ಸದಸ್ಯ:Meghana11.v/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Aam Aadmi Party

ಆಮ್ ಆದ್ಮಿ ಪಕ್ಷ[ಬದಲಾಯಿಸಿ]

ಆಮ್ ಆದ್ಮಿ ಪಕ್ಷ ಭಾರತದ ಒಂದು ರಾಜಕೀಯ ಪಕ್ಷ. ೨೬ ನವೆಂಬರ್ ೨೦೧೨ಕ್ಕೆ ಅಸ್ಥಿತ್ವಕ್ಕೆ ಬಂದ ಈ ಪಕ್ಷ, ವಾಸ್ತವದಲ್ಲಿ ದಿಲ್ಲಿಯಲ್ಲಿ ಆಡಳಿತವನ್ನು ನಡೆಸುತ್ತಿದೆ. "ಭ್ರಷ್ಟಾಚರದ ವಿರುಧ್ದ ಭಾರತ" (ಇಂಡಿಯಾ ಅಗೇಂನ್ಸ್ಟ್ ಕರಪ್ಶನ್) ಎಂಬ ಅಭಿಯಾನದಿಂದ ಶುರುವಾದ ಅರವಿಂದ್ ಕೇಜ್ರಿವಾಲ್ ಮತ್ತು ಅಣ್ಣಾ ಹಜಾರೆಯವರ ಹೋರಾಟ, ಕಡೆಗೆ ಈ ಹೋರಾಟ ರಾಜಕೀಯದ ಮೂಲಕ ಮುಂದುವರೆಯಿಸ ಬೇಕೊ ಇಲ್ಲವೊ ಎಂಬ ವಿಷಯದಲ್ಲಿ ಮನಸ್ತಾಪ ಉಂಟಾದಾಗ, ಅರವಿಂದ್ ಕೇಜ್ರಿವಾಲ್ ಅವರು ರಾಜಕೀಯದ ಮೂಲಕ ಹೋರಾಡಬೇಕೆಂದು ನಿರ್ಧರಿಸಿ, ಈ ಪಕ್ಷವನ್ನು ಕಟ್ಟದರು.

೨೦೧೩ ದಿಲ್ಲಿ ವಿಧಾನ ಸಭೆ ಚುನಾವಣೆ- "ನಮ್ಮ ಪಕ್ಷದಲ್ಲಿ ಪ್ರಕಟವಾದ ಎಲ್ಲಾ ಅಭ್ಯರ್ಥಿಗಳು ಪ್ರಾಮಾಣಿಕವಾಗಿದ್ದು, ಎಲ್ಲಾ ಅಭ್ಯರ್ಥಿಗಳನ್ನು ಸಂಭಾವ್ಯ ಕ್ರಿಮಿನಲ್ ಹಿನ್ನಲೆಯ ಬಗ್ಗೆಯೂ ಪರಿಶೀಲಿಸಿದ್ದೀವಿ" ಎಂಬ ಹೇಳಿಕೆಯನ್ನು ನೀಡಿತ್ತು. ೨೦ ನವೆಂಬರ್ ೨೦೧೩ ರಂದು ಆಪ್ ತನ್ನ ಕೇಂದ್ರ ಪ್ರಣಾಳಿಕೆಯನ್ನು ಪ್ರಕಟಿಸಿ, ಅಧಿಕಾರಕ್ಕೆ ಬಂದ ೧೫ ದಿನಗಳಲ್ಲಿ ಜನ ಲೋಕಪಾಲ್ ಬಿಲ್ ಜಾರಿಗೆ ತರುವ ಭರವಸೆಯನ್ನು ನೀಡಿತು.ನವೆಂಬರ್ ೨೦೧೩ರಲ್ಲಿ, ಮಾಧ್ಯಮ ಸರ್ಕಾರ್ ಕುಟುಕು ಕಾರ್ಯಾಚರಣೆಯನ್ನು ನಡೆಸಿತು. ಈ ಕಾರ್ಯಾಚರಣೆಯಲ್ಲಿ ಕುಮಾರ್ ವಿಶ್ವಾಸ್, ಶಾಜ಼ಿಯಾ ಇಲ್ಮಿ ಸೇರಿದಂತೆ ಹಲವಾರು ಆಪ್ ನಾಯಕರ ಮೇಲೆ, ಅವರು ಭೂಮಿ ಮತ್ತು ಇತರ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಗಣಿ ದಣಿಗಳಿಗೆ ಅಕ್ರಮವಾಗಿ ಬೆಂಬಲವನ್ನು ನೀಡಿದ್ದಾರೆ ಎಂದು ಆರೋಪವನ್ನು ಹೇರಿದರು.ಇದರ ಪರಿಣಾಮವಾಗಿ ಇಲ್ಮಿ ತನ್ನ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದರು ಆದರೆ ಆಪ್ ಕುಟುಕು ಕಾಯರ್ಯಾಚರಣೆಯ ತುಣುಕು ಕೃತಿಮವಾದದ್ದು ಹಾಗು ಇದು ನೀತಿ ಸಂಹಿತೆ ಉಲ್ಲಂಘನೆ ಎಂದು ಹೇಳಿ ಉಮೇದುವಾರಿಕೆಯನ್ನು ನಿರಾಕರಿಸಿತು. ಚುನಾವಣಾ ಆಯೋಗ ಕಾರ್ಯಾಚರಣೆಯ ದೃಶ್ಯದ ನ್ಯಾಯಸಮ್ಮತತೆಯ ಕುರಿತು ತನಿಖೆ ನಡೆಸಬೇಕೆಂದು ಆದೇಶ ಹೊರಡಿಸಿತು.

      ಚುನಾವಣಾ ಆಯೋಗ ಆಪ್ ಬಳಕೆಗೆ "ಪರ್ಕೆ"ಯನ್ನು ಪಕ್ಷದ ಸಂಕೇತವಾಗಿ ಬಳಸಲ್ಲು ಒಪ್ಪಿಗೆಯನ್ನು ನೀಡಿತು. 
   ಆಮ್ ಆದ್ಮಿ ಪಕ್ಷ ತನ್ನ ಚೊಚ್ಚಲ ವಿಧಾನ ಸಭೆ ಚುನಾವಣೆಯನ್ನು ೨೦೧೩ರಲ್ಲಿ ದಿಲ್ಲಿಯಲ್ಲಿ ಎದುರಿಸಿ, ೭೦ ಸ್ಥಾನಗಳಲ್ಲಿ ೨೮ ಸ್ಥಾನಗಳನ್ನ್ಯ್ ಪಡೆದು ದಿಲ್ಲಿಯಲ್ಲಿ ವಿರೋಧ ಪಕ್ಷವಾಗಿ ಹೊರಹೊಮ್ಮಿತು. ಯಾವುದೇ ಪಕ್ಷವೂ ಬಹುತೇಕ ಪಡೆಯದೆ ಇರುವ ಕಾರಣ, ಆಪ್ ಭಾರತೀಯ ರಾಷ್ಟೀಯ ಕಾಂಗ್ರೆಸ್ ಜೊತೆ ಕೂಡಿ, ಷರತ್ತುಬಧ್ಧ ಬೆಂಬಲ ಪಡೆದು ಅಲ್ಪಮತ ಸರ್ಕಾರವನ್ನು ರಚಿಸಿತು. ಜನಲೋಕಪಾಲ್ ಮಸೂದೆಯನ್ನು ಕೇಂದ್ರಾಡಳಿತದಲ್ಲಿ ವೇಗವಾಗಿ ಪರಿಚಿಯಿಸುವುದು ಆಪ್ ಪಕ್ಷದ ಅಜೆಂಡದ ಪ್ರಮುಖ ಭಾಗವಾಗಿತ್ತು. ಆದರೆ ಇತರ ಪ್ರಮುಖ ಪಕ್ಷಗಳು ಜನಲೋಕಪಾಲ್ ಮಸೂದೆಯನ್ನು ಒಪ್ಪದೆಯಿರುವುದು ಚುನವಣೆಯ ನಂತರ ಸ್ಪಷ್ಟವಾದಾಗ,ಆಮ್ ಆದ್ಮಿ ಪಕ್ಷ ದಿಲ್ಲಿಯಲ್ಲಿ ಅಧಿಕಾರವನ್ನು ಕಳೆದುಕೊಂಡಿತು. ಇದರಿಂದ ಆಪ್ ಕೇವಲ ೪೯ ದಿನಗಳಿಗೆ ಅಧಿಕಾರದಿಂದ ಇಳಿಯತು. ೨೮ ನವೆಂಬರ್ ೨೦೧೩ರಂದು ಆಪ್ ಒಂದು ಅಲ್ಪ ಸಂಖ್ಯಾತ ಸರ್ಕಾರವನ್ನು "ಹಂಗ್" ವಿಧಾನಸಭೆಯಲ್ಲಿ ರಚಿಸಿತು.ಇದರಿಂದ ಅರವಿಂದ್ ಕೇಜ್ರಿವಾಲ್ ಅವರು ದಿಲ್ಲಿಗೆ ಎರಡನೆ ಕಿರಿಯ ಮುಖ್ಯಮಂತ್ರಿಯಾದರು. ಆಪ್ ದ್ದಿಲ್ಲಿಯಲ್ಲಿ ಗುರುತಿಸಿಕೊಂಡ ಪಕ್ಷ ಎಂದು ಎನಿಸಿಕೊಂಡಿತು.

೨೦ ಜನವರಿ ೨೦೧೪ರಂದು ಕೇಜ್ರಿವಾಲ್ ಮತ್ತು ಅವರ ಮಂತ್ರಿಗಳು ಕೇಂದ್ರ ಗೃಹ ಸಚಿವಾಲಯದ ವಿರುಧ್ದ ರೈಲು ಭವನದಲ್ಲಿ ಪ್ರತಿಭಟನೆ ನಡೆಸಿದರು.ಕೇಜ್ರಿವಾಲ್ ಅವರು ಪೋಲೀಸ್ ದಿಲ್ಲಿ ಸರ್ಕಾರದ ನಿಯಂತ್ರಣಕ್ಕೆ ನೇರವಾಗಿ ಬರಬೇಕೆಂದು ಒತ್ತಾಯಿಸಿದರು. ನಂತರ ಇದು ಭಾರತೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ತನ್ನ ಸರ್ಕಾರದ ನ್ಯಾಯಯುತವಾದ ಬೇಡಿಕೆಗಳ ವಿಚಾರಣೆಗೆ ಬೀದಿಗಿಳಿದು ಪ್ರತಿಭಟನೆಯನ್ನು ಮಾಡಿದೆ ಎಂದು ಹೇಳಿಕೆಯನ್ನು ನೀಡಿತು. ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ನ್ಯಾಯಾಂಗ ವಿಚಾರಣೆಯಲ್ಲಿದ್ದ ಇಬ್ಬರು ಪೋಲೀಸರಿಗೆ ರಜೆ ನೀಡುವ ಮೂಲಕ ಹಸ್ತಕ್ಷೇಪ ನೀದಡಿದಾಗ, ಅರವಿಂದ್ ಕೇಜ್ರಿವಾಲ್ ಅವರು ಉಪವಾಸವನ್ನು ನಿಲ್ಲಿಸಿದರು. ೨೦೧೫ ದಿಲ್ಲಿ ವಿಧಾನ ಸಭೆ ಚುನಾವಣೆ- ಭಾರತದ ಚುನಾವಣಾ ಆಯೋಗ ದಿಲ್ಲಿಯ ಆರನೇ ವಿಧಾನ ಸಭೆ ಚುನಾವಣೆಯನ್ನು ೭ ಫೆಬ್ರವರಿ ೨೦೧೫ರಂದು ಘೋಷಿಸಿತು. ಆಮ್ ಆದ್ಮಿ ಪಕ್ಷ ೭೦ ಸ್ಥಾನಗಳಲ್ಲಿ ೬೭ ಸ್ಥಾನಗಳನ್ನು ಪಡೆದು ಪ್ರಚಂಡ ಬಹುಮತವನ್ನು ಸಾಧಿಸಿದೆ.ಭಾರತೀಯ ಜನತಾ ಪಕ್ಷ ಕೇವಲ ೩ ಸ್ಥಾನಗಳನ್ನು ಪಡೆಯಲು ಸಾಧ್ಯವಾದರೆ, ಭಾರತೀಯ ರಾಷ್ಟೀಯ ಕಾಂಗ್ರೆಸ್ ಒಂದು ಸ್ಥಾನವನ್ನು ಪಡೆಯುವುದರಲ್ಲೂ ವಿಫಲವಾಯಿತು. ಅರವಿಂದ್ ಕೇಜ್ರಿವಾಲ್ ಎರಡನೆ ಬಾರಿ ಮುಖ್ಯಮಂತ್ರಿಯಾದರು. ಅರವಿಂದ್ ಕೇಜ್ರಿವಾಲ್ ೨೦೧೫ ಚುನಾವಣೆಯನ್ನು ಆಪ್ ಮತ್ತು ಭಾರತೀಯ ಜನತಾ ಪಕ್ಷದ ನಡುವಿನ ನೇರ ಹೋರಾಟ ಎಂದು ಘೋಷಿಸಿದರು. ಏಕೆಂದರೆ ಅವರು ಭಾರತೀಯ ರಾಷ್ಟೀಯ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ ಎಂದು ಭಾವಿಸಿದ್ದರು. ಭಾರತೀಯ ಜನತಾ ಪಕ್ಷ ಮಾಜಿ ಐಪಿಎಸ್ ಅಧಿಕಾರಿ ಮತ್ತು ಭ್ರಷ್ಟಾಚರದ ವಿರುಧ್ದ ಭಾರತ (ಇಂಡಿಯಾ ಅಗೇಂನ್ಸ್ಟ್ ಕರಪ್ಶನ್)ನ ಕಾರ್ಯಕರ್ತೆ ಕಿರಣ್ ಬೇಡಿಯವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿತು. ಇದು ಆಪ್ ಸಂಸ್ಥಾಪಕ ಸದಸ್ಯರೊಬ್ಬರಾಗಿದ್ದ ಶಾಂತಿ ಭೂಷಣ್ ಅವರ ಪ್ರಕಾರ ಅರವಿಂದ್ ಕೇಜ್ರಿವಾಲ್ ಅವರಿಗೆ ದೊಡ್ಡ ಸವಾಲಾಗಿತ್ತು.

   ದಿಲ್ಲಿಯಲ್ಲಿ ಸರ್ಕಾರಕ್ಕೆ ಬಂದ ನಂತರ, ೪೦೦ ಘಟಕಗಳಿಗೆ ಬಿಲ್ಲು ಕಡಿತ ಮಾಡುವುದಾಗಿ ಘೋಷಿಸಿತು. ಜನತಾ ದರ್ಬಾರ್ಗಳನ್ನು ನಡೆಸುವ ಸರ್ಕಾರದ ಯೋಜನೆ ಕೆಟ್ಟ ನಿರ್ವಹಣೆಯ ಕಾರಣದಿಂದಾಗಿ ಕೈಬಿಡಲಾಯಿತು.ಕೇಜ್ರಿವಾಲ್ ತಮ್ಮ ಪಕ್ಷದ ಬಗ್ಗೆ ವಿವರಿಸುತ್ತ,ಆಪ್ ಪಕ್ಷ ಎಲ್ಲಾ ರೀತಿಯ ಸಿಧ್ದಾಂತಗಳನ್ನು ನಿರಾಕರಿಸಿತ್ತದೆ
೨೦೧೫ ಮೇ ತಿಂಗಳಲ್ಲಿ ಆಪ್ ಒಂದು ಸ್ಥಾನವನ್ನು ಕೇರಳಾದ ಉಪ ಚುನಾವಣೆಯಲ್ಲಿ ಪಡೆದಿದೆ. ಪಂಜಾಬ್ ವಿಧಾನ ಸಭೆ ಚುನಾವಣೆ ಬಹುಶಃ ೨೦೧೭ರಲ್ಲಿ ನಡೆಯಲಿದೆ. ಚುನವಣೆಯ  ಫಲಿತಾಂಶ ೨೦೧೭ರ ಮಾರ್ಚ್ ನಲ್ಲಿ ದೊರೆಯಲಿದೆ.
ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷದ ಕುರಿತು ವಿವರಿಸುತ್ತ ತಮ್ಮ ಪಕ್ಷ ಎಲ್ಲಾ ರೀತಿಯ ಸಿಧ್ದಾಂತಗಳನ್ನು ನಿರಾಕರಿಸುತ್ತದೆ ಹಾಗು ತಮ್ಮ ಪಕ್ಷ ಸೂಟು ಬೂಟು ಧರಿಸಿದವರಿಗೆ ಅಲ್ಲದೆ, ಮಿಕ್ಕ ಎಲ್ಲಾ ಸಾಮಾನ್ಯ ಮನುಷ್ಯರಿಗೆ ಸೇರತಕ್ಕದ್ದು ಎಂದು ಹೇಳಿಕೆ ನೀಡಿದರು.

https://en.wikipedia.org/wiki/Aam_Aadmi_Party