ಮಡಿಕೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮಡಿಕೆ ಎಂಬುವುದು ಮಣ್ಣಿನಿಂದ ಮಾಡಲ್ಪಟ್ಟ ಒಂದು ವಸ್ತು. ಇದನ್ನು ತಯಾರಿಸುವವರಿಗೆ ಕುಂಬಾರರು ಎನ್ನುತ್ತಾರೆ. ಮಡಿಕೆಯನ್ನು ತಯರಿಸುವುದು ಒಂದು ಕಲೆ, ಆ ಕಲೆಯು ಕುಂಬಾರ ಜನಾಂಗದವರಿಗೆ ರಕ್ತಗತವಾಗಿ ಬಂದಿರುತ್ತದೆ. ತಲೆಮಾರಿನಿಂದ ತಲೆಮಾರಿಗೆ ಮುಂದುವರಿದುಕೊಂಡು ಬಂದಿದೆ.

ಮಡಿಕೆಯ ಉಪಯೋಗಗಳು[ಬದಲಾಯಿಸಿ]

ಮಡಿಕೆಯು ಮಾನವನ ಸಂಸ್ಕೃತಿಯ ಹುಟ್ಟಿನೊಡನೆ ಬೆಳೆದು ಬಂದಿದೆ, ಇದುವರೆಗೆ ದೊರೆತಿರುವ ಎಲ್ಲಾ ನಾಗರಿಕತೆಗಳ ಸಾಕ್ಷಿಗಳಲ್ಲಿಯೂ ಮಡಿಕೆಯ ಪಾತ್ರ ಅಗಾಧವಾದುದು. ಇದನ್ನು ಮಾನವ ಒಂದು ಶೆಕರಣೆಯ ವಸ್ತುವನ್ನಾಗಿ ಬಳಸುತ್ತಾ ಬಂದಿದ್ದಾನೆ, ಅದು ನೀರಾಗಬಹುದು, ದವಸ ಧಾನ್ಯವಾಗಬಹುದು ಎಲ್ಲವುದಕ್ಕು ಮಡಿಕೆಯೆ ಬೇಕಾದ ಕಾಲವೊಂದಿತ್ತು, ಒಂದು ಮಡಿಕೆ ತಯಾರಿಕೆ ಕಾರ್ಯ ಮುಗಿಯಲು 7-10 ಹಂತಗಳು ಆವಶ್ಯಕವಿದೆ. ಒಬ್ಬರು ದಿನವೊಂದಕ್ಕೆ 10-12 ಮಡಿಕೆಗಳನ್ನು ತಯಾರಿಸುತ್ತಾರೆ. ನಂತರ ಇವುಗಳನ್ನು ಒಣಗಿಸಿ, ಸುಟ್ಟು ಮಾರಾಟಕ್ಕೆ ಕಳಿಸಲು ಕನಿಷ್ಠ ಎಂದರೂ 10 ದಿನ ಕಾಲಾವಕಾಶ ಅಗತ್ಯವಿದೆ.

"http://kn.wikipedia.org/w/index.php?title=ಮಡಿಕೆ&oldid=267959" ಇಂದ ಪಡೆಯಲ್ಪಟ್ಟಿದೆ