ಪಂಚಾಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೩೫ ನೇ ಸಾಲು: ೩೫ ನೇ ಸಾಲು:


=== ಋತುಗಳು ೬ (೨ ಮಾಸಗಳಿಗೆ ಒಂದು ಋತು) ===
=== ಋತುಗಳು ೬ (೨ ಮಾಸಗಳಿಗೆ ಒಂದು ಋತು) ===
೧. ವಸಂತ ಋತು (ಚೈತ್ರ - ವೈಶಾಖ)
೧. [[ವಸಂತ ಋತು]] (ಚೈತ್ರ - ವೈಶಾಖ)


೨. ಗ್ರೀಶ್ಮ ಋತು (ಜ್ಯೇಷ್ಠ - ಆಷಾಢ)
೨. ಗ್ರೀಷ್ಮ ಋತು (ಜ್ಯೇಷ್ಠ - ಆಷಾಢ)


೩. ವರ್ಷ ಋತು (ಶ್ರಾವಣ - ಭಾದ್ರಪದ)
೩. ವರ್ಷ ಋತು (ಶ್ರಾವಣ - ಭಾದ್ರಪದ)

೧೪:೪೪, ೩ ಅಕ್ಟೋಬರ್ ೨೦೧೩ ನಂತೆ ಪರಿಷ್ಕರಣೆ

೧೮೭೧-೧೮೭೨ಹಿಂದೂ ಪಂಚಾಂಗದ ಒಂದು ಪುಟ

ಪಂಚಾಂಗ (ಆಂಗ್ಲ: ಕ್ಯಾಲೆಂಡರ್)ಕಾಲದ ವಿಭಾಗಗಳನ್ನು ಕ್ರಮಬದ್ಧವಾಗಿ ಸಂಘಟಿಸುವ ಒಂದು ಪದ್ದತಿ. ಸಾಮಾನ್ಯವಾಗಿ ಖಗೋಳವಿದ್ಯೆಯ ವೀಕ್ಷಣೆಗಳ ಆಧಾರದ ಮೇಲೆ ಇವನ್ನು ರಚಿಸಲಾಗುತ್ತದೆ.

ಹಿಂದೂ ಪಂಚಾಂಗ

ಹಿಂದೂಗಳ ಸೌರಮಾನ,ಚಾಂದ್ರಮಾನ ರೀತಿಯ ಕಾಲಗಣನೆಗೆ ಪಂಚಾಂಗವೆಂದು ಕರೆಯುತ್ತಾರೆ.ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ , ವಾರ , ನಕ್ಷತ್ರ , ಯೋಗ ,ಮತ್ತು ಕರಣಗಳು - ಇವೇ ಆ ಐದು ಅಂಗಗಳು.ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ.

ತಿಥಿಗಳು

ತಿಥಿಗಳು ಮೂವತ್ತು(೩೦). ೩೦ ತಿಥಿಗಳನ್ನು ಎರಡು ಪಕ್ಷಗಳಲ್ಲಿ ೧೫ರಂತೆ ಎಣಿಕೆ ಮಾಡಲಾಗುತ್ತದೆ. ಪಾಡ್ಯ(ಪ್ರತಿಪದೆ)ದಿಂದ ಮೊದಲುಗೊಂಡು ಹುಣ್ಣಿಮೆಯವರೆಗೆ ಬರುವ ಮೊದಲ ೧೫ ತಿಥಿ(ದಿನ)ಗಳಿಗೆ ಶುಕ್ಲಪಕ್ಷವೆಂತಲೂ, ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮುಂದಿನ ೧೫ ತಿಥಿ(ದಿನ)ಗಳಿಗೆ ಕೃಷ್ಣಪಕ್ಷವೆಂತಲೂ ಕರೆಯುತ್ತಾರೆ. ಪ್ರತಿ ಮಾಸದ ಪಕ್ಷ ಮತ್ತು ತಿಥಿಗಳನ್ನು ಕೆಳಗಿನ ನೀಡಿವೆ.

ಶುಕ್ಲಪಕ್ಷ : ಪಾಡ್ಯ (೧); ಬಿದಿಗೆ (೨); ತದಿಗೆ (೩); ಚೌತಿ (೪); ಪಂಚಮಿ (೫); ಷಷ್ಠಿ (೬ ); ಸಪ್ತಮಿ (೭); ಅಷ್ಟಮಿ (೮); ನವಮಿ (೯); ದಶಮಿ (೧೦); ಏಕಾದಶಿ (೧೧); ದ್ವಾದಶಿ (೧೨); ತ್ರಯೋದಶಿ (೧೩); ಚತುರ್ದಶಿ (೧೪); ಹುಣ್ಣಿಮೆ (೧೫)

ಕೃಷ್ಣಪಕ್ಷ : ಪಾಡ್ಯ (೧); ಬಿದಿಗೆ (೨); ತದಿಗೆ (೩); ಚೌತಿ (೪); ಪಂಚಮಿ (೫); ಷಷ್ಠಿ (೬ ); ಸಪ್ತಮಿ (೭); ಅಷ್ಟಮಿ (೮); ನವಮಿ (೯); ದಶಮಿ (೧೦); ಏಕಾದಶಿ (೧೧); ದ್ವಾದಶಿ (೧೨); ತ್ರಯೋದಶಿ (೧೩); ಚತುರ್ದಶಿ (೧೪); ಅಮಾವಾಸ್ಯೆ (೩೦)

ವಾರಗಳು

ವಾರಗಳು ಏಳು (೭). ಅವು ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ. ನವಗ್ರಹಗಳಲ್ಲಿ ರಾಹು,ಕೇತುಗಳನ್ನು ಬಿಟ್ಟು ಮಿಕ್ಕ ಏಳು ಅಂದರೆ ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ ಹಾಗೂ ರವಿ -ಈ ಗ್ರಹಗಳ ಹೆಸರಿನಿಂದ ವಾರಗಳಿಗೆ ಹೆಸರಿಸಿದೆ.

ನಕ್ಷತ್ರಗಳು

ನಕ್ಷತ್ರಗಳು ಇಪ್ಪತ್ತೇಳು (೨೭).ಅವು:-

೧.ಅಶ್ವಿನಿ ೨.ಭರಣಿ ೩.ಕೃತ್ತಿಕೆ ೪.ರೋಹಿಣಿ ೫.ಮೃಗಶಿರ ೬.ಆರ್ದ್ರೆ ೭.ಪುನರ್ವಸು ೮.ಪುಷ್ಯ ೯.ಆಶ್ಲೇಷ ೧೦.ಮಖೆ

೧೧.ಪುಬ್ಬೆ ೧೨.ಉತ್ತರೆ ೧೩.ಹಸ್ತ ೧೪.ಚಿತ್ತೆ ೧೫.ಸ್ವಾತಿ ೧೬.ವಿಶಾಖ ೧೭.ಅನೂರಾಧ ೧೮.ಜ್ಯೇಷ್ಠ ೧೯.ಮೂಲ ೨೦. ಪೂರ್ವಾಷಾಢ

೨೧.ಉತ್ತರಾಷಾಢ ೨೨.ಶ್ರವಣ ೨೩.ಧನಿಷ್ಥೆ ೨೪.ಶತಭಿಷೆ ೨೫.ಪೂರ್ವಾಭಾದ್ರೆ ೨೬.ಉತ್ತರಾಭಾದ್ರೆ ೨೭.ರೇವತಿ.

ಮಾಸಗಳು - ೧೨

ವರ್ಷದಲ್ಲಿ, ಕೆಲವು ನಕ್ಷತ್ರದ ಹೆಸರಿನೆ ಮೂಲಕ, ಹನ್ನೆರಡು (೧೨) ಮಾಸಗಲನ್ನು ಕೆಳಗೆ ನೀಡಿವೆ.

೧. ಚೈತ್ರ (ಚಿತ್ರ/ಚಿತ್ತ); ೨. ವೈಶಾಖ (ವಿಶಾಖ); ೩. ಜ್ಯೇಷ್ಠ (ಜ್ಯೇಷ್ಠ); ೪. ಆಷಾಢ (ಆಷಾಢ)
೫. ಶ್ರಾವಣ (ಶ್ರವಣ); ೬. ಭಾದ್ರಪದ (ಭದ್ರ); : ೭. ಆಶ್ವೀಜ (ಅಶ್ವಿನಿ); ೮. ಕಾರ್ತೀಕ (ಕೃತ್ತಿಕ/ಕೃತ್ತಿಕೆ)
೯. ಮಾರ್ಗಶಿರ (ಮೃಗಶಿರ); ೧೦. ಪುಷ್ಯ (ಪುಷ್ಯ/ಪುಬ್ಬ); ೧೧. ಮಾಘ (ಮಘ/ಮಖ); ೧೨. ಫಾಲ್ಗುಣ (ಫಾಲ್ಗುಣಿ)

ಅಧಿಕ ಮಾಸಗಳು

ಸೂರ್ಯನು ಯಾವುದೇ ರಾಶಿಯಲ್ಲೂ ಪ್ರಯಾಣಿಸದೇ ಒಂದು ಚಾಂದ್ರಮಾನ ಮಾಸದಲ್ಲಿ ಸಂಪೂರ್ಣವಾಗಿ ಒಂದು ರಾಶಿಯ ಒಳಗೇ ಚಲಿಸುತ್ತದ್ದರೇ (ಅಂದರೆ ಅಮಾವಾಸ್ಯೆಗೆ ಮೊದಲು), ಆ ಚಾಂದ್ರಮಾನ ಮಾಸವನ್ನು ಮುಂಬರುವ ಮೊದಲ ಸಂಕ್ರಮಣದ ಪ್ರಕಾರ ಹೆಸರಿಸಲಾಗುತ್ತದೆ. ಅದು ಅಧಿಕ ಎಂಬ ಉಪಾಧಿಯನ್ನು ತೆಗೆದುಕೊಳ್ಳುತ್ತದೆ. ಉದಾಹರಣೆಗೆ, ಒಂದು ಚಾಂದ್ರಮಾನ ಮಾಸವು ಸಂಕ್ರಮಣವಿಲ್ಲದೆಯೇ ಸರಿದುಹೋದರೆ ಮತ್ತು ಮುಂದಿನ ಸಂಕ್ರಮಣವು ಮೇಷದಲ್ಲಿದ್ದರೆ, ಸಂಕ್ರಮಣವಿಲ್ಲದ ಆ ಮಾಸವನ್ನು ಅಧಿಕ ಚೈತ್ರವೆಂದು ಹೆಸರಿಸಲಾಗುತ್ತದೆ. ಸಂಕ್ರಮಣವಾಗಿರುವ ಮಾಸವನ್ನು ಶುದ್ಧ ಚೈತ್ರ ಅಥವಾ ನಿಜ ಚೈತ್ರ ಮಾಸವೆನ್ನುತ್ತಾರೆ.

ಋತುಗಳು ೬ (೨ ಮಾಸಗಳಿಗೆ ಒಂದು ಋತು)

೧. ವಸಂತ ಋತು (ಚೈತ್ರ - ವೈಶಾಖ)

೨. ಗ್ರೀಷ್ಮ ಋತು (ಜ್ಯೇಷ್ಠ - ಆಷಾಢ)

೩. ವರ್ಷ ಋತು (ಶ್ರಾವಣ - ಭಾದ್ರಪದ)

೪. ಶರದೃತು (ಆಶ್ವೀಜ - ಕಾರ್ತೀಕ)

೫. ಹೇಮಂತ ಋತು (ಮಾರ್ಗಶಿರ - ಪುಷ್ಯ)

೬. ಶಿಶಿರ ಋತು (ಮಾಘ - ಪಾಲ್ಗುಣ)

ಆಯನಗಳು - ೨

ಉತ್ತರಾಯಣ ಮತ್ತು ದಕ್ಷಿಣಾಯನ ಪ್ರತಿ ವರ್ಷದ ಜನವರಿ ೧೪ (ಮಾಘ, ಮಕರ ಸಂಕ್ರಮಣ) ರಿಂದ ಜುಲೈ ೧೬ (ಆಷಾಢ , ಕರ್ಕ ಸಂಕ್ರಮಣ) ರವರೆಗೆ ಸೂರ್ಯನು ಉತ್ತರಕ್ಕೆ ಸಂಚರಿಸುವುದರಿಂದ ಉತ್ತರಾಯಣವೆಂದೂ, ಜುಲೈ ೧೬ ರಿಂದ ಜನವರಿ ೧೪ ರವರೆಗೆ ಸೂರ್ಯನು ದಕ್ಷಿಣ ದಿಕ್ಕಿಗೆ ಬಾಗಿ ಸಂಚರಿಸುವುದರಿಂದ ದಕ್ಷಿಣಾಯಣವೆಂದೂ ಗುರುತಿಸಲಾಗಿದೆ.

ಯೋಗಗಳು

ಯೋಗಗಳು ಒಟ್ಟು ೨೭. ಅವು : ೧.ವಿಷ್ಕಂಭ ೨.ಪ್ರೀತಿ ೩.ಆಯುಷ್ಮಾನ್ ೪.ಸೌಭಾಗ್ಯ ೫.ಶೋಭನ ೬.ಅತಿಗಂಡ ೭.ಸುಕರ್ಮ ೮.ಧೃತಿ ೯.ಶೂಲ ೧೦.ಗಂಡ ೧೧.ವೃದ್ಢಿ ೧೨.ಧ್ರುವ ೧೩.ವ್ಯಾಘಾತ ೧೪.ಹರ್ಷಣ ೧೫.ವಜ್ರ ೧೬.ಸಿದ್ಧಿ ೧೭.ವ್ಯತೀಪಾತ ೧೮.ವರಿಯಾನ್ ೧೯.ಪರಿಘ ೨೦.ಶಿವ ೨೧.ಸಿದ್ಧ ೨೨.ಸಾಧ್ಯ ೨೩.ಶುಭ ೨೪.ಶುಕ್ಲ ೨೫.ಬ್ರಹ್ಮ ೨೬.ಐಂದ್ರ ೨೭.ವೈಧೃತಿ

ಕರಣಗಳು

ಕರಣಗಳು ಒಟ್ಟು ೧೧. ಅವುಗಳೆಂದರೆ : ಬವ , ಬಾಲವ , ಕೌಲವ , ತೈತಲೆ , ಗರಜೆ ,ವಣಿಕ್ , ಭದ್ರೆ , ಶಕುನಿ , ಚತುಷ್ಪಾತ್ , ನಾಗವಾನ್ ಹಾಗೂ ಕಿಂಸ್ತುಘ್ನ

ಇವನ್ನೂ ನೋಡಿ


"https://kn.wikipedia.org/w/index.php?title=ಪಂಚಾಂಗ&oldid=365556" ಇಂದ ಪಡೆಯಲ್ಪಟ್ಟಿದೆ