ಕರ್ನಾಟಕದ ಮಹಾನಗರಪಾಲಿಕೆಗಳು

ವಿಕಿಪೀಡಿಯ ಇಂದ
(ಮಹಾನಗರಪಾಲಿಕೆಗಳು ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮಹಾನಗರಪಾಲಿಕೆಗಳು ಮಹಾನಗರಗಳ ಆಡಳಿತವನ್ನು ನಡೆಸುತ್ತವೆ. ಕರ್ನಾಟಕ ಮಹಾನಗರಪಾಲಿಕೆ ಕಾಯ್ದೆಯಂತೆ ಒಂದು ನಗರ ಮಹಾನಗರಪಾಲಿಕೆ ದರ್ಜೆಗೇರಲು ಪೂರ್ಣ ನಗರ ಪ್ರದೇಶದಲ್ಲಿ ೨ ಲಕ್ಷ ಜನಸಂಖ್ಯೆ ಮತ್ತು ಸುತ್ತಲಿನ ಪ್ರದೇಶದಲ್ಲಿ ೧ ಲಕ್ಷ ಜನಸಂಖ್ಯೆ ಅಂದರೆ ಒಟ್ಟಾರೆ ೩ ಲಕ್ಷ ಜನಸಂಖ್ಯೆ ಇರಬೇಕು. ನಗರದ ಕಂದಾಯ ೬ ಕೋಟಿ ರೂಪಾಯಿಗಳಿಗೂ ಮಿಕ್ಕಿರಬೇಕು ಮತ್ತು ಜನಸಾಂದ್ರತೆ ಪ್ರತಿ ಚದರ ಕಿ.ಮಿ.ಗೆ ೩೦೦೦ ಮಿಕ್ಕಿರಬೇಕು.

ಕರ್ನಾಟಕದಲ್ಲಿ ೨೦೦೯ರಲ್ಲಿರುವಂತೆ ರಾಜಧಾನಿ ಬೆಂಗಳೂರು ಸೇರಿದಂತೆ ೯ ನಗರಗಳು ಮಹಾನಗರಪಾಲಿಕೆ ಸ್ಥಾನಮಾನ ಹೊಂದಿವೆ.

ಕರ್ನಾಟಕದಲ್ಲಿರುವ ಮಹಾನಗರಪಾಲಿಕೆಗಳು [ಬದಲಾಯಿಸಿ]

ನಗರ ಪಾಲಿಕೆ ಜನಸಂಖ್ಯೆ(೨೦೦೧ ಜನಗಣತಿ) ಪಾಲಿಕೆಯಾದ ವರ್ಷ
ಬೆಂಗಳೂರು ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಈ ಮುಂಚೆ ಬೆಂಗಳೂರು ಮಹಾನಗರಪಾಲಿಕೆ) ೬೮ ಲಕ್ಷ ೨೦೦೭
ಹುಬ್ಬಳ್ಳಿ - ಧಾರವಾಡ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ೭.೮೬ ಲಕ್ಷ ೧೯೬೨
ಮೈಸೂರು ಮೈಸೂರು ಮಹಾನಗರಪಾಲಿಕೆ ೮ ಲಕ್ಷ ೧೯೭೭
ಮಂಗಳೂರು ಮಂಗಳೂರು ಮಹಾನಗರಪಾಲಿಕೆ ೫.೩೮ ಲಕ್ಷ ೧೯೮೩
ಬೆಳಗಾವಿ ಬೆಳಗಾವಿ ಮಹಾನಗರಸಭೆ ೫.೬೪ ಲಕ್ಷ ೧೮೫೧
ಕಲ್ಬುರ್ಗಿ ಗುಲ್ಬರ್ಗಾ ಮಹಾನಗರಪಾಲಿಕೆ ೪.೨೭ ಲಕ್ಷ
ಬಳ್ಳಾರಿ ಬಳ್ಳಾರಿ ಮಹಾನಗರಪಾಲಿಕೆ ೩.೧೭ ಲಕ್ಷ ೨೦೦೩
ದಾವಣಗೆರೆ ದಾವಣಗೆರೆ ಮಹಾನಗರಪಾಲಿಕೆ ೩.೬೪ ಲಕ್ಷ ೨೦೦೭
ತುಮಕೂರು ತುಮಕೂರು ಮಹಾನಗರಪಾಲಿಕೆ ೨.೪೮ ಲಕ್ಷ(ನಗರ) ೨೦೦೯

ಮಹಾನಗರಪಾಲಿಕೆಗಳಾಗಿ ಭಡ್ತಿಗೊಳ್ಳಬೇಕಿರುವ ನಗರಗಳು [ಬದಲಾಯಿಸಿ]

ಶಿವಮೊಗ್ಗ ನಗರಸಭೆಯನ್ನು ಈ ಕೂಡಲೆ ಮಹಾನಗರಪಾಲಿಕೆಯಾಗಿ ಭಡ್ತಿಗೊಳಿಸುವ ಪ್ರಸ್ತಾವ ಸರಕಾರದ ಮುಂದಿದೆ. ಬಿಜಾಪುರ, ರಾಯಚೂರು, ಬೀದರ್ ಮುಂತಾದ ನಗರಗಳು ೨ ಲಕ್ಷಕ್ಕೂ ಮಿಕ್ಕಿ ಜನಸಂಖ್ಯೆ ಹೊಂದಿದ್ದು ಮುಂದಿನ ೫ ವರ್ಷಗಳಲ್ಲಿ ಭಡ್ತಿ ಹೊಂದುವ ಸಾಧ್ಯತೆ ಇವೆ. ಮುಂದಿನ ೧೦ ರಿಂದ ೨೦ ವರ್ಷಗಳಲ್ಲಿ ಹೊಸಪೇಟೆ, ಹಾಸನ, ಉಡುಪಿ, ಭದ್ರಾವತಿ ಮುಂತಾದ ನಗರಗಳಲ್ಲಿ ಜನಸಂಖ್ಯೆ ಹೆಚ್ಚುವ ಸಾಧ್ಯತೆ ಇದ್ದು, ಮಹಾನಗರಪಾಲಿಕೆ ಹೊಂದುವ ಅರ್ಹತೆಯನ್ನು ಪಡೆಯಲಿವೆ.

ಉಲ್ಲೇಖಗಳು [ಬದಲಾಯಿಸಿ]

[೧] [೨]