ಚುಂಚನಕಟ್ಟೆ ಜಲಪಾತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಚುಂಚನಕಟ್ಟೆ ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನಲ್ಲಿರುವ ಒಂದು ಪ್ರವಾಸಿ ತಾಣ. ಕರ್ನಾಟಕ ರಾಜ್ಯದ ಜೀವನಾಡಿಯಾದ ಕಾವೇರಿ ನದಿಯು ಇಲ್ಲಿ ಸುಮಾರು ೬೫ ಅಡಿಗಳ[೧] ಎತ್ತರದಿಂದ ಭೋರ್ಗರೆಯುತ್ತಾ ದುಮ್ಮಿಕ್ಕಿ ಮೋಹಕ ಜಲಪಾತವನ್ನು ಸೃಷ್ಟಿಸುತ್ತಾಳೆ. ಚುಂಚನಕಟ್ಟೆಯು ಕೃಷ್ಣರಾಜನಗರದಿಂದ ೧೫ ಕಿ.ಮಿ ದೂರದಲ್ಲಿ ಇದೆ. ಶ್ರೀರಾಮನು ತನ್ನ ವನವಾಸಕಾಲದಲ್ಲಿ ತನ್ನ ಪತ್ನಿ ಸೀತಾದೇವಿಯೊಡನೆ ಇಲ್ಲಿಗೆ ಬಂದಿದ್ದನೆಂಬ ಐತಿಹ್ಯವಿದೆ. ಇಲ್ಲಿರುವ ಕೋದಂಡರಾಮ ದೇವಾಲಯವು ಪ್ರಸಿದ್ದಿ ಪಡೆದಿದೆ. ಇಲ್ಲಿಯ ವಿಶೇಷವೆಂದರೆ ಶ್ರೀರಾಮನ ಬಲಬದಿಗೆ ಸೀತಾದೇವಿಯ ವಿಗ್ರಹವಿದೆ.

ಇದನ್ನೂ ನೋಡಿ [ಬದಲಾಯಿಸಿ]

ಉಲ್ಲೇಖಗಳು [ಬದಲಾಯಿಸಿ]

  1. Chunchanakatte Falls. india9. ಮರುಕಳಿಸಿದ ದಿನಾಂಕ 2006-12-09.