ವಿಷಯಕ್ಕೆ ಹೋಗು

ಭಾರತದ ರಾಷ್ಟ್ರೀಯ ಚಿಹ್ನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತದ ರಾಷ್ಟ್ರೀಯ ಚಿಹ್ನೆ
Armigerಭಾರತ ಗಣರಾಜ್ಯ
ಸ್ವೀಕಾರ೨೬ ಜನವರಿ ೧೯೫೦
ಧ್ಯೇಯ"ಸತ್ಯಮೇವ ಜಯತೆ" (ಸಂಸ್ಕೃತ)
"ಸತ್ಯವೇ ಜಯಿಸುತ್ತದೆ"

("ಮುಂಡಕೋಪನಿಷತ್" ನಿಂದ ಬಂದಿದೆ, ಇದು ಹಿಂದೂ ವೇದದ ಒಂದು ಭಾಗವಾಗಿದೆ)

ಭಾರತ ಸರ್ಕಾರವು ೧೯೫೦ ಜನವರಿ ೨೬ ರಂದು ಅಧಿಕೃತವಾಗಿ ಸಾರನಾಥದ, ಅಶೋಕ ಸ್ತಂಭದಲ್ಲಿರುವ ನಾಲ್ಕು ಮುಖಗಳ ಸಿಂಹವನ್ನು ತನ್ನ ರಾಷ್ಟ್ರ ಲಾಂಛನವನ್ನಾಗಿ ಆಯ್ದುಕೊಂಡಿತು. ಚಿಹ್ನೆಯಲ್ಲಿ ಮೂರೆ ಮುಖ ಕಾಣಿಸಿದರು, ಲಾಂಛನವು ನಾಲ್ಕು ಸಿಂಹದ ಮುಖಗಳನ್ನು ಹೊಂದಿದ್ದು, ನಾಲ್ಕನೆಯ ಮುಖವು ಹಿಂಬದಿಯಲ್ಲಿರುವುದು.

ಈ ಲಾಂಛನವು ಒಂದು ವೃತ್ತಾಕಾರದ ಹಾಸುಗಲ್ಲಿನ ಮೇಲೆ ಅಲಂಕರಿಸಿದ್ದು, ಓಡುತ್ತಿರುವ ಕುದುರೆ, ಏತ್ತು, ಆನೆ ಮತ್ತು ಸಿಂಹದ ಅಕೃತಿಗಳು ಧರ್ಮ ಚಕ್ರದ ಜೊತೆಯಲ್ಲಿ ಪರ್ಯಾಯವಾಗಿ ಹಾಸುಗಲ್ಲಿನ ಮೇಲೆ ಕೆತ್ತಲ್ಪಟ್ಟಿದೆ. ಇವುಗಳ ಜೊತೆಗೆ ಮುಂಡಕೋಪನಿಷತ್ ನಲ್ಲಿ ಉಲ್ಲೇಖಿಸಿರುವ "ಸತ್ಯಮೇವ ಜಯತೇ" ಪದವನ್ನು ದೇವನಾಗರಿ ಲಿಪಿಯಲ್ಲಿ ಅಳವಡಿಸಿಕೊಳ್ಳಲಾಗಿದೆ.

ಅಶೋಕ ಸ್ತಂಭ ಚಿತ್ರದ ಅಂಚೆ ಚೀಟಿಯ ಕಥೆ

[ಬದಲಾಯಿಸಿ]

೧೯೪೭ರ ಆಗಸ್ಟ ೧೫ರಂದು ಭಾರತ ಸ್ವತಂತ್ರವಾದಾಗ ಆ ಸಂತಸವನ್ನು ಅಂಚೆಚೀಟಿಗಳ ಮೂಲಕ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ. ಯಾಕೆಂದರೆ ಆಗ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲು ನಿರ್ದೇಶನ ನೀಡುವ ಸಂವಿಧಾನಿಕ ಸಂಸ್ಥೆ ಇನ್ನೂ ಅಸ್ತಿತ್ವದಲ್ಲಿ ಬಂದಿರಲಿಲ್ಲ. ಹೀಗಾಗಿ ಸ್ವತಂತ್ರ ಭಾರತದ ಮೊದಲ ಅಂಚೆಚೀಟಿ ಬಿಡುಗಡೆಯಾಗಲು ಸುಮಾರು ೯೯ ದಿನಗಳ ಕಾಲ ಕಾಯಬೇಕಾಯಿತು! ಹೀಗೆ ಮೊದಲ ಅಂಚೆಚೀಟಿಯು ತ್ರಿವರ್ಣ ಧ್ವಜವನ್ನು ಹೊತ್ತು ೧೯೪೭ರ ನವಂಬರ ೨೧ರಂದು ಬಿಡುಗಡೆಯಾಯಿತು. ಅದಾಗಿ ೨೪ ದಿನಗಳ ಬಳಿಕ ಡಿಸೆಂಬರ ೧೫ರಂದು ಭಾರತದ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಸ್ತಂಭದ ಮೇಲಿರುವ ಚತುರ್ಮುಖ ಸಿಂಹಗಳ ಚಿತ್ರವನ್ನು ಹೊತ್ತು ಎರಡನೆಯ ಅಂಚೆಚೀಟಿ ಹೊರಬಂದಿತು.

ಈ ಅಂಚೆಚೀಟಿಗಳಲ್ಲಿ ಬಳಸಿದ ಚಿತ್ರವು ಭಾರತದ ಭಾರತದ ರಾಷ್ಟ್ರೀಯ ಚಿಹ್ನೆಯದ್ದಾಗಿದೆ. ಮೌರ್ಯ ವಂಶದ ಚಕ್ರವರ್ತಿ ಸಾಮ್ರಾಟ ಅಶೋಕನು ವಾರಣಾಸಿಯ ಬಳಿಯ ಸಾರಾನಾಥದಲ್ಲಿ ಸ್ಥಾಪಿಸಿದ ಕಂಬದ ತುದಿಯಲ್ಲಿನ ನಾಲ್ಕು ಮುಖದ ಸಿಂಹದ ಚಿತ್ರವನ್ನು ನಮ್ಮ ರಾಷ್ಟ್ರಚಿಹ್ನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಮೌರ್ಯ ಸಾಮ್ರಾಟ ಚಂದ್ರಗುಪ್ತನ ಮೊಮ್ಮಗನೂ, ಬಿಂದುಸಾರನ ಮಗನೂ ಆಗಿದ್ದ ಅಶೋಕನು ಕಳಿಂಗ ರಾಜ್ಯದ ಮೇಲೆ ದಂಡೆತ್ತಿಹೋದಾಗ ನಡೆದ ಲಕ್ಷಾಂತರ ಸೈನಿಕರ ಮಾರಣಹೋಮ, ಹರಿದ ನೆತ್ತರಿನ ಕೋಡಿಯನ್ನು ಕಂಡು ಜಿಗುಪ್ಸೆಗೊಂಡು ಬೌದ್ಧಮತವನ್ನು ಸ್ವೀಕರಿಸುತ್ತಾನೆ. ತಾನು ನಂಬಿದ ತತ್ವಗಳನ್ನು ಪ್ರಸಾರಮಾಡಲು ಅನೇಕ ಶಿಲಾಶಾಸನಗಳನ್ನೂ, ಸ್ಥೂಪಗಳನ್ನೂ, ಕಂಬಗಳನ್ನೂ ಸ್ಥಾಪಿಸುತ್ತಾನೆ.[] []

ಉಲ್ಲೇಖಗಳು

[ಬದಲಾಯಿಸಿ]