ವಿಷಯಕ್ಕೆ ಹೋಗು

ಜಗದೀಶ್ ಶೆಟ್ಟರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಗದೀಶ್ ಶೆಟ್ಟರ

ಅಧಿಕಾರ ಅವಧಿ
೧೨ ಜುಲೈ ೨೦೧೨ – ೦೮ ಮೇ ೨೦೧೩
ಪೂರ್ವಾಧಿಕಾರಿ ಡಿ. ವಿ. ಸದಾನಂದ ಗೌಡ
ಉತ್ತರಾಧಿಕಾರಿ ಸಿದ್ದರಾಮಯ್ಯ
ಮತಕ್ಷೇತ್ರ ಹುಬ್ಬಳ್ಳಿ ಗ್ರಾಮೀಣ
ವೈಯಕ್ತಿಕ ಮಾಹಿತಿ
ಜನನ (1955-12-17) ೧೭ ಡಿಸೆಂಬರ್ ೧೯೫೫ (ವಯಸ್ಸು ೬೮)
ಕೆರೂರು, ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ, ಕರ್ನಾಟಕ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ (1983-2023)
ಸಂಗಾತಿ(ಗಳು) ಶಿಲ್ಪ
ಮಕ್ಕಳು ೨ ಮಕ್ಕಳು
ವಾಸಸ್ಥಾನ ನಂ ೩೧, ಮಧುರಾ ಎಸ್ಟೇಟ್, ನಾಗಶೆಟ್ಟಿ ಕೊಪ್ಪ, ಹುಬ್ಬಳ್ಳಿ
ಉದ್ಯೋಗ ನ್ಯಾಯವಾದಿ
ಧರ್ಮ ಹಿಂದೂ ಧರ್ಮ
ಜಾಲತಾಣ http://jagadishshettar.com/

ಜಗದೀಶ್ ಶಿವಪ್ಪ ಶೆಟ್ಟರ (ಹುಟ್ಟಿದ್ದು: ೧೭-೧೨-೧೯೫೫) ಇವರು 2023 ರಲ್ಲಿ ಭಾರತೀಯ ಜನತಾ ಪಕ್ಷ ಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷವನ್ನು ಸೇರಿದರು ಮತ್ತು ಸೋಲು ಅನುಭವಿಸಿದರು ಪ್ರಸ್ತುತ ಕರ್ನಾಟಕ ಕಾಂಗ್ರೆಸ್ ಘಟಕದ ಒಬ್ಬ ರಾಜಕಾರಣಿ ಮತ್ತು ಕರ್ನಾಟಕ ರಾಜ್ಯದ ಮಾಜಿ ನಿಕಟ ಪೂರ್ವ ಮುಖ್ಯಮಂತ್ರಿ. ಇವರು ಹಿಂದೆ ಕರ್ನಾಟಕ ಸರ್ಕಾರದಲ್ಲಿ ವಿತ್ತ, ಗಣಿ, ಕನ್ನಡ ಮತ್ತು ಸಂಸ್ಕ್ರುತಿ, ಪ್ರವಾಸೋದ್ಯಮ ಖಾತೆ ಮುಂತಾದ ಹಲವು ಖಾತೆಗಳನ್ನು ನಿರ್ವಹಿಸಿದ್ದಾರೆ. ಇವರು ಎಚ್. ಡಿ. ಕುಮಾರಸ್ವಾಮಿರವರ ಸಂಪುಟದಲ್ಲಿ ಸಚಿವರಾಗಿದ್ದಾಗ ಕಂದಾಯ ಇಲಾಖೆಯ ಜವಾಬ್ದಾರಿವಹಿಸಿದ್ದರು. ಇವರು ೨೦೦೮-೨೦೦೯ ರಲ್ಲಿ ಕರ್ನಾಟಕ ವಿಧಾನ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ವೈಯಕ್ತಿಕ ಜೀವನ

[ಬದಲಾಯಿಸಿ]

ಜನನ : ಕೆರೂರ, ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ. ತಂದೆ  : ಶಿವಪ್ಪ. ತಾಯಿ : ಬಸವಣೆಮ್ಮ. ಪತ್ನಿ  : ಶಿಲ್ಪಾ. ಪುತ್ರರು: ಪ್ರಶಾಂತ ಹಾಗೂ ಸಂಕಲ್ಪ. ವಿದ್ಯಾರ್ಹತೆ: ಬಿ.ಕಾಂ. ಎಲ್.ಎಲ್.ಬಿ

ಹುದ್ದೆಗಳು

[ಬದಲಾಯಿಸಿ]
  • ಸದಸ್ಯರು: ಎಬಿವಿಪಿ, ಅರ್.ಎಸ್.ಎಸ್
  • ೧೯೯೦ : ಬಿಜೆಪಿ ಹುಬ್ಬಳ್ಳಿ ಗ್ರಾಮಾಂತರ ತಾಲ್ಲೂಕು ಘಟಕದ ಅಧ್ಯಕ್ಷ.
  • ೧೯೯೪ : ಬಿಜೆಪಿ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ.
  • ೧೯೯೪ : ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಹುಬ್ಬಳ್ಳಿ ಗ್ರಾಮಾಂತರ ಪ್ರದೇಶದ ಶಾಸಕರಾಗಿ
  • ೧೯೯೯ : ಬಿಜೆಪಿ ರಾಜ್ಯ ಕಾರ್ಯದರ್ಶಿ ಸ್ಥಾನ ನಿರ್ವಹಣೆ
  • ೧೯೯೯ : ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ.
  • ೧೯೯೯ : ೧೧ನೇ ವಿಧಾನಸಭೆಯ ವಿರೋದ ಪಕ್ಷದ ನಾಯಕ.
  • ೨೦೦೪ : ಮೂರನೇ ಬಾರಿಗೆ ವಿಧಾನಸಭೆ ಪ್ರವೇಶ.
  • ೨೦೦೫ : ಬಿಜೆಪಿ ರಾಜ್ಯಾಧ್ಯಕ್ಷ (ಕರ್ನಾಟಕದ ರಾಜ್ಯ).
  • ೨೦೦೬ : ಕಂದಾಯ ಇಲಾಖೆಯ ಮಂತ್ರಿ (ಬಿಜೆಪಿ ಮತ್ತು ಜೆಡಿ(ಎಸ್)) ಸಮ್ಮಿಶ್ರ ಸರ್ಕಾರ .
  • ೨೦೦೮ : ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶ.
  • ೨೦೦೮ : ೧೩ ನೇ ವಿಧಾನಸಭೆ ಸಭಾದ್ಯಕ್ಷರು.
  • ೨೦೦೯ : ಗಾಮೀಣ ಅಭಿವ್ರುದ್ದಿ (ಪಂಚಾಯತ್ ರಾಜ್) ಇಲಾಖೆಯ ಸಚಿವರು(ಬಿಜೆಪಿ) ಸರ್ಕಾರ.
  • ೨೦೧೨ : ಜುಲೈ ೧೨ರಂದು ಗುರುವಾರ ಮಧ್ಯಾಹ್ನ, ೧೨-೦೦ ಕ್ಕೆ ಸರಿಯಾಗಿ ಕರ್ನಾಟಕದ ೨೭ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.
  • ೨೦೧೩ : ಐದನೇ ಬಾರಿಗೆ ವಿಧಾನಸಭೆ ಪ್ರವೇಶ.
  • ೨೦೧೩ : ವಿಧಾನಸಭೆಯ ವಿರೋದ ಪಕ್ಷದ ನಾಯಕ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ಪೂರ್ವಾಧಿಕಾರಿ
ಡಿ. ವಿ. ಸದಾನಂದ ಗೌಡ
ಕರ್ನಾಟಕದ ಮುಖ್ಯಮಂತ್ರಿ
೧೨ ಜುಲೈ ೨೦೧೨–೮ ಮೇ ೨೦೧೩
ಉತ್ತರಾಧಿಕಾರಿ
ಸಿದ್ದರಾಮಯ್ಯ