ಲೀಲಾ ಓಂಚೇರಿ
ಲೀಲಾ ಓಂಚೇರಿ | |
---|---|
ಜನನ | ೧೯೨೯ ತಿರುವತ್ತರ್, ಕನ್ಯಾಕುಮಾರಿ , ಭಾರತ |
ವೃತ್ತಿ(ಗಳು) | ಗಾಯಕಿ, ಸಂಗೀತಶಾಸ್ತ್ರಜ್ಞೆ, ಬರಹಗಾರ್ತಿ |
ಸಂಗಾತಿ | ಓಂಚೇರಿ ಎನ್. ಎನ್. ಪಿಲ್ಲೈ |
ಪ್ರಶಸ್ತಿಗಳು | ಪದ್ಮಶ್ರೀ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮರುನಾಡನ್ ಮಲಯಾಳಿ ಪ್ರಶಸ್ತಿ ಸಹ – ಕೇರಳ ಸಂಗೀತ ನಾಟಕ ಅಕಾಡೆಮಿ ಸಂಗೀತ ಕುಲಪತಿ ಸಂಗೀತ ಕೊವಿಡಾ ಕಲಾಚಾರ್ಯ ಸಂಗೀತ ಸಾರ್ವ ಭೌಮ |
ಜಾಲತಾಣ | http://leelaomchery.org |
ಲೀಲಾ ಓಂಚೇರಿ ಯವರು ಶಾಸ್ತ್ರೀಯ ಗಾಯಕಿ, ಸಂಗೀತಶಾಸ್ತ್ರಜ್ಞರು ಮತ್ತು ಬರಹಗಾರ್ತಿ.[೧]ಅವರು ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಸಂಗೀತಕ್ಕೆ ನೀಡಿದ ಕೊಡುಗೆಗಳಿಗಾಗಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಆರಂಭಿಕ ಜೀವನ
[ಬದಲಾಯಿಸಿ]ಲೀಲಾ ಓಂಚೇರಿಯವರು ಜನಿಸಿದ್ದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ತಿರುವತ್ತರ್ ನಲ್ಲಿ.[೨]ಅವರ ತಂದೆ ಕಮುಕಾರ ಪರಮೇಶ್ವರ ಕುರುಪ್ಪು ಹಾಗೂ ಅವರ ತಾಯಿ ಲಕ್ಷ್ಮೀ ಕುಟ್ಟಿ ಅಮ್ಮ. ಅವರು ತಮ್ಮ ಕಿರಿಯ ಸಹೋದರ, ದಿವಂಗತ ಕಮುಕಾರ ಪುರುಷೋಥಮನ್ ರವರ ಜೊತೆ ಚಿಕ್ಕ ವಯಸ್ಸಿನಲ್ಲಿಯೇ, ಕರ್ನಾಟಕ ಸಂಗೀತ ಗುರು ತಿರುವತ್ತರ್ ಆರುಮುಘಮ್ ಪಿಲ್ಲೈ ಭಾಗವಥರ್ ರವರ ಬಳಿ ಸಂಗೀತ ಕಲಿಯಲು ಪ್ರಾರಂಭ ಮಾಡಿದ್ದರು.ಅವರ ಕಿರಿಯ ಸಹೋದರ ಮಲಯಾಳಂನ ಪ್ರಸಿದ್ದ ಶಾಸ್ತ್ರೀಯ ಮತ್ತು ಹಿನ್ನೆಲೆ ಗಾಯಕರಾಗಿದ್ದರು. ಸಂಗೀತಕಾರರ ಕುಟುಂಬದಿಂದ ಬಂದ ಲೀಲಾರವರು ತಮ್ಮ ಅಜ್ಜಿ ಮತ್ತು ತಾಯಿಯ ಮಾರ್ಗದರ್ಶನದಲ್ಲಿ ತಮ್ಮ ಸಂಗೀತ ಪ್ರತಿಭೆಯನ್ನು ಅಭಿವೃದ್ಧಿಗೊಳಿಸುವ ಅವಕಾಶವನ್ನು ಹೊಂದಿದ್ದರು.ಕನ್ಯಾಕುಮಾರಿಯಲ್ಲಿ ಶಾಲಾ ಶಿಕ್ಷಣ ಮುಗಿಸಿದ ನಂತರ, ತಿರುವನಂತಪುರ ಮಹಿಳಾ ಕಾಲೇಜಿನಿಂದ ಕರ್ನಾಟಕ ಸಂಗೀತದಲ್ಲಿ ಪದವಿ ಪಡೆದುಕೊಂಡರು.ನಂತರ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಹಿಂದೂಸ್ಥಾನಿ ಸಂಗೀತದಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿ ಮತ್ತೊಂದು ಪದವಿಯನ್ನು ಪಡೆದುಕೊಂಡರು. ಅವರ ಸ್ನಾತಕೋತ್ತರ ಪದವಿ ಮೀರತ್ ವಿಶ್ವವಿದ್ಯಾಲಯದಿಂದ ಬಂದಿದ್ದು, ದೆಹಲಿ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಪಿಎಚ್.ಡಿ ಯನ್ನೂ ಪಡೆದುಕೊಂಡಿದ್ದಾರೆ.
ವೃತ್ತಿ ಜೀವನ
[ಬದಲಾಯಿಸಿ]ಲೀಲಾ ಓಂಚೇರಿಯವರು ಕೇರಳದ ತಿರುವನಂತಪುರಂನ 'ಕಮುಕಾರ ಸ್ಕೂಲ್ ಆಫ್ ಮ್ಯೂಸಿಕ್, ಡ್ಯಾನ್ಸ್ ಅಂಡ್ ರಿಸರ್ಚ್ ಸ್ಟಡೀಸ್' ನಲ್ಲಿ, ಪ್ರಾಧ್ಯಾಪಕರಾಗಿ ಮತ್ತು ದೆಹಲಿಯ 'ತ್ರಿಕಾಲಾ ಗುರುಕುಲಂ'ನ ಪ್ರಾಧ್ಯಾಪಕರಾಗಿ ಹಾಗೂ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.[೩]ಅವರು 'ದಕ್ಷಿಣ ಭಾರತಿ'(ದಕ್ಷಿಣ ಭಾರತದ ಮಹಿಳಾ ಸಂಸ್ಥೆ) ಮತ್ತು ದೆಹಲಿಯ ಸ್ವರಾಲಯದ ಉಪಾಧ್ಯಕ್ಷೆ.ಅಲ್ಲದೇ ಅವರು ಎಐರ್, ದೂರದರ್ಶನ್, ಐಸಿಸಿಆರ್, ಐಜಿಎನ್ಸಿಎ, ಎಸ್ಎನ್ಎ (ದೆಹಲಿ), ಮಿನಿಸ್ಟ್ರಿ ಆಫ್ ಕಲ್ಚರ್ ಮತ್ತು ಐಜಿಎನ್ಒಯು ನಂತಹ ಮಂಡಳಿಗಳ ಸದಸ್ಯೆಯಾಗಿದ್ದಾರೆ.೧೯೬೪ ರಿಂದ ೧೯೯೪ ರವರೆಗೆ ಲೀಲಾರವರು ದೆಹಲಿ ವಿಶ್ವವಿದ್ಯಾನಿಲಯದ ಕರ್ನಾಟಕ ಸಂಗೀತ ವಿಭಾಗ, ಫ್ಯಾಕಲ್ಟಿ ಆಫ್ ಮ್ಯೂಸಿಕ್ ಅಂಡ್ ಫೈನ್ ಆರ್ಟ್ಸ್ ನ ಸಹಾಯಕ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.ಹಾಗೆಯೇ ೧೯೭೫ ರಿಂದ ೧೯೯೪ ರವರೆಗೆ ಇಂಡಿಯನ್ ಮ್ಯೂಸಿಕ್ ಜರ್ನಲ್, ವಾಗೀಶ್ವರಿಯ ಸಂಪಾದಕೀಯ ಸಿಬ್ಬಂದಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ವೈಯಕ್ತಿಕ ಜೀವನ
[ಬದಲಾಯಿಸಿ]ಲೀಲಾರವರು ಪ್ರಸಿದ್ಧ ಬರಹಗಾರ ಓಂಚೇರಿ ಎನ್.ಎನ್.ಪಿಲ್ಲೈ ರವರನ್ನು ವಿವಾಹವಾಗಿದ್ದಾರೆ[೪] ಮತ್ತು ನವದೆಹಲಿಯಲ್ಲಿ ವಾಸಿಸುತ್ತಿದ್ದಾರೆ.ದಂಪತಿಗೆ, ಎಸ್.ಡಿ.ಓಂಚೇರಿ ಮತ್ತು ದೀಪ್ತಿ ಓಂಚೇರಿ ಭಲ್ಲಾ[೫] ಎಂಬ ಇಬ್ಬರು ಮಕ್ಕಳಿದ್ದಾರೆ.ಲೀಲಾರವರು ಕೆಲವು ಸಣ್ಣ ಕಥೆಗಳನ್ನು ಸಹ ಬರೆದಿದ್ದಾರೆ.
ಕೃತಿಗಳು
[ಬದಲಾಯಿಸಿ]ಆಂಗ್ಲ
[ಬದಲಾಯಿಸಿ]ಶೀರ್ಷಿಕೆ | ಪ್ರಕಾಶಕರು | ವರ್ಷ |
---|---|---|
ಇಂಡಿಯನ್ ಮ್ಯೂಸಿಕ್ ಅಂಡ್ ಅಲ್ಲೈಡ್ ಆರ್ಟ್ಸ್ (೫ ಸಂಪುಟಗಳು)[೬] | ಸಂದೀಪ್ ಪ್ರಕಾಶನ್, ದೆಹಲಿ | ೧೯೯೦ |
ಗ್ಲೀನಿಂಗ್ಸ್ ಇನ್ ಇಂಡಿಯನ್ ಮ್ಯೂಸಿಕ್ [೭] | ಸಂದೀಪ್ ಪ್ರಕಾಶನ್, ದೆಹಲಿ | ೧೯೯೧ |
ಇಮ್ಮೋರ್ಟಲ್ಸ್ ಆಫ್ ಇಂಡಿಯನ್ ಮ್ಯೂಸಿಕ್ | ಗ್ಯಾನ್ ಬುಕ್ಸ್, ದೆಹಲಿ | ೧೯೯೮ |
ಮಲಯಾಳಂ
[ಬದಲಾಯಿಸಿ]ಶೀರ್ಷಿಕೆ | ಪ್ರಕಾಶಕರು | ವರ್ಷ |
---|---|---|
ಅಭಿನಯ ಸಂಗೀತಂ | ಭಾಷಾ ಇನ್ಸ್ಟಿಟ್ಯೂಟ್, ಕೇರಳ | ೧೯೮೧ |
ಪಾದವುಮ್ ಪದವುಮ್ | ಡಿ.ಸಿ. ಬುಕ್ಸ್, ಕೇರಳ | |
ಕೇರಳತಿಲೆ ಲಾಸ್ಯ ರಚನಕಲ್ | ಡಿ.ಸಿ. ಬುಕ್ಸ್, ಕೇರಳ | ೨೦೦೩ |
ಚಿನಕ್ಕರ ಕೂತು ಪಾಟ್ಟುಕಲ್ | ಮುದ್ರಾ ಬುಕ್ಸ್, ದೆಹಲಿ | ೨೦೦೮ |
ಲೀಲಾ ಓಂಚೇರಿಯುಡೆ ಪತಂಗಲ್ | ಪೂರ್ಣ ಬುಕ್ಸ್, ಕೇರಳ | ೨೦೦೯ |
ಕರುಣ ಚೆಯ್ವನೆಂತು ತಮ್ಸಮ್ ಕೃಷ್ಣ | ಡಿ.ಸಿ. ಬುಕ್ಸ್, ಕೇರಳ | ೨೦೧೧ |
ವೆಟ್ಟಮ್ ಮಂಗಿಯ ಕೊವಿಲ್ ಪಾಟ್ಟುಕಲ್ | ಪೂರ್ಣ ಬುಕ್ಸ್, ಕೇರಳ |
ಇತರ ವಿಷಯಗಳ ಕುರಿತು
[ಬದಲಾಯಿಸಿ]- ಲೀಲಾಂಜಲಿ (ಸಣ್ಣ ಕಥೆಗಳು)
- ಜೀವಿತಂ (ನಾಟಕ)
- ಪಾರ್ಥಿವನ್ ಕಣವು– ತಮಿಳಿನಿಂದ ಅನುವಾದ
- ಕಥಾ ಭಾರತಿ – ತಮಿಳಿನಿಂದ ಅನುವಾದ
- ಆಹಾರವುಮ್ ಆರೋಗ್ಯವುಮ್
ಪ್ರಶಸ್ತಿಗಳು ಮತ್ತು ಮಾನ್ಯತೆಗಳು
[ಬದಲಾಯಿಸಿ]- ೨೦೦೯ ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ.[೮]
- ಸಾಂಪ್ರದಾಯಿಕ ಸಂಗೀತ (ಸೊಪಾನ ಸಂಗೀತಂ) ಮತ್ತು ೨೦೦೩ ರಲ್ಲಿ ಕೇರಳದ ಜನಪ್ರಿಯ ಸಂಗೀತಕ್ಕೆ ನೀಡಿದ ಕೊಡುಗೆಗಾಗಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ.[೯]
- ೨೦೦೮ ರಲ್ಲಿ ದೆಹಲಿಯ ಸಾಂಪ್ರದಾಯಿಕ ಸಂಗೀತ ಮತ್ತು ಕಲಾ ಕ್ಷೇತ್ರದಲ್ಲಿ ಶ್ರೇಷ್ಠತೆಗಾಗಿ, ಮರುನಾಡನ್ ಮಲಯಾಳಿ ಪ್ರಶಸ್ತಿ.
- ಸಹವರ್ತಿ-೧೯೯೧ ರಲ್ಲಿ ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ.
- ೨೦೦೩ ರಲ್ಲಿ ಕೇರಳದ ಕಲಾದರ್ಪ್ಪಣಂ ನಿಂದ ಸಂಗೀತ ಕುಲಪತಿ.
- ೨೦೦೩ ರಲ್ಲಿ ದೆಹಲಿಯ ಗಾಯತ್ರಿ ಫೈನ್ ಆರ್ಟ್ಸ್ ನ ಸಂಗೀತ್ ಕೋವಿಡಾ.
- ೧೯೯೦ ರಲ್ಲಿ ಕೇರಳದ ಅಖಿಲಾ ಕೇರಳ ಮಾರಾರ್ ಮಹಾ ಸಭೆಯಿಂದ ಕಲಾಚಾರ್ಯ.
- ೨೦೦೬ ರಲ್ಲಿ ದೆಹಲಿಯ ಆಸ್ತಿಕಾ ಸಮಾಜ್ ನ ಸಾರ್ವ ಭೌಮ.
- ೨೦೦೬ ರಲ್ಲಿ ಪಂಚವಾದ್ಯ ಟ್ರಸ್ಟ್ ನಿಂದ ಸಂಗೀತ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಗಳಿಗಾಗಿ ಪ್ರಶಸ್ತಿ.
- ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ (ಐಸಿಎಚ್ಆರ್), ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ), ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ ಅಂಡ್ ಕಲ್ಚರ್ (ಐಜಿಎನ್ಸಿಎ), ಎಸ್ಎನ್ಎ (ದೆಹಲಿ) ಯಂತಹ ವಿವಿಧ ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಗಳಿಂದ ಫೆಲೋಶಿಪ್ಗಳು.
ಉಲ್ಲೇಖಗಳು
[ಬದಲಾಯಿಸಿ]- ↑ https://www.veethi.com/india-people/leela_omchery-profile-8144-24.htm
- ↑ "ಆರ್ಕೈವ್ ನಕಲು". Archived from the original on 2020-03-20. Retrieved 2020-03-20.
- ↑ https://www.schoolandcollegelistings.com/IN/Delhi/1410674019214472/Trikalaa-Gurukulam
- ↑ https://www.indiancurrents.org/detailedarticle.php?d=2499
- ↑ "ಆರ್ಕೈವ್ ನಕಲು". Archived from the original on 2020-09-19. Retrieved 2020-03-20.
- ↑ "ಆರ್ಕೈವ್ ನಕಲು". Archived from the original on 2020-03-20. Retrieved 2020-03-20.
- ↑ "ಆರ್ಕೈವ್ ನಕಲು". Archived from the original on 2020-03-20. Retrieved 2020-03-20.
- ↑ https://zeenews.india.com/entertainment/celebrity/padma-awardees-in-the-field-of-art-and-literature_21609.html
- ↑ https://www.indianetzone.com/40/sangeet_natak_akademi_award_puppetry.htm