ಡಾ. ಸಿ. ಎನ್. ಆರ್. ರಾವ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸಿ. ಎನ್. ಆರ್. ರಾವ್
Chintamani Nagesa Ramachandra Rao 03650.JPG
ಚಿಂತಾಮಣಿ ನಾಗೇಶ ರಾಮಚಂದ್ರ ರಾವ್
ಜನನ ಜೂನ್ ೩೦, ೧೯೩೪
ಬೆಂಗಳೂರು, ಮೈಸೂರು ಸಂಸ್ಥಾನ, British India
ವಾಸ ಭಾರತ
ರಾಷ್ಟ್ರೀಯತೆ ಭಾರತೀಯ
ಕಾರ್ಯಕ್ಷೇತ್ರಗಳು ರಸಾಯನಶಾಸ್ತ್ರ
ಸಂಸ್ಥೆಗಳು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ]]
ಐಐಟಿ ಕಾನ್ಪುರ್
ಭಾರತೀಯ ವಿಜ್ಞಾನ ಸಂಸ್ಥೆ
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ
ಕೇಂಬ್ರಿಡ್ಜ್‌‌‌‌‌‌‌‌‌‌‌ ವಿಶ್ವವಿದ್ಯಾನಿಲಯ
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ
ಜವಹರಲಾಲ್ ನೆಹರೂ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರ
Alma mater ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ
ಪುರ್ಡ್ಯೂ ವಿಶ್ವವಿದ್ಯಾನಿಲಯ
ಪ್ರಸಿದ್ಧಿಗೆ ಕಾರಣ ಸಾಲಿಡ್ - ಸ್ಟೇಟ್ ಕೆಮಿಸ್ಟ್ರಿ
ಮೆಟೀರಿಯಲ್ ಸೈನ್ಸ್
ಗಮನಾರ್ಹ ಪ್ರಶಸ್ತಿಗಳು ಹ್ಯೂಗ್ಸ್ ಮೆಡಲ್ (೨000)
ಇಂಡಿಯಾ ಸೈನ್ಸ್ ಅವಾರ್ಡ್ (೨೦೦೪)
ರಾಯಲ್ ಸೊಸೈಟಿ ಎಫ್ ಆರ್ ಎಸ್ (೧೯೮೪)
ಅಬ್ದುಸ್ ಸಲಾಮ್ ಮೆಡಲ್ (೨00೮)
ದಾನ ಡೇವಿಡ್ ಪ್ರೈಜ್ (೨೦೦೫)
ಲೀಜಿಯನ್ ಹಾನರ್ (೨೦೦೫)
ಪದ್ಮಶ್ರೀ(೧೯೭೪)
ಪದ್ಮ ವಿಭೂಷಣ(೧೯೮೫)
ಭಾರತ ರತ್ನ (೨೦೧೩)

ಸಿ. ಎನ್. ಆರ್. ರಾವ್ ಎಂದೇ ಪ್ರಸಿದ್ದರಾಗಿರುವ, 'ಚಿಂತಾಮಣಿ ನಾಗೇಶ್ ರಾಮಚಂದ್ರರಾವ್ (ಜೂನ್ ೩೦, ೧೯೩೪) ವಿಶ್ವವಿಖ‍‍್ಯಾತ ಭಾರತೀಯ ವಿಜ್ಞಾನಿಗಳಲ್ಲೊಬ್ಬರಾಗಿದ್ದಾರೆ. ಪ್ರಸಕ್ತದಲ್ಲಿ ಬೆಂಗಳೂರಿನಲ್ಲಿರುವ ಜವಹರಲಾಲ್ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿರುವ ರಾವ್ ಅವರಿಗೆ ೨೦೧೩ರ ವರ್ಷದಲ್ಲಿ ಭಾರತದ ಅತ್ಯುನ್ನತ ಗೌರವವಾದ 'ಭಾರತ ರತ್ನ' ಪ್ರಶಸ್ತಿ ಸಂದಿದೆ.

ಜೀವನ[ಬದಲಾಯಿಸಿ]

ಹನುಮಂತ ನಾಗೇಶ್‌ ರಾವ್‌ ಮತ್ತು ನಾಗಮ್ಮ ದಂಪತಿಯ ಮಗನಾದ ಪ್ರೊ. ಚಿಂತಾಮಣಿ ನಾಗೇಶ ರಾಮಚಂದ್ರರಾವ್‌ ಅವರು, ೧೯೩೪ರ ಜೂನ್‌ ೩೦ರಂದು ಬೆಂಗಳೂರಿನಲ್ಲಿ ಜನಿಸಿದರು. ೧೯೫೧ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿಎಸ್‌ಸಿ ಪದವಿ ಪಡೆದರು.

"ನನ್ನ ಮೇಲೆ ಬಹುವಾಗಿ ಪ್ರಭಾವ ಬೀರಿದವರು ಮಹಾನ್‌ ವಿಜ್ಞಾನಿ ಸರ್‌ ಸಿ ವಿ ರಾಮನ್‌ ಅವರು. ನನಗಾಗ ೧೧ ವರ್ಷ. ಬೆಂಗಳೂರಿನಲ್ಲಿ ಕಲಿಯುತ್ತಿದ್ದೆ. ಆಗ ಅವರ ಪ್ರಭಾವಕ್ಕೆ ಒಳಗಾದೆ. ವಿಜ್ಞಾನ ಕಲಿಯಬೇಕು ಎಂಬ ಕನಸು ಮೂಡಿದ್ದು ಅದೇ ಹೊತ್ತಿನಲ್ಲಿ." ಎನ್ನುತ್ತಾರೆ ಪ್ರೊ. ರಾವ್.

ಸ್ನಾತಕೋತ್ತರ ಪದವಿಯನ್ನು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ೧೯೫೩ರಲ್ಲಿ ಪಡೆದರು.೧೯೫೮ರಲ್ಲಿ 'ಪರ್ಡ್ಯೂ ವಿಶ್ವವಿದ್ಯಾಲಯ'ದಲ್ಲಿ ಪಿ.ಎಚ್‌.ಡಿ. ಪಡೆದ ಅವರು ೧೯೫೯ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿ ನಂತರ ೧೯೬೩ರಲ್ಲಿ ಕಾನ್ಪುರದ ಐಐಟಿಗೆ ಸೇರಿದರು.

ರಾವ್ ಪ್ರಸ್ತುತ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್‌ಡ್ ರಿಸರ್ಚ್‌ನಲ್ಲಿ ಪ್ರೊಫೆಸರ್ ಹಾಗೂ ಗೌರವಾಧ್ಯಕ್ಷರಾಗಿದ್ದಾರೆ. ಇವರು 'ರಸಾಯನ ಶಾಸ್ತ್ರದ ಸಾಲಿಡ್ ಸ್ಟೇಟ್ ಮತ್ತು ಮೇಟಿರಿಯಲ್ ವಿಭಾಗ'ದ ಸಂಶೋಧನೆಗೆ ವಿಶ್ವದಾದ್ಯಂತ ಹೆಸರುಗಳಿಸಿದ್ದಾರೆ. ಪ್ರಧಾನಮಂತ್ರಿಯವರ ವೈಜ್ಞಾನಿಕ ಸಲಾಹ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಜ್ಞಾನ ಸಂಶೋಧನೆಗಳು[ಬದಲಾಯಿಸಿ]

ಹಲವಾರು ದ್ವಿಮಿತೀಯ ಕೃತಕ ರಾಸಾಯನಿಕ ವಸ್ತುಗಳನ್ನು ಸಂಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ರಾವ್ ಅತಿವಾಹಕತೆ (ಸೂಪರ್ ಕಂಡಕ್ಟಿವಿಟಿ) ಹಾಗು ನ್ಯಾನೋವಿಜ್ನಾನ ಕ್ಷೇತ್ರದಲ್ಲಿ ಅಪಾರ ಸಂಶೋಧನೆ ನಡೆಸಿದ್ದಾರೆ. ೪೨ಕ್ಕೂ ಹೆಚ್ಚು ವೈಜ್ನಾನಿಕ ಪುಸ್ತಕಗಳು ಹಾಗು ೧೫೦೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ರಾವ್ ಬರೆದಿದ್ದಾರೆ. ಇವರ ಜೊತೆ ಕೆಲಸ ಮಾಡಿದ ೧೪೦ಕ್ಕೂ ಹೆಚ್ಚು ಜನ ಪಿ.ಹೆಚ್.ಡಿ. ಪದವಿ ಗಳಿಸಿದ್ದಾರೆ. ಇವರ ಲೇಖನಗಳನ್ನು ಇದುವರೆಗೂ ೪೦ ಸಾವಿರಕ್ಕೂ ಹೆಚ್ಚುಬಾರಿ ಪ್ರಸ್ತಾಪಿಸಲಾಗಿದೆ. ಇವರ ಸಂಶೋಧನಾ ಫಲಿತಾಂಶವನ್ನು ಆಧರಿಸಿ, ಅನೇಕ ರಾಷ್ಟ್ರಗಳು ಹಲವು ಕೈಗಾರಿಕಾ ಉತ್ಪನ್ನಗಳನ್ನು ಪಡೆಯುತ್ತಿವೆ. ರಾವ್ ಅವರು ತಮ್ಮ ಸಂಶೋಧನೆಗೆ ಸ್ವಾಮ್ಯ ಹಕ್ಕುಗಳನ್ನು (ಪೇಟೆಂಟ್)(Open source)ಪಡೆಯದೆ ಮುಕ್ತವಾಗಿಟ್ಟಿದ್ದಾರೆ.

ಕುಟುಂಬ[ಬದಲಾಯಿಸಿ]

ಪ್ರೊ.ಸಿ.ಎನ್‌.ಆರ್‌ ರಾವ್‌ ಅವರದು ‘ವಿಜ್ಞಾನ ಕುಟುಂಬ’. ಅವರ ಪತ್ನಿ ಇಂದುಮತಿ ರಾವ್‌ ಈ ಹಿಂದೆ ನಗರದ ಎಂ.ಇ.ಎಸ್‌ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದರು. ಪ್ರಸ್ತುತ ಅವರು ಜವಾಹರ್‌ಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಮಕ್ಕಳಿಗೆ ವಿಜ್ಞಾನ ಆಸಕ್ತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ರ, ಸಂಜಯ್‌ ರಾವ್‌ ಕೂಡ ಜವಾಹರ್‌ಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪುತ್ರಿ, ಸುಚಿತ್ರಾ ರಾವ್‌ ಅವರ ಪತಿ, ಕೆ.ಎನ್‌. ಗಣೇಶ್‌ ಪುಣೆಯ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕರು.

ಪ್ರಶಸ್ತಿಗಳು ಹಾಗೂ ಗೌರವಗಳು[ಬದಲಾಯಿಸಿ]

ಇವರು ಹಲವು ಪ್ರಶಸ್ತಿ ಹಾಗೂ ಗೌರವಕ್ಕೆ ಪಾತ್ರರಾಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. http://vijaykarnataka.indiatimes.com/articleshow/29853121.cms
  2. ಜವಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸಡ್ ರಿಸರ್ಚ್ ನಲ್ಲಿ ಸಿ ಎನ್ ಆರ್ ರಾವ್ ಗೌರವಗಳ ಪಟ್ಟಿ[೧]
  3. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಾರ್ತಾಪುಟ[೨]

ಹೊರಗಿನ ಕೊಂಡಿಗಳು[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]