ಪ್ರಗತಿಶೀಲ ಭಾರತದಲ್ಲಿ ಶಿಕ್ಷಣ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search


ಶಿಕ್ಷಣದ ಅರ್ಥ: 
ಪ್ರಗತಿ ಶೀಲ ಶಿಕ್ಷಣ

ಶಿಕ್ಷಣ ಎಂಬ ಪದಕ್ಕೆ ವ್ಯಾಪಕವದ ಅರ್ಥವಿದೆ. ಆ ಅರ್ಥವನ್ನು ಹಿಡಿದಿಡುವ ಒಂದು ಸಮರ್ಥ ವ್ಯಾಖ್ಯೆಯನ್ನು ಅಥವಾ ನಿರ್ದಿಷ್ಟ್ಟವಾಗಿ ಇದೇ ಶಿಕ್ಷಣ ಎಂಬ ವ್ಯಾಖ್ಯೆಯನ್ನು ಕೊಡುವುದು ಕಷ್ಟ್ಟ .ತತ್ವಜ್ಞಾನಿಗಳು ಶಿಕ್ಷಣತಜ್ಞರು ,ರಾಜಕಾರಣಿಗಳು ಮತ್ತು ಸಾಧುಸಂತರು ಇನ್ನು ಮುಂತಾದವರೆಲ್ಲರೂ ತಮ್ಮ ತಮ್ಮ ದೃಷ್ಟಿ ಕೋನಗಳಿಗನುಗುಣವಾಗಿ ಶಿಕ್ಷಣವನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರತಿಯೊಂದು ಸಂಪೂರ್ಣವಲ್ಲದಿದ್ದರು ಶಿಕ್ಷಣದ ಬಗ್ಗೆ ಪರಿಗಣಿಸಬೇಕಾದ ಒಂದಲ್ಲ ಒಂದಂಶವನ್ನು ಎತ್ತಿ ಹಿಡಿಯುವದರಿಂದ ಶಿಕ್ಷಣದ ಯಾವುದೇ ವ್ಯಾಖ್ಯೆಯನ್ನು ತಳ್ಳಿಹಾಕುವಂತಿಲ್ಲ. ಇದರಿಂದ ಶಿಕ್ಷಣದ ಪರಿಕಲ್ಪನೆಯು ಸಂಕೀರ್ಣವಾದುದು ಹಾಗೂ ಸಕ್ರಿಯವಾದುದು ಎಂದು ಹೇಳಬಹುದಾಗಿದೆ. ನಿರಂತರವಾಗಿ ಪ್ರಗತಿ ಹೊಂದುತ್ತಿರುವ ಸಮಜದಲ್ಲಿ ಬೆಳೆಯುತ್ತಿರುವ ಮಾನವನಿಗೆ ಸಂಬಂಧಿಸಿರುವದರಿಂದ ಶಿಕ್ಷಣದ ಪರಿಕಲ್ಪನೆಯೂ ಬದಲಾಗುತ್ತಿರುತ್ತದೆ. ಅಂತೆಯೇ ಶಿಕ್ಷಣದ ಬಗೆಗೆ ಅಂತಿಮ ಹೇಳಿಕೆ ಸಾಧ್ಯವೆ ಇಲ್ಲ ವೆನ್ನಬಹುದಾಗಿದೆ.

ಸಾಮಾಜಿಕ ಸಾಂಸ್ಕೃತಿಕ ಸಾಂಪ್ರದಾಯಕ ಭಾರತ:[ಬದಲಾಯಿಸಿ]

ಆದಿ ಮಾನವ ಪ್ರಾರಂಭದಲ್ಲಿ ಸಂಚಾರಿ ಜೀವನವನ್ನವಲಂಬಿಸಿ ಬೆಟ್ಟ ಗುಡ್ಡಗಳಲ್ಲಿ ಕಾಡುಮೇಡುಗಳಲ್ಲಿ ಸಂಚರಿಸುತ್ತಾ ಅಲೆಮಾರಿ ಜೀವನಕ್ಕೆ ಜೋತು ಬಿದ್ದು ಕಾಲಕ್ರಮೇಣ ನದಿ ಬಯಲು ಪ್ರದೇಶವನ್ನು ಆಶ್ರಯಿಸಿ ಸ್ಥಾಯಿಯಗಿ ಒಂದುಕಡೆ ನೆಲೆಯಾಗಿ ನಿಂತು ಕ್ರಿಯಾತ್ಮಕ ಸಾಮಾಜಿಕ ಜೀವನಕ್ಕೆ ನಾಂದಿ ಹಾಡಿದ. ಅಂದಿನಿಂದ ಮಾನವ ಗುಂಪಾಗಿ ಸಮಾಜದಲ್ಲಿ ವಾಸಿಸಲಾರಂಭಿಸಿ ವ್ಯವಸಾಯವನ್ನು ಮತ್ತು ಇತರ ಉಪಕಸುಬುಗಳನ್ನು ಅವಲಂಬಿಸಿ ಜೀವನ ಮಾಡಲಾರಂಭಿಸಿದನು. ಕಾಲಕ್ರಮೇಣ ಮಾನವ ಸಮಾಜದಲ್ಲಿ ಜಾತಿ ಮತ್ತು ವರ್ಗ ಪದ್ದತಿಗಳ ಕಲ್ಪನೆ ಮೂಡಲರಂಭಿಸಿದರು. ಇದರ ಪರಿಣಮವಾಗಿ ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ಹಂತಗಳು ಸಮಾಜದ ಕಾರ್ಯಕಲಾಪಗಳನ್ನು ನೇರವೇರಿಸಿಕೊಂಡು ಹೋಗುತ್ತಿದ್ದವು ಬ್ರಾಹ್ಮಣ ವರ್ಗ ಪಾಠ ಪ್ರವಚನ ಭೋದಿಸುವ ಕಾರ್ಯ,ಕ್ಷತ್ರಿಯ ವರ್ಗ ರಾಜ್ಯ ಪಾಲನೆ ವೈಶ್ಯ ವರ್ಗ ವ್ಯಾಪಾರ ವ್ಯವಹಾರ, ಶೂದ್ರ ವರ್ಗ ಸಮಾಜದ ಶುಚಿತ್ವಕ್ಕೆ ಮತ್ತು ಮೇಲಿನ ಮೂರು ವರ್ಗಗಳ ಚಾಕರಿಗೆ ಮೀಸಲಾಗಿದ್ದಿತ್ತು. ಹೀಗೆ ಇವು ನಿರಂತರವಾಗಿ ಕಾರ್ಯ ನೇರವೇರಿಸಿಕೊಂಡು ಹೋಗುತ್ತಿದ್ದವು.

ಗುರುಕುಲ ಪದ್ಧತಿ

ಅಂದು ವಿದ್ಯಾಭ್ಯಾಸಕ್ಕೆ ಅಷ್ಟು ಪ್ರಾಮುಖ್ಯತೆ ಇರಲಿಲ್ಲ. ಕೇವಲ ಬ್ರಾಹ್ಮಣರಿಗೆ ಮಾತ್ರ ಶಿಕ್ಷಣ ಮೀಸಲಾಗಿತ್ತು. ಸ್ತ್ರೀಯಂತು ಅಕ್ಷ್ರರಾಭ್ಯಾಸ ಮಾಡುವುದೆ ಅಪರಾದವೆಂದು ಪರಿಗಣಿಸಿದ್ದರು ಮತ್ತು ಅಶ್ರಮಗಳಲ್ಲಿ ಗುರುಕುಲಗಳಲ್ಲಿ ಮಾತ್ರ ಶಿಕ್ಷಣ ವ್ಯಾಸಂಗ ವಾಗಬೇಕಿತ್ತು. ಅಂದಿನ ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಬಹಳ ಕಡಿಮೆ ಇತ್ತು. ಕಾರಣ ವ್ಯವಸಾಯವೇ ಪ್ರಧಾನವಾದ್ದರಿಂದ ಶಿಕ್ಷಣಕ್ಕೆ ಮಹತ್ವವಿರಲಿಲ್ಲ .ಗುರುಕುಲಗಳಲ್ಲಿ ವ್ಯಾಕಾರಣ ಗಣಿತ, ವೇದ, ಆಲಂಕಾರ, ಉಪನಿಷತ್ತುಗಳಿಗೆ ಸಂಬಂಧಪಟ್ಟ ವಿಷಯ ಭೋಧನೆಗೆ ಪ್ರಾಮುಖ್ಯತೆ ಕೊಟ್ಟಿದ್ದರು. ಕಾಲಕ್ರಮೇಣ ಗುರುಕುಲಗಳಲ್ಲಿ ಶಿಕ್ಷಣ ವ್ಯವಸ್ಥೆ ಮರೆಯಾಗುತ್ತಾ ಬಂದಿತು. ಬದಲಿಗೆ ಕೂಲಿ ಮಠಗಳಲ್ಲಿ ಶಿಕ್ಷಣ ಪ್ರಸಾರ ಕಂಡುಬಂದಿತು. ನಂತರ ಕಾಲಕ್ರಮೇಣ ಮನುಷ್ಯನ ಸಾಹಸ ಪ್ರಯತ್ನಗಳಿಂದ, ಜನ ಸಂಖ್ಯೆ ಏರಿಕೆಯಿಂಲು ನಾನಾ ಅವಿಷ್ಕಾರಗಳು,ಹೊಸ ಹೊಸ ಬೇಡಿಕೆಗಳು ಸಮಸ್ಯೆಗಳು ಕಂಡು ಬಂದುದರ ಪರಿಣಾಮವಾಗಿ ಕೂಲಿ ಮಠದ ಶಿಕ್ಷಣವು ಕಣ್ಮರೆಯಾಯಿತು. ಕಾಲಾನಂತರ ಸಾಂಪ್ರದಾಯಿಕ ಶಿಕ್ಷಣವು ಜಾರಿಗೆ ಬಂದಿತು. ಸಾಂಪ್ರದಾಯಕ ಶಿಕ್ಷಣವೆಂದರೆ ಈಗ ಪ್ರಸ್ತುತ ಸಮಾಜದಲ್ಲಿ ಕಂಡುಬರುತ್ತಿರುವ ಶಿಕ್ಷಣ.ಅಂದರೆ ನಾಲ್ಕು ಗೋಡೆಗಳ ನಡುವೆ ಶಿಕ್ಷಕ ಮತ್ತು ವಿದ್ಯಾರ್ಥಿಗಳೊಡಗೂಡಿ ನಡೆಯುವ ಶಿಕ್ಷಣ ವ್ಯವಸ್ಥೆ . ಈ ಶಿಕ್ಷಣಕ್ಕೆ ಸೂಕ್ತವಾದ, ಉತ್ತಮವಾದ ಗಾಳಿ ಬೆಳಕಿನಿಂದ ಪ್ರಶಾಂತವಾತವರಣದಲ್ಲಿ ಒಂದೇ ಕಟ್ಟಡವಿರಬೇಕು, ಆ ಕಟ್ಟಡಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು,ವಿಷಯ ಬೋಧಿಸುವ ಮತ್ತು ಮಾರ್ಗದರ್ಶನ ಬೋದಕ ವೃಂದ, ಹಾಗೂ ಪಾಠಪೀಠೋಪಕರಣಗಳು ಅಗತ್ಯವಾಗಿರಬೇಕು. ಈ ಎಲ್ಲದರ ಔಪಚಾರಿಕ ಶಿಕ್ಷಣದ ಉಸ್ತುವಾರಿ ಮತ್ತು ಮೇಲ್ವಿಚಾರಣೆ ನೋಡಿಕೊಳ್ಳಲು ಮುಖ್ಯೋಪಾಧ್ಯಾಯ ಹಾಗೂ ಮೇಲ್ವಿಚಾರಣೆಯ ಆಡಳಿತ ವರ್ಗಬೇಕು.

ಹೀಗೆ ಗುರುಕುಲಗಳಲ್ಲಿ, ಮಸೀದಿ, ಮಠಗಳಲ್ಲಿ ನಡೆಯುತ್ತಿದ್ದ ಶಿಕ್ಷಣವು ವಿಕಾಸ ಹೊಂದುತ್ತಾ ಇಂದು ಸಾರ್ವಜನಿಕ ಸ್ಥಳಗಳಲ್ಲಿ ಸರ್ವರಿಗು ಲಭ್ಯವಾಗುವಂತೆ ಮತ್ತು ಸಂವಿಧಾನಾತ್ಮಕವಾಗಿ ಶಿಕ್ಷಣ ಕೇಳುವ ಮತ್ತು ಪಡೆಯುವ ಹಕ್ಕು ಇಂದಿನ ಪ್ರಗತಿಶೀಲ ಭಾರತದಲ್ಲಿ ಕಾಣುತ್ತಿದ್ದೇವೆ. ಚರಿತ್ರೆಯ ಪೂರ್ವದಿನಗಳಿಂದ ಆಧುನಿಕ ಕಾಲಾವಧಿಯವರೆಗೆ ವಿವಿಧ ಕಲೆಗಳು ಬೆಳೆದುಬಂದಿವೆ. ಕಲೆಗಳು ಬದುಕಿನ ವಿವಿಧ ಮಜಲುಗಳನ್ನು ಪ್ರತಿಬಿಂಬಿಸುತ್ತಿವೆ. ನರ್ತನ ಗಾಯನ, ಚಿತ್ರಣ ಎಲ್ಲರಿಗು ಇಷ್ಟ, ಹಾಗೆಯೇ ಕಲೆಯೂ ಅಷ್ಟೇ, ಕಲೆಗಳಿಲ್ಲದ ದೇಶವಿಲ್ಲ, ಸಾಹಿತ್ಯವಿಲ್ಲದ, ಭಾಷೆಯಿಲ್ಲ. ನರ್ತನ ಸಂಗೀತ ಚಿತ್ರಕಲೆ ಮುಂತಾದ ಸಂಗೀತಸಾಹಿತ್ಯಕಲೆಗೆ ಜಾನಪದವೇ ಮೂಲ. ಭಾರತೀಯ ಜನಜೀವನದಲ್ಲಿ ಕಲೆ ಸಾಹಿತ್ಯ, ಸಂಗೀತ ಒಂದಂಗವಾಗಿ ರೂಪುಗೊಂಡವು.ಪ್ರಾರಂಭದಲ್ಲಿ ಮಾನವ ಬೆಂಕಿ, ಮಳೆ ಇದನನ್ನು ಕಂಡು ಕಣಿದುಕುಪ್ಪಳಿಸಿದ. ತನ್ನ ದುಡಿಮೆಯ ಉಪಕರಣಗಳನ್ನು ಪೂಜಿಸಿ ಹಾಡಿಕುಣಿದು ಕುಪ್ಪಳಿಸಿ ಈ ಎಲ್ಲದರ ಪರಿಣಾಮವಾಗಿ ಜನಸಮುದಾಯದಿಂದ ಸಂಸ್ಕೃತಿ ಬೆಳೆಯಿತು. ಹಾಗೆ ಪೀಳಿಗೆಯಿಂದ ಪೀಳಿಗೆಗೆ ಬೆಳೆಯುತ್ತಾ ಬಳುವಳಿಯಾಗಿ ಬಂದಿತು. ಜಾನಪದರು ಆಯಾಸದರಿವಿಲ್ಲದೆ ತಮ್ಮ ನಿತ್ಯ ಕಾಯಗಳಲ್ಲಿ ಹಲವಾರು ಹಾಡುಗಳನ್ನು ಹಾಡಿಕೊಳ್ಳುತ್ತಿದ್ದರು. ಬೀಸುವಾಗ. ಕಟ್ಟುವಾಗ, ಮದುವೆಯಾಗುವಾಗ ಕಳೇಕೀಳುವಾಗ, ನಾಟಿ ಹಾಕುವಾಗ ಸುಗ್ಗಿಮಾಡುವಾಗ ಹೀಗೆ ಹಲವು ಸಂದಾರ್ಭದಲ್ಲಿ ಜಾನಪದರ ಭಾವನೆಯು ತ್ರಿಪದಿಗಳಲ್ಲಿ ವ್ಯಕ್ತವಾಗುತ್ತಿತ್ತು. ಕ್ರಮೇಣ ಈ ಕಲೆ ಆಧುನೀಕರಣಗೊಂಡಂತಹ ಸಮಾಜದಲ್ಲಿ ಭಿನ್ನವಾದ ರೂಪವನ್ನು ಪಡೆಯುತ್ತಾ ಬಂದಿತು. ಜೊತೆಗೆ ಹೊಸ ಹೊಸ ಆವಿಷ್ಕಾರಗಳು ಬಂದು ಶಾಸ್ತ್ರೀಯ ನೃತ್ಯಗಳಾದ ಭರತನಾಟ್ಯ ಕಥಕ್ಕಳಿ ಕುಚುಪುಡಿ, ಒಡಿಸ್ಸೆ, ಮಣಿಪುರಿ ಮುಂತಾದವುಗಳ ಜೊತೆಗೆ ಸಂಗೀತವೂ ಕೂಡ ವಿಶಿಷ್ಟವಾಗಿ ಬೆಳೆಯಿತು. ಈ ಸಾಂಸ್ಕ್ರತಿಕ ಕಲೆಗೆ ಶಿಕ್ಷಣದ ಅಗತ್ಯವಿದೆ. ಆದರೆ ಆದಿಮಾನವನ ಮತ್ತು ಜಾನಪದಕಲೆಗಳಲ್ಲಿ ಶಿಕ್ಷಣದ ಅಗತ್ಯವಿರಲಿಲ್ಲ. ಅದು ಮೌಖಿಕವಾಗಿ ಹರಿದುಬಂದ ವಿಶಿಷ್ಟ ವರ್ಗದ ಕಲೆ. ಆದರೆ ಇಂದಿನ ಕಲೆಗಳು ಮೌಖಿಕತೆಗಿಂತ ಲಿಖಿತ ರೂಪಕ್ಕೆ ಹೆಚ್ಚು ಫ್ರಮುಖ್ಯತೆ ಇತ್ತಿವೆಯಾದ್ದರಿಂದ ಶಿಕ್ಷಣದ ಮಹತ್ವವು ಆಧಿಕವಾಗಿದೆ. ಪ್ರಗತಿಶೀಲವಾಗುತ್ತಿರುವ ಭಾರತದ ಶಿಕ್ಷಣದಲ್ಲಿ ಭಾರತಿಯ ಸಂಸ್ಕೃತಿಗೆ ಸಂಬಂಧಪಟ್ಟ ಪದವಿಗಳು ಸಂಶೋಧನೆಗಳು ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸಮಾಡಲು ವಿಶೇಷ ಪ್ರಾಮುಖ್ಯತೆಯನ್ನು ನೀಡಿರುವುದನ್ನು ಕಾಣಬಹುದು.


ಆಧುನೀಕರಣಗೊಳ್ಳುತ್ತಿರುವ ಭಾರತ[ಬದಲಾಯಿಸಿ]

ಮಾನವನ ಸಂಸ್ಕೃತಿ,ಸಾಹಿತ್ಯಿಕ ಐತಿಹಾಸಿಕ ಜೀವನವನ್ನು ನೋಡಿದಾಗ ತನ್ನದೆ ಅದ ವಿಶಿಷ್ಟ್ಟ ಲಕ್ಷಣಗಳು ಮತ್ತು ವ್ಯವಸ್ಥೆತನ್ನು ಹೊಂದಿರುವುದನ್ನು ಕಾಣುತ್ತೆವೆ. ಇದು ಕಾಲಚಕ್ರದಲ್ಲಿ ಸ್ಥಿತ್ಯಾಂತರ ಹೊಂದಿ ಮಾನವನನ್ನು ಬಂಧಿಸಿ ಅನೇಕ ಬಂಧನಗಳು ಕಟ್ಟಪಡುಗಳು, ಕಟುಸಂಪ್ರಾದಾಯಗಳು, ಪವಾಡಗಳು,ಜೋತಿಷ್ಯಾ ಪಂಚಾಂಗಗಳ ಬಗ್ಗೆ ಏಕೆ? ಹೇಗೆ? ಎಂದು ಪ್ರಶ್ನಿಸುವ ವೈಚಾರಿಕತೆಯ ಭಾವಬುದ್ದಿಯನ್ನು ಮನುಷ್ಯ ಬೆಳೆಸಿಕೊಂಡು ತನ್ನ ನೈಜ್ಯ ಜೀವನದ ಬಗ್ಗೆ ಪ್ರಜ್ನ್ಯಾವಂತನಾಗಿ ವಿಶಾಲ ಮನೋಭಾವನೆ ಬೆಳೆಸಿಕೊಂಡು ಮೇಲೆ ಸಾಂಸ್ಕ್ರತಿಕ, ಸಾಹಿತ್ಯಿಕ ಜೀವನಕ್ರಮವು ಸಹ ನವೀನವಾಗುತ್ತಾ ಬಂದಿತು.ಅಪ್ಪ ಹಾಕಿದ ಆಲದಮರಕ್ಕೆ ನೇಣು ಹಾಕಿಕೊಳ್ಳದೆ ಬೇರೆ ಮರಕ್ಕೆ ನೇಣು ಹಾಕಿಕೊಂಡು ನೋಡೋಣ ಎಂಬ ಮನೋಭಾನೆ ಬೆಳೆಯಿತು.ಅಂದರೆ ಪರಂಪರೆಗಳು, ರೂಢಿಗಳು ಅನೂಚನವಾಗಿ ಬಂದ ಪರಂಪರೆಗಳನ್ನು ಒರೆಹಚ್ಚಿ ತಿಕ್ಕಿನೋಡಿ ಸತ್ಯಾಸತ್ಯತೆಯನ್ನು ಕಂಡುಕೊಳ್ಲುವ ಮನೋಭಾವ ಬೆಳೆದುಬಂದು ವ್ಯವಸಾಯಯೋಚಿತವಾದ ಕುಟುಂಬಗಳು ಕೈಗಾರಿಕಾ ಪ್ರಾಧಾನ ಕುಟುಂಬಗಳಾದವು. ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬಗಳಾದವು. ಉತ್ಪಾದನೆಯನ್ನು ಹೆಚ್ಚಿಸುವ ಉಪಕರಣಗಳು, ಬೀಜಗಳು, ರಸಗೊಬ್ಬರಗಳು, ಬಿತ್ತನೆ ವಿಧಾನಗಳು, ಮಾರುಕಟ್ಟೆ, ಮನುಷ್ಯನ ಮೂಢನಂಬಿಕೆಗಳಿಂದ ದೂರ ಮಾಡಿದವು. ಇವುಗಳಿಗೆ ಪೂರಕವಾಗಿ ರೇಡಿಯೋ, ಪತ್ರಿಕೆಗಳು,ಚಲನಚಿತ್ರ, ದೂರದರ್ಶನ, ವೀಡಿಯೋ ಮುಂತಾದ ಜ್ಞಾನ ಮಾಧ್ಯಮಗಳು ಜನತೆಯಲ್ಲಿ ನವೀನತೆಯನ್ನುಂಟು ಮಾಡುವ ದಾರಿದೀಪಗಳಾದವೆಂದು ಹೇಳಬಹುದು.

ಚಿತ್ರ:Federal Open Market Committee Meeting.jpg
ಆಧುನಿಕರಣಗೊಳ್ಳುತ್ತಿರುವ ಶಿಕ್ಷಣ

೧೦+೨+೩ ಶಿಕ್ಷಣದ ವಿನ್ಯಾಸ[ಬದಲಾಯಿಸಿ]

ಆಧುನಿಕ ಸಮಾಜದಲ್ಲಿ ಶಿಕ್ಷಣ ಒಂದು ಅವಿಭಾಜ್ಯ ಅಂಗ. ಶಿಕ್ಷಣವಿಲ್ಲದ ಸಮಾಜವನ್ನು ಇಂದು ಊಹಿಸುವದಕ್ಕೂ ಆಗುವದಿಲ್ಲ. ಪ್ರಜ್ರಾಭುತ್ವ ರಾಷ್ಟಕ್ಕೆ ಅನ್ವಯಿಸಿ ಹೇಳುವದಾದರೆ ಶಿಕ್ಷಣವು ಒಂದು ಮುಖ್ಯ ಸಾಧಾನ, ಶಿಕ್ಷಣ ಪರಸ್ಪರವಾಗಿ ಸಂಬಂಧ ಹೊಂದಿರುವಂತವುಗಳಾಗಿವೆ. "ಪ್ರಜಾಪ್ರಭುತ್ವ ರಾಷ್ಟದ ಮುಖ್ಯ ಲಕ್ಷಣವೆಂದರೆ "ಬದಲಾವಣೆ". ಬದಲಾವಣೆ ತ್ವರೆಪಡಿಸುತ್ತದೆ. ಅಥವಾ ವೇಗವನ್ನು ಹೆಚ್ಚಿಸುತ್ತದೆ. ಪ್ರಜಾಪಭುತ್ವದ ಮುಖ್ಯ ಲಕ್ಷಣವೆಂದರೆ "ಜನತೆ". ಜನತೆ ಕಟ್ಟಿದ ಸಂಸ್ಥೆಗಳು ಮತ್ತು ಜನತೆಯ ಪ್ರತಿನಿಧಿಗಳು ಬದಲಾವಣೆಯನ್ನು ನಿರೀಕ್ಷಿಸುತ್ತವೆ. ಈ ಬದಲಾವಣೆ ನಿರಸಾತ್ಮಕವಾಗಿರದೆ, ಸೃಜನಾತ್ಮಕವಾಗಿರಬೇಕು. ನಮ್ಮ ಸಮಾಜವು ಬದಲಾವಣೆಯನ್ನು ಒಪ್ಪಿಕೊಂಡಿದೆ. ಇದು ಪ್ರಜಾಪ್ರಭುತ್ವವು ಜನತೆಯನ್ನು ಗುಲಾಮಗಿರಿ ಮತ್ತು ಉಪದ್ರವದಿಂದ ರಕ್ಷಿಸುವದಾಗಿದೆ. ಇಂದು ಶಿಕ್ಷಣದ ಅಗತ್ಯವನ್ನೂ ಅದರ ಮಹತ್ವವನ್ನು ಅರಿಯದವರು ವಿರಳ. ರಾಷ್ಟ ನಿರ್ಮಾಣ ಕಾರ್ಯದಲ್ಲಿ ಶಿಕ್ಷಣಕ್ಕೆ ಅತ್ಯಂತ ಪ್ರಧಾನ ಸ್ಥಾನವಿದೆ. ಕಳೆದ ಅರ್ಧ ಶತಮಾನದ ಪೂರ್ವ ಅಜ್ಞಾತವಾಗಿದ್ದ "ಅಭಿವೃದ್ಧಿ ಶೀಲ" ರಾಷ್ಟಗಳು ಶಿಕ್ಷಣದ ಪ್ರಭಾವದಿಂದ ಎಚ್ಚತ್ತಿವೆ. ಅಂತೆಯೇ ರಾಷ್ಟ ನಿರ್ಮಾಣ ಕಾರ್ಯದಲ್ಲಿ ಶಿಕ್ಷಣದ ಮಹತ್ವವನ್ನರಿತ ಪ್ರತಿಯೊಂದು ರಾಷ್ಟವೂ ಶಿಕ್ಷಣದ ಪ್ರಸಾರ ಪ್ರಗತಿಗಾಗಿ ವಿಶೇಷವಾದ ಆಸಕ್ತಿಯನ್ನು ವಹಿಸುತ್ತದೆ. ಭಾರತದಲ್ಲಿಯೂ ಕೂಡಾ ಮೊದಲಿಂದ ಶಿಕ್ಷಣದ ಪ್ರಗತಿಯನ್ನು ಸುಧಾರಿಸಲು, ಹೊಸ ಶಿಕ್ಷಣ ಪದ್ಧತಿಯನ್ನು ಜಾರಿಯಲ್ಲಿ ತರಲು ಅನೇಕ ಪ್ರಯತ್ನಗಳು ನಡೆದಿವೆ. ಶಾಲೆ ಕಾಲೇಜು ಶಿಕ್ಷಣ ವಿನ್ಯಾಸವನ್ನು ಬದಲಾಯಿಸಬೇಕೆಂಬ ವಿಚಾರಗಳ ಫಲವೇ ೧೦+೨+೩ ಹೊಸ ಶಿಕ್ಷಣ ವಿನ್ಯಾಸ.

೧೦+೨+೩ ಶಿಕ್ಷಣ ಪದ್ಧತಿಯ ಪ್ರಮುಖ ಲಕ್ಷಣಗಳು[ಬದಲಾಯಿಸಿ]

೧೯೭೨ರಲ್ಲಿ ಕೇಂದ್ರ ಶಿಕ್ಷಣ ಸಲಹಾ ಸಮಿತಿ ಸಲಹೆಯಿತ್ತಂತೆ ೧೯೭೫ರ ಮೇ ೧ ರಂದು ಇದನ್ನು ಅಳವಡಿಸಲಾಯಿತು. ೧೯೭೫ರಲ್ಲಿ ಭಾರತ ಸರಕಾರದ ಸಮಾಜ ಕಲ್ಯಾಣ ಮತ್ತು ಮಂತ್ರಿಶಾಖೆ ೧೦+೨+೩ ಇದೊಂದು ಶಾಲಾ ಶಿಕ್ಷಣದಲ್ಲಿ ಪ್ರಮುಖ ಬದಲಾವಣೆ ಎಂಬ ಲೇಖನವನ್ನು ಪುಸ್ತಕೀಯ ರೂಪದಲ್ಲಿ ಪ್ರಕಟಿಸಿತು. ಅದರಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಎತ್ತಿಹೇಳಲಾಗಿದೆ.

೧. ನಿಲುಗಡೆಯ ಗುಣ[ಬದಲಾಯಿಸಿ]

ಸಾಮಾನ್ಯ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣಗಳೆರಡಕ್ಕೂ ಮಾಧ್ಯಮಿಕ ಶಾಲಾ ಹಂತದಲ್ಲಿ ಅವಕಾಶವಿದೆ. ಅ. ಮಾಧ್ಯಮಿಕ ಶಿಕ್ಷಣ ಮುಗಿಸಿದ ಮಕ್ಕಳು ನೇರವಾಗಿ ಯಾವುದಾದರೊಂದು ಉದ್ಯೋಗಕ್ಕೆ ತೊಡಗಬಹುದು. ಬ. ವಿದ್ಯಾರ್ಥಿಗಳು ಯಾವುದಾದರೂ ವೃತ್ತಿಪರ ವಿಷಯವನ್ನು ಆಯ್ದುಕೊಂಡು ತಮ್ಮ ಶಿಕ್ಷಣ ಮುಂದುವರಿಸಬಹುದು. ಅಥವಾ ಉನ್ನತ ವ್ಯಾಸಂಗಕ್ಕೆ ಹೋಗಬಹುದು.

೨. ಸರ್ವತೋಮುಖ ಬೆಳೆವಣೆಗೆ[ಬದಲಾಯಿಸಿ]

ಬೌದ್ಧಿಕ ಸಾಮಾರ್ಥ್ಯ ದೈಹಿಕ ಶಕ್ತಿ, ಮತ್ತು ಭಾವನಾತ್ಮಕ ವಿಕಾಸವನ್ನು ಸಾಧಿಸುವ ಸಲುವಾಗಿ ಗಣೆತ, ಭಾಷೆಗಳು, ವಿಜ್ಞಾನ, ಸಮಾಜಿಕ ವಿಜ್ಞಾನ ಮತ್ತು ಕಾರ್ಯಾನುಭವ ಮುಂತಾದವುಗಳನ್ನು ಕಲ್ಪಿಸಲಾಗುತ್ತದೆ. ತಮ್ಮ ಜ್ಞಾನವನ್ನು ದಿನನಿತ್ಯ ಜೀವನದಲ್ಲಿಯ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕೆಂಬ ಕುರಿತು ತರಬೇತಿ ನೀಡಲಾಗುತ್ತದೆ.

೩.ಪ್ರಜಾಸತ್ತಾತ್ಮಕ ಜೀವನಕ್ಕಾಗಿ ಶಿಕ್ಷಣ[ಬದಲಾಯಿಸಿ]

ರಾಷ್ಟೀಯ ಐಕ್ಯತೆಯ ಗುರಿಗಳು, ಪ್ರಜಾಸತ್ತಾತ್ಮಕ ಜೀವನಕ್ಕಾಗಿ ತರಬೇತಿ, ಸಹಾಕರ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಹಿಷ್ಣುತೆ ಮುಂತಾದ ವಿಷಯಗಳಿಗೆ, ಭಾಷಾ ಕಲಿಕೆ ಮತ್ತು ಸಮಾಜ ವಿಜ್ಞಾನ ಕಲಿಕೆಗಳಲ್ಲಿ ಪ್ರಾಶಸ್ತ್ಯ ಕೊಡಲಾಗುತ್ತದೆ.

೪. ಆಧುನೀಕರಣಕ್ಕಾಗಿ ಶಿಕ್ಷಣ[ಬದಲಾಯಿಸಿ]

ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ವೈಜ್ಞಾನಿಕ ತಾಂತ್ರಿಕ, ಸಾಮಾಜಿಕ ಮತ್ತು ಆರ್ಥಿಕ ಬೆಳವಣೆಗೆಗಳಿಗೆ ಮಹತ್ವ ನೀಡಲಾಗಿದೆ. ಪ್ರತಿಯೊಂದು ವಿಷಯದಲ್ಲಿ ಇತ್ತೀಚಿನ ಪ್ರಗತಿ ಕುರಿತಾದ ಮಾಹಿತಿ ನೀಡಲಾಗುತ್ತದೆ.

೫. ಕಾರ್ಯಾನುಭವ[ಬದಲಾಯಿಸಿ]

ವಿಧ್ಯಾರ್ಥಿಗಳಿಗೆ ಸಾಮಾಜಿಕವಾಗಿ, ಉಪಯುಕ್ತವಾದ ಉತ್ಪಾದನಾ ಕಾರ್ಯದಲ್ಲಿ ತರಬೇತಿ ನೀಡುವುದು ಮತ್ತು ಆ ಮೂಲಕ ಅವರನ್ನು ಉತ್ಪಾದಕರನ್ನಾಗಿ ಮಾಡಿ ಸ್ವಾವಲಂಬಿಯನ್ನಾಗಿಸುವರು ಈ ಶಿಕ್ಷಣ ವಿನ್ಯಾಸದ ಲಕ್ಷಣ. ಕೆಲಸದ ಕುರಿತ ಸರಿಯಾದ ದೃಷ್ಟಿಕೋನವನ್ನು ಬೆಳೆಸಲಾಗುವದು. ವಿದ್ಯಾರ್ಥಿಗಳ ಅಭಿರುಚಿಗಳಿಗನುಗುಣವಾಗಿ ಅನೇಕ ರೀತಿಯ ಕಾರ್ಯಾನುಭವವನ್ನು ನೀಡಲಾಗುವದು. ಇಂಜನೀಯರಿಂಗ, ಒಕ್ಕಲುತನ, ವಾಣೆಜ್ಯ, ಲಲಿತ ಕಲೆ ಮತ್ತು ವ್ಯಾಪಾರ ವ್ಯವಹರ ತರಬೇತಿ ನೀಡಲಾಗುವುದು.

೬.ಸಮುದಾಯ ಸೇವೆ[ಬದಲಾಯಿಸಿ]

ಗ್ರಾಮೋದ್ಧಾರ, ಕೊಳಚಿ ನಿರ್ಮೂಲನೆ, ಒಂದು ಪ್ರದೇಶ ಅಥವಾ ಗ್ರಾಮವನ್ನು ದತ್ತು ತೆಗೆದುಕೊಂಡು ಅದರ ಪ್ರಗತಿ ಕಾರ್ಯಗಳನ್ನು ಕೈಗೊಳ್ಳುವುದು, ದಾದಿಯರಿಗೆ ಸಹಾಯ ನೀಡುವುದು, ರೋಗಿಗಳ, ಬಡವರ ಅಥವಾ ಕಾರ್ಮಿಕ ಕುಟುಂಬಗಳಿಗೆ ಸಹಾಯ ಮಾಡುವುದು, ಅನಕ್ಷರತೆಯ ನಿರ್ಮೂಲನೆ ಮುಂತಾದ ಕಾರ್ಯಗಳನ್ನು ಶಾಲೆಗಳು ಕೈಗೊಳ್ಳುವರು.

೭.ಹೊಸದು ಮತ್ತು ಹಳೆಯದರ ಒಂದುಗೂಡಿಕೆ[ಬದಲಾಯಿಸಿ]

ಹಳೆಯದರಲ್ಲಿ ಒಳ್ಳೆಯದನ್ನು ಉಳಿಸಿಕೊಂಡು ಬದಲಾಗುತ್ತಿರುವ ಸಮಾಜದ ಬೇಡಿಕೆಗೆ, ಅವಶ್ಯಕತೆಗೆ ತಕ್ಕಂತೆ ವರ್ತಿಸುವುದು, ಕಾರ್ಯ ಮೂಲವಾದ ಶಿಕ್ಷಣಕ್ಕೆ ಪ್ರಾಶಸ್ತ್ಯ ಕೊಡುವ ಮೂಲಕ ವಿದ್ಯಾರ್ಥಿಗಳ ಜ್ಞಾನ ಅನುಭವ ಮತ್ತು ಜೀವನಕ್ಕೆ ಸಂಬಂಧ ಹೊಂದಿರುವಂತೆ ಮಾಡುವರು.

೮. ನಿರ್ದಿಷ್ಟ ಉದ್ದೇಶಗಳು[ಬದಲಾಯಿಸಿ]

ಒಂಬತ್ತು ಮತ್ತು ಹತ್ತನೆಯ ತರಗತಿಗಳಲ್ಲಿ ಈ ಕೆಳಗಿನ ನಿರ್ದಿಷ್ಟ ಉದ್ದೇಶಗಳಿದ್ದವು. ಅ. ವಿದ್ಯಾರ್ಥಿಗಳು ಕಲಸಕ್ಕೆ ತೊಡಗುವಂತೆ ಮಾಡುವ ಅಥವಾ ಶಿಕ್ಷಣವನ್ನು ಮುಂದುವರೆಸುವಂತೆ ಮಾಡುವ, ಸಾಂಪ್ರಾಯಿಕ ಅಥವಾ ಅಸಂಪ್ರದಾಯಿಕ ರೀತಿಯಲ್ಲಿ ವೃತ್ತಿಪರ ಅಥವಾ ಸಾಮಾನ್ಯ ಶಿಕ್ಷಣವನ್ನು ಮುಂದುವರೆಸಲು ಅನುಕೂಲ ಆಗುವಂತಹ ಶಿಕ್ಷಣ ನೀಡುವುದು. ಆ. ನಿತ್ಯ ಜೀವನದಲ್ಲಿಯ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಪರಿಹರಿಸಿಕೊಳ್ಳಲು ಸಾಧ್ಯವಾಗುವಂತೆ ನಿಸರ್ಗದ ಮೂಲಭೂತ ನಿಯಮಗಳನ್ನು ಅದರ ಕಾರ್ಯಗಳನ್ನು ತಿಳಿಸುವುದು. ಇ. ಭಾರತಕ್ಕೆ ಸಂಬಂಧಪಟ್ಟಂತೆ ಮಾನವ ಮತ್ತು ಪರಿಸರ, ಭೌಗೋಲಿಕ, ಐತಿಹಾಸಿಕ, ಸಮಾಜಿಕ, ರಾಜಕೀಯ ಮತ್ತು ಆರ್ಥಿಕ ವಿಷಯಗಳ ಕುರಿತು ತಿಳಿಸುವುದು. ಈ. ಕೆಲಸದ ಅಭ್ಯಾಸ ಮತ್ತು ಕೆಲಸದ ಕುರಿತು ಗೌರವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದು. ಉ. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಅಭಿರುಚಿಗಳನ್ನು ಕಂಡುಕೊಳ್ಳುವಲ್ಲಿ ಸಮರ್ಥಿಸುವದು. ಊ. ದೈಹಿಕ ಸ್ವಾಸ್ಥ್ಯ ಮತ್ತು ಆರೋಗ್ಯ ಜೀವನಕ್ಕೆ ಅವಶ್ಯವಿರುವ ಜ್ಞಾನ ನೀಡುವುದು.

೯.ವೈಜ್ಞಾನಿಕ ರೀತಿಯ ಪರೀಕ್ಷೆಗಳು[ಬದಲಾಯಿಸಿ]

ಬೋಧನೆಯ ಮಟ್ಟ ಮತ್ತು ಪರೀಕ್ಷಾ ಮಟ್ಟವನ್ನು ಹೆಚ್ಚಿಸುವ ದೃಷ್ಠಿಯಿಂದ ಪರೀಕ್ಷೆ ಮತ್ತು ಮೌಲ್ಯಮಾಪನಗಳನ್ನು ಆಧುನೀಕರಣಗೊಳಿಸುವುದು ಮತ್ತು ಸರಳಗೊಳಿಸುವುದು ಅ. ವಿದ್ಯಾರ್ಥಿಗಳ ಆಸಕ್ತಿ ಮತ್ತು ಬೆಳವಣೆಗೆಯನ್ನು ಹೆಚ್ಚಿಸುವ ದೃಷ್ಠಿಯಿಂದ ನಿರಂತರ ಮೌಲ್ಯಮಾಪನ ಮಾಡಬೇಕೆ ಹೊರತು ವರ್ಷದ ಕೊನೆಗೆ ಮಾತ್ರವಲ್ಲ. ಆ. ಶ್ರೇಣೆಗಳಲ್ಲಿ ಮೌಲ್ಯಮಾಪನ ಮಾಡಬೇಕು, ಅಂಕಗಳಲಲ್ಲ. ಉತ್ತೀರ್ಣ ಅಥವಾ ಅನುತ್ತೀರ್ಣ ಎಂದು ತಿಳಿಸುವದಕ್ಕಿಂತ ವಿದ್ಯಾರ್ಥಿಗಳ ಸಾಮರ್ಥ್ಯ ಅಭಿರುಚಿಗಳಿಗನುಗುಣವಾಗಿ ಸಮಾಜದಲ್ಲಿ ತಮ್ಮ ಸ್ಥಾನ ಕಂಡುಕೊಳ್ಳಲು ಸಹಾಯ ಮಾಡಬೇಕು. ಬೋಧಿಸುವ ವಿಷಯಗಳು ಇವುಗಳಿರಬೇಕೆಂದು ೧೦+೨+೩ ಶಿಕ್ಷಣ ಪದ್ಧತಿಯು ತಿಳಿಸಿದೆ, ಒಂದು ಮತ್ತು ಎರಡನೇ ವಿಷಯಗಳು, ಭಾಷೆಗಳು- ಹಿಂದಿ, ಇಂಗ್ಲಿಷ್, ಆಸ್ಸಾಮಿ, ಪಂಜಾಬಿ, ಸಿಂಧಿ, ಗುಜರಾತಿ, ಕನ್ನಡ, ಮರಾಠಿ, ಮಲಯಾಳಮ್, ತಲಗು, ಉರ್ದು, ಮತ್ತು ಮೂರನೆ ವಿಷಯ ಗಣೆತ, ನಾಲ್ಕನೇ ವಿಷಯ ವಿಜ್ಞಾನ ೧.ಭೌತಶಾಸ್ತ್ರ, ೨.ರಸಾಯನಶಾಸ್ತ್ರ ೩.ಜೀವಶಾಸ್ತ್ರ, ಐದನೇಯ ವಿಷಯ ಸಾಮಾಜಿಕ ವಿಜ್ಞಾನ- ಇತಿಹಾಸ, ಪೌರನೀತಿ, ಭೂಗೋಳ, ಅರ್ಥಶಾಸ್ತ್ರ, ವಾಣೆಜ್ಯ, ಆರನೇಯ ವಿಷಯ ಕಾರ್ಯಾನುಭವ, ತೋಟಗಾರಿಕೆ, ಬೀಜಗಳು ಉತ್ಪಾದನೆ, ಜೇನು ಸಾಕಾಣೆಕೆ, ಹೈನುಗಾರಿಕೆ, ರೇಷ್ಮೆ ಸಾಕಾಣೆಕೆ, ಮೀನುಗಾರಿಕೆ, ಮಡಕೆ ಮಾಡುವುದು, ಹೊಲಿಯುವುದು, ಗೊಂಬೆಗಳನ್ನು ತಯಾರಿಸುವುದು, ಮುದ್ರಣ ಕಲೆ ಮುಂತಾದವುಗಳು, ಏಳನೇ ವಿಷಯ- ಆರೋಗ್ಯ್ ಮತ್ತು ದೈಹಿಕ ಶಿಕ್ಷಣ, ಎಂಟನೇಯ ವಿಷಯ ಹೆಚ್ಚಿನ ಭಾಷೆಗಳು. ಆರಿಸಿಕೊಂಡ ಮೂರು ಭಾಷೆಗಳಲ್ಲಿ ಹಿಂದಿ ಇಂಗ್ಲಿಷನ್ನು ಕೊನೆಯ ಪಕ್ಷ ಎಂಟನೇಯ ತರಗತಿಯವರಗೆ ಅಭ್ಯಾಸಿಸಬೇಕು.[೧][೨]

ನೊಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ಪ್ರಗತಿಶೀಲ ಭಾರತದಲ್ಲಿ ಶಿಕ್ಷಣ - ಡಾ. ಎಸ್. ಬಿ. ಯಾದವಾಡ
  2. ಉದಯೋನ್ಮುಖ ಭಾರತದಲ್ಲಿ ಶಿಕ್ಷಣ - ಡಾ. ಆರ್. ಓಬಳೇಶಘುಟ್ಟಿ