ಸೂಶಿ
ಮೂಲ | |
---|---|
ಪ್ರಾಂತ್ಯ ಅಥವಾ ರಾಜ್ಯ | East Asia |
ವಿವರಗಳು | |
ಮುಖ್ಯ ಘಟಕಾಂಶ(ಗಳು) |
|
ಸೂಶಿ ಅಥವಾ 'ಸುಶಿ' ಎನ್ನುವುದು ಬೇಯಿಸಿದ ವಿನಿಗರ್ ಸೇರಿಸಿದ ಅಕ್ಕಿ ಜೊತೆಗೆ ಇತರ ಪದಾರ್ಥಗಳು, ಹಸಿ ಬೇಯಿಸದ ಕಡಲಾಹಾರ, ತರಕಾರಿಗಳು ಮತ್ತು ಕೆಲವೊಮ್ಮೆ ಉಷ್ಣವಲಯದ ಹಣ್ಣುಗಳನ್ನು ಹೊಂದಿರುವ ಒಂದು ಜಪಾನೀಸ್ ಖಾದ್ಯ. ಸುಶಿಗೆ ಬಳಸುವ ಪದಾರ್ಥಗಳು ಮತ್ತು ಸೂಶಿಯ ಪ್ರಸ್ತುತಿಯ ರೂಪಗಳು ವ್ಯಾಪಕವಾಗಿ ಬದಲಾಗುತ್ತವೆ ಆದರೂ ಎಲ್ಲ ಸೂಶಿ ಸಮಾನವಾಗಿ ಹೊಂದಿರುವ ಪದಾರ್ಥವೆಂದರೆ ವಿನೆಗರ್ ಬೆರೆಸಿದ ಅನ್ನ. ಸೂಶಿಯನ್ನು ಕಂದು ಅಕ್ಕಿ ಅಥವಾ ಬಿಳಿ ಅಕ್ಕಿಯಿಂದ ತಯಾರಿಸಬಹುದು. ಅದನ್ನು ಹಲವುವೇಳೆ ಹಸಿ ಕಡಲಾಹಾರ/ಮಾಂಸದಿಂದ ತಯಾರಿಸಲಾಗುತ್ತದೆ. ಆದರೆ ಸೂಶಿಯ ಕೆಲವು ಸಾಮಾನ್ಯ ವಿಧಗಳು ಬೇಯಿಸಿದ ಪದಾರ್ಥಗಳನ್ನು ಬಳಸುತ್ತವೆ . ಕೆಲವು ಸಸ್ಯಾಹಾರಿ ಸುಶಿ ಪ್ರಕಾರಗಳೂ ಇವೆ.
ಸುಶಿ ತಯಾರಿಕೆ
[ಬದಲಾಯಿಸಿ]Sushi (すし, 寿司, 鮨, 鮓?, pronounced [sɯɕiꜜ] or [sɯꜜɕi] ) ಒಂದು ಜಪಾನೀಸ್ ಸಾಂಪ್ರದಾಯಿಕ ಖಾದ್ಯವಾಗಿದ್ದು ಇದನ್ನು ವಿನೆಗರ್ ಹಾಕಿರುವ ಅಕ್ಕಿ (鮨飯 sushi-meshi?), ಸಕ್ಕರೆ ಮತ್ತು ಉಪ್ಪು ಹಾಕಿ ಹಲವು ತರದ ingredients (ねた neta?) ಪದಾರ್ಥಗಳನ್ನು ಹಾಕಿ ತಯಾರಿಸಲಾಗುತ್ತದೆ. ಇದಕ್ಕೆ ಕಡಲ ಆಹಾರಗಳಾದ ಮೀನು ಇತ್ಯಾದಿ ಹಾಕಬಹುದು. ಇದನ್ನು ಸಸ್ಯಗಳನ್ನು ಅಥವಾ ಹಸಿ ಮಾಂಸವನ್ನು ಹಾಕಿಯೂ ತಯಾರಿಸಬಹುದು. ಕೆಲವರು ಬೇಯಿಸಿದ ಮಾಂಸವನ್ನು ಹಾಕಿಯೂ ತಯಾರಿಸಬಹುದು. ಸುಶಿಯನ್ನು ಬೇರೆ ಬೇರೆ ತರದಲ್ಲಿ ತಯಾರಿಸಬಹುದಾದರೂ ಎಲ್ಲದರಲ್ಲೂ ಇರುವ ಸಾಮಾನ್ಯ ಅಂಶವೆಂದರೆ ವಿನೆಗರ್ ಹಾಕಿರುವ [ಅಕ್ಕಿ]. ಇದನ್ನುshari (しゃり?) ಅಥವಾ sumeshi (酢飯?) ಎನ್ನಲಾಗುತ್ತದೆ.[೧]
ಸುಶಿ ಆವಿಷ್ಕಾರ
[ಬದಲಾಯಿಸಿ]ಈಗ ನಾವು ನೋಡುತ್ತಿರುವ ಸುಶಿ ಪ್ರಕಾರವನ್ನು ಕಂಡುಹಿಡಿದವರು ಹನಯ ಯೋಹಿ ಎಂದು ನಂಬಲಾಗಿದೆ. ಇವರು "ನಿಗಿರಿ ಜುಷಿ" ಎಂಬ ಅಡಿಗೆಯನ್ನು ಕಂಡುಹಿಡಿದರು. ಇದು ಈಗ ಸುಶಿ ಎಂದರೆ ಎಲ್ಲರೂ ಗುರುತಿಸುವ ಪ್ರಕಾರವಾಗಿದೆ. ಇದರಲ್ಲಿ ಕಡಲ ಆಹಾರವಾದ ಮೀನು ಅಥವಾ ಇತರ ಆಹಾರಗಳನ್ನು ಬೇಯಿಸಿದ ವಿನೆಗರ್ ಸೇರಿಸಿದ ಅನ್ನದ ಮೇಲೆ ಇಡಲಾಗುತ್ತದೆ. ಈ ಆವಿಷ್ಕಾರವನ್ನು ೧೮೨೪ ರಲ್ಲಿ ಎಡೋ ಕಾಲದಲ್ಲಿ(೧೬೦೩-೧೮೬೭)ರಲ್ಲಿ ಮಾಡಲಾಯಿತು. ಇದು ಎಡೋ ಕಾಲದ "ಚೋನಿನ್" ವರ್ಗದವರ ಫಾಸ್ಟ್ ಫುಡ್ ಆಗಿತ್ತು.[೨][೩][೪]
ಸುಶಿಯಲ್ಲಿ ಬಳಸುವ ಪದಾರ್ಥಗಳು
[ಬದಲಾಯಿಸಿ]ಸಾಂಪ್ರದಾಯಿಕ ಸುಶಿಯನ್ನು ಮಧ್ಯಮ ಗಾತ್ರದ ಬಿಳಿ ಅಕ್ಕಿಯಲ್ಲಿ ಮಾಡಲಾಗುತ್ತದೆ . ಇದನ್ನು ಕಂದು ಅಕ್ಕಿ ಅಥವಾ ಸಣ್ಣಕ್ಕಿಯಲ್ಲಿಯೂ ಮಾಡಬಹುದು. ಇವೆಲ್ಲಾ ತರದ ಅಕ್ಕಿಗಳು ಜಪಾನಿನಲ್ಲಿ ಸಿಗುವುದರಿಂದ ಇವು ಈ ಸುಶಿಯ ಭಾಗವಾಗಿ ಹೋಗಿವೆ. ಇದರಲ್ಲಿ ಕಡಲ ಆಹಾರಗಳಾದ ಸ್ಕ್ವಿಡ್ ಈಲ್, ಜಪಾನೀಸ್ ಆಂಬರ್ ಜ್ಯಾಕ್, ಸಾಲ್ಮನ್ ಮೀನು, ಟುನಾ ಮೀನು ಅಥವಾ ಏಡಿಗಳನ್ನು ಆಹಾರವಾಗಿ ಹಾಕಲಾಗುತ್ತದೆ. ಸುಶಿಯ ಕೆಲವು ಪ್ರಕಾರಗಳು ಸಸ್ಯಾಹಾರಿ. ಇವುಗಳನ್ನು pickled ginger (gari), wasabi, ಮತ್ತು ಸೋಯಾ ಸಾಸ್ ಜೊತೆಗೆ ಬಡಿಸಲಾಗುತ್ತದೆ. ಮೂಲಂಗಿ ಅಥವಾ pickled daikon (takuan) ಅನ್ನು ಈ ತಿನಿಸಿನ ಮೇಲೆ ಶೃಂಗಾರಕ್ಕಾಗಿ ಹಾಕಲಾಗುತ್ತದೆ.
ಕೆಲವೊಮ್ಮೆ "ಸಶಿಮಿ" ಎನ್ನುವ ಜಪಾನೀಸ್ ಆಹಾರವನ್ನು "ಸುಶಿ" ಎಂದು ತಪ್ಪು ತಿಳಿಯುತ್ತಾರೆ. "ಸಶಿಮಿ"ಯಲ್ಲಿ ತೆಳ್ಳಗೆ ಹೆಚ್ಚಿದ ಮೀನು ಅಥವಾ ಮಾಂಸವನ್ನು ಸುಶಿ ಅನ್ನ ವಿಲ್ಲದೇ ಬಡಿಸಲಾಗುತ್ತದೆ.[೫]
ನರೆಜುಷಿ
[ಬದಲಾಯಿಸಿ]ನರೆಜುಷಿ ಟೆಂಪ್ಲೇಟು:Nihongo3 ಎನ್ನುವ ಅಡಿಗೆಯಲ್ಲಿ ಬೆಳವಣಿಗೆ ಹೊಂದಿದ ಮೀನನ್ನು ಕೊಳೆಸಿದ ಅನ್ನದಲ್ಲಿ ತಿಂಗಳುಗಟ್ಟಲೇ ಇಡಲಾಗುತ್ತದೆ. ಇದು ಜಪಾನೀಸ್ ಅಡಿಗೆಯಲ್ಲಿ ಹಸಿ ಮೀನು ಮತ್ತು ಅನ್ನದ ಬಳಕೆಯ ತುಂಬಾ ಪ್ರಾಚೀನ ಪ್ರಯೋಗ ಎನ್ನಲಾಗಿದೆ. ಇಲ್ಲಿ ಮೀನನ್ನು ಅಕ್ಕಿಯ ವಿನೆಗರ್ , ವಿನೆಗರ್ ಮತ್ತು ಅಕ್ಕಿಯೊಂದಿಗೆ ಕೊಳೆಸಲಾಗುತ್ತದೆ. ಹೀಗೆ ಕೊಳೆಸಿದ ಅಕ್ಕಿಯನ್ನು ನಂತರ ಚೆಲ್ಲಲಾಗುತ್ತದೆ.[೬] Narezushi ಇದನ್ನು honnare, ಎಂದೂ ಕರೆಯಲಾಗುತ್ತದೆ. meaning "fully fermented", as opposed to namanare, meaning "partially fermented", a type of sushi that appeared in the Muromachi period.[೭]
ಉಲ್ಲೇಖಗಳು
[ಬದಲಾಯಿಸಿ]- ↑ "Sushi – How-To". FineCooking (in ಅಮೆರಿಕನ್ ಇಂಗ್ಲಿಷ್). 1998-05-01. Archived from the original on 2019-11-04. Retrieved 2019-11-04.
- ↑ "The Mysteries of Sushi – Part 2: Fast Food". Toyo Keizai. 23 May 2015. Archived from the original on 9 September 2017.
- ↑ "When Sushi Became a New Fast Food in Edo". Nippon.com. 22 December 2020. Archived from the original on 18 January 2021.
- ↑ "Sushi". Nihonbashi. Archived from the original on 28 December 2021.
- ↑ "Sashimi vs Sushi – Difference and Comparison | Diffen". www.diffen.com (in ಇಂಗ್ಲಿಷ್). Archived from the original on 2019-06-05. Retrieved 2019-06-05.
- ↑ Lee, Cherl-Ho; Steinkraus, Keith H; Reilly, P.J. Alan (1993). Fish fermentation technology (in English). Tokyo: United Nation University Press. OCLC 395550059. Archived from the original on 2021-01-13. Retrieved 2021-06-17.
{{cite book}}
: CS1 maint: unrecognized language (link) - ↑ ಉಲ್ಲೇಖ ದೋಷ: Invalid
<ref>
tag; no text was provided for refs namedjst140223
- Pages using the Phonos extension
- Pages with reference errors
- Pages using the JsonConfig extension
- CS1 ಅಮೆರಿಕನ್ ಇಂಗ್ಲಿಷ್-language sources (en-us)
- CS1 ಇಂಗ್ಲಿಷ್-language sources (en)
- CS1 maint: unrecognized language
- Articles with hRecipes
- Articles with Adr microformats
- Pages with Japanese IPA
- Pages including recorded pronunciations
- Articles containing Japanese-language text
- ಖಾದ್ಯ, ತಿನಿಸು
- ಜಪಾನ್ ಖಾದ್ಯ
- ವಿಕಿಪೀಡಿಯ ಏಷ್ಯನ್ ತಿಂಗಳು ೨೦೨೪