ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ
ವಿಕಿಪೀಡಿಯ ಇಂದ
ವಿಲ್‌ಹೆಲ್ಮ್ ರೆಂಟ್‌ಗನ್ (೧೮೪೫ – ೧೯೨೩)
ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯು (ಸ್ವೀಡನ್‌ನ ಭಾಷೆ - Nobelpriset i fysik) ಸ್ವೀಡನ್‌ನ ರಾಜವಂಶದ ವಿಜ್ಞಾನ ಅಕಾಡೆಮಿಯಿಂದ ವರ್ಷಕೊಮ್ಮೆ ನೀಡಲಾಗುತ್ತದೆ. ಅದು ಆಲ್‌ಫ್ರೆಡ್ ನೊಬೆಲ್‌ರ ಉಯಿಲಿನಿಂದ ೧೮೯೫ರಲ್ಲಿ ಸ್ಥಾಪಿತವಾದ ಐದು ನೊಬೆಲ್ ಪ್ರಶಸ್ತಿಗಳ ಪೈಕಿ ಒಂದು ಮತ್ತು ೧೯೦೧ರಿಂದ ನೀಡಲಾಗುತ್ತಿದೆ; ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ, ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ, ನೊಬೆಲ್ ಶಾಂತಿ ಪ್ರಶಸ್ತಿ, ಮತ್ತು ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಇತರ ಪ್ರಶಸ್ತಿಗಳು. ಭೌತಶಾಸ್ತ್ರದ ಮೊದಲ ನೊಬೆಲ್ ಪ್ರಶಸ್ತಿಯನ್ನು ಜರ್ಮನಿಯ ವಿಲ್‌ಹೆಲ್ಮ್ ಕಾನ್ರಾಡ್ ರೆಂಟ್‌ಗನ್‌ರಿಗೆ "ಅಪೂರ್ವವಾದ ಕಿರಣಗಳ (ಅಥವಾ ಕ್ಷ-ಕಿರಣಗಳು) ಶೋಧನೆಯ ಮೂಲಕ ಅವರು ಸಲ್ಲಿಸಿದ ಅಸಾಮಾನ್ಯವಾದ ಸೇವೆಗಳ ಗೌರವಾರ್ಥವಾಗಿ" ನೀಡಲಾಗಿತ್ತು.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |