ಚಂದ್ರಶೇಖರ ವೆಂಕಟರಾಮನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಡಾ. ಸಿ. ವಿ. ರಾಮನ್

'ಡಾ. ಸರ್. ಸಿ. ವಿ. ರಾಮನ್,' ರವರು, 'ನೋಬೆಲ್ ಪ್ರಶಸ್ತಿ' ಗಳಿಸಿದ, ಪ್ರಪ್ರಥಮ ಭಾರತೀಯ ವಿಜ್ಞಾನಿ. ಈ ಪ್ರಶಸ್ತಿಯನ್ನು ೧೯೩೦ ರಲ್ಲಿ ಅವರದೆ ಹೆಸರಿಂದ ಅಲಂಕೃತವಾದ "ರಾಮನ್ ಎಫೆಕ್ಟ್" ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಪಡೆದರು.

ಪರಿವಿಡಿ

[ಬದಲಾಯಿಸಿ] ಜೀವನ

'ಚಂದ್ರಶೇಖರ ವೆಂಕಟಾರಾಮನ್', ನವೆಂಬರ್ ೭, ೧೮೮೮ರಲ್ಲಿ ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಜನಿಸಿದರು. ಅವರ ತಂದೆ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಮ್ಮ ೧೨ ನೆ ವಯಸ್ಸಿನಲ್ಲಿ 'ಮೆಟ್ರಿಕ್ಯುಲೆಶನ್' ಮುಗಿಸಿದ ರಾಮನ್ ನಂತರ 'ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿ'ನಲ್ಲಿ ಬಿ.ಎಸ್ಸಿ (೧೯೦೪) ಹಾಗು ಎಂ.ಎಸ್ಸಿ (೧೯೦೭) ಪದವಿಗಳನ್ನು ಪಡೆದರು. ೧೯೦೭ರಲ್ಲಿ 'ಭಾರತೀಯ ಸಿವಿಲ್ ಸರ್ವಿಸ್ ಪರೀಕ್ಷೆ'ಯಲ್ಲಿ ಉತ್ತೀರ್ಣರಾಗಿ 'ಕಲ್ಕತ್ತೆ'ಯಲ್ಲಿ 'ಡೆಪ್ಯುಟಿ ಅಕೌಂಟೆಂಟ್ ಜನರಲ್' ಆಗಿ ವೃತ್ತಿ-ಜೀವನ ಆರಂಭಿಸಿ, ೧೯೧೭ರಲ್ಲಿ 'ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಚಾರ್ಯ'ರಾದರು. ೧೯೨೪ರಲ್ಲಿ 'ಲಂಡನಿನ ಫೆಲೊ ಆಫ್ ರಾಯಲ್ ಸೊಸೈಟಿ'ಗೆ ರಾಮನ್ ಆಯ್ಕೆಯಾದರು. ಮಾರ್ಚ್ ೧೬ ೧೯೨೮ರಲ್ಲಿ ತಮ್ಮ ಶೋಧನೆ, 'ರಾಮನ್ ಎಫೆಕ್ಟ್'ನ್ನು 'ಬೆಂಗಳೂರಿ'ನಲ್ಲಿ ಬಹಿರಂಗ ಪಡಿಸಿದ ರಾಮನ್, ೧೯೩೦ರಲ್ಲಿ ಅದಕ್ಕಾಗಿ 'ನೋಬೆಲ್ ಪ್ರಶಸ್ತಿ'ಗಳಿಸಿದರು. ೧೯೩೪ರಲ್ಲಿ 'ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಸೈನ್ಸ್ ನ ನಿರ್ದೇಶಕ,' ರಾಗಿ ಅಧಿಕಾರ ವಹಿಸಿಕೊಂಡ 'ಡಾ. ರಾಮನ್', ತದನಂತರ ೧೯೪೩ರಲ್ಲಿ 'ರಾಮನ್ ಸಂಶೋಧನಾ ಕೆಂದ್ರ'ವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು.

[ಬದಲಾಯಿಸಿ] ಸಾಧನೆಗಳು

[ಬದಲಾಯಿಸಿ] ಮರಣ

ನವೆಂಬರ್ ೨೧ ೧೯೭೦ ರಲ್ಲಿ, 'ಪ್ರೊ. ರಾಮನ್' ರವರು, ಬೆಂಗಳೂರಿನಲ್ಲಿ ನಿಧನರಾದರು.

[ಬದಲಾಯಿಸಿ] ಇವನ್ನೂ ನೋಡಿ

ಭಾರತದ ವಿಜ್ಞಾನಿಗಳು [೧]

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು