ವಿಷಯಕ್ಕೆ ಹೋಗು

ಫಾಲ್ಗುಣ ಮಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಫಾಲ್ಗುಣ ಇಂದ ಪುನರ್ನಿರ್ದೇಶಿತ)
ಕೃಷ್ಣ ಮತ್ತು ರಾಧೆಯರಿಂದ ವಸಂತ ಋತುವಿನ ಆಚರಣೆ. ೧೮ನೇ ಶತಮಾನದ ಮುಘಲ್ ಚಿಕಣಿ ಚಿತ್ರ; ಗುಯಿಮೆ ವಸ್ತುಸಂಗ್ರಹಾಲಯ, ಪ್ಯಾರಿಸ್‍ನಲ್ಲಿ.

ಫಾಲ್ಗುಣ ಮಾಸವು ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಹನ್ನೆರಡನೇ ಮಾಸ. ಸೂರ್ಯ ಕುಂಭ ರಾಶಿಯಲ್ಲಿರುವಾಗ ಬರುವ ಅಮಾವಾಸ್ಯೆಯ ಮಾರನೆಯ ದಿನದಿಂದ ಈ ಮಾಸ ಪ್ರಾರಂಭವಾಗಿ ಮೀನಮಾಸದ ಅಮಾವಾಸ್ಯೆಯಂದು ಪೂರ್ತಿಯಾಗುತ್ತದೆ. ಕುಂಭ ಮತ್ತು ಮೀನ ಈ ಎರಡು ಮಾಸಗಳಲ್ಲಿ ಬರುವ ಅಮಾವಾಸ್ಯೆಗಳ ಮಧ್ಯವರ್ತಿಯ ಕಾಲವೇ ಫಾಲ್ಗುಣ ಮಾಸ. ಶಿಶಿರ ಋತುವಿನ ಮಾಸಗಳಲ್ಲಿ ಇದು ಎರಡನೆಯದು. ಭಾರತ ಸರ್ಕಾರದ ಸಾಯನಸೌರಮಾಸ ಗಣನಾ ಪದ್ಧತಿಯಂತೆ ಈ ತಿಂಗಳಿಗೆ ಮಧು ಎಂದು ಹೆಸರು. ಮಧು ಮಾಸ ಫೆಬ್ರವರಿ 13ನೆಯ ತಾರೀಕು ಪ್ರಾರಂಭವಾಗಿ ಮಾರ್ಚ್ 13 ಅಥವಾ 14 ನೆಯ ತಾರೀಕು ಮುಗಿಯುತ್ತದೆ.[೧] ಈ ಮಾಸದ ಅಮಾವಾಸ್ಯೆಯಂದು ಚಾಂದ್ರಮಾನ ವರ್ಷ ಮುಕ್ತಾಯವಾಗುತ್ತದೆ. ಸಾಮಾನ್ಯವಾಗಿ ಈ ತಿಂಗಳಿನ ಹುಣ್ಣಿಮೆಯ ದಿವಸ ಫಲ್ಗುನೀ ನಕ್ಷತ್ರ ಸೇರುವುದರಿಂದ ಇದನ್ನು ಫಲ್ಗುನ ಎಂದು ಕರೆಯುವುದು ರೂಢಿಗೆ ಬಂದಿದೆ. ಪೂರ್ವ ಫಲ್ಗುನೀ (ಪುಬ್ಬು), ಉತ್ತರ ಫಲ್ಗುನೀ (ಉತ್ತರಾ) ಈ ಎರಡು ನಕ್ಷತ್ರಗಳಲ್ಲೊಂದು ಅಥವಾ ಇವುಗಳ ಹಿಂದುಮುಂದಿನ ನಕ್ಷತ್ರಗಳಲ್ಲೊಂದು ಈ ಹುಣ್ಣಿಮೆಯಂದು ಸೇರುತ್ತದೆ. ಈ ತಿಂಗಳಿನ ಕೃಷ್ಣಪಕ್ಷದ ಅಷ್ಟಮೀ ದಿವಸ ಮಾಡುವ ಅಷ್ಟಕಾಶ್ರಾದ್ಧವೇ ವರ್ಷಾಂತ್ಯದ ಅಷ್ಟಕಾಶ್ರಾದ್ಧ. ಹೋಳಿ ಹಬ್ಬ ಬರುವುದು ಈ ತಿಂಗಳಿನ ಹುಣ್ಣಿಮೆಯ ದಿವಸ. ಶ್ರೀರಾಮಕೃಷ್ಣ ಪರಮಹಂಸರು ಹುಟ್ಟಿದುದು ಈ ತಿಂಗಳಿನ ಶುಕ್ಲಪಕ್ಷದ ದ್ವಿತೀಯಾ ತಿಥಿಯ ದಿವಸ. ಈ ಮಾಸದಲ್ಲಿ ಹಲವಾರು ಕಡೆ ಪ್ರಸಿದ್ಧ ಜಾತ್ರೆ ಮತ್ತು ರಥೋತ್ಸವಗಳು ನಡೆಯುತ್ತವೆ.

ಈ ಮಾಸದ ಪ್ರಮುಖ ಹಬ್ಬಗಳು

[ಬದಲಾಯಿಸಿ]
  • ಆಮಲಕೀ ಏಕಾದಶಿ (ಶುಕ್ಲ ಏಕಾದಶಿ)
  • ಹೋಲಿಕಾ ದಹನ (ಶುಕ್ಲ ಚತುರ್ದಶಿ)
  • ಹೋಳಿ, ತಿರುಪತಿಯಲ್ಲಿ ತೆಪ್ಪೋತ್ಸವ (ಹುಣ್ಣಿಮೆ)
  • ರಂಗ ಪಂಚಮಿ (ಕೃಷ್ಣ ಪಂಚಮಿ)
  • ಪಾಪಮೊಚನಿ ಏಕಾದಶಿ (ಕೃಷ್ಣ ಏಕಾದಶಿ)
  • ಯುಗಾದಿ ಅಮಾಮಸ್ಯ (ಅಮಾವಾಸ್ಯ)

ಉಲ್ಲೇಖಗಳು

[ಬದಲಾಯಿಸಿ]
  1. Henderson, Helene. (Ed.) (2005) Holidays, festivals, and celebrations of the world dictionary Third edition. Electronic edition. Detroit: Omnigraphics, p. xxix. ISBN 0-7808-0982-3
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:


ಚಾಂದ್ರಮಾನ ಮಾಸಗಳು
ಚೈತ್ರವೈಶಾಖಜ್ಯೇಷ್ಠಆಷಾಢಶ್ರಾವಣಭಾದ್ರಪದಆಶ್ವಯುಜಕಾರ್ತಿಕಮಾರ್ಗಶಿರಪುಷ್ಯಮಾಘಫಾಲ್ಗುಣ