ವಿಷಯಕ್ಕೆ ಹೋಗು

ಮರುಬಳಕೆ ಉಡಾವಣಾ ವಾಹನ-ಆರ್‌ಎಲ್‌ವಿ–ಟಿಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಠಿಕೆ

[ಬದಲಾಯಿಸಿ]
ಮರುಬಳಕೆ ಉಡಾವಣಾ ವಾಹನ-ಆರ್‌ಎಲ್‌ವಿ–ಟಿಡಿ
India
  • ೫೫೫೫೫೫೫೫೫೫೫೫೫೫೫೫೫೫೫೫೫೫೫೫
  • ಉಡಾವಣಾ ಸ್ಥಳ = ಸತೀಶ’ಧವನ್ ಬಾಹ್ಯಾಕಾಶ ಕೇಂದ್ರ, ಶ್ರೀಹರಿಕೋಟಾ; ಆಂಧ್ರ
  • ಉಡಾವಣಾ ದಿನ = 23-5-2016 ಸೋಮವಾರ
  • ಉಡಾವಣಾ ಸಮಯ = ಬೆಳಿಗ್ಗೆ 7ಗಂಟೆ
  • ಉಡಾವಣೆ ಕ್ರಮ = 65 ಕಿಮೀ.ಎತ್ತರ ಜಿಗಿತ-ಮರುಪ್ರವೇಶ
  • ಹಂತ = ಪ್ರಾಥಮಿಕ ಪ್ರಯೋಗ
  • ಉದ್ದ = 6.5 ಮೀಟರ್
  • ತೂಕ = 1.7 ಟನ್ (17 ಟ್ವಿಂಟಲ್)
  • ಕಾರ್ಯಾಚರಣೆಯ ಅವಧಿ= 770 ಸೆಕೆಂಡು (13 ನಿಮಿಷ)
  • ವೇಗ = ಶಬ್ದ ವೇಗಕ್ಕಿಂತ ಹೆಚ್ಚು
  • ಪುನರ್ಪವೇಶ ಉಡಾವಣೆ ಸ್ಥಳದಿಂದ = 450ಕಿಮೀ. ದೂರದಲ್ಲಿ ಬಂಗಾಳ ಕೊಲ್ಲಿ
  • ಫಲಿತಾಂಶ = ಯಶಸ್ವಿ
  • ಮುಖ್ಯ ಉದ್ದೇಶ = ಭೂಪ್ರದಕ್ಷಿಣ ಉಪಗ್ರಹ ಕಳಿಸುವುದು.
  • ಇತರೆ ಉದ್ದೇಶ 1 = ಮರು ಪ್ರವೇಶ ವ್ಯವಸ್ಥೆ
  • ಇತರೆ ಉದ್ದೇಶ 2 = ವಾಹಕದ ಮರುಬಳಕೆ
  • ಇತರೆ ಉದ್ದೇಶ 3 = ವೆಚ್ಚ ಉಳಿತಾಯ
  • ಪರೀಕ್ಷೆ ಮಾದರಿ = ಆರು ಪಟ್ಟು ಚಿಕ್ಕದು
  • ತಯಾರಿಕೆ ಸ್ಥಳ =ವಿಕ್ರಮ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ ತಿರುವನಂತಪುರ
  • ತಯಾರಿಕೆಯ ಕಾಲ = 5 ವರ್ಷ
  • ಕರ್ತರು-ವಿಜ್ಞಾನಿ +ಇಂಜನೀಯರುಗಳು = 600 ಬಾಹ್ಯಾಕಾಶ ಕೇಂದ್ರ +200 ಇತರೆ ಸಂಸ್ಥೆ
  • ವೆಚ್ಚ =95 ಕೋಟಿ
  • ಮುಂದಿನ ಉಡಾವಣೆ ಅವಧಿ = ಸುಮಾರು 15 ವರ್ಷ
.
  • ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಕಳುಹಿಸಲು ಮರುಬಳಕೆಯ ರಾಕೆಟ್‌ ಅಭಿವೃದ್ಧಿಯ ನಿಟ್ಟಿನಲ್ಲಿ ಇಸ್ರೊ ಒಂದು ಹೆಜ್ಜೆ ಮುಂದಿಟ್ಟಿದೆ. ‘ಸ್ವದೇಶಿ’ ಎಂಬ ಹೆಸರಿನ ಮರುಬಳಕೆಯ ಉಡಾವಣಾ ವಾಹನದ ಪರೀಕ್ಷೆ 23-5-2016 ಸೋಮವಾರ ಯಶಸ್ವಿಯಾಗಿದೆ.(Re-usable Launch Vehicle - Technology Demonstrator (RLV-TD)
  • ಆಂಧ್ರ ಪ್ರದೇಶ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಬೆಳಗ್ಗೆ 7 ಗಂಟೆಗೆ ಮರುಬಳಕೆ ಉಡಾವಣಾ ವಾಹನವನ್ನು (ರಿಯೂಸೆಬಲ್‌ ಲಾಂಚ್‌ ವೆಹಿಕಲ್‌ –ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌– ಆರ್‌ಎಲ್‌ವಿ–ಟಿಡಿ) ಹಾರಿಸಲಾಯಿತು. 65 ಕಿ.ಮೀ. ಎತ್ತರಕ್ಕೆ ಹಾರಿದ ವಾಹನವು ಬಾಹ್ಯಾಕಾಶ ತಲುಪಿತು. ನಂತರ ಅದು ವಾತಾವರಣಕ್ಕೆ ಹಿಂದಿರುಗಿ ಬಂಗಾಳ ಕೊಲ್ಲಿಗೆ ಯೋಜಿತ ಕಾಯ‍ಕ್ರಮದಂತೆ ವಾಹನವು ಶ್ರೀಹರಿಕೋಟಾದಿಂದ 450 ಕಿ.ಮೀ ದೂರದಲ್ಲಿ ನಿಗದಿತ ಸ್ಥಳದಲ್ಲಿ ಬಿದ್ದಿದೆ.ನೀರಿನ ಮೇಲೆ ಅಪ್ಪಳಿಸಿದ ರಭಸಕ್ಕೆ ವಾಹನವು ಛಿದ್ರವಾಗಿದೆ. ವಾಹನವು ನೀರಿಗೆ ಬಿದ್ದಾಗ ತೇಲುವ ರೀತಿಯಲ್ಲಿ ವಿನ್ಯಾಸ ಮಾಡದಿರುವುದು ಇದಕ್ಕೆ ಕಾರಣ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಉಡಾವಣಾ ವಾಹನಕ್ಕೆ ಯಾವುದೇ ಹಾನಿ ಆಗದ ರೀತಿಯಲ್ಲಿ ವಾಹನವನ್ನು ಇಳಿಸುವ ಪರೀಕ್ಷೆ ಮುಂದಿನ ಹಂತಗಳಲ್ಲಿ ನಡೆಯಲಿದೆ. ಶ್ರೀಹರಿಕೋಟಾದ ಉಡಾವಣಾ ಕೇಂದ್ರ ಮತ್ತು ಹಡಗೊಂದರಲ್ಲಿ ಸ್ಥಾಪಿಸಲಾಗಿದ್ದ ಕೇಂದ್ರದ ಮೂಲಕ ಹಾರಾಟದ ಮೇಲೆ ಪರಿಶೀಲನಾ ವ್ಯವಸ್ಥೆ ಇರಿಸಲಾಗಿತ್ತು. ಒಟ್ಟು 770 ಸೆಕೆಂಡ್‌ನಲ್ಲಿ ಕಾರ್ಯಾಚರಣೆ ಮುಕ್ತಾಯಗೊಂಡಿತು.

ಇಸ್ರೊ ಜೊತೆಗೆ ಎನ್‌ಎಎಲ್‌ ಪಾತ್ರ

[ಬದಲಾಯಿಸಿ]
  • ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮರು ಬಳಕೆ ಉಡಾವಣಾ ವಾಹನದ ಯಶಸ್ಸಿನಲ್ಲಿ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ(ಎನ್‌ಎಎಲ್‌) ಮಹತ್ವದ ಪಾತ್ರ ವಹಿಸಿದೆ. ಉಡಾವಣಾ ವಾಹನದ ಏರೋ ಡೈನಮಿಕ್‌ ಮತ್ತು ಶಬ್ದ ಪರೀಕ್ಷೆಯನ್ನು ಸಿಎಸ್‌ಐಆರ್‌- ಎನ್‌ಎಎಲ್‌ ಪ್ರಯೋಗಾಲಯದಲ್ಲಿ ಕೈಗೊಳ್ಳಲಾಗಿದೆ. ಉಡಾವಣಾ ವಾಹನವು ನಭಕ್ಕೆ ಚಿಮ್ಮುವ ಸಂದರ್ಭದಲ್ಲಿ ಗಾಳಿಯನ್ನು ಸೀಳಿ ಮುನ್ನುಗುವಾಗ ಅದರ ಶಬ್ದ ಮತ್ತು ಭಾರದ ಸಾಮರ್ಥ್ಯವನ್ನು ಏಕೀಕೃತಗೊಳಿಸುವ ದಿಸೆಯಲ್ಲಿ ಪರೀಕ್ಷೆನಡೆಸಲಾಗುವುದು. ವಾಹನದ ವಿನ್ಯಾಸವು ವೇಗೋತ್ಕರ್ಷಕ್ಕೆ ಅಡ್ಡಿ ಉಂಟಾಗುವಂತಿದ್ದರೆ ಅದನ್ನು ಬದಲಿಸಲು ಅವಕಾಶವಿರುತ್ತದೆ. ಈ ಪರೀಕ್ಷೆ 1.2 ಮೀಟರ್‌ ವಿಂಡ್‌ ಟನೆಲ್‌ನಲ್ಲಿ (ಗಾಳಿಯ ಸುರಂಗ) ನಡೆಸಲಾಗುತ್ತದೆ. ಭಾರತೀಯ ಬಾಹ್ಯಾಕಾಶ ಯೋಜನೆಗಿರುವ ಅತ್ಯಂತ ಮಹತ್ವ ಪರೀಕ್ಷಾ ಕೇಂದ್ರ ಇದು. ಇಲ್ಲಿ ಗಾಳಿಯ ವೇಗವು ಶಬ್ದದ ವೇಗಕ್ಕಿಂತ ನಾಲ್ಕು ಪಟ್ಟು ಅಧಿಕವಾಗಿರುತ್ತದೆ ಎಂದು ಸಿಎಸ್‌ಐಆರ್‌- ಎನ್‌ಎಎಲ್‌ ನಿರ್ದೇಶಕ ಶ್ಯಾಮ್‌ ಚೆಟ್ಟಿ ತಿಳಿಸಿದ್ದಾರೆ. ಈಗ ಪರೀಕ್ಷಿಸಿರುವುದು ಚಿಕ್ಕ ಮಾದರಿ. ಅಂತಿಮ ಹಂತದಲ್ಲಿ ಅದು ಈಗಿನದಕ್ಕಿಂತ ಆರು ಪಟ್ಟು ದೊಡ್ಡದಿರುತ್ತದೆ. ಅದಕ್ಕೆ ವಾತಾವರಣ ಮರುಪ್ರವೇಶದ ಸಮಯದಲ್ಲಿ ಅತಿ ಉಷ್ಣತೆ ತಡೆಯಲು ರಕ್ಷಣಾಕವಚ ಹಾಕಲಗುತ್ತದೆ.

[]

ಬಹು ಉದ್ದೇಶಿತ ಯೋಜನೆ

[ಬದಲಾಯಿಸಿ]
  • ಇಸ್ರೋದ ಬಹುಉದ್ದೇಶಿತ ದೇಶೀ ನಿರ್ಮಿತ ಬಾಹ್ಯಾಕಾಶ ನೌಕೆ ಆರ್ ಎಲ್ ವಿ-ಟಿಡಿ ಪರೀಕ್ಷಾರ್ಥ ಪ್ರಯೋಗ ಪೂರ್ಣ ಯಶಸಸ್ಸು ಕಂಡಿದೆ. 80ರ ದಶಕದಿಂದ ಸ್ಪೇಸ್‌ ಶಟಲ್‌ಗ‌ಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ನಿರ್ಮಾಣಕ್ಕೆ ಬಳಸಿಕೊಂಡಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, 2011ರಲ್ಲಿ ಅವುಗಳನ್ನು ನಿವೃತ್ತಿಗೊಳಿಸಿತ್ತು. ಅದಾದ ಆರು ವರ್ಷಗಳ ಬಳಿಕ ಭಾರತ ಪ್ರಾಯೋಗಿಕ ಪರೀಕ್ಷೆಯೊಂದನ್ನು ಕೈಗೊಂಡಿದ್ದು, ಪ್ರಯೋಗಕ್ಕಾಗಿ ಇಸ್ರೋ ಸಿದ್ಧಪಡಿಸಿದ್ದ ಮಾದರಿ ಒಂದು ಎಸ್‌ಯುವಿ ಕಾರಿನ ಗಾತ್ರದಷ್ಟಿದೆ.
  • ಮರುಬಳಕೆಯ ಬಾಹ್ಯಾಕಾಶ ನೌಕೆ (ಆರ್‌ಎಲ್‌ವಿ-ಟಿಡಿ)ಯ ಆರಂಭಿಕ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸುವುದರ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಹೊಸ ದಾಖಲೆ ಬರೆದಿದೆ. ವಿಶ್ವಾದ್ಯಂತ ಉಪಗ್ರಹ ಉಡಾವಣೆ, ಬಾಹ್ಯಾಕಾಶ ಕಾರ್ಯಕ್ರಮಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಮರುಬಳಕೆ ರಾಕೆಟ್‌/ಬಾಹ್ಯಾಕಾಶ ನೌಕೆಯ ಆವಿಷ್ಕಾರದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇಸ್ರೋದ ಪ್ರಯತ್ನ ಅಗ್ರಪಂಕ್ತಿಯ ರಾಷ್ಟ್ರಗಳ ಸಾಲಿನಲ್ಲಿ ಭಾರತವೂ ನಿಲ್ಲುವಂತೆ ಮಾಡಿದೆ[][]

ಹಿನ್ನಲೆ

[ಬದಲಾಯಿಸಿ]
  • ಮಿತವ್ಯಯ:ಅಮೆರಿಕ, ರಷ್ಯಾ ಸೇರಿದಂತೆ ವಿವಿಧ ದೇಶಗಳ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ಮರುಬಳಕೆಯ ರಾಕೆಟ್‌ ಬಳಕೆ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿವೆ. ಒಂದು ವರ್ಷಕ್ಕೆ ಸುಮಾರು 400/500 ಉಪಗ್ರಹ ಉಡ್ಡಯನಗಳು ವಿಶ್ವಾದ್ಯಂತ ನಡೆಯುತ್ತಿವೆ. ಇದಕ್ಕೆ ಪ್ರತಿ ಬಾರಿಯೂ ರಾಕೆಟ್‌ ಬಳಸುವುದು ತೀರ ವೆಚ್ಚದಾಯಕ. ಭಾರತ ಬಳಸುವ 1 ಪಿಎಸ್‌ಎಲ್‌ವಿ ರಾಕೆಟ್‌ ವೆಚ್ಚ 100 ಕೋಟಿ ರೂ. ಇದು ಒಂದು ಉಡ್ಡಯನಕ್ಕೆ ಸೀಮಿತ. ಪ್ರತಿ ಬಾರಿ ಇಂತಹ ರಾಕೆಟ್‌ಗಳನ್ನು ತಯಾರು ಮಾಡುತ್ತಲೇ ಇರಬೇಕು. ಇದರ ಬದಲಿಗೆ ಮರುಬಳಕೆಯ ರಾಕೆಟ್‌/ವ್ಯೋಮ ನೌಕೆಯಾದರೆ ವೆಚ್ಚ ಇಷ್ಟೇ ಅದರೂ ಮತ್ತೆ ಮತ್ತೆ ಬಳಕೆ ಮಾಡಬಹುದು. ಇದು ಉಪಗ್ರಹ ಉಡ್ಡಯನ ಮಾಡುವ ಸಂಸ್ಥೆಗೆ/ಸರ್ಕಾರಕ್ಕೆ ಕಡಿಮೆ ವೆಚ್ಚ ತರುತ್ತದೆ. ಪ್ರತಿ ಉಪಗ್ರಹ ಉಡ್ಡಯನ ವೆಚ್ಚ ರಾಕೆಟ್‌ಗಳ ಮೇಲೆ, ಉಪಗ್ರಹದ ಭಾರದ ಮೇಲೆ ಮತ್ತು ಕಟ್ಟಬೇಕಾದ ವಿಮೆ ಕಂತಿನ ಮೇಲೆ ನಿರ್ಧಾರವಾಗುತ್ತದೆ. ಅದರಂತೆ ಭಾರತದ ಪಿಎಸ್‌ಎಲ್‌ವಿ ರಾಕೆಟ್‌ ವಿಚಾರಕ್ಕೆ ಬಂದರೆ ಒಂದು ಕೆ.ಜಿ.ಗೆ ಸುಮಾರು 13 ಲಕ್ಷ ರೂ.ಗಳಷ್ಟು ವೆಚ್ಚವಾಗುತ್ತದೆ. (ಅಮೆರಿಕದ ಸ್ಪೇಸ್‌ ಎಕ್ಸ್‌ ಕಂಪನಿ ಫಾಲ್ಕನ್‌ ಹೆವಿ ರಾಕೆಟ್‌ ಉಡ್ಡಯನಕ್ಕೆ ಕೆ.ಜಿ.ಗೆ 14.96 ಲಕ್ಷ ರೂ. ವಿಧಿಸುತ್ತದೆ) ಈ ವೆಚ್ಚವನ್ನು ಅರ್ಧಕ್ಕಿಳಿಸಲು ಉಪಾಯ ಎಂದರೆ ಮರುಬಳಕೆಯ ರಾಕೆಟ್‌ಗಳೇ. ಈ ಮೂಲಕ ಕೆ.ಜಿ. ಒಂದರ ವೆಚ್ಚ 3.4 ಲಕ್ಷ ರೂ.ಗಳಿಗೆ ಇಳಿಸಬಹುದು ಎಂಬ ಸ್ಥೂಲ ಲೆಕ್ಕಾಚಾರವಿದೆ.

ಮರುಬಳಕೆಯ ರಾಕೆಟ್‌ ತಂತ್ರಜ್ಞಾನ

[ಬದಲಾಯಿಸಿ]
  • ರಾಕೆಟ್‌ ತಂತ್ರಜ್ಞಾನವೇ ಕ್ಲಿಷ್ಟ.ಮರುಬಳಕೆಯ ರಾಕೆಟ್‌ ತಂತ್ರಜ್ಞಾನ ಇನ್ನೂ ಕಷ್ಟದ್ದು. ಅದರಲ್ಲಿ ಯಶಸ್ವಿಯಾಗಲು ಸುಮಾರು 15 ವರ್ಷಗಳೇ ಬೇಕು. ಅಂತರಿಕ್ಷಕ್ಕೆ ತಲುಪಿದ ಬಳಿಕ ಭೂಮಿಗೆ ವಾಪಸ್ಸಾಗಲು ಬೂಸ್ಟರ್‌ ಗಳನ್ನು ಚಾಲನೆಗೊಳಿಸುವ ತಂತ್ರಜ್ಞಾನ ಬೇಕು. ವಾಪಾಸಾಗುವಾಗ ವಾಹನವು ಶಬ್ದದ ವೇಗಕ್ಕಿಂತ ನಾಲ್ಕು ಪಟ್ಟು ವೇಗದಲ್ಲಿ ವಾಪಸಾಗುತ್ತದೆ. ಔಆಹನವು ವಾಯುಮಂಡಲದ ಘರ್ಷಣೆಗೆ ಸುಟ್ಟು ಬೂದಿಯಾಗುವುದು. ಹೀಗೆ ಘರ್ಷಣೆಯ ಶಾಖವನ್ನು ತಡೆಯುವ ವ್ಯವಸ್ಥೆ ವಿಫಲವಾಗಿ ಅಮೇರಿಕಾದ ನೌಕೆ ಸುಟ್ಟು ಅದರಲ್ಲಿದ್ದ ಅಮೇರಿಕಾಯಾತ್ರಿಗಳು ಮತ್ತು ಭಾರತದ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಮರಣಹೊಂದಿದರು. ಅದರಿಂದ ಹಿಂತಿರುಗುವಾಗ ವಾಹನದ ಏರೋಡೈನಾಮಿಕ್‌ ಪರಿಸ್ಥಿತಿಯ ಪರೀಕ್ಷೆ ನಡೆದಿದೆ. ಉಡಾವಣಾ ನಿಯಂತ್ರಣದ ಜೊತೆಗೆ ವಾತಾವರಣವನ್ನು ಪ್ರವೇಶಿಸುವಾಗ ಉಂಟಾಗುವ ಅತಿಯಾದ ಶಾಖವನ್ನು ತಾಳುವ ಪರೀಕ್ಷೆ ಸಹ ಪರಿಪೂರ್ಣವಾಗಿದೆ.ಶಾಖ ತಾಳಲು 600 ಸಿಲಿಕಾ ಟೈಲ್‌ಗಳನ್ನು ವಾಹನಕ್ಕೆ ಅಳವಡಿಸಲಾಗಿತ್ತು. ಅತಿ ಶಾಖವನ್ನು ಎದುರಿಸುವ ವಾಹನದ ಮೂತಿಗೆ ಇಂಗಾಲದ ಮಿಶ್ರಣದ ಲೇಪನ ಬಳಿಯಲಾಗಿತ್ತು.ಈ ಪರೀಕ್ಷೆಗಳಲ್ಲೂ ವಾಹಕ ಸಂಪೂರ್ಣವಾಗಿ ಯಶಸ್ವಿಯಾಗಿದೆ.

ಕಡಿಮೆ ವೆಚ್ಚ

[ಬದಲಾಯಿಸಿ]
  • ಈ ಕ್ಲಿಷ್ಟಕರ ತಂತ್ರಜ್ಞಾನದ ಜೊತೆಗೆ ವಾಹನದ ನಿಯಂತ್ರಣ ವ್ಯವಸ್ಥೆಯೂ ಸಂಪೂರ್ಣವಾಗಿ ಇಸ್ರೊ ವಿಜ್ಞಾನಿಗಳ ಕೈವಶವಅಗಿದೆ. ಈ ವಿಧಾನ ಇಸ್ರೊಗೆ ಹೊಸದು. ‘ಸ್ವದೇಶಿ’ ಸಫಲವಾದ್ದರಿಂದ ಅತಿ ಕಡಿಮೆ ಖರ್ಚಿನಲ್ಲಿ ಉಪಗ್ರಹಗಳನ್ನು ಗಗನಕ್ಕೆ ಸೇರಿಸುವ ತಂತ್ರಜ್ಞಾನದ ಮೊದಲ ಪರೀಕ್ಷೆಗೆ ಯಶಸ್ಸು ದೊರಕಿದೆ.ಉಪಗ್ರಹ ಉಡಾವಣೆಗೆ ಮೊದಲ ಆದ್ಯತೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಕಿರಣ್‌ಕುಮಾರ್‌ ಹೇಳಿದ್ದಾರೆ. ಕಡಿಮೆ ವೆಚ್ಚದ ಉಡಾವಣಾ ತಂತ್ರಜ್ಞಾನವನ್ನು ಇಸ್ರೊ ವಶಪಡಿಸಿಕೊಳ್ಳಲಿದೆ ಎಂದು ವಿಕ್ರಂ ಸಾರಾಭಾಯಿ ಕೇಂದ್ರದ ನಿರ್ದೇಶಕ ಕೆ.ಶಿವನ್‌ ಹೇಳಿದ್ದಾರೆ. ಇದು ಪೂರ್ಣ ಯಶಸ್ವಿಯಾದರೆ, „ಭಾರತದ ಭವಿಷ್ಯದ ಉಡಾವಣೆಯ ವೆಚ್ಚ ವಿಪರೀತವಾಗಿ ತಗ್ಗುವುದು; „ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಡಿಮೆ ಬೆಲೆಗೆ ಉಪಗ್ರಹ ಉಡ್ಡಯನಗಳ ಗುತ್ತಿಗೆ ಪಡೆಯಬಹುದು; „ಒಂದು ಬಾರಿ ಮರುಬಳಕೆ ರಾಕೆಟ್‌/ನೌಕೆ ವಿನ್ಯಾಸ ತಂತ್ರಜ್ಞಾನ ಒಲಿದರೆ, ರಾಕೆಟ್‌ ಗಳಿಗಿಂತ ಶೇ.80ರಷ್ಟು ಕಡಿಮೆ ವೆಚ್ಚದಲ್ಲಿ ನಿರ್ಮಾಣ ಸಾದ್ಯವಾಗುವುದು. ರಾಕೆಟ್‌ ತಯಾರಿಕೆಯಲ್ಲಿ ಬಹಳಷ್ಷ್ಟು ಮಾನವ ಸಂಪನ್ಮೂಲ ಉಳಿಕೆಯಾಗುವುದು.

ಮುಂದಿನ ಯೊಜನೆಗಳು

[ಬದಲಾಯಿಸಿ]
  • ಈಗ ಅಮೆರಿಕ, ರಷ್ಯಾ, ಫ್ರಾನ್ಸ್ ಮತ್ತು ಜಪಾನ್‌ ಬಳಿ ಮರುಬಳಕೆ ವಾಹನದ ತಂತ್ರಜ್ಞಾನವಿದೆ. ಆದರೆ ಈಗ 2011ರಿಂದ ಗಗನನೌಕೆಯ ಬಳಕೆಯನ್ನು ಅಮೆರಿಕ ಮಾಡುತ್ತಿಲ್ಲ. ಇಸ್ರೊದ ಈ ಬಗೆಯ ಮರುಬಳಕೆ ವಾಹನವನ್ನು ವಾಣಿಜ್ಯ ಬಳಕೆ ಉಪಯೋಗಿಸಲು ಅನೇಕ ಹಂತದ ಪರೀಕ್ಷೆಗಳು ಅತ್ಯವಅಗಿದೆ.
  • ಭವಿXfಯದಲ್ಲಿ ವಾಹನವನ್ನು ನೆಲದ ಮೇಲೆ ವಿಮಾನದ ರೀತಿ ಇಳಿಸುವ ಯೋಜನೆಯೂ ಇದೆ. ಇದಕ್ಕೆ ಐದು ಕಿ.ಮೀ. ಉದ್ದದ ರನ್‌ವೇ ಅಗತ್ಯ. ಅಂತಹ ರನ್‌ವೇ ನಿರ್ಮಾಣ ಆಗಬೇಕಿದೆ. ಮರುಬಳಕೆ ವಾಹನದ ತಂತ್ರಜ್ಞಾನದ ಅಳವಡಿಸಿಕೊಳ್ಳದಿದ್ದರೆ ಉಪಗ್ರಹ ಉಡಾವಣೆಯಲ್ಲಿ ವೆಚ್ಚ ಹೆಚ್ಚಾಗುತ್ತದೆ. ಉಪಗ್ರಹ ಉಡಾವಣೆಗೆ ವಿದೇಶಗಳಿಂದ ಬೇಡಿಕೆ ಇದೆ. ಅದನ್ನು ಇಸ್ರೊ ಕಳೆದುಕೊಳ್ಳಬೇಕಾಗುವುದು. ಭಾರತದ ಮುಂದಿನ ಅನೇಕ ಬಾಹ್ಯಾಕಾಶ ಕಾರ್ಯಕ್ರಮಗಳು ಈ ಮರುಬಳಕೆ ಉಡಾವಣಾ ತಂತ್ರಜ್ಞಾನವನ್ನು ಆಧರಿಸಿವೆ. ದಕ್ಷಿಣ ಆಫ್ರಿಕಾದ ಸ್ಪೇಸ್ ಎಕ್ಸ್ ನಂತಹ ಖಾಸಗಿ ಕಂಪೆನಿಗಳು ಸಾಧಿಸಿರುವ ಸಾಧನೆ ಜೊತೆಗೂ ಭಾರತ ಸ್ಪರ್ಧೆಯನ್ನು ಎದುರಿಸಬೇಕಾಗಿದೆ.
  1. ಮಂಗಳ ಗ್ರಹದ ಅನ್ವೇಷಣೆ-|-
  2. ಮಂಗಳಯಾನ-|-
  3. ಮಹಾ ಸ್ಪೋಟ-|-
  4. ಮೆಸ್ಸೆಂಜರ್ ಗಗನನೌಕೆ-|-
  5. ಲೂನ ಕಾರ್ಯಕ್ರಮ-|-
  6. ವಾತಾವರಣದಲ್ಲಿ ಮರುಪ್ರವೇಶಿಸುವಿಕೆ-
  7. ಸೃಷ್ಟಿ ಮತ್ತು ವಿಜ್ಞಾನ-|-
  8. ಹಬಲ್ ದೂರದರ್ಶಕ-|-
  9. ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ , , ಕೆ ರಾಧಾಕೃಷ್ಣನ್ , ಜಿಸ್ಯಾಟ್ -14
  10. ಜಿಎಸ್‌ಎಲ್‌ವಿಎಂ-3 ರಾಕೆಟ್‌ ಉಡಾವಣೆ

ಉಲ್ಲೇಖ

[ಬದಲಾಯಿಸಿ]
  1. www.prajavani.net-24/05/2016ಇಸ್ರೊದ ‘ಸ್ವದೇಶಿ’ ವಾಹನ ಪರೀಕ್ಷೆ. ಯಶಸ್ವಿ[[೧]]
  2. udayavani[[https://web.archive.org/web/20160527040034/http://www.udayavani.com/kannada/news/specials/149505/reusable-launch-system#I6jtAMlxsVEATcls.99 Archived 2016-05-27 ವೇಬ್ಯಾಕ್ ಮೆಷಿನ್ ನಲ್ಲಿ.]]
  3. kannadaprabha.com[[೨]]