸ್ಲೈನ್ ಪ್ರತಿಪಾದಿಸುವಂತೆ:
- "ಗ್ರುಜೆಲಿಯೇರ್ ಹಾಗು ಅವರ ಸಹೋದ್ಯೋಗಿಗಳು ಮಿದುಳಿನ ಚಟುವಟಿಕೆಯನ್ನು ಒಂದು fMRI ಬಳಸಿಕೊಂಡು ಅಧ್ಯಯನ ನಡೆಸಿದರು, ಈ ನಡುವೆ ಸಂಮೋಹನಕ್ಕೊಳಪಟ್ಟವರು ಸ್ಟ್ರೂಪ್ ಟಾಸ್ಕ್ ಹೆಸರಿನ ಒಂದು ಸಾಮಾನ್ಯ ಮಟ್ಟದ ಅರಿವಿನ ಅಭ್ಯಾಸವನ್ನು ಪೂರ್ಣಗೊಳಿಸಿದರು.
- ತಂಡವು ಅಧ್ಯಯನಕ್ಕೆ ಮುಂಚೆ ಸಂಮೊಹನಕ್ಕೊಳಪಡುವವರನ್ನು ತಪಾಸಣೆ ಮಾಡುವುದರ ಜೊತೆಗೆ ಸಂಮೋಹನಕ್ಕೆ ಪ್ರಭಾವಕ್ಕೆ ಸುಲಭವಾಗಿ ಒಳಪಡುವ 12 ಮಂದಿಯನ್ನು ಹಾಗು ಕಡಿಮೆ ಪ್ರಭಾವಕ್ಕೆ ಒಳಪಡುವ 12 ಮಂದಿಯನ್ನು ಆಯ್ಕೆ ಮಾಡಿದರು. ಇವರೆಲ್ಲರೂ ತಮ್ಮ ಕೆಲಸವನ್ನು ಸಾಧಾರಣ ಪರಿಸ್ಥಿತಿಯಲ್ಲಿ fMRIನಲ್ಲಿ ಪೂರ್ಣಗೊಳಿಸುವುದರ ಜೊತೆಗೆ ಸಂಮೊಹನಕ್ಕೊಳಪಡುವ ಮೂಲಕ ಪೂರ್ಣಗೊಳಿಸಿದರು.
- ಅಧ್ಯಯನದುದ್ದಕ್ಕೂ, ಎರಡೂ ಗುಂಪುಗಳು ತಮ್ಮ ಕಾರ್ಯದ ಫಲಿತಾಂಶಗಳಲ್ಲಿ ಸ್ಥಿರವಾಗಿದ್ದವು, ಜೊತೆಗೆ ತಮ್ಮ ಮಾನಸಿಕ ಸ್ಥಿತಿಯನ್ನು ಲೆಕ್ಕಿಸದೆ ಸಮಾನ ಅಂಶಗಳನ್ನು ಸಾಧಿಸಿದರು. ತಮ್ಮ ಮೊದಲ ಕಾರ್ಯದ ಅವಧಿಯಲ್ಲಿ, ಸಂಮೋಹನಕ್ಕೊಳಪಡುವ ಮುಂಚೆ, ಎರಡೂ ಗುಂಪುಗಳಲ್ಲಿನ ವ್ಯಕ್ತಿಗಳ ಮಿದುಳಿನ ಚಟುವಟಿಕೆಯಲ್ಲಿ ಯಾವುದೇ ಮಹತ್ವದ ವ್ಯತ್ಯಾಸವಿರಲಿಲ್ಲ.
- ಸಂಮೋಹನದ ಸ್ಥಿತಿಯಲ್ಲಿ, ಗ್ರುಜೆಲಿಯೆರ್ ಸಂಮೋಹನದ ಹೆಚ್ಚಿನ ಪ್ರಭಾವಕ್ಕೆ ಒಳಪಟ್ಟ ವ್ಯಕ್ತಿಗಳು ಆಂಟಿರಿಯರ್ ಸಿಂಗುಲೇಟ್ ಗೈರಸ್ನಲ್ಲಿ ಹೆಚ್ಚಿನ ಮಿದುಳಿನ ಚಟುವಟಿಕೆಗಳನ್ನು ತೋರಿಸಿದರು. ಇದು ದುರ್ಬಲ ಸಂಮೋಹಿತ ವ್ಯಕ್ತಿಗಳಿಗಿಂತ ಹೆಚ್ಚಾಗಿತ್ತು. ಮಿದುಳಿನ ಈ ಭಾಗವು ದೋಷಕ್ಕೆ ಪ್ರತಿಕ್ರಿಯೆಯನ್ನು ಪ್ರದರ್ಶಿಸುವುದರ ಜೊತೆಗೆ ಭಾವನಾತ್ಮಕ ಪರಿಣಾಮಗಳನ್ನು ಅಳೆಯುತ್ತವೆ.
- ಸಂಮೋಹನದ ಹೆಚ್ಚಿನ ಪ್ರಭಾವಕ್ಕೆ ಒಳಪಟ್ಟ ಗುಂಪು ಪ್ರಿ-ಫ್ರನ್ಟಲ್ ಕಾರ್ಟೆಕ್ಸ್ ನ ಎಡ ಭಾಗದಲ್ಲಿ ಮಿದುಳಿನ ಹೆಚ್ಚಿನ ಚಟುವಟಿಕೆಯನ್ನು ಪ್ರದರ್ಶಿಸಿತು, ಇದು ಸಂಮೋಹನದ ಪ್ರಭಾವಕ್ಕೆ ದುರ್ಬಲವಾಗಿ ಒಳಪಟ್ಟ ತಂಡದಲ್ಲಿ ಕಂಡುಬರಲಿಲ್ಲ. ಈ ಭಾಗವು ಹೆಚ್ಚಿನ ಮಟ್ಟದ ಅರಿವಿನ ಪ್ರಕ್ರಿಯೆ ಹಾಗು ನಡವಳಿಕೆಯನ್ನು ಒಳಗೊಂಡಿದೆ."[೯೧][೯೨]
ವಿಭಜನೆ
[ಬದಲಾಯಿಸಿ]- ಪಿಯೆರ್ರೆ ಜಾನೆಟ್ ಮೂಲವಾಗಿ ಅರಿವಿನ ವಿಭಜನೆಯ ಕಲ್ಪನೆಯನ್ನು ಚಿತ್ತೊನ್ಮಾದಗ್ರಸ್ತ ರೋಗಿಗಳ ಮೇಲೆ ತಾವು ನಡೆಸಿದ ಅಧ್ಯಯನವನ್ನು ಆಧರಿಸಿ ಅಭಿವೃದ್ಧಿಪಡಿಸಿದರು. ಅವರು ಸಂಮೋಹನವನ್ನು ವಿಭಜನೆಯ ಒಂದು ಉದಾಹರಣೆಯೆಂದು ಪರಿಗಣಿಸುತ್ತಾರೆ, ಈ ಮೂಲಕ ಮನುಷ್ಯನ ನಡವಳಿಕೆಯ ನಿಯಂತ್ರಣದ ಭಾಗವು ಸಾಮಾನ್ಯ ಅರಿವಿನಿಂದ ಬೇರ್ಪಡುತ್ತದೆ.
- ಸಂಮೋಹನವು ಸ್ವಲ್ಪಮಟ್ಟಿಗೆ ಪ್ರಜ್ಞಾಪೂರ್ವಕ ಮನಸ್ಸಿನಿಂದ ನಿಯಂತ್ರಣವನ್ನು ತೆಗೆದು ಹಾಕಬಹುದು ಹಾಗು ವ್ಯಕ್ತಿಯು ಸ್ವನಿಯಂತ್ರಿತ, ಅನುವರ್ತಕ ನಡವಳಿಕೆಯಿಂದ ಪ್ರತಿಕ್ರಿಯೆ ತೋರಬಹುದು. ವೆಯಿಟ್ಜೆನ್ಹೊಫ್ಫಾರ್ ಸಂಮೋಹನವನ್ನು ಈ ಸಿದ್ಧಾಂತದ ಮೂಲಕ ಈ ರೀತಿ ವಿವರಿಸುತ್ತಾರೆ "ಬಹುತೇಕ ಸಂವೇದನ ವ್ಯವಸ್ಥೆಯಿಂದ ಅರಿವಿನ ವಿಭಜನೆ ಹಾಗು ತೀವ್ರವಾದ ನರವ್ಯೂಹದ ಘಟನೆಗಳೂ ಸಹ ಜರುಗುತ್ತವೆ."[೯೩]
ನೀಓಡಿಸ್ಸೋಸಿಯೇಶನ್
[ಬದಲಾಯಿಸಿ]- ಸಂಮೋಹನ ಶಾಸ್ತ್ರದ "ನೀಓಡಿಸ್ಸೋಸಿಯೇಶನ್" ಸಿದ್ಧಾಂತವನ್ನು ಅಭಿವೃದ್ಧಿ ಪಡಿಸಿದ ಅರ್ನೆಸ್ಟ್ ಹಿಲ್ಗಾರ್ಡ್, ಸಂಮೋಹನವು ಅದಕ್ಕೆ ಒಳಪಟ್ಟ ವ್ಯಕ್ತಿಗಳಿಗೆ ತಮ್ಮ ಅರಿವನ್ನು ಸ್ವಯಂಪ್ರೇರಣೆಯಿಂದ ವಿಭಜಿಸಲು ಕಾರಣವಾಗುತ್ತದೆ ಎಂದು ಊಹೆ ಮಾಡಿದ್ದಾರೆ. ಒಂದು ಭಾಗವು ಸಂಮೋಹನಕಾರನಿಗೆ ಪ್ರತಿಕ್ರಯಿಸಿದರೆ ಇತರ ಭಾಗಗಳು ನಿಜಸ್ಥಿತಿಯ ಅರಿವನ್ನು ಉಳಿಸಿಕೊಳ್ಳುತ್ತವೆ. ಹಿಲ್ಗಾರ್ಡ್ ಸಂಮೋಹನಕ್ಕೊಳಪಟ್ಟವರನ್ನು ಹೆಪ್ಪುಗಟ್ಟಿದ ನೀರಿನಲ್ಲಿ ಸ್ನಾನ ಮಾಡುವಂತೆ ಹೇಳಿದರು.
- ಅವರು ನೀರು ತಣ್ಣಗಿರುವ ಬಗ್ಗೆಯಾಗಲಿ ಅಥವಾ ನೋವಿನ ಅನುಭವದ ಬಗ್ಗೆಯಾಗಲಿ ಹೇಳಲಿಲ್ಲ. ಹಿಲ್ಗಾರ್ಡ್ ಸಂಮೋಹನಕ್ಕೊಳಪಟ್ಟವರಿಗೆ ನೋವಿನ ಅನುಭವವಿದ್ದವರು ತಮ್ಮ ತೋರುಬೆರಳನ್ನು ಎತ್ತಲು ಹೇಳಿದರು ಹಾಗು 70%ನಷ್ಟು ವ್ಯಕ್ತಿಗಳು ತಮ್ಮ ತೋರು ಬೆರಳನ್ನು ಎತ್ತಿದರು. ಸಂಮೋಹನಕ್ಕೊಳಪಟ್ಟವರು ಅಂತಸ್ಸೂಚನೆ ಸಂಮೋಹನಕಾರನ ಸೂಚನೆಗಳನ್ನು ಆಲಿಸುತ್ತಿದ್ದರೂ ಸಹ ನೀರಿನ ತಾಪಮಾನವನ್ನು ಗ್ರಹಿಸಿದರು.[೯೪]
ಮನಸ್ಸಿನ ವಿಭಜನೆ
[ಬದಲಾಯಿಸಿ]ಈ ಆಶ್ಚರ್ಯಕರ ಸರಳ ಸಿದ್ಧಾಂತವನ್ನು Y.D. ಸಾಯ್ 1995ರಲ್ಲಿ[೯೫]
- ತಮ್ಮ ಸ್ವಪ್ನಾವಸ್ಥೆಯ ಮನೋದೈಹಿಕ ಸಿದ್ಧಾಂತದ ಭಾಗವಾಗಿ ಮಂಡಿಸಿದರು. ಪ್ರತಿಯೊಂದು ಮಿದುಳಿನ ಒಳಗೂ, "I"(ನಾನು) ಎಂಬ ಒಂದು ಕಾರ್ಯಕ್ರಮವಿದೆ(ಸ್ವಅರಿವು) ಇದು ಪ್ರಜ್ಞಾಪೂರ್ವಕ ಮಿದುಳಿನ ಸುತ್ತಲೂ ಹಂಚಿ ಹೋಗಿರುವುದರ ಜೊತೆಗೆ ಮಾನಸಿಕ ಚಟುವಟಿಕೆ ಯನ್ನು ಸಂಘಟಿಸುತ್ತದೆ (ಕಾರ್ಟಿಸಸ್), ಉದಾಹರಣೆಗೆ ಯೋಚನಾಲಹರಿ, ಕಲ್ಪನೆ, ಅರಿವು, ಚಲನೆ, ತರ್ಕ...ಮುಂತಾದವು.""I" (ನಾನು) ನೆನಪಿನ ಸಂಗ್ರಹಣೆಯ ಮೇಲ್ವಿಚಾರಣೆ ಸಹ ನಡೆಸುತ್ತದೆ.
- ಅರಿವಿನ ಹಲವು ವಿಲಕ್ಷಣ ಸ್ಥಿತಿಗಳು ವಾಸ್ತವವಾಗಿ "I"(ನಾನು) ಎಂಬುದರಿಂದ ಉಂಟಾದ ಕೆಲವು ಮಾನಸಿಕ ಕ್ರಿಯೆಯ ವಿಭಜನೆಯ ಪರಿಣಾಮಗಳಾಗಿವೆ. ಒಬ್ಬ ವ್ಯಕ್ತಿಯು ಸಂಮೋಹನಕ್ಕೊಳಪಟ್ಟಿದ್ದರೆ, ಆಕೆಯ/ಆತನ ಕಲ್ಪನೆಯು ವಿಭಜನೆಗೊಂಡಿರುತ್ತದೆ ಹಾಗು ಕಲ್ಪನೆ ಮಾಡಿಕೊಂಡ ಸಂಗತಿಯನ್ನು ಸಂವೇದನೆಗಳ ಕಾರ್ಟೆಕ್ಸ್‌ಗೆ ಹಿಂದಿರುಗಿಸುತ್ತದೆ, ಇದರ ಪರಿಣಾಮವಾಗಿ ಸ್ವಪ್ನಗಳು ಅಥವಾ ಭ್ರಮೆಗಳು ಉಂಟಾಗುತ್ತದೆ; ಅಥವಾ ಕೆಲವು ಸಂವೇದನೆಗಳು ವಿಭಜನೆಗೊಂಡಿದ್ದರೆ ಅದು ಸಂಮೋಹಕ ಅರಿವಳಿಕೆಯನ್ನು ಉಂಟುಮಾಡುತ್ತದೆ.
- ಚಲನಾ ಕ್ರಿಯೆಯು ವಿಭಜನೆಗೊಂಡರೆ ನಿಶ್ಚಲತೆಯು ಉಂಟಾಗುತ್ತದೆ; ಅಥವಾ ವಿವೇಚನೆ ವಿಭಜನೆಗೊಂಡರೆ ಆತ/ಆಕೆ ಸಂಮೋಹನಕಾರನ ಆದೇಶವನ್ನು ಪಾಲಿಸುತ್ತಾರೆ; ಅಥವಾ ಚಿಂತನೆಯು ವಿಭಜನೆಯಾಗಿ, ವಿವೇಚನೆಯಿಂದ ನಿಯಂತ್ರಿಸದಿದ್ದರೆ, ಆತನ/ಆಕೆಯ ದೇಹವು ಎರಡು ಕುರ್ಚಿಗಳ ನಡುವೆ ನೇರವಾಗಿ ಚಾಚಿಕೊಳ್ಳಲು ಪ್ರಯತ್ನಿಸುತ್ತದೆ. ಸಂಮೋಹನದ ದೀರ್ಘಾವಧಿಯ ನಂತರವೂ ಸಹ ಒಂದು ಆದೇಶದಂತೆ ಈ ರೀತಿಯಾಗಿ ನಡೆದುಕೊಳ್ಳಬಹುದು: ವ್ಯಕ್ತಿಯು ಸಾಧಾರಣ ಸ್ಥಿತಿಯಲ್ಲಿ ವಿವೇಚನೆಯ ಆದೇಶವನ್ನು ಪಾಲಿಸುತ್ತಾನೆ.
- ಆದರೆ ಸಂಮೋಹನಕ್ಕೊಳಪಟ್ಟ ನಂತರ, ವಿವೇಚನೆಯು ಸಂಮೊಹನಕಾರನ ಆದೇಶದ ಮೇಲೆ ತೀರ್ಮಾನಗಳು ಅಥವಾ ನಂಬಿಕೆಗಳಿಂದ ಬದಲಾಗುತ್ತದೆ, ಹಾಗು ಆತ/ಆಕೆ ನಿರ್ಧರಿಸಿದಂತೆ ಕೆಲಸಗಳನ್ನು ಮಾಡದಿದ್ದಲ್ಲಿ ಅಥವಾ ಆತ/ಆಕೆಯ ನಂಬಿಕೆಯು ವಿರುದ್ಧವಾಗಿದ್ದಲ್ಲಿ ತುಂಬಾ ಮುಜುಗರಕ್ಕೆ ಈಡಾಗುತ್ತದೆ. ಸಂಮೋಹನದ ಚಿಕಿತ್ಸೆಯು ಈ ತತ್ತ್ವದ ಮೇಲೆ ಆಧರಿಸಿದೆ.
ಸಾಮಾಜಿಕ ಪಾತ್ರ-ನಿರ್ವಹಣೆಯ ಸಿದ್ಧಾಂತ
[ಬದಲಾಯಿಸಿ]- ಸಂಮೋಹನ ಶಾಸ್ತ್ರದ ಅತ್ಯಂತ ಪ್ರಭಾವಿ ಪಾತ್ರ-ನಿರ್ವಹಣಾ ಸಿದ್ಧಾಂತವನ್ನು ಪ್ರಾರಂಭಿಸಿದ ಪ್ರಮುಖ ತಾತ್ತ್ವಿಕ ಸಿದ್ಧಾಂತಿಯೆಂದರೆ ಥಿಯೋಡೋರ್ ಸರ್ಬಿನ್. ಸರ್ಬಿನ್ ಸಂಮೋಹಕ ಪ್ರತಿಕ್ರಿಯೆಗಳೆಂದರೆ ಸಂಮೋಹನಕ್ಕೆ ಒಳಪಟ್ಟವರು ಸಾಮಾಜಿಕವಾಗಿ-ರಚನೆಗೊಂಡ ಪಾತ್ರಗಳನ್ನು ಪೂರೈಸಲು ಮಾಡುವ ಉತ್ತೇಜಿತ ಪ್ರಯತ್ನಗಳೆಂದು ವಾದಿಸಿದ್ದಾರೆ. ಇದು ಸಂಮೋಹನಕ್ಕೊಳಪಟ್ಟವರು ಸುಮ್ಮನೆ "ನಟಿಸುತ್ತಿದ್ದಾರೆಂಬ" ತಪ್ಪು ಕಲ್ಪನೆಗೆ ದಾರಿ ಮಾಡಿಕೊಟ್ಟಿದೆ. ಆದಾಗ್ಯೂ, ಸರ್ಬಿನ್ ನಟನೆಯಲ್ಲಿರುವ ವ್ಯತ್ಯಾಸದ ಬಗ್ಗೆ ಒತ್ತಿ ಹೇಳುತ್ತಾರೆ.
- ಇದರಲ್ಲಿ ಪ್ರಶ್ನೆಯಲ್ಲಿರುವ ಪಾತ್ರದ ಜೊತೆಗೆ ಸ್ವಲ್ಪ ಮಟ್ಟಿಗಿನ ವೈಯಕ್ತಿಕ ಗುರುತು ಇರುತ್ತದೆ, ಹಾಗು ಪಾತ್ರ-ನಿರ್ವಹಣೆಯಲ್ಲಿ ವ್ಯಕ್ತಿಯು ಪಾತ್ರಕ್ಕೆ ಅನುಗುಣವಾಗಿ ಬಾಹ್ಯವಾಗಿ ಮಾತ್ರವಲ್ಲದೆ ವೈಯುಕ್ತಿಕವಾಗಿ ಸಹ ಸ್ವಲ್ಪ ಮಟ್ಟದಲ್ಲಿ ಪಾತ್ರದ ಜೊತೆಗೆ ತನ್ನನ್ನು ತಾನು ಗುರುತಿಸಿ ಕೊಳ್ಳು ತ್ತಾನೆ, ನಟನೆ, ಯೋಚನಾಲಹರಿ, ಹಾಗು ಭಾವನೆಗಳು ಸಂಮೋಹನಕ್ಕೊಳಪಟ್ಟಂತೆ ಇರುತ್ತದೆ.
- ಸರ್ಬಿನ್ ಸಂಮೋಹನದಲ್ಲಿ ಪಾತ್ರ ನಿರ್ವಹಣೆಯ ಬಗ್ಗೆ ಹಾಗು ಇತರ ಕ್ಷೇತ್ರಗಳಲ್ಲಿನ ಪಾತ್ರ ನಿರ್ವಹಣೆಯ ಬಗ್ಗೆ ಉದಾಹರಣೆಗೆ ನಟನೆ, ಮಾನಸಿಕ ಅಸ್ವಸ್ಥತೆ, ಹಾಗು ಶಮನಿಕ್ ಸ್ವಾಧೀನ ಮುಂತಾದವುಗಳ ನಡುವೆ ಸಾಮ್ಯತೆಯನ್ನು ಗುರುತಿಸುತ್ತಾರೆ. ಸಂಮೋಹನದ ಈ ವ್ಯಾಖ್ಯಾನವು ವಿಶೇಷವಾಗಿ ಸಭಾ ಸಂಮೋಹನವನ್ನು ಅರ್ಥ ಮಾಡಿಕೊಳ್ಳಲು ಪ್ರಸ್ತುತವಾಗಿದೆ. ಸಭಾ ಸಂಮೋಹನದಲ್ಲಿ ಸಾಮಾಜಿಕವಾಗಿ-ರಚನೆಯಾದ ಪಾತ್ರವನ್ನು ಅನುಸರಿಸಿ, ವೇದಿಕೆಯ ಮೇಲೆ ಅದರ ಪ್ರಕಾರವಾಗಿ ಪ್ರದರ್ಶನ ನೀಡುವ ತೀವ್ರವಾದ ಒತ್ತಡವಿರುತ್ತದೆ.
- ಈ ಪ್ರಕಾರವಾಗಿ, ಸಂಮೋಹನದ ಸಾಮಾಜಿಕ ರಾಚನಿಕ ವಾದ ಹಾಗು ಪಾತ್ರ-ನಿರ್ವಹಣೆಯ ಸಿದ್ಧಾಂತ ವು, ವ್ಯಕ್ತಿಗಳು ಒಂದು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ (ಕೇವಲಅಭಿನಯ ಎಂಬುದಕ್ಕೆ ವ್ಯತಿರಿಕ್ತವಾಗಿ) ಹಾಗು ವಾಸ್ತವಾಗಿ ಸಂಮೋಹಕ ಸ್ಥಿತಿಯೆಂಬ ಯಾವುದೇ ಸಂಗತಿಯು ಇಲ್ಲವೆಂದು ಸೂಚಿಸುತ್ತದೆ.
- "ಸಂಮೋಹನಕಾರ" ಹಾಗು ಸಂಮೋಹನಕ್ಕೆ ಒಳಪಟ್ಟ ವ್ಯಕ್ತಿಯ ನಡುವೆ ಯಾವ ಮಟ್ಟದ ಸೌಹಾರ್ದದ ಸಂಬಂಧವು ಸ್ಥಾಪಿತವಾಗಿದೆ ಎಂಬುದನ್ನು ಅವಲಂಬಿಸಿ ಒಂದು ಸಾಮಾಜಿಕವಾಗಿ-ರಚನೆಯಾದ ಸಂಬಂಧವು ನಿರ್ಮಾಣವಾಗುತ್ತದೆ (ನೋಡಿ ಹತಾರ್ನ್ ಪರಿಣಾಮ, ಪಿಗ್ಮೇಲಿಯನ್ ಪರಿಣಾಮ, ಹಾಗು ಪ್ಲಾಸೆಬೋ ಪರಿಣಾಮ). ಮಾನಸಿಕ ತಜ್ಞರಾದ ರಾಬರ್ಟ್ ಬೇಕರ್ ಹಾಗು ಗ್ರಹಾಮ್ ವಾಗ್ಸ್ಟಾಫ್, ಸಂಮೋಹನವು ವಾಸ್ತವವಾಗಿ ಸುಶಿಕ್ಷಿತ ಸಾಮಾಜಿಕ ನಡವಳಿಕೆಯ ಒಂದು ರೂಪ, ಸಾಮಾಜಿಕ ಅನುಸರಣೆ, ವಿರಾಮ, ಹಾಗು ಸೂಚನಾವಶ್ಯತೆಯ ಜಟಿಲ ಹೈಬ್ರಿಡ್,ಇದು ಅನೇಕ ನಿಗೂಢ ವರ್ತನೆ ಪ್ರಕಟಿಸಲು ಕಾರಣವಾಗುತ್ತದೆ.[೯೬]
ಅರಿವಿನ-ನಡವಳಿಕೆಯ ಸಿದ್ಧಾಂತ
[ಬದಲಾಯಿಸಿ]- ಬಾರ್ಬರ್, ಸ್ಪಾನೋಸ್, & ಚಾವೆಸ್ (1974) ಅಸ್ಥಿರ ಮನಸ್ಥಿತಿಯ "ಅರಿವಿನ-ನಡವಳಿಕೆಯ" ಸಂಮೋಹನ ಸಿದ್ಧಾಂತವನ್ನು ಕೆಲವೊಂದು ಅಂಶಗಳಲ್ಲಿ ಸರ್ಬಿನ್‌ರ ಸಾಮಾಜಿಕ ಪಾತ್ರ-ನಿರ್ವಹಣಾ ಸಿದ್ಧಾಂತಕ್ಕೆ ಸಾಮ್ಯತೆಯನ್ನು ಹೊಂದಿದ ಹಾಗು ಬಾರ್ಬರ್‌ದ ಮುಂಚಿನ ಸಂಶೋಧನೆಯ ಮೇಲೆ ರಚನೆಯೊಂದಿಗೆ ಪ್ರಸ್ತಾಪಿಸಿದರು. ಈ ಮಾದರಿಯಲ್ಲಿ, ಸಂಮೋಹನವನ್ನು ಸಾಧಾರಣ ಮಾನಸಿಕ ಪ್ರಕ್ರಿಯೆಗಳಾದ ಕಲ್ಪನೆ, ವಿರಾಮ, ನಿರೀಕ್ಷಣೆ, ಸಾಮಾಜಿಕ ಕೋರಿಕೆ, ಮುಂತಾದವುಗಳ ವಿಸ್ತರಣೆ ಎಂದು ವಿವರಿಸಲಾಗಿದೆ.
- ನಿರ್ದಿಷ್ಟವಾಗಿ ಹೇಳಬಹುದಾದರೆ, ಬಾರ್ಬರ್ ಸಂಮೋಹಕ ಅಂತಸ್ಸೂಚನೆಗಳನ್ನು ಒಂದು "ಸಕಾರಾತ್ಮಕ ಅರಿವಿನ ಗುಂಪಿನ" ಸಾಧನವಾಗಿದೆ ಎಂದು ವಾದಿಸುತ್ತಾರೆ. ಇದು ಸಕಾರಾತ್ಮಕ ನಿರೀಕ್ಷೆಗಳು, ವರ್ತನೆಗಳು ಹಾಗು ಪ್ರೇರಣೆಗಳನ್ನು ಒಳಗೊಂಡಿದೆ. ಡೇನಿಯಲ್ ಆರಾಒಜ್ ನಂತರ ಪ್ರಥಮಾಕ್ಷರಿ "TEAM"ನ್ನು ಸೃಷ್ಟಿಸಿದ್ದಾರೆ. "ನಂಬಿಕೆ", "ನಿರೀಕ್ಷೆ", "ವರ್ತನೆ", ಹಾಗು "ಪ್ರೇರಣೆ"ಗೆ ಸಂಬಂಧಿಸಿದಂತೆ ಸಂಮೋಹನಕ್ಕೆ ವ್ಯಕ್ತಿಯ ದೃಷ್ಟಿಕೋನವನ್ನು ಸಂಕೇತಿಸುತ್ತದೆ.
- ಬಾರ್ಬರ್ ಮತ್ತಿತರರು, ಸಂಮೋಹನಕ್ಕೆ ಹಾಗು ಅರಿವಿನ-ನಡವಳಿಕೆಯ ಚಿಕಿತ್ಸೆ (CBT) ಎರಡರ ಪ್ರತಿಕ್ರಿಯೆಯಲ್ಲೂ ಸಾಧಕವಾಗುವ ಸಾಮ್ಯ ಅಂಶಗಳನ್ನು ಗಮನಿಸುತ್ತಾರೆ, ನಿರ್ದಿಷ್ಟವಾಗಿ ಹೇಳಬಹುದಾದರೆ ವ್ಯವಸ್ಥಿತ ವಿಸಂವೇದನೆ. ಈ ರೀತಿಯಾಗಿ, ಅದರ ವ್ಯಾಖ್ಯಾನದಿಂದ ಉತ್ತೇಜಿತಗೊಂಡ ಸಂಶೋಧನೆ ಹಾಗು ಪ್ರಾಯೋಗಿಕ ಬಳಕೆಯು ಸಂಮೋಹನದ ಚಿಕಿತ್ಸೆ ಹಾಗು CBT ನಡುವಿನ ಸಂಬಂಧಕ್ಕೆ ಅಧಿಕವಾದ ಆಸಕ್ತಿಯನ್ನು ಉಂಟುಮಾಡಿತು.
ಮಾಹಿತಿ ಸಿದ್ಧಾಂತ
[ಬದಲಾಯಿಸಿ]- ಮಾಹಿತಿ ಸಿದ್ಧಾಂತ ದ ಮೇಲೆ ಸಡಿಲವಾಗಿ ಆಧರಿಸಿರುವ ಒಂದು ವಿಧಾನವು ಮಿದುಳನ್ನು ಕಂಪ್ಯೂಟರ್ ಮಾದರಿಯಾಗಿ ಬಳಸುತ್ತದೆ. ಹೊಂದಿಕೊಳ್ಳಬಲ್ಲ ವ್ಯವಸ್ಥೆಗಳಲ್ಲಿ, ಫೀಡ್‌ಬ್ಯಾಕ್ ಸಂಕೇತದಿಂದ-ಶಬ್ದದ ಅನುಪಾತವನ್ನು ಹೆಚ್ಚಿಸುತ್ತದೆ, ಇದು ಒಂದು ಸ್ಥಿರ ಸ್ಥಿತಿಯೆಡೆಗೆ ಅಭಿವಹಿಸುತ್ತದೆ. ಸಂಕೇತದಿಂದ ಶಬ್ದದ ಅನುಪಾತದ ಅಧಿಕತೆಯು ಸಂದೇಶಗಳನ್ನು ಸ್ಪಷ್ಟವಾಗಿ ಸ್ವೀಕರಿಸಲು ಸಾಧ್ಯಗೊಳಿಸುತ್ತದೆ. ಸಂಮೊಹನಕಾರನ ಉದ್ದೇಶವು ಮದ್ಯಪ್ರವೇಶವನ್ನು ತಗ್ಗಿಸಲು ತಂತ್ರಗಳನ್ನು ಬಳಸುವುದಾಗಿದೆ.
- ಜೊತೆಗೆ ನಿರ್ದಿಷ್ಟ ಸಂದೇಶಗಳ ಸ್ವೀಕೃತಿಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ (ಸೂಚನೆಗಳು).[೯೭]
ವ್ಯವಸ್ಥೆಗಳ ಸಿದ್ಧಾಂತ
[ಬದಲಾಯಿಸಿ]ಈ ಸಂದರ್ಭದಲ್ಲಿ, ವ್ಯವಸ್ಥೆಗಳ ಸಿದ್ಧಾಂತ ವನ್ನು, ಬ್ರೈಡ್‌ರ ಮೂಲ ಸಂಮೋಹನ ಕಲ್ಪನೆಯ ರೂಪದ ಒಂದು ವಿಸ್ತರಣೆ ಎಂದು ಪರಿಗಣಿಸಬಹುದಾಗಿದೆ [೯೮] ಇದು ನರಮಂಡಲದ ಕಾರ್ಯ ಚಟುವಟಿಕೆಯನ್ನು ವರ್ಧಿಸುವ ಅಥವಾ ತಗ್ಗಿಸುವ ಪ್ರಕ್ರಿಯೆಯನ್ನು ಒಳಗೊಂಡಿದೆ. ವ್ಯವಸ್ಥೆಗಳ ಸಿದ್ಧಾಂತವು ನರಮಂಡಲ ವ್ಯವಸ್ಥೆಯ ಸಂಘಟನೆಯು ಉಪವ್ಯವಸ್ಥೆ ಗಳ ಮೇಲೆ ಪರಸ್ಪರ ಪ್ರಭಾವ ಬೀರುತ್ತದೆ ಎಂದು ಪರಿಗಣಿಸಲಾಗಿದೆ. ಈ ರೀತಿಯಾಗಿ ಸಂಮೋಹಕ ವಿದ್ಯಮಾನವು ನಿರ್ದಿಷ್ಟ ಉಪವ್ಯವಸ್ಥೆಗಳ ಕೇವಲ ವರ್ಧಿಸಿದ ಅಥವಾ ತಗ್ಗಿದ ಚಟುವಟಿಕೆಯನ್ನಷ್ಟೇ ಅಲ್ಲ, ಅದರ ಪರಸ್ಪರ ಪ್ರಭಾವವನ್ನು ಸಹ ಒಳಗೊಂಡಿದೆ. ಈ ನಿಟ್ಟಿನ ಒಂದು ಪ್ರಮುಖ ವಿದ್ಯಮಾನವೆಂದರೆ ಪ್ರತ್ಯಾದಾನದ ಕುಣಿಕೆಗಳು, ಇದು ಸಂಮೋಹಕ ವಿದ್ಯಮಾನವನ್ನು ಸೃಷ್ಟಿಸುವ ಒಂದು ವಿಧಾನವನ್ನು ಸೂಚಿಸುತ್ತದೆ.[೯೯][೧೦೦]
ಇವನ್ನೂ ಗಮನಿಸಿ
[ಬದಲಾಯಿಸಿ]ಐತಿಹಾಸಿಕ ವ್ಯಕ್ತಿಗಳು
[ಬದಲಾಯಿಸಿ]ಆಧುನಿಕ ಸಂಶೋಧಕರು
[ಬದಲಾಯಿಸಿ]ಸಂಬಂಧಿತ ಅಧ್ಯಯನಗಳು
[ಬದಲಾಯಿಸಿ]- ಕೋಳಿಮರಿ ಸಂಮೋಹನ
- ಗುಪ್ತ ಸಂಮೋಹನ
- ಹೈವೇ ಸಂಮೋಹನ
- ಸಂಮೋಹನದ ಇತಿಹಾಸ
- ಹಿಪ್ನಗೋಗಿಯ
- ಹಿಪ್ನೋಫೆಟಿಶಿಸಂ
- ಜನಪ್ರಿಯ ಸಂಸ್ಕೃತಿಯಲ್ಲಿ ಸಂಮೋಹನ
- ಹಿಪ್ನೋಸರ್ಜರಿ
- ಹಿಪ್ನೋಥೆರಪಿ
- ಹೆರಿಗೆಯ ನಂತರ ಹಿಪ್ನೋಥೆರಪಿ
- ನರ-ಭಾಷಾವೈಜ್ಞಾನಿಕ ಪ್ರೊಗ್ರಾಮಿಂಗ್
- ಶಾಮಕ (ಶಾಮಕ-ಸಂಮೋಹನೀಯ ಔಷಧವೆಂದೂ ಸಹ ಕರೆಯಲಾಗುತ್ತದೆ)
- ವೈಜ್ಞಾನಿಕ ಧರ್ಮ ಹಾಗು ಸಂಮೋಹನ
ಸಂಸ್ಥೆಗಳು
[ಬದಲಾಯಿಸಿ]ಯುನೈಟೆಡ್ ಕಿಂಗ್ಡಮ್ ನಲ್ಲಿ ಸಂಮೋಹನದ ಚಿಕಿತ್ಸೆಯನ್ನೂ ಸಹ ನೋಡಿ.
- ಅಮೆರಿಕನ್ ಅಕ್ಯಾಡೆಮಿ ಆಫ್ ಮೆಡಿಕಲ್ ಹಿಪ್ನೋ ಅನಾಲಿಸ್ಟ್ಸ್ [೧೪]
- ಅಮೆರಿಕನ್ ಅಸೋಸಿಯೇಶನ್ ಆಫ್ ಪ್ರೊಫೆಷನಲ್ ಹಿಪ್ನೋಥೆರಪಿಸ್ಟ್ಸ್ [೧೫]
- ಅಮೆರಿಕನ್ ಬೋರ್ಡ್ ಆಫ್ ಕ್ಲಿನಿಕಲ್ ಹಿಪ್ನೋಥೆರಪಿ [೧೬]
- ಅಮೆರಿಕನ್ ಕೌನ್ಸಿಲ್ ಆಫ್ ಹಿಪ್ನೋಟಿಸ್ಟ್ ಎಕ್ಸಾಮಿನರ್ಸ್ [೧೭]
- ಅಮೆರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಹಿಪ್ನೋಸಿಸ್ [೧೮]
- ಅಸೋಸಿಯೇಶನ್ ಆಫ್ ರಿಜಿಸ್ಟರ್ಡ್ ಕ್ಲಿನಿಕಲ್ ಹಿಪ್ನೋಥೆರಪಿಸ್ಟ್ಸ್ [೧೯]
- ಆಸ್ಟ್ರೇಲಿಯನ್ ಹಿಪ್ನೋಥೆರಪಿಸ್ಟ್ಸ್' ಅಸೋಸಿಯೇಶನ್ [೨೦]
- ಆಸ್ಟ್ರೇಲಿಯನ್ ಸೊಸೈಟಿ ಆಫ್ ಕ್ಲಿನಿಕಲ್ ಹಿಪ್ನೋಥೆರಪಿಸ್ಟ್ಸ್ [೨೧]
- ಬ್ರಿಟಿಶ್ ಸೊಸೈಟಿ ಆಫ್ ಕ್ಲಿನಿಕಲ್ ಅಂಡ್ ಅಕ್ಯಾಡೆಮಿಕ್ ಹಿಪ್ನೋಸಿಸ್( http://www.bscah.com)
- ಬ್ರಿಟಿಶ್ ಸೊಸೈಟಿ ಆಫ್ ಕ್ಲಿನಿಕಲ್ ಹಿಪ್ನೋಸಿಸ್ [೨೨]
- ಬ್ರಿಟಿಶ್ ಸೊಸೈಟಿ ಆಫ್ ಮೆಡಿಕಲ್ ಅಂಡ್ ಡೆಂಟಲ್ ಹಿಪ್ನೋಸಿಸ್ [೨೩] Archived 2010-09-27 ವೇಬ್ಯಾಕ್ ಮೆಷಿನ್ ನಲ್ಲಿ.
- ಯುರೋಪಿಯನ್ ಸೊಸೈಟಿ ಆಫ್ ಹಿಪ್ನೋಸಿಸ್ ಅಂಡ್ ಸೈಕೋಸೊಮಾಟಿಕ್ ಮೆಡಿಸಿನ್ (http://www.esh-hypnosis.eu)
- ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಕೌನ್ಸೆಲಿಂಗ್ ಹಿಪ್ನೋಥೆರಪಿಸ್ಟ್ಸ್ [೨೪]
- ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಕೌನ್ಸೆಲರ್ಸ್ ಅಂಡ್ ಥೆರಪಿಸ್ಟ್ಸ್ [೨೫]
- ಇಂಟರ್ನ್ಯಾಷನಲ್ ಹಿಪ್ನೋಸಿಸ್ ಫೆಡರೇಶನ್ [೨೬]
- ಇಂಟರ್ನ್ಯಾಷನಲ್ ಮೆಡಿಕಲ್ ಅಂಡ್ ಡೆಂಟಲ್ ಹಿಪ್ನೋಥೆರಪಿ [೨೭]
- ನ್ಯಾಷನಲ್ ಅಸೋಸಿಯೇಶನ್ ಆಫ್ ಟ್ರ್ಯಾನ್ಸ್ಪರ್ಸನಲ್ ಹಿಪ್ನೋಥೆರಪಿಸ್ಟ್ಸ್ [೨೮]
- ನ್ಯಾಷನಲ್ ಬೋರ್ಡ್ ಫಾರ್ ಸರ್ಟಿಫೈಡ್ ಕ್ಲಿನಿಕಲ್ ಹಿಪ್ನೋಥೆರಪಿಸ್ಟ್ಸ್ [೨೯] Archived 2015-05-06 ವೇಬ್ಯಾಕ್ ಮೆಷಿನ್ ನಲ್ಲಿ.
- ನ್ಯಾಷನಲ್ ಗಿಲ್ಡ್ ಆಫ್ ಹಿಪ್ನೋಟಿಸ್ಟ್ಸ್ [೩೦]
- ಪ್ರೊಫೆಷನಲ್ ಬೋರ್ಡ್ ಆಫ್ ಹಿಪ್ನೋಥೆರಪಿ [೩೧]
- ಪ್ರೊಫೆಷನಲ್ ಕ್ಲಿನಿಕಲ್ ಹಿಪ್ನೋಥೆರಪಿಸ್ಟ್ಸ್ ಆಫ್ ಆಸ್ಟ್ರೇಲಿಯ [೩೨]
- ಸೊಸೈಟಿ ಆಫ್ ಸೈಕಲಾಜಿಕಲ್ ಹಿಪ್ನೋಸಿಸ್ [೩೩]
- ದಿ ಅಸೋಸಿಯೇಶನ್ ಫಾರ್ ಪ್ರೊಫೆಷನಲ್ ಹಿಪ್ನೋಸಿಸ್ ಅಂಡ್ ಸೈಕೋಥೆರಪಿ [೩೪]
- ದಿ ರಿಜಿಸ್ಟರ್ ಫಾರ್ ಎವಿಡೆನ್ಸ್-ಬೇಸ್ಡ್ ಹಿಪ್ನೋಥೆರಪಿ & ಸೈಕಾಲಜಿ [೩೫]
- ದಿ ಸೊಸೈಟಿ ಫಾರ್ ಕ್ಲಿನಿಕಲ್ ಅಂಡ್ ಎಕ್ಸ್ಪರಿಮೆಂಟಲ್ ಹಿಪ್ನೋಸಿಸ್ [೩೬]
ಆಕರಗಳು
[ಬದಲಾಯಿಸಿ]- ↑ ಗುಲ್ಲಿಫೋರ್ಡ್, ಟ್ರಿಸ್ಟನ್. "ಮ್ಯೂಸಿಕ್ ಅಂಡ್ ಟ್ರಾನ್ಸ್ ಇನ್ ಸೈಬೀರಿಯನ್ ಷ್ಯಾಮನಿಸಂ."
- ↑ "ರಿಲಾಕ್ಸೇಷನ್ ಇನ್ ಲೇಬರ್"
- ↑ "ನ್ಯೂ ಡೆಫಿನಿಶನ್: ಹಿಪ್ನಾಸಿಸ್" ಡಿವಿಷನ್ 30 ಆಫ್ ದಿ ಅಮೇರಿಕನ್ ಸೈಕಾಲಜಿಕಲ್ ಅಸೋಸಿಯೇಶನ್ [೧]
- ↑ "ಇನ್ಫಾರ್ಮೇಶನ್ ಫಾರ್ ದಿ ಪಬ್ಲಿಕ್. Archived 2009-08-05 ವೇಬ್ಯಾಕ್ ಮೆಷಿನ್ ನಲ್ಲಿ.ಅಮೆರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಹಿಪ್ನೋಸಿಸ್." Archived 2009-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಲೈಡ, ಅಲೆಕ್ಸ್. "ಹಿಪ್ನೋಸಿಸ್ ಗೈನಿಂಗ್ ಗ್ರೌಂಡ್ ಇನ್ ಮೆಡಿಸಿನ್." ಕೊಲಂಬಿಯ ನ್ಯೂಸ್
- ↑ ಪುಟ. 22, ಸ್ಪಿಯೇಗೆಲ್, ಹರ್ಬರ್ಟ್ ಹಾಗು ಸ್ಪಿಯೇಗೆಲ್, ಡೇವಿಡ್. ಟ್ರಾನ್ಸ್ ಅಂಡ್ ಟ್ರೀಟ್ಮೆಂಟ್. ಬೇಸಿಕ್ ಬುಕ್ಸ್ Inc., ನ್ಯೂಯಾರ್ಕ್. 1978. ISBN 0-465-08687-X
- ↑ ಬ್ರೈಡ್, J. (1843) ನ್ಯೂರಿಪಿನಾಲಜಿ.
- ↑ ಬುಸೆಲ್ಲ್, R ಬಾರ್ಕರ್, ಕೋಟೆಡ್ ಇನ್ ದಿ ಸ್ಕೇಪ್ಟಿಕ್'ಸ್ ಡಿಕ್ಷನರಿ
- ↑
- ಕಿರ್ಸ್ಚ್, I., "ಕ್ಲಿನಿಕಲ್ ಹಿಪ್ನಾಸಿಸ್ ಆಸ್ ಏ ನಾನ್ ಡಿಸೆಪ್ಟಿವ್ ಪ್ಲಾಸೆಬೋ: ಎಮ್ಫಿರಿಕಲಿ ಡಿರೈವ್ಡ್ ಟೆಕ್ನಿಕ್ಸ್", ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ಹಿಪ್ನಾಸಿಸ್ , ಸಂ.37, No.2, (ಅಕ್ಟೋಬರ್ 1994), pp.95-106; ಕಿರ್ಸ್ಚ್, I, "ಕ್ಲಿನಿಕಲ್ ಹಿಪ್ನಾಸಿಸ್ ಆಸ್ ಏ ನಾನ್ ಡಿಸೆಪ್ಟಿವ್ ಪ್ಲಾಸೆಬೋ", pp.211-225 ಇನ್ ಕಿರ್ಸ್ಚ್, I., ಕಪಫೋನ್ಸ್, A.,ಕಾರ್ಡಿನ-ಬುಯೆಲ್ನ, E., ಅಮಿಗೋ, S. (eds.), ಕ್ಲಿನಿಕಾಲ್ ಹಿಪ್ನಾಸಿಸ್ ಅಂಡ್ ಸೆಲ್ಫ್-ರೆಗ್ಯೂಲೆಶನ್: ಕಾಗ್ನಿಟಿವ್-ಬಿಹೇವಿಯರಲ್ ಪರ್ಸ್ಪೆಕ್ಟಿವ್ಸ್ ,ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಶನ್, (ವಾಶಿಂಗ್ಟನ್), 1999.
- ↑ ಬ್ರೈಡ್, ನ್ಯೂರಿಪಿನಾಲಜಿ, 1843: 'ಪ್ರಸ್ತಾವನೆ'
- ↑ ಬ್ರೈಡ್, ಹಿಪ್ನಾಟಿಕ್ ಥೆರಪೆಟಿಕ್ಸ್ , 1853
- ↑ "New Definition: Hypnosis" Society of Psychological Hypnosis Division 30 - American Psychological Association [೨].
- ↑ Braid, Neurypnology, 1843
- ↑ ವೈಟ್, ರಾಬರ್ಟ್ W. 'ಏ ಪ್ರಿಫೇಸ್ ಟು ದಿ ಥಿಯರಿ ಆಫ್ ಹಿಪ್ನಾಟಿಸಂ', ಜರ್ನಲ್ ಆಫ್ ಅಬ್ನಾರ್ಮಲ್ & ಸೋಶಿಯಲ್ ಸೈಕಾಲಜಿ, 1941, 1, 498.
- ↑ ವಾಟರ್ಫೀಲ್ಡ್, R. (2003). ಹಿಡನ್ ಡೆಪ್ತ್ಸ್: ದಿ ಸ್ಟೋರಿ ಆಫ್ ಹಿಪ್ನಾಸಿಸ್ . pp. 36-37
- ↑ ಪಿಸ್ಸಿಯೋನ್, C., ಹಿಲ್ಗಾರ್ಡ್ , E. R., ಜಿಮ್ಬಾರ್ಡೊ, P. G. (1989). ಸ್ಥಿರತೆಯ ಪ್ರಮಾಣ ಹಾಗು 25-ವರ್ಷದ ಅವಧಿಯಲ್ಲಿ ಅಳೆಯಲಾದ ಸಂಮೋಹನದ ಸಾಮರ್ಥ್ಯ. ಜರ್ನಲ್ ಆಫ್ ಪರ್ಸನಾಲಿಟಿ ಅಂಡ್ ಸೋಶಿಯಲ್ ಸೈಕಾಲಜಿ, 56, 289-295.
- ↑ ಬಾರೆಟ್, ಡೆಯಿರ್ಡ್ರೆ. ಡೀಪ್ ಟ್ರಾನ್ಸ್ ಸಬ್ಜೆಕ್ಟ್ಸ್: ಏ ಸ್ಚೆಮ ಆಫ್ ಟು ಡಿಸ್ಟಿಂಕ್ಟ್ ಸಬ್ ಗ್ರೂಪ್ಸ್. R. ಕುಂಜೆನ್ಡೋರ್ಫ್(Ed.) ರ ಒಂದು ಅಧ್ಯಾಯ ಇಮೇಜರಿ: ರಿಸೆಂಟ್ ಡೆವಲಪ್ಮೆಂಟ್ಸ್, NY: ಪ್ಲೆನುಂ ಪ್ರೆಸ್, 1991, ಪು. 101 112.
- ↑ ಬಾರೆಟ್, ಡೆಯಿರ್ಡ್ರೆ. ಫ್ಯಾಂಟಸೈಜರ್ಸ್ ಅಂಡ್ ಡಿಸ್ಸೋಸಿಯೇಟರ್ಸ್: ಆನ್ ಎಮ್ಫಿರಿಕಲಿ ಬೇಸ್ಡ್ ಸ್ಚೆಮ ಆಫ್ ಟು ಟೈಪ್ಸ್ ಆಫ್ ಡೀಪ್ ಟ್ರಾನ್ಸ್ ಸಬ್ಜೆಕ್ಟ್ಸ್. ಸೈಕಲಾಜಿಕಲ್ ರಿಪೋರ್ಟ್ಸ್, 1992, 71, ಪು. 1011-1014.
- ↑ ಬಾರೆಟ್, ಡೆಯಿರ್ಡ್ರೆ. ಫ್ಯಾಂಟಸೈಜರ್ಸ್ ಅಂಡ್ ಡಿಸ್ಸೋಸಿಯೇಟರ್ಸ್: ಟು ಟೈಪ್ಸ್ ಆಫ್ ಹೈ ಹಿಪ್ನೋಟೈಸಬಲ್ಸ್, ಟು ಇಮೇಜರಿ ಸ್ಟೈಲ್ಸ್ ಇನ್ ರ. ಕುಜೆನ್ಡೋರ್ಫ್, N. ಸ್ಪಾನೋಸ್, & B. ವಾಲೇಸ್ (Eds.) ಹಿಪ್ನಾಸಿಸ್ ಅಂಡ್ ಇಮ್ಯಾಜಿನೇಶನ್, NY: ಬೇವುಡ್, 1996.
- ↑ ಬ್ರೈಡ್, J. “ಮ್ಯಾಜಿಕ್, ಮೆಸ್ಮರಿಸಂ, ಹಿಪ್ನಾಟಿಸಂ, etc., ಹಿಸ್ಟಾರಿಕಲಿ ಅಂಡ್ ಸೈಕಲಾಜಿಕಲಿ ಕನ್ಸಿಡರ್ಡ್" 1844-1845, ಸಂ. XI., pp. 203-204, 224-227, 270-273, 296-299, 399-400, 439-41.
- ↑ ಬ್ರೈಡ್, J. (1846). ದಿ ಪವರ್ ಆಫ್ ದಿ ಮೈಂಡ್ ಓವರ್ ದಿ ಬಾಡಿ
- ↑ ಬ್ರೈಡ್, J. ಮ್ಯಾಜಿಕ್, ವಿಚ್ಕ್ರಾಫ್ಟ್, etc. , 1852: 41-42.
- ↑ ಬ್ರೈಡ್, ಅಬ್ಸರ್ವೆಶನ್ಸ್ ಆನ್ ಟ್ರಾನ್ಸ್ ಆರ್ ಹ್ಯೂಮನ್ ಹೈಬರ್ನೇಶನ್ , 1850, 'ಪ್ರಿಫೇಸ್.'
- ↑ S. ಫ್ರಾಯ್ಡ್, ಲೈನ್ಸ್ ಆಫ್ ಅಡ್ವಾನ್ಸ್ ಇನ್ ಸೈಕೋಅನಾಲಿಟಿಕ್ ಥೆರಪಿ , 1919
- ↑ ವೆಯಿಟ್ಜೆನ್ಹೊಫ್ಫಾರ್, ದಿ ಪ್ರ್ಯಾಕ್ಟಿಸ್ ಆಫ್ ಹಿಪ್ನಾಟಿಸಂ , 2000: 419
- ↑ ಸರ್ಬಿನ್, T.R. & ಕೇ , W.C. (1972). ಹಿಪ್ನಾಸಿಸ್: ಏ ಸೋಶಿಯಲ್ ಸೈಕಲಾಜಿಕಲ್ ಅನಾಲಿಸಿಸ್ ಆಫ್ ಇನ್ಫ್ಲುಯೆನ್ಸ್ ಕಮ್ಯೂನಿಕೇಶನ್.
- ↑ ೨೭.೦ ೨೭.೧ ಬಾರ್ಬರ್, ಸ್ಪಾನೋಸ್ & ಚಾವೇಸ್ (1974). ಹಿಪ್ನಾಟಿಸಂ: ಇಮ್ಯಾಜಿನೇಶನ್ & ಹ್ಯೂಮನ್ ಪೊಟೆನ್ಶಿಯಾಲಿಟೀಸ್.
- ↑ ಅಲ್ಲಾದಿನ್, A. (2008). ಕಾಗ್ನಿಟಿವ್ ಹಿಪ್ನೋಥೆರಪಿ.
- ↑ ಚಾಪ್ಮನ್, R.A. (ed.) (2005). ದಿ ಕ್ಲಿನಿಕಲ್ ಯೂಸ್ ಆಫ್ ಹಿಪ್ನಾಸಿಸ್ ಇನ್ ಕಾಗ್ನಿಟಿವ್ ಬಿಹೇವಿಯರ್ ಥೆರಪಿ: ಏ ಪ್ರ್ಯಾಕ್ಟಿಷನರ್ಸ್ ಕೇಸ್ಬುಕ್
- ↑ ವೊಲ್ಪೆ, J. (1958) ಸೈಕೋಥೆರಪಿ ಬೈ ರೆಸಿಪ್ರೋಕಲ್ ಇನ್ಹಿಬಿಶನ್.
- ↑ ಎಲ್ಲಿಸ್, A. (1962). ರೀಸನ್ & ಎಮೋಶನ್ ಇನ್ ಸೈಕೋಥೆರಪಿ.
- ↑ ಹುಲ್, C.L. (1933). ಹಿಪ್ನೋಸಿಸ್ & ಸಜೆಸ್ಟಬಲಿಟಿ.
- ↑ ಬ್ರೈಡ್, J. (1843). ನ್ಯೂರೋಪಿನಾಲಜಿ.
- ↑ ""ಕ್ಲಿನಿಕಲ್ ರಿಸರ್ಚ್." hypnotic-tracks.us". Archived from the original on 2010-07-22. Retrieved 2010-06-02.
- ↑ "ಹಿಪ್ನಾಸಿಸ್ ಫಾರ್ ಪೆಯಿನ್." webmd.com
- ↑ ಕಿರ್ಸ್ಚ್, ಇರ್ವಿಂಗ್. "ಹಿಪ್ನಾಟಿಕ್ ಎನ್ಹಾನ್ಸ್ಮೆಂಟ್ ಆಫ್ ಕಾಗ್ನಿಟಿವ್-ಬಿಹೇವಿಯರಲ್ ವೆಯಿಟ್ ಲಾಸ್ ಟ್ರೀಟ್ಮೆಂಟ್ಸ್--ಅನದರ್ ಮೆಟಾ-ರೀಅನಾಲಿಸಿಸ್." ಜರ್ನಲ್ ಆಫ್ ಕನ್ಸಲ್ಟಿಂಗ್ ಅಂಡ್ ಕ್ಲಿನಿಕಲ್ ಸೈಕಾಲಜಿ, v64 n3 p517-19 ಜೂನ್ 1996 [೩]
- ↑ ಶೇನೆಫೆಲ್ಟ್, ಫಿಲಿಪ್ D. "ಅಪ್ಪ್ಲೈಂಗ್ ಹಿಪ್ನಾಸಿಸ್ ಇನ್ ಡರ್ಮಟಾಲಜಿ." medscape.com. 6 ಜನವರಿ 2004 [೪]
- ↑ ಬಾರೆಟ್, ಡಿಯೆರ್ಡ್ರೆ. "ದಿ ಪವರ್ ಆಫ್ ಹಿಪ್ನಾಸಿಸ್." ಸೈಕಾಲಜಿ ಟುಡೆ. ಜನ/ಫೆಬ್ 2001. [೫] Archived 2007-11-07 at Archive.is
- ↑ "ಹಿಪ್ನಾಸಿಸ್. ಅನದರ್ ವೇ ಟು ಮ್ಯಾನೆಜ್ ಪೆಯಿನ್, ಕಿಕ್ ಬ್ಯಾಡ್ ಹ್ಯಾಬಿಟ್ಸ್." mayoclinic.com [೬]
- ↑ ವಿಕೆರ್ಸ್, ಆಂಡ್ರ್ಯೂ, ಹಾಗು ಜೊಲ್ಮ್ಯಾನ್, ಕ್ಯಾಥೆರಿನ್. "ಪ್ರಾಯೋಗಿಕ ವಿಮರ್ಶೆ. ABC ಆಫ್ ಕಾಂಪ್ಲಿಮೆನ್ಟರಿ ಮೆಡಿಸಿನ್. ಸಂಮೋಹನ ಹಾಗು ಶಮನ ಚಿಕಿತ್ಸೆಗಳು." (BMJ) ಬ್ರಿಟಿಶ್ ಮೆಡಿಕಲ್ ಜರ್ನಲ್ 1999;319:1346-1349 ( 20 ನವೆಂಬರ್) [೭]
- ↑ "ಹಿಪ್ನೋಸಿಸ್ ಅಂಡ್ ಸ್ಪೋರ್ಟ್ ಪರ್ಫಾರ್ಮೆನ್ಸ್." awss.com
- ↑ ""ಹಿಸ್ಟರಿ ಆಫ್ ದಿ ಸ್ಟೇಜ್ ಹಿಪ್ನೋಟಿಸ್ಟ್ ಅಂಡ್ ಸ್ಟೇಜ್ ಹಿಪ್ನೋಸಿಸ್ ಶೋಸ್."". Archived from the original on 2010-06-15. Retrieved 2010-06-02.
- ↑ ಮೂರೇ, M. & ಟಸ್ಸೋ , A.F. ಕ್ಲಿನಿಕಾಲ್ ಹಿಪ್ನೋಸಿಸ್: ದಿ ಎಂಪರಿಕಲ್ ಎವಿಡೆನ್ಸ್' ' ಇನ್ ದಿ ಆಕ್ಸ್ಫರ್ಡ್ ಹ್ಯಾಂಡ್ ಬುಕ್ ಆಫ್ ಹಿಪ್ನಾಸಿಸ್, 2008: 719-718.
- ↑ http://www.nice.org.uk/nicemedia/pdf/IBSFullGuideline.pdf Archived 2012-10-08 ವೇಬ್ಯಾಕ್ ಮೆಷಿನ್ ನಲ್ಲಿ. NICE Guidance for IBS
- ↑ "ಫಿಸಿಶಿಯನ್ ಸ್ಟಡೀಸ್ ಹಿಪ್ನಾಸಿಸ್ ಆಸ್ ಸೆಡೆಶನ್ ಆಲ್ಟರ್ನೇಟಿವ್," ಯುನಿವೆರ್ಸಿಟಿ ಆಫ್ ಐಯೋವಾ ನ್ಯೂಸ್ ಸರ್ವೀಸ್, 6 ಫೆಬ್ರವರಿ 2003 [೮] Archived 2017-11-17 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ""ಪೆಯಿನ್ ಡಿಕ್ರೀಸಸ್ ಅಂಡರ್ ಹಿಪ್ನಾಸಿಸ್," medicalnewstoday.com". Archived from the original on 2009-01-03. Retrieved 2010-06-02.
- ↑ ""ಹಿಪ್ನಾಸಿಸ್ ಇನ್ ಸರ್ಜರಿ," institute-shot.com". Archived from the original on 2008-12-19. Retrieved 2010-06-02.
- ↑ "ಹಿಪ್ನಾಸಿಸ್: ಅನದರ್ ವೇ ಟು ಮ್ಯಾನೇಜ್ ಪೆಯಿನ್, ಕಿಕ್ ಬ್ಯಾಡ್ ಹ್ಯಾಬಿಟ್ಸ್."ಮಯೋ ಕ್ಲಿನಿಕ್
- ↑ ೪೯.೦ ೪೯.೧ ೪೯.೨ ನಾಶ್, ಮಿಚೆಲ್ R. "ದಿ ಟ್ರೂತ್ ಅಂಡ್ ದಿ ಹೈಪ್ ಆಫ್ ಹಿಪ್ನಾಸಿಸ್".
- ಸೈಂಟಿಫಿಕ್ ಅಮೆರಿಕನ್: ಜುಲೈ 2001
- ↑
- ಸ್ಪಿಯೇಗೆಲ್, D. ಹಾಗು ಮೂರ್, R. (1997) "ಇಮೆಜರಿ ಅಂಡ್ ಹಿಪ್ನಾಸಿಸ್ ಇನ್ ದಿ ಟ್ರೀಟ್ಮೆಂಟ್ ಆಫ್ ಕ್ಯಾನ್ಸರ್ ಪೇಷೆಂಟ್ಸ್" ಅಂಕಾಲಾಜಿ 11(8): pp. 1179-1195
- ↑ ಗಾರ್ರೌ, D. ಹಾಗು ಎಗೆಡೆ, L. E. (ನವೆಂಬರ್ 2006) "ನ್ಯಾಷನಲ್ ಪ್ಯಾಟ್ರನ್ಸ್ ಕೋರಿಲೇಟ್ಸ್ ಆಫ್ ಕಾಂಪ್ಲಿಮೆನ್ಟರಿ ಅಂಡ್ ಆಲ್ಟರ್ನೇಟಿವ್ ಮೆಡಿಸಿನ್ ಯುಸ್ ಇನ್ ಅಡಲ್ಟ್ಸ್ ವಿಥ್ ಡಯಾಬಿಟಿಸ್" ಜರ್ನಲ್ ಆಫ್ ಅಲ್ಟರ್ನೇಟಿವ್ ಅಂಡ್ ಕಾಂಪ್ಲಿಮೆನ್ಟರಿ ಮೆಡಿಸಿನ್ 12(9): pp. 895-902
- ↑ ಮಸ್ಕಾಟ್, C. (2004) "ಹಿಪ್ನೋಥೆರಪಿ: ಏ ಕಾಂಪ್ಲಿಮೆನ್ಟರಿ ಥೆರಪಿ ವಿಥ್ ಬೋರ್ಡ್ ಅಪ್ಲಿಕೇಶನ್ಸ್" ಡಯಾಬಿಟಿಸ್ ಸೆಲ್ಫ್ ಮ್ಯಾನೇಜ್ಮೆಂಟ್ 21(5): pp.15-18
- ↑ ಕ್ವೆಕ್ಕೆಬೂಮ್, K.L. ಹಾಗು ಗ್ರೆಟರ್ಸ್ಡೋಟಿರ್, E. (2006) "ಸಿಸ್ಟಮ್ಯಾಟಿಕ್ ರಿವ್ಯೂ ಆಫ್ ರಿಲ್ಯಾಕ್ಸೆಶನ್ ಇಂಟರ್ವೆಂಷನ್ಸ್ ಫಾರ್ ಪೆಯಿನ್"ಜರ್ನಲ್ ಆಫ್ ನರ್ಸಿಂಗ್ ಸ್ಕಾಲರ್ಶಿಪ್ 38(3): pp.269-277
- ↑ ಮಾಂಟ್ಗೋಮೆರಿ GH, et al. "hits=10&RESULTFORMAT=1& author1=montgomery& andorexacttitle= and& andorex acttitleabs=and&andorexactfulltext=and&searchid=1&FIRSTINDEX=0&sortspec=relevance&resourcetype=HWCIT ಏ ರಾನ್ದಮೈಸ್ಡ್ ಕ್ಲಿನಿಕಲ್ ಟ್ರಯಲ್ ಆಫ್ ಏ ಬ್ರೀಫ್ ಹಿಪ್ನಾಸಿಸ್ ಇಂಟರ್ವೆನ್ಶನ್ ಟು ಕಂಟ್ರೋಲ್ ಸೈಡ್ ಎಫೆಕ್ಟ್ಸ್ ಇನ್ ಬ್ರೆಸ್ಟ್ ಸರ್ಜರಿ ಪೇಷೆಂಟ್ಸ್."." J ನಟಲ್ ಕ್ಯಾನ್ಸರ್ ಇನ್ಸ್ಟಿ. 2007 ಸೆಪ್ 5;99(17):1280-1.
- ↑ Montgomery, Guy. "Reducing Pain After Surgery Via Hypnosis". Your Cancer Today. Archived from the original on 2010-04-16. Retrieved 2010-06-02.
- ↑
- "ಹಿಪ್ನೋಸಿಸ್, ಸಜೆಶನ್, ಅಂಡ್ ಪ್ಲೇಸ್ಬೊ ಇನ್ ದಿ ರಿದಕ್ಶನ್ ಆಫ್ ಎಕ್ಸ್ಪರಿಮೆಂಟಲ್ ಪೆಯಿನ್" http://www.faqs.org/abstracts/Psychology-and-mental-health/Hypnosis-suggestion-and-placebo-in-the-reduction-of-experimental-pain.html
- ↑
- ಶೇನೆಫೆಲ್ಟ್, ಫಿಲಿಪ್ D.ಹಿಪ್ನಾಸಿಸ್: "ಹಿಪ್ನಾಸಿಸ್: ಅಪ್ಲಿಕೇಶನ್ಸ್ ಇನ್ ಡರ್ಮಟಾಲಜಿ ಅಂಡ್ ಡರ್ಮಟಾಲಾಜಿಕಲ್ ಸರ್ಜರಿ." emedicine.com. [೯]
- ↑ ಶೇನೆಫೆಲ್ಟ್, ಫಿಲಿಪ್ D.ಹಿಪ್ನಾಸಿಸ್: "ಹಿಪ್ನಾಸಿಸ್: ಅಪ್ಲಿಕೇಶನ್ಸ್ ಇನ್ ಡರ್ಮಟಾಲಜಿ ಅಂಡ್ ಡರ್ಮಟಾಲಾಜಿಕಲ್ ಸರ್ಜರಿ." emedicine.com. [೧೦]
- ↑ ಕಿರ್ಸ್ಚ್, ಇರ್ವಿಂಗ್. "ಹಿಪ್ನಾಟಿಕ್ ಎನ್ಹಾನ್ಸ್ಮೆಂಟ್ ಆಫ್ ಕಾಗ್ನಿಟಿವ್-ಬಿಹೇವಿಯರಲ್ ವೆಯಿಟ್ ಲಾಸ್ ಟ್ರೀಟ್ಮೆಂಟ್ಸ್: ಅನದರ್ ಮೆಟಾ-ರೀಅನಾಲಿಸಿಸ್." ಜರ್ನಲ್ ಆಫ್ ಕನ್ಸಲ್ಟಿಂಗ್ ಅಂಡ್ ಕ್ಲಿನಿಕಲ್ ಸೈಕಾಲಜಿ. [೧೧] Archived 2011-05-14 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಹಿಪ್ನಾನಿಸ್ ಇನ್ ಇಂಟೆಲಿಜೆನ್ಸ್, ದಿ ಬ್ಲಾಕ್ ವಾಲ್ಟ್, 2008
- ↑ MKULTRA ಪ್ರೊಗ್ರಾಮ್ Archived 2012-03-23 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಬ್ಲಾಕ್ ವಾಲ್ಟ್, 2008
- ↑ ೬೨.೦ ೬೨.೧ ಕಾಂಗ್ರೆಶ್ನಲ್ ಹಿಯರಿಂಗ್ ಬೈ MKULTRA, ದಿ ಬ್ಲಾಕ್ ವಾಲ್ಟ್
- ↑ ಫಾರ್ ರೆಫರೆನ್ಸ್ ಪರ್ಪಸಸ್
- ↑ "ಹಿಪ್ನಾಸಿಸ್." ವರ್ಡ್ನೆಟ್ ಸರ್ಚ್
- ↑ ಡುಬಿನ್, ವಿಲ್ಲಿಯಮ್. Archived 2009-02-19 ವೇಬ್ಯಾಕ್ ಮೆಷಿನ್ ನಲ್ಲಿ."ಕಂಪಲ್ಸಿವ್ ಗೇಮಿಂಗ್" (2006) Archived 2009-02-19 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "ಕಾಗ್ನಿಟಿವ್ ಹಿಪ್ನೊಥೆರಪಿ: ಆನ್ ಇಂಟಿಗ್ರೇಟೆಡ್ ಅಪ್ರೋಚ್ ಟು ದಿ ಟ್ರೀಟ್ಮೆಂಟ್ ಆಫ್ ಎಮೋಷನಲ್ ಡಿಸ್ಆರ್ಡರ್ಸ್." [೧೨]
- ↑ O'ಕಾಂನೋರ್, ಅನಹಾದ್."ದಿ ಕ್ಲೆಯಿಮ್: ಹಿಪ್ನಾಸಿಸ್ ಕ್ಯಾನ್ ಹೆಲ್ಪ್ ಯು ಕ್ವಿಟ್ ಸ್ಮೋಕಿಂಗ್."
- ↑ "ಹಿಪ್ನೊಥೆರಪಿ ಫಾರ್ ಸ್ಮೋಕಿಂಗ್ ಸೆಸೆಶನ್ ಸೀಸ್ ಸ್ಟ್ರಾಂಗ್ ರಿಸಲ್ಟ್ಸ್."ಸೈನ್ಸ್‌ಡೈಲಿ
- ↑ "Questions and Answers about Memories of Childhood Abuse". American Psychological Association. Retrieved 2007-01-22.
- ↑ ಆಸ್ಟಿನ್, J.A. et al. (2003) "ಮೈಂಡ್-ಬಾಡಿ ಮೆಡಿಸಿನ್: ಸ್ಟೇಟ್ ಆಫ್ ದಿ ಸೈನ್ಸ್, ಇಮ್ಪ್ಲಿಕೆಷನ್ಸ್ ಫಾರ್ ಪ್ರಾಕ್ಟಿಸ್"ಜರ್ನಲ್ ಆಫ್ ದಿ ಅಮೆರಿಕನ್ ಬೋರ್ಡ್ ಆಫ್ ಫ್ಯಾಮಿಲಿ ಪ್ರಾಕ್ಟಿಷನರ್ಸ್ 16(2): pp.131-147
- ↑ "ಸೆಲ್ಫ್-ಹಿಪ್ನಾಸಿಸ್ ಆಸ್ ಏ ಸ್ಕಿಲ್ ಫಾರ್ ಬ್ಯುಸಿ ರಿಸರ್ಚ್ ವರ್ಕರ್ಸ್." ಲಂಡನ್'ಸ್ ಗ್ಲೋಬಲ್ ಯುನಿವೆರ್ಸಿಟಿ ಹ್ಯೂಮನ್ ರಿಸೋರ್ಸಸ್. [೧೩].
- ↑ Yapko, Michael (1990). Trancework: An introduction to the practice of Clinical Hypnosis. NY, New York: Brunner/Mazel. p. 28.
- ↑ ವಾಗ್ಸ್ಟ್ಯಾಫ್, ಗ್ರಹಾಮ್ F. (1981) ಹಿಪ್ನೋಸಿಸ್, ಕಾಂಪ್ಲಯನ್ಸ್ ಅಂಡ್ ಬಿಲೀಫ್ St. ಮಾರ್ಟಿನ್'ಸ್ ಪ್ರೆಸ್, ನ್ಯೂಯಾರ್ಕ್ , ISBN 0-312-40157-4
- ↑ ಮ್ಯಾಕ್ಗಿಲ್, ಆರ್ಮಂಡ್(1996) ದಿ ನ್ಯೂ ಎನ್ಸೈಕ್ಲೋಪೆಡಿಯ ಆಫ್ ಸ್ಟೇಜ್ ಹಿಪ್ನಾಸಿಸ್, ಪು. 506
- ↑ ಆಂಡ್ರೆ M. ವೆಯಿಟ್ಜೆನ್ಬ್ಹೊಫ್ಫೆರ್. ದಿ ಪ್ರಾಕ್ಟಿಸ್ ಆಫ್ ಹಿಪ್ನಾಟಿಸಂ 2ನೇ ಆವೃತ್ತಿ, ಟೊರೊಂಟೊ, ಜಾನ್ ವಿಲೆಯ್ & ಸನ್ Inc, ಅಧ್ಯಾಯ 16, ಪು. 583-587, 2000 ISBN 0-471-29790-9
- ↑ ಫಾಗೆಲ್, S., & ಹೊಫ್ಫೆರ್, A. (1962). LSD-25 ಅನುಭವವನ್ನು ವಿಚ್ಛಿನ್ನಗೊಳಿಸಲು ಹಾಗೂ ಮರುಉತ್ಪಾದಿಸಲು ಸಂಮೋಹನದ ಬಳಕೆ.
- ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ಎಕ್ಸ್ಪರಿಮೆಂಟಲ್ ಸೈಕೋಪ್ಯಾಥಾಲಜಿ, 23, 11-16
- ↑ ವ್ಯಾನ್ ಕ್ಯುಕೆಲ್ಬರ್ಗ್ಹೆ, R., & ಗೊಬೆಲ್, P., & ಹೆರ್ಟ್ವೆಕ್, E. (1995). ಸಂಮೋಹನದಡಿಯಲ್ಲಿ ಸಾವಿನ ಸಮೀಪದ ಅನುಕರಣೆ ಹಾಗು ದೇಹದಿಂದಾಚೆಗಿನ ಅನುಭವಗಳು. ಇಮ್ಯಾಜಿನೇಶನ್, ಕಾಗ್ನಿಶನ್ & ಪರ್ಸನಾಲಿಟಿ, 14(2), 151-164
- ↑ ""ಯೂಸಿಂಗ್ ಹಿಪ್ನಾಸಿಸ್ ಟು ಎನ್ಕರೇಜ್ ಮಿಸ್ಟಿಕಲ್ ಎಕ್ಸ್ಪಿರಿಯನ್ಸ್"". Archived from the original on 2010-01-29. Retrieved 2010-06-02.
- ↑ Wier, Dennis R (1996). Trance: from magic to technology. Ann Arbor, Michigan: TransMedia. ISBN 1888428384.
- ↑ "ಸ್ಪೋರ್ಟ್ಸ್ ಹಿಪ್ನಾಟಿಸ್ಟ್ ಹೆಲ್ಪ್ಸ್ ಜೋಕ್ಕ್ಸ್ ಫೈಂಡ್ ದೆಯರ್ ಜೊನ್"
- ↑ ವೈಟ್, R.W. 'ಏ ಪ್ರಿಫೇಸ್ ಟು ದಿ ಥಿಯರಿ ಆಫ್ ಹಿಪ್ನಾಟಿಸಂ', ಜರ್ನಲ್ ಆಫ್ ಅಬ್ನಾರ್ಮಲ್ ಸೈಕಾಲಜಿ, 36, 477-505, ಅಕ್ಟೋಬರ್, 1941
- ↑ ಹುಲ್ಲ್, ಹಿಪ್ನಾಸಿಸ್ & ಸಜೆಸ್ಟಬಿಲಿಟಿ , 1933: 392
- ↑ ಪಾವ್ಲೊವ್, ಸಾಲ್ಟರ್ ನಲ್ಲಿ ಉಲ್ಲೇಖಿಸಿದಂತೆ, ವಾಟ್ ಇಸ್ ಹಿಪ್ನಾಸಿಸ್ ?, 1944: 23
- ↑ ಪಾವ್ಲೊವ್, I. P.: ಎಕ್ಸ್ಪರಿಮೆಂಟಲ್ ಸೈಕಾಲಜಿ . ನ್ಯೂಯಾರ್ಕ್, ಫಿಲೋಸೋಫಿಕಾಲ್ ಲೈಬ್ರರಿ, 1957.
- ↑ ಸೈಕೋಸೊಮಾಟಿಕ್ ಮೆಡಿಸಿನ್. http://www.psychosomaticmedicine.org/cgi/content/abstract/10/6/317
- ↑ Raz; et al. (2005). "Hypnotic suggestion reduces conflict in the human brain". Proceedings of the National Academy of Sciences. 102: 9978–9983. doi:10.1073/pnas.0503064102.
{{cite journal}}
: Explicit use of et al. in:|first=
(help) - ↑ Derbyshire; Whalley, MG; Stenger, VA; Oakley, DA; et al. (2004). "Cerebral activation during hypnotically induced and imagined pain". NeuroImage. 23 (1): 392–401. doi:10.1016/j.neuroimage.2004.04.033. PMID 15325387.
{{cite journal}}
: Explicit use of et al. in:|first=
(help) - ↑ &_udi=B6T0W-436FSH7P&_user=10&_rdoc=1&_fmt=&_orig=search&_sort =d&_docanchor=&view=c&_searchStrId=991562068& _rerunOrigin=scholar.google&_acct=C000050221&_ version=1&_urlVersion=0&_ userid =10&md5= 19ee122c3ec42cab5258a45167bc3ded "Brain activity evoked by inverted and imagined biological motion".
{{cite journal}}
: Check|url=
value (help); Cite journal requires|journal=
(help); Missing pipe in:|url=
(help) - ↑ Kosslyn; Thompson, WL; Costantini-Ferrando, MF; Alpert, NM; Spiegel, D; et al. (2000). "Hypnotic Visual Illusion Alters Color Processing in the Brain". American Journal of Psychiatry. 157 (8): 1279–1284. doi:10.1176/appi.ajp.157.8.1279. PMID 10910791. Archived from the original on 2010-03-28. Retrieved 2010-06-02.
{{cite journal}}
: Explicit use of et al. in:|first=
(help) - ↑ ಹಾರ್ಟನ್ & ಕ್ರಾಫೋರ್ಡ್,ಇನ್ ಹೀಪ್ et al., ದಿ ಹೈಲಿ ಹಿಪ್ನೋಟೈಸಬಲ್ ಸಬ್ಜೆಕ್ಟ್ , 2004: 140.
- ↑ Gosline, Anna (2004-09-10). "Hypnosis really changes your mind". New Scientist. Retrieved 2007-08-27.
- ↑ ಎಗ್ನೆರ್, ಜೇಮಿಸನ್, ಗೃಜೆಲಿಯೆರ್, 2005, ಹಿಪ್ನಾಸಿಸ್ ಡಿ ಕಪಲ್ಸ್ ಕಾಗ್ನಿಟಿವ್ ಕಂಟ್ರೋಲ್ ಫ್ರಮ್ ಕಾನ್ಫ್ಲಿಕ್ಟ್ ಮಾನಿಟರಿಂಗ್ ಪ್ರೋಸೆಸಸ್ ಆಫ್ ದಿ ಫ್ರನ್ಟಲ್ ಲೋಬ್. ನ್ಯೂರೋಇಮೇಜ್, 27, 969-978.
- ↑ ವೆಯಿಟ್ಜೆನ್ಹೊಫ್ಫೆರ್, A.M.: ಹಿಪ್ನಾಟಿಸಂ - ಆನ್ ಆಬ್ಜೆಕ್ಟಿವ್ ಸ್ಟಡಿ ಇನ್ ಸಜ್ಜೆಸ್ಟಬಿಲಿಟಿ . ನ್ಯೂಯಾರ್ಕ್, ವಿಲೆಯ್, 1953.
- ↑ ಬರೊನ್'ಸ್ AP ಸೈಕಾಲಜಿ 2008
- ↑ Y.D. Tsai (1995). "A Mind-Body Interaction Theory of Dream". Archived from the original on 2009-01-06. Retrieved 2010-06-02.
- ↑ ಬೇಕರ್, ರಾಬರ್ಟ್ A. (1990) ದೆ ಕಾಲ್ ಇಟ್ ಹಿಪ್ನಾಸಿಸ್ ಪ್ರೊಮಿಥಿಯಸ್ ಬುಕ್ಸ್, ಬಫೆಲೋ, NY, ISBN 0-87975-576-8
- ↑ ಕ್ರೋಗೆರ್, ವಿಲ್ಲಿಯಮ್ S. (1977) ಕ್ಲಿನಿಕಲ್ ಅಂಡ್ ಎಕ್ಸ್ಪರಿಮೆಂಟಲ್ ಹಿಪ್ನಾಸಿಸ್ ಇನ್ ಮೆಡಿಸಿನ್, ಡೆನ್ಟಿಸ್ಟ್ರಿ, ಅಂಡ್ ಸೈಕಾಲಜಿ. ಲಿಪ್ಪಿನ್ಕಾಟ್, ಫಿಲಡೆಲ್ಫಿಯ, 31. ISBN 0-397-50377-6
- ↑ Braid J (1843). Neurypnology or The rationale of nervous sleep considered in relation with animal magnetism. Buffalo, N.Y.: John Churchill.
- ↑ Morgan J.D. (1993). The Principles of Hypnotherapy. Eildon Press.
- ↑ "electronic copy of The Principles of Hypnotherapy". Retrieved 2007-01-22.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಹಿಪ್ನೋಸಿಸ್ Archived 2011-06-21 ವೇಬ್ಯಾಕ್ ಮೆಷಿನ್ ನಲ್ಲಿ. ಅಟ್ ದಿ ಓಪನ್ ಡೈರಿ ಪ್ರಾಜೆಕ್ಟ್
- ಹಿಪ್ನಾಸಿಸ್ ಗ್ಲಾಸರಿ Archived 2011-05-14 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Webarchive template archiveis links
- CS1 errors: explicit use of et al.
- CS1 errors: missing pipe
- CS1 errors: missing periodical
- CS1 errors: URL
- Pages using ISBN magic links
- Articles with hatnote templates targeting a nonexistent page
- Wikipedia articles needing page number citations
- Articles that show a Medicine navs template
- ಗ್ರೀಕ್ ನ ಎರವಲು ಪದಗಳು
- ಸಂಮೋಹನ
- ವೈದ್ಯಕೀಯ ಚಿಕಿತ್ಸೆಗಳು
- ಮನೋವಿಜ್ಞಾನ