ಕಪ್ಪು ತಲೆಯ ಮುನಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Bot: Migrating 15 interwiki links, now provided by Wikidata on d:q478632 (translate me)
೩೮ ನೇ ಸಾಲು: ೩೮ ನೇ ಸಾಲು:
* ವಿಸ್ಮಯ ವಿಶ್ವ/ಕಪ್ಪು ತಲೆಯ ಮುನಿಯ- http://www.facebook.com/photo.php?fbid=605994466083801 <br>
* ವಿಸ್ಮಯ ವಿಶ್ವ/ಕಪ್ಪು ತಲೆಯ ಮುನಿಯ- http://www.facebook.com/photo.php?fbid=605994466083801 <br>
[[ವರ್ಗ:ಪಕ್ಷಿಗಳು]]
[[ವರ್ಗ:ಪಕ್ಷಿಗಳು]]



[[en:Tricoloured Munia]]
[[de:Schwarzbauchnonne]]
[[es:Lonchura malacca]]
[[eu:Lonchura malacca]]
[[fr:Capucin à dos marron]]
[[id:Bondol rawa]]
[[it:Lonchura malacca]]
[[ml:ആറ്റച്ചെമ്പൻ]]
[[nl:Driekleurennon]]
[[ja:ギンパラ]]
[[pl:Mniszka kapturowa]]
[[pt:Bico-de-chumbo-de-cabeça-preta]]
[[ru:Черноголовая муния]]
[[fi:Kastanjamanikki]]
[[zh:栗腹文鸟]]

೦೧:೧೭, ೩ ಏಪ್ರಿಲ್ ೨೦೧೩ ನಂತೆ ಪರಿಷ್ಕರಣೆ

ಕಪ್ಪು ತಲೆಯ ಮುನಿಯ
From West Bengal, India
Conservation status
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
L. malacca
Binomial name
Lonchura malacca
(Linnaeus, 1766)

ಕಪ್ಪು ತಲೆಯ ಮುನಿಯ (Tricoloured munia), ಗುಬ್ಬಚ್ಚಿ ಬಳಗದ ಈ ಹಕ್ಕಿಗಳು ಆಗ್ನೇಯ ಏಷ್ಯಾ ಮೂಲದ ಪಕ್ಷಿಗಳಾಗಿವೆ. ಇವು Estrildidae ಕುಟುಂಬಕ್ಕೆ ಸೇರಿದ್ದು, ಇವುಗಳ ವೈಜ್ಞಾನಿಕ ಹೆಸರು Lonchura malacca.

ವಿವರಣೆ

ಈ ಹಕ್ಕಿಗಳು ಸುಮಾರು 10 ಸೆಂ.ಮೀ ಉದ್ದ ಬೆಳೆಯುತ್ತವೆ. ಇವುಗಳು ರೆಕ್ಕೆ, ಬೆನ್ನು ಮತ್ತು ಬಾಲದಲ್ಲಿ ಕಂದು ಬಣ್ಣ ಹೊಂದಿರುತ್ತವೆ. ತಲೆ ಮತ್ತು ಕುತ್ತಿಗೆ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಇವುಗಳ ಕಾಲುಗಳು ಬೂದು ಬಣ್ಣದಲ್ಲಿರುತ್ತವೆ. ಈ ಹಕ್ಕಿಗಳು ಧಾನ್ಯವನ್ನು ಒಡೆದು ತಿನ್ನಲು ಅನುಕೂಲವಾಗುವ ಸಧ್ರಡ ಕೊಕ್ಕನ್ನು ಹೊಂದಿವೆ. ಗಂಡು ಮತ್ತು ಹೆಣ್ಣು ಹಕ್ಕಿಗಳು ನೋಡಲು ಒಂದೇ ರೀತಿಯಾಗಿ ಕಾಣುತ್ತವೆ.

ನಡಾವಳಿ ಮತ್ತು ಆಹಾರ

ಕಪ್ಪು ತಲೆ ಮುನಿಯಗಳು ಭತ್ತ, ರಾಗಿ, ಗೋಧಿ ಮುಂತಾದ ಧಾನ್ಯಗಳನ್ನು ತಿನ್ನುತ್ತವೆ. ಇವು ಗದ್ದೆಗಳಿಗೆ ಧಾಳಿ ಇಡುವುದರಿಂದ ರೈತರಿಗೆ ಉಪದ್ರವಕಾರಿಗಳೆಂದು ಪ್ರಸಿದ್ಧವಾಗಿವೆ. ನಾಲೆಯ ನೀರಿನ ಆಧಾರದಲ್ಲಿ ವರ್ಷವಿಡೀ ಧಾನ್ಯಗಳನ್ನು ಬೆಳೆಯುವುದರಿಂದ ಅಲ್ಲೆಲ್ಲ ಇವು ಅಪಾರ ಸಂಖ್ಯೆಯಲ್ಲಿ ವೃದ್ಧಿಯಾಗಿವೆ. ಅಲ್ಲಿ ರಾತ್ರಿ ಮಲಗಲು ಇವು ಸಾಮೂಹಿಕ ಗೂಡುಗಳನ್ನು ರಚಿಸುತ್ತವೆ.

ಸಂತಾನೋತ್ಪತ್ತಿ

ಗುಂಪುಗಳಲ್ಲಿ ವಾಸಿಸುವ ಈ ಹಕ್ಕಿಗಳು ಮುಂಗಾರಿನ ಸಮಯದಲ್ಲಿ ಸಂತಾನೋತ್ಪತ್ತಿ ನಡೆಸುತ್ತವೆ. ಗಿಡಗಳ ಮೇಲೆ ಒಣ ಹುಲ್ಲು ಮತ್ತು ಕಸಗಳನ್ನು ಉಪಯೋಗಿಸಿ ಫುಟ್ಬಾಲ್ ಗಾತ್ರದ, ಟೊಳ್ಳಾದ ಗೂಡು ಕಟ್ಟಿ 4 ರಿಂದ 8 ಮೊಟ್ಟೆಗಳನ್ನಿಡುತ್ತವೆ. ಮೂರನೆಯ ಮೊಟ್ಟೆಯಿಟ್ಟ ತರುವಾಯ ಕಾವು ಕೊಡಲು ಆರಂಭಿಸುತ್ತವೆ. 13 ದಿನ ಕಾವುಕೊಟ್ಟ ನಂತರ ಮೊಟ್ಟೆಯೊಡೆದು ಮರಿಗಳು ಹೊರ ಬರುತ್ತವೆ. ಈ ಮರಿಗಳಿಗೆ ಸಂಪೂರ್ಣವಾಗಿ ಗರಿಗಳು ಮೂಡಲು 21 ರಿಂದ 25 ದಿನಗಳಾಗುತ್ತವೆ.

ಹರಡುವಿಕೆ ಮತ್ತು ಆವಾಸಸ್ಥಾನ

ಕಪ್ಪು ತಲೆಯ ಮುನಿಯಗಳು ಆಗ್ನೇಯ ಏಷ್ಯಾದ ಭಾರತ, ಶ್ರೀಲಂಕಾ, ದಕ್ಷಿಣ ಚೀನಾ, ತೈವಾನ್, ಜಮೈಕಾ, ಪೋರ್ಟೊರಿಕಾ, ಹವಾಯಿ ದ್ವೀಪಗಳು ಮತ್ತು ವೆನಿಜುವೆಲಾಗಳಲ್ಲಿ ಕಂಡುಬರುತ್ತವೆ. ಇವು ಹೆಚ್ಚಿನದಾಗಿ ಹುಲ್ಲುಗಾವಲು, ಕೃಷಿ ಭೂಮಿ ಮತ್ತು ಜೌಗು ಪ್ರದೇಶಗಳೆಡೆ ವಾಸಿಸುತ್ತವೆ.

ಬಾಹ್ಯ ಕೊಂಡಿಗಳು