ಕಾಶಿಬದನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಶಿಬದನೆ ಸೊಲೆನೇಸಿ ಎಂಬ ಕುಟುಂಬಕ್ಕೆ ಸೇರಿದ ಸಸ್ಯ. ಇದರ ಕಾಯಿಗಳು ಹೆಚ್ಚ್ಚಿನ ಪ್ರಮಾಣದಲ್ಲಿ ಗರ್ಭನಿರೋಧಕ ಡಯೋಸ್ಜಿನಿನ್ ತಯಾರಿಕೆಯಲ್ಲಿ ಮೂಲವಸ್ತುವಾಗಿ ಬಳಸಬಹುದಾದ ಸಾರಜನಕ ಸಂಯುಕ್ತ ಗ್ಲೈಕೊಆಲ್ಕಲಾಯಿಡ್ ಸೊಲ್ಯಾಸಿಡಿನ್ ಹೊಂದಿವೆ. ಬೇಸಾಯ ಮಾಡಲು ಕಷ್ಟ ಸಾಧ್ಯವಾದ ಡಯೋಸ್ಜಿನಿನ್ ನೀಡಬಲ್ಲ ಮತ್ತೊಂದು ಸಸ್ಯವಾದ ಡಯಾಸ್ಕೋರಿಯ(Diascoria) ಸಸ್ಯ. ಈ ಸಸ್ಯವನ್ನು ಸುಲಭವಾಗಿ ಕೃಷಿ ಮಾಡಲು ಸಾಧ್ಯವಿದೆ.

ಬೆಳೆಯ ವ್ಯಾಪ್ತಿ[ಬದಲಾಯಿಸಿ]

ಭಾರತಉಪಖಂಡದಲ್ಲಿ ಸಮುದ್ರ ಮಟ್ಟದಿಂದ ೨೦೦೦ಮೀ. ಎತ್ತರದ ಪ್ರದೇಶಗಳಲ್ಲಿ ಹರಡಿದ್ದು ಅಸ್ಸಾಂ ಮತ್ತು ಮಣಿಪುರದ ಖಾಸಿ, ಜೈಂಟಿಯ ಮತ್ತು ನಾಗಾ ಬೆಟ್ಟ ಪ್ರದೇಶಗಳಲ್ಲಿ ವ್ಯಾಪಿಸಿದೆ.ಸಿಕ್ಕಿಂ, ಪಶ್ಚಿಮ ಬಂಗಾಳ,ಒಡಿಶಾ, ಗಂಗಾ ನದಿಯ ಪ್ರಸ್ಥಭೂಮಿ,ನೀಲಗಿರಿಯಿಂದ ೧೬೦೦ಮೀ, ಎತ್ತರದ ಪ್ರದೇಶಗಳಲ್ಲಿ, ಮಧ್ಯ ಭಾರತವಲ್ಲದೆ ಬರ್ಮಾ ಮತ್ತು ಚೈನಾ ದೇಶಗಳಲ್ಲಿಯೂ ವ್ಯಾಪಿಸಿದೆ. ಇದನ್ನು ಮಹಾರಾಷ್ಟ್ರದ ಅಂಕೋಲ-ಜಲಂಗಾವ್ ಪ್ರದೇಶದಲ್ಲಿ ಸುಮಾರು ೩೦೦೦ಹೆಕ್ಟೇರು ವಿಸ್ತೀರ್ಣದಲ್ಲಿ ಬೆಳೆಸಲಾಗುತ್ತದೆ.

ಸಸ್ಯ ವಿವರಣೆ[ಬದಲಾಯಿಸಿ]

ಇದು ದೃಡವಾದ ಕೊಂಬೆಗಳನ್ನು ಹೊಂದಿದ್ದು ೦.೭೫-೧.೫ಮೀ. ಎತ್ತರ ಬೆಲೆಯುವ ಹೊದರು.ಇದರ ಕಾಂಡದ ಮೇಲೆ ಮುಳ್ಳುಗಳಿದ್ದು ಎಲೆಗಳು ಅಂಡಾಕಾರವಾಗಿ ಅಥವಾ ಸೀಳಿದ್ದು ಎರಡೂ ಬದಿಯಲ್ಲಿ ಮುಳ್ಳುಗಳಿರುತ್ತದೆ. ಹೂಗಳು ಬಿಳಿ,ಕಾಯಿಗಳು ಹಣ್ಣಾದಾಗ ಹಳದಿ ಅಥವಾ ಹಸಿರು ಮಿಶ್ರಿತ ಹಳದಿ ಬಣ್ಣ ಹೊಂದಿರುತ್ತದೆ. ಬೀಜಗಳು ಸಣ್ಣಗಿದ್ದು ಅಂಟುಲೋಳೆಯಲ್ಲಿರುತ್ತವೆ. ಇದರ ವರ್ಣ ತಂತುಗಳ ಸಂಖ್ಯೆ 2n =24.

ತಳಿಗಳು[ಬದಲಾಯಿಸಿ]

  • ಆರ್.ಆರ್.ಎಲ್ ೨೦-೨

ಈ ತಳಿಯನ್ನು ವರ್ಷಕ್ಕೆ ಎರಡು ಬೆಳೆಯಂತೆ ವರ್ಷಪೂರ್ತಿ ಬೆಳೆಯಬಹುದು. ಹೆಕ್ಟೇರಿಗೆ ೬-೭ ಟನ್ ಒಣಗಿದ ಕಾಯಿ ಸಿಗುತ್ತದೆ. ಈ ಕಾಯಿಗಳಿಂದ ೪೨-೪೫ ಕಿ.ಗ್ರಾಂ ಸೊಲ್ಯಾಸಿಡಿನ್ ದೊರೆಯುತ್ತದೆ.

  • ಆರ್,ಆರ್.ಅಲ್(ಬಿ) ವೈ೧೪

ಈ ಕಾಯಿಗಳಲ್ಲಿ ಶೇ.೨.೭ರಷ್ಟು ಪ್ರಮಾಣದಲ್ಲಿ ಸೊಲ್ಯಾಸಿಡಿನ್ ಹೊಂದಿದೆ. ಹೆಕ್ಟೇರಿಗೆ ೧೦ಟನ್ ಒಣಗಿದ ಕಾಯಿಗಳ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ'

  • ಆರ್.ಆರ್.ಎಲ್.ಜಿ.ಎಲ್೬

ಇದರಲ್ಲಿ ಮುಳ್ಳುಗಳಿರುವುದಿಲ್ಲ. ಇದು ಆರ್.ಆರ್.ಎಲ್ ೨೦ ತಳಿಗೆ ಸಮನಾಗಿದ್ದು ಹೆಕ್ಟೇರಿಗೆ ೮೦ಕಿ.ಗ್ರಾಮ್ ಪ್ರಮಾಣದಂತೆ ಹೆಚ್ಚು ಸಾರಜನಕ ಕೊಡಬೇಕಾಗುತ್ತದೆ.

ಹವಾಗುಣ ಮತ್ತು ಮಣ್ಣು[ಬದಲಾಯಿಸಿ]

ಇದು ಶುಷ್ಕ ಪರಿಸ್ಥಿತಿ ಮತ್ತು ಹಲವಾರು ಬಗೆಯ ಹವಾಮಾನಕ್ಕೆ ಹೊಂದಿಕೊಂಡು ಬೆಳೆಯುತ್ತದೆ. ಎಲ್ಲಾ ರೀತಿಯ ಮಣ್ಣಿನಲ್ಲಿ ಬೆಳೆಯಬಹುದಾಗಿದ್ದು ಲ್ಯಾಟರೈಟ್ ಮಣ್ಣು ಹೆಚ್ಚು ಸೂಕ್ತ. ಜೇಡಿ ಮಣ್ಣಿಗೆ ಇದು ಹೊಂದುವುದಿಲ್ಲ.

ಬಿತ್ತನೆ ಸಮಯ[ಬದಲಾಯಿಸಿ]

ಉಷ್ಣತೆ ಹಗಲಿನ ಅವಧಿ ಮತ್ತು ನೀರಾವರಿ ಅನುಕೂಲತೆಗಳನ್ನು ನೋಡಿಕೊಂಡು ಜೂನ್‍ನಿಂದ ಅಕ್ಟೋಬರ್‍ವರೆಗೆ ಬಿತ್ತನೆ ಮಾಡಬಹುದು.

ಇಳುವರಿ[ಬದಲಾಯಿಸಿ]

ನೀರಾವರಿ ಆಸರೆಯಲ್ಲಿ ಬೆಳೆದಾಗ ಹೆಕ್ಟೇರಿಗೆ ೪ಟನ್ ಒಣ ಎಲೆ,೧.೫ಟನ್ ಕಾಂಡ ಭಾಗಗಳು ಮತ್ತು ೧.೫ ಟನ್ ಬೇರುಗಳು ಒದಗುವ ಸಾಧ್ಯತೆಯಿದೆ. ಮಳೆ ಆಶ್ರಯದಲ್ಲಿ ಬೆಳೆದಾಗ ೨ಟನ್ ಒಣ ಎಲೆ ಮತ್ತು ೦೭೫ಟನ್ ಕಾಂಡ ಮತ್ತು ಇದೇ ಪ್ರಮಾಣದ ಬೇರುಗಳು ಸಿಗುತ್ತದೆ.[೧]

ಉಲ್ಲೇಖಗಳು[ಬದಲಾಯಿಸಿ]

  1. ಔಷಧೀಯ ಬೆಳೆಗಳ ಬೇಸಾಯ, ಡಾ. ಎ. ಎ. ಫರೂಕಿ, ಶ್ರೀ ಬಿ. ಎಸ್. ಶ್ರೀರಾಮು, ಡಾ. ಕೆ. ಎನ್. ಶ್ರೀನಿವಾಸಪ್ಪ, ಶ್ರೀ ಓ. ಆರ್. ಲಕ್ಷ್ಮಿಪತಯ್ಯ, ಕಾವ್ಯಾಕಲಾ ಪ್ರಕಾಶನ, ಮೊದಲ ಮುದ್ರಣ-೨೦೦೦, ಪುಟ 89