ಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ

ವಿಕಿಪೀಡಿಯ ಇಂದ
Jump to navigation Jump to search

ಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಭಾರತದ ಸಂಸತ್ತಿನಿಂದ ಮಾಡಲ್ಪಟ್ಟಿರುವ ಕಾನೂನು. ಈ ಕಾಯ್ದೆಯಡಿ ಭಾರತದಲ್ಲಿ ೬ರಿಂದ ೧೪ ವರ್ಷದವರೆಗಿನ ಮಕ್ಕಳಿಗೆ ಉಚಿತ ಹಾಗು ಕಡ್ಡಾಯ ಶಿಕ್ಷಣ ದೊರಕುವಂತೆ ಹಕ್ಕನ್ನು ನೀಡಲಾಗಿದೆ. ಈ ಕಾಯ್ದೆಯನ್ನು ಭಾರತ ಸಂವಿಧಾನದ ೨೧A ಕಲಮಿನಡಿ ಜಾರಿಗೊಳಿಸಲಾಗಿದೆ.[೧] ಏಪ್ರಿಲ್ ೧, ೨೦೧೦ರಂದು ಈ ಕಾಯ್ದೆಯು ಜಾರಿಗೆ ಬಂದ ನಂತರ, ಮಕ್ಕಳಿಗೆ ಶಿಕ್ಷಣ ನೀಡುವ ಮೂಲಭೂತ ಹಕ್ಕನು ನೀಡಿದ ೧೩೫ ದೇಶಗಳಲ್ಲಿ ಭಾರತವೂ ಒಂದಾಯಿತು.[೨][೩][೪]

ಅಂಗೀಕಾರ[ಬದಲಾಯಿಸಿ]

ಸಂಪುಟವು ಈ ಮಸೂದೆಯನ್ನು ಜುಲೈ ೨ ೨೦೦೯ರಂದು ಅನುಮೋದಿಸಿತು.[೫] ನಂತರ ೨೦ ಜುಲೈ ೨೦೦೯ರಂದು ರಾಜ್ಯಸಭೆ[೬] ಮತ್ತು ೪ ಆಗಸ್ಟ್ ೨೦೦೯ರಂದು ಲೋಕಸಭೆಯಿಂದ ಅಂಗೀಕರಿಸಲಾಯಿತು.[೭] ರಾಷ್ಟ್ರಪತಿಯ ಸಮ್ಮತಿಯ ನಂತರ ಸೆಪ್ಟೆಂಬರ್ ೩ ೨೦೦೯ರಂದು ಇದನ್ನು ಕಾನೂನು ಎಂದು ಘೋಷಿಸಿ[೮] ಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಎಂದು ಹೆಸರಿಸಲಾಯಿತು.[೯]

ಉಲ್ಲೇಖಗಳು[ಬದಲಾಯಿಸಿ]

  1. "Provisions of the Constitution of India having a bearing on Education". Department of Higher Education. Retrieved 2010-04-01. 
  2. Aarti Dhar (1 April 2010). "Education is a fundamental right now". The Hindu. 
  3. "ಇಂದಿನಿಂದ ಪ್ರತಿ ಮಗುವಿಗೂ ಉಚಿತ ಶಿಕ್ಷಣ ಮೂಲಭೂತ ಹಕ್ಕು". ವೆಬ್‌ದುನಿಯಾ ಕನ್ನಡ ಸುದ್ದಿಗಳು. ೧ ಏಪ್ರಿಲ್ ೨೦೧೦.  Check date values in: |date= (help)
  4. "India joins list of 135 countries in making education a right". The Hindu News. 2 April 2010. 
  5. "Cabinet approves Right to Education Bill". The New Indian Express. 2 July 2009. Retrieved 2 July 2009. 
  6. "The News Indian Express". 20 July 2009. 
  7. "Parliament passes landmark Right to Education Bill". The Indian Express. 4 August 2009. 
  8. "The Right of Children to Free and Compulsory Education Act, 2009 notified". Press Information Bureau. September 3, 2009. Retrieved 2010-04-01. 
  9. Right to Education Bill 2009

ಬಾಹ್ಯ ಸಂಪರ್ಕಗಳು[ಬದಲಾಯಿಸಿ]