ವಿಷಯಕ್ಕೆ ಹೋಗು

ಸಾನ್ ಮರಿನೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
”ಅತಿ ಸುಂದರ ಸಾನ್ ಮರಿನೊ ಗಣರಾಜ್ಯ”
ಸೆರೆನಿಸ್ಸಿಮಾ ರಿಪಬ್ಲಿಕಾ ದಿ ಸಾನ್ ಮರಿನೊ
Flag of ಸಾನ್ ಮರಿನೊ
Flag
Motto: ಲಿಬರ್ಟಾಸ್  (ಲ್ಯಾಟಿನ್)
"ಲಿಬರ್ಟಿ"
Anthem: "ಇನ್ನೋ ನ್ಯಾಷನಲ್ ಡೆಲ್ಲ ರಿಪಬ್ಲಿಕಾ"
Location of ಸಾನ್ ಮರಿನೊ (circled in inset) in Europe (white)
Location of ಸಾನ್ ಮರಿನೊ (circled in inset)

in Europe (white)

Capitalಸಾನ್ ಮರಿನೊ
Largest cityಸೆರ್ರವಲ್ಲೆ
Official languagesಇಟಾಲಿಯನ್1
Demonym(s)Sammarinese
Governmentಗಣರಾಜ್ಯ
ಅಲೆಸ್ಸಾಂಡ್ರೊ ಮ್ಯಾನ್ಸೀನಿ
ಅಲೆಸ್ಸಾಂಡ್ರೊ ರಾಸ್ಸಿ
ಸ್ಥಾಪನೆ
• ದಿನಾಂಕ
೩೧ ಸೆಪ್ಟೆಂಬರ್ 301
• Water (%)
ಅಗಣನೀಯ
Population
• ಜುಲೈ 2007 estimate
29,615 (212ನೆಯದು)
GDP (PPP)2001 estimate
• Total
$904 ಮಿಲಿಯನ್ (195ನೆಯದು)
• Per capita
$34,600 (12ನೆಯದು)
HDI (2003)ಮಾಹಿತಿ ಇಲ್ಲ
Error: Invalid HDI value · ಮಾಹಿತಿ ಇಲ್ಲ
Currencyಯೂರೋ (€) (EUR)
Time zoneUTC+1 (CET)
• Summer (DST)
UTC+2 (CEST)
Calling code378
Internet TLD.sm
1 "SAN MARINO" (PDF). UNECE. Archived from the original (PDF) on 2007-09-26. Retrieved 2007-09-23.

ಸಾನ್ ಮರಿನೊ (ಸ್ಯಾನ್ ಮರಿನೊ) ಗಣರಾಜ್ಯವು ವಿಶ್ವದ ಅತಿ ಪುಟ್ಟ ಸ್ವತಂತ್ರ ರಾಷ್ಟ್ರಗಳಲ್ಲಿ ಒಂದು. ಇದು ಸಂಪೂರ್ಣವಾಗಿ ಇಟಲಿಯ ಒಳಗೆ ಹುದುಗಿಕೊಂಡಿರುವ ದೇಶ. ಸಾನ್ ಮರಿನೊ ವಿಶ್ವದ ಅತಿ ಪುರಾತನ ಗಣರಾಜ್ಯವೆಂದು ಹೇಳಲಾಗುತ್ತದೆ. ೬೧ ಚ.ಕಿ.ಮೀ. ವಿಸ್ತೀರ್ಣವುಳ್ಳ ಈ ರಾಷ್ಟ್ರದ ಜನಸಂಖ್ಯೆ ಸುಮಾರು ೨೮ ಸಾವಿರ. ಸಾನ್ ಮರಿನೊ ನಗರವು ದೇಶದ ರಾಜಧಾನಿ. ಅಪೆನ್ನೈನ್ ಪರ್ವತಗಳ ನಡುವೆ ಇರುವ ಈ ದೇಶವು ಪೂರ್ಣವಾಗಿ ಬೆಟ್ಟಗುಡ್ಡಗಳ ನಾಡು. ಯಾವುದೇ ನದಿ ಅಥವಾ ಸರಸ್ಸುಗಳು ಇಲ್ಲಿಲ್ಲ. ವರ್ಷದ ಸದಾಕಾಲವೂ ಸಹನೀಯವಾದ ಮೆಡಿಟರೇನಿಯನ್ ಹವಾಮಾನವಿರುತ್ತದೆ. ಸಾನ್ ಮರಿನೊ ಸಂಸದೀಯ ಪ್ರಜಾಸತ್ತೆಯನ್ನು ಅಳವಡಿಸಿಕೊಂಡಿದೆ. ವೈಶಿಷ್ಟ್ಯವೆಂದರೆ ಈ ಸಂಸತ್ತು ಪ್ರತಿ ೬ ತಿಂಗಳಿಗೊಮ್ಮೆ ಇಬ್ಬರು ಕ್ಯಾಪ್ಟನ್ ರೀಜೆಂಟ್ ರನ್ನು ಆರಿಸುತ್ತದೆ. ಈ ಇಬ್ಬರೂ ರಾಷ್ಟ್ರದ ಆಡಳಿತದ ಮುಖ್ಯಸ್ಥರಾಗಿರುತ್ತಾರೆ. ಹೀಗೆ ಏಕಕಾಲಕ್ಕೆ ಇಬ್ಬರು ಮುಖ್ಯಸ್ಥರನ್ನು ಹೊಂದಿರುವ ದೇಶ ಪ್ರಾಯಶ: ಇನ್ನೊಂದಿಲ್ಲ. ಇಟಾಲಿಯನ್ ಭಾಷೆ ದೇಶದ ಪ್ರಮುಖ ನುಡಿ. ಬಹುಸಂಖ್ಯಾತರು ರೋಮನ್ ಕ್ಯಾಥೊಲಿಕ್ ಪಂಗಡದವರು. ಪ್ರವಾಸೋದ್ಯಮ ದೇಶದ ಪ್ರಮುಖ ಆರ್ಥಿಕ ಚಟುವಟಿಕೆ. ಉಳಿದಂತೆ ಎಲೆಕ್ಟ್ರಾನಿಕ್ಸ್ , ಬ್ಯಾಂಕಿಂಗ್ ಹಾಗೂ ಸೆರಾಮಿಕ್ಸ್ ಉದ್ಯಮಗಳೂ ನಡೆಯುತ್ತಿವೆ. ದ್ರಾಕ್ಷಿ ಮತ್ತು ಗಿಣ್ಣು ಪ್ರಮುಖ ಕೃಷ್ಯುತ್ಪನ್ನಗಳು. ಸಾನ್ ಮರಿನೊ ತನ್ನ ವಿಶಿಷ್ಟ ಅಂಚೆಚೀಟಿಗಳಿಗೆ ಹೆಸರಾಗಿದೆ. ಇದು ಕೂಡ ಸಾಕಷ್ಟು ವಿದೇಶಿ ವಿನಿಮಯವನ್ನು ರಾಷ್ಟ್ರಕ್ಕೆ ತರುತ್ತಿದೆ. ಸಾನ್ ಮರಿನೊ ನಲ್ಲಿ ಎಫ್-೧ ಕಾರು ಓಟದ ಸ್ಪರ್ಧೆ ಪ್ರತಿವರ್ಷ ನಡೆಯುತ್ತದೆ.