ಕರ್ನಾಟಕದ ಜಲಪಾತಗಳು
ಗೋಚರ
{ಕರ್ನಾಟಕ} ರಾಜ್ಯವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ. ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಯಲಾಗಿದೆ. ತನ್ನಲ್ಲಿರುವ ಹಲವಾರು ನಯನಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಜಲಪಾತಗಳನ್ನು ಅಬ್ಬಿ,, ಅಬ್ಬೆ,, ಹೆಬ್ಬೆ,, ದಬ್ಬೆ,, ಜೋಗ, ದಬ, ದಬೆ, ದಿಡಗ/ದಿಡುಗ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.
ಪಶ್ಚಿಮ ಘಟ್ಟಗಳ ಸೆರಗಿನಲ್ಲಿ
[ಬದಲಾಯಿಸಿ]ಕರ್ನಾಟಕ ರಾಜ್ಯದ ಬಹುಪಾಲು ಜಲಪಾತಗಳು ಕಂಡು ಬರುವುದು ಪಶ್ಚಿಮ ಘಟ್ಟಗಳ ಮಡಿಲಿನಲ್ಲಿ. ಕೊಡಗಿನಿಂದ ಹಿಡಿದು ಉತ್ತರ ಕನ್ನಡದ ಅಂಚಿನವರೆಗೆ ಹರಡಿರುವ ಪಶ್ಚಿಮ ಘಟ್ಟಗಳು ದೊಡ್ಡ ಹಾಗೂ ಚಿಕ್ಕ ಪುಟ್ಟ ಜಲಪಾತಗಳನ್ನೂ ಸೇರಿ ಏನಿಲ್ಲವೆಂದರೂ ಸುಮಾರು ೫೦೦ ರ ಆಸು ಪಾಸು ಜಲಪಾತಗಳಿವೆ ಎಂದು ಅಂದಾಜು ಮಾಡಲಾಗಿದೆ.
ಕರ್ನಾಟಕದ ನಕ್ಷೆ ಮೇಲೆ ಪ್ರಮುಖ ಜಲಪಾತಗಳನ್ನು ಗುರುತಿಸುವುದು
[ಬದಲಾಯಿಸಿ]- ಹನುಮಾನ್ ಗುಂಡಿ (ಸೂತನಬ್ಬಿ ಜಲಪಾತ)
- ಹೆಬ್ಬೆ ಜಲಪಾತ
- ಸಿರಿಮನೆ ಜಲಪಾತ
- ಕಲ್ಹತ್ತಿಗಿರಿ ಜಲಪಾತ
- ಮಾಣಿಕ್ಯಧಾರ ಜಲಪಾತ
- ಶಾಂತಿ ಜಲಪಾತ
- ಮಘೇಬೈಲ್ ಜಲಪಾತ
- ಕೆಸವೆ ಜಲಪಾತ
- ಹೊನ್ನಮ್ಮನಹಳ್ಳ ಜಲಪಾತ
- ನಿಫ್ಲಿ ಫಾಲ್ಸ್
- ಸಾತೋಡಿ ಜಲಪಾತ
- ಉಂಚಳ್ಳಿ ಜಲಪಾತ ಅಥವಾ ಲುಷಿಂಗ್ಟನ್ ಜಲಪಾತ ಅಥವಾ ಕೆಪ್ಪ ಜೋಗ
- ಮಾಗೋಡು ಜಲಪಾತ
- ಬೆಣ್ಣೆ ಹೊಳೆ ಜಲಪಾತ
- ವಾಟೆ ಹಳ್ಳ ಜಲಪಾತ
- ಬುರುಡೆ ಜಲಪಾತ ಅಥವಾ ಬುರುಡೆ ಜೋಗ
- ವಿಭೂತಿ ಜಲಪಾತ
- ಶಿವಗಂಗೆ ಜಲಪಾತ
- ಲಾಲ್ಗುಳಿ ಜಲಪಾತ
- ಅಣಶಿ ಜಲಪಾತ
- ಅಪ್ಸರಕೊಂಡ
- ಜೋಗ ಜಲಪಾತ
- ದೇವಕಾರ ಅಥವಾ ಕಾನೂರ ಜಲಪಾತ
ಚಾರ್ಮಾಡಿ ಜಲಪಾತ ಶಿರಾಡಿ ಜಲಪಾತ
- ಜೋಗ ಜಲಪಾತ
- ಹಿಡ್ಲುಮನೆ / ಹಿತ್ಲುಮನೆ ಜಲಪಾತ
- ಕೂಡ್ಲು ತೀರ್ಥ ಜಲಪಾತ
- ದಬ್ಬೆ ಜಲಪಾತ
- ಬರ್ಕಣ ಜಲಪಾತ
- ಅಚಕನ್ಯ ಜಲಪಾತ
- ಕುಂಚಿಕಲ್ ಜಲಪಾತ
- ಬಾಳೆಬರೆ ಜಲಪಾತ