ವಿಷಯಕ್ಕೆ ಹೋಗು

ಭಾರತದಲ್ಲಿನ ಶಿಕ್ಷಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದಲ್ಲಿ ಶಿಕ್ಷಣವನ್ನು ಸಾರ್ವಜನಿಕ ವಲಯವೂ ಹಾಗೆ ಖಾಸಗಿ ವಲಯವೂ ನೀಡುತ್ತಿದೆ.ಶಿಕ್ಷಣಕ್ಕೆ ಅನುದಾನವು ಮೂರು ಕಡೆಯಿಂದ ಬರುತ್ತದೆ.ಅವುಗಳೆಂದರೆ ಕೇಂದ್ರಸರ್ಕಾರ,ರಾಜ್ಯ ಸರ್ಕಾರ, ಮತ್ತು ಸ್ಥಳೀಯ ಸಂಸ್ಥೆಗಳು.ಭಾರತದ ಹಳೆಯ ಉನ್ನತ ಶಿಕ್ಷಣ ಕೇಂದ್ರವೆಂದರೆ ತಕ್ಷಶಿಲ.ಇಂದಿಗೂ ಇದನ್ನು ವಿಶ್ವವಿದ್ಯಾನಿಲಯವೆಂದು ಕರೆಯಬೇಕೆ /ಬೇಡವೇ ಎಂಬ ವಿವಾದಗಳಿವೆ.ಪ್ರಪಂಚದ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯವೆಂದರೆ ನಳಂದ ವಿಶ್ವವಿದ್ಯಾನಿಲಯ.ಬ್ರಿಟಿಷ್ ಸಾಮ್ರಾಜ್ಯದ ಸ್ಥಾಪನೆಯೊಂದಿಗೆ ಭಾರತದಲ್ಲಿ ಪಾಶ್ಚಾತ್ಯ ಶಿಕ್ಷಣ ಆಳವಾಗಿ ಬೇರೂರಿತು.

ಭಾರತದಲ್ಲಿ ಶಿಕ್ಷಣವು ಕೇಂದ್ರಸರ್ಕಾರ ಮತ್ತು ರಾಜ್ಯಸರ್ಕಾರಗಳೆರಡರ ನಿಯಂತ್ರಣಕ್ಕೆ ಒಳಪಡುತ್ತದೆ.ಶಿಕ್ಷಣಕ್ಕೆ ಸಂಬಂದಿಸಿದಂತೆ ಕೆಲವೊಂದು ಜವಬ್ದಾರಿಗಳು ಕೇಂದ್ರಸರ್ಕಾರಕ್ಕೆ ಸ್ವಾಯತ್ತವಾದರೆ ಇನ್ನುಳಿದವು ರಾಜ್ಯಸರ್ಕಾರದ ಜವಬ್ದಾರಿಗಳಾಗುತ್ತವೆ.ಭಾರತ ಸಂವಿಧಾನದ ವಿವಿಧ ಅನುಚ್ಛೇದಗಳು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿವೆ.ಭಾರತದಲ್ಲಿನ ಬಹುತೇಕ ವಿಶ್ವವಿದ್ಯಾನಿಲಯಗಳನ್ನು ಕೇಂದ್ರ ಸರ್ಕಾರ/ರಾಜ್ಯಸರ್ಕಾರ ನಿಯಂತ್ರಿಸುತ್ತದೆ.

ಭಾರತವು ಪ್ರಾಥಮಿಕ ಶಿಕ್ಷಣದ ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ ಭಾರತದಲ್ಲಿನ ಜನಸಂಖ್ಯೆಯಲ್ಲಿ ಶೇ.೭೫ರಷ್ಟು ಜನರಿಗೆ ಶಿಕ್ಷಣವನ್ನು ವಿಸ್ತರಿಸುವುದರ ಮೂಲಕ ಪ್ರಗತಿ ಸಾಧಿಸುತ್ತಿದೆ.ಭಾರತದ ಸುಧಾರಿತ ಶಿಕ್ಷಣ ವ್ಯವಸ್ಥೆಯು ಭಾರತದ ಆರ್ಥಿಕ ಬೆಳವಣಿಗೆಗೆ ಒಂದು ಪ್ರಮುಖ ಕೊಡುಗೆ.ಉನ್ನತ ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನೆಯಲ್ಲಿನ ಪ್ರಗತಿಗೆ ಕಾರಣ ವಿವಿಧ ಸಾರ್ವಜನಿಕ ಸಂಸ್ಥೆಗಳು.೬-೧೪ ವರ್ಷದೊಳಗಿನ ಶೇ. ೯೫.೬ ರಷ್ಟು ಗ್ರಾಮೀಣ ಮಕ್ಕಳು ಶಾಲೆಗೆ ದಾಖಲಾಗಿದ್ದಾರೆಂದು ವಾರ್ಷಿಕ ಶಿಕ್ಷಣ ವರದಿಯು(ASER)ಹೇಳುತ್ತದೆ.ಆದರೆ ೪ನೇ ವಾರ್ಷಿಕ ಶಿಕ್ಷಣ ವರದಿಯ ಪ್ರಕಾರ ಇದು ಶೇ.೯೬ ಕ್ಕೆ ಏರಿಕೆಯಾಗಿದೆ.ಭಾರತವು ಗುಣಮಟ್ಟದ ಕಡೆಗೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ.ಇತ್ತೀಚಿನ ೨೦೧೩ರ AICTE ವರದಿ ಪ್ರಕಾರ ೩೫೨೪ಕ್ಕಿಂತ ಹೆಚ್ಚು ಸಂಸ್ಥೆಗಳು ಡಿಪ್ಲೋಮ ಮತ್ತು ಪೋಸ್ಟ್ ಡಿಪ್ಲೋಮ ಕೋರ್ಸ್ಗಳನ್ನು ನೀಡುತ್ತವೆ.ಇದೇ ವರದಿಯು ಭಾರತದಲ್ಲಿ ೩೪೯೫ ಇಂಜಿನಿಯರಿಂಗ್ ಪದವಿ ನೀಡುವ ಕಾಲೇಜುಗಳಿವೆಯೆಂದು ಹೇಳುತ್ತದೆ.ಯುಜಿಸಿಯ ವರದಿಯ ಪ್ರಕಾರ ವೈದ್ಯಕೀಯ, ವಿಜ್ಯಾನ,ಕೃಷಿ, ಮತ್ತು ಇಂಜಿನಿಯರಿಂಗ್ ನ ದಾಖಲಾತಿಯು ೨೦೧೦ರಲ್ಲಿ ೬.೫ ಮಿಲಿಯನ್ ಮೀರಿದೆ ಎಂದು ಹೇಳುತ್ತದೆ.

"ದ ಹಿಂದು ಟೈಮ್ಸ್" ಎಂಬ ಪತ್ರಿಕೆಯಲ್ಲಿ ಚರುಸುದನ್ ಕಸ್ತೂರಿ ಎಂಬುವರು,೨೦೦೧ರಿಂದ ಇಂಜಿನಿಯರಿಂಗ್ ಪದವಿಯನ್ನು ಆಯ್ಕೆಮಾಡಿಕೊಳ್ಳುವ ಮಹಿಳೆಯರ ಸಂಖ್ಯೆ ದ್ವಿಗುಣವಾಗಿದೆಯೆಂದು ವರದಿ ಮಾಡಿದ್ದಾರೆ.ಭಾರತದಲ್ಲಿನ ವ್ಯವಸ್ಥೆಯಲ್ಲಿ ಹಲವಾರು ಸೀಟುಗಳನ್ನು ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಿರಿಸುತ್ತಾರೆ.ಸಂಯುಕ್ತ ಸರ್ಕಾರದಲ್ಲಿ ಶೇ.೫೦ ರಷ್ಟು ಮೀಸಲಾತಿಯು ಈ ವರ್ಗಗಳಿಗೆ ಅನ್ವಯವಾಗುತ್ತದೆ.ಮೀಸಲಾತಿಯು ವಿವಿಧ ರಾಜ್ಯಗಳಲ್ಲಿ ವಿವಿದ ರೀತಿಯಲ್ಲಿರುತ್ತದೆ.ಆಂದ್ರಪ್ರದೇಶವು ಶೇ.೮೩.೩೩ ರಷ್ಟು ಮೀಸಲಾತಿ ನೀಡುತ್ತದೆ.ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇದು ಅತಿ ಹೆಚ್ಚು ಶೇಕಡವಾರು ಮೀಸಲಾತಿ.

ಇತಿಹಾಸ

[ಬದಲಾಯಿಸಿ]

ಭಾರತದಲ್ಲಿನ ಬಹಳ ಹಳೆಯ ಮೂರು ಆಧುನಿಕ ರಾಜ್ಯ ವಿಶ್ವವಿದ್ಯಾನಿಲಯಗಳಲ್ಲಿ ೧೮೫೭ರಲ್ಲಿ ಪ್ರಾರಂಭವಾದ ಮುಂಬಯಿ ವಿಶ್ವವಿದ್ಯಾನಿಲಯವು ಒಂದು.ಚಾರಿತ್ರಿಕವಾಗಿ ಬ್ರಾಹ್ಮಣರು ವಿದ್ಯಾರ್ಥಿಗಳಿಂದ ಶುಲ್ಕಪಡೆಯುವುದರ ಬದಲು ದಕ್ಷಿಣೆ ಪಡೆದು ಶಿಕ್ಷಣವನ್ನು ನೀಡುತ್ತಿದ್ದರು.ನಂತರ ದೇವಸ್ಥಾನಗಳು ಕಲಿಕಾ ಕೇಂದ್ರಗಳಾದವು;ಧಾರ್ಮಿಕ ಶಿಕ್ಷಣ ಖಡ್ಡಾಯವಾಯಿತು.ಆದರೆ ಜಾತ್ಯಾತೀತ ವಿಷಯಗಳನ್ನು ಬೋಧಿಸಿದರು.ವಿದ್ಯಾರ್ಥಿಗಳು ‌ಬ್ರಹ್ಮಚಾರಿಗಳಾಗಿರುವ ಅವಶ್ಯಕವಿತ್ತು.ಪುರೋಹಿತ ವರ್ಗ ಅಂದರೆ ಬ್ರಾಹ್ಮಣರಿಗೆ ಧರ್ಮ,ತತ್ವಶಾಸ್ತದ ಶಿಕ್ಷಣ ನೀಡಿದರೆ, ಕ್ಷತ್ರಿಯರಿಗೆ ಸಮರದ ವಿವಿದ ಅಂಶಗಳ ಬಗ್ಗೆ ಙ್ಙಾನವನ್ನು ನಿಡಲಾಗುತ್ತಿತ್ತು.ವರ್ತಕರ ವರ್ಗವಾದ ವೈಶ್ಯರಿಗೆ ವ್ಯಾಪಾರದ ಬಗ್ಗೆ ಶಿಕ್ಷಣ ನೀಡಲಾಯಿತು.ಆದರೆ ಆ ಕಾಲದಲ್ಲಿದ್ದ ಪ್ರಮುಖ ಪುಸ್ತಕಗಳೆಂದರೆ ಕಾನೂನುಗಳ ಪುಸ್ತಕವಾದ "ಮನುಸ್ಮ್ರುತಿ" ಮತ್ತು ಕೌಟಿಲ್ಯನ "ಅರ್ಥಶಾಸ್ತ್ರ"

ಹಿಂದು ಸಂಸ್ಥೆಗಳೊಂದಿಗೆ ಜಾತ್ಯಾತೀತ ಸಂಸ್ಥೆಗಳಾದ ಮಠ,ಬೌದ್ದ ಮಂದಿರಗಳು ಕಂಡುಬಂದವು.ಈ ಸಂಸ್ತೆಗಳು ಪ್ರಾಯೋಗಿಕ ಶಿಕ್ಷಣ ಅಂದರೆ ವೈದ್ಯಕೀಯ ಶಿಕ್ಷಣವನ್ನು ನೀಡಿದವು.ಹೆಚ್ಚೆಚ್ಚು ನಗರ ಕಲಿಕಾ ಕೇಂದ್ರಗಳು ಕಾಣಲು ಪ್ರಾರಂಭಿಸಿದವು.ಪ್ರಮುಖ ನಗರ ಕಲಿಕಾ ಕೇಂದ್ರಗಳೆಂದರೆ ತಕ್ಷಶಿಲೆ ಮತ್ತು ನಳಂದ(ಬಿಹಾರದಲ್ಲಿದೆ).ಈ ಸಂಸ್ಥೆಗಳು ವ್ಯವಸ್ಥಿತವಾಗಿ ಶಿಕ್ಷಣವನ್ನು ನೀಡುತ್ತಿದ್ದವು ಮತ್ತು ಪಾಶ್ಚಿಮಾತ್ಯ ವಿದ್ಯಾರ್ಥಿಗಳನ್ನು ವೇದ,ಬೌದ್ದಸಾಹಿತ್ಯ,ತರ್ಕ,ವ್ಯಾಕರಣ ಇತ್ಯಾದಿ ವಿಷಯಗಳನ್ನು ಅದ್ಯಯನ ಮಾಡಲು ಆಕರ್ಶಿಸುತ್ತಿದ್ದವು. ತಕ್ಷಶಿಲೆಯ ಪ್ರಮುಖ ‌ಶಿಕ್ಷಕರಲ್ಲಿ ಬ್ರಾಹ್ಮಣನಾದ ಚಾಣುಕ್ಯನು ಒಬ್ಬ.

ಸಾಮಾನ್ಯ ಅವಲೋಕನ

[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

ಭಾರತದ ಶಿಕ್ಷಣ ವ್ಯವಸ್ತೆಯನ್ನು ವಿವಿಧ ಹಂತವಾಗಿ ವಿಭಾಗಿಸಬಹುದು.ಹೇಗೇಂದರೆ ಪೂರ್ವ-ಪ್ರಾಥಮಿಕ ಹಂತ,ಪ್ರಾಥಮಿಕ ಹಂತ, ಮಾದ್ಯಮಿಕ ಹಂತ,ಪ್ರೌಢಶಿಕ್ಷಣ,ಪದವಿಪೂರ್ವ ಹಂತ,ಸ್ನಾತಕ ಹಂತ, ಸ್ನಾತಕೋತ್ತರ ಹಂತ.ಭಾರತದಲ್ಲಿ ಪಠ್ಯಕ್ಕೆ ಸಂಬಂದಿಸಿದಂತೆ ಶಾಲಾ ಶಿಕ್ಷಣದಲ್ಲಿ NCERT(NATIONAL COUNCIL OF EDUCATIONAL RESEARCH AND TRAINING)ಅತ್ಯುನ್ನತ ಸಂಸ್ಥೆ. NCERT ತಾಂತ್ರಿಕ ಸಹಾಯ ಹಾಗೂ ಬೆಂಬಲವನ್ನು ಭಾರತದಲ್ಲಿನ ಹಲವಾರು ಶಾಲೆಗಳಿಗೆ ನೀಡುತ್ತದೆ.ಶಿಕ್ಷಣ ನೀತಿಗಳನ್ನು ಜಾರಿಗೆ ತರುವಾಗ ಅವುಗಳ ವಿವಿಧ ಅಂಶಗಳನ್ನು ಅವಲೋಕಿಸುತ್ತದೆ.ಭಾರತದಲ್ಲಿನ ಶಾಲಾ ಶಿಕ್ಷಣ ವ್ಯವಸ್ಥೆಯ ಆಳ್ವಿಕೆ ನಡೆಸುವ ವಿವಿಧ ಸಂಸ್ಥೆಗಳೆಂದರೆ

  • ರಾಜ್ಯ ಸರ್ಕಾರದ ಮಂಡಳಿಗಳು

ಬಹುತೇಕ ಭಾರತದ ಮಕ್ಕಳು ಇದರಲ್ಲಿ ದಾಖಲಾಗಿರುತ್ತಾರೆ

  • CBSE(CENTRAL BOARD OF SECONDARY EDUCATION)ಇದು ಎರಡು ರೀತಿಯ ಪರೀಕ್ಷೆಗಳನ್ನು ನಡೆಸುತ್ತಿದೆ.
  • AISSE(ALL INDIA SECONDARY SCHOOL EXAMINATION)(೧೦ನೇ ತರಗತಿಗೆ)
  • AISSCE(ALL INDIA SENIOR SCHOOL CERTIFICATE EXAMINATION)(೧೨ನೇ ತರಗತಿಗೆ)
  • CISCE(COUNCIL FOR THE INDIAN SCHOOL CERTIFICATE EXAMINATION) ಮೂರು ರೀತಿಯ ಪರೀಕ್ಷೆಗಳನ್ನು ನಡೆಸುತ್ತದೆ.ಅವುಗಳೆಂದರೆ
  • INDIAN CERTIFICATE OF SECONDARY EDUCATION (ICSE)(೧೦ನೇ ತರಗತಿಗೆ)
  • INDIAN SCHOOL CERTIFICATE(ISC)(೧೨ನೇ ತರಗತಿಗೆ)
  • CERTIFICATE IN VOCATIONAL EDUCATION(CVE)(೧೨ನೇ ತರಗತಿಗೆ)
  • NIOS(NATIONAL INSTITUTE OF OPEN SCHOOLING).ಇದು ೨ ರೀತಿಯ ಪರೀಕ್ಷೆ ನಡೆಸುತ್ತದೆ.ಅವುಗಳೆಂದರೆ
  1. ಸೆಕೆಂಡರಿ ಎಜುಕೇಷನ್
  2. ಸೀನೀಯರ್ ಸೆಕೆಂಡರಿ ಎಜುಕೇಷನ್
  • ಅಂತರರಾಷ್ಟ್ರೀಯ ಶಾಲೆಗಳು ಕೇಂಬ್ರಿಡ್ಜ್ ಅಂತರರಾಷ್ಟ್ರೀಯ ಪರೀಕ್ಷೆಗೆ ಒಳಪಟ್ಟಿರುತ್ತವೆ.
  • ಇಸ್ಲಾಮಿಕ್ ಮದರಸಾ ಶಾಲೆಗಳ ನಿಗಮವನ್ನು ಸ್ಥಳೀಯ ರಾಜ್ಯ ಸರ್ಕಾರ ನಿಯಂತ್ರಿಸುತ್ತದೆ.ಇದಷ್ಟೆ ಅಲ್ಲದೆ ಎನ್.ಯು.ಇ.ಪಿ.ಎ.(NATIONAL UNIVERSITY OF EDUCATIONAL PLANNING AND ADMINISTRATION) ಮತ್ತು ಎನ್.ಸಿ.ಟಿ.ಇ. ಶಿಕ್ಷಣ ವ್ಯವಸ್ಥೆಯ ನಿರ್ವಹಣೆಗೆ ಜವಬ್ದಾರರಾಗಿರುತ್ತಾರೆ.

೧೦+೨+೩ ಮಾದರಿ

[ಬದಲಾಯಿಸಿ]

ಕೇಂದ್ರ ಮತ್ತು ರಾಜ್ಯಸರ್ಕರಗಳು ಸಾರ್ವತ್ರಿಕವಾಗಿ ೧೦+೨+೩ ಶಿಕ್ಷಣ ಮಾದರಿಯನ್ನು ಅನುಸರಿಸುತ್ತವೆ.ಈ ನಮೂನೆಯಲ್ಲಿ ೩ ವರ್ಶದ ಪದವಿ ಶಿಕ್ಷಣ ಮತ್ತು ೨ ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ವರ್ಶದ ಪದವಿ ಪೂರ್ವ ಶಿಕ್ಷಣ.ಹತ್ತು ವರ್ಶದ ಶಾಲಾ ಶಿಕ್ಷಣವನ್ನು ಈ ರೀತಿ ವಿಭಾಗಿಸಬಹುದು.

  1. ೫ ವರ್ಶದ ಪ್ರಾಥಮಿಕ ಶಿಕ್ಷಣ
  2. ೩ ವರ್ಶದ ಮಾದ್ಯಮಿಕ ಶಿಕ್ಷಣ
  3. ೨ ವರ್ಶದ ಪ್ರೌಢ ಶಿಕ್ಷಣ

ಭಾರತದಲ್ಲಿನ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ

[ಬದಲಾಯಿಸಿ]

ಭಾರತ ಸರ್ಕಾರವು ೧೪ ವರ್ಶದೊಳಗಿನವರ ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡುತ್ತಿದೆ. ಮಕ್ಕಳನ್ನು ಅಸುರಕ್ಷಿತ ಜಾಗಗಳಿಂದ ರಕ್ಷಿಸುವುದಕ್ಕಾಗಿ ಭಾರತ ಸರ್ಕಾರವು ಬಾಲ ಕಾರ್ಮಿಕ ಪದ್ದತಿಯನ್ನು ನಿಷೇದಿಸಿದೆ.ಅದೇನೇ ಆದರೂ ಸಾಮಾಜಿಕ ಸ್ಥಿತಿ ಮತ್ತು ಆರ್ತಿಕ ಅಸಮತೋಲನದಿಂದ ಶಿಕ್ಷಣ ನೀಡುವುದು ಮತ್ತು ಬಾಲ ಕಾರ್ಮಿಕ ಪದ್ದತಿಯನ್ನು ನಿಷೇದಿಸುವುದು ಕಷ್ಟವಾಗಿದೆ.ಪ್ರಾಥಮಿಕ ಹಂತದಲ್ಲಿ ಶೇ.೮೦ ರಷ್ಟು ಮಾನ್ಯತೆ ಪಡೆದ ಶಾಲೆಗಳನ್ನು ಸರ್ಕಾರ ನಿಯಂತ್ರಿಸುತ್ತದೆ.

ಅದೇನೇ ಆದರೂ ಈ ಶಿಕ್ಷಣ ವ್ಯವಸ್ಥೆ ಬೃಹತ್ತಾದ ಕಂದಕದಿಂದ ನರಳುತ್ತಿದೆ.ಆ ಕಂದಕ ಯಾವುದೆಂದರೆ ಗರಿಷ್ಟ ವಿದ್ಯಾರ್ಥಿ ಮತ್ತು ಕನಿಷ್ಟ ಶಿಕ್ಷಕರ ಅನುಪಾತ ,ಆರ್ತಿಕ ವ್ಯವಸ್ತೆಯ ಕೊರತೆ ಮತ್ತು ಕನಿಷ್ಟ ಮಟ್ಟದ ಶಿಕ್ಷಕರ ತರಭೇತಿ.ಈ ಕಂದಕಕ್ಕೆ ಪ್ರಮುಖ ಕಾರಣವೆಂದರೆ ಸಂಪನ್ಮೂಲಗಳ ಕೊರತೆ ಮತ್ತು ರಾಜಕೀಯ ಇಚ್ಚಾಶಕ್ತಿಯ ಕೊರತೆ.ನಮ್ಮ ದೇಶದಲ್ಲಿ ೫೮೧೬೬೭೩ ಪ್ರಾಥಮಿಕ ಶಿಕ್ಷಕರಿದ್ದಾರೆಂದು ೨೦೧೧ರಲ್ಲಿ ಭಾರತ ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳಿಂದ ತಿಳಿಯುತ್ತದೆ.ಉಚಿತ ಮತ್ತು ಖಡ್ಡಾಯ ಶಿಕ್ಷಣದ ಹಕ್ಕು ೨೦೦೯ ರ ಪ್ರಕಾರ ೬-೧೪ ವರ್ಶದೊಳಗಿನವರಿಗೆ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ.

ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸರ್ಕಾರವು ಹಲವು ಪ್ರಯತ್ನಗಳನ್ನು ಮಾಡಿತು.ಪ್ರಸ್ತುತ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಗೆ ಜೀವತುಂಬಲು ಮತ್ತು ಪುನರ್ ರಚಿಸುವುದರೊಂದಿಗೆ ಡಿ.ಇ.ರ್.ಪಿ.(DISTRICT EDUCATION REVITALIZATION PROGRAMME)ಎಂಬ ಕಾರ್ಯಕ್ರಮವನ್ನು ೧೯೯೪ ರಲ್ಲಿ ಜಾರಿಗೊಳಿಸಲಾಯಿತು.ಈ ಯೋಜನೆಯ ಪ್ರಮುಖ ಉದ್ದೇಶ ಭಾರತದಲ್ಲಿನ ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸುವುದು.ಈ ಯೋಜನೆಗೆ ಕೇಂದ್ರ ಸರ್ಕಾರವು ಶೃ.೮೫ ರಷ್ಟು ಅನುದಾನ ನೀಡಿದರೆ ಇನ್ನುಳಿದ ಶೇ.೧೫ ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತದೆ.ಈ ಯೋಜನೆಯಲ್ಲಿ ೮೪೦೦೦ ಪರ್ಯಾಯ ಶಾಲೆಗಳನ್ನು ಒಳಗೊಂಡಂತೆ ಒಟ್ಟು ೧೬೦೦೦೦ ಹೊಸ ಶಾಲೆಗಳನ್ನು ಪ್ರಾರಂಭ ಮಾಡಲಾಯಿತು.ಈ ಯೋಜನೆಯನ್ನು ಯು.ನಿ.ಸಿ.ಇ.ಎಫ್. ಸೇರಿದಂತೆ ಇತರೆ ಅಂತರರಾಷ್ಟ್ರೀಯ ಸಂಸ್ಥೆಗಳು ಬೆಂಬಲಿಸಿದವು.ಕೆಲವೊಂದು ರಾಜ್ಯಗಳಲ್ಲಿ ಈ ಯೋಜನೆಯಿಂದ ಕಳೆದ ಮೂರು ವರ್ಶಗಳಲ್ಲಿ ಸಮಗ್ರ ದಾಖಲಾತಿ ಪ್ರಮಾಣ ಶೇ. ೯೩ರಿಂದ ೯೫ಕ್ಕೆ ಏರಿಕೆಯಾಯಿತು.ಶಿಕ್ಷಣದ ಸಾರ್ವತ್ರಿಕರಣಕ್ಕೆ ಪ್ರಸ್ತುತ ಇರುವ ಯೋಜನೆ ಎಂದರೆ ಸರ್ವ ಶಿಕ್ಷಣ ಅಭಿಯಾನ .ಇದು ಪ್ರಪಂಚದ ಅತ್ಯಂತ ಬೃಹತ್ ಯೋಜನೆ.ಇದರಿಂದ ವಿದ್ಯಾರ್ತಿಗಳ ದಾಖಲಾತಿ ಪ್ರಮಾಣ ಏರಿಕೆಯಾಯಿತೇ ಹೊರತು ಶಿಕ್ಷಣದ ಗುಣಮಟ್ಟದಲ್ಲಿ ಬದಲಾವಣೆಯಾಗಲಿಲ್ಲ.

ಖಾಸಗೀ ಶಿಕ್ಷಣ

[ಬದಲಾಯಿಸಿ]

ಭಾರತದಲ್ಲಿ ಬ್ರಿಟಿಷರ ಪ್ರಾಬಲ್ಯದಿಂದಾಗಿ ಸರ್ಕಾರಿ ಶಾಲೆಯು ಸರ್ಕಾರೇತರ ಸಂಸ್ಥೆಯನ್ನು ಒಳಗೊಂಡಿರುತ್ತದೆ.ಹಲವಾರು ಖಾಸಗಿ ವಲಯ ಶಾಲೆಗಳು "ಸರ್ಕಾರಿ ಶಾಲೆಗಳು"ಎಂಬ ಹಣೆಪಟ್ಟಿಯನ್ನು ಹೊಂದಿರುತ್ತವೆ. ಉದಾಹರಣೆಗೆ ದೆಹಲಿ ಸರ್ಕಾರಿ ಶಾಲೆ,ಪ್ರಾಂಕ್ ಆಂಥೋನಿ ಸರ್ಕಾರಿ ಶಾಲೆ.ಮದ್ಯಮ ವರ್ಗದ ಬಹುತೇಕ ಜನರು ಈ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಾರೆ.ಈ ಶಾಲೆಗಳ ಶಿಕ್ಷಣದ ಮಾಧ್ಯಮ ಇಂಗ್ಲೀಷ್.ಆದರೆ ಹಿಂದಿ /ರಾಜ್ಯದ ಸ್ಥಳೀಯ ಭಾಷೆಯನ್ನು ಕಡ್ಡಾಯವಾಗಿ ಒಂದು ವಿಷಯವನ್ನಾಗಿ ಅಭ್ಯಸಿಸಬೇಕು.

ಪ್ರಸ್ತುತ ಅಂದಾಜಿನ ಪ್ರಕಾರ ಶೇ.೮೦ರಷ್ಟು ಶಾಲೆಗಳು ಸರ್ಕಾರಿ ಶಾಲೆಗಳು .ಸಾರ್ವಜನಿಕ ಶಿಕ್ಷಣದ ಕನಿಷ್ಟ ಗುಣಮಟ್ಟದ ಫಲವಾಗಿ ಶೇ.೨೭ರಷ್ಟು ಭಾರತೀಯ ವಿದ್ಯಾರ್ತಿಗಳು ಖಾಸಗಿ ವಲಯದಿಂದ ಶಿಕ್ಷಿತರಾಗುತ್ತಾರೆ.ಶೇ.೫೦ಕ್ಕಿಂತ ಹೆಚ್ಚು ಮಕ್ಕಳು ನಗರ ಪ್ರದೇಶಗಳಲ್ಲಿ ಖಾಸಗಿ ಶಾಲೆಗೆ ದಾಖಲಾಗಿ ಶಿಕ್ಷಣ ಪಡೆದರೆ ,ಗ್ರಾಮೀಣ ಪ್ರದೇಶದಲ್ಲಿ ಸರಿಸುಮಾರು ಶೇ.೨೦ರಷ್ಟು ವಿದ್ಯಾರ್ತಿಗಳು ಖಾಸಗಿ ಶಾಲೆಗೆ ದಾಖಲಾಗುತ್ತಿದ್ದಾರೆ.ಕೆಲವೊಂದು ಸಂಶೋಧನೆಯ ಪ್ರಕಾರ, ಖಾಸಗಿ ಶಾಲೆಗಳು ಉನ್ನತ ಫಲಿತಾಂಶವನ್ನು ಸರ್ಕಾರಿ ಶಾಲೆಯ ಬೆಲೆಯಲ್ಲಿ ನೀಡುತ್ತಿವೆ.ಕೆಲವರು ಖಾಸಗಿ ಶಾಲೆಯು ಬಡ ಕುಟುಂಬಗಳಿಗೆ ಶಿಕ್ಷಣ ನೀಡುವಲ್ಲಿ ವಿಫಲವಾಗಿದೆ; ಕೇವಲ ಕೆಲವೇ ಜನರು ಖಾಸಗಿ ಶಿಕ್ಷಣವನ್ನು ಪಡೆಯುತ್ತಿದ್ದಾರೆಂದು ಹೇಳುತ್ತಾರೆ.ಅವರ ಪರವಾಗಿ ಹೇಳುವುದಾದರೆ,ಖಾಸಗಿ ಶಾಲೆಯು ಸಂಪೂರ್ಣ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.ಉದಾ:ವಿಜ್ಞಾನ ವಸ್ತು ಪ್ರದರ್ಶನ ,ಸಾಮಾನ್ಯ ಜ್ಞಾನ,ಕ್ರೀಡೆ ,ಸಂಗೀತ, ನಾಟಕ ಇತ್ಯಾದಿ.ಖಾಸಗಿ ಶಾಲೆಯಲ್ಲಿ ವಿದ್ಯಾರ್ತಿ-ಶಿಕ್ಷಕರ ಅನುಪಾತವು ಉತ್ತಮವಾಗಿರುತ್ತದೆ.ಅದಕ್ಕಿಂತ ಹೆಚ್ಚಾಗಿ ಖಾಸಗಿ ಶಾಲೆಯಲ್ಲಿ ಮಹಿಳಾ ಶಿಕ್ಷಕರು ಹೆಚ್ಚು.ಖಾಸಗಿ ಶಾಲೆಯು ಅತ್ಯುನ್ನತ ಶಿಕ್ಷಕರನ್ನು ಹೊಂದಿರುತ್ತದೆ.ಇತ್ತೀಚಿನ ಡಿ.ಐ.ಎಸ್.ಇ. ಸಮೀಕ್ಷೆ ಪ್ರಕಾರ ಖಾಸಗಿ ಶಾಲೆಯಲ್ಲಿ ತರಭೇತಿ ಹೊಂದಿದ ಶಿಕ್ಷಕರ ಪ್ರಮಾಣ ಶೇ.೫೪.೯೧ ಆದರೆ ಇದು ಸರ್ಕಾರಿ ಶಾಲೆಯಲ್ಲಿ ಶೇ.೪೪.೮೮.ಸರ್ಕಾರಿ ಶಾಲೆಯಲ್ಲಿ ಶೇ.೪೩.೪೪ ರಷ್ಟು ಶಿಕ್ಷಕರು ಸೇವಾ ನಿರತ ತರಭೇತಿಯನ್ನು ಪಡೆಯುತ್ತಾರೆ.ಆದರೆ ಕೇವಲ ಶೇ.೨.೩೨ ರಷ್ಟು ಶಿಕ್ಷಕರು ಅನುದಾನರಹಿತ ಶಾಲೆಯಲ್ಲಿ ಸೇವಾನಿರತ ತರಭೇತಿಯನ್ನು ಪಡೆಯುತ್ತಾರೆ.ಶಾಲೆ ಎಂಬ ಮಾರುಕಟ್ಟೆಯಲ್ಲಿ ಸ್ಪರ್ದೆಯು ತೀರ್ವವಾಗಿದೆ.ಹೆಚ್ಚು ಖಾಸಗಿ ಶಾಲೆಗಳು ಲಾಭಕೇಂದ್ರಿತವಾಗಿವೆ.ಏನೇ ಆಗಲಿ ಖಾಸಗಿ ಶಾಲೆಗಳ ಸಂಖ್ಯೆ ತೀರ ಕಡಿಮೆ.ಎಷ್ಟೆಂದರೆ ಶೇ.೧೦೦ ರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲು ಕೇವಲ ಶೇ.೦೭.

ಗೃಹ ಶಿಕ್ಷಣ

[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

ಭಾರತದಲ್ಲಿ ಗೃಹ ಶಿಕ್ಷಣ ನ್ಯಾಯಸಮ್ಮತವಾಗಿದೆ.ಈ ವಿಚಾರಕ್ಕೆ ಸಂಬಂದಪಟ್ಟಂತೆ,ಭಾರತ ಸರ್ಕಾರವು ಪೋಷಕರು ತಮ್ಮ ಮಕ್ಕಳಿಗೆ ಮನೆಯಲ್ಲಿ ಭೋಧಿಸಬಹುದೆಂಬ ನಿಲುವನ್ನು ತಾಳಿದೆ.ಕಪಿಲ್ ಸಿಬಲ್,ಎಚ್,ಆರ್.ಡಿ. ಮಿನಿಸ್ಟರ್ ಹೇಳಿರುವ‍ಂತೆ,ಪೋಷಕರೊಬ್ಬರು ತಮ್ಮ ಮಗುವನ್ನು ಶಾಲೆಗೆ ಕಳುಹಿಸಲು ನಿರಾಕರಿಸಿ,ಗೃಹ ಶಿಕ್ಷಣ ನೀಡಿದರೆ,ಆರ್.ಟಿ.ಇ.ಖಾಯ್ದೆ ಇದ್ದರೂ ಕೂಡ ಅಂತಹ ಸಂದರ್ಬದಲ್ಲಿ ಸರಕಾರವು ಮದ್ಯಪ್ರವೇಶಿಸುವಂತಿಲ್ಲ.

ಪ್ರೌಢ ಶಿಕ್ಷಣ

[ಬದಲಾಯಿಸಿ]

ರಾಷ್ಟ್ರೀಯ ಶಿಕ್ಷಣ ನೀತಿ ೧೯೮೬,ಭಾರತೀಯ ಪ್ರೌಢಶಾಲಾ ಶಿಕ್ಷಣ ವ್ಯವಸ್ಥೆಗೆ ಕೆಲವೊಂದು ಅಂಶಗಳನ್ನು ಒದಗಿಸುತ್ತದೆ.ಅವೆಂದರೆ ಪರಿಸರ ಜಾಗೃತಿ,ವಿಙ್ನಾನ,ತಂತ್ರಜ್ಙಾನದ ಶಿಕ್ಷಣ,ಮತ್ತು ಯೋಗದಂತಹ ಸಾಂಸ್ಕ್ರುತಿಕ ಅಂಶಗಳ ಪರಿಚಯ.ಪ್ರೌಢಶಾಲಾ ಶಿಕ್ಷಣವು ೧೪-೧೮ ವರಷ ವಯಸ್ಸಿನೊಳಗಿನ ಮಕ್ಕಳನ್ನು ಒಳಗೊಂಡಿರುತ್ತದೆ.ಭಾರತೀಯ ಪ್ರೌಢಶಾಲಾ ಶಿಕ್ಷಣ ವ್ಯವಸ್ಥೆಯ ಪ್ರಮುಖ ಲಕ್ಷಣವೆಂದರೆ ಸಮಾಜದ ಸೌಲಭ್ಯರಹಿತ ವರಗಕ್ಕೆ ಒತ್ತನ್ನು ನೀಡುವುದು.ಪ್ರಮುಖ ಸಂಸ್ಥೆಗಳಿಂದ ವೃತ್ತಿಪರರನ್ನು ಕರೆಸಿ ವೃತ್ತಿಪರ ತರಭೇತಿಯನ್ನು ನೀಡಲಾಗುತ್ತದೆ.ಭಾರತೀಯ ಪ್ರೌಢಶಾಲಾ ವ್ಯವಸ್ಥೆಯ ಮತ್ತೊಂದು ಲಕ್ಷಣವೆಂದರೆ ವೃತ್ತಿ ಆಧಾರಿತ ವೃತ್ತಿಪರ ತರಭೇತಿಗೆ ಹೆಚ್ಚಿನ ಆದ್ಯತೆ ನೀಡುವುದು.ಇದು ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿಯಲ್ಲಿನ ಕೌಶಲ್ಯವನ್ನು ಸಾಧಿಸಲು ಸಾಧ್ಯವಾಗುತ್ತದೆ.ಮತ್ತೊಂದು ಪ್ರಂಉಖ ಲಕ್ಷಣವೆಂದರೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಯಾನದ ರೂಪದಲ್ಲಿ ಸರ್ವ ಶಿಕ್ಷಣ ಅಭಿಯಾನವನ್ನು ಪ್ರೌಢಶಾಲಾ ಶಿಕ್ಷಣಕ್ಕೆ ವಿಸ್ತರಿಸಲಾಗಿದೆ.ಪ್ರಾಥಮಿಕ ಶಿಕ್ಷಣದ ಮೇಲೆ ಗಮನ ಹರಿಸುವುದಕ್ಕಾಗಿ ೧೯೭೪ರಲ್ಲಿ ಒಂದು ವಿಶೇಷ ಯೋಜನೆ ಜಾರಿಗೆ ಬಂದಿತು.ಅದುವೇ ಇಂಟಿಗ್ರೇಟೆಡ್ ಎಜುಕೇಷನ್ ಫಾರ್ ಢಿಸ್ಏಬಲ್ಢ್ ಚಿಲ್ಡರ್ನ್.ಮತ್ತೊಂದು ವಿಶಿಷ್ಟ ಯೋಜನೆ ಎಂದರೆ ೧೯೬೫ರಲ್ಲಿ ಪ್ರಾರಂಭವಾದ ಕೇಂದ್ರಿಯ ವಿದ್ಯಾಲಯ ಯೋಜನೆ.ಈ ಯೋಜನೆಯನ್ನು ಕೇಂದ್ರ ಸರಕಾರದ ನೌಕರರಿಗಾಗಿ ಪ್ರಾರಂಭಿಸಲಾಯಿತು.ಒಂದೆ ಪಠ್ಯಕ್ರಮವನ್ನು ಅನುಸರಿಸುವ ಸಂಸ್ಥೆಗಳಲ್ಲಿ ಸಾರ್ವತ್ರಿಕ ಶಿಕ್ಷಣ ನೀಡುವ ಸಲುವಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು.

ಉನ್ನತ ಶಿಕ್ಷಣ

[ಬದಲಾಯಿಸಿ]

ವಿವಿದ ರೀತಿಯಲ್ಲಿ ನಮ್ಮ ವಿಶ್ವವಿದ್ಯಾನಿಲಯವು ರಿಪೇರಿ ಮಾಡಲಾಗದ ಸ್ಥಿತಿಯಲ್ಲಿವೆ, ನಮ್ಮ ದೇಶದಲ್ಲಿನ ಸುಮಾರು ಅರ್ದದಷ್ಟು ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣದ ದಾಖಲಾತಿ ತೀರಾ ಕಡಿಮೆ ಗುಣಮಟ್ಟವನ್ನ ಮಾಪನವಾಗಿಸಿದರೆ ಶೇ,೯೦ರಷ್ಟು ನಮ್ಮ ಕಾಲೇಜುಗಳು ಮತ್ತು ಅರ್ದದಷ್ಟು ನಮ್ಮ ವಿಶ್ವವಿದ್ಯಾನಿಲಯದ ನೇಮಕಾತಿ ವಿಷಯಕ್ಕೆ ಸಂಬಂದಿಸಿದಂತೆ, ವಿಶ್ವವಿದ್ಯಾನಿಲಯದ ಉಪಕುಲಪತಿಗಳನ್ನು ಒಳಗೊಂಡಂತೆ, ನೇಮಕಾತಿಯು ರಾಜಕೀಯ ಸ್ವರೂಪ ಪಡೆದುಕೊಂಡಿರುತ್ತದೆ. ಜಾತಿ ಮತ್ತು ವರ್ಗವನ್ನು ನೇಮಕಾತಿಯ ಸಮಯದಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ೨೦೦೭ರಲ್ಲಿ ನಮ್ಮ ದೇಶದ ಪ್ರದಾನಿಯಾಗಿ ಆಯ್ಕೆಯಾದ ಮನ್ಮೊಹನ್ ಸಿಂಗ್ ರ ನೇಮಕಾತಿಯಲ್ಲಿ ಪಕ್ಷಪಾತದ ಮತ್ತು ಭ್ರಷ್ಟಚಾರದ ದೂರುಗಳಿವೆ.

ಭಾರತದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳು : > INDIAN INSTITUTE OF MANAGEMENT COLCUTTA, KOLKATTA. > INDIAN INSTITUTE OF MANAGEMENT, AHMEDABAD. > ENGINEERING COLLEGE UNDER MUMBAI UNIVERSITY > UNIVERSTY OF COLCUTTA (ಸಮಜ ವಿಜ್ಜಾನ ಮತ್ತು ವ್ಯವಹರಿಕ ನಿರ್ವಹಣಾ ವಿಭಾಗಗಳು)

ದ್ವಿತೀಯ ಪಿ.ಯು.ಸಿ ಮುಗಿದ ನಂತರ ವಿದ್ಯಾರ್ಥಿಗಳು ಕಲೆ,ವಿಜ್ೞಾನ,ವಾಣಿಜ್ಯದಲ್ಲಿ ಸಾಮಾನ್ಯ ಪದವಿಯಾದ ಸ್ನಾತಕ ಪದವಿಗೆ ಅಥವಾ ವ್ರುತ್ತಿಪರ ಪದವಿಗಳಾದ ಇಂಜಿನೀಯರಿಂಗ್,ಕಾನೂನು ಅಥವಾ ವೈದ್ಯಕೀಯ ಪದವಿಗೆ ದಾಖಲಾಗುತ್ತಾರೆ. ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಭಾರತಾವು ಮೂರನೆ ಸ್ಥಾನವನ್ನು ಪಡೆದರೆ, ಆಮೇರಿಕಾ ಮತ್ತು ಚೀನಾ ಮೊದಲೆರಡು ಸ್ಥಾನಗಳಗನ್ನು ತಮ್ಮದಾಗಿಸಿಕೊಂಡಿವೆ. ಭಾರತದಲ್ಲಿನ ತೃತಿಯ ಹಂತದ ಪ್ರಮುಖ ನಿಯಂತ್ರಣ ಅಂಗವೆಂದರೆ ವಿಶ್ವವಿದ್ಯಾನಿಲಯ ಅನುದಾನ ಆಯ್ಯೋಗ(UGC),ಇದು ತನ್ನ ಮಾನದಂಡಗಳನ್ನು ವಿದಿಸುತ್ತದೆ, ಸರ್ಕಾರಕ್ಕೆ ಸಲಹೆ ನೀಡುತ್ತದೆ, ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರ ನಡುವೆ ಅನ್ಯೋನ್ಯತೆಯುಂಟು ಮಾಡಲು ಸಹಾಯ ಮಾಡುತ್ತದೆ. ವಿಶ್ವವಿದ್ಯಾನಿಲಯದ ಅನುದಾನ ಆಯೋಗದಿಂದ ಸ್ಥಾಪಿಸಲಾದ ೧೨ ಸ್ವತಂತ್ರ ಸಂಸ್ಥೆಗಳು ಉನ್ನತ ಶಿಕ್ಷಣದ ಮಾನ್ಯತೆಯ ಮೇಲ್ವಿಚಾರಣೆಯನ್ನು ಮಾಡುತ್ತವೆ ಮುಂದಿನ ದಿನಗಳಲ್ಲಿ ಅತೀ ದೊಡ್ದ ಶಿಕ್ಷಣ ಕೇಂದ್ರಗಳಲ್ಲಿ ಭಾರತವು ಒಂದಾಗಲಿದೆ.

ಮಹಿಳಾ ಶಿಕ್ಷಣ

[ಬದಲಾಯಿಸಿ]

ಭಾರತದಲ್ಲಿ ಪುರುಷ ಪ್ರಧಾನ ಕುಟುಂಬ ವ್ಯವಸ್ಥೆ ಇರುವುದರಿಂದ ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳು ಕಡಿಮೆ ಸ್ಥಾನಮಾನ ಮತ್ತು ಕೆಲವೇ ಸೌಕರ್ಯ ಅಥಾವ ಹಕ್ಕುಗಳನ್ನು ಹೊಂದಿದ್ದಾರೆ. ಸಂಪ್ರದಾಯವದಿಗಳು ಹೆಣ್ಣುಮಕ್ಕಳು ಶಾಲೆಗೆ ಹೋಗದಂತೆ ತಡೆಯುತಿದ್ದಾರೆ ಆದ್ದರಿಂದ ಪುರುಷರಿಗಿಂತ ಮಹಿಳೆಯರು ಅತೀ ಕಡಿಮೆ ಸಾಕ್ಷರತೆಯನ್ನು ಹೊಂದಿದ್ದಾರೆ ಅಲ್ಲದೆ ಶಾಲೆಯಲ್ಲಿ ಕೆಲವೇ ಕೆಲವು ಹೆಣ್ಣು ಮಕ್ಕಳು ದಾಖಲಾಗಿದ್ದಾರೆ ಮತ್ತು ಅದರಲ್ಲಿ ಹಲವರು ಶಾಲೆಯಿಂದ ಹೊರಗುಳಿದಿದ್ದಾರೆ.

ಬ್ರಿಟೀಷ್ ಆಳ್ವಿಕೆ ಅವಧಿಯಲ್ಲಿ ಭಾರತದ ಒಟ್ಟು ಮಹಿಳಾ ಜನಸಂಖ್ಯೆಯಲ್ಲಿ ಮಹಿಳೆಯರು ಕೇವಲ ೨ ರಿಂದ ೬% ಸಾಕ್ಷರರಾಗಿದ್ದರು ಅ ನಂತರ ೧೯೪೭ ರಲ್ಲಿ ರಚನೆಯಾದ ಭಾರತ ಗಣರಾಜ್ಯವು ಸಾಕ್ಷ್ರರತೆಯಲ್ಲಿ ಸುಧಾರಣೆ ತರಲು ಯೋಜಿತ ಪ್ರಯತ್ನಗಳಂತೆ ೧೯೬೧ರಲ್ಲಿ ೧೫.೩%, ೧೯೮೧ರಲ್ಲಿ ೨೮.೫% ಮತ್ತು ೨೦೦೧ರಲ್ಲಿ ಒಟ್ಟು ಮಹಿಳಾ ಜನಸಂಖ್ಯೆಯಲ್ಲಿ ೫೦% ಆಷ್ಟು ಮಹಿಳೆಯರು ಸಾಕ್ಷರರಾಗಿದ್ದರೂ ಸಹ ಈ ಅಂಕಿ-ಅಂಶಗಳು ಜಗತ್ತಿಗೆ ಮತ್ತು ಭಾರತದಲ್ಲಿನ ಪುರುಷ ಸಾಕ್ಷರತೆಗೆ ಹೋಲಿಸಿದಂತೆ ಕಡಿಮೆಯೇ ಆಗಿದೆ. ಇತ್ತೀಚೆಗೆ ಭಾರತ ಸರ್ಕಾರ ಮಹಿಳೆಯರ ಸಾಕ್ಷರತೆಗೆ "ಸಾಕ್ಷರ ಭಾರತ ಮಿಷಿನ್"ನನ್ನು ಜಾರಿಗೆ ತಂದಿದೆ. ಈ ಮಿಷಿನ್ ಈಗಿರುವ ಮಹಿಳಾ ಅನಕ್ಷರತೆಯನ್ನು ಅರ್ಧದಷ್ಟು ಕಡಿಮೆ ಮಾಡುವ ಧ್ಯೇಯವನ್ನು ಹೊಂದಿದೆ.

ಸೀತಾ ಅನಂತ ರಾಮನ್ ರವರು ಭಾರತದಲ್ಲಿ ಮಹಿಳಾ ಶಿಕ್ಷಣ್ ಪ್ರಗತಿಯನ್ನು ಈ ರೀತಿ ಗುರುತಿಸಿದ್ದಾರೆ.

ಭಾರತ ಸರ್ಕಾರ ೧೯೪೭ ರಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅನೇಕ ಉತ್ತೇಜಕಗಳನ್ನು ನೀಡುತ್ತಾ ಬಂದಿದೆ. ಹಾಗೆಯೇ ಶಾಲೆಯಲ್ಲಿನ ಹಾಜರಾತಿ ಕಾಪಾಡಲು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ. ಉದಾಹರಣೆಗೆ ಮಧ್ಯಾನ್ಹ್ದ ಊಟ, ಉಚಿತ ಪುಸ್ತಕ, ಮತ್ತು ಸಮವಸ್ತ್ರ ಇತ್ಯಾದಿ. ಈ ಯೋಗಕ್ಷೇಮದ ಹಚ್ಚಳದಿಂದ ೧೯೫೧ ರಿಂದ೧೯೮೧ ರಲ್ಲಿ ಪ್ರತಿಯೊಂದು ರಾಜ್ಯದ ಸಾಮಾಜಿಕ ಚೌಕಟ್ಟಿನೊಳಗೆ ಶಿಕ್ಷಣದ ಪುನರ್ರಚನೆ ಮಾಡಲು "ರಾಜ್ಯ ಶಿಕ್ಷಣ ನೀತಿಯು" ನಿರ್ಧರಿಸಿತು. ಪ್ರಜಾಪ್ರಭುತ್ವಕ್ಕೆ ಶಿಕ್ಷಣವು ಅಗತ್ಯವೆಂದು ಹೇಳುವ ಮೂಲಕ ಇದು ದೇಶದ ದೊಡ್ಡ ಗುರಿ ಎಂದು ಒತ್ತಿ ಹೇಳಿತು. ಮತ್ತು ಶಿಕ್ಷಣವು ಮಹಿಳೆಯರ ಸ್ಥಿತಿಯ ಪ್ರಗತಿಗೆ ಕೇಂದ್ರವಾಗಿದೆ. ಹೊಸ ನೀತಿಯು ಸಾಮಾಜಿಕ ಬದಲಾವಣೆಯ ಧ್ಯೇಯವನ್ನು ಹೊಂದಿದ್ದು ಅದಕ್ಕಾಗಿ ಪರಿಷ್ಕೃತ ಪಠ್ಯ, ಪಠ್ಯಕ್ರಮ, ಶಾಲೆಗಳಿಗೆ ಹೆಚ್ಚಿನ ಧನ ಸಹಾಯ, ಶಾಲೆಗಳ ಸಂಖ್ಯೆಯಲ್ಲಿ ಹೆಚ್ಚಳ, ನೀತಿಯ ಪ್ರಗತಿ ಇತ್ಯಾದಿ. ಹಾಗೂ ಪ್ರಾಥಮಿಕ ಫ್ರೌಡ, ಮತ್ತು ಉನ್ನತ ಶಿಕ್ಷಣದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಒತ್ತು ನೀಡುವುದು.ಬಡತನದ ಸಮಸ್ಯೆ ಮತ್ತು ಮನೆ ಕೆಲಸಗಳಿಗೆ ಹೆಣ್ಣು ಮಕ್ಕಳನ್ನು ಅವಲಂಬಿಸಿರುವುದೇ ಶಾಲೆಯಲ್ಲಿನ ಹಾಜರಾತಿ ಕಡಿಮೆ ಇರಲು ಕಾರಣ ಎಂದು ವರದಿ ತಿಳಿಸಿತು. ರಾಷ್ಟ್ರೀಯ ಸಾಕ್ಷರತಾ ಮಿಷಿನ್ ಹೆಣ್ಣು ಮಕ್ಕಳಿಗಾಗಿ ಹಳ್ಳಿಯಲ್ಲಿ ಟ್ಯೂತರ್ ನಿರ್ವಹಿಸುತ್ತಿದೆ.ಹಾಗೆ ಹೆಣ್ಣು ಮಕ್ಕಳಿಗೆ ವಿವಾಹವಾಗಲು ಕನಿಷ್ಟ ೧೮ ವರ್ಷ ತುಂಬಿರಬೇಕು ಎಂದು ತಿಳಿಸಿದೆ. ಆದರೆ ೧೮ ವರ್ಷಕ್ಕೂ ಮೊದಲೇ ಹೆಣ್ಣು ಮಕ್ಕಳ್ಳಿಗೆ ವಿವಾಹ ಮಡುವವರ ಸಂಖ್ಯೆ ಹೆಚ್ಚಿರುವುದರಿಂದ ಶಾಲೆ ಬಿಟ್ಟ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆ.

ಭಾರತದಲ್ಲ್ಲಿ ಮಹಿಳಾ ಶಿಕ್ಷಣವು ಜನರ ಜೀವನ ಮಟ್ಟದಲ್ಲಿನ ಏರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಅದರಲ್ಲೂ ಹೆಚ್ಚಿದ ಮಹಿಳೆಯರ ಸಾಕ್ಷರತೆಯಿಂದ, ಮನೆಯ ಒಳಗೆ ಮತ್ತು ಹೊರಗೆ ಅವರ ಜೀವನದ ಗುಣಮಟ್ಟ ಹೆಚ್ಚಿದೆ. ಇದರಿಂದ ಮಕ್ಕಳ ಶಿಕ್ಷಣಕ್ಕೂ ಉತ್ತೇಜಕವಾಗಿದೆ, ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣ ಹೆಚ್ಚದೆ ಮತ್ತು ಶಿಶು ಮರಣ ಧರ ಕದಿಮೆಯಾಗಿದೆ.ಕೆಲವು ಅಧ್ಯಯನಗಳ ಪ್ರಕಾರ ಹೆಣ್ಣು ಮಕ್ಕಳ ಸಾಕ್ಷರತೆ ಕಡಿಮೆ ಇರುವಲ್ಲಿ ಹೆಚ್ಚಿನ ಶಿಶು ಮರಣ ಕಂಡು ಬಂದಿದೆ, ಮತ್ತು ಪೌಷ್ಟಿಕಾಂಶ ಕೊರತೆ, ಕಡಿಮೆ ಆದಾಯ ಮತ್ತು ಕಡಿಮೆ ಸಾಮರ್ಥ್ಯ ಇರುವುದರಿಂದ ನಿರ್ಧಾರ ತೆಗೆದುಕೊಳ್ಳುವುದು ಕಷ್ಟಕರವಾಗಿದೆ ಮತ್ತು ಮಹಿಳೆಯರ ಕಡಿಮೆ ಶಿಕ್ಷಣವು ಆರೋಗ್ಯ ಮತ್ತು ಮಕ್ಕಳ ಜೀವನದ ಗುಣಮಟ್ಟದ ಮೇಲೆ ವ್ಯೆತಿರಿಕ್ತ ಪರಿಣಾಮ ಬೀರುತ್ತಿದೆ.ಭಾರತದಲ್ಲಿ ಕೈಗೊಂಡ ಒಂದು ಸಮೀಕ್ಷೆಯ ಫಲಿತಾಂಶದ ಪ್ರಕಾರ ಮಹಿಳೆಯರ ಸಾಕ್ಷರತಾ ಧರ ಮತ್ತು ಶಿಕ್ಷಣ ಮಟ್ಟವು ಶಿಶು ಮರಣ ಧರವನ್ನ ಅವಲಂಭಿಸಿದೆ. ಹಾಗೆಯೇ ಸಮೀಕ್ಷೆಯ ಸಲಹೆಯ ಪ್ರಕಾರ ಶಿಕ್ಷಣ ಮತ್ತು ಆರ್ಥಿಕ ಬೆಳವಣಿಗಿಯ ನಡುವೆ ನಿಕತ ಸಂಬಂಧವಿದೆ.

ಭಾರತದಲ್ಲಿ ಮಹಿಳಾ ಸಾಕ್ಷರತೆಯು ಬೇರೆ-ಬೇರೆ ರಾಜ್ಯಗಳಲ್ಲಿ ಬೇರೆಯೇ ಆಗಿದೆ ಕೇರಳದಲ್ಲಿ ೮೬% ಮಹಿಳಾ ಸಾಕ್ಷರತೆ ಇದ್ದರೆ, ಬಿಹಾರ್ ಮತ್ತು ಉತ್ತರ ಪ್ರದೇಶದಲ್ಲಿ ಕೇವಲ ೫೫ರಿಂದ ೬೦% ಮಹಿಳಾ ಸಾಕ್ಷರತೆ ಇದೆ. ಈ ಮೇಲಿನ ಶೇಕಡವಾರು ಮೌಲ್ಯಗಳು ಭಾರತದಲ್ಲಿನ ಆರೋಗ್ಯ ಮಟ್ಟದಲ್ಲಿ ನಿಕಟ ಸಂಬಧ ಹೊಂದಿದೆ.ಕೇರಳದಲ್ಲಿ ಕಡಿಮೆ ಶಿಶು ಮರಣ ದರ ಇದ್ದು, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಕಡಿಮೆ ಜೀವನ ಮಟ್ಟವಿದೆ. ಭಾರತದ ಒಟ್ಟು ೨೪ ರಾಜ್ಯಗಳಲ್ಲಿ ಅದರಲ್ಲೂ ೬ ರಾಜ್ಯಗಳು ಶೇಕಡ ೬೦% ಕ್ಕಿಂತಲೂ ಕಡಿಮೆ ಮಹಿಳಾ ಸಾಕ್ಷರತಾ ದರ ಶೇಕಡ ೧೨% ಗಿಂತ ಕಡಿಮೆ ಇದೆ.

ಭಾರತದಲ್ಲಿ ಉನ್ನತ ಶಿಕ್ಷಣವನ್ನು ೧೮ ರಿಂದ ೨೪ ರ ನಡುವಿನ ವಯಸ್ಸಿನ ಗುಂಪಿಗೆ ಎಂದು ಸ್ಪಷ್ಟಪಡಿಸಿದೆ ಅಥಾವ ವ್ಯಾಖ್ಯನಿಸಿದೆ. ಇದಕ್ಕಾಗಿ ಸರ್ಕಾರದಿಂದ ನಿಧಿ ಸಂಗ್ರಹಿಸಲಾಗಿಗದೆ. ಆದಾಗ್ಯೂ ಉನ್ನತ ಶಿಕ್ಷಣಕ್ಕೆ ೨೪ ರಿಂದ ೫೦% ಅಷ್ಟು ಮಹಿಳೆಯರು ದಾಖಲಾಗಿದ್ದಾರೆ.ಆದರೂ ಇನ್ನೂ ಉನ್ನತ ಶಿಕ್ಷಣದಲ್ಲಿ ಲಿಂಗತಾರತಮ್ಯತೆ ಇದೆ.ವಿಜ್ಞಾನ ವಿಭಾಗದಲ್ಲಿ ೧/೩ ಅಂಶದಷ್ಟು ವಿದ್ಯಾರ್ಥಿನಿಯರಿದ್ದಾರೆ.ಮತ್ತು ಶೇಕಡ ೭ ರಷ್ಟು ಇಂಜಿನಿಯರಿಂಗ್ ವಿದ್ಯಾರ್ಥಿನಿಯರಿದ್ದಾರೆ. ಒಟ್ಟಾರೆ ವಿದ್ಯರ್ಥಿಗಳಿಗೆ ಹೋಲಿಸಿದಂತೆ ಅರ್ಧದಷ್ಟು ವಿದ್ಯಾರ್ಥಿನಿಯರನ್ನೇ ಕಾಣಬಹುದು.

ಗ್ರಾಮೀಣ ಶಿಕ್ಷಣ

[ಬದಲಾಯಿಸಿ]

ಮಧ್ಯಪ್ರದೇಶದಲ್ಲಿನ ಒಂದು ಹಳ್ಳಿಯಲ್ಲಿನ ಪ್ರಾಥಮಿಕ ಶಾಲೆ ಸ್ವತಂತ್ರಾ ನಂತರ ಭಾರತ, ಸಾಮಾಜಿಕ ಬದಲಾವಣೆಯೊಂದಿಗೆ ಸಮುದಾಯದಲ್ಲಿ ಬೆಳವಣಿಗೆ ತರಲು ಶಿಕ್ಷಣವು ಒಂದು ಪರಿಣಾಮಕಾರಿ ಅಸ್ತ್ರ ಎಂದು ನಿರ್ಧರಿಸಿತು.೧೯೫೦ರಲ್ಲಿ ಆಡಳಿತಾತ್ಮಕ ನಿಯಂತ್ರಣವು ಪರಿಣಾಮಕಾರಿಯಾಗಿತ್ತು.೧೯೫೨ರಲ್ಲಿ ಸರ್ಕಾರವು ಹಳ್ಳಿಗಳನ್ನು ಗುಂಪು ಮಾಡಿಸಮುದಾಯ ಬೆಳವಣಿಗೆ ಬ್ಲಾಕ್ನ ಅಧೀನಕ್ಕೆ ನೀಡಿದೆ.೧೦೦ ಹಳ್ಳಿಗಳ ಶಿಕ್ಷಣವನ್ನು ನಿಯಂತ್ರಿಸುವ ಅಧಿಕಾರವನ್ನು 'ರಾಷ್ಟ್ರೀಯ ಕಾರ್ಯಕ್ರಮ'ಕ್ಕೆ ನೀಡಿದೆ ೧೫೦ ಮೈಲಿ (೩೯೦km2) ಮೈಲಿ ಭೌಗೋಳಿಕ ಭೂ ಪ್ರದೇಶದಲ್ಲಿ ಬೆಳವಣಿಗೆ ಬ್ಲಾಕ್ನ ಅಧಿಕಾರಿಯು ಹೇಳುವಂತೆ ೭೦,೦೦೦ ಜನಸಂಖ್ಯೆಯನ್ನು ಒಳಗೊಂಡಿದೆ.

ಶೆಟ್ಟಿ ಮತ್ತು ರಾಸ್ ಕಾರ್ಯಕ್ರಮಗಳ ಚೌಕಟ್ಟು ಅಥಾವ ಪಾತ್ರವನ್ನು ವಿಸ್ತರಿಸಿದರು.ಕಾರ್ಯಕ್ರಮಗಳನ್ನು ಅವರು ವೈಯಕ್ತಿಕ ಆಧಾರ, ಸಮುದಾಯ ಆಧಾರ,ಅಥಾವ ವೈಯಕ್ತಿಕ ಮತ್ತು ಸಮುದಾಯ ಆಧಾರ ಎಂದು ವಿಭಾಗಿಸಿದ್ದಾರೆ. ಸಮುದಾಯ ಬೆಳವಣಿಗೆ ಕಾರ್ಯಕ್ರಮವು ಕೃಷಿ, ಪ್ರಾಣಿ ಸಾಕಣೆ, ಸಹಕಾರ,ಗ್ರಾಮೀಣ ಕೈಗಾರಿಕೆ,ಗ್ರಾಮೀಣ ಇಂಜಿನಿಯರಿಂಗ್,ಆರೋಗ್ಯ ಮತ್ತು ರಕ್ಷಣೆ,ಕುಟುಂಬದ ಯೋಗಕ್ಷೇಮ,ಕುಟುಂಬ ಯೋಜನೆ, ಮಹಿಳೆಯರ ಯೋಗಕ್ಷೇಮ, ಮಕ್ಕಳ ರಕ್ಷಣೆ ಮತ್ತು ಪೌಷ್ಠಿಕಾಂಶ, ಶಿಕ್ಷಣದ ಜೊತೆಯಲ್ಲಿ ವಯಸ್ಕ ಶಿಕ್ಷಣ,ಸಾಮಾಜಿಕ ಶಿಕ್ಷಣ ಮತ್ತು ಸಾಕ್ಷರತೆ, ಯುವಜನತೆಯ ಯೋಗಕ್ಷೇಮ, ಸಮುದಾಯದ ಸಂಘಟನೆ ಮುಂತಾದುವನ್ನು ಒಳಗೊಂಡಿದೆ.ಮೇಲಿನ ಪ್ರತಿಯೊಂದು ಕ್ಷೇತ್ರದ ಪ್ರಗತಿಗೆ ಹಲವು ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಸಂಯೋಜಿಸಲಾಗಿದೆ ಹಾಗೂ ಯೋಜನೆಯನ್ನು ಎಲ್ಲಾ ಸಮುದಾಯಕ್ಕೂ ವಿಸ್ತರಿಸಲಾಗಿದೆ.ಕುಶಲಕರ್ಮಿಗಳು, ಮಹಿಳೆಯರು,ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಒಳಗೊಂಡಿದೆ.

೧೯೫೦ರ ನಂತರದ ಕೆಲವು ಹಿನ್ನೆಡೆಯ ಹೊರತಾಗಿಯು ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಗ್ರಾಮೀಣ ಶಿಕ್ಷಣ ಕಾರ್ಯಕ್ರಮಗಳು ಪೂರ್ಣವಾಗಿ ಮುಂದುವರಿಯುತ್ತಾ ಬಂದಿದೆ. ಗಾಂಧಿಗ್ರಾಮ ಎಂಬ ಕಾರ್ಯಕ್ರಮದಡಿ ಗ್ರಾಮ ಸಂಸ್ಥೆಯು ಗ್ರಾಮೀಣ ಶಿಕ್ಷಣವನ್ನು ಗಣನೀಯ ಗಾತ್ರದಲ್ಲಿ ಸ್ಥಾಪಿಸಲಾಯಿತು. ಭಾರತದ್ದಲ್ಲಿ ೫,೨೦೦ ಸಮುದಾಯ ಬೆಳವಣಿಗೆ ಬ್ಲಾಕ್ ಗಳನ್ನು ಸ್ಥಾಪಿಸಿ ಅದರಲ್ಲಿ ನರ್ಸರಿ ಶಾಲೆಗಳು, ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆ ಮತ್ತು ಹೆಣ್ಣುಮಕ್ಕಳಿಗಾಗಿ ವಯಸ್ಕ ಶಿಕ್ಷಣ ಶಾಲೆಗಳನ್ನು ಸ್ಥಾಪಿಸಲಾಯಿತು.

ಗ್ರಾಮಿಣ ಶಿಕ್ಷಣವನ್ನು ಸರ್ಕಾರ ಬಹುಮುಖ್ಯ ಕಾರ್ಯಕ್ರಮವಾಗಿ ಮುಂದುವರಿಸಿದೆ. ಹಾಗೆಯೇ ಸರ್ಕಾರ ಅಧಿಕಾರಶಾಹಿಯ ಹೊರತಾಗಿ ಉಳಿದಿದೆ ಮತ್ತು ನಿಶ್ಚಲತೆಯನ್ನು ಹೊಂದಿದೆ. ಗ್ರಾಮೀಣ ಶಿಕ್ಷಣ ಸಂಸ್ಥೆಯು ಹಣಕಾಸು ಕೊರತೆ ಇದ್ದರು ಶಿಕ್ಷಣದ ಸಮತೋಲನಗಳಿಸುವಲ್ಲಿ ಯಶಸ್ವಿಯಾಗಿದೆ. ಭಾರತ ಸರ್ಕಾರ ಮಾಡಿದ ಹೂಡಿಕೆಯಿಂದ ಕೆಲವೊಮ್ಮೆ ಕಡಿಮೆ ಫಲಿತಾಂಶ ದೊರೆತಿದೆ ಏಕೆಂದರೆ ಭಾರತದ ಬಡತನವನ್ನು ಗುರುತಿಸುವಲ್ಲಿ ಕೆಲವು ಐಡಿಯಾಗಳು ವಿಫಲವಾಗಿವೆ.ಕಡಿಮೆ ನಿಧಿ ಮತ್ತು ಸಿಬಂಧಿ ಕೊರತೆಯಿಂದಾಗಿ ಇತ್ತೀಚೆಗೆ ಸರ್ಕಾರ ಗ್ರಾಮೀಣ ಶಾಲೆಗಳನ್ನು ಉಳಿಸುವಲ್ಲಿ ವಿಫಲವಾಗಿದೆ. ಕೆಲವೂಂದು ಸಂಸ್ಥೆಗಳು ಅದರಲ್ಲಿಯೂ "ಗ್ರಾಮೀಣ ಅಭಿವೃದ್ದಿ ಸಂಸ್ಥೆ"ಯು ಹೆಚ್ಚಿನ ಗುಣಮಟ್ಟದ ಗ್ರಾಮಿಣ ಶಾಲೆಗಳನ್ನು ನಿರ್ಮಿಸಿದೆ ಆದರೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಭಾರತದಲ್ಲಿ ಗ್ರಾಮೀಣ ಶಿಕ್ಷಣದ ಮೌಲ್ಯವು ನಗರಕ್ಕೆ ಹೋಲಿಸಿದಂತೆ ವಿಭಿನ್ನವಾಗಿದೆ.ಶಾಲೆಗಳಲ್ಲಿ ಲಿಂಗತಾರತಮ್ಯತೆ ಇದೆ,ಶೇಕಡ ೧೮% ಗಂಡು ಮಕ್ಕಳು ಫ್ರೌಡಶಿಕ್ಷಣ ಮತ್ತು ಡಿಪ್ಲಮೊವನ್ನು ಪಡೆಯುತ್ತಿದ್ದಾರೆ ಆದರೆ ಗಂಡು ಮಕ್ಕಳಿಗೆ ಹೊಲಿಸಿದಂತೆ ಹೆಣ್ಣು ಮಕ್ಕಳು ಕೇವಲ ೧೦% ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ೧೦೦ ಮಕ್ಕಳು ಶಾಲೆಗೆ ಸೇರಿಲ್ಲ ಇದು ಕಡಿಮೆ ಪೂರ್ಣಗೊಂಡ ಮಟ್ಟವನ್ನ ಪ್ರತಿಬಿಂಬಿಸುತ್ತದೆ.

ವೃತ್ತಿಪರ ಶಿಕ್ಷಣ ಭಾರತ ಸರ್ಕಾರವು ಶಿಕ್ಷಣವನ್ನು, ವೃತ್ತಿಪರ ಶಿಕ್ಷಣವನ್ನಾಗಿಸಲು ಹಲವು ನಿಶ್ಚಿತ ಹೆಜ್ಜೆಗಳನ್ನು ಹಾಕಿದೆ.ಇತ್ತಿಚೆಗೆ ದೆಹಲಿ ವಿಶ್ವವಿದ್ಯಾಲಯವು ಪದವಿಯ ಅವಧಿಯನ್ನು ೪ ರಿಂದ ೩ಕ್ಕೆ ಇಳಿಸಿದೆ.ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದೆ ಅದರ್ಂತೆ ವೃತ್ತಿಪರ ಸಂಸ್ಥೆ, ಮತ್ತು ವೃತ್ತಿಪ್ರ ಶಿಕ್ಷಣ ನೀಡಲು ಹಲವು ಕೋರ್ಸುಗಳನ್ನು ಒದಗಿಸಿದೆ. ಉದಾಹರಣೆ:ವಿಮಾನಯಾನಕ್ಕೆ ಸಂಬಂಧಿಸಿದ ಅಥಾವ ಸಾರಿಗೆ ಮತ್ತು ಪ್ರವಾಸಕ್ಕೆ ಸಂಬಂಧಿಸಿದ ಕೋರ್ಸುಗಳನ್ನು ತೆರೆಯಲಾಗಿದೆ.

ಸಮಸ್ಯೆಗಳು ಕೆಲಸಗಾರರ ಗುಣಮಟ್ಟ, ನಿಧಿ ಮತ್ತು ಮೂಲಭೂತ ಸೌಕರ್ಯ ಭಾರತದ ಶಿಕ್ಷಣ-ಹೆಣ್ಣುಮಕ್ಕಳು ಒಂದು ಅಧ್ಯಯನದ ಪ್ರಕಾರ ಸಾರ್ವಜನಿಕ ಕ್ಷೇತ್ರದಲ್ಲಿ ೨೫% ಭೋದಕರನ್ನು ಸಮೀಕ್ಷೆಯ ಅವಧಿಯಲ್ಲಿ ಕಾಣಬಹುದು. ಅದರಲ್ಲಿ ಶೇ೧೫% ಮಹಾರಾಷ್ಟ್ರದಲ್ಲಿ ಮತ್ತು ೩೦% ಬಿಹಾರದಲ್ಲಿ ನೋಡಬಹುದು. ೩೦೦೦ ಸಾರ್ವಜನಿಕ ಶಾಲೆಗಳ ಮುಖ್ಯೋಪಧ್ಯಾಯರನ್ನು ಮತ್ತೆ ಮತ್ತೆ ಗೈರು ಹಾಜರಾಗಿದ್ದರಿಂದ ಅವರನ್ನು ವಜಾ ಮಾಡಲಾಯಿತು. ಭಾರತದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವ ಮಾದರಿ ಸರ್ಕಾರವು ಪ್ರಾಥಮಿಕ ಶಾಲೆಗಳನ್ನು ಬೇಟಿ ನೀಡಿ ಸಮೀಕ್ಷೆ ನೆಡೆಸಿದೆ. ಅದರ ಪ್ರಕಾರ ಕೇವಲ ಅರ್ಧದಷ್ಟು ಜನ ಮಾತ್ರ ಸರಿಯಾಗಿ ಭೋಧಿಸುತ್ತಿದ್ದಾರೆ.

ಪಠ್ಯಕ್ರಮ ಭಾರತದಲ್ಲಿನ ಆಧುನಿಕ ಶಿಕ್ಷಣವು ಸಮಸ್ಯೆ ಪರಿಹಾರಕ್ಕಿಂತ ಕುರುಡು ಪಾಠ ಅಥಾವ ಕಂಠಪಾಠವಾಗಿದೆ ಎಂದು ಟೀಕಿಸಲಾಗಿದೆ. "ನ್ಯೂ ಇಂಡಿಯನ್ ಎಕ್ಸ್ ಪ್ರೆಸ್"ನ ಪ್ರಕಾರ ಭಾರತದ ಶಿಕ್ಷಣ ವ್ಯೆವಸ್ಥೆ ಸೋಮಾರಿಗಳನ್ನು ಸೃಷ್ಠಿ ಮಾಡುತ್ತಾ ಇದೆ. ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ಅವರ ಹೆಚ್ಚಿನ ಸಮಯವನ್ನ ಓದುವುದು ಮತ್ತು ಆಟವಾಡುವುದಕ್ಕೆ ಬದಲಾಗಿ ಕೇವಲ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಕಳೆಯುತ್ತಾರೆ. ಭಾರತದ ಪಠ್ಯಕ್ರಮವನ್ನು ವ್ಯಾಪಾರದವಾದ ಎಂದು ಟೀಕಿಸುತ್ತದೆ.ಎಕ್ಸ್ ಪ್ರೆಕ್ಸ್ ಇಂಡಿಯಾದ ಪ್ರಕಾರ ವಿದ್ಯಾರ್ಥಿಗಳ ಕೇವಲ ಕಂಠಪಾಠಕ್ಕೆ ಗಮನ ಹರಿಸುತ್ತಿದ್ದಾರೆ. ಮಕ್ಕಳ ಹಕ್ಕುಗಳು states ಶೇಕಡ ೯೯% ಶಿಶುವಿಹಾರಗಳಲ್ಲಿ ಯಾವುದೇ ಪಠ್ಯಕ್ರಮವಿಲ್ಲ.

ಭಾಗವಹಿಸುವಿಕೆ ಲೋಯರ್ ಸೆಕೆಂಡರಿ ಮಟ್ಟದಲ್ಲಿ (ಶ್ರೇಣಿ ೯ ಮತ್ತು ೧೦), ದಾಖಲಾತಿ ದರ ಶೇಕಡ೫೨% ಹಿರಿಯ ಸೆಕೆಂಡರಿ ಮಟ್ಟದಲ್ಲಿ (೧೧ ಮತ್ತು೧೨) ಇದು ಶೇಕಡ೨೮% ಮತ್ತು ನರ್ಸರಿಗಳಲ್ಲಿ ಶೇಕಡ ೧೮% ಶೇ ೪೮% ನರ್ಸರಿ ಶಿಕ್ಷಣಕ್ಕೆ ದಾಖಲಾತಿಯಾಗುತ್ತಿದ್ದಾರೆ.

ವಿವಾದ ಜನವರಿ೨೦೧೦ರಲ್ಲಿ ಭಾರತ ಸರ್ಕಾರ ಡೀಮ್ಡ್ ವಿಶ್ವವಿದ್ಯಾಲಯದ states ಹಲವು ೪೪ ಸಂಸ್ಥೆಗಳನ್ನು ವಾಪಸ್ ತೆಗೆದುಕೊಳ್ಳುವ್ಂತೆ ನಿರ್ಧರಿಸಿತು. "ಯುನಿವರ್ಸಿಟಿ ಗ್ರಾಂಟ್ ಕಮಿಷನ್" ಭಾರತದಲ್ಲಿ ೩೯ ನಕಲಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಕಂದು ಹಿಡಿದಿದೆ.ಭಾರತದಲ್ಲಿ ಕೇವಲ ಶೇಕಡ ೧೦% ಅಷ್ಟು ಮಾತ್ರ ಉತ್ಪಾದಕರಿಗೆ ಸೇವಾ ತರಬೇತಿ ನೀಡಲಾಗುತ್ತಿದೆ. ಚೀನಾಗೆ ಹೋಲಿಸಿದಂತೆ, ಚೀನಾದಲ್ಲಿ ಶೇಕಡ ೨೦% ಉತ್ಪಾದಕರಿಗೆ ಸೇವಾ ತರಬೇತಿ ನೀಡಲಾಗುತ್ತಿದೆ.

ಪ್ರಾರಂಭಿಕ ಅನೌಪಚಾರಿಕ ಶಿಕ್ಷಣದ ಕೇಂದ್ರ ಉದಯಪುರ ಮತ್ತು ರಾಜಸ್ಥಾನ ಸೇವಾ ಮಂದಿರ್ ಇಂದ ಶೈಕ್ಷಣಿಕ ಕಾರ್ಯಕ್ರಮ

ಗ್ರಾಮೀಣ ಮತ್ತು ಬುಡಕಟ್ಟು ಜನರ ಅಭಿವೃದ್ದಿಗಾಗಿ ಉದಯಪುರ ಮತ್ತು ರಾಜಸಮಂಡ್ ಜಿಲ್ಲೆಯ ದಕ್ಷಿಣ ರಾಜಸ್ಥಾನದಲ್ಲಿನ ಶ್ರೀರಂಗಪಟ್ಟಣದಲ್ಲಿನ ಮದರಸಾ ಜಾಮಿ ಮಸೀದಿಗಳಲ್ಲಿ NGO ಕಾರ್ಯ ನಿರ್ವಹಿಸುತ್ತಿದೆ.ಚಿತ್ತೂರ್ನಲ್ಲಿನ ನರ್ಸರಿ ಶಾಲೆ, ಈ ಶಾಲೆ 'ಪಾಠಶಾಲ' ಯೋಜನೆಯ ಭಾಗವಾಗಿದೆ. ಈ ಶಾಲೆ ಈಗ ೭೦ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ.

ಸ್ವತಂತ್ರಾ ನಂತರ ಭಾರತದಲ್ಲಿ ಹಿಂದುಳಿದ ವರ್ಗಗಳಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹೆಚ್ಚಿನ ಹಕ್ಕುಗಳನ್ನು ನೀಡಲಾಯಿತು ಮತ್ತು ೧೯೬೦ರಲ್ಲಿ ೪೦೫ ಪರಿಶಿಷ್ಟ ಜಾತಿ ಮತ್ತು ೨೨೫ ಪರಿಶಿಷ್ಟ ಪಂಗಡಗಳು ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟವು.೧೯೭೫ ರಲ್ಲಿ ಈ ಪಟ್ಟಿಯನ್ನು ತಿದ್ದುಪಡಿ ಮಾಡಲಾಯಿತು ,ಮತ್ತು ೮೪೧ ಪರಿಶಿಷ್ಟ ಜಾತಿ ಎಂದು ಮತ್ತು ೫೧೦ ಪರಿಶಿಷ್ಟ ಪಂಗಡ ಎಂದು ಗುರುತಿಸಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಒಟ್ಟಾರೆ ೨೨.೫% ಇದ್ದಾರೆ ಅದರಲ್ಲಿ ಪರಿಶಿಷ್ಟ ಜಾತಿಯವರು ೧೭% ಮತ್ತು ಪರಿಶಿಷ್ಟ ಪಂಗಡದವರು ೭.೫% ಇದ್ದಾರೆ. ಮೇಲಿನ ವರದಿ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ತಮ್ಮಷ್ಟಕ್ಕೆ ತಾವೇ ದಲಿತರಿಗೆ ಹೋಲಿಸಿಕೊಂಡಿದ್ದಾರೆ. ಮರಾಠಿ ಭಾಷೆಯು ಈ ಪಾರಿಭಾಷಿಕ ಕೋಶವನ್ನು ಡಾ. ಬಿ.ಆರ್ ಅಂಬೇಡ್ಕರ್ "ದಬ್ಬಾಳಿಕೆಗೆ ಒಳಗಾದವರು" ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹಲವು ಶಿಕ್ಷಣ ಕಾರ್ಯಕ್ರಮಗಳನ್ನ ಒದಗಿಸಲಾಗುತ್ತಿದೆ. ಮತ್ತು ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಭಾರತದಲ್ಲಿ ಮೀಸಲಾತಿಯನ್ನು ನೀಡಲಾಗಿದೆ. ಉದಾಹರಣೆ ಕೇಂದ್ರೀಯ ವಿಶ್ವವಿದ್ಯಾಲಯವು ಪರಿಶಿಷ್ಟ ಜಾತಿಯವರಿಗೆ ೧೫% ಮೀಸಲಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕೇಂದ್ರಿಯ ವಿಶ್ವವಿದ್ಯಾಲಯ ೭.೫% ಮೀಸಲಾತಿ ನೀಡಿದೆ. ಭಾರತದಲ್ಲಿ ಇದೇ ರೀತಿಯಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶಿಕ್ಷಣದ ಹಲವು ಯೋಜನೆಗಳಲ್ಲಿ ಮೀಸಲಾತಿ ಸೌಲಭ್ಯ ನೀಡಲಾಗಿದೆ.

ಪ್ರಸ್ತುತ ೬೮ ಬಾಲ ಭವನ ಮತ್ತು ೧೦ ಬಾಲ ಕೇಂದ್ರಗಳಿಗೆ ಮಾನ್ಯತೆ ನೀಡಲಾಗಿದೆ. ರಾಷ್ಟ್ರೀಯ ಬಾಲ ಭವನ್ ಈ ಯೋಜನೆಯಲ್ಲಿ ಶಿಕ್ಷಣವನ್ನು ಒಳಗೊಡಂತೆ ಮತ್ತು ಸಾಮಾಜಿಕ ಚಟುವಟಿಕೆ ಮತ್ತು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಲು ಅನೇಕ ಕಾರ್ಯ ಕ್ರಮಗಳನ್ನು ಮತ್ತು ಚಟುವಟಿಕೆಗಳನ್ನು ಶಿಕ್ಷಣದಲ್ಲಿ ಸಂಘಟಿಸಲಾಗಿದೆ.

೧೯೯೨ರ ತಿದ್ದುಪಡಿಯಂತೆ 'ರಾಷ್ಟ್ರೀಯ ಶಿಕ್ಷಣ ನೀತಿ' ಅನ್ವಯ ಭಾರತದಲ್ಲಿನ ಅಲ್ಪಸಂಖ್ಯಾತರು ಎಂದರೆ ವಿಶೇಷವಾಗಿ 'ಶೈಕ್ಷಣಿಕವಾಗಿ ಹಿಂದುಳಿದವರು'ಎಂದು ಪರಿಗಣಿಸಿದೆ.

'ಸ್ಕೀಮ್ ಆಫ್ ಏರಿಯಾ ಇನ್ ಟೆನ್ ಸ್ವಿ' ಕಾರ್ಯಕ್ರಮವನ್ನು ಶೈಕ್ಷಣಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರಿಗಾಗಿ ಸರ್ಕಾರ ಆರಂಭಿಸಿತು ಮತ್ತು ಈ ಯೋಜನೆಯಂತೆ ಹಣಕಾಸು ಸಹಾಯ ಅಥಾವ ಮದರಸಾ ಶಿಕ್ಷಣವನ್ನು ಆಧುನೀಕರಣಗೊಳಿಸುವುದು ಇದರ ಉಳಿದ ಭಾಗವಾಗಿದೆ (೧೯೯೨) ಈ ಎರಡು ಯೋಜನೆಗಳು ೧೯೯೪ರಲ್ಲಿ ರಾಷ್ಟ್ರ ವ್ಯಾಪಿಯಾಗಿ ಪ್ರಾರಂಭವಾದವು. ಭಾರತದ ಸಂಸತ್ತು ೨೦೦೪ರಲ್ಲಿ ಕಾಯಿದೆ ಹೊರಡಿಸಿತು. ಅಲ್ಪಸಂಖ್ಯಾತರನ್ನು ಶಕ್ತಗೊಳಿಸಲು ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ಅವಶ್ಯ ಮಾದರಿ ಕಾಯಿದೆ ಹೊರಡಿಸಿದೆ. ಆಶ್ಚರ್ಯಕರವಾಗಿ, ಸಿಂಧಿ ಭಾಷೆಯಲ್ಲಿ (ಭಾರತದಲ್ಲಿ ೮ನೇ ಶೆಡ್ಯೂಲ್ ಭಾಷೆ, ಇವರಿಗೆ ಅವರದೇ ಆದ ರಾಜ್ಯವು ಇಲ್ಲ) ಸರ್ಕಾರ ಇ ಭಾಷೆಗಾಗಿ ಯಾವುದೇ ಮಹತ್ವದ ಕೊಡುಗೆ ನೀಡಿಲ್ಲ. ಸಿಂಧಿಗಳು ಭಾಷಾ ಅಲ್ಪಸಂಖ್ಯಾತರು ಮತ್ತು ಹೆಚ್ಚಿನ ರಾಜ್ಯಗಳಲ್ಲಿ ಸಿಂಧಿ ಭಾಷೆಯ ಶಾಲೆಗಳಿಲ್ಲ ಅಥಾವ ಸಿಂಧಿ ಭಾಷೆಯು ಅ ಶಾಲೆಗಳಲ್ಲಿ ಕೇವಲ ಐಚ್ಚಿಕ ವಿಷಯವಾಗಿದೆ. ಸಿಂಧಿಗಳು ೧೦ ಲಕ್ಷ ಜನಸಂಖ್ಯೆಯಿದ್ದರೂ ೧೦೦ಕ್ಕಿಂತ ಕಡಿಮೆ ಭೋದಕರಿದ್ದಾರೆ. ಸಿಂಧಿ ಭಾಷೆಯಲ್ಲಿ ಸಿಂಧಿ ಮೂಲಭೂತವಾಗಿ ಸಿಂಧೂ ಕಣಿವೆ ನಾಗರಿಕತೆಯಿಂದ ಬಂದಿದೆ. ಇಂಡೊ-ಆರ್ಯನ್ ಭಾಷೆಯಿಂದ ಉತ್ಪತ್ತಿಯಾಗಿದೆ. ಈ ಭಾಷೆ ಪಾಕಿಸ್ತಾನದಲ್ಲಿ ಪ್ರಚಲಿತವಾಗಿದೆ ಮತ್ತು ಪಾಕಿಸ್ತಾನ ಸರ್ಕಾರದಿಂದ ಮಾನ್ಯತೆ ಪಡಿದಿದೆ.ಸಿಂಧಿ ಭಾಷೆ ಮತ್ತು ಸಂಸ್ಕೃತಿ ಕೇವಲ ಕಥೆಯಷ್ಟೆ ಆಗಿ ಉಳಿಯುತ್ತದೆ. ಮುಂದಿನ ಪೀಳಿಗೆಗಳಿಗೆ ರಾಜೇಶ್ ತದನಿ ಅವರು ಸಿಂಧಿ ಭಾಷಾ ಸಂಘಕ್ಕೆ ಪ್ರಸಿಡೆಂಟ್ ಆಗಿದ್ದಾರೆ.ಇವರನ್ನೇ ಮೊದಲ ಗೌರ್ನರ್ ಎಂದು ಪರಿಗಣಿಸಲಾಗಿದೆ.

ಕೇಂದ್ರ ಸರಕಾ‍ರದ ಒಳಗೊಳ್ಳುವಿಕೆ

[ಬದಲಾಯಿಸಿ]

ಹತ್ತನೇ ಪಂಚ ವಾರ್ಷಿಕ ಯೋಜನೆಯ ಭಾಗವಾಗಿ (೨೦೦೨-೦೭) ಭಾರತದ ಕೇಂದ್ರ ಸರಕಾರವು ರೂ ೪೩೮.೨೫ ಬಿಲಿಯನ್ ಗಾತ್ರದ ಒಟ್ಟು ಶಿಕ್ಷಣದ ಬಜೆಟ್ನಲ್ಲಿ ಶೇ.೬೫.೬ ರಷ್ಟು ವೆಚ್ಚದ ರೂಪುರೇಷೆ ನೀಡಿತು. ಈ ವೆಚ್ಚದ ರೂಪುರೇಷೆ ಕೆಳಗಿನಂತಿದೆ. ರೂ.೨೮೭.೫ ಬಿಲಿಯನ್ ಹಣ ಪ್ರಾಥಮಿಕ ಶಿಕ್ಷಣದ ಮೇಲೇ,ಶೇ.೯.೯ ಅಂದರೆ ರೂ.೪೩.೨೫ ಬಿಲಿಯನ್ ಪ್ರೌಢಶಿಕ್ಷಣದ ಮೇಲೇ,ಶೇ.೨.೯ ರಷ್ಟು ಹಣ ವಯಸ್ಕ ಶಿಕ್ಷಣಕ್ಕಾಗಿ ,ಶೇ.೯.೫ ಅಂದರೆ ರೂ ೪೧.೭೬೫ ಬಿಲಿಯನ್ ಹಣ ಉನ್ನತ ಶಿಕ್ಷಣಕ್ಕಾಗಿ ,ಶೇ.೧೦.೭ ರಷ್ಟು ಅಂದರೆ ರೂ ೪೭ ಬಿಲಿಯನ್ ಹಣ ತಾಂತ್ರಿಕ ಶಿಕ್ಷಣಕ್ಕಾಗಿ ,ಉಳಿದ ಶೇ.೧.೪ ಅಂದರೆ ರೂ ೬.೨೩೫ ಬಿಲಿಯನ್ ಹಣ ಇತರೆ ಶಿಕ್ಷಣದ ಯೋಜನೆಗಳಿಗೆ ವಿನಿಯೋಗಿಸಬೇಕೆಂದು ಕೇಂದ್ರ ಸರಕಾರ ರೀಪುರೇಷೆ ನೀಡಿದೆ.

ಭಾರತದಲ್ಲಿ ಶಿಕ್ಷಣದ ಮೇಲೆ ಸಾರ್ವಜನಿಕ ವೆಚ್ಚ

[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

೨೦೧೧-೧೨ ನೇ ಆರ್ಥಿಕ ಸಾಲಿನಲ್ಲಿ, ಭಾರತದ ಕೇಂದ್ರ ಸರಕಾರವು ರೂ.೩೮೯೫೭ಕೋಟಿಯನ್ನು ಶಾಲಾಶಿಕ್ಷಣ ಮತ್ತು ಸಾಕ್ಷರತ ವಿಭಾಗಕ್ಕೆ ಹಂಚಿಕೆ ಮಾಡಿತು.ಈ ವಿಭಾಗ ಭಾರತದಲ್ಲಿ ಪ್ರಾಥಮಿಕ ಶಿಕ್ಷಣವನ್ನು ನೋಡಿಕೊಳ್ಳುವ ಪ್ರಮುಖ ವಿಭಾಗ.ಹಂಚಿಕೆಯಾದ ಈ ಹಣದಲ್ಲಿ ಬಹುಪಾಲು ಅಂದರೆ ರೂ.೨೧೦೦೦ಕೋಟಿ ಹಣವನ್ನು ಸರ್ವ ಶಿಕ್ಷಣ ಅಭಿಯಾನ ಯೋಜನೆಗೆ ವಿನಿಯೋಗಿಸಲಾಯಿತು.ಆದರೆ ೨೦೧೧-೧೨ ನೇ ಸಾಲಿನಲ್ಲಿ ಅಧಿಕ್ರತವಾಗಿ ನೇಮಕವಾದ ಅನಿಲ್ ಬಾರ್ಢಿಯ ಸಮಿತಿಯು ರೂ೩೫೬೫೯ ಕೋಟಿಯನ್ನು ಶಿಫಾರಸ್ಸು ಮಾಡಿತ್ತು.ಈ ಸಮಿತಿಯ ದೃಷ್ಟಿಕೋನದಲ್ಲಿ ೨೧೦೦೦ಕೋಟಿ ಹಣ ಬಹಳ ಕಡಿಮೆ ಹಣ.ಹೆಚ್ಚಿನ ಹಣದ ಹಂಚಿಕೆಯ ಅಗತ್ಯವಿತ್ತು.ಏಕೆಂದರೆ ಇತ್ತಿಚಿನ ಕಾನೂನಾದ ಮಕ್ಕಳ ಉಚಿತ ಮತ್ತು ಖಡ್ಡಾಯ ಶಿಕ್ಷಣದ ಹಕ್ಕು ಖಾಯ್ದೆಯನ್ನು ಜಾರಿಗೆ ತರಲು. ಭಾರತದಲ್ಲಿ ಶಿಕ್ಷಣದ ವಲಯದಲ್ಲಿ ಹಿಂದುಳಿದ ರಾಜ್ಯಗಳನ್ನು ಅಭಿವೃದ್ದಿ ಪಡಿಸಲು ಇತ್ತೀಚಿನ ದಿನಗಳಲ್ಲಿ ಹಲವಾರು ಹೇಳಿಕೆಗಳನ್ನು/ಯೋಜನೆಗಳನ್ನು ನೀಡಿತು. ಅಂತಹ ಪ್ರಮಖ ಯೋಜನೆಗಳಲ್ಲಿ ಯುಪಿಎ ಸರಕಾರದ ಎನ್.ಸಿ.ಎಮ್.ಪಿ. ಯೋಜನೆ ಕೂಡ ಒಂದು.(National common minimum programme).ಇನ್ನುಳಿದ ಹೇಳಿಕೆಗಳೆಂದರೆ

  1. ಶಿಕ್ಷಣದ ಮೇಲಿನ ವೆಚ್ಚವನ್ನು ಜಿಡಿಪಿಯ ಸೇ.೬ಕ್ಕೆ ಹೆಚ್ಚಿಸುವುದು.
  2. ಶಿಕ್ಷಣದ ಮೇಲಿನ ವೆಚ್ಚವನ್ನು ಹೆಚ್ಚಿಸಲು ಬೆಂಬಲಿಸುವುದು ಮತ್ತು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು.
  3. ಆರ್ಥಿಕ ಸಮಸ್ಯೆ ಮತ್ತು ಬಡತನದ ಕಾರಣಕ್ಕಾಗಿ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು.
  4. ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿಸುವುದು.
  5. ಸರ್ವ ಶಿಕ್ಷಣ ಯೋಜನೆ ಮತ್ತು ಮದ್ಯಾಹ್ನದ ಬಿಸಿಯೂಟ ಯೋಜನೆ ಮೂಲಕ ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸುವುದು.

ಎನ್.ಸಿ.ಎಮ್.ಪಿ. ಯೋಜನೆ ಜಾರಿಗೆ ಬಂದು ಐದು ವರ್ಷಗಳಾದರೂ ಶಿಕ್ಷಣದಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣಲು ಸಾಧ್ಯವಾಗಲಿಲ್ಲ. ಜಿಡಿಪಿಯ ಶೇ.೬ ರಷ್ಟು ಹಣವನ್ನು ಶಿಕ್ಷಣ ವಲಯಕ್ಕಾಗಿ ಮೀಸಲಿಟ್ಟರೂ ನಿರೀಕ್ಷೆಯಷ್ಟು ಪ್ರಗತಿ ಕಾಣಲಿಲ್ಲ.ಜಿಡಿಪಿಯ ಶಿಕ್ಷಣದ ಮೇಲಿನ ವೆಚ್ಚ ಸತತವಾಗಿ ಏರಿಕೆಯಾಯಿತು.ಹೇಗೆಂದರೆ ೧೯೫೦-೫೧ ರಲ್ಲಿದ್ದ ಶಿಕ್ಷಣದ ಮೇಲಿನ ವೆಚ್ಚ ಶೇ.೦.೬೪ ರಿಂದ ೧೯೭೦-೭೧ ರಲ್ಲಿ ಶೇ.೨.೩೧ ರಷ್ಟು ಏರಿಕೆಯಾಯಿತು.ತದನಂತರ ೨೦೦೦-೦೧ ರಲ್ಲಿ ಶೆ.೪.೨೬ ರಷ್ಟು ಗರಿಷ್ಟ ಮಟ್ಟಕ್ಕೆ ಏರಿಕೆಯಾಯಿತು.ಆದರೆ ೨೦೦೪-೦೫ರಲ್ಲಿ ಶೆ.೩.೪೯ಕ್ಕೆ ಇಳಿಕೆಯಾಯಿತು.

ಶಾಸನಾಧಿಕಾರದ ರಚನೆ ೪೫ನೇ ಆರ್ಟಿಕಲ್ ಮೂಲತಃ ಭಾರತದ ಸಂವಿಧಾನ ಒಳಗೊಂಡಂತೆ. ೧೦ ವರ್ಷಗಳ ಕಾಲಾವಧಿಯಲ್ಲಿ. ೧೪ ವರ್ಷದವರೆಗಿನ ಎಲ್ಲಾ ಮಕ್ಕಳಿಗಾಗಿ ಸಂವಿಧಾನದಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಲು ರಾಷ್ಟ್ರ ಪ್ರಯತ್ನಿಸಿದೆ. ಭಾರತ ಸಂವಿಧಾನ ರಾಜ್ಯ ನಿರ್ದೇಶಕ ತತ್ವಗಳ ವಿವರಣೆ ಒಳಗೊಂಡಿದೆ ರಾಜ್ಯ ನಿರ್ದೇಶಕ ತತ್ವಗಳ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಂವಿಧಾನವು ನೀಡಿದ ನಿರ್ದೇಶನಗಳ್ ಸ್ವರೂಪದಲ್ಲಿದೆ. ಇವುಗಳು ನ್ಯಾಯ ರಕ್ಷಿತವಾದವುಗಳಲ್ಲದಿದ್ದರೂ ದೇಶದ ಆಡಳಿತಕ್ಕೆ ಮೂಲಭೂತ ನಿಯಮಗಳಾಗಿವೆ. ಭಾರತದಲ್ಲಿನ ಸರ್ವೋಚ್ಚ ನ್ಯಾಯಲಯ ೧೯೯೦ರ ಕಾಲಾವಧಿಯಲ್ಲಿ ೯೩ ತಿದ್ದುಪಡಿ ಸಲಹೆಯಂತೆ ೩ ಪ್ರತ್ಯೇಕ ತಿದ್ದುಪಡಿ ಮಾಡಲಾಗಿದೆ ಸಂವಿಧಾನದಲ್ಲಿ

.ಭಾರತ ಸಂವಿಧಾನದ ೨೧ನೇ ಆರ್ಟಿಕಲ್ನ ತಿದ್ದುಪಡಿಯಂತೆ ೬ ರಿಂದ ೧೪ ವರ್ಷದವರೆಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಎಂದು ಕಾನೂನು ಧೃಡಿಕರಿಸಿದೆ. ೨೮ ನವಂಬರ್ ೨೦೦೧ರಲ್ಲಿ ಭಾರತದ ಕೆಳಮನೆಯಾದ ಲೋಕಸಭೆಯಲ್ಲಿ ಈ ಬಿಲ್ ಅನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಅ ನಂತರ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ೧೪ ಮೇ ೨೦೦೨ ರಲ್ಲಿ ಪಾಸ್ ಅಯಿತು. ಭಾರತದ ಪ್ರೆಸಿಡೆಂಟ್ ರವರಿಂದ ಸಹಿಯಾಯಿತು. ೮೬ ತಿದ್ದುಪಡಿಗಳಾದ ಮೇಲೆ ಈ ಬಿಲ್ಸ್ ಪರಿಣಾಮ ಬೀರಿತು. ಅಂದಿನಿಂದ ೬ ರಿಂದ ೧೪ ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಶಿಕ್ಷಣ್ವು ಮೂಲಭೂತ ಹಕ್ಕಾಗಿದೆ. ಭಾರತ ಸರ್ಕಾರದ ೪೬ನೇ ಆರ್ಟಿಕಲ್ ವಿಶೇಷ ಕಾಳಜಿಯೊಂದಿಗೆ ಶಿಕ್ಷಣ ಮತ್ತು ಆರ್ಥಿಕ ಆಸಕ್ತಿ ಹೊಂದಿದ ದುರ್ಬಲ ವರ್ಗದ ಜನರಿಗೆ ಸ್ಟೇಟ್ ಬಡ್ತಿ ನೀಡಿದೆ. ವಿಶೇಷವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಬಡ್ತಿ ನೀಡಿತು. ಮತ್ತು ಸಾಮಾಜಿಕ ಅನ್ಯಾಯದಿಂದ ಮತ್ತು ಎಲ್ಲಾ ರೀತಿಯ ಸಾಮಾಜಿಕ ಶೋಷಣೆಯಿಂದ ಅವರನ್ನು ರಕ್ಷಿಸಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಇತರ ಮೀಸಲಾತಿ ನೀಡಿದೆ ಆರ್ಟಿಕಲ್ ೩೩೦,೩೩೨,೩೩೫,೩೩೮,೩೪೨ ಸಂವಿಧಾನದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಕ್ಕೆ ೬ನೇ ಶೆಡ್ಯೂಲ್ಸ್ ಸಹ ವಿಶೇಷ ಮೀಸಲಾತಿ ನೀಡಿದೆ.

೨೦೧೮ರಲ್ಲಿ ಉನ್ನತ ಶಿಕ್ಷಣ

[ಬದಲಾಯಿಸಿ]
  • ಭಾರತದಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಉನ್ನತ ಶಿಕ್ಷಣದ ನಿಯಂತ್ರಕ ವ್ಯವಸ್ಥೆ, ಅಸ್ತಿತ್ವಕ್ಕೆ ಬಂದದ್ದು 1956ರಲ್ಲಿ. ಆಗ ರಾಷ್ಟ್ರದಲ್ಲಿ ಇದ್ದದ್ದು ಕೇವಲ 20 ವಿಶ್ವವಿದ್ಯಾಲಯಗಳು ಹಾಗೂ 500 ಕಾಲೇಜುಗಳು. 2018 ರಲ್ಲಿ 864 ವಿಶ್ವವಿದ್ಯಾಲಯಗಳು ಹಾಗೂ 40,026 ಕಾಲೇಜುಗಳಿವೆ. ಯುಜಿಸಿ ಬದಲಿಗೆ ಉನ್ನತ ಶಿಕ್ಷಣ ಆಯೋಗ (ಎಚ್‍ಇಸಿಐ)ವನ್ನು ಅಸ್ತಿತ್ವಕ್ಕೆ ತಂದು ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ನಿಯಂತ್ರಣವನ್ನೂ ಪಡೆಯುವ ಉದ್ದೇಶವನ್ನು ಕೇಂದ್ರಸರ್ಕಾರ ಹೊಂದಿದೆ. ಹಲವು ರಾಜ್ಯಗಳು ಖಾಸಗಿ ವಿಶ್ವವಿದ್ಯಾಲಯಗಳನ್ನು ಆರಂಭಿಸಿವೆ. [][]

ಬಾರತದ ಕೇಂದ್ರ ಸರ್ಕಾರದ ೨೦೨೦ರ ಹೊಸ ಶಿಕ್ಷಣ ನೀತಿ

[ಬದಲಾಯಿಸಿ]
  • ರಾಷ್ಟ್ರೀಯ ಶಿಕ್ಷಣ ನೀತಿ 2020 ಕ್ಕೆ ಇಂದು ಅಂದರೆ 2020 ಜುಲೈ 29 ಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. ಹೊಸ ನೀತಿಯು ದೇಶದ ಉದ್ಯೋಗ ಮತ್ತು ಶಿಕ್ಷಣದ ಸನ್ನಿವೇಶದಲ್ಲಿ ಹೊಸ ಬದಲಾವಣೆಗಳನ್ನು ತರಲಿದೆ. ಎನ್ಇಪಿ ಇಂದು ಅನುಮೋದನೆ ಪಡೆಯುತ್ತಿದ್ದಂತೆ, ಸುಮಾರು 34 ವರ್ಷಗಳ ನಂತರ ಭಾರತವು ಹೊಸ ಶೈಕ್ಷಣಿಕ ನೀತಿಯನ್ನು ಪಡೆಯಲು ಸಿದ್ಧವಾಗಿದೆ.
  • ಎನ್‌ಇಪಿ 2020 ರ ಅಡಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಜಾರಿಗೆ ತರಬೇಕಾಗಿದೆ. "ಎಂಎಚ್‌ಆರ್‌ಡಿ" (MHRD)ಮರುಹೆಸರಿಸಲಾಗುವುದು, ಬಹು-ಶಿಸ್ತಿನ ಶಿಕ್ಷಣವನ್ನು ಉತ್ತೇಜಿಸಲಾಗುವುದು ಮತ್ತು ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿ "ಹೆಚ್ಚಿನ ವಿದೇಶಿ ಆಟಗಾರರು" ಭಾಗಿಯಾಗುತ್ತಾರೆ ಎಂದು ನಿರೀಕ್ಷಿಸಲಾಗಿದೆ.
  • ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಅವರ ಪ್ರಕಾರ, ಎನ್‌ಇಪಿ 2020 ದೇಶದಲ್ಲಿನ ಬಹಳಷ್ಟು ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ವಿದ್ಯಾರ್ಥಿಗಳು ವಿದೇಶಗಳಲ್ಲಿ ಉನ್ನತ ಶಿಕ್ಷಣವನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತದೆ. ಪಾಲಿಸಿಯ ಬಗ್ಗೆ ಹೆಚ್ಚಿನ ವಿವರಗಳು ನಂತರ ಬಹಿರಂಗಗೊಳ್ಳುತ್ತವೆ.[]

ಸಂಕ್ಷಿಪ್ತ ವಿವರ

[ಬದಲಾಯಿಸಿ]
  • 34 ವರ್ಷಗಳ ಬಳಿಕ ಹೊಸ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಸರ್ಕಾರವು ಅನುಮೋದಿಸಿದೆ.. ಶಾಲಾಪೂರ್ವ ಕಲಿಕೆಯಿಂದ(ಕಿಂಡರ್ ಗಾರ್ಡನ್)) ಪ್ರೌಢಶಿಕ್ಷಣದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಖಾತರಿ ಈ ನೀತಿಯಲ್ಲಿ ಇರುವ ಇನ್ನೊಂದು ಅಂಶ. ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 6ರಷ್ಟನ್ನು ಶಿಕ್ಷಣಕ್ಕೆ ವ್ಯಯ ಮಾಡಬೇಕು ಎಂಬ ಅಂಶವೂ ನೀತಿಯಲ್ಲಿ ಸೇರಿದೆ.
  • ಎಂಟನೇ ತರಗತಿವರೆಗೂ ಶಿಕ್ಷಣದ ಮಾಧ್ಯಮವು ಮಾತೃಭಾಷೆ ಅಥವಾ ಸ್ಥಳೀಯ ಭಾಷೆ ಅಥವಾ ರಾಜ್ಯ ಭಾಷೆ ಆಗಿರಬೇಕು ಎಂಬುದಕ್ಕೆ ನೀತಿಯು ಆದ್ಯತೆ ನೀಡಿದೆ. ಶಾಲೆ ಮತ್ತು ಪ್ರೌಢ ಶಿಕ್ಷಣದ ಎಲ್ಲ ಹಂತಗಳಲ್ಲಿಯೂ ಸಂಸ್ಕೃತವನ್ನು ಐಚ್ಛಿಕವಾಗಿ ಕಲಿಯುವ ಅವಕಾಶ ನೀಡಲಾಗಿದೆ.
  • ‘ಭಾರತದ ಇತರ ಶಾಸ್ತ್ರೀಯ ಭಾಷೆಗಳು ಮತ್ತು ಸಾಹಿತ್ಯವನ್ನು ಕೂಡ ಐಚ್ಛಿಕವಾಗಿ ಕಲಿಯಲು ಅವಕಾಶ ಇದೆ. ಯಾವುದೇ ವಿದ್ಯಾರ್ಥಿಯ ಮೇಲೆ ಯಾವುದೇ ಭಾಷೆಯನ್ನು ಹೇರುವುದಿಲ್ಲ’ ಎಂದು ನೀತಿಯು ಅತ್ಯಂತ ಸ್ಪಷ್ಟವಾಗಿ ಹೇಳಿದೆ.
  • ಶಿಕ್ಷಕರಿಗೆ ನಾಲ್ಕು ವರ್ಷಗಳ ಸಂಯೋಜಿತ ಪದವಿ ಕನಿಷ್ಠ ವಿದ್ಯಾರ್ಹತೆಯಾಗಲಿದೆ. ಇದು 2030ರ ಹೊತ್ತಿಗೆ ಜಾರಿಗೆ ಬರಲಿದೆ.
  • ಉನ್ನತ ಶಿಕ್ಷಣದಲ್ಲಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗಿದೆ. ಮೇಜರ್‌ ಮತ್ತು ಮೈನರ್‌ ವಿಷಯಗಳಾಗಿ ತಮ್ಮ ಆಯ್ಕೆಯ ವಿಷಯಗಳ ಸಂಯೋಜನೆಯನ್ನು ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಲಿದೆ.
  • ‘ಭೌತವಿಜ್ಞಾನ ಅಥವಾ ಎಂಜಿನಿಯರಿಂಗ್‌ ಕಲಿಯುವ ಹಲವು ವಿದ್ಯಾರ್ಥಿಗಳಿಗೆ ಸಂಗೀತದಲ್ಲಿ ಆಸಕ್ತಿ ಇರಬಹುದು. ಈಗ ಅವರು ಎಂಜಿನಿಯರಿಂಗ್‌ ಜತೆಗೆ ಸಂಗೀತವನ್ನೂ ಒಂದು ವಿಷಯವಾಗಿ ಕಲಿಯಬಹುದು’ ಎಂದು ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅಮಿತ್‌ ಖರೆ ಹೇಳಿದ್ದಾರೆ.
  • ಮೂರರಿಂದ ನಾಲ್ಕು ವರ್ಷಗಳ ಪದವಿ ಪೂರ್ವ ಹಂತದ ಶಿಕ್ಷಣವನ್ನು ಯೋಜಿಸಲಾಗಿದ್ದು ವಿವಿಧ ಹಂತಗಳಲ್ಲಿ ಈ ಕೋರ್ಸ್‌ಗಳನ್ನು ನಿಲ್ಲಿಸುವ ಅವಕಾಶ ವಿದ್ಯಾರ್ಥಿಗಳಿಗೆಲಭ್ಯವಾಗಲಿದೆ.[]

ಯೋಜನೆ

[ಬದಲಾಯಿಸಿ]
  • ರಾಷ್ಟ್ರೀಯ ಶಿಕ್ಷಣ ನೀತಿ(ನ್ಯಾಶನಲ್ ಎದುಕೇಶನ್ ಪಾಲಿಸಿ) 2020: ತಿಳಿದುಕೊಳ್ಳಬೇಕಾದ ಮುಖ್ಯ ಅಂಶ:
  • ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ/NEP) 2020 ರ ಅಡಿಯಲ್ಲಿ ಹೊಸ ನಿಯಮಗಳು ಶಿಕ್ಷಣದ ಹಕ್ಕನ್ನು ಹೆಚ್ಚಿನ ವಯಸ್ಸಿನವರನ್ನು ನೀತಿಗೆ ಒಳಪಡಿಸಲು ಸೂಚಿಸಿವೆ. ಇಲ್ಲಿಯವರೆಗೆ, ಯೋಜನೆಯು 14 ವರ್ಷ ವಯಸ್ಸಿನವರೆಗೆ ಮಾತ್ರ ಮಾನ್ಯವಾಗಿತ್ತು. ಹೊಸ ಯೋಜನೆಯಲ್ಲಿ(ಎನ್‍ಎಪಿ) ಅಡಿಯಲ್ಲಿ, ಇದನ್ನು 18 ವರ್ಷಕ್ಕೆ ವಿಸ್ತರಿಸಲಾಗುವುದು.
  • ಹೊಸ ಎನ್‌ಇಪಿ ಪೂರ್ವ ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕೀಕರಣದ ಗುರಿಯನ್ನು ಹೊಂದಿದೆ ಮತ್ತು 2025 ರ ವೇಳೆಗೆ ಎಲ್ಲರಿಗೂ ಅಡಿಪಾಯದ ಸಾಕ್ಷರತೆಯನ್ನು ಒದಗಿಸುತ್ತದೆ.
  • "ಕರಡು ಎನ್ಇಪಿ ಅಡಿಪಾಯದ ಕಂಬಗಳ ಪ್ರವೇಶ, ಕೈಗೆಟುಕುವಿಕೆ, ಇಕ್ವಿಟಿ, ಗುಣಮಟ್ಟ ಮತ್ತು ಹೊಣೆಗಾರಿಕೆಯನ್ನು ಆಧರಿಸಿದೆ" ಎಂದು ಇಂದು ಬಿಡುಗಡೆಯಾದ ಕರಡು ಹೇಳುತ್ತದೆ. ಎನ್‌ಇಪಿ/NEP ಯ ಭಾವನೆಯು ಈ ಹೇಳಿಕೆಯ ಸುತ್ತ ಸುತ್ತುತ್ತದೆ.
  • ಪ್ರಸ್ತುತ 10+ 2 ಶಾಲಾ ವ್ಯವಸ್ಥೆಯನ್ನು ಅನುಸರಿಸುವ ಬದಲು, ಹೊಸ ಎನ್‌‍ಎಪಿ ಹೆಚ್ಚಾಗಿ 5+3+ 3+ 4 ಶಾಲಾ ಮಾದರಿಯನ್ನು ಅನುಸರಿಸುತ್ತದೆ. 3-8 ವರ್ಷದೊಳಗಿನ ವಿದ್ಯಾರ್ಥಿಗಳು ಅಡಿಪಾಯ ಹಂತದ ಭಾಗವಾಗಲಿದ್ದಾರೆ, ಪೂರ್ವಸಿದ್ಧತಾ ಶಾಲೆಗೆ 8-11 ವಯಸ್ಸಿನವರು, ಮಧ್ಯಮ ಶಾಲೆಗೆ 11-14 ವರ್ಷಗಳು ಮತ್ತು ಮಾಧ್ಯಮಿಕ ಹಂತಕ್ಕೆ 14-18 ವರ್ಷಗಳು.
  • ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅಡಿಯಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನದಂತಹ ವಿವಿಧ ಕ್ಷೇತ್ರಗಳಲ್ಲಿ ವಿಷಯಗಳನ್ನು ಆಯ್ಕೆಮಾಡುವಾಗ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಡಿಲತೆ ಇರುತ್ತದೆ.
  • ಹೊಸ ಎನ್‌ಇಪಿ/NEP ಪ್ರಕಾರ, ವಿದ್ಯಾರ್ಥಿಗಳು ಜೀವನದ ಆರಂಭಿಕ ಹಂತಗಳಲ್ಲಿ ಹೆಚ್ಚಿನ ಕಲಿಕೆಯ ಸಾಮರ್ಥ್ಯವನ್ನು ಹೊಂದಿರುವುದರಿಂದ ವಿದ್ಯಾರ್ಥಿಗಳು ತಮ್ಮ ಶಾಲಾ ಶಿಕ್ಷಣದ ಅಡಿಪಾಯ ಹಂತದಲ್ಲಿ ಅನೇಕ ಭಾಷೆಗಳನ್ನು ಕಲಿಯಲಿದ್ದಾರೆ. ಶಾಲೆಯು ವಿದ್ಯಾರ್ಥಿಗಳಿಗೆ ತಮ್ಮ ಪಠ್ಯಕ್ರಮದಲ್ಲಿ ಕನಿಷ್ಠ ಮೂರು ಭಾಷೆಗಳನ್ನು ಕಲಿಸಲಾಗುತ್ತದೆ.
  • ಭಾರತದ ಪ್ರಧಾನ ಮಂತ್ರಿ ನೇತೃತ್ವದಲ್ಲಿರುವ ರಾಷ್ಟ್ರೀಯ ಶಿಕ್ಷಾ ಆಯೋಗ್ (National Education Commission) ಹೊಸ ಅತ್ಯುನ್ನತ ನಿಯಂತ್ರಣ ಸಂಸ್ಥೆಯನ್ನು ರಚಿಸಲು ಎನ್‌ಇಪಿ/NEP ಉದ್ದೇಶಿಸಿದೆ.[]

ಪೂರಕ ಮಾಹಿತಿ

[ಬದಲಾಯಿಸಿ]
ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ರಾಷ್ಟ್ರೀಯ ಶಿಕ್ಷಣ ನೀತಿ ಭಾರತದಲ್ಲಿನ ಶಿಕ್ಷಣ
ಭಾರತದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಶಿಕ್ಷಣ ಪ್ರಗತಿಶೀಲ ಭಾರತದಲ್ಲಿ ಶಿಕ್ಷಣ
ಕಾಲೇಜು ಶಿಕ್ಷಣ ಭಾರತದಲ್ಲಿನ ಶಿಕ್ಷಣ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು
ಕರ್ನಾಟಕದಲ್ಲಿ ಶಿಕ್ಷಣ ಪ್ರಾಥಮಿಕ ಶಿಕ್ಷಣ ಶಿಕ್ಷಣ ಮಾಧ್ಯಮ
ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆ ಫಲಿತಾಂಶದ ಆಧಾರಿತ ಶಿಕ್ಷಣ ಉಪಾಧ್ಯಾಯರ ಶಿಕ್ಷಣ
ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ಕುರುಡರ ಶಿಕ್ಷಣ ಶಿಕ್ಷಣ ಸಾಲ
ಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಕರ್ಣಾಟಕದಲ್ಲಿ ವೈಜ್ಞಾನಿಕ ಶಿಕ್ಷಣ ಚಾರಿತ್ರ್ಯ ಶಿಕ್ಷಣ
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಗುರುಶಿಷ್ಯ ಬಾಂಧವ್ಯ ಶೈಕ್ಷಣಿಕ ಹಂತ

ಹೆಚ್ಚಿನ ಓದಿಗೆ

[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

ಉಲ್ಲೇಖ

[ಬದಲಾಯಿಸಿ]