ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು
ಸಂಕ್ಷಿಪ್ತ ಹೆಸರುಎಐಸಿಟಿಇ(AICTE)
ಸ್ಥಾಪನೆನವೆಂಬರ್, ೧೯೪೫
ಪ್ರಧಾನ ಕಚೇರಿನವದೆಹಲಿ
ಸ್ಥಳ
ಅಧ್ಯಕ್ಷ
ಅನಿಲ್ ಸಹಸ್ರಬುದೆ[೨]
ಸದಸ್ಯ ಕಾರ್ಯದರ್ಶಿ
ಅಲೋಕ್ ಪ್ರಕಾಶ್ ಮಿತ್ತಲ್[೨]
ಉಪಾಧ್ಯಕ್ಷ
ಎಂ.ಪಿ. ಪೂನಿಯಾ[೨]
ಮುಖ್ಯ ಭಾಗ
ಪರಿಷತ್ತು
ಅಂಗಸಂಸ್ಥೆಗಳುಉನ್ನತ ಶಿಕ್ಷಣ ಇಲಾಖೆ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯ
ಅಧಿಕೃತ ಜಾಲತಾಣwww.aicte-india.org


ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) (All India Council for Technical Education (AICTE)) ಎಂಬುದು ಮಾನವ ಸಂಪನ್ಮೂಲ ಸಂಪನ್ಮೂಲ ಸಚಿವಾಲಯದ, ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ತಾಂತ್ರಿಕ ಶಿಕ್ಷಣಕ್ಕಾಗಿ ರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದೆ.[೩] ನವೆಂಬರ್ 1945 ರಲ್ಲಿ ಸ್ಥಾಪನೆಯಾದ ಸಲಹಾ ಮಂಡಳಿ ಮತ್ತು ನಂತರ 1987 ರಲ್ಲಿ ಸಂಸತ್ತಿನ ಕಾಯಿದೆಯಡಿ ಶಾಸನಬದ್ಧ ಸ್ಥಾನಮಾನವನ್ನು ನೀಡಲ್ಪಟ್ಟಿತು, ಭಾರತದಲ್ಲಿ ತಾಂತ್ರಿಕ ಶಿಕ್ಷಣ ಮತ್ತು ನಿರ್ವಹಣಾ ಶಿಕ್ಷಣ ವ್ಯವಸ್ಥೆಯ ಸರಿಯಾದ ಯೋಜನೆ ಮತ್ತು ಸಂಘಟಿತ ಅಭಿವೃದ್ಧಿಗೆ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು(ಎಐಸಿಟಿಇ) ಯು ಕಾರಣವಾಗಿದೆ. ಎಐಸಿಟಿಇ(AICTE) ಯು ಭಾರತೀಯ ಸಂಸ್ಥೆಗಳ ನಿರ್ದಿಷ್ಟ ವಿಭಾಗಗಳ ಅಡಿಯಲ್ಲಿ ಸ್ನಾತಕೋತ್ತರ ಮತ್ತು ಪದವಿ ಕಾರ್ಯಕ್ರಮಗಳನ್ನು ಅದರ ಕಾಯ್ದೆಯ ಪ್ರಕಾರ ಮಾನ್ಯಮಾಡುತ್ತದೆ.[೪]

ಇದು ಇಂಜಿನಿಯರಿಂ‍ಗ್ ಮತ್ತು ತಂತ್ರಜ್ಞಾನ ಸ್ನಾತಕ ಆಧ್ಯಯನ, ಇಂಜಿನಿಯರಿಂ‍ಗ್ ಮತ್ತು ತಂತ್ರಜ್ಞಾನ ಸ್ನಾತಕೋತ್ತರ ಮತ್ತು ಸಂಶೊಧನಾ ಆಧ್ಯಯನ. ತಾಂತ್ರಿಕ ಶಿಕ್ಷಣ, ಔಷಧೀಯ ಶಿಕ್ಷಣ, ವಾಸ್ತುಶಿಲ್ಪ, ಹೋಟೆಲ್ ನಿರ್ವಹಣೆ ಮತ್ತು ಅಡುಗೆ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಪಟ್ಟಣ ಮತ್ತು ದೇಶ ಯೋಜನೆ ಮುಂತಾದ ಹತ್ತು ಶಾಸನಬದ್ಧ ಆಧ್ಯಯನ ಮಂಡಳಿಗಳ ಸಹಾಯ ಪಡೆಯುತ್ತದೆ . ಎಐಸಿಸಿಟಿ ತನ್ನ ನೂತನ ಪ್ರಧಾನ ಕಛೇರಿಯನ್ನು ನೆಲ್ಸನ್ ಮಂಡೇಲಾ ರಸ್ತೆ, ವಸಂತ್ ಕುಂಜ್, ನವದೆಹಲಿ, 110 067 ಯಲ್ಲಿ ಹೊಂದಿದೆ. ಇಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳ ಕಚೇರಿಗಳು ಇವೆ, ಜೊತೆಗೆ ಇದು ಕಾನ್ಪುರ್, ಚಂಡೀಗಢ, ಗುರಗಾಂವ್, ಮುಂಬೈ, ಭೋಪಾಲ್, ಬರೋಡಾ, ಕೊಲ್ಕತ್ತಾ, ಗುವಾಹಟಿ, ಬೆಂಗಳೂರು, ಹೈದರಾಬಾದ್, ಚೆನ್ನೈ ಮತ್ತು ತಿರುವನಂತಪುರಂ ನಲ್ಲಿ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ,[೫]


ಉದ್ದೇಶಗಳು[ಬದಲಾಯಿಸಿ]

 • ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಉತ್ತೇಜಿಸುವುದು .
 • ತಾಂತ್ರಿಕ ಶಿಕ್ಷಣ ವ್ಯವಸ್ಥೆಯ ಯೋಜನೆ ಮತ್ತು ಸಂಯೋಜಿತ ಅಭಿವೃದ್ಧಿ .
 • ನಿಯಂತ್ರಣಗಳು ಮತ್ತು ನಿರ್ವಹಣೆ ನಿಯಮಗಳು ಮತ್ತು ಮಾನದಂಡಗಳು.

ಸಂಸ್ಥೆಯ ದಳಗಳು[ಬದಲಾಯಿಸಿ]

 • ಇ-ಆಡಳಿತ ದಳ
 • ಅನುಮೋದನಾ ದಳ
 • ಯೊಜನಾ, ಸಹಕಾರ ಮತ್ತು ಶೈಕ್ಷಣಿಕ ದಳ
 • ವಿಶ್ವವಿದ್ಯಾಲಯ ದಳ
 • ಆಡಳಿತ ದಳ
 • ಹಣಕಾಸು ದಳ
 • ಸಂಶೋದನೆ, ಸಾಂಸ್ಥಿಕ ಮತ್ತು ಸಿಬ್ಬಂದಿ ಅಬಿವೃದ್ಧಿ ದಳ

ಅನುಮೋದಿತ ಸಂಸ್ಥೆಗಳಲ್ಲಿ ಹೆಚ್ಚಳ[ಬದಲಾಯಿಸಿ]

ದೇಶದಲ್ಲಿ ತಾಂತ್ರಿಕ ಸಂಸ್ಥೆಗಳ ಬೆಳವಣಿಗೆ[೬][ಬದಲಾಯಿಸಿ]

ವರ್ಷ ಇಂಜಿನಿಯರಿಂಗ್ ಮ್ಯಾನೇಜ್ಮೆಂಟ್ ಎಂಸಿಎ ಫಾರ್ಮಸಿ ಆರ್ಕಿಟೆಕ್ಚರ್ ಹೊಟೆಲ್ ಮ್ಯಾನೇಜ್ಮೆಂಟ್ ಒಟ್ಟು
೨೦೦೬-೦೭ ೧೫೧೧ ೧೧೩೨ ೧೦೦೩ ೬೬೫ ೧೧೬ ೬೪ ೪೪೯೧
೨೦೦೭-೦೮ ೧೬೬೮ ೧೧೪೯ ೧೦೧೭ ೮೫೪ ೧೧೬ ೮೧ ೪೮೮೫
೨೦೦೮-೦೯ ೨೩೮೮ ೧೫೨೩ ೧೦೯೫ ೧೦೨೧ ೧೧೬ ೮೭ ೬೨೩೦
೨೦೦೯/೧೦ ೨೯೭೨ ೧೯೪೦ ೧೧೬೯ ೧೦೮೧ ೧೦೬ ೯೩ ೭೩೬೧
೨೦೧೦-೧೧ ೩೨೨೨ ೨೨೬೨ ೧೧೯೮ ೧೧೧೪ ೧೦೮ ೧೦೦ ೮೦೦೪
೨೦೧೧-೧೨ ೩೩೯೩ ೨೩೮೫ ೧೨೨೮ ೧೧೩೭ ೧೧೬ ೧೦೨ ೮೩೬೧
೨೦೧೨-೧೩ ೩೪೯೫ ೨೪೫೦ ೧೨೪೧ ೧೧೪೫ ೧೨೬ ೧೦೫ ೮೫೬೨
೨೦೧೩-೧೪ ೩೩೮೪ ೨೪೫೦ ೧೨೪೧ ೧೦೩೧ ೧೦೫ ೮೧ ೮೫೬೨
೨೦೧೪-೧೫ ೩೩೯೨ ೨೪೫೦ ೧೨೪೧ ೧೦೨೫ ೧೧೪ ೭೭ ೮೫೬೨
೨೦೧೫-೧೬ ೩೩೬೪ ೨೪೫೦ ೧೨೪೧ ೧೦೨೭ ೧೧೭ ೭೭ ೮೫೬೨
೨೦೧೬-೧೭ ೩೨೮೮ ೨೪೫೦ ೧೨೪೧ ೧೦೩೪ ೧೧೫ ೭೪

ತಾಂತ್ರಿಕ ಸಂಸ್ಥೆಗಳ ವಿವಿಧ ತರಗತಿಗಳಿಗೆ ಪ್ರವೇಶ ಪಡೆದ ಬೆಳವಣಿಗೆಯ ಅಂಕಿ ಅಂಶಗಳು[೬][ಬದಲಾಯಿಸಿ]

ವರ್ಷ ಇಂಜಿನಿಯರಿಂಗ್ ಮ್ಯಾನೇಜ್ಮೆಂಟ್ ಎಂಸಿಎ ಫಾರ್ಮಸಿ ಆರ್ಕಿಟೆಕ್ಚರ್ ಹೊಟೆಲ್ ಮ್ಯಾನೇಜ್ಮೆಂಟ್ ಒಟ್ಟು
೨೦೦೫-೦೬ ೪೯೯೬೯೭ ೩೨೭೦೮ ೪೩೭೯ ೪೪೩೫ ೫೪೧೨೧೯
೨೦೦೬-೦೭ ೫೫೦೯೮೬ ೯೪೭೦೪ ೫೬೮೦೫ ೩೯೫೧೭ ೪೫೪೩ ೪೨೪೨ ೭೫೦೭೯೭
೨೦೦೭-೦೮ ೬೫೩೨೯೦ ೧೨೧೮೬೭ ೭೦೫೧೩ ೫೨೩೩೪ ೪೫೪೩ ೫೨೭೫ ೯೦೭೮೨೨
೨೦೦೮-೦೯ ೮೪೧೦೧೮ ೧೪೯೫೫೫ ೭೩೯೯೫ ೬೪೨೧೧ ೪೫೪೩ ೫೭೯೪ ೧೧೩೯೧೧೬
೨೦೦೯-೧೦ ೧೦೭೧೮೯೬ ೧೭೯೫೬೧ ೭೮೨೯೩ ೬೮೩೭ ೪೧೩೩ ೬೩೮೭ ೧೪೦೮೮೦೭
೨೦೧೦-೧೧ ೧೩೧೪೫೯೪ ೨೭೭೮೧೧ ೮೭೨೧೬ ೯೮೭೪೬ ೪೯೯೧ ೭೩೯೩ ೧೭೯೦೭೫೧
೨೦೧೧-೧೨ ೧೪೮೫೮೯೪ ೩೫೨೫೭೧ ೯೨೨೧೬ ೧೦೨೭೪೬ ೫೪೯೧ ೭೬೯೩ ೨೦೪೬೬೧೧
೨೦೧೨-೧೩ ೧೭೬೧೯೭೬ ೩೮೫೦೦೮ ೧೦೦೭೦೦ ೧೨೧೬೫೨ ೫೯೯೬ ೮೪೦೧ ೨೨೩೬೭೪೩

ಸುಧಾರಣೆಗಳು[ಬದಲಾಯಿಸಿ]

ಮೂರು ಪ್ರಮುಖ ಉಪಕ್ರಮಗಳನ್ನು ೨೦೧೬ ರಲ್ಲಿ, ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್(AICTE) ಕೈಗೆತ್ತಿಕೊಂಡಿತು. ಅವುಗಳಲ್ಲಿ, ಮೊದಲನೆಯದು, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯ(MHRD) ನೀಡಿದ ಜವಾಬ್ದಾರಿಯಾದ ಸ್ವಯಂ(SWAYAM)[೭] ಎಂಬ ರಾಷ್ಟ್ರೀಯ ಬೃಹತ್ ಮುಕ್ತ ಅಂತರ್ಜಾಲ ಪಾಠ ಪ್ರವಚನಗಳ ಸರಣಿ(Massive Open Online Courses (MOOCs)) ವೇದಿಕೆಯನ್ನು ಸಿದ್ದಪಡಿಸುವುದು. ಎರಡನೆಯದು, ತಾಂತ್ರಿಕ ಕಾಲೇಜುಗಳ ಯುವ ಜಾಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸವಾಲಾದ ೨೯ ವಿವಿಧ ಸರ್ಕಾರಿ ಇಲಾಖೆಗಳ ೫೯೮ ಸಮಸ್ಯೆಗಳನ್ನು ಬಗೆಹರಿಸಲು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-೨೦೧೭(Smart India Hackathon-2017)ನ್ನು ಪ್ರಾರಂಭಿಸುವುದಕ್ಕೆ ಸಂಬಂಧಿಸಿದ್ದು.[೮]ಮೂರನೆಯದು, ನವೆಂಬರ್ ೧೬ ರಂದು ಸನ್ಮಾನ್ಯ ರಾಷ್ಟ್ರಪತಿಗಳು ರಾಷ್ಟ್ರಪತಿ ಭವನದ ಸಂದರ್ಶಕರ ಸಮಾವೇಶದಲ್ಲಿ ಎ.ಐ.ಸಿ.ಟಿ.ಟಿ.ಯ ವಿದ್ಯಾರ್ಥಿಗಳ ಪ್ರಾರಂಭಿಕೆ(Start up) ನೀತಿಯನ್ನು ಕಾರ್ಯಾರಂಭಿಸುವುದು. 2009 ರಲ್ಲಿ, ಕೇಂದ್ರ ಶಿಕ್ಷಣ ಸಚಿವ ಔಪಚಾರಿಕವಾಗಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್(AICTE) ಮತ್ತು ಸಂಬಂಧಿತ ಸಂಸ್ಥೆಯಾದ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುನಿವರ್ಸಿಟಿ ಗ್ರಾಂಟ್ಸ್ ಕಮೀಷನ್) (UGC)) ವನ್ನು ಮುಚ್ಚುವ ತನ್ನ ಉದ್ದೇಶಗಳನ್ನು ತಿಳಿಸಿದರು.[೯] ಇದು ನಂತರ, ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್(AICTE) ಸಂಸ್ಥೆಗಳಿಗೆ ಅನುಮೋದನೆ ನೀಡುವ ರೀತಿಯಲ್ಲಿ ಸುಧಾರಣೆಗೆ ಮತ್ತು ರಾಷ್ಟ್ರೀಯ ಮಾನ್ಯತಾ ಮಂಡಳಿ (ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್ (NBA)) ಯನ್ನು ಸ್ವತಂತ್ರ ಸಂಸ್ಥೆಯಾಗಿ ಸ್ಥಾಪಿಸಲು ಕಾರಣವಾಯಿತು, [೧೦] 2013 ರ ಹೊತ್ತಿಗೆ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು(AICTE) ಇನ್ನೂ ಕಾರ್ಯನಿರ್ವಹಿಸುತ್ತಿದೆ.

2017 ರ ಜೂನ್ 6 ರಂದು ಪ್ರಧಾನಿ ನರೇಂದ್ರ ಮೋದಿಯವರು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ಮತ್ತು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುನಿವರ್ಸಿಟಿ ಗ್ರಾಂಟ್ಸ್ ಕಮೀಷನ್) (UGC)) ರದ್ದಾಗುವುದಲ್ಲದೇ, ಹೈಯರ್ ಎಜುಕೇಶನ್ ಎಂಪವರ್ಮೆಂಟ್ ಎಜೆನ್ಸಿ(Higher Education Empowerment Regulation Agency (HEERA)) ಎಂಬ ಹೊಸ ಸಂಸ್ಥೆಯಾಗಿ ಬದಲಾಯಿಸಲ್ಪಡುವುದಾಗಿ ತಿಳಿಸಿದರು. ಇದು ಇವೆರಡು ಸಂಸ್ಥೆಗಳಿಂದ ಉಂಟಾಗುವ ವಿಪರೀತ ನಿಯಮಾವಳಿಗಳನ್ನು ಸರಳಗೊಳಿಸುವ ಒಂದು ಪ್ರಯತ್ನವಾಗಿದೆ.

ಇವುಗಳನ್ನೂ ನೋಡಿ[ಬದಲಾಯಿಸಿ]

 • Regional accreditation
 • Education in India
 • DOEACC
 • Science and technology in India
 • Indian Institute of Technology

ಬಾಹ್ಯ ಕೊಂಡಿಗಳು[ಬದಲಾಯಿಸಿ]

https://www.aicte-india.org/

ಉಲ್ಲೇಖಗಳು[ಬದಲಾಯಿಸಿ]

 1. Regional Offices Archived 19 January 2010 ವೇಬ್ಯಾಕ್ ಮೆಷಿನ್ ನಲ್ಲಿ. AICTE website.
 2. ೨.೦ ೨.೧ ೨.೨ "Leadership Team". www.aicte-india.org. Retrieved 9 April 2018.
 3. Technical Education Overview Archived 5 October 2011 ವೇಬ್ಯಾಕ್ ಮೆಷಿನ್ ನಲ್ಲಿ. Department of Higher Education
 4. AICTE Act |bot=medic}}
 5. National Level Councils Archived 1 February 2010 ವೇಬ್ಯಾಕ್ ಮೆಷಿನ್ ನಲ್ಲಿ. Tech Ed., Department of Higher Education.
 6. ೬.೦ ೬.೧ [೧]
 7. https://swayam.gov.in/
 8. https://sih.gov.in/
 9. "UGC, AICTE to be scrapped: Sibal". iGovernment.in. Archived from the original on 9 October 2011. Retrieved 29 November 2011. {{cite web}}: Unknown parameter |deadurl= ignored (help)
 10. "AICTE to revamp its approval system next week". Business Standard. Retrieved 29 November 2011.