ಹುಬ್ಬಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2) (Robot: Adding ru:Хубли
೮೯ ನೇ ಸಾಲು: ೮೯ ನೇ ಸಾಲು:
[[pt:Hubli]]
[[pt:Hubli]]
[[ro:Hubli-Dharwad]]
[[ro:Hubli-Dharwad]]
[[ru:Хубли]]
[[sa:हुब्बळ्ळी]]
[[sa:हुब्बळ्ळी]]
[[sr:Хубли-Дарвад]]
[[sr:Хубли-Дарвад]]

೨೦:೪೦, ೨೮ ಫೆಬ್ರವರಿ ೨೦೧೩ ನಂತೆ ಪರಿಷ್ಕರಣೆ

ಹುಬ್ಬಳ್ಳಿ
ಹುಬ್ಬಳ್ಳಿ
Government
 • ಮೇಯರ್ಶ್ರೀಮತಿ ರಾಧಾಬಾಯಿ ಸಫಾರೆ
Population
 (2008)
 • Total೧೫ ಲಕ್ಷ

ಹುಬ್ಬಳ್ಳಿ ಕರ್ನಾಟಕದ ಉತ್ತರ ಭಾಗದಲ್ಲಿರುವ ಪ್ರಮುಖ ವಾಣಿಜ್ಯ ನಗರ. ಬೆಂಗಳೂರು - ಪುಣೆ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ, ಬೆಂಗಳೂರಿನಿಂದ ಸುಮಾರು ೪೧೦ ಕಿ. ಮೀ ಹಾಗೂ ಪುಣೆಯಿಂದ ಸುಮಾರು ೪೩೦ ಕಿ. ಮೀ ಗಳ ದೂರದಲ್ಲಿದೆ. ೨೦೦೧ಭಾರತದ ಜನಗಣತಿಯ ಪ್ರಕಾರ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಜನಸಂಖ್ಯೆ ೭೮೬,೦೧೮.

ಇತಿಹಾಸ

ಹುಬ್ಬಳ್ಳಿಯ ಇತಿಹಾಸವು ರಾಷ್ಟ್ರಕೂಟರ ಕಾಲದಷ್ಟು ಹಿಂದಿನದೆಂದು ಹೇಳಬಹುದು. ಈಗ ಹುಬ್ಬಳ್ಳಿಯೆಂದು ಕರೆಯಲ್ಪಡುವ ಪ್ರದೇಶದಲ್ಲಿ ಸುಮಾರು ಕ್ರಿ.ಶ ೮೦೦ ರ ಸಮಯದಲ್ಲಿ ಜನವಸತಿ ಇದ್ದದ್ದು ಇಲ್ಲಿ ಸಿಕ್ಕಿರುವ ಎರಡು ಶಾಸನಗಳಿಂದ ತಿಳಿದುಬರುತ್ತದೆ. ಈ ಶಾಸನಗಳಲ್ಲಿ ರಾಷ್ಟ್ರಕೂಟ ದೊರೆಗಳಾದ ಮೂರನೆಯ ಇಂದ್ರ (ಕ್ರಿ.ಶ ೯೧೫ - ೯೨೮) ಮತ್ತು ಆಮೋಘವರ್ಷ ಕರ್ಕ(ಕ್ರಿ.ಶ ೯೭೩)ರ ಉಲ್ಲೇಖವಿದೆ. ಇಲ್ಲಿನ ಭವಾನಿಶಂಕರ ಆಲಯವು ಚಾಲುಕ್ಯ ವಾಸ್ತುಶಿಲ್ಪ ಶೈಲಿಯಲ್ಲಿದೆ. ಈ ಆಲಯದಲ್ಲಿ ಸಿಕ್ಕಿರುವ ಶಾಸನದಲ್ಲಿ ಚಾಲುಕ್ಯ ದೊರೆ ಎರಡನೇ ಸೋಮೇಶ್ವರನ(ಕ್ರಿ.ಶ.೧೦೬೮ - ೧೦೭೮) ಉಲ್ಲೇಖವಿದೆ.ಹುಬ್ಬಳ್ಳಿಯ ಸುತ್ತಮುತ್ತಲಿನ ಪುರಾತನ ಜಿನಾಲಯಗಳಲ್ಲಿ ಅನಂತನಾಥ ತೀರ್ಥಂಕರ, ಬ್ರಹ್ಮದೇವ, ಪದ್ಮಾವತಿಯರ ಮೂರ್ತಿಗಳಿವೆ. ಇಲ್ಲಿನ "ಪ್ಯಾಟಿ ಬಾವಿ" ಎಂದು ಕರೆಯಲ್ಪಡುವ ಬಾವಿಯ ಸುತ್ತಮುತ್ತ ಪುರಾತನ ಚಾಲುಕ್ಯ ಆಲಯವೊಂದರ ಅವಶೇಷಗಳಿವೆ. ಈ ಅವಶೇಷಗಳಲ್ಲಿ ಸಿಕ್ಕಿರುವ ಉಲ್ಲೇಖದಿಂದ ಈ ಆಲಯವು ಚಾಲುಕ್ಯ ಚಕ್ರವರ್ತಿ ವಿಕ್ರಮಾದಿತ್ಯನ ಕಾಲದ್ದೆಂದು ತಿಳಿಯುತ್ತದೆ. ಚಾಲುಕ್ಯರ ನಂತರ ಹೊಯ್ಸಳ ರಾಜವಂಶದ ಎರಡನೇ ವೀರಬಲ್ಲಾಳನು ಉತ್ತರ ಕರ್ನಾಟಕವನ್ನು ಜಯಿಸಿದಾಗ ಹುಬ್ಬಳ್ಳಿಯು ಆತನ ಅಧೀನಕ್ಕೆ ಒಳಪಟ್ಟಿತು.ನಂತರ ವಿಜಯನಗರ ಸಾಮ್ರಜ್ಯದ ಕಾಲದಲ್ಲಿ ಹುಬ್ಬಳ್ಳಿ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಪ್ರಸಿದ್ಧಿ ಪಡೆಯಿತು.ಹುಬ್ಬಳ್ಳಿಯಿಂದ ಆರು ಕಿ.ಮೀ ದೂರದ ಸಿರಗುಪ್ಪಿಯೆಂಬ ಹಳ್ಳಿಯಲ್ಲಿ ದೊರೆತಿರುವ ಶಾಸನವೊಂದು ವಿಜಯನಗರ ಸಾಮ್ರಜ್ಯದ ಹೆಸರಾಂತ ಚಕ್ರವರ್ತಿ ಶ್ರೀಕೃಷ್ಣದೇವರಾಯನನ್ನು ಉಲ್ಲೇಖಿಸುತ್ತದೆ. ಈಗಲೂ ಕೆಲವೊಮ್ಮೆ ಹುಬ್ಬಳ್ಳಿಯನ್ನು "ರಾಯರ ಹುಬ್ಬಳ್ಳಿ" ಎಂದು ಜನರು ಕರೆಯುತ್ತಾರೆ. ವಿಜಯನಗರ ಸಾಮ್ರಾಜ್ಯದೊಂದಿಗೆ ವಾಣಿಜ್ಯ ವ್ಯವಹಾರಗಳನ್ನು ಹೊಂದಿದ್ದ ಪೊರ್ತುಗೀಸ್ ವ್ಯಾಪಾರಿಗಳು ಮತ್ತು ಪ್ರವಾಸಿಗರು ತಮ್ಮ ಕ್ರಿ.ಶ ೧೫೪೭ ರಲ್ಲಿ ಬರೆಯಲ್ಪಟ್ಟ ದಾಖಲೆಗಳಲ್ಲಿ ಹುಬ್ಬಳ್ಳಿಯನ್ನು "ಒಬೇಲಿ" ಎಂದು ಕರೆದಿದ್ದಾರೆ. ವಿಜಯನಗರ ಸಾಮ್ರಾಜ್ಯದ ಪತನಾನಂತರ ಹುಬ್ಬಳ್ಳಿಯು ಬಿಜಾಪುರಆದಿಲ್ ಷಾಹಿ ದೊರೆಗಳ ವಶಕ್ಕೆ ಬಂದಿತು. ಹದಿನೇಳನೆಯ ಶತಮಾನದಲ್ಲಿ ಇಲ್ಲಿನ ವಾಣಿಜ್ಯ ವಹಿವಾಟು ಇನ್ನೂ ಬೆಳೆದು ಸಾಕಷ್ಟು ಪ್ರಸಿದ್ಧಿಯನ್ನು ಪಡೆಯಿತು. ಬಹಳಷ್ಟು ಶ್ರೀಮಂತ ವ್ಯಾಪಾರಿಗಳಿಂದ ತುಂಬಿತ್ತು. ಇದರಿಂದ ಆಕರ್ಷಿತರಾದ ಬ್ರಿಟಿಷರು ಇಲ್ಲೊಂದು ಜವಳಿ ಕಾರ್ಖಾನೆಯನ್ನು ತೆರೆದರು. ಈ ಸಮಯದಲ್ಲಿ ಹುಬ್ಬಳ್ಳಿಯ ಸಮೃದ್ಧಿ ಎಷ್ಟಿತ್ತೆಂದರೆ ಮಹಾರಾಷ್ಟ್ರದಿಂದ ಶಿವಾಜಿಯು ಕ್ರಿ.ಶ ೧೬೭೧ ದಲ್ಲಿ ಹುಬ್ಬಳ್ಳಿಯ ಮೇಲೆ ದಂಡೆತ್ತಿ ಬಂದು ಊರನ್ನು ಕೊಳ್ಳೆಹೊಡೆದನು. ಕ್ರಿ.ಶ ೧೬೭೫ ರಲ್ಲಿ ದಿಲ್ಲಿ ಸುಲ್ತಾನ್ ಔರಂಗಜೇಬನು ಹುಬ್ಬಳ್ಳಿಯನ್ನು ತನ್ನ ವಶಕ್ಕೆ ತಂದುಕೊಂಡನು. ನಂತರದ ಸ್ವಲ್ಪಕಾಲ ಹುಬ್ಬಳ್ಳಿಯು ಸವಣೂರಿನ ನವಾಬರ ಹಿಡಿತದಲ್ಲಿತ್ತು. ಕ್ರಿ.ಶ ೧೭೨೭ ರಲ್ಲಿ ಸವಣೂರು ನವಾಬರ ವಂಶಸ್ಥನಾದ ಅಬ್ದುಲ್ ಮಜೀದ್ ಖಾನ್ ಹಳೇ ಹುಬ್ಬಳ್ಳಿಯ ಪಕ್ಕದಲ್ಲಿ ಇನ್ನೊಂದು ಜನವಸತಿ ಪ್ರದೇಶವನ್ನು ಸ್ಥಾಪಿಸಿದನು. ಆತನ ನೆನಪಿಗಾಗಿ ಈಗಲೂ ಆ ಭಾಗವನ್ನು "ಮಜೀದ್ ಪುರ" ಎಂದು ಕರೆಯಲಾಗುತ್ತದೆ. ನಂತರ ಮಾಧವ ರಾವ್ ಪೇಶ್ವೆಯ ಕಾಲದಲ್ಲಿ ಹುಬ್ಬಳ್ಳಿಯು ಮರಾಠರ ವಶಕ್ಕೆ ಹೋಯಿತು. ಕ್ರಿ.ಶ ೧೮೧೮ ರಲ್ಲಿ ಆಗಿಹೋದ ಮೂರನೆಯ ಬ್ರಿಟಿಷ್-ಮರಾಠಾ ಯುದ್ಧ ದಲ್ಲಿ, ಬ್ರಿಟಿಷರು ಜನೆರಲ್ ಮನ್ರೋ ಎಂಬುವನ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲೇ ಕ್ಯಾಂಪ್ ಹಾಕಿದ್ದರು. ಆ ಸಮಯದಲ್ಲಿ ಕೆಲವು ನೂರು ಬ್ರಿಟಿಷ್ ಸೈನಿಕರು ಕಾಲರಾ ವ್ಯಾಧಿಯಿಂದ ಸತ್ತರು. ಆ ಸೈನಿಕರ ಸಮಾಧಿಗಳನ್ನು ಈಗಲೂ ಹುಬ್ಬಳ್ಳಿಯ ಅಹೋಬಲಪುರದಲ್ಲಿ ಕಾಣಬಹುದು. ಮೂರನೆಯ ಬ್ರಿಟಿಷ್-ಮರಾಠಾ ಯುಧ್ಧದಲ್ಲಿ ಮರಾಠರು ಸೋತ ಪರಿಣಾಮವಾಗಿ ಹುಬ್ಬಳ್ಳಿಯು ಬ್ರಿಟಿಷರ ವಶಕ್ಕೆ ಬಂದಿತು ಮತ್ತು ಬ್ರಿಟಿಷ್ ಇಂಡಿಯಾದ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಯಿತು. ಭಾರತದ ಸ್ವಾತಂತ್ರ್ಯಾನಂತರವೂ ಬಾಂಬೆ ರಾಜ್ಯದ ಭಾಗವಾಗಿತ್ತು. ನಂತರ ೧೯೫೭ ರ ಕರ್ನಾಟಕ ಏಕೀಕರಣದ ಫಲವಾಗಿ ಕರ್ನಾಟಕ ರಾಜ್ಯದ ಭಾಗವಾಗಿ ಸೇರ್ಪಡೆಯಾಯಿತು.

ಕೃಷಿ

ಹುಬ್ಬಳ್ಳಿ-ಧಾರವಾಡ ನಗರಗಳು, ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎರಡನೇಯ ದೊಡ್ಡ ನಗರವಾಗಿದೆ. ಹುಬ್ಬಳ್ಳಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮೆಣಸಿನಕಾಯಿ (ಬ್ಯಾಡಗಿ), ಹತ್ತಿ ಮತ್ತು ಶೇಂಗಾ ಬೆಳೆಗಳು ವ್ಯಾಪಕವಾಗಿ ಬೆಳೆಯಲ್ಪಡುತ್ತವೆ. ಇವುಗಳಿಗೆ ಹುಬ್ಬಳ್ಳಿ ದೊಡ್ಡ ಮಾರುಕಟ್ಟೆಯಾಗಿದೆ. ಅಮರಗೋಳದ ಹತ್ತಿರವಿರುವ ಶ್ರೀ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯು ಭಾರತದಲ್ಲಿಯೆ ಅತಿ ದೊಡ್ಡ ಮಾರುಕಟ್ಟೆ ಪ್ರಾಂಗಣವನ್ನು ಹೊಂದಿದೆ.

ರೈಲ್ವೆ

ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಮುಖ್ಯ ಕಚೇರಿಯಿದೆ ಹಾಗೂ ಒಂದು ಶತಮಾನಕ್ಕೂ ಹಳೆಯದಾದ ರೈಲ್ವೆ ಕಾರ್ಯಾಗಾರವನ್ನು ಹೊಂದಿದೆ. ಅಮೇರಿಕಜನರಲ್ ಮೋಟರ್ಸ್ ಕಂಪನಿಯಿಂದ ಆಮದು ಮಾಡಿಕೊಂಡಿರುವ ರೈಲ್ವೆ ಇಂಜಿನ್ನುಗಳ ನಿರ್ವಹಣೆ ಮತ್ತು ದುರಸ್ತಿಯ ಅತ್ಯಾಧುನಿಕ ಕಾರ್ಯಾಗಾರವನ್ನು ಸಹ ಹೊಂದಿದೆ.

ಕೈಗಾರಿಕೆ

ಹುಬ್ಬಳ್ಳಿಯು ಮುಖ್ಯವಾದ ಕೈಗಾರಿಕಾ ಕೇಂದ್ರವಾಗಿದೆ. ಕಿರ್ಲೋಸ್ಕರ ಎಲೆಕ್ಟ್ರಿಕ್ ಕಂಪನಿ, ಬಿಡಿಕೆ, ಕೆ ಎಮ್ ಎಫ್ ಮತ್ತು ಎನ್ ಜಿ ಈ ಎಫ್ ಇವುಗಳು ಇಲ್ಲಿರುವ ಕೆಲವು ಪ್ರಮುಖ ಉದ್ದಿಮೆಗಳಾಗಿವೆ. ತಾರಿಹಾಳ, ಗೋಕುಲ ರಸ್ತೆ ಮತ್ತು ರಾಯಾಪುರದಲ್ಲಿರುವ ಉದ್ದಿಮೆ ವಸಾಹತಿನಲ್ಲಿ ಸುಮಾರು ೧೦೦೦ಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿವೆ.

ಜೂನ್ ೨೦೦೬ರಲ್ಲಿ ನಡೆದ ಐಟಿ ಮೇಳದ ಪರಿಣಾಮವಾಗಿ ಭಾರತದ ಕೆಲವು ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕಂಪನಿಗಳಾದ ಟಿ. ಸಿ. ಎಸ್., ಇನ್ಫೋಸಿಸ್ ಮತ್ತು ಇನ್ನು ಅನೇಕರು ಹುಬ್ಬಳ್ಳಿ ಧಾರವಾಡದಲ್ಲಿ ತಮ್ಮ ಕಂಪನಿಯ ಶಾಖೆಗಳನ್ನು ತೆರೆಯುವ ಭರವಸೆ ನೀಡಿದ್ದಾರೆ.

ಧಾರ್ಮಿಕ

ಹುಬ್ಬಳ್ಳಿಯಲ್ಲಿ ಅನೇಕ ಮಠಗಳಿದ್ದು ಅವುಗಳಲ್ಲಿ ಮೂರುಸಾವಿರ ಮಠ, ಸಿದ್ಧಾರೂಢ ಮಠ ಕರ್ನಾಟಕದಾದ್ಯಂತ ಪ್ರಸಿದ್ಧವಾಗಿವೆ.ಹೊಸ ಹುಬ್ಬಳ್ಳಿಯ ಕಿಲ್ಲೆಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠ, ಜಗದ್ಗುರು ಶಂಕರಾಚಾರ್ಯರ ಮಠ, ಹಳೇ ಹುಬ್ಬಳ್ಳಿಯ ಶ್ರೀ ಕೃಷ್ಣೇಂದ್ರ ಸ್ವಾಮಿಗಳ ಮಠ ಮತ್ತು ಶ್ರೀ ಸತ್ಯಭೋಧ ಸ್ವಾಮಿಗಳ ಮಠಗಳು ಅನೇಕ ಭಕ್ತರನ್ನು ಆಕರ್ಷಿಸುತ್ತಿವೆ. ಹುಬ್ಬಳ್ಳಿಯಲ್ಲಿ ಕಳೆದ ಒಂದು ಶತಮಾನದಿಂದ ಸಾರ್ವಜನಿಕ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷವೂ ಗಣೇಶನ ವಿವಿಧ ಭಂಗಿಯ ಮೂರ್ತಿಗಳನ್ನು ಸಾರ್ವಜನಿಕ ಮಂಡಳಿಗಳು ಪ್ರತಿಷ್ಟಾಪಿಸುತ್ತವೆ. ಈ ಗಣೇಶನ ವಿಗ್ರಹಗಳನ್ನು ವೀಕ್ಷಿಸಲು ಸುತ್ತಲಿನ ಊರುಗಳಿಂದ ಅನೇಕ ಜನರು ಬರುತ್ತಾರೆ.

ಶೈಕ್ಷಣಿಕ

ಹುಬ್ಬಳ್ಳಿ ನಗರದಲ್ಲಿ ಅನೇಕ ಹೆಸರಾಂತ ವಿದ್ಯಾಲಯ ಹಾಗೂ ಮಹಾವಿದ್ಯಾಲಯಗಳಿವೆ. ನಗರದಲ್ಲಿ ಎರಡು ಅಭಿಯಾಂತ್ರಿಕ ಮಹಾವಿದ್ಯಾಲಯಗಳು, ಒಂದು ವೈದ್ಯಕೀಯ ಮಹಾವಿದ್ಯಾಲಯ, ಆಯುರ್ವೇದ ಮಹಾವಿದ್ಯಾಲಯಗಳಿವೆ. ಬಿ.ವಿ. ಭೂಮರಡ್ಡಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯವು ಕರ್ನಾಟಕದಲ್ಲಿರುವ ಹಳೆಯ ಅಭಿಯಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಒಂದು, ಇದನ್ನು ೧೯೪೭ರಲ್ಲಿ ಶ್ರೀ ಬಸಪ್ಪ ವೀರಪ್ಪ ಭೂಮರಡ್ಡಿಯವರ ದಾನದ ಸಹಾಯದಿಂದ ಸ್ಥಾಪಿಸಲಾಯಿತು. ಈ ವಿದ್ಯಾಲಯವು, ಶ್ರೀಮತಿ ಸುಧಾ ಮೂರ್ತಿ ಸೇರಿದಂತೆ, ಅನೇಕ ಪತಿಭಾವಂತ ಅಭಿಯಂತರರನು ತಯಾರು ಮಾಡಿ ದೇಶಕ್ಕೆ ಸಮರ್ಪಿಸಿದೆ. ಶ್ರೀ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯವು ಕೂಡ ೧೯೪೭ರಲ್ಲಿ ಪ್ರಾರಂಭವಾಗಿದ್ದು, ವಾಣಿಜ್ಯ ಕ್ಷೇತ್ರದಲ್ಲಿ ಮುಂದುವರೆಯುವವರಿಗೆ ಒಳ್ಳೆಯ ಮಾರ್ಗದರ್ಶನ ಕೇಂದ್ರವಾಗಿದೆ. ಕರ್ನಾಟಕ ಸರಕಾರದ 'ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಸಂಸ್ಥೆ' ೪೦ ವರ್ಷಕ್ಕೂ ಹಳೆಯದಾದ ವೈದ್ಯಕೀಯ ವಿದ್ಯಾಲಯವಾಗಿದ್ದು, ಅನೇಕ ಪ್ರತಿಭಾವಂತ ವೈದ್ಯರು ಇಲ್ಲಿಂದ ವಿದ್ಯೆ ಪಡೆದು ರೋಗಿಗಳ ಶೂಶ್ರುಷೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಮತ್ತು ರಾಷ್ಟ್ರ ಮತ್ತು ಅಂತಾರಾಷ್ಟೀಯ ಮಟ್ಟ್ದಲ್ಲಿ ಹೆಸರು ಮಾಡಿದ್ದಾರೆ. ಹಳೇ ಹುಬ್ಬಳ್ಳಿಯಲ್ಲಿರುವ 'ನ್ಯೂ ಇಂಗ್ಲೀಷ ಶಾಲೆ'ಯು ೨೦೦೮ರಲ್ಲಿ ತನ್ನ ಶತಮಾನೋತ್ಸವವನ್ನು ಆಚರಿಸಿಕೊಂಡಿತು.

ಖಾದ್ಯ

ಧಾರವಾಡ ಪೇಢೆ ಹುಬ್ಬಳ್ಳಿ-ಧಾರವಾಡಗಳಲ್ಲಿ ಧಾರವಾಡ ಪೇಢೆಯು ಪ್ರಸಿದ್ಧವಾದ ಸಿಹಿ ತಿಂಡಿಯಾಗಿದೆ. ಈ ಸಿಹಿಯು ದೇಶಾದ್ಯಂತ ಪ್ರಸಿದ್ಧವಾಗಿದೆ. ಹುಬ್ಬಳ್ಳಿಯಲ್ಲಿ ಈ ಸಿಹಿಯು ಉತ್ತಮ ದರ್ಜೆಯಲ್ಲಿ ಠಾಕೂರರ ಪೇಢೆ ಅಂಗಡಿಯಲ್ಲಿ, ಮಿಶ್ರಾರವರ ಸಿಹಿ ಅಂಗಡಿಯಲ್ಲಿ ಮತ್ತು ಭಿಲ್ಲೆಯವರ ಅಂಗಡಿಯಲ್ಲಿ ದೊರೆಯುತ್ತದೆ.

ಧಾರವಾಡ ಪೇಢೆ

ಬಾಹ್ಯ ಸಂಪರ್ಕ