ಕೋಲಾರ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕೋಲಾರ ಕರ್ನಾಟಕ ರಾಜ್ಯದ ಒ೦ದು ಜಿಲ್ಲೆ. ಇಲ್ಲಿರುವ ಚಿನ್ನದ ಗಣಿಗಳು ಮತ್ತು ಚಿನ್ನದ ಗಣಿಗಾರಿಕೆಗೆ ಕೋಲಾರ ಜಿಲ್ಲೆ ಪ್ರಸಿದ್ಧ. ಕೋಲಾರ ನಗರ ಈ ಜಿಲ್ಲೆಯ ಕೇಂದ್ರಸ್ಥಾನ. ಕೋಲಾರ ಜಿಲ್ಲೆಯು ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಗಡಿಗೆ ಹೊಂದಿಕೊಂಡಿದೆ.

ಕೋಲಾರ ಗಂಗರ ರಾಜಧಾನಿಯಾಗಿತ್ತು ಇದನ್ನು ಮೊದಲು ಕುವಲಾಲಪುರ ಅಂತಲೂ ಕರೆಯುತ್ತಿದ್ದರು. ಕಾಲ ಕ್ರಮೇಣ ಕೋಲಾರವಾಯಿತು. ಗಂಗರು ಕಟ್ಟಿಸಿದಂತ ಹಲವಾರು ಸ್ಥಳಗಳು ಕೋಲಾರದಲ್ಲಿ ಮತ್ತು ಕೋಲಾರ ಜಿಲ್ಲೆಯಲ್ಲಿವೆ ಅದರಲ್ಲೂ ಮುಖ್ಯವಾಗಿ ಗಂಗರು ಕಟ್ಟಿಸಿದ ಕೋಲಾರಮ್ಮ ದೇವಾಲಯ ಜಿಲ್ಲೆಯಲ್ಲಿಯೆ ಪ್ರಸಿದ್ದಿಯನ್ನು ಪಡೆದಿದೆ.

ಕರ್ನಾಟಕದ ಮೊದಲ ಮುಖ್ಯಮ೦ತ್ರಿಗಳಾದ ದಿವ೦ಗತ ಚೆಂಗಲರಾಯ ರೆಡ್ದಿ ಕೋಲಾರ ಜಿಲ್ಲೆಯವರು. ಮೈಸೂರು ಸ೦ಸ್ಥಾನದ ದಿವಾನರಾಗಿದ್ದ ಹಾಗೂ ಕರ್ನಾಟಕದ ಅತಿ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರಾದ ಸರ್. ಎ೦ ವಿಶ್ವೇಶ್ವರಯ್ಯ ನವರು ಸಹ ಕೋಲಾರ ಜಿಲ್ಲೆಯವರು.

ಚಿತ್ರ ನಟಿ ದಿ: ಸೌಂದರ್ಯ ಮತ್ತು "ಮಂಕು ತಿಮ್ಮನ ಕಗ್ಗ " ದ ಕರ್ತೃ ಶ್ರೀಯುತ ಡಿ. ವಿ. ಗುಂಡಪ್ಪ ನವರು ಮುಳಬಾಗಿಲಿನವರು ಮಾಜಿ ಸಚಿವ ಶ್ರೀ ರಮೇಶ್ ಕುಮಾರ್ ಶ್ರೀನಿವಾಸಪುರದವರು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ " ಮಾಸ್ತಿ ಕನ್ನಡದ ಆಸ್ತಿ " ವೆಂಕಟೇಶ ಅಯ್ಯಂಗಾರ್ ಮಾಲೂರು ತಾಲ್ಲೂಕಿನ ಮಾಸ್ತಿಯವರು ಕರ್ನಾಟಕ ಮೊತ್ತ ಮೊದಲ ಸಮುದಾಯ ರೇಡಿಯೋ ಕೇಂದ್ರ ಪ್ರಾಂರಂಭವಾದದ್ದು ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆಯಲ್ಲಿ ಇದು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದ್ದು ಕೆಲವೇ ದಿನದಲ್ಲಿ ತರಂಗಾಂತರದಲ್ಲಿ ಕಾರ್ಯಕ್ರಮಗಳು ಪ್ರಸಾರವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ www.voices4all.org ನ್ನು ನೋಡಿ. ಜೊತೆಗೆ ಕೋಲಾರ ಜಿಲ್ಲೆಯ ಮಿನಿ ಕೆ.ಆರ್.ಎಸ್ ಎಂದೇ ಪ್ರಸಿದ್ದಿಯಾದ ಮಾರ್ಕಂಡೇಯ ಕೆರೆ ಸಹ ಇದೆ. ಮೈಸೂರು ಹುಲಿ ಎಂದು ಪ್ರಸಿದ್ದಿಯಾದ ಟಿಪ್ಪುವಿನ ತಂದೆ ಹೈದರ್ ಆಲಿ ಜನಿಸಿದ್ದು ಸಹ ಇಲ್ಲಿಯೇ.

ಕೋಲಾರ ಜಿಲ್ಲೆಯಲ್ಲಿರುವ ಕೆಲವು ಚಾರಿತ್ರಿಕ ಸ್ಥಳಗಳೆ೦ದರೆ

ಚಿನ್ನದ ಗಣಿ (ಕೆ.ಜಿ.ಎಫ್), ಮುಳಬಾಗಿಲು, ಬ೦ಗಾರು ತಿರುಪತಿ, ಕೋಟಿಲಿ೦ಗೇಶ್ವರ, ಅ೦ತರಗ೦ಗೆ, ಮಾರ್ಕ೦ಡೇಯ ಪರ್ವತ, ಸೋಮೇಶ್ವರ ದೇವಸ್ಥಾನ, ಗ೦ಗ ವ೦ಶದ ಅರಸರು ಕಟ್ಟಿಸಿದ ಕೋಲಾರಮ್ಮನ ದೇವಸ್ಥಾನ , ಕುರುಡುಮಲೆ, ಆವಣಿ, ಮುರುಗಮಲ್ಲ ದರ್ಗ(ಚಿಂತಾಮಣಿ), ನಂದಿ ಬೆಟ್ಟ (ಈಗ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದೆ), ವಿಧುರಾಶ್ವತ್ಥ (ಗೌರಿಬಿದನೂರು)


ಕೋಲಾರ ಜಿಲ್ಲೆಯ ಪ್ರಮುಖ ಭಾಷೆ ಕನ್ನಡ. ಇಲ್ಲಿ ಚಾಲ್ತಿಯಲ್ಲಿರುವ ಇತರ ಭಾಷೆಗಳೆ೦ದರೆ ತೆಲುಗು, ತಮಿಳು ಮತ್ತು ಉರ್ದು.

ಕೋಲಾರ ಜಿಲ್ಲೆಯ ಮುಖ್ಯ ಕಸುಬುಗಳೆ೦ದರೆ ಕೃಷಿ, ಪಶು ಸಾಕಾಣಿಕೆ ಹಾಗೂ ರೇಷ್ಮೆ ಉದ್ಯಮ.

Karnataka-icon.jpg
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿಕ್ಕಬಳ್ಳಾಪುರ | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ರಾಯಚೂರು | ರಾಮನಗರ | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ
"http://kn.wikipedia.org/wiki/%E0%B2%95%E0%B3%8B%E0%B2%B2%E0%B2%BE%E0%B2%B0" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು