ಕರಗ
ವಿಕಿಪೀಡಿಯ ಇಂದ
ಕರಗ ಬೆಂಗಳೂರಿನ ಹೃದಯ ಭಾಗಗಳಲ್ಲಿ ಆಚರಿಸುವ ಅತ್ಯಂತ ಹಳೆಯ ಹಬ್ಬಗಳಲ್ಲಿ ಒಂದು. ಈ ಹಬ್ಬವು ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ತಿಗಳರ ಸಮುದಾಯದ ಜನರ ಪರಂಪರೆ. ಬೆಂಗಳೂರು ಅಲ್ಲದೆ ಇದನ್ನು ಮಡಿಕೇರಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಕೂಡ ಆಚರಿಸಲಾಗುತ್ತದೆ. ಬೆಂಗಳೂರಿನಲ್ಲಿ ಕರಗ ತನ್ನ ಯಾತ್ರೆಯನ್ನು ತಿಗಳಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಾಲಯದಿಂದ ಪ್ರಾರಂಭಿಸಿ ನಗರದ ಹಳೆಯ ಭಾಗಗಳಾದ ಕುಂಬಾರಪೇಟೆ, ಕಬ್ಬನ್‌ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ, ದೊಡ್ಡರಪೇಟೆ, ಅಕ್ಕಿಪೇಟೆ, ಬಳೇಪೇಟೆ, ಕಿಲಾರಿ ರಸ್ತೆ, ನಗರ್ತಪೇಟೆ, ದರ್ಗಾ ಮತ್ತು ಅಣ್ಣಮ್ಮ ದೇವಿ ದೇವಾಲಯದ ಪ್ರದೇಶಗಳಿಂದ ಹಾದು ಹೋಗುತ್ತದೆ.
[ಬದಲಾಯಿಸಿ] ಬಾಹ್ಯ ಸಂಪರ್ಕಗಳು
|
||||||||||||||||