ವಿಷಯಕ್ಕೆ ಹೋಗು

ಮಸೂರ ಅವರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Lentil (Masoor Dal)
Lentils
Scientific classification
ಸಾಮ್ರಾಜ್ಯ:
Plantae
Division:
ವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
ಪ್ರಜಾತಿ:
L. culinaris
Binomial name
Lens culinaris
Medikus

ಮಸೂರ ಅವರೆ ಅಥವಾ ಮಸೂರ್ ದಾಲ್ ಅಥವಾ ಮಸೂರ ಬೇಳೆ (ಲೆನ್ಸ್ ಕ್ಯುಲಿನರಿಸ್ ) ಯನ್ನು ದ್ವಿದಳ ಧಾನ್ಯದ ಒಂದು ಬಗೆಯೆಂದು ಪರಿಗಣಿಸಲಾಗುತ್ತದೆ. ಚನ್ನಂಗಿ ಬೇಳೆ ಪರ್ಯಾಯ ನಾಮ. ಇದು ದ್ವಿದಳ ಧಾನ್ಯಗಳ ಸಸ್ಯದ ಜಾತಿಗೆ ಸೇರಿದ ಪೊದೆಯಾಗಿ ಬೆಳೆಯುವ ಒಂದು ವಾರ್ಷಿಕ ಸಸ್ಯ. ಇದರ ಬೀಜಗಳು ಮಸೂರ-ಆಕಾರದಲ್ಲಿ ಬೆಳೆಯುತ್ತವೆ. ಇದು15 inches (38 cm)ರಷ್ಟು ಎತ್ತರವಿರುತ್ತದೆ, ಹಾಗೂ ಬೀಜಗಳು ಕೋಶಗಳಲ್ಲಿ ಬೆಳೆಯುತ್ತವೆ. ಸಾಮಾನ್ಯವಾಗಿ ಪ್ರತಿಯೊಂದರಲ್ಲೂ ಎರಡು ಬೀಜಗಳಿರುತ್ತವೆ.

ಇದರ ಮೂಲಸ್ಥಾನ ದಕ್ಷಿಣ ಮತ್ತು ಪಶ್ಚಿಮ ಏಷ್ಯ ಎನ್ನಲಾಗಿದೆ. ಗ್ರೀಸ್ ಮತ್ತು ಈಜಿಪ್ಟ್ ದೇಶಗಳಲ್ಲೂ ಈ ಬೆಳೆ ಬಳಕೆಯಲ್ಲಿದೆ.

ಉತ್ತರ ಭಾರತದಲ್ಲಿ ಇದು ಹೆಚ್ಚು ಪ್ರಸಿದ್ಧ. ಇದರ ಕಾಳಿನ ಸಾರು ಬಲುರುಚಿ ಎನ್ನಲಾಗಿದೆ. ಹಿಟ್ಟಿನ ಜೊತೆ ಅಥವಾ ರೊಟ್ಟಿಯ ಜೊತೆ ಉಪಯೋಗಿಸುತ್ತಾರೆ. ಮಸೂರಬೇಳೆ ಚಳಿಗಾಲದ ಬೆಳೆ. ಮೂರು ತಿಂಗಳೊಳಗೆ ಫಲ ಕೊಡುತ್ತದೆ. ಅಲ್ಲದೇ ಇದು ಜೀರ್ಣಕಾರಿ ಕೂಡ. ಹೀಗಾಗಿ ಇದರ ಬಳಕೆ ಹೆಚ್ಚು. ಮೊಳಕೆಯೊಡೆದಿರುವ ಕಾಳುಗಳಲ್ಲಿ ಜೀವಸತ್ತ್ವಗಳ ಮೊತ್ತ ಇನ್ನೂ ಅಧಿಕ.

ಒಂದು ಹೆಕ್ಟೇರಿಗೆ ಸಾಧಾರಣವಾಗಿ 450-900 ಕೆಜಿ. ಇಳುವರಿ ಪಡೆಯಬಹುದು.

ಹಿನ್ನೆಲೆ

[ಬದಲಾಯಿಸಿ]

ಈ ದ್ವಿದಳಧಾನ್ಯದ ಸಸ್ಯವು ಬಹುಶಃ ನಿಕಟಪ್ರಾಚ್ಯದಲ್ಲಿ ಹುಟ್ಟಿಕೊಂಡಿರಬಹುದು. ಜೊತೆಗೆ ಇದು ನವಶಿಲಾಯುಗದ ಅಸೆರಾಮಿಕ್ (ಮಡಿಕೆಗಳ ತಯಾರಿಕೆ ಇರದ) ಕಾಲದಿಂದಲೂ ಮನುಷ್ಯರ ಆಹಾರದ ಒಂದು ಭಾಗವಾಗಿದೆ. ಇದು ನಿಕಟಪ್ರಾಚ್ಯದಲ್ಲಿ ದೇಶೀಕರಿಸಲಾದ ಮೊದಲ ಬೆಳೆಯಾಗಿದೆ. ಪ್ರೋಟೀನ್ ನಿಂದ ಸರಿಸುಮಾರು 26% ಕ್ಯಾಲೋರಿಯನ್ನು ಹೊಂದಿರುವ ಮಸೂರ ಅವರೆ, ಹಾಗೂ ಸಾಮಾನ್ಯವಾಗಿ ಯಾವುದೇ ಕಾಳು ಅಥವಾ ದ್ವಿದಳ ಧಾನ್ಯಗಳು, ಸಸ್ಯ-ಆಧಾರಿತ ಆಹಾರದಲ್ಲಿ ಸೋಯಾಬೀನ್‍ಗಳು ಹಾಗು ಸೆಣಬಿನ ನಂತರ ಪ್ರೋಟೀನ್ ನ ಪ್ರಮಾಣದಲ್ಲಿ ಮೂರನೇ-ಅತ್ಯಂತ ಹೆಚ್ಚಿನ ಮಟ್ಟದಲ್ಲಿದೆ. ಇದು ಜಗತ್ತಿನ ಹಲವು ಭಾಗಗಳಲ್ಲಿ ಒಂದು ಪ್ರಮುಖ ಆಹಾರವಾಗಿದೆ, ವಿಶೇಷವಾಗಿ ದೊಡ್ಡ ಪ್ರಮಾಣದ ಶಾಕಾಹಾರಿ ಜನಸಂಖ್ಯೆಯನ್ನು ಹೊಂದಿರುವ ಭಾರತದ ಉಪಖಂಡದಲ್ಲಿ ಇದನ್ನು ಬಳಸಲಾಗುತ್ತದೆ.

ಬಗೆಬಗೆಯ ಕಾಳುಗಳು ಹಾಗು ಮಸೂರ ಅವರೆಗಳು ವಿವಿಧ ಬಣ್ಣಗಳಿಂದ ಕೂಡಿದೆ. ಇದು ಹಳದಿ, ಕೆಂಪು ಮಿಶ್ರಿತ ಕಿತ್ತಳೆ ಬಣ್ಣ, ಹಸಿರು, ಕಂದು ಹಾಗು ಕಪ್ಪು ಬಣ್ಣಗಳಿಂದ ಕೂಡಿದೆ. ಕೆಲವು ಕಡೆಗಳಲ್ಲಿ ಕೆಂಪು, ಬಿಳಿ ಹಾಗು ಹಳದಿ ಮಸೂರ ಅವರೆಯ ಸಿಪ್ಪೆ ಸುಲಿಯಲಾಗುತ್ತದೆ. ಅಂದರೆ ಸಿಪ್ಪೆಯುಳ್ಳ ಮಸೂರ ಅವರೆಯನ್ನು ಮಾರಾಟಕ್ಕೆ ಮುಂಚೆ ಸುಲಿಯಲಾಗುತ್ತದೆ. ಮಸೂರ ಅವರೆಯಲ್ಲಿ ದೊಡ್ಡದು ಹಾಗು ಸಣ್ಣದಾದ ಹಲವು ಜಾತಿಗಳಿವೆ. (ಉದಾಹರಣೆಗೆ, ಚಿತ್ರದಲ್ಲಿ ತೋರಿಸಲಾದ ಮಸೂರ ಅವರೆಗಳು) ಮಸೂರ ಅವರೆಯನ್ನು ಹಲವು ರೂಪಗಳಲ್ಲಿ ಮಾರಾಟ ಮಾಡಲಾಗುತ್ತದೆ, ಸಿಪ್ಪೆಯೊಂದಿಗೆ ಅಥವಾ ಸಿಪ್ಪೆಯಿಲ್ಲದೆ, ಇಡಿಯಾಗಿ ಅಥವಾ ಬಿಡಿಸಿ ಮಾರಾಟ ಮಾಡಲಾಗುತ್ತದೆ. ಕೃಷಿ ವಿಧಾನದಂತೆ, ಇತರ ಕಾಳುಗಳನ್ನು ಕೆಲವು ಬಾರಿ ಮಸೂರ ಅವರೆಯೆಂದೇ ಕರೆಯಲಾಗುತ್ತದೆ. ಆದರೆ ಅವುಗಳು ವಾಸ್ತವವಾಗಿ ಹುರುಳಿ ಅಥವಾ ಬಟಾಣಿಯಾಗಿರುತ್ತದೆ. ಉದಾಹರಣೆಗೆ "ಕಪ್ಪು ಮಸೂರ ಅವರೆಗಳು" (ಉದ್ದಿನ ಬೇಳೆ).

ಮಸೂರ ಅವರೆ ಸಸ್ಯದ ಸಚಿತ್ರ ವಿವರಣೆ, 1885

ವಿಧಗಳು

[ಬದಲಾಯಿಸಿ]
  • ಕಂದುಬಣ್ಣದ/ಸ್ಪಾನಿಶ್ ಪರ್ಡಿನ
  • ಫ್ರೆಂಚ್ ಹಸಿರು/ಪುಯ್ (ಗಾಢವಾದ ಮಚ್ಚೆಗಳ್ಳುಳ್ಳ ನೀಲಿ-ಹಸಿರು ಬಣ್ಣ)
  • ಹಸಿರು
  • ಕಪ್ಪು/ಬಿಲೂಗ
  • ಹಳದಿ/ಕಂದುಬಣ್ಣದ ಮಸೂರ ಅವರೆಗಳು (ಒಳಭಾಗದಲ್ಲಿ ಕೆಂಪು ಬಣ್ಣ)
  • ರೆಡ್ ಚೀಫ್ (ಸಿಪ್ಪೆಯುಳ್ಳ ಹಳದಿ ಮಸೂರ ಅವರೆಗಳು)
  • ಎಸ್ಟನ್ ಹಸಿರು(ತೆಳು ಹಸಿರು ಬಣ್ಣ)
  • ರಿಚ್ಲೆಅ (ಮಾಧ್ಯಮ ಹಸಿರು ಬಣ್ಣ)
  • ಲೈರ್ಡ್ (ಗಾಢ ಹಸಿರು ಬಣ್ಣ)
  • ತೆಳುವಾದ ಬಂಗಾರದ ಬಣ್ಣ (ಸಿಪ್ಪೆಯುಳ್ಳ ಮಸೂರ ಅವರೆಗಳು)
  • ಮಸೂರ್ ( ಕಂದು ಬಣ್ಣದ ಸಿಪ್ಪೆಗಳ್ಳುಳ್ಳ ಮಸೂರ ಅವರೆಗಳು ಒಳಭಾಗದಲ್ಲಿ ಕೆಂಪು ಬಣ್ಣದಿಂದ ಕೂಡಿರುತ್ತದೆ)
  • ತೆಳುವಾದ ಕಡುಗೆಂಪು/ಕೆಂಪು ಬಣ್ಣ (ಸಿಪ್ಪೆಯುಳ್ಳ ಮಸೂರ ಅವರೆಗಳು)
  • ಮಕಾಚಿಯಾಡೋಸ್ (ಹಳದಿ ಬಣ್ಣದ ದೊಡ್ಡ ಮೆಕ್ಸಿಕನ್ ಮಸೂರ ಅವರೆಗಳು)

ಸಿದ್ಧತೆ

[ಬದಲಾಯಿಸಿ]
ಕೆಂಪು ಹಾಗು ಕಂದು ಬಣ್ಣದ ನಡುವಿನ ಹೋಲಿಕೆ

ಬೀಜಗಳನ್ನು ಬೇಯಿಸಲು ಕಡಿಮೆ ಸಮಯ ಹಿಡಿಯುವುದರ ಜೊತೆಗೆ (ವಿಶೇಷವಾಗಿ, ಸಿಪ್ಪೆಯನ್ನು ತೆಗೆದ ಸಣ್ಣ ಬೀಜಗಳು, ಉದಾಹರಣೆಗೆ, ಸಾಮಾನ್ಯವಾಗಿ ದೊರಕುವ ಕೆಂಪು ಮಸೂರ ಅವರೆ) ಒಂದು ವಿಶಿಷ್ಟವಾದ ಮಣ್ಣಿನ ವಾಸನೆಯನ್ನು ಹೊಂದಿರುತ್ತವೆ. ಮಸೂರ ಅವರೆಯನ್ನು, ತಯಾರಿಕೆಯಲ್ಲಿ ಕಡಿಮೆ ವೆಚ್ಚ ತಗಲುವ ಆದರೆ ಪೌಷ್ಟಿಕಾಂಶ ಭರಿತ ಸೂಪ್ ನ್ನು ತಯಾರಿಸಲು ಯುರೋಪ್ ಹಾಗು ಉತ್ತರ ಹಾಗು ದಕ್ಷಿಣ ಅಮೆರಿಕಗಳಲ್ಲಿ ಬಳಸಲಾಗುತ್ತದೆ. ಇದಕ್ಕೆ ಕೆಲವೊಂದು ಬಾರಿ ಕೋಳಿಮಾಂಸ ಅಥವಾ ಪೋರ್ಕ್ (ಹಂದಿ ಮಾಂಸ)ನ್ನು ಯಾವುದೇ ರೀತಿಯಲ್ಲಾದರೂ ಮಿಶ್ರಣ ಮಾಡಲಾಗುತ್ತದೆ. ಇವುಗಳನ್ನು ಸಾಧಾರಣವಾಗಿ ಅಕ್ಕಿಯೊಂದಿಗೆ ಸೇರಿಸಿ ಬೇಯಿಸಲಾಗುತ್ತದೆ. ಇದನ್ನು ಸಹ ಬೇಯಿಸಲು ಅದೇ ಸಮಯ ಹಿಡಿಯುತ್ತದೆ. ಮಸೂರ ಅವರೆ ಹಾಗು ಅನ್ನದಿಂದ ತಯಾರಾದ ತಿನಿಸನ್ನು ಮಿಡಲ್ ಈಸ್ಟ್ ನಲ್ಲಿ ಮುಜದ್ದರ ಅಥವಾ ಮೆಜಾದ್ರ ಎಂದು ಕರೆಯುತ್ತಾರೆ. ಭಾರತದ ಜನಪ್ರಿಯ ಖಾದ್ಯವಾದ ಖಿಚಡಿ ಯನ್ನು ತಯಾರಿಸಲು ಅಕ್ಕಿ ಮತ್ತು ಮಸೂರ ಅವರೆಯನ್ನು ಒಟ್ಟಿಗೆ ಸೇರಿಸಿ ಬೇಯಿಸಲಾಗುತ್ತದೆ; ಇದೇ ರೀತಿಯ ಖಾದ್ಯವಾದ ಕುಷರಿ ಯನ್ನು ಈಜಿಪ್ಟ್ ನಲ್ಲಿ ತಯಾರಿಸಲಾಗುತ್ತದೆ. ಈಜಿಪ್ಟ್ ನ ಎರಡು ರಾಷ್ಟ್ರೀಯ ಭಕ್ಷ್ಯ ಗಳಲ್ಲಿ ಒಂದೆಂದು ಇದನ್ನು ಪರಿಗಣಿಸಲಾಗಿದೆ. ಮಸೂರ ಅವರೆಯನ್ನು ಭಾರತದಲ್ಲಿ, ಮೆಡಿಟರೇನಿಯನ್ ಪ್ರದೇಶ ಹಾಗು ಮಧ್ಯಪ್ರಾಚ್ಯದಲ್ಲಿ ಬಳಸಲಾಗುತ್ತದೆ. ಕೆಲವೊಂದು ಅಪರೂಪದ ಸಂದರ್ಭಗಳಲ್ಲಿ, ಮಸೂರ ಅವರೆಯನ್ನು ಡೈರಿ ಚೀಸ್ ನೊಂದಿಗೆ ಬೆರೆಸಲಾಗುತ್ತದೆ.

ಭಾರತೀಯರಲ್ಲಿ ಹೆಚ್ಚು ಜನರು ಶಾಕಾಹಾರಿಗಳಾಗಿದ್ದಾರೆ, ಹಾಗು ಪ್ರೋಟೀನ್ ಅಂಶವನ್ನು ಹೊಂದಿರುವ ಮಸೂರ ಅವರೆಯು ತುಂಬಾ ದೀರ್ಘ ಕಾಲದಿಂದ ಅವರ ಸ್ಥಳೀಯ ಆಹಾರದ ಒಂದು ಭಾಗವಾಗಿದೆ. ಸಾಧಾರಣವಾಗಿ, ಮಸೂರ ಅವರೆಯನ್ನು ನುಣ್ಣನೆಯ ಹದಕ್ಕೆ ಬೇಯಿಸಿಕೊಳ್ಳಲಾಗುತ್ತದೆ. ಉತ್ತರ ಹಾಗು ಪಶ್ಚಿಮದಲ್ಲಿ, ಅದು ಬೆಂದ ನಂತರ ಅದಕ್ಕೆ ಮಸಾಲೆ ಸೇರಿಸಲಾಗುತ್ತದೆ, ದಕ್ಷಿಣ ಭಾರತದಲ್ಲಿ ಅದನ್ನು ತರಕಾರಿಯ ಜೊತೆಗೆ ಬೇಯಿಸಿಕೊಳ್ಳಲಾಗುತ್ತದೆ (ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ, ಅಂದರೆ ಶೇಕಡಾ 99ರಷ್ಟು ಸಮಯ ತೊಗರಿ ಬೇಳೆಯೊಂದಿಗೆ ಬೇಯಿಸಲಾಗುತ್ತದೆ, ಮಸೂರ ಬೇಳೆಯೊಂದಿಗೆ ಅಲ್ಲ). ನಂತರ ಇದಕ್ಕೆ ಮಸಾಲೆಯ ಮಿಶ್ರಣವನ್ನು ಸೇರಿಸಿ ಹೆಚ್ಚುವರಿ ತಿನಿಸಾಗಿ ತಯಾರು ಮಾಡಲಾಗುತ್ತದೆ, ಉದಾಹರಣೆಗೆ ದಾಲ್, ಉತ್ತರ ಭಾರತದಲ್ಲಿರುವ ಇದರ ಮೂಲ ಭಕ್ಷ್ಯ ಹೆಸರನ್ನೇ ಇಡಲಾಗಿದೆ. ಭಕ್ಷ್ಯದ ಹೆಸರಿನ ಈ ತಿನಿಸು ಅಕ್ಕಿ ಅಥವಾ ಗೋಧಿಯ ಮುಖ್ಯ ಖಾದ್ಯಗಳೊಂದಿಗೆ ಸೇವಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಸಾಂಬಾರ್ ಅಥವಾ ರಸಂ ನ್ನು ಅನ್ನದ ಜೊತೆ ಸೇರಿಸಿ ತಿನ್ನಲಾಗುತ್ತದೆ. ಸಾಮಾನ್ಯವಾಗಿ ಇದು ಶಾಕಾಹಾರಿ ಅಡುಗೆಯ ಪ್ರೋಟೀನ್ ಯುಕ್ತ ಮೂಲದ ಒಂದು ಪ್ರಮುಖ ಆಧಾರವಾಗಿದೆ.

ಮಸೂರ ಅವರೆ, ಅಥವಾ ಇತರ ಕಾಳುಗಳು ಅಥವಾ ಬೀಜಗಳನ್ನು ಬೇಯಿಸುವುದಕ್ಕೆ ಮುಂಚೆ ಮಸೂರ ಅವರೆಯು ಹುಳುಕಾಗಿದೆಯೇ, ಅದರಲ್ಲಿ ಕಲ್ಲುಗಳಿವೆಯೇ ಅಥವಾ ಯಾವುದೇ ಕಸವಿದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ನಂತರ ಅದನ್ನು ಚೆನ್ನಾಗಿ ತೊಳೆಯಲಾಗುತ್ತದೆ, ಹಾಗೂ ನೀರಿನಿಂದ ಕಸವು ಹೊರಬರುವ ತನಕ ಶುದ್ಧಿ ಮಾಡಲಾಗುತ್ತದೆ. ಕೆಲವರು ಮಸೂರ ಅವರೆಯನ್ನು ಹೆಚ್ಚುಕಾಲದವರೆಗೆ ನೆನೆಸಿಡಲು ಇಚ್ಛಿಸುತ್ತಾರೆ, ಹಾಗು ನಂತರ ನೀರನ್ನು ತೆಗೆದುಬಿಡುತ್ತಾರೆ. ಈ ವಿಧಾನದಿಂದ ಅಜೀರ್ಣ ಉಂಟುಮಾಡುವ ವಸ್ತುಗಳು ಹೊರಬರುತ್ತವೆ. ಸಾಮಾನ್ಯವಾಗಿ ಎಲ್ಲರೂ ಇದನ್ನು ನೀರಲ್ಲಿ ನೆನೆಸಿಡುವುದಿಲ್ಲ. ಬೀಜವನ್ನು ನೆನೆಸಿಟ್ಟರೆ ಅದು ಮೆತ್ತಗಾಗಿ ಬೇಯಲು ಕಡಿಮೆ ಸಮಯವನ್ನು ತೆಗೆದುಕೊಳ್ಳುವುದರ ಜೊತೆಗೆ ಇಂಧನದ ಉಳಿತಾಯವಾಗುತ್ತದೆ. ಈ ವಿಧಾನವು ಉತ್ತರ ಭಾಗದ ಚಳಿಗಾಲಕ್ಕೆ ಸೂಕ್ತವಾಗಿದೆ. ಮಸೂರ ಅವರೆಯನ್ನು ನೀರಿನಲ್ಲಿ ಅಥವಾ ತಿಳಿಯಾದ ಬ್ರಾತ್‍ನಲ್ಲಿ ನಂತರ ಬೇಯಿಸಲಾಗುತ್ತದೆ. ಇದನ್ನು ಹಾಗೆ ಒಲೆಯ ಮೇಲಿಟ್ಟು, ಅಥವಾ ಕುಕ್ಕರ್ ನಲ್ಲಿ ಬೇಯಿಸಬಹುದು. ಪ್ರೆಶರ್ ಕುಕ್ಕರ್ ಅನ್ನು ಸರಿಯಾಗಿ ಬಳಸದಿದ್ದರೆ, ಅದು ಪ್ರೆಶರ್ ರಿಲೀಫ್ ವಾಲ್ವ್ ಗೆ ತಡೆಯಾಗುತ್ತದೆ. ಹೀಗಾಗಿ ಪ್ರೆಶರ್ ಕುಕ್ಕರ್ ನಿಂದ ಆಗುವ ಒಂದು ಚಿಕ್ಕ ಅನುಕೂಲವೆಂದರೆ, ಬೇಯಿಸಲು ಅದು ತೆಗೆದುಕೊಳ್ಳುವ ಕಡಿಮೆ ಸಮಯ. ಆದಾಗ್ಯೂ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಲಾದ ಅಡುಗೆಯು ಹಾಗೆ ಒಲೆಯ ಮೇಲಿಟ್ಟು ಬೇಯಿಸುವ ಹಾಗು ಇತರ ವಿಧಾನಗಳಿಗಿಂತ ಸಮರ್ಥವಾಗಿರುವುದರ ಜೊತೆಗೆ ಪೌಷ್ಟಿಕಾಂಶದಿಂದ ಕೂಡಿರುತ್ತದೆ; ಸರಿಯಾದ ವಿಧಾನದಲ್ಲಿ ಬೇಯಿಸಿದರೆ ಅಂದರೆ ಪ್ರೆಶರ್ ಕುಕ್ಕರ್ ನ ಒಳಗೆ ಪಾತ್ರೆಯನ್ನು ಮುಚ್ಚಿಟ್ಟು ಬೇಯಿಸಿದರೆ, ಇದರಿಂದ ಸಾಕಷ್ಟು ಪೌಷ್ಟಿಕಾಂಶವು ದೊರೆಯುತ್ತದೆ. ಈ ವಿಧಾನವನ್ನು ಸಾಮಾನ್ಯವಾಗಿ ಎಲ್ಲ ಮನೆಗಳಲ್ಲೂ ಅನುಸರಿಸುತ್ತಾರೆ. ಬೇಯಿಸಿದ ಮಸೂರ ಅವರೆಯನ್ನು ಮತ್ತಷ್ಟು ತೆಳುವಾಗಿ ಮಾಡುವ ಅವಶ್ಯಕತೆಯಿರುತ್ತದೆ: ಅಂತಿಮವಾಗಿ ಇಚ್ಛಿಸಿದ ಹದವನ್ನು ತಲುಪುವ ತನಕ ಬೇಯಿಸಿದ ಈ ದ್ವಿದಳ ಧಾನ್ಯವನ್ನು ಬಿಸಿ ನೀರು ಅಥವಾ ಬ್ರಾತ್‍ನ್ನು ಸೇರಿಸಿ ಬೇಯಿಸಬೇಕಾಗುತ್ತದೆ. ಸಾಮಾನ್ಯವಾಗಿ ಉಷ್ಣವಲಯದಲ್ಲಿ ವಾಸಿಸುವ ದಕ್ಷಿಣ ಭಾರತದ ಜನರು ಇದನ್ನು ತೆಳ್ಳನೆಯ ರೂಪದಲ್ಲಿ ಸೇವಿಸಿದರೆ ಉತ್ತರ ಭಾರತದವರು, ಬಡತನ ಅಥವಾ ದುಸ್ಥಿತಿಯಲ್ಲಿರುವ ಜನರ ಹೊರತಾಗಿ ಉಳಿದವರು ಸ್ವಲ್ಪ ಗಟ್ಟಿಯಾಗಿ ತಯಾರಿಸುತ್ತಾರೆ. ಆದರೆ ದಕ್ಷಿಣ ಭಾರತದ ಕೆಲವು ಪ್ರದೇಶಗಳಲ್ಲಿ ಗಟ್ಟಿಯಾಗಿ ರುಚಿಕಟ್ಟಾದ ಹಾಗು ನುಣ್ಣನೆಯ ಹದಕ್ಕೆ ತಯಾರಿಸುತ್ತಾರೆ. ಅದಲ್ಲದೇ ಕೆಲವರು ಸಂಪೂರ್ಣವಾಗಿ ಇದನ್ನು ದೇವರಿಗೆ ಒಪ್ಪಿಸಿ ಪಾಕವನ್ನು ನೈವಿದ್ಯೆ ರೂಪದಲ್ಲಿ ದೈವತ್ವಗೊಳಿಸುವ ಪ್ರಯತ್ನ ಮಾಡುತ್ತಾರೆ.

ಕೆಲವು ನಿರ್ದಿಷ್ಟ ಜಾತಿಯ ಮಸೂರ ಅವರೆಯನ್ನು ದಕ್ಷಿಣ ಭಾರತದಲ್ಲಿ ಅಪರೂಪವಾಗಿ ಬಳಕೆ ಮಾಡುತ್ತಾರೆ. ಆದರೆ ಉತ್ತರ ಭಾರತದವರಿಗೆ ಇದು ಅತ್ಯಂತ ಪ್ರಿಯ ಹಾಗು ಸಾಮಾನ್ಯವಾಗಿ ಬಳಕೆಯಲ್ಲಿರುವ ಧಾನ್ಯ. ಜೊತೆಗೆ ಇದನ್ನು ಪೂರ್ವ ಹಾಗು ಪಶ್ಚಿಮ ಭಾರತದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ.

ಉಪಯೋಗಗಳು

[ಬದಲಾಯಿಸಿ]

ಇದು ಜಾನುವಾರುಗಳಿಗೆ ಒಳ್ಳೆಯ ಮೇವು. ಗಿಡದ ಬೇರಿನ ಗಂಟುಗಳಲ್ಲಿ ಬ್ಯಾಕ್ಟೀರಿಯಗಳು ಇದ್ದು ವಾತಾವರಣದ ನೈಟ್ರೊಜನ್ನನ್ನು ಹಿಡಿದು ಸ್ಥಿರೀಕರಿಸುವ ಸಾಮರ್ಥ್ಯ ಒದಗಿಸಿವೆ. ಇದರಿಂದ ಇತರ ಬೆಳೆಗಳನ್ನು ಸಾಗುವಳಿ ಮಾಡುವ ಹೊಲಗಳಲ್ಲಿ ಮಧ್ಯೆ ಮಧ್ಯೆ ಇದನ್ನು ಬೆಳೆಸುವುದಿದೆ.

ಪೌಷ್ಟಿಕಾಂಶದ ಪ್ರಮಾಣ ಹಾಗು ಆರೋಗ್ಯದ ಲಾಭಗಳು

[ಬದಲಾಯಿಸಿ]
Lentils, raw (Dry Weight)
ಪೌಷ್ಟಿಕಾಂಶದ ಮೌಲ್ಯ 100 g (3.5 oz)
ಶಕ್ತಿ1,477 kJ (353 kcal)
60 g
ಸಕ್ಕರೆ2 g
ನಾರು ಪದಾರ್ಥ31 g
1 g
26 g
ವಿಟಮಿನ್‌(ಅನ್ನಾಂಗ)ಗಳುಪ್ರಮಾಣ %DV
ಥಯಾಮಿನ್
76%
0.87 mg
ಖನಿಜಗಳುಪ್ರಮಾಣ %DV
ಕಬ್ಬಿಣ
58%
7.5 mg
  • ಘಟಕ
  • μg = ಮೈಕ್ರೋಗ್ರಾಮ್ • mg = ಮಿಲಿಗ್ರಾಮ್
  • IU = ಅಂತರರಾಷ್ಟ್ರೀಯ ಮಾನದಂಡ
Percentages are roughly approximated using US recommendations for adults.
Source: USDA FoodData Central

ಮಸೂರ ಅವರೆಯು ಹೆಚ್ಚಿನ ಪ್ರೋಟೀನ್ ನನ್ನು ಒಳಗೊಳ್ಳುವುದರ ಜೊತೆಗೆ ಅವಶ್ಯಕ ಅಮೈನೋ ಆಸಿಡ್ ಗಳು ಐಸೋಲ್ಯೂಸಿನ್ ಹಾಗು ಲೈಸಿನ್‍ಗಳನ್ನೂ ಹೊಂದಿದೆ. ಶಾಕಾಹಾರವನ್ನು ಪಾಲಿಸುವವರಿಗೆ ಇದು ಅಗ್ಗದ, ಅವಶ್ಯಕ ಪ್ರೋಟೀನ್ ಪೂರಕವಾಗಿ ಒದಗಿಬರುತ್ತದೆ.[] ಮಸೂರ ಅವರೆಯಲ್ಲಿ ಮೆತಯನೀನ್ ಹಾಗು ಸಿಸ್ಟೈನ್ ಎಂಬ ಎರಡು ಅವಶ್ಯಕ ಅಮೈನೊ ಆಸಿಡ್ ಗಳ ಕೊರತೆಯಿದೆ.[] ಆದಾಗ್ಯೂ, ಮೊಳಕೆ ಬಂದ ಮಸೂರ ಅವರೆಯು ಅಗತ್ಯಕ್ಕೆ ಬೇಕಾದಷ್ಟು ಪ್ರಮಾಣದ ಎಲ್ಲ ಅವಶ್ಯಕ ಅಮಿನೋ ಆಸಿಡ್ ಗಳನ್ನು ಒಳಗೊಂಡಿದೆ. ಇದರಲ್ಲಿ ಮೆತಯನೀನ್ ಹಾಗು ಸಿಸ್ಟೈನ್ ಗಳು ಸಹ ಸೇರಿವೆ.[] ಸಾಕಷ್ಟು ಪ್ರಮಾಣದ ಪ್ರೋಟೀನ್ ಗಳನ್ನು ಹೊಂದಿರುವುದರ ಜೊತೆಗೆ, ಮಸೂರ ಅವರೆಯು ಆಹಾರಕ್ಕೆ ಬೇಕಾದಷ್ಟು ಪ್ರಮಾಣದ ನಾರಿನಂಶ, ಫೋಲೇಟ್, ವಿಟಮಿನ್ B1, ಹಾಗು ಖನಿಜಾಂಶ ಹೊಂದಿದೆ. ಹಸಿರು ಮಸೂರ ಅವರೆಗಿಂತ ಕೆಂಪು (ಅಥವಾ ಗುಲಾಬಿ ಬಣ್ಣದ) ಮಸೂರ ಅವರೆಗಳು ಕಡಿಮೆ ನಾರಿನಂಶದ ಸಾರವನ್ನು ಹೊಂದಿರುತ್ತವೆ. (31% ಗೆ ಬದಲಾಗಿ ಕೇವಲ 11%).[] ಹೆಲ್ತ್ ನಿಯತಕಾಲಿಕವು ಮಸೂರ ಅವರೆಯನ್ನು ಐದು ಆರೋಗ್ಯಕರ ಪೌಷ್ಟಿಕ ಆಹಾರಗಳಲ್ಲಿ ಒಂದೆಂದು ಆಯ್ಕೆ ಮಾಡಿದೆ.[] ಮಸೂರ ಅವರೆಯನ್ನು ಸಾಧಾರಣವಾಗಿ ಇತರ ಧಾನ್ಯಗಳೊಂದಿಗೆ ಮಿಶ್ರಣ ಮಾಡಲಾಗುತ್ತದೆ, ಉದಾಹರಣೆಗೆ ಅಕ್ಕಿಯೊಂದಿಗೆ ಬೆರೆಸಿದಾಗ ಒಂದು ಸಂಪೂರ್ಣ ಪ್ರೋಟೀನ್ ತಿನಿಸಾಗಿ ಒದಗಿ ಬರುತ್ತದೆ. ಮಂಗೋಲಿಯಾ ದೇಶದ ಒಳಭಾಗದಲ್ಲಿರುವ ಹಲವಾರು ಬುಡಕಟ್ಟಿನ ಪ್ರದೇಶಗಳಲ್ಲಿ, ಮಸೂರ ಅವರೆ, ಕೊತ್ತಂಬರಿ ಹಾಗು ಜೀರಿಗೆಯಿಂದ ತಯಾರಿಸಿದ ಒಂದು ಲೇಪನವು ಬಂಜೆತನ ನಿವಾರಿಸುವ ಸಾಂಪ್ರದಾಯಿಕ ಪರಿಹಾರವಾಗಿ ಬಳಕೆಯಾಗುತ್ತದೆ.[]

ಕಬ್ಬಿಣದ ಅಂಶ

[ಬದಲಾಯಿಸಿ]

ಮಸೂರ ಅವರೆಯು ಕಬ್ಬಿಣದ ಅಂಶವನ್ನು ಹೊಂದಿರುವ ಒಂದು ಅತ್ಯುತ್ತಮ ಶಾಕಾಹಾರಿ ಉತ್ಪನ್ನಮೂಲವಾಗಿದೆ. ಇದು ಶಾಕಾಹಾರಿ ತಿನಿಸುಗಳಲ್ಲಿ ಒಂದು ಪ್ರಮುಖ ಭಾಗವಾಗಿರುವುದರ ಜೊತೆಗೆ ಕಬ್ಬಿಣಾಂಶದ ಕೊರತೆಯನ್ನು ತಡೆಗಟ್ಟುವಲ್ಲಿ ಬಹಳ ಸಹಕಾರಿಯಾಗಿದೆ. ಕಬ್ಬಿಣಾಂಶವು ವಿಶೇಷವಾಗಿ ಹದಿಹರೆಯದವರಿಗೆ ಹಾಗು ಗರ್ಭಿಣಿ ಹೆಂಗಸರಿಗೆ ಮುಖ್ಯವಾಗಿದೆ. ಕಬ್ಬಿಣಾಂಶದ ಅವಶ್ಯಕತೆಯು ಇವರುಗಳಿಗೆ ಹೆಚ್ಚಾಗಿರುತ್ತದೆ.[]

ಉತ್ಪಾದನೆ

[ಬದಲಾಯಿಸಿ]
2005ರಲ್ಲಿ ಉತ್ಪಾದನೆಯಾದ ಮಸೂರ ಅವರೆ

ಮಸೂರ ಅವರೆಯ ಬೆಳೆಯು ಹೆಚ್ಚುಕಡಿಮೆ ಬರಡು ಭೂಮಿಗೆ ಹೊಂದಿಕೊಳ್ಳುತ್ತದೆ. ಜೊತೆಗೆ ವಿಶ್ವದಾದ್ಯಂತ ಇದನ್ನು ಬೆಳೆಯಲಾಗುತ್ತದೆ. ವಿಶ್ವದಾದ್ಯಂತ ಉತ್ಪಾದನೆಯಾಗುವ ಮಸೂರ ಅವರೆಯ ಮೂರನೇ ಒಂದು ಭಾಗ ಭಾರತ ದಲ್ಲಿ ಬೆಳೆಯಲಾಗುತ್ತದೆ. ಇದನ್ನು ಹೆಚ್ಚಾಗಿ ದೇಶದೊಳಗೆ ಬಳಸಲಾಗುತ್ತದೆ. ಮಸೂರ ಅವರೆಯನ್ನು ಕೆನಡಾ ಜಗತ್ತಿನಲ್ಲೇ ಅತ್ಯಂತ ಹೆಚ್ಚಿಗೆ ರಫ್ತು ಮಾಡುವ ದೇಶ ಹಾಗು ಕೆನಡಾ ದೇಶದ ಸಸ್ಕಾಟ್ಚೆವನ್ ಪ್ರದೇಶದಲ್ಲಿ ಹೆಚ್ಚಿಗೆ ಈ ಬೆಳೆಯನ್ನು ಬೆಳೆಯಲಾಗುತ್ತದೆ. ಪೂರ್ವ ವಾಶಿಂಗ್ಟನ್ ನ ಪಲೌಸೆ ಪ್ರದೇಶ ಹಾಗು ಇದಾಹೋ ಪಾನ್ಹ್ಯಾಂಡಲ್ ನ ಪುಲ್ ಮ್ಯಾನ್‍ನಲ್ಲಿರುವ ವಾಣಿಜ್ಯ ಕೇಂದ್ರ ವು ಯುನೈಟೆಡ್ ಸ್ಟೇಟ್ಸ್ ನಲ್ಲಿ ಬೆಳೆಯನ್ನು ಉತ್ಪಾದಿಸುವ ಅತ್ಯಂತ ಪ್ರಮುಖ ಪ್ರದೇಶವಾಗಿದೆ.[] FAO ವರದಿಯ ಪ್ರಕಾರ, ಕಳೆದ 2007ರಲ್ಲಿ 3.874 ಮಿಲ್ಯನ್ ಮೆಟ್ರಿಕ್ ಟನ್ಸ್ ನಷ್ಟು ಮಸೂರ ಅವರೆಯನ್ನು ವಿಶ್ವದಾದ್ಯಂತ ಉತ್ಪಾದಿಸಲಾಗಿತ್ತು. ಇದರಲ್ಲಿ ಪ್ರಮುಖವಾಗಿ ಭಾರತ (36%), ಕೆನಡಾ (17%) ಹಾಗು ಟರ್ಕಿ(15%)ದೇಶಗಳು ಸೇರಿವೆ. ನ್ಯಾಷನಲ್ ಅಗ್ರಿಕಲ್ಚರಲ್ ಸ್ಟ್ಯಾಟಿಸ್ಟಿಕ್ಸ್ ಸರ್ವೀಸ್ (NASS)ನ ವರದಿಯ ಪ್ರಕಾರ ಕಳೆದ 2007ರಲ್ಲಿ ಯುನೈಟೆಡ್ ಸ್ಟೇಟ್ಸ್ 154.5 ಸಾವಿರ ಮೆಟ್ರಿಕ್ ಟನ್ಸ್ ನಷ್ಟು ಉತ್ಪಾದನೆ ಮಾಡಿತ್ತು. ಇದರಲ್ಲಿ ಪ್ರಮುಖವಾಗಿ ಉತ್ತರ ಡಕೋಟ, ಮೊಂಟಾನ, ವಾಶಿಂಗ್ಟನ್, ಹಾಗು ಇದಾಹೋ ರಾಜ್ಯಗಳಿಂದ ಬಂದಿತ್ತು. ಸ್ಟ್ಯಾಟಿಸ್ಟಿಕ್ಸ್ ಕೆನಡಾ ದ ಅಂದಾಜಿನ ಪ್ರಕಾರ 2009/10 ರಲ್ಲಿ ದಾಖಲೆಯ 1.5 ಮಿಲ್ಯನ್ ಮೆಟ್ರಿಕ್ ಟನ್ಸ್ ನಷ್ಟು ಕೆನೆಡಿಯನ್ ಮಸೂರ ಅವರೆಯು ಉತ್ಪಾದನೆಯಾಗಿದೆ.[]

ಅಗ್ರ ಹತ್ತು ಮಸೂರ ಅವರೆ ಉತ್ಪಾದಕರು - 2007
ದೇಶ ಉತ್ಪಾದನೆ (ಟನ್ನು ಗಳು) ಅಡಿಟಿಪ್ಪಣಿ
 ಭಾರತ 1,400,000 *
 ಕೆನಡಾ 669,700
 ಟರ್ಕಿ 580,260
 ಚೀನಾ 180,000 F
 ಸಿರಿಯಾ 165,000 F
ನೇಪಾಳ ನೇಪಾಲ 164,694
 United States 154,584
 Australia 131,000
 ಬಾಂಗ್ಲಾದೇಶ 119,000 F
 ಇರಾನ್ 115,000 F
 ವಿಶ್ವ 3,873,801 A
ಚಿಹ್ನೆ ಇಲ್ಲದಿರುವುದು = ಅಧಿಕೃತ ಚಿತ್ರಣ, P = ಅಧಿಕೃತ ಚಿತ್ರಣ, F = FAO ಅಂದಾಜು, * = ಅನಧಿಕೃತ/ಭಾಗಶಃ-ಅಧಿಕೃತ/ಪ್ರತಿಬಿಂಬಿತ ದತ್ತಾಂಶ, C = ಎಣಿಕೆಯ ಚಿತ್ರಣ A = ಒಟ್ಟು (ಇದರಲ್ಲಿ ಅಧಿಕೃತ, ಭಾಗಶಃ-ಅಧಿಕೃತ ಅಥವಾ ಅಂದಾಜಿನ ಚಿತ್ರಣಗಳು ಸೇರಿರಬಹುದು);
ಮೂಲಾಧಾರ: ಫುಡ್ ಅಂಡ್ ಅಗ್ರಿಕಲ್ಚರಲ್ ಆರ್ಗನೈಜೆಶನ್ ಆಫ್ ಯುನೈಟೆಡ್ ನೇಶನ್ಸ್: ಎಕನಾಮಿಕ್ ಅಂಡ್ ಸೋಶಿಯಲ್ ಡಿಪಾರ್ಟ್ಮೆಂಟ್: ದಿ ಸ್ಟ್ಯಾಟಿಸ್ಟಿಕಲ್ ಡಿವಿಷನ್ Archived 2012-06-19 ವೇಬ್ಯಾಕ್ ಮೆಷಿನ್ ನಲ್ಲಿ.

ಹಾಲಿ ಯುನೈಟೆಡ್ ಸ್ಟೇಟ್ಸ್ ನ ಉತ್ಪಾದನಾ ಸಂಖ್ಯೆಯನ್ನು ನಸ್ಸ್ ನ ದತ್ತಾಂಶ ಸಂಗ್ರಹ ಇಲ್ಲಿ Archived 2010-04-13 ವೇಬ್ಯಾಕ್ ಮೆಷಿನ್ ನಲ್ಲಿ. ಇಚ್ಚಿಸಿದ ಅಂಶಗಳನ್ನು ಆಯ್ಕೆ ಮಾಡಿ ಗುರುತಿಸಬಹುದು.

ಸಂಸ್ಕೃತಿಯಲ್ಲಿ

[ಬದಲಾಯಿಸಿ]

ಮಸೂರ ಅವರೆಯನ್ನು ಹಲವು ಬಾರಿ ಹಳೆಯ ಒಡಂಬಡಿಕೆಯಲ್ಲಿ ಉಲ್ಲೇಖಿಸಲಾಗಿದೆ, ಮೊದಲು ಉಲ್ಲೇಖಿಸಲಾದ ಘಟನೆಯೆಂದರೆ ಜಾಕೋಬ್ ಏಸು ವಿನಿಂದ ಹುಟ್ಟಿನ ಹಕ್ಕನ್ನು, ಬೇಯಿಸಿದ ಮಸೂರ ಅವರೆಯ ಜೊತೆ ಖರೀದಿಸುತ್ತಾನೆ (ಒಂದು "ಮೆಸ್ಸ್ ಆಫ್ ಪಾಟೇಜ್"(ಶ್ರೇಷ್ಠವಾದುದನ್ನು ಬಲಿ ಕೊಟ್ಟು ಪಡೆದ ಪ್ರಾಪಂಚಿಕ ಸುಖ){{0}ಜೆನೆಸಿಸ್ 25:34}.[] ಜೂಇಶ್ ಶೋಕ ಆಚರಣೆಯಲ್ಲಿ, ಶೋಕವನ್ನು ಆಚರಿಸುವವನಿಗೆ ಬೇಯಿಸಿದ ಮೊಟ್ಟೆಯೊಂದಿಗೆ ಇದನ್ನು ಆಹಾರವಾಗಿ ನೀಡಲಾಗುತ್ತದೆ. ಇದಕ್ಕೆ ಕಾರಣವೇನೆಂದರೆ ಇದರ ಗುಂಡಗಿನ ಆಕೃತಿಯು ಹುಟ್ಟಿನಿಂದ ಸಾಯುವ ತನಕವಿರುವ ಜೀವನ ಚಕ್ರವನ್ನು ಸಂಕೇತಿಸುತ್ತದೆ. ಪ್ರಾಚೀನ ಗ್ರೀಕ್ ನಾಟಕಕಾರ ಅರಿಸ್ಟೋಫನೆಸ್ ತನ್ನ ನಾಟಕಗಳಲ್ಲಿ ಮಸೂರ ಅವರೆ ಸೂಪ್ ನ ಬಗ್ಗೆ ಉಲ್ಲೇಖಿಸುವುದರ ಜೊತೆಗೆ "ಮಧುರಭಕ್ಷ್ಯಗಳಲ್ಲೇ ಅತ್ಯಂತ ಸಿಹಿಯಾದುದ್ದೆಂದು" ವಿವರಿಸುತ್ತಾನೆ.[೧೦]

ಮಸೂರದ ವ್ಯುತ್ಪತ್ತಿ

[ಬದಲಾಯಿಸಿ]
ಕಂದು ಬಣ್ಣದ ಮಸೂರ ಅವರೆಯನ್ನು ಹಸಿ ತರಕಾರಿಗೆ ಮಿಶ್ರಣ ಮಾಡಲಾಗುತ್ತದೆ
ಹಸಿಯಾದ ಕಂದು ಬಣ್ಣದ ಮಸೂರ ಅವರೆ ಬೀಜಗಳು

ಕಣ್ಣಿನ ಮಸೂರ ವನ್ನು ಮಸೂರ ಅವರೆಯ ಮೇಲೆ ಹೆಸರಿಸಲಾಗಿದೆ (ಲ್ಯಾಟಿನ್: ಮಸೂರ) ಅದರ ರೂಪವನ್ನು ಇದು ಹೋಲುತ್ತದೆ.[೧೧]

ಇದೇ ರೀತಿಯಾದ ಹೋಲಿಕೆಗಳು ಇತರ ಭಾಷೆಗಳಲ್ಲೂ ಕಂಡು ಬರುತ್ತದೆ:

ಮಸೂರ ಮಸೂರ ಅವರೆ
ಅರೇಬಿಕ್ عدسة ('ಅದಸ ) عدس ('ಅದಸ್ )
ಆಫ್ರಿಕಾನ್ಸ್‌ ಮಸೂರ ಲೆನ್ಸಿ
ಆಲ್ಬೇನಿಯನ್‌ ಥಜೆರ್ರೆಜ್ (ಬೊಟ್.) ಥಜೆರ್ರೆಜ
ಆಂಹ್ಯಾರಿಕ್‌ ಡಿಫಿನ್ ಮಿಸಿರ್ ಮಿಸಿರ್ ಕಿಕ್
ಬೆಂಗಾಲಿ ದಾಲ್ ದಾಲ್
ಬೋಟ್ಸ್ವಾನ ಚಾದಿ ಅದಿತಿ ಚದ್ದಿ
ಬಲ್ಗೇರಿಯನ್ леща леща
ಕ್ಯಾಟಲಾನ್ ಲೆಂಟ್ ಲೇನ್ಟಿಯಾ
ಕ್ರೋವಿಶಿಯನ್ ಲೇಕಾ ಲೇಕಾ
ಜೆಕ್ ಕೊಕ್ಕ ಕೊಕ್ಕ
ಡ್ಯಾನಿಶ್ ಲಿನ್ಸೆ ಲಿನ್ಸೆ
ದರಿ ದಾಲ್ ದಾಲ್
ಡಚ್ ಲೆನ್ಸ್ ಲಿನ್ಜೆನ್
ಎಸ್ಪರಾಂಟೋ ಲೆನ್ಜೊ ಲೆನ್ಟೋ
ಎಸ್ಟೋನಿಯನ್ ಲಾಟ್ಸೆಡ್ ಲಾಟ್ಸೆಡ್
ಫಿನ್ನಿಶ್ ಲಿಂಸ್ಸಿ ಲಿಂಸ್ಸಿ
ಫ್ರೆಂಚ್ ಲೆನ್ಟಿಲ್ಲೆ ಲೆನ್ಟಿಲ್ಲೆ
ಜರ್ಮನ್ ಲಿನ್ಸೆ ಲಿನ್ಸೆ
ಗ್ರೀಕ್ φακός φακή
ಹೀಬ್ರೂ ಅದಷಾ (pl. ಅದಶೋತ್ ) ಅದಷ (pl. ಅದಶಿಂ )
ಹಿಂದಿ ದಾಲ್ ದಾಲ್
ಹಂಗೇರಿಯನ್ ಲೆನ್ಸೆ ಲೆನ್ಸೆ
ಐಸ್ಲ್ಯಾಂಡಿಕ್ ಲಿನ್ಸ ಲಿನ್ಸುಬೂನ್
ಇಟಾಲಿಯನ್ ಲೆನ್ಟೆ ಲೆನ್ಟಿಚ್ಚಿಯ
ಕುರ್ದಿಶ್ ನಿಸಿಕ್ ನಿಸ್ಕ್
ಕನ್ನಡ ಬೇಳೆ ತೊಗರಿ ಬೇಳೆ
ಕಪಂಪಂಗನ್ ಮಾಲೋಬಿಯಸ್ ಮಾಲೋಬಿಯಸ್
ಕೊರಿಯನ್ 렌즈 렌즈콩
ಲ್ಯಾಟಿನ್ ಲೆನ್ಸ್ ಲೆನ್ಸ್
ಲ್ಯಾಟಾವಿಯನ್ ಲೇಕಾ ಲೇಕಾ
ಲಿತೂನಿಯನ್ ಲೆಸಿಸ್ ಲೆಸಿಸ್
ಮ್ಯಾಸಿಡೋನಿಯನ್ леќа леќа
ಮಲಯಾಳಂ ಪರಿಪ್ಪು ತ್ವಾರ ಪರಿಪ್ಪು
ಮರಾಟಿ ಮಸೂರ್ ಮಸೂರ್
ನೇಪಾಳಿ ದಾಲ್ ದಾಲ್
ನಾರ್ವೇಜಿಯನ್ ಲಿನ್ಸೆ ಲಿನ್ಸೆ
ಪರ್ಷಿಯನ್ ಅದಸಿ ಅದಸ್
ಪೋಲಿಷ್ ಸೊಕ್ಜೆವ್ಕ ಸೊಕ್ಜೆವ್ಕ
ಪಶ್ತೋ ದ್ಹಲ್ ದ್ಹಲ್
ಪೋರ್ಚುಗೀಸ್ ಲೆನ್ಟೆ ಲೆನ್ಟಿಲ್ಹ
ಪಂಜಾಬಿ ದಾಲ್ ದಾಲ್
ರೊಮೇನಿಯನ್ ಲೆನ್ಟಿಲ ಲಿಂಟೆ
ಸೆರ್ಬಿಯನ್ ಸೋಸಿವೋ ಸೋಸಿವೋ
ಸಿಂಹಿಳಿ ಪರಿಪ್ಪು (පරිප්පු) ಪರಿಪ್ಪು (පරිප්පු)
ಸ್ಲೋವೇನೆ ಲೇಕಾ ಲೇಕಾ
ಸ್ಲೋವಾಕ್ ಸೋಸೋವ್ಕ ಸೋಸೋವ್ಕ
ಸ್ಪಾನಿಶ್ ಲೆನ್ಟೆ ಅಥವಾ ಲೆನ್ಟಿಲ್ಲ ಲೆನ್ಟೆಜ
ಸ್ವಾಹಿಲಿ ಜಿಚೋ ಇಚೋ
ಸ್ವೀಡಿಶ್ ಲಿನ್ಸ್ ಲಿನ್ಸ್
ತೆಲುಗು ಪಪ್ಪು ಪಪ್ಪು
ತಮಿಳು ಪರುಪ್ಪು ತುವರಂ ಪರುಪ್ಪು
ಟರ್ಕಿಷ್ ಮೆರ್ಸೆಕ್ ಮೆರಿಸೆಮೆಕ್
ಉರ್ದು ದಾಲ್ ದಾಲ್

ಆಕರಗಳು

[ಬದಲಾಯಿಸಿ]
ಅಡಿಟಿಪ್ಪಣಿಗಳು
  1. "ಆರ್ಕೈವ್ ನಕಲು". Archived from the original on 2010-01-25. Retrieved 2010-04-22.
  2. "ಆರ್ಕೈವ್ ನಕಲು". Archived from the original on 2009-06-21. Retrieved 2010-04-22.
  3. "ಆರ್ಕೈವ್ ನಕಲು". Archived from the original on 2013-03-24. Retrieved 2010-04-22.
  4. "USDA ನ್ಯೂಟ್ರಿಯೆಂಟ್ ಡಾಟಾ ಬೇಸ್". Archived from the original on 2015-03-03. Retrieved 2010-04-22.
  5. ೫.೦ ೫.೧ Raymond, Joan (2006). "World's Healthiest Foods: Lentils (India)". Health Magazine. Archived from the original on 2008-03-20. Retrieved 2010-04-22. {{cite web}}: Unknown parameter |month= ignored (help)
  6. Dietary Reference Intakes (DRI), Food and Nutrition Board, Institute of Medicine, National Academies, 2004
  7. Crop Profile for Lentils in Idaho, Department of Plant, Soil and Entomological Science, University of Idaho (web site), 2000
  8. "ಆರ್ಕೈವ್ ನಕಲು". Archived from the original on 2010-07-25. Retrieved 2021-08-10.
  9. "ಆರ್ಕೈವ್ ನಕಲು". Archived from the original on 2019-01-29. Retrieved 2010-04-22.
  10. ಕ್ಲಿಫೋರ್ಡ್ A. ರೈಟ್: ಶುರ್ಬ ಅಲ್-'ಅದಾಸ್ (ಅರಬ್ ಲೆವಂಟ್) ಲೆಂಟಿಲ್ ಸೂಪ್
  11. ಚೇಂಬರ್ಸ್ ಡಿಕ್ಷನರಿ(10th ed) 2006

ಹೆಚ್ಚಿನ ಮಾಹಿತಿಗಾಗಿ

[ಬದಲಾಯಿಸಿ]
  • S S ಯಾದವ್ et al. ಲೆಂಟಿಲ್: ಆನ್ ಎನ್ಶಿಯಂಟ್ ಕ್ರಾಪ್ ಫಾರ್ ಮಾಡ್ರನ್ ಟೈಮ್ಸ್ . (2007) ಸ್ಪ್ರಿಂಗರ್ ವೆರ್ಲಾಗ್. ISBN 9781402063121.

ಬಾಹ್ಯ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: