ಮಾಲಿನ್ಯ
ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ ಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು.[೧] ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು. ಮಾಲಿನ್ಯವನ್ನು ಪ್ರತ್ಯಕ್ಷ ಮಾಲಿನ್ಯ ಹಾಗೂ ಪರೋಕ್ಷ ಮಾಲಿನ್ಯ ಎಂದು ಎರಡು ವಿಭಾಗಗಳಾಗಿ ವಿಂಗಡಿಸಬಹುದಾಗಿದೆ. ಬ್ಲಾಕ್‌ಸ್ಮಿತ್ ಇನ್ಸ್ಟಿಟ್ಯೂಟ್ಎಂಬ ಸಂಸ್ಥೆಯು ಪ್ರತಿ ವರ್ಷ ಪ್ರಪಂಚದ ಅತಿಹೆಚ್ಚು ಮಾಲಿನ್ಯಕ್ಕೊಳಗಾದ ಪ್ರದೇಶಗಳ ಪಟ್ಟಿ ಪ್ರಕಟಿಸುತ್ತದೆ. 2007ರ ಪ್ರಕಟಣೆಯಲ್ಲಿ ಪ್ರಕಟವಾದ ಪಟ್ಟಿಯಲ್ಲಿದ್ದ ಟಾಪ್ 10 ಮಾಲಿನ್ಯ ಪ್ರದೇಶಗಳು ಅಜರ‍್‌ಬೈಜಾನ್, ಚೀನಾ, ಭಾರತ, ಪೆರು, ರಷ್ಯಾ, ಉಕ್ರೇನ್ ಮತ್ತು ಜಾಂಬಿಯಾ ಪ್ರದೇಶದಲ್ಲಿವೆ.
ಪರಿವಿಡಿ |
[ಬದಲಾಯಿಸಿ] ಪ್ರಾಚೀನ ಸಂಸ್ಕೃತಿ
ಖನೀಜಗಳನ್ನ ಕಾಯಿಸಿ ಬದಲಾಯಿಸುವ ಕ್ರಿಯೆಯ ಪ್ರಾರಂಭವಾದಂದಿನಿಂದ ಇದು ಗುರುತರ ಪ್ರಮಾಣದ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಯಿತು ಎನ್ನಬಹುದು. ಗ್ರೀನ್‌ಲ್ಯಾಂಡ್‌ನಲ್ಲಿಯ ಹಿಮನದಿಗಳ ನಮೂನೆಯಲ್ಲಿ ಗ್ರೀಕ್, ರೋಮನ್ ಮತ್ತು ಚೈನಾದಲ್ಲಿಯ ಲೋಹದ ಉತ್ಪನ್ನಗಳ ಉತ್ಪಾದನೆಯಿಂದಾಗಿ ಉಂಟಾಗುತ್ತಿರುವ ವಾಯು ಮಾಲಿನ್ಯದ ಕುರುಹುಗಳು ಕಾಣುತ್ತದೆ.[೨]
[ಬದಲಾಯಿಸಿ] ಅಧಿಕೃತ ಸ್ವೀಕೃತಿ
ಮಾಲಿನ್ಯಕ್ಕೆ ಸಂಬಂಧಿಸಿದಂತಹ ಮೊದಲ ಬರಹಗಳು ಅರೇಬಿಕ್ ವ್ಯೆದ್ಯಕೀಯ ಗ್ರಂಥಗಳಾಗಿದ್ದು 9 ಮತ್ತು 13ನೇ ಶತಮಾನಗಳ ನಡುವೆ ವೈದ್ಯರುಗಳಿಂದ ಬರೆಯಲ್ಪಟ್ಟಿವೆ. ಅಲ್-ಕಿಂಡಿ(ಆಲ್ಕಿಂಡಸ್), ಕ್ವೆಸ್ಟಾ ಇಬ್ನ್ ಲ್ಯುಕಾ (ಕೊಸ್ತಾ ಬೆನ್ ಲುಕಾ), ಮೊಹಮ್ಮದ್ ಇಬ್ನ್ ಝಕಾರಿಯಾ ರಾಝೀ(ರಾಝೆಸ್), ಇಬ್ನ ಅಲ್ -ಜಝ್ಝಾರ್, ಅಲ್-ತಮಿಮಿ, ಅಲ್- ಮಸಿಹಿ, ಇಬ್ನ ಸಿನ(ಅವಿಸಿನ್ನ), ಅಲಿ ಇಬ್ನ್ ರಿದ್ವಾನ್, ಇಬ್ನ ಜುಮಯ್, ಐಸಾಕ್ ಇಸ್ರೇಲಿ, ಬೆನ್ ಸೊಲೊಮನ್, ಅಬ್ದ-ಎಲ್-ಲತಿಫ್, ಇಬ್ನ ಅಲ್-ಖಫ್ ಮತ್ತು ಇಬ್ನ್ ಅಲ್-ನಫೀಸ್ ಇವರುಗಳು ಆ ಗ್ರಂಥದಲ್ಲಿ ಮಾಲಿನ್ಯದ ಕುರಿತು ಬರೆದವರಾಗಿದ್ದಾರೆ. ಇವರ ಬರಹಗಳು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ತಿಳಿಸುತ್ತವೆ. ವಾಯುಮಾಲಿನ್ಯ, ನೀರು ಮಲಿನಗೊಳ್ಳುವಿಕೆ, ಮಣ್ಣು ಮಾಲಿನ್ಯ, ಘನ ತ್ಯಾಜ್ಯದ ಅಸಮರ್ಪಕ ನಿರ್ವಹಣೆ, ಕೆಲವು ಪ್ರದೇಶಗಳ ಪರಿಸರಕ್ಕೆ ಕುರಿತಾದಂತೆ ತಿಳಿಸುತ್ತವೆ.[೩] ಸಮುದ್ರ ಕಲ್ಲಿದ್ದಲನ್ನು ಉರಿಸುವುದರಿಂದ ಉಂಟಾಗುವ ಹೊಗೆಯಿಂದ ತೊಂದರೆಗಳು ಪ್ರಾರಂಭವಾದಾಗ, 1272ರಲ್ಲಿ ಇಂಗ್ಲಂಡ್ನ ಕಿಂಗ್ ಎಡ್ವರ್ಡ್ Iಲಂಡನ್‌ನಲ್ಲಿ ಅದನ್ನು ಉರಿಸುವುದನ್ನು ಸುಗ್ರಿವಾಜ್ಞೆ ಜಾರಿಗೊಳಿಸುವ ಮೂಲಕ ನಿಷೇಧಿಸುತ್ತಾನೆ.[೪][೫] ಇಂಗ್ಲಂಡ್‌ನಲ್ಲಿ ಈ ಉರುವಲು ಎಷ್ಟು ಸಾಮಾನ್ಯವಾಗಿತ್ತು ಎಂದರೆ ಇದಕ್ಕೆ ಈ ಹೆಸರು ಬರಲು ಕಾರಣ ಇದನ್ನು ದೂರದ ಸಮುದ್ರ ತೀರದಿಂದ ಕೈಗಾಡಿಗಳಲ್ಲಿ ತರಲಾಗುತ್ತಿತ್ತು.
ವಾಯು ಮಾಲಿನ್ಯವು ಇಂಗ್ಲಂಡ್‌ನಲ್ಲಿ ಒಂದು ಸಮಸ್ಯೆಯಾಗಿಯೇ ಮುಂದುವರೆದಿದೆ, ಅದರಲ್ಲೂ ಕೈಗಾರಿಕಾ ಕ್ರಾಂತಿಯ ನಂತರದ ದಿನಗಳಲ್ಲಿ ಹಾಗೂ ಇತ್ತೀಚಿನ 1952ರ ಗ್ರೇಟ್ ಸ್ಮಾಗ್‌ಅವಘಡದವರೆವಿಗೂ ಕೂಡ. ಬಹಳ ಹಿಂದೆಯೇ ನೀರಿನ ಗುಣಮಟ್ಟದಲ್ಲಿ ತೊಂದರೆ ಅನುಭವಿಸಿದ ನಗರಗಳಲ್ಲಿ ಇದೇ ಮೊದಲನೆಯದು. 1858ರಲ್ಲಿ ಥೇಮ್ಸ್ ನದಿಯಲ್ಲಿನ ’ಗ್ರೇಟ್ ಸ್ಟಿಂಕ್’ ಘಟನೆಯಿಂದಾಗಿ ಲಂಡನ್‌ನಲ್ಲಿ ಒಳಚರಂಡಿ ವ್ಯವಸ್ಥೆಯ ನಿರ್ಮಾಣ ಪ್ರಾರಂಭವಾಗಲು ಕಾರಣವಾಯ್ತು. ನಮಗೆ ಇವತ್ತು ತಿಳಿದಿರುವಂತೆ ಕೈಗಾರಿಕಾ ಕ್ರಾಂತಿಯೇ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ದೊಡ್ಡ ದೊಡ್ಡ ಕಾರ್ಖಾನೆಗಳು ಹಾಗೂ ಅತಿಹೆಚ್ಚು ಕಲ್ಲಿದ್ದಲು ಮತ್ತು ಭೂಗರ್ಭದಲ್ಲಿ ದೊರೆಯುವ ಇತರ ಇಂಧನಗಳ ಬಳಕೆಯು ಹಿಂದೆಂದೂ ಕಂಡಿರದ ವಾಯುಮಾಲಿನ್ಯ ಮತ್ತು ಅತಿ ಹೆಚ್ಚು ಪ್ರಮಾಣದ ಕೈಗಾರಿಕಾ ರಾಸಾಯನಿಕಗಳು ಹಾಗೂ ಸಂಸ್ಕರಿಸದ ಮಾನವ ತ್ಯಾಜ್ಯದ ಹೆಚ್ಚಳಕ್ಕೆ ಕಾರಣವಾಯ್ತು. ಅಮೇರಿಕಾದ ಚಿಕಾಗೊ ಮತ್ತು ಸಿನ್ಸಿನ್ನಾಟಿ ನಗರಗಳು 1881ರಲ್ಲಿ ಶುದ್ಧ ಗಾಳಿ ಪೂರೈಕೆಯ ಕುರಿತಾದ ಕಾನೂನು ಜಾರಿಗೊಳಿಸಿದವುಗಳಲ್ಲಿ ಮೊಟ್ಟಮೊದಲನೆಯವಾಗಿವೆ. 20ನೇ ಶತಮಾನದ ಪ್ರಾರಂಭದಲ್ಲಿ ವಾಯು ಮಾಲಿನ್ಯ ಕುರಿತಂತೆ ಒಳಾಂಗಣ ಇಲಾಖೆಯ ಅಡಿಯಲ್ಲಿ ತಾತ್ಕಾಲಿಕ ’ವಾಯು ಮಾಲಿನ್ಯ ಕಚೇರಿ’ ತೆರೆದಾಗ ದೇಶದ ಉಳಿದ ನಗರಗಳು ಈ ಕಾನೂನನ್ನು ಜಾರಿಗೆ ತಂದವು. ಅತಿಹೆಚ್ಚು ಧೂಮ ಕವಿದ ವಾತಾವರಣವು 1940ರ ಅಂತ್ಯದಲ್ಲಿ ಲಾಸ್‌ಏಂಜಲೀಸ್ ಮತ್ತು ಪೆನ್‌ಸಿಲ್ವೇನಿಯಾದ ಡೊನೊರಾದಲ್ಲಿ ಕಂಡುಕೊಂಡು ವಾಯುಮಾಲಿನ್ಯದ ಕುರಿತಾಗಿ ಇನ್ನೊಂದು ಎಚ್ಚರಿಕೆಯನ್ನು ನೀಡಿತು.[೬]
[ಬದಲಾಯಿಸಿ] ಆಧುನಿಕ ಅರಿವು
ಎರಡನೇ ವಿಶ್ವಯುದ್ಧದ ನಂತರದಲ್ಲಿ ಮಾಲಿನ್ಯವು ಹೆಚ್ಚಿನ ಚರ್ಚೆಯ ವಿಷಯವಾಯಿತು, ಅಣುಯುದ್ಧ ಹಾಗೂ ಅಣುಪರೀಕ್ಷೆಯ ನಂತರದಲ್ಲಿ ವಿಕಿರಣಗಳ ವಿಸರ್ಜನೆಯಿಂದ ಉಂಟಾದ ತೊಂದರೆಗಳಿಂದ ಅಪಾಯವು ಹೆಚ್ಚು ನಿಚ್ಚಳವಾಯ್ತು. 1952ರಲ್ಲಿ ಲಂಡನ್ ನಲ್ಲಿ ತಲೆದೋರಿದ್ದ ಗ್ರೇಟ್ ಸ್ಮಾಗ್ನಿಂದಾಗಿ ಸುಮಾರು 8000 ಜನರು ಸಾವೀಗೀಡಾದರು. ಈ ಘಟನೆಯಿಂದಾಗಿ ಪ್ರಬಲ ಆಧುನಿಕ ಪರಿಸರ ಕಾನೂನು 1956ರ ದಿ ಕ್ಲೀನ್ ಏರ್ ಆಕ್ಟ್ ಕಾರ್ಯಪ್ರವೃತ್ತವಾಯಿತು. ಕಾಂಗ್ರೆಸ್ ಜಾರಿಗೊಳಿಸಿದNoise Control Actದಿ ನೊಯ್ಸ್ ಕಂಟ್ರೋಲ್ ಆಕ್ಟ್, ದಿ ಕ್ಲೀನ್ ಏರ್ ಆಕ್ಟ್, ದಿ ಕ್ಲೀನ್ ವಾಟರ್ ಆಕ್ಟ್, ಅಂಡ್ ನ್ಯಾಶನಲ್ ಎನ್ ವೈರನ್ ಮೆಂಟಲ್ ಪಾಲಿಸಿ ಆಕ್ಟ್ಗಳಿಂದಾಗಿ ಒಕ್ಕೂಟ ರಾಜ್ಯಗಳು 1950ರ ಮಧ್ಯೆ ಹಾಗು 1970ಕ್ಕೂ ಮುಂಚೆ ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಸಾರ್ವತ್ರಿಕವಾಗಿ ಜಾಗೃತವಾದವು.
ಸ್ಥಳೀಯವಾಗಿ ಉಂಟಾದ ಮಾಲಿನ್ಯದ ಕೆಟ್ಟ ಪ್ರಭಾವವು ಮಾಲಿನ್ಯದ ಕುರಿತು ಜನರಲ್ಲಿ ಅರಿವು ಹೆಚ್ಚಿಸಲು ಸಹಾಯವಾಯಿತು. 1974 ರಲ್ಲಿಪಿಸಿಬಿಯು ಹಡ್ಸ್ ನ್ ನದಿಗೆ ಸೇರಿದ್ದರ ಪರಿಣಾಮವಾಗಿ, ಈ ನದಿಯ ಮೀನಿನ ಬಳಕೆಯನ್ನು ಇಪಿಎ ನಿಷೇಧಿಸಿತು. 1947ರಲ್ಲಿ ಲವ್ ಕೆನಲ್ಗೆ ದೀರ್ಘಾವಧಿಯ ತನಕ ಡೈಆಕ್ಸೈನ್ ಮಲಿನಕಾರಕವನ್ನು ಸೇರಿಸಿದ ವಿಷಯವು 1978ರಲ್ಲಿ ದೊಡ್ಡ ರಾಷ್ಟ್ರೀಯ ಸುದ್ದಿಯಾಗಿತ್ತು ಹಾಗು ಇದು 1980ರ ದಿ ಸೂಫರ್ ಫಂಡ್ ಕಾನೂನು ರಚನೆಗೆ ಕಾರಣವಾಯಿತು. 1990ರಲ್ಲಿ ನಡೆದ ನ್ಯಾಯಾಂಗ ತನಿಖೆಯುಕ್ರೋಮಿಯಮ್-6ಅನ್ನು ಕ್ಯಾಲಿಪೋರ್ನಿಯಾದ ಕೆಲವು ಪ್ರದೇಶಗಳಲ್ಲಿ ವಿಸರ್ಜನೆ ಮಾಡಿದ ಸಂಗತಿ ಬೆಳಕಿಗೆ ಬಂದಿತು. ಈ ಘಟನೆಗೆ ಕಾರಣರಾದವರು ಇದರಿಂದ ಬೆಳಕಿಗೆ ಬರುವಂತಾಯ್ತು. ಈಗ ನಗರ ಯೋಜನೆಗಳಲ್ಲಿ ಕೈಗಾರಿಕ ಪ್ರದೇಶಗಳಿಂದ ಉಂಟಾಗುವ ಮಾಲಿನ್ಯವನ್ನು ಪರಿಗಣಿಸಿ ಅಂತಹ ಪ್ರದೇಶಗಳನ್ನು ಕಂದು ಪ್ರದೇಶಗಳು ಎಂದು ಹೆಸರಿಸುವುದು ಸಾಮಾನ್ಯವಾಗಿದೆ. ರಾಕೇಲ್ ಕಾರ್ಸನ್ ಅವರ ಸೈಲೆಂಟ್ ಸ್ಪ್ರಿಂಗ್ ಪ್ರಕಟಣೆ ನಂತರ ಅಭಿವೃದ್ದಿ ಹೊಂದಿದ್ದ ವಿಶ್ವದಲ್ಲಿ ಡಿಡಿಟಿಯನ್ನು ನಿಷೇಧಿಸಲಾಯಿತು.
ಅಣು ವಿಜ್ಞಾನದ ಅಭಿವೃದ್ಧಿಯು ವಿಕಿರಣಗಳ ಮಾಲಿನ್ಯವನ್ನು ಪರಿಚಯಿಸಿದೆ, ಸುಮಾರು ನೂರಾರು, ಸಾವಿರಾರು ವರ್ಷಗಳಿಂದಲೂ ಮಾರಕವಾದಂಥ ವಿಕಿರಣಗಳು ಪರಿಸರದಲ್ಲಿ ಉಳಿದುಕೊಳ್ಳಬಹುದಾಗಿದೆ. ಲೇಕ್ ಕರಾಚಿಯು ಭೂಮಿ ಮೇಲಿರುವ "ಅತಿ ಕೆಟ್ಟ ಮಾಲಿನ್ಯ ಪ್ರದೇಶ" ಎಂದು ವರ್ಲ್ಡ್ ವಾಚ್ ಇನ್ಸ್ ಟ್ಯೂಟ್ ನಿಂದ ಗುರುತಿಸಲ್ಪಟ್ಟಿದ್ದು, 1950 ಮತ್ತು 1960ರ ದಶಕದಲ್ಲಿ ಅದು ಸೊವಿಯತ್ ಯೂನಿಯನ್ ಆಡಳಿತ ವ್ಯವಸ್ಥೆಯಲ್ಲಿ ತ್ಯಾಜ್ಯ ಎಸೆಯುವ ಪ್ರದೇಶವಾಗಿ ಬಳಸಲ್ಪಡುತ್ತಿತ್ತು. "ಅತಿ ಹೆಚ್ಚು ಮಾಲಿನ್ಯಗೊಂಡಿರುವ ಭೂಮಿಯ ಮೇಲಿನ ಪ್ರದೇಶ"ಗಳಲ್ಲಿ ಎರಡನೇ ಸ್ಥಾನದಲ್ಲಿ ಯುಎಸ್ ಎಸ್ ಆರ್‌ನ ಚೆಲ್ಯಾಬಿನ್ಸ್ಕ್ ಇದೆ. (ಈ ಕೆಳಗಿನ ಉಲ್ಲೇಖವನ್ನು ನೋಡಿ)
ಶೀತಲ ಯುದ್ಧದ ಸಂದರ್ಭದಲ್ಲಿ ಕೆಲವೊಮ್ಮೆ ಜನ ವಸತಿ ಪ್ರದೇಶಗಳಲ್ಲಿಯೇ ಅಣ್ವಸ್ತ್ರ ಪರೀಕ್ಷೆಯನ್ನು ಅದರ ಆರಂಭಿಕ ಹಂತದಲ್ಲಿ ನಡೆಸಲಾಗುತ್ತಿತ್ತು. ಹೆಚ್ಚು ಜನಸಂಖ್ಯೆ ಹಾಗೂ ಅದರ ಬೆಳವಣಿಗೆಯಲ್ಲಿ ಅಣುಶಕ್ತಿ ಜೊತೆಗೆ ವಿಕಿರಣಗಳಿಂದ ಮಾನವನ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮಗಳು ಅಣುಶಕ್ತಿಯ ಜೊತೆಗಿನ ಕೊಡುಗೆಗಳಾಗಿದ್ದು ಇದು ಇನ್ನೂವರೆವಿಗೂ ಬಗೆ ಹರಿಯದ ಸಮಸ್ಯೆಯಾಗಿದೆ. ವಿಶೇಷವಾದ ಮುಂಜಾಗ್ರತೆಯನ್ನು ಈ ಕೈಗಾರಿಕೆಗಳಲ್ಲಿ ತೆಗೆದುಕೊಳ್ಳುತ್ತಿದ್ದರೂ ಕೂಡ ತ್ರಿ ಮೈಲ್ ಐಲ್ಯಾಂಡ್ ಮತ್ತು ಚರ್ನೊಬಿಲ್ ಘಟನೆಗಳಿಂದ ಈ ಕೈಗಾರಿಕೆಗಳು ಸಾರ್ವಜನಿಕ ಅಪನಂಬಿಕೆಗೆ ಗುರಿಯಾಗಿದೆ. ಎಲ್ಲ ಅಣುಪರೀಕ್ಷೆಗಳನ್ನು ನಿಷೇಧಿಸುವ ಮೊದಲು ಮಾಡಲಾದ ಒಂದೇ ಒಂದು ಪಾರಂಪರಿಕ ಅಣು ಪರೀಕ್ಷೆಯು ಹಿನ್ನೆಲೆ ವಿಕೀರಣ ಪ್ರಸಾರದ ಪ್ರಮಾಣವನ್ನು ಗುರುತರವಾಗಿ ಹೆಚ್ಚಿಸಿದೆ.
ಅಂತರ ರಾಷ್ಟ್ರೀಯ ದುರಂತಗಳಾದ 1978ರಲ್ಲಿ ಬ್ರಿಟ್ಯಾನಿ ಸಮುದ್ರದಅಮ್ಯಾಕೊ ಕ್ಯಾಡಿಜ್ ತೈಲ ನೌಕಾ ದುರಂತ ಹಾಗೂ 1984ರಲ್ಲಿ ನಡೆದ ಭೂಪಾಲ್ ದುರಂತಗಳಂಥ ಘಟನೆಗಳು ಯಾವ ರೀತಿ ವಿಶ್ವಮಟ್ಟದಲ್ಲಿ ಪರಿಣಾಮ ಬೀರಬಹುದು ಹಾಗೂ ಅದನ್ನು ಪರಿಹರಿಸಲು ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಯಿತು.ನಿರ್ಧಿಷ್ಟ ಗಡಿಯಿಲ್ಲದ ವಾತಾವರಣ ಮತ್ತು ಸಾಗರಗಳು ಭೂಮಿಯಲ್ಲಿ ಸಸ್ಯಗಳ ಮೇಲೆ ಆಗುತ್ತಿರುವ ಮಾಲಿನ್ಯದ ಪರಿಣಾಮದಿಂದಾಗಿ ಭೂತಾಪ ಏರಿಕೆಯ ಪ್ರಭಾವವನ್ನು ಅನುಭವ್ಹಿಸುತ್ತಿವೆ. ಇತ್ತೀಚಿನ ಅವಧಿಯಲ್ಲಿ ದೃಡವಾದ ಜೈವಿಕ ಮಾಲಿನ್ಯಕಾರಕ (POP)ವನ್ನು ಪಿಬಿಡಿಇಎಸ್ ಮತ್ತುಪಿಎಫ್ ಸಿಯ ರಾಸಾಯನಿಕ ಗುಂಪುಗಳು ಎಂದು ವರ್ಗಿಕರಿಸಲಾಗಿದೆ. ಪ್ರಾಯೋಗಿಕ ಅಂಕಿಅಂಶಗಳ ಕೊರತೆಯಿಂದಾಗಿ ಇವುಗಳ ಮಾಲಿನ್ಯದ ಪರಿಣಾಮವನ್ನು ವಿವರವಾಗಿ ಹೇಳುವುದು ಸಾಧ್ಯವಿಲ್ಲ. ಆದರೆ ಕೆಲವು ಕೈಗಾರಿಕಾ ಚಟುವಟಿಕೆಗಳಿಂದಾಗಿ ಅರ್ಕ್‌ಟಿಕ್ ಸಾಗರದಲ್ಲಾದ ಮಾಲಿನ್ಯ್ವವನ್ನು ನಿರ್ಮೂಲನ ಮತ್ತು ಅದರ ನೈಸರ್ಗಿಕ ಒಟ್ಟುಗೂಡುವಿಕೆಯನ್ನು ಇದರ ಬಳಕೆ ಹೆಚ್ಚಾದ ಕೆಲವೇ ದಿನಗಳಲ್ಲಿ ತಿಳಿಡುಕೊಳ್ಳಲಾಯಿತು. ಸ್ಥಳೀಯ ಹಾಗೂ ಜಾಗತಿಕ ಮಾಲಿನ್ಯ ಬೆಳವಣಿಗೆಯ ಕುರಿತಾದ ಸತತ ಪ್ರಚಾರ ಹಾಗೂ ಜಾಗೃತಿಯು ಪರಿಸರವಾದದಲ್ಲಿ ಹಾಗೂ ಪರಿಸರ ಆಂದೋಲನಗಳ ಪ್ರಾರಂಭಕ್ಕೆ ಕಾರಣವಾಯಿತು ಹಾಗೆಯೇ ಮಾನವನು ಪರಿಸರ ವ್ಯವಸ್ಥೆಯನ್ನು ಹಾಳುಗೆಡಹುವುದನ್ನು ಕಡಿಮೆ ಮಾಡುವಂತೆ ಜಾಗೃತಿಗೊಳಿಸಿತು.
[ಬದಲಾಯಿಸಿ] ಮಾಲಿನ್ಯದ ರೂಪಗಳು
ಮುಖ್ಯ ಮಾಲಿನ್ಯದ ಪ್ರಕಾರಗಳು ಹಾಗೂ ಈ ಮಾಲಿನ್ಯಕ್ಕೆ ಕಾರಣವಾಗುವ ಮಾಲಿನ್ಯಕಾರಕಗಳ ಕುರಿತು ಈ ಕೆಳಗಿನ ಪಟ್ಟಿಯಲ್ಲಿ ಹೇಳಲಾಗಿದೆ.
- ರಾಸಾಯನಿಕಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ವಾಯು ಮಾಲಿನ್ಯ ಎನ್ನಬಹುದಾಗಿದೆ. ಕೈಗಾರಿಕೆ ಹಾಗೂ ಮೋಟಾರು ವಾಹನಗಳಿಂದ ಬಿಡುಗಡೆಯಾಗುವ ಕಾರ್ಬನ್ ಮಾನಾಕ್ಸೈಡ್, ಸಲ್ಫರ್ ಡೈಆಕ್ಸೈಡ್, ಕ್ಲೋರೊಪ್ಲೋರೊ ಕಾರ್ಬನ್ಸ್ (CFC) ಮತ್ತು ನೈಟ್ರೊಜನ್ ಆಕ್ಸೈಡ್ ಮುಂತಾದವುಗಳು ಸಾಮಾನ್ಯ ಅನಿಲರೂಪದ ವಾಯುಮಾಲಿನ್ಯಕಾರಕಗಳಾಗಿವೆ. ನೈಟ್ರೊಜನ್ ಆಕ್ಸೈಡ್ ಮತ್ತು ಹೈಡ್ರೊಕಾರ್ಬನ್ಗಳು ಸೂರ್ಯನ ಕಿರಣಗಳಿಗೆ ಪ್ರತಿಕ್ರಿಯಿಸುವುದರಿಂದ ಫೋಟೊಕೆಮಿಕಲ್ ಓಜೋನ್ ಹಾಗೂ ಸ್ಮಾಗ್ ರೂಪುಗೊಳ್ಳುತ್ತದೆ. ಅತಿಸೂಕ್ಷ್ಮ ಕಣಗಳು ಅಥವಾ ಧೂಳಿನ ಕಣಗಳನ್ನು ಅವುಗಳ ಮೈಕ್ರೊಮೀಟರ್ ಪ್ರಮಾಣ ಪಿಎಂ10 ಯಿಂದ ಪಿಎಂ2.5ನಿಂದ ಗುರುತಿಸಲಾಗುತ್ತದೆ.
- ಶುದ್ದೀಕರಣ ವ್ಯವಸ್ಥೆಗಳಿಂದ ಹೊರಬರುವ ತ್ಯಾಜ್ಯ ಉತ್ಪನ್ನಗಳು ಹಾಗೂ ಮಲಿನಕಾರಕಗಳು, ಕಲುಷಿತ ನೀರು, ಜೈವಿಕ ಪ್ರಕ್ರಿಯೆ ಹಾಗೂ ಕಸಕಡ್ಡಿಗಳು ಅಂತರ್ಜಲದಲ್ಲಿ ಸೇರುವುದರಿಂದ ಹಾಗು ನದಿಗಳಿಗೆ ಇವುಗಳನ್ನು ಹರಿಬಿಡುವುದರಿಂದ ಜಲ ಮಾಲಿನ್ಯವಾಗುತ್ತದೆ.
- ರಾಸಾಯನಿಕಗಳನ್ನು ಭೂಮೇಲ್ಮೈಗೆ ಚೆಲ್ಲಿದಾಗ ಅಥವಾ ಭೂಮಿಯ ಒಳಗೆ ಇರುವ ರಾಸಾಯನಿಕ ಸಾಗಾಟ ವ್ಯವಸ್ಥೆಯಲ್ಲಿನ ಸೋರುವಿಕೆಯಿಂದಾಗಿ ಮಣ್ಣು ಮಾಲಿನ್ಯ ಉಂಟಾಗಬಹುದು. ಹೈಡ್ರೊಕಾರ್ಬನ್ಸ್, ಭಾರವಾದ ಲೋಹಗಳು, ಎಂಟಿಬಿಇ, ಹರ್ಬಿಸೈಡ್ಸ್್್, , ಕೀಟನಾಶಕಗಳು ಹಾಗೂ ಕ್ಲೊರಿನೇಟೆಡ್ ಹೈಡ್ರೊಕಾರ್ಬನ್ಸ್ - ಇವು ಪ್ರಮುಖ ಮಣ್ಣಿನ ಮಾಲಿನಕಾರಕಗಳಾಗಿವೆ.
- ಕಸಕಡ್ಡಿಗಳು
- 20ನೇ ಶತಮಾನದ ಅಣು ಭೌತಶಾಸ್ತ್ರ ಚಟುವಟಿಕೆಗಳು, ಕೆಲವು ಅಣುಶಕ್ತಿ ಪ್ರಯೋಗಗಳು ಹಾಗೂ ಹೊಸ ಹೊಸ ಅಣ್ವಸ್ತ್ರ ಸಂಶೋಧನೆ ಉತ್ಪಾದನೆ ಹಾಗೂ ಅವುಗಳ ಬೆಳವಣಿಗೆಗಳ ಫಲಿತಾಂಶದಿಂದಾಗಿ ವಿಕಿರಣ ಮಾಲಿನ್ಯ ಹೆಚ್ಚಾಯಿತು.
(ಆಲ್ಪಾ ಎಮಿಟ್ಟರ್ ಮತ್ತು ಆಕ್ಟಿನೈಡ್ಸ್‌ನ್ನು ವಾತಾವರಣದಲ್ಲಿ ನೋಡಿ)
- ಶಬ್ದ ಮಾಲಿನ್ಯವು ಸಾರಿಗೆ ಶಬ್ದ ವೈಮಾನಿಕ ಯಂತ್ರ ಶಬ್ದ , ಕೈಗಾರಿಕ ಶಬ್ದ, ತೀವೃ ಶಬ್ಧ ಹೊರಡಿಸುವ ಸೊನಾರ್ ಗಳಿಂದ ಉಂಟಾಗುತ್ತದೆ.
- ಖಗೋಳ ಶಾಸ್ತ್ರದಲ್ಲಿನ ವ್ಯತ್ಯಾಸ ಹಾಗೂ ಅತಿ ಹೆಚ್ಚು ಕಿರಣಗಳ ಪ್ರಕಾಶಮಾನತೆಯಿಂದಾಗಿ ಬೆಳಕಿನ ಮಾಲಿನ್ಯವು ಉಂಟಾಗುತ್ತದೆ..
- ರಸ್ತೆಗಳ ಮೇಲಿರುವ ಅತಿ ಹೆಚ್ಚು ವಿದ್ಯುತ್ ತಂತಿಗಳು, ರಸ್ತೆಯಲ್ಲಿನ ಜಾಹೀರಾತು ಫಲಕಗಳು, ಗಣಿಗಾರಿಕಾ ತ್ಯಾಜ್ಯವಸ್ತು, ನಿರುಪಯೋಗಿ ವಸ್ತುಗಳು ಅಥವಾ ಪುರಸಭೆಯ ತ್ಯಾಜ್ಯಗಳ ಅಡ್ಡಬರುವಿಕೆಯಿಂದ ಗೋಚರ ಮಾಲಿನ್ಯವಾಗುತ್ತದೆ.
- ನೈಸರ್ಗಿಕ ನೀರಿನ ಮೂಲಗಳಲ್ಲಿನ ಉಷ್ಣತೆಯಲ್ಲಿ ಮನುಷ್ಯ ಪ್ರಭಾವದಿಂದಾಗಿ ಉಂಟಾಗುವ ಬದಲಾವಣೆಯನ್ನು ತಾಪ ಮಾಲಿನ್ಯ ಎನ್ನಬಹುದಾಗಿದೆ. ಉದಾಹರಣೆಗೆ ವಿದ್ಯುತ್ ಕೇಂದ್ರಗಳಲ್ಲಿ ನೀರನ್ನು ತಂಪುಕಾರಕವಾಗಿ ಬಳಸುವುದು.
[ಬದಲಾಯಿಸಿ] ಮಾಲಿನ್ಯಕಾರಕಗಳು
ಗಾಳಿ, ನೀರು ಅಥವಾ ಮಣ್ಣಿನ್ನು ಮಲಿನಗೊಳಿಸುವ ಅನುಪಯುಕ್ತ ವಸ್ತುವನ್ನು ಮಲಿನಕಾರಕ ಎನ್ನಬಹುದಾಗಿದೆ. ಮೂರು ಮುಖ್ಯ ಅಂಶಗಳು ಮಲಿನಕಾರಕಗಳ ಪ್ರಭಾವದ ತೀವೃತೆಯನ್ನು ಶೃತ ಪಡಿಸುತ್ತದೆ: ಮಲಿನಕಾರಕದ ರಾಸಾಯನಿಕ ಅಂಶಗಳು, ಅದರ ಸಾಂಧ್ರತೆ ಹಾಗೂ ವಾತಾವರಣದಲ್ಲಿ ಅದು ಉಳಿಯಬಹುದಾದ ಅವಧಿ.
[ಬದಲಾಯಿಸಿ] ಮೂಲಗಳು ಹಾಗೂ ಕಾರಣಗಳು:
ವಾಯು ಮಾಲಿನ್ಯವು ನೈಸರ್ಗಿಕ ಮೂಲ ಮತ್ತು ಮಾನವ ನಿರ್ಮಿತ ಮೂಲಗಳಿಂದ ಉಂಟಾಗುತ್ತದೆ. ಪ್ರಪಂಚದೆಲ್ಲೆಡೆ ನಡೆಯುವ ದಹನ ಕ್ರಿಯೆ, ನಿರ್ಮಾಣ, ಗಣಿಗಾರಿಕೆ, ಕೃಷಿ ಹಾಗೂ ಯುದ್ದ ಮುಂತಾದ ಮಾನವ ನಿರ್ಮಿತ ಚಟುವಟಿಕೆಗಳಿಂದ ಹೊರಬೀಳುವ ಮಲಿನಕಾರಕಗಳು ವಾಯು ಮಾಲಿನ್ಯವನ್ನು ಹೆಚ್ಚು ಮಾಡಿವೆ.[೭]
ಮೋಟಾರು ವಾಹನಗಳು ಹೊರಸೂಸುವ ಹೊಗೆಯು ವಾಯು ಮಾಲಿನ್ಯಕ್ಕೆ ಒಂದು ಪ್ರಮುಖವಾದ ಕಾರಣವಾಗಿದೆ.[೮][೯][೧೦] ವಿಶ್ವದ ಪ್ರಮುಖ ರಾಷ್ಟ್ರಗಳಾದ ಚೀನಾ,ಅಮೆರಿಕ ಸಂಯುಕ್ತ ಸಂಸ್ಥಾನಗಳು, ರಷ್ಯಾ, ಮೆಕ್ಸಿಕೊ ಮತ್ತು ಜಪಾನ್ ರಾಷ್ಟ್ರಗಳು ವಾಯು ಮಾಲಿನ್ಯವನ್ನು ಹೊರಸೂಸುವಲ್ಲಿ ಪ್ರಮುಖವಾಗಿವೆ.
ರಾಸಾಯನಿಕ ಕೇಂದ್ರಗಳು, ಕಲ್ಲಿದ್ದಲು ಶಾಖೋತ್ಪನ್ನ ಕೇಂದ್ರಗಳು, ತೈಲ ಶುದ್ದೀಕರಣ ಕೇಂದ್ರಗಳು, ಪೆಟ್ರೊಕೆಮಿಕಲ್ ಕೇಂದ್ರಗಳು, ಅಣು ಚಟುವಟಿಕೆಯಿಂದುಂಟಾಗುವ ತಾಜ್ಯಗಳು, ಸುಡುವಿಕೆ, ದೊಡ್ಡ ಮಟ್ಟದ ಜಾನುವಾರು ವಾಸಸ್ಥಳಗಳು (ಉದಾ: ಹಸುಗಳು, ಹಂದಿಗಳು, ಕೋಳಿಗಳು),ಪಿವಿಸಿ ಕಾರ್ಖಾನೆಗಳು, ಖನಿಜ ಉತ್ಪಾದನ ಕಾರ್ಖಾನೆಗಳು, ಪ್ಲಾಸ್ಟಿಕ್ ಕಾರ್ಖಾನೆಗಳು ಮತ್ತು ದೊಡ್ಡ ಕೈಗಾರಿಕೆಗಳು ಪ್ರಮುಖವಾದ ಸ್ಥಿರ ಮಾಲಿನ್ಯ ಮ್ಗೂಲಗಳು ಎನಿಸಿವೆ.
ಸಮಕಾಲೀನ ಪದ್ದತಿಯಂತೆ ನೈಸರ್ಗಿಕ ಕಳೆ ತೆಗೆಯಲು ಕಳೆನಾಶಕಗಳು ಮತ್ತು ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಕೃಷಿಯ ವಾಯುಮಾಲಿನ್ಯ ಉಂಟಾಗುತ್ತದೆ.[೧೧] 130 ದೇಶಗಳ ಸುಮಾರು 2,500 ವಿಜ್ಞಾನಿಗಳನ್ನೊಳಗೊಂಡ ಇಂಟರ್ ಗೌರ್ನ್ಮೆಂಟ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ (ಐಪಿಸಿಸಿ)ನ 2007ರ ಪೆಬ್ರುವರಿ ವರದಿಯಂತೆ, 1950ರಿಂದ ಈಚೆಗೆ ವಿಶ್ವದಲ್ಲಿ ಭೂತಾಪ ಏರಿಕೆಗೆ ಮಾನವನೇ ಪ್ರಥಮ ಕಾರಣ ಎಂದಿದ್ದಾರೆ. ಮಾನವನು ಜಾಗತಿಕ ಭೂತಾಪವನ್ನು ನಿಯಂತ್ರಿಸಬೇಕಾಗಿ ಮತ್ತು ಹಸಿರು ಮನೆ ಅನಿಲವನ್ನು ಕಡಿತಗೊಳಿಸಬೇಕೆಂದು ಈ ಪ್ರಮುಖ ವರದಿಯು ನಿರ್ದೇಶಿಸುತ್ತದೆ. ಆದರೆ ಬದಲಾದ ವಾತಾವರಣದ ಕ್ರಮದಿಂದಾಗಿ ಜೀವಿಗಳ ಅವಶೇಷಗಳು ಇಂಧನ, ಕಲ್ಲಿದ್ದಲುಗಳಾಗಿ ಪರಿವರ್ತನೆ ಯಾಗುತ್ತವೆ ಮತ್ತು ದಶಕಗಳಲ್ಲಿ ತೈಲಕ್ಕೆ ಬೇಡಿಕೆ ಉಂಟಾಗುತ್ತದೆ ಎಂದು ಅಮೆರಿಕದ ಐಐಸಿಸಿಯ ಈ ವರ್ಷದ ಕೊನೆ ವರದಿಯು ಅಭಿಪ್ರಾಯಪಟ್ಟಿದೆ.[೧೨]
ಕೆಲವು ಸಾಮಾನ್ಯ ಮಣ್ಣಿನ ಮಲಿನಕಾರಕಗಳೆಂದರೆ ಕ್ಲೋರಿನೇಟೆಡ್ ಹೈಡ್ರೊಕಾರ್ಬನ್ಸ್(ಸಿಎಫ್‌ಹೆಚ್), ಭಾರವಾದ ಖನಿಜಗಳು (ಬ್ಯಾಟರಿಗಳಲ್ಲಿ ಕಂಡುಬರುವ ಕ್ರೊಮಿಯಂ, ಕ್ಯಾಡ್ಮಿಯಮ್ ಹಾಗೂ ಸೀಸ ಬಣ್ಣಗಳಲ್ಲಿ ಕಂಡುಬರುವ ಸೀಸಗಳು, ಗ್ಯಾಸೋಲೈನ್), ಎಂಟಿಬಿಇ, ವಿಮಾನ ಹಾರಾಟ ಇಂದನ ,ಸತು, ಅರ್ಸೆನಿಕ್ ಮತ್ತು ಬೆನ್‌ಜೈನ್.
2001ರ ಶ್ರೇಣಿಯ ಪತ್ರಿಕಾ ವರದಿಗಳ ಸಂಗ್ರಹವಾದ ಫೇಟ್ ಫುಲ್ ಹಾರ್ವೆಸ್ಟ್ ಪುಸ್ತಕದಲ್ಲಿ ಕೈಗಾರಿಕ ಉತ್ಪನ್ನಗಳನ್ನು ಗೊಬ್ಬರಗಳಾಗಿ ಮರುಬಳಕೆ ಮಾಡುವುದರಿಂದಾಗಿ ಅನೇಕ ಲೋಹಗಳು ಸೇರಿ ಮಣ್ಣಿನ ಮಲಿನವಾಗುತ್ತದೆ ಎಂದು ಹೇಳಲಾಗಿದೆ.ಸಾಮಾನ್ಯವಾಗಿ ಪುರಸಭೆಯ ನಿರುಪಯುಕ್ತ ಭೂಮಿಗಳು ರಾಸಾಯನಿಕಗಳ ಮೂಲಗಳಾಗಿ ಭೂ ಪರಿಸರದಲ್ಲಿ ಪ್ರವೇಶಿಸಿದ್ದು, (ಅಂತರಜಲದಲ್ಲಿಯೂ)ಅಲ್ಲಿ ಅಕ್ರಮವಾಗಿ ತ್ಯಜಿಸಲ್ಪಟ್ಟಿವೆ, ಅಥವಾ 1970ರಿಂದಿಚೇಗೆ ಯು.ಎಸ್.ಅಥವಾ ಇಯು ರಾಷ್ಟ್ರಗಳು ನಿರುಪಯುಕ್ತ ಭೂಮಿಯನ್ನು ಸಣ್ಣ ಪ್ರಮಾಣದಲ್ಲಿ ನಿಯಂತ್ರಿಸಿವೆ. ಅಲ್ಲಿರುವ ಬಿಡುಗಡೆಯಾಗುವ ಕೆಲವು ಅನುಪಯುಕ್ತ ಪೊಲಿಕ್ಲೋರಿನೆಟೆಡ್ ಡಿಬೆನ್‌ಜೊಡೈಕ್ಸಿನ್ಸ್ ಅನ್ನು ಸಾಮಾನ್ಯವಾಗಿ ಡೈಕ್ಸಿನ್ಸ್ , ಸರಳವಾಗಿ ಟಿಸಿಡಿಡಿ.[೧೩] ಎಂದು ಕರೆಯಲಾಗುತ್ತದೆ.[೧೩]
ಮಾಲಿನ್ಯವು ಕೆಲವೊಮ್ಮೆ ನೈಸರ್ಗಿಕ ಪ್ರಕೋಪಗಳಿಂದ ಕೂಡ ಆಗಬಹುದಾಗಿದೆ. ಉದಾಹರಣೆಗೆ ಜಲಮಾಲಿನ್ಯದಲ್ಲಿ ಸುಂಟರಗಾಳಿ ಪ್ರಕೋಪವನ್ನು ಉದಾಹರಿಸಬಹುದಾಗಿದೆ. ಇದು ಸಮುದ್ರದಲ್ಲಿ ಯಾನದ ಹಡಗುಗಳು ಅಥವಾ ಯಂತ್ರಗಳನ್ನು ಪ್ರಕೋಪಕ್ಕೆ ತುತ್ತುಮಾಡುವುದರಿಂದ ಪೆಟ್ರೊ ಕೆಮಿಕಲ್ ರಾಸಾಯನಿಕಗಳು ಸಮುದ್ರದಲ್ಲಿ ಸೇರಿ ಜಲಮಾಲಿನ್ಯ ಉಂಟಾಗುತ್ತದೆ. ಸಮುದ್ರ ತೀರದ ತೈಲಕೇಂದ್ರಗಳು, ತೈಲ ಶುದ್ದಿಕರಣ ಕೇಂದ್ರಗಳೂ ಕೂಡ ಅಧಿಕ ಪ್ರಮಾಣದ ಪರಿಸರ ಹಾಳು ಮಾಡುವ ಕಾರ್ಯವನ್ನು ಮಾಡುತ್ತಿವೆ. ಕೆಲವು ಮಾಲಿನ್ಯ ಮೂಲಗಳಾದ ಅಣುಶಕ್ತಿ ಕೇಂದ್ರಗಳು ಅಥವಾ ಆಯಿಲ್ ಟ್ಯಾಂಕರ್ಗಳು ಅಪಘಾತಕ್ಕೊಳಪಟ್ಟ ಸಂದರ್ಭದಲ್ಲಿ ದೀರ್ಘಾವಧಿಯ ಮಾಲಿನ್ಯಕಾರಕ ಅಂಶಗಳು ಬಿಡುಗಡೆಯಾಗುತ್ತವೆ. ಶಬ್ದ ಮಾಲಿನ್ಯದ ಪ್ರಮುಖ ವರ್ಗ ಮೂಲವೆಂದರೆ ಮೋಟಾರು ವಾಹನಗಳು, ಜಗತ್ತಿನಾದ್ಯಂತ 90 ಶೇಕಡಾ ಅಹಿತಕರ ಶಬ್ದಗಳ ಉತ್ಪತ್ತಿ ಇದರಿಂದ ಉಂಟಾಗುತ್ತದೆ.
[ಬದಲಾಯಿಸಿ] ಪ್ರಭಾವಗಳು
[ಬದಲಾಯಿಸಿ] ಮಾನವನ ಆರೋಗ್ಯ.
ಗಾಳಿಯ ವ್ಯತಿರಿಕ್ತ ಗುಣಮಟ್ಟವೂ ಮನುಷ್ಯನನ್ನು ಒಳಗೊಂಡಂತೆ ಅನೇಕ ಜೈವಿಕಗಳನ್ನು ಕೊಲ್ಲುತ್ತದೆ. ಓಜೋನ್ ಪದರ ಮಾಲಿನ್ಯವು , ರೆಸ್ಪಿರೆಟರಿ ರೋಗ, ಕಾರ್ಡಿಯೊವ್ಯಾಸ್ಕುಲರ್ ರೋಗಗಳು, ಗಂಟಲು ಬೇನೆ, ಎದೆನೋವು ಹಾಗೂ ರಕ್ತ ಹೆಪ್ಪುಗಟ್ಟುವಿಕೆಯಂತಹ ಅತಿಕೆಟ್ಟ ಖಾಯಿಲೆಗಳಿಗೆ ಕಾರಣವಾಗಿದೆ. ಜಲ ಮಾಲಿನ್ಯವು ನಿತ್ಯ ಸುಮಾರು 14,000 ಜನರ ಸಾವಿಗೆ ಕಾರಣವಾಗಿದ್ದು, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಚರಂಡಿಗಳನ್ನು ಸ್ವಚ್ಚಗೊಳಿಸದೆ, ಕುಡಿಯುವ ನೀರಿನ ಮಲಿನತೆಯು ಹೆಚ್ಚಾಗಿದೆ. ವಾರ್ಷಿಕವಾಗಿ ಯುಎಸ್ ನಲ್ಲಿ 50,000ಕ್ಕೂ ಹೆಚ್ಚು ಸಂಖ್ಯೆಯ ಜನ ಸಾವನಪ್ಪುತ್ತಿದ್ದಾರೆ ಎಂದು ಅದ್ಯಯನಗಳು ತಿಳಿಸಿವೆ.[೧೪] ತೈಲ ಸೋರಿಕೆಯು ಚರ್ಮ ಸಂಬಂಧಿತ ರೋಗಗಳಿಗೆ ಕಾರಣವಾಗುತ್ತದೆ. ಶಬ್ದ ಮಾಲಿನ್ಯದಿಂದ ಕಿವಿ ಕೇಳಿಸದಿರುವಿಕೆ, ಅತಿ ಹೆಚ್ಚು ರಕ್ತದೊತ್ತಡ, ಮಾನಸಿಕ ಒತ್ತಡ ಮತ್ತು ನಿದ್ರಾಹೀನತೆ ಉಂಟಾಗುತ್ತವೆ. ಪಾದರಸದ ಪರೋಕ್ಷ ಸೇವನೆಯು ಮಕ್ಕಳ ಬೆಳವಣಿಗೆಗೆ ಕುಂಠಿತಹಾಗೂ ನರ ದೌರ್ಬಲ್ಯತೆಗೆ ಕಾರಣಾವಾಗುತ್ತದೆ. ವಯಸ್ಸಾದ ವ್ಯಕ್ತಿಗಳು ಹೆಚ್ಚಾಗಿ ವಾಯುಮಾಲಿನ್ಯದಿಂದಾಗುವ ಪ್ರಮುಖ ಕಾಯಿಲೆಗಳಿಗೆ ಹೆಚ್ಚಾಗಿ ತುತ್ತಾದವರಾಗಿದ್ದಾರೆ. ಅವುಗಳಲ್ಲಿ ಹೃದಯ ಸಂಬಂಧಿ ಹಾಗು ಶ್ವಾಸಕೋಶ ಕಾಯಿಲೆಗಳೂ ಕೂಡ ಸೇರುತ್ತವೆ.
ಮಕ್ಕಳು ಮತ್ತು ಶಿಶುಗಳಿಗೂ ಕೂಡ ಅನೇಕ ತೊಂದರೆಗಳಾಗುತ್ತಿವೆ. ಲೆಡ್ ಮತ್ತು ಭಾರವಾದ ಲೋಹಗಳಿಂದ ನರ ದೌರ್ಬಲ್ಯ ಸಮಸ್ಯೆಗಳು ಕಾಣಿಸುತ್ತವೆ. ರಾಸಾಯನಿಕಗಳು ಮತ್ತು ವಿಕಿರಣಗಳು ಕ್ಯಾನ್ಸರ್ ಹಾಗೂ ಹುಟ್ಟಿಗೆ ಸಂಬಂಧಿಸಿದ ರೋಗಗಳನ್ನು ತಂದೊಡ್ಡುತ್ತವೆ.
[ಬದಲಾಯಿಸಿ] ಪರಿಸರ
ಪ್ರಸ್ತುತ ಪರಿಸರದಲ್ಲಿ ಮಾಲಿನ್ಯ ವಿಸ್ತಾರವಾಗಿ ಬೆಳೆದಿದೆ. ಹಾಗೂ ಅದರ ಮೇಲೆ ಅನೇಕ ಪರಿಣಾಮಗಳನ್ನು ಕೂಡ ಬೀರುತ್ತದೆ.
- ಸಲ್ಪರ್ ಡೈಕ್ಸೈಡ್ ಹಾಗೂ ನೈಟ್ರೊಜನ್ ಆಕ್ಸೈಡ್ಸ್ ಗಳು ಆಸಿಡ್ ಮಳೆಗೆ ಕಾರಣವಾಗುವುದು. ಇದು ಮಣ್ಣಿನಲ್ಲಿನ ಪಿಹೆಚ್ ಮೌಲ್ಯ ಕಡಿಮೆಯಾಗಲು ಕಾರಣವಾಗುತ್ತದೆ.
- ವಾತಾವರಣದಲ್ಲಿರುವ ನೈಟ್ರೊಜನ್ ಆಕ್ಸೈಡ್ಸ್ಗಳು ಮಳೆಯಿಂದ ಬೇರ್ಪಡುತ್ತವೆ. ಮಳೆಯಾಗವ ಪ್ರದೇಶದಲ್ಲಿ ಭೂಮಿಯ ಫಲವತ್ತತೆಯನ್ನು ಇದು ಹೆಚ್ಚಿಸುವುದರಿಂದ ಆ ಪರಿಸರ ವ್ಯವಸ್ಥೆಯಲ್ಲಿಯ ಜೀವ ವ್ಯವಸ್ಥೆಯಲ್ಲಿ ಬದಲಾವಣೆಯಾಗುತ್ತದೆ.
- ಮಣ್ಣು ಫಲವತ್ತತೆಯನ್ನು ಕಳೆದುಕೊಂಡು ಸಸ್ಯಗಳು ಬೆಳೆಯಲು ಯೋಗ್ಯವಾಗಿರುವುದಿಲ್ಲ.ಇದು ಆಹಾರ ಸರಪಳಿಯಲ್ಲಿರುವ ಜೀವಿಗಳ ಮೇಲೆ ಪ್ರಭಾವ ಬೀರುತ್ತದೆ.
- ಸ್ಮಾಗ್ ಮತ್ತು ಮಬ್ಬುನಿಂದ ಕಡಿಮೆಯಾದಂತಹ ಸೂರ್ಯನ ಬೆಳಕಿನ ಪರಿಮಾಣದಲ್ಲೇ ಸಸ್ಯಗಳು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸುತ್ತವೆ. ಉತ್ಪಾದನೆಗೆ ಮಾರ್ಗದರ್ಶಕವಾಗಬೇಕಾದ ಓಜೋನ್ ಕೊರತೆಯಿಂದಾಗಿ ಹಾಗೂ ಹೆಚ್ಚಿದ ಉಷ್ಣತೆಯಿಂದಾಗಿ ಸಸ್ಯವರ್ಗ ನಾಶವಾಗುತ್ತದೆ.
- ಸ್ವಾಭಾವಿಕ ವರ್ಗಗಳೊಂದಿಗೆ ಸ್ಪರ್ಧಿಸುವ ಆಕ್ರಮಣ ಸಸ್ಯವರ್ಗಗಳಿಂದಾಗಿ ಜೈವಿಕ ವೈವಿದ್ಯತೆಯಲ್ಲಿ ಕುಂಠಿತವಾಗುತ್ತದೆ. ಒಂದು ಪ್ರದೇಶದ ವಾತಾವರಣದ ಮೂಲ ಸಸ್ಯಗಳಲ್ಲದ ಕಳೆರೀತಿಯ ಸಸ್ಯಗಳು ಹೆಚ್ಚಾಗಿ ಬೆಳೆಯುವುದರಿಂದ ಅಲ್ಲಿಯ ಜೈವಿಕ ಕಣಗಳ ವ್ಯುತ್ಪತ್ತಿ ಹೆಚ್ಚಾಗಿ ಮೂಲ ಸಸ್ಯಗಳ ಬೆಳವಣಿಗೆಯ ಸ್ಪರ್ಧೆಗೆ ತಡೆಯಾಗುತ್ತವೆ.
- ಜೈವಿಕ ವರ್ಧನೆಯ ಕೆಲವು ಹಂತಗಳಲ್ಲಿ ಜೈವಿಕ ವೃದ್ಧಿಯಾಗುವಂತಹ ಸಂದರ್ಭಗಳಲ್ಲಿ ಜೀವಾಣುವಿನಲ್ಲಿ ಉತ್ಪತ್ತಿಯಾಗುವ ವಿಷ(ಕೆಲವು ಭಾರವಾದ ಲೋಹಗಳು), ಜೈವಿಕ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಸಾಂದ್ರವಾಗಿರುತ್ತದೆ.
- ಕಾರ್ಬನ್ ಡೈಆಕ್ಸೈಡ್ಸೂಸುವಿಕೆಯು ಸರೋವರದ ಆಮ್ಲೀಕರಣಕ್ಕೆ ಕಾರಣವಾಗುತ್ತದೆ ಹಾಗೂ ಭೂಮಿಯ ಪಿಹೆಚ್ ಕಡಿಮೆಯಾಗಿ ಸರೋವರಟೆಂಪ್ಲೇಟು:Co2ದಲ್ಲಿ ವಿಲೀನವಾಗುತ್ತಿದೆ.
- ಅನೇಕ ರೀತಿಯಲ್ಲಿ ಪರಿಸರ ವ್ಯವಸ್ಥೆಯಲ್ಲಿ ಹಸಿರುಮನೆ ಅನಿಲವು ಜಾಗತಿಕ ತಾಪಮಾನದ ಮೇಲೆ ಪ್ರಭಾವ ಬೀರಿದೆ.
[ಬದಲಾಯಿಸಿ] ನಿಯಂತ್ರಣ ಮತ್ತು ಮುನ್ನೆಚ್ಚರಿಕೆ:
ಮಾಲಿನ್ಯ ಪ್ರಭಾವಗಳಿಂದ ಪರಿಸರವನ್ನು ರಕ್ಷಿಸಲು, ಜಗತ್ತಿನಾದ್ಯಂತ ಅನೇಕ ದೇಶಗಳು ವಿವಿಧ ಮಾಲಿನ್ಯ ನಿಯಂತ್ರಣ ಕಾಯ್ದೆಗಳನ್ನು ರೂಪಿಸಿ, ಮಾಲಿನ್ಯದ ಪ್ರಭಾವಗಳನ್ನು ತಗ್ಗಿಸಬೇಕಾಗಿದೆ.
[ಬದಲಾಯಿಸಿ] ಮಾಲಿನ್ಯ ನಿಯಂತ್ರಣ
ಪರಿಸರ ನಿರ್ವಹಣಾ ಕಾರ್ಯದಲ್ಲಿ ಮಾಲಿನ್ಯ ನಿಯಂತ್ರಣ ಶಬ್ಧವನ್ನು ಬಳಸಲಾಗುತ್ತದೆ. ಕೈಗಾರಿಕೆಗಳು ಹೊರಸೂಸುವ ರಾಸಾಯನಿಕ ಅನುಪಯುಕ್ತ ತ್ಯಾಜ್ಯಗಳುಮಣ್ಣು, ನೀರು ಅಥವಾ ಗಾಳಿಯನ್ನು ಸೇರದಂತೆ ತಡೆಯುವುದು ಎಂದು ಹೇಳಬಹುದು. ಮಾಲಿನ್ಯ ನಿಯಂತ್ರಣ ಮಾಡದೇ ಇದ್ದರೆ, ಅನುಭೋಗ, ಉಷ್ಣತೆ, ಕೃಷಿ, ಗಣಿಗಾರಿಕೆ, ಉತ್ಪಾದನೆ, ಸಾರಿಗೆ ಮತ್ತು ಮಾನವ ಚಟುವಟಿಕೆ ಇವೆಲ್ಲವುಗಳ ಅನುಪಯುಕ್ತ ವಸ್ತುಗಳು ಒಂದೆಡೆ ಸೇರಿಕೊಂಡು ಅಥವಾ ಚದುರಿ ಪರಿಸರವನ್ನು ಕಲುಷಿತಗೊಳಿಸುತ್ತವೆ. ನಿಯಂತ್ರಣದ ಅನುಕ್ರಮದಲ್ಲಿ, ಮಾಲಿನ್ಯ ಪ್ರತಿಬಂಧ ಮತ್ತು ತ್ಯಾಜ್ಯವಸ್ತುಗಳ ಕಡಿತಗೊಳಿಸುವುದುಮಾಲಿನ್ಯ ನಿಯಂತ್ರಣಕ್ಕಿಂತ ಹೆಚ್ಚು ಅಪೇಕ್ಷಣೀಯವಾಗಿದೆ.
[ಬದಲಾಯಿಸಿ] ಮಾಲಿನ್ಯ ನಿಯಂತ್ರಣದ ಸಾಧನಗಳು
[ಬದಲಾಯಿಸಿ] ದೃಷ್ಟಿಕೋನಗಳು
ಜೀವ ಸ್ವರೂಪಗಳಿಂದ ಉತ್ಪತ್ತಿಯಾದ ಮಲಿನ ಮುನ್ಸೂಚಕಗಳು ನೈಸರ್ಗಿಕ ಕ್ರಿಯೆಯಿಂದ ಹೊರಬರುತ್ತವೆ. ಗೋಳದ ನಿಸರ್ಗ ಆಯ್ಕೆಯಲ್ಲಿ ಉಳಿಯುವ ಸಾಮರ್ಥ್ಯ ಮತ್ತು ಜನಸಂಖ್ಯಾ ಮಟ್ಟ ಕುಸಿತದ ಮೇಲೆ ಅದರ ಹಾಜರಾತಿ ಪರಿಣಾಮ ಬೀರುತ್ತವೆ. ಇವುಗಳು ಮೂಲಭೂತ ಅಥವಾ ಸ್ಥಳೀಯವಾಗಿ ಜನಸಂಖ್ಯಾ ನಾಶ ಹಾಗೂ ಕೆಲವು ಜೀವಿವರ್ಗಗಳ ನಾಶಕ್ಕೆ ಕಾರಣವಾಗುತ್ತದೆ. ಪರಿವರ್ತನೆ ಮತ್ತು ರೂಪಾಂತರಗಳಿಂದ ಹೊಸ ಸಮತೋಲನ ಬೆಳವಣಿಗೆಯಲ್ಲಿ ಪ್ರಕ್ರಿಯೆಗಳು ಅಸಾಧ್ಯ ಪರಿಣಾಮ ಬೀರುತ್ತದೆ. ಕೆಲವೊಂದು ಅಪರೂಪದ ಪರಿಸ್ಥಿತಿಗಳಲ್ಲಿ ಮಾಲಿನ್ಯವನ್ನೇ ಅರಗಿಸಿಕೊಂಡು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಜೀವಿಗಳಿಂದಾಗಿ ಅದನ್ನು ಮಾಲಿನ್ಯ ಎಂದು ಪರಿಗಣಿಸಲಾಗುವುದಿಲ್ಲ. ಮಾನವ ಪ್ರಪಂಚಕ್ಕೆ ತಂತ್ರಜ್ಞಾನ ಎಂಬುದು ಅಗತ್ಯವಾದ ಮತ್ತು ತೀವ್ರವಾದ ಬೇಡಿಕೆಯಿರುವಂತಹದ್ದಾಗಿದ್ದು ಇದು ಅನುಕೂಲಕರ ಮತ್ತು ಉಪಉತ್ಪನ್ನಗಳ ಒಂದು ಮೂಲವಾಗಿದೆ.
ಅಸ್ತಿತ್ವದ ಅವ್ದಧಿ ಇಂದು ಕಡಿಮೆಯಾಗುತ್ತಿರುವುದಕ್ಕೆ ಮಾನವ ಜೀವನದ ಗುಣಮಟ್ಟ ಹಾಗೂ ಆರೋಗ್ಯ ಸಂಬಂಧಿ ವಿಚಾರಗಳೂ ಕಾರಣವಾಗುತ್ತವೆ. ವಿಜ್ಞಾನವು ನಿಖರ ಪ್ರಯೋಗಗಳ ಮೂಲಕ, ಪ್ರಮಾಣಿಕರಿಸುವುದು, ವಿಷಪ್ರಯೋಗದಿಂದಾದ ತೊಂದರೆಗಳು ಇರುವ ಆಧುನಿಕ ಉಪಚಾರ ಅಥವಾ ನೈಸರ್ಗಿಕ ತೊಂದರೆಗಳು ಇವುಗಳ ಪ್ರಭಾವವನ್ನು ಯಾವ ಹಂತದಲ್ಲಿ ಗಮನಿಸಬಹುದು ಎಂಬುದನ್ನು ಕಂಡುಕೊಂಡಿದೆ.ಮಾಲಿನ್ಯದ ಸಾಮಾನ್ಯ ಕ್ಷೇತ್ರಗಳಲ್ಲಿ ಮಾಲಿನ್ಯ ಪ್ರಮಾಣವನ್ನು ಹತೋಟಿಯಲ್ಲಿಡುವುದು ಮುಖ್ಯ ಅವುಗಳಲ್ಲಿ ವಾಹನಗಳ ಹೊಗೆನಿಯಂತ್ರಣ , ಕೈಗಾರಿಕಾ ತ್ಯಾಜ್ಯ (ಉದಾ:ವೃತ್ತಿ ರಕ್ಷಣೆಮತ್ತು ಆರೋಗ್ಯ ಆಡಳಿತ(OSHA) PEL, ವಿಷಶಾಸ್ತ್ರ(ಉದಾ:LD50),ಮತ್ತು ಔಷಧಿ(ಉದಾ: ಚಿಕಿತ್ಸೆ ಮತ್ತು ಪ್ರಸರಣ ಪ್ರಮಾಣಗಳು) ಸೇರಿವೆ.
"ಮಾಲಿನ್ಯಕ್ಕೆ ಪರಿಹಾರ ಅದನ್ನು ಕಡಿಮೆಗೊಳಿಸುವುದು", ಎಂಬುದರ ತ್ಮಾತ್ಪರ್ಯವೆಂದರೆ, ಮಾಲಿನ್ಯ ನಿರ್ವಹಣೆಯಲ್ಲಿನ ಈ ಸಾಂಪ್ರಾದಾಯಿಕ ವಿಧಾನದಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆಮಾಡುವುದು ಮುಖ್ಯವಾಗುತ್ತದೆ. ಅತೀ ಕಡಿಮೆ ಮಾಲಿನ್ಯ ಹಾನಿಕಾರಕವಲ್ಲ.[೧೭][೧೮] ಇದು ಕೆಲವು ಆಧುನಿಕ, ಸ್ಥಳೀಯ ಕ್ಷೇತ್ರ ಬಳಕೆಗಳಿಗೆ ಹೆಚ್ಚು ಸೂಕ್ತವಾಗಿದ್ದು, ಲ್ಯಾಬೋರೇಟರಿ ರಕ್ಷಣಾ ಕಾರ್ಯ ಮತ್ತು ವಿನಾಶಕಾರಿ ವಸ್ತುಗಳು ತುರ್ತು ನಿರ್ವಹಣೆಯಲ್ಲಿ ಬಿಡುಗಡೆಯಾಗುತ್ತವೆ. ಆದರೆ ಅದರ ಅರ್ಥವೆನೆಂದರೆ, ಈ ಕಡಿಮೆಗೊಳಿಸುವುದು ಎನ್ನುವುದು ವಾಸ್ತವವಾಗಿ ಅನಿಯಮಿತ ಬಳಕೆಯಾಗುತ್ತದೆ ಅಥವಾ ಅದರ ಪರಿಣಾಮವಾಗಿ ಎಲ್ಲಾ ಘಟನೆಗಳಲ್ಲಿ ಡಿಲುಟ್ಯಾಂಟ್ಸ್ ಒಪ್ಪಲ್ಪಡುತ್ತವೆ.
ಮುಂದಿನ ಶತಮಾನಗಳಲ್ಲಿ ಪರಿಸರ ಮಾಲಿನ್ಯದ ಕೆಲವು ಸರಳ ಉಪಾಚಾರ ಅಧಿಕ ಪ್ರಮಣದಲ್ಲಿ ಯೋಗ್ಯವಾಗಿತ್ತು. ಭೌತಿಕ ಅಸ್ಥಿತ್ವ ಅನೇಕ ವೇಳೆ ಹೆಚ್ಚು ಕಡ್ಡಾಯವಾಗಿದ್ದು, ಮಾನವ ಮಾಲಿನ್ಯ ಮತ್ತು ಸಾಂದ್ರತೆ ಕಡಿಮೆ ಇದ್ದು, ತಂತ್ರಜ್ಞಾನ ಸರಳವಾಗಿದ್ದವು ಮತ್ತು ಅದರ ಉತ್ಪನ್ನಗಳು ಹೆಚ್ಚು ಗಂಭೀರ ಸ್ವರೂಪದ್ದಾಗಿದ್ದವು. ಆದರೆ ಇವು ಘಟನೆಯಲ್ಲಿ ದೀರ್ಘವಾಗಿರಲಿಲ್ಲ.ಅಲ್ಲದೆ, ಪ್ರಗತಿಗೆ ಕೇಂದ್ರೀಕೃತವಾಗುವ ವಿಸ್ತ್ರೀರ್ಣದ ಶಕ್ತಿ ಇದ್ದರೂ ಮುಂಚೆ ಅದು ಅಸಾಧ್ಯವಾಗಿತ್ತು. ಮೌಲ್ಯಮಾಪನದಲ್ಲಿ ಸಾಂಖ್ಯಿಕ ವಿಧಾನಗಳ ಬಳಕೆಯಿಂದ ಸಿಗುವ ಮೌಲ್ಯವು ಘಟನೆಗಳಲ್ಲಿನ ಸಂಭವನೀಯ ತತ್ವದ ಹಾನಿಗೆ ಚಲಾವಣೆಯನ್ನು ಒದಗಿಸಿದ್ದರೂ ಕೆಲವು ಸಂದರ್ಭಗಳಲ್ಲಿ ಮೌಲ್ಯಮಾಪನ ಪ್ರಮಾಣಿಕರಿಸಿದೆಯಾದರೂ ಖಚಿತಪಡಿಸಲ್ಪಟ್ಟ ಮಾದರಿಗಳ ಪುನರ್ವಿಂಗಡನೆಯು ಕಾರ್ಯ ಸಾಧ್ಯವಿಲ್ಲ ಅಥವಾ ಅಸಂಭವನೀಯವಾಗಿವೆ. ಜೊತೆಗೆ ಪರಿಸರದ ವಿಚಾರದ ಹೊರತಾಗಿಯೂ ಮಾನವ ಚಟುವಟಿಕೆಗಳ ಮೇಲೆ ನೇರ ಪ್ರಭಾವ ಬೀರುವಲ್ಲಿ ಪ್ರಾಮುಖ್ಯತೆ ಗಳಿಸಿವೆ.
ಈಗ ನಿಯಮಗಳ ಅನುಪಸ್ಥಿತಿಯಲ್ಲಿ ಇಡೀ ಪ್ರಪಂಚವೇ ಹಳೇ ಪರಿಪಾಠದ ಹತೋಟಿಯಲ್ಲಿದೆ. ಇದು ಮೂಲಭೂತವಾಗಿದ್ದು ಅನುಪಯುಕ್ತ ತ್ಯಾಜ್ಯವಸ್ತುಗಳ ವಿಸ್ತಾರವಾದ ಸಂಗ್ರಹಗಳಿಂದ ಕಾನೂನು ಬದ್ದವಾಗಿ ಬಿಡುಗಡೆಯಾಗುವ,ದಂಡ ಕಟ್ಟಲ್ಪಡುವ ಶಿಕ್ಷೆಗಳು ಹೆಚ್ಚಾಗುತ್ತಿವೆ ಅಥವಾ ಸೂಚನೆಗಳು ಅನ್ವಯಿಸುತ್ತವೆ. ಹಿಂಜರಿದ ಘಟನೆಗಳು ನಿಯಂತ್ರಣ ಮಟ್ಟದಲ್ಲಿಯೂ ಸಹ ಹೆಚ್ಚು ಬಿಡುಗಡೆಯಾಗುತ್ತವೆ ಅಥವಾ ಒತ್ತಾಯಿಸಲ್ಪಟ್ಟಿದ್ದರೂ ತಿರಸ್ಕೃತವಾಗಿವೆ. ಮಾಲಿನ್ಯದಿಂದ ಸ್ಥಳಾಂತರವಾಗಿ ನಿಸ್ಸಾರ ನಿವಾರಣೆಯಲ್ಲಿ ಅನೇಕ ಘಟನೆಗಳು ಆರ್ಥಿಕ ಮತ್ತು ತಾಂತ್ರಿಕವಾದ ಅಡೆತಡೆಗಳಿಂದ ವಿರೋಧಿಸಲ್ಪಡುತ್ತವೆ.
[ಬದಲಾಯಿಸಿ] ಹಸಿರುಮನೆ ಅನಿಲಗಳು ಮತ್ತು ಜಾಗತಿಕ ತಾಪಮಾನ
ಕಾರ್ಬನ್ ಡೈಆಕ್ಸೈಡ್ ದ್ಯುತಿಸಂಶ್ಲೇಷಣೆಗೆ ಅಗತ್ಯವಾದರೂ ಕೆಲವೊಮ್ಮೆ ಅದು ಮಾಲಿನ್ಯವನ್ನು ನಿರ್ಧರಿಸುತ್ತದೆ. ಏಕೆಂದರೆ ವಾತಾವರಣದಲ್ಲಿ ಏರಿಕೆಯಾದ ಅನಿಲ ಪ್ರಮಾಣವು ಭೂಪರಿಸರದ ಮೇಲೆ ಪ್ರಭಾವ ಬೀರುತ್ತಲೇ ಇರುತ್ತದೆ. ಪರಿಸರಕ್ಕೆ ಅಡ್ಡಿಪಡಿಸುವ ಪ್ರಮುಖಾಂಶಗಳು ಮಾಲಿನ್ಯ ಪ್ರದೇಶಗಳ ನಡುವೆ ಇವೆ ಎಂದು ಬಿಂಬಿಸಲ್ಪಟ್ಟು, ಅವುಗಳಲ್ಲಿ ಸಾಮಾನ್ಯವಾಗಿ ಕೆಲವು ಜಲ ಮತ್ತು ವಾಯು ಎಂದು ಪ್ರತ್ಯೇಕವಾಗಿ ವರ್ಗಿಕರಿಸಲ್ಪಟ್ಟಿವೆ. ದೀರ್ಘಾವಧಿಯಲ್ಲಿ ಹೆಚ್ಚಾಗುತ್ತಿರುವ ನೈಸರ್ಗಿಕ ಕಾರ್ಬನ್ ಡೈಕ್ಸೈಡ್ ಮಟ್ಟವೂ ಲಘು ಕಾರಣವಾದರೂ ಸಮುದ್ರ ನೀರಿನ ಆಮ್ಲತೆಯ ಹೆಚ್ಚಳ ತೀವ್ರವಾಗಿದೆ ಮತ್ತು ಇದು ಕಡಲಿಗೆ ಸಂಬಂಧಿಸಿದ ಪರಿಸರವ್ಯವಸ್ಥೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಇತ್ತೀಚಿನ ಅಧ್ಯೆಯನಗಳು ಪತ್ತೆಹಚ್ಚಿವೆ.
[ಬದಲಾಯಿಸಿ] ವಿವರಗಳಿಗಾಗಿ ನೋಡಿ
|
|
|
ಇತರೆ |
[ಬದಲಾಯಿಸಿ] ಆಕರಗಳು
- ↑ ಮಾಲಿನ್ಯ- ದಿ ಮೆರಿಯಮ್-ವೆಬ್‌ಸ್ಟರ್‌ನ ಅಂತರ್ಜಾಲ ಪದಕೋಶದ ವ್ಯಾಖ್ಯಾನ
- ↑ ಪುರಾತನ ಇತಿಹಾಸದಲ್ಲಿ ರೋಮನ್ ಮತ್ತು ಮಧ್ಯ ಯುಗೀನ ಕಾಲದಲ್ಲಿ ತಾಮ್ರ ಲೋಹ ಕರಗಿಸುವಿಕೆಯಿಂದಾದ ಮಾಲಿನ್ಯವನ್ನು ಗ್ರೀನ್‌ಲ್ಯಾಂಡ್ ಐಸ್‌ನಲ್ಲಿ ವರದಿ ಮಾಡಲಾಗಿದೆ, ವಿಜ್ಞಾನ ಸಂಖ್ಯೆ. 272,1996
- ↑ ಎಲ್. ಗರಿ(2002), "13ನೇ ಶತಮಾನದ ಅಂತ್ಯದವರೆಗಿನ ಪರಿಸರ ಮಾಲಿನ್ಯದ ಮೇಲೆ ಅರೇಬಿಕ್ ಒಪ್ಪಂದಗಳು", ಪರಿಸರ ಮತ್ತು ಇತಿಹಾಸ 8 (4), pp. 475-488.
- ↑ David Urbinato (Summer 1994). London's Historic "Pea-Soupers". United States Environmental Protection Agency. ಮರುಕಳಿಸಿದ ದಿನಾಂಕ 2006-08-02.
- ↑ Deadly Smog. PBS (2003-01-17). ಮರುಕಳಿಸಿದ ದಿನಾಂಕ 2006-08-02.
- ↑ James R. Fleming; Bethany R. Knorr of Colby College. History of the Clean Air Act. American Meteorological Society. ಮರುಕಳಿಸಿದ ದಿನಾಂಕ 2006-02-14.
- ↑ 1972ರಲ್ಲಿ ಮಾನವ ಪರಿಸರದ ಮೇಲೆ ಸಂಯುಕ್ತ ರಾಷ್ಟ್ರಗಳ ಅಧಿವೇಶನದ ಘೋಷಣೆ.
- ↑ ಪರಿಸರ ಸಾಮರ್ಥ್ಯ ವರದಿ 2001 (ಸಾರಿಗೆ, ಕೆನಡಾ ಜಾಲತಾಣ ಪುಟ)
- ↑ ಸ್ಟೇಟ್ ಆಫ್ ದಿ ಎನ್‌ವೈರ್‌ನ್ಮೆಂಟ್, ವಿವಾದ: ವಾಯು ಪ್ರಮಾಣ(ಆಸ್ಟ್ರೇಲಿಯದ ಸರಕಾರಿ ಜಾಲತಾಣ ಪುಟ)
- ↑ ಮಾಲಿನ್ಯ ಮತ್ತು ಸಮಾಜ, ಮರಿಸಾ ಬುಚಾನನ್ ಮತ್ತು ಕಾರ್ಲ್ ಹೊರ್ವಿಟ್ಜ್, ಮಿಚಿಗನ್ ವಿಶ್ವವಿದ್ಯಾನಿಲಯ
- ↑ ಸೈಲೆಂಟ್ ಸ್ಪ್ರಿಂಗ್ಸ್, ಆರ್ ಕಾರ್ಲ್‌ಸನ್, 1962
- ↑ http://news.nationalgeographic.com/news/2007/05/070504-global-warming.html
- ↑ ೧೩.೦ ೧೩.೧ Beychok, Milton R. (January 1987). "A data base for dioxin and furan emissions from refuse incinerators". Atmospheric Environment 21 (1): 29–36. doi:.
- ↑ http://library.thinkquest.org/26026/Environmental_Problems/air_pollution_-_effects.html
- ↑ American Petroleum Institute (API) (February 1990). Management of Water Discharges: Design and Operations of Oil-Water Separators, 1st Edition, American Petroleum Institute.
- ↑ Beychok, Milton R. (1967). Aqueous Wastes from Petroleum and Petrochemical Plants, 1st Edition, John Wiley & Sons. LCCN 67019834.
- ↑ Gershon Cohen Ph.D.. The 'Solution' to Pollution Is Still 'Dilution'. Earth Island Institute. ಮರುಕಳಿಸಿದ ದಿನಾಂಕ 2006-02-14.
- ↑ What is required. Clean Ocean Foundation (2001). ಮರುಕಳಿಸಿದ ದಿನಾಂಕ 2006-02-14.
[ಬದಲಾಯಿಸಿ] ಹೊರಗಿನ ಕೊಂಡಿಗಳು
- OEHHA ಪ್ರತಿಪಾದನೆಯ 65 ಪಟ್ಟಿಗಳು
- ವಾಯು ಮಾಲಿನ್ಯಕ್ಕೆ ಒಎಸ್ಹೆಚ್ಎನ ಮಿತಿ
- USAನ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳಿಂದ ರಾಷ್ಟ್ರೀಯ ವಿಷಶಾಸ್ತ್ರ ಕಾರ್ಯಕ್ರಮ ಮಾಲಿನ್ಯಕಾರಕಗಳು ಹೇಗೆ ಜನರ ಮೇಲೆ ಪರಿಣಾಮ ಬೀರುತ್ತವೆ ಎಂಬುದರ ಮೇಲೆ ವರದಿಗಳು ಮತ್ತು ಅಧ್ಯಯನಗಳು
- ಟಾಕ್ಸ್ನೆಟ್-ವಿಷಶಾಸ್ತ್ರದ ಮೇಲಿನ NIH ದತ್ತಮೂಲಗಳು ಮತ್ತು ವರದಿಗಳು
- ಸೂಫರ್ಫಂಡ್-ಇವುಗಳಲ್ಲಿರುವ ಸೂಫರ್ಫಂಡ್ ತಾಣಗಳು ಮತ್ತು ಮಲಿನಕಾರಕಗಳನ್ನು ನಿರ್ವಹಣೆ ಮಾಡುತ್ತದೆ (CERCLA).
- ವಿಷದ ಅನಿಲ ಬಿಡುಗಡೆ ಪಟ್ಟಿ -USA ಕಂಪನಿಗಳು ಎಷ್ಟು ಪ್ರಮಾಣದ ತ್ಯಾಜ್ಯವನ್ನು ನೀರು ಮತ್ತು ಗಾಳಿಗೆ ಬಿಡುಗಡೆ ಮಾಡುತ್ತವೆ ಎನ್ನುವುದನ್ನು ಪತ್ತೆ ಹಚ್ಚುತ್ತದೆ. ಈ ಮಲಿನಕಾರಕಗಳನ್ನು ಪ್ರತಿ ವರ್ಷ ನಿರ್ದಿಷ್ಟ ಮಟ್ಟದಲ್ಲಿ ಬಿಡುಗಡೆ ಮಾಡಲು ಅನುಮತಿ ಕೊಡಲಾಗುತ್ತದೆ.ನಕ್ಷೆ
- ವಿಷ ವಸ್ತುಗಳ ಮತ್ತು ರೋಗ ನೋಂದಣಿ ಸಂಸ್ಥೆ-ಮೇಲಿನ 20 ಮಾಲಿನ್ಯಕಾರಕಗಳು, ಅವು ಹೇಗೆ ಜನರ ಮೇಲೆ ಪ್ರಭಾವ ಬೀರುತ್ತವೆ, ಯಾವ USA ಕೈಗಾರಿಕೆಗಳ ಅವುಗಳನ್ನು ಬಳಸುತ್ತವೆ ಮತ್ತು ಹೇಗೆ ಅವು ಗುರುತಿಸಲ್ಪಟ್ಟವು ಎಂಬುದನ್ನು ತಿಳಿಸುತ್ತದೆ.
- ರಾಷ್ರೀಯ ಔಷಧಿ ಗ್ರಂಥಾಲಯದಿಂದ ವಿಷ ಅಧ್ಯಯನ ಗಳು-ಮಾನವ ವಿಷಶಾಸ್ತ್ರದ ಪುನರ್ ಪರಿಶೀಲನೆಯ ಒಂದು ಮೂಲ
- ವುಡ್ಸ್ ಹೋಲ್ ಓಸಿಯನೊಗ್ರಾಫಿಕ್ ಸಂಸ್ಥೆಯಿಂದ ಮಾಲಿನ್ಯ ಮಾಹಿತಿ ಸಿಗುತ್ತದೆ.
- ದಿ ಬ್ಲ್ಯಾಕ್ಸ್ಮಿತ್ ಸಂಸ್ಥೆಯ ಪ್ರಕಾರ 2007ರಲ್ಲಿನ ವಿಶ್ವದ ಅತಿಕೆಟ್ಟ ಮಾಲಿನ್ಯಗೊಂಡ ಸ್ಥಳಗಳು
- ಟೈಮ್.ಕಾಮ್ನಲ್ಲಿ ವರದಿಯಾದ ವಿಶ್ವದ ಅತೀ ಹೆಚ್ಚು ಮಾಲಿನ್ಯಗೊಂಡ ಸ್ಥಳಗಳು (ಟೈಮ್ ನಿಯತಕಾಲಿಕೆಯ ಒಂದು ವಿಭಾಗ)
- ಚೆಲಿಬಿಂಸ್ಕ್: ಗ್ರಹದ ಮೇಲೆ ಹೆಚ್ಚು ಮಾಲಿನ್ಯಗೊಂಡ ಸ್ಥಳ ಎಂದು ಸಲ್ವೊಮೀರ್ ಗ್ರುನ್ಬರ್ಗ್(1996)ನ ಸಾಕ್ಷ್ಯಚಿತ್ರದಲ್ಲಿದೆ.
- ಕೂಸಿನ ಕಡಿಮೆ ಬುದ್ದಿಮಟ್ಟವೂ ಪ್ರಸವಪೂರ್ವ ಮಾಲಿನ್ಯ ಕ್ಕೆ ಸೇರಿಕೊಳ್ಳುತ್ತದೆ ಎಂದು ಲಿಂಡಸೇ ಟ್ಯಾನ್ನರ್ ಅವರು ಜುಲೈ 20 2009ರಲ್ಲಿ ಪ್ರಕಟವಾದ ದಿ ಹಪ್ಪಿಂಗ್ಟನ್ ಪೋಸ್ಟ್ ರಲ್ಲಿ ಹೇಳಿದ್ದಾರೆ.
|
|||||||||||||||||||||||