ಬೋರಿಕ್ ಆಮ್ಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಬೋರಿಕ್ ಆಮ್ಲ |
( ಯಾವುದೇ ವ್ಯತ್ಯಾಸವಿಲ್ಲ )
|
೧೮:೪೪, ೫ ಫೆಬ್ರವರಿ ೨೦೨೩ ನಂತೆ ಪರಿಷ್ಕರಣೆ
| |||
ಹೆಸರುಗಳು | |||
---|---|---|---|
ಐಯುಪಿಎಸಿ ಹೆಸರು
Boric acid[೧]
| |||
Systematic IUPAC name
Boron hydroxide | |||
Other names
Orthoboric acid, Boracic acid, Sassolite, Borofax, Trihydroxyborane, Boranetriol, Hydrogen borate
| |||
Identifiers | |||
3D model (JSmol)
|
|||
ChEBI | |||
ChemSpider | |||
ECHA InfoCard | 100.030.114 | ||
EC Number | 233-139-2 | ||
E number | E284 (preservatives) | ||
KEGG | |||
PubChem CID
|
|||
UNII | |||
| |||
| |||
ಗುಣಗಳು | |||
ಆಣ್ವಿಕ ಸೂತ್ರ | H3BO3 | ||
ಮೋಲಾರ್ ದ್ರವ್ಯರಾಶಿ | ೬೧.೮೩ g mol−1 | ||
Appearance | White crystalline solid | ||
ಸಾಂದ್ರತೆ | 1.435 g/cm3 | ||
ಕರಗು ಬಿಂದು |
170.9 °C, 444 K, 340 °F | ||
ಕುದಿ ಬಿಂದು |
300 °C, 573 K, 572 °F | ||
ಕರಗುವಿಕೆ ನೀರಿನಲ್ಲಿ | 2.52 g/100 mL (0 °C) 4.72 g/100 mL (20 °C) 5.7 g/100 mL (25 °C) 19.10 g/100 mL (80 °C) 27.53 g/100 mL (100 °C) | ||
ಕರಗುವಿಕೆ other solvents | Soluble in lower alcohols moderately soluble in pyridine very slightly soluble in acetone | ||
log P | -0.29[೨] | ||
ಅಮ್ಲತೆ (pKa) | 9.24, 12.4, 13.3 | ||
-34.1·10−6 cm3/mol | |||
ರಚನೆ | |||
Trigonal planar | |||
ದ್ವಿಧ್ರುವ ಚಲನೆ | Zero | ||
Pharmacology | |||
Hazards | |||
GHS pictograms | |||
NFPA 704 | |||
ಚಿಮ್ಮು ಬಿಂದು (ಫ್ಲಾಶ್ ಪಾಯಿಂಟ್) |
|||
Lethal dose or concentration (LD, LC): | |||
LD50 (median dose)
|
2660 mg/kg, oral (rat) | ||
Except where otherwise noted, data are given for materials in their standard state (at 25 °C [77 °F], 100 kPa). > | |||
Infobox references | |||
ಬೋರಿಕ್ ಆಮ್ಲ ಬೋರಾನ್, ಆಮ್ಲಜನಕ ಮತ್ತು ಜಲಜನಕದ ಒಂದು ಸಂಯುಕ್ತ. ಇದರ ಅಣುಸೂತ್ರ H3BO3. ಔಷಧಿ ತಯಾರಿಕಾಗಾರರು ಇದನ್ನು ಬೊರಾಸಿಕ್ ಆಮ್ಲವೆಂದು ಕರೆಯುವರು.[೩] ಇದು ಸಾಮಾನ್ಯವಾಗಿ ಬಣ್ಣರಹಿತ ಹರಳುಗಳು ಅಥವಾ ಬಿಳಿ ಪುಡಿಯ ರೂಪದಲ್ಲಿ ಸಿಗುತ್ತದೆ. ಇದು ಪ್ರಕೃತಿಯಲ್ಲಿ ಸ್ಯಾಸೊಲೈಟ್ ಖನಿಜವಾಗಿ ಸಿಗುತ್ತದೆ. ಇದು ಒಂದು ದುರ್ಬಲ ಆಮ್ಲ.
ದೊರಕುವಿಕೆ
ಭಾರತದಲ್ಲಿ ಬೋರಾಕ್ಸ್ ನಿಕ್ಷೇಪಗಳು ಕಾಶ್ಮೀರದ ಪೂಗಾ ಕಣಿವೆಯ ವಲಯದಲ್ಲಿ, ರಾಜಾಸ್ಥಾನದಲ್ಲಿ ಇರುವುದು ವರದಿಯಾಗಿದೆ.
ತಯಾರಿಕೆ
ಈ ಆಮ್ಲವನ್ನು ೧೭೦೨ರಲ್ಲಿ ಮೊದಲ ಬಾರಿಗೆ ತಯಾರಿಸಲು ಉಪಯೋಗಿಸಿದ ವಿಧಾನವೇ ಇಂದೂ ಕೈಗಾರಿಕೆಯಲ್ಲಿ ಆಚರಣೆಯಲ್ಲಿದೆ. ಪ್ರಕೃತಿಯಲ್ಲಿ ದೊರಕುವ ಬೋರಾಕ್ಸ್ ಲವಣದ ದ್ರಾವಣವೊಂದಕ್ಕೆ ಸಲ್ಫ್ಯೂರಿಕ್ ಆಮ್ಲವನ್ನು ಮಿಶ್ರಿತ ದ್ರಾವಣ ಆಮ್ಲಕ್ರಿಯೆ ತೋರಿಸುವವರೆಗೂ ಹಾಕುವರು. ಅನಂತರ ಫಲಿತ ದ್ರಾವಣವನ್ನು ತಂಪಾಗುವಂತೆ ಮಾಡಿದರೆ ಬಿಳಿಯ ಬೋರಿಕ್ ಆಮ್ಲದ ಹರಳುಗಳು ಹೊರಬೀಳುವುವು. ಅವುಗಳನ್ನು ಶೋಧಿಸಿ ಪ್ರತ್ಯೇಕಿಸಿದ ಅನಂತರ ಉಳಿದ ತಿಳಿ ದ್ರಾವಣವನ್ನು ಕಾಯಿಸಿ ನೀರನ್ನು ಆವಿಯಾಗಿಸಿದರೆ ಸೋಡಿಯಂ ಸಲ್ಫೇಟ್ ಲವಣವೂ ದೊರೆಯುವುದು.
Na2B4O7 + H2SO4 + 5H2O → 4H3BO3 + NaSO4
ಸಲ್ಫ್ಯೂರಿಕ್ ಆಮ್ಲದ ಬದಲು ಹೈಡ್ರೊಕ್ಲೋರಿಕ್ ಆಮ್ಲವನ್ನೂ ಉಪಯೋಗಿಸಬಹುದು.
ಉಪಯೋಗಗಳು
ಕೈಗಾರಿಕ ಉಪಯೋಗಗಳು: ಬೋರಿಕ್ ಆಮ್ಲದ ಮುಖ್ಯ ಉಪಯೋಗವೆಂದರೆ ಏಕತಂತು ನಾರುಗಾಜಿನ ತಯಾರಿಕೆ. ಏಕತಂತು ನಾರುಗಾಜನ್ನು ಪ್ಲಾಸ್ಟಿಕ್‍ಗಳನ್ನು ಬಲಪಡಿಸಲು ಉಪಯೋಗಿಸಲಾಗುತ್ತದೆ. ಈ ಬಲಪಡಿಸಿದ ಪ್ಲಾಸ್ಟಿಕ್‍ಗೆ ದೋಣಿಗಳಲ್ಲಿ, ಕೈಗಾರಿಕಾ ಪೈಪ್‍ಗಳಲ್ಲಿ, ಕಂಪ್ಯೂಟರ್ ಸರ್ಕಿಟ್ ಬೋರ್ಡ್‌ಗಳಲ್ಲಿ ಬಳಕೆಯಿದೆ.[೪]
ವಿದ್ಯುಲ್ಲೇಪನದಲ್ಲಿ ಬೋರಿಕ್ ಆಮ್ಲವನ್ನು ಬಳಸಲಾಗುತ್ತದೆ.
ಬೋರಿಕ್ ಆಮ್ಲ ಮತ್ತು ಬೋರ್‍ಯಾಕ್ಸ್‌ನ ದ್ರಾವಣವನ್ನು ಕಟ್ಟಿಗೆಯಲ್ಲಿ ತುಂಬಿ ಅಗ್ನಿಶಾಮಕ ಪದಾರ್ಥವಾಗಿ ಬಳಸಲಾಗುತ್ತದೆ.[೫]
ಬೋರ್‍ಯಾಕ್ಸ್‌ಗೆ ಬೋರಿಕ್ ಆಮ್ಲವನ್ನು ಸೇರಿಸಿ ಕಮ್ಮಾರರು ಬೆಸುಗೆ ಬೆರಕೆಯಾಗಿ ಬಳಸಲಾಗುತ್ತದೆ.[೬]
ವೈದ್ಯಕೀಯ: ಬೋರಿಕ್ ಆಮ್ಲವನ್ನು ಸುಟ್ಟಗಾಯಗಳಿಗೆ, ಇತರೆ ಗಾಯಗಳಿಗೆ ನಂಜುನಿರೋಧಕವಾಗಿ ಬಳಸುತ್ತಾರೆ. ಬೋರಿಕ್ ಆಮ್ಲವನ್ನು ಮೊಡವೆ ಚಿಕಿತ್ಸೆಗೂ ಬಳಸಬಹುದು.
ಕೀಟನಾಶಕ: ಬೋರಿಕ್ ಆಮ್ಲವನ್ನು ಜಿರಲೆ, ಗೆದ್ದಲು, ಬೆಳ್ಳಿ ಮೀನನ್ನು ನಿಯಂತ್ರಿಸಲು ಕೀಟನಾಶಕವಾಗಿ ಬಳಸಲಾಗುತ್ತದೆ.
ಚಲನ ಸುಲಭಗೊಳಿಸುವ ಪದಾರ್ಥ: ಕೇರಮ್ ಮತ್ತು ನೋವಸ್ ಹಲಗೆಗಳ ಮೇಲೆ ಚಲನೆಯನ್ನು ಸರಾಗವಾಗಿಸಲು ಬೋರಿಕ್ ಆಮ್ಲವನ್ನು ಬಳಸಲಾಗುತ್ತದೆ.[೭]
ಬೈಜಿಕ ವಿದ್ಯುತ್ತು: ಕೆಲವು ಬೈಜಿಕ ವಿದ್ಯುತ್ ಸ್ಥಾವರಗಳಲ್ಲಿ ನ್ಯೂಟ್ರಾನ್ ವಿಷವಾಗಿ ಬೋರಿಕ್ ಆಮ್ಲವನ್ನು ಬಳಸುತ್ತಾರೆ. ಬೋರಿಕ್ ಆಮ್ಲದಲ್ಲಿನ ಬೋರಾನ್ ಕೆಲವು ಥರ್ಮಲ್ ನ್ಯೂಟ್ರಾನ್‍ಗಳನ್ನು ಹೀರಿ ಉಷ್ಣ ವಿದಳನದ ಸಂಭಾವ್ಯತೆಯನ್ನು ಕಡಿಮೆಮಾಡುತ್ತದೆ.
ಕೃಷಿ: ಸಸ್ಯಗಳಲ್ಲಿ ಬೋರಾನ್ ಕೊರತೆಯನ್ನು ತಡೆಯಲು ಬೋರಿಕ್ ಆಮ್ಲವನ್ನು ಬಳಸುತ್ತಾರೆ. ಅಕ್ಕಿ ಮತ್ತು ಗೋಧಿಯಂತಹ ಧಾನ್ಯಗಳ ಸಂರಕ್ಷಣೆಯಲ್ಲಿ ಬಳಸಲಾಗುತ್ತದೆ.[೮]
ಉಲ್ಲೇಖಗಳು
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedncbi
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedchemsrc
- ↑ Entry "boracic acid" in the online Merriamm-Webster Dictionary. Gives the first use as 1790. Accessed on 2022-06-24.
- ↑ Kistler, R. B.; Helvaci, C. (1994). "Boron and Borates". In Carr, D. D. (ed.). Industrial Minerals and Rocks (6th ed.). Littleton, CO: SME. pp. 171–186.
- ↑ Tsuyumoto, I.; Oshio, T. (2009). "Development of fire resistant laminated wood using concentrated sodium polyborate aqueous solution". Journal of Wood Chemistry and Technology. 29 (4): 277–285. doi:10.1080/02773810903033721. S2CID 98730912.
- ↑ Dempsey, Jock (2009) [1998]. "Borax". Dempsey's Forge. Retrieved 2010-07-23.
- ↑ Singh, Harpreet. "Standard equipments". Punjab State Carrom Association. Retrieved 2009-09-24.
- ↑ "Use of Boric Acid and Borax in Food". www.cfs.gov.hk. Retrieved 2019-05-22.
ಹೊರಗಿನ ಕೊಂಡಿಗಳು
- Boric Acid Technical Fact Sheet - National Pesticide Information Center
- Boric Acid General Fact Sheet - National Pesticide Information Center
- International Chemical Safety Card 0991
- US EPA Pesticide Reregistration Eligibility Decision
- National Pollutant Inventory - Boron and compounds
- Boric acid at ChemicalLand21
- European Chemicals Agency (ECHA)"New Public Consultation on Eight Potential Substances of Very High Concern" - includes Boric Acid. Closes 22 April 2010
- ChemSub Online: Boric acid
- Pages with reference errors
- Pages using the JsonConfig extension
- Chemical articles with multiple compound IDs
- Multiple chemicals in an infobox that need indexing
- ECHA InfoCard ID from Wikidata
- E number from Wikidata
- Chembox having GHS data
- Articles containing unverified chemical infoboxes
- ಆಮ್ಲಗಳು
- ರಸಾಯನಶಾಸ್ತ್ರ
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ