ಪ್ರಥಮ ಉಷಾಕಿರಣ (ಚಲನಚಿತ್ರ)
ಟೆಂಪ್ಲೇಟು:Infobox film/short description
ಪ್ರಥಮ ಉಷಾಕಿರಣ |
---|
ಪ್ರಥಮ ಉಷಾಕಿರಣ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಅಶೋಕ ಪೈ ಬರೆದಿದ್ದು ಸುರೇಶ್ ಹೆಬ್ಲಿಕರ್ ನಿರ್ದೇಶಿಸಿದ್ದಾರೆ. ಇದು ಮಾನಸ ಆರ್ಟ್ಸ್ ಅಡಿ ನಿರ್ಮಾಣವಾಗಿದೆ. ಇದರ ಪ್ರಮುಖ ಪಾತ್ರಗಳಲ್ಲಿ ಸುರೇಶ್ ಹೆಬ್ಳೀಕರ್, ಗಿರೀಶ್ ಕಾರ್ನಾಡ್, ಗೀತಾ,ಪ್ರಮೀಳಾ ಜೋಷಾಯ್ ಮತ್ತು ವನಿತಾವಾಸು ಇದ್ದಾರೆ. ಈ ಚಿತ್ರದ ಸಂಗೀತವನ್ನು ವಿಜಯಭಾಸ್ಕರ್ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪಿ. ರಾಜನ್ ಅವರದು. ಚಿತ್ರವು ಮಕ್ಕಳ ಮನಶಾಸ್ತ್ರದ ಕುರಿತಾಗಿದ್ದು ವ್ಯಾಪಕ ಮೆಚ್ಚುಗೆಯನ್ನು ಗಳಿಸಿತು. 1989-90ರ ವರ್ಷದ ಕರ್ನಾಟಕ ರಾಜ್ಯದ ಚಲನಚಿತ್ರ ಪ್ರಶಸ್ತಿಗಳನ್ನು ಮತ್ತು 38ನೇ ದಕ್ಷಿಣದ ಫಿಲ್ಮ್ ಫೇರ್ ಅವಾರ್ಡ್ಸ್ ಗಳಿಸಿತು.ಅಷ್ಟೇ ಅಲ್ಲದೆ ಚಿತ್ರವೂ ಜಗತ್ತಿನ ಬೇರೆಬೇರೆ ಚಲನಚಿತ್ರೋತ್ಸವಗಳಲ್ಲಿ ತೆರೆಯನ್ನೂ ಕಂಡಿತು.
ಪಾತ್ರವರ್ಗ
[ಬದಲಾಯಿಸಿ]- ಶ್ರೀಧರ್ ಆಗಿ ಸುರೇಶ್ ಹೆಬ್ಳೀಕರ್
- ಗೀತಾ
- ಮನಃಶಾಸ್ತ್ರಜ್ಞನಾಗಿ ಗಿರೀಶ್ ಕಾರ್ನಾಡ್
- ವನಿತಾ ವಾಸು
- ಸೀತಾ ಆಗಿ ಪ್ರಮೀಳಾ ಜೋಷಾಯ್
- ಸುಮನಾ
- ಶ್ಯಾಮಲಾ
- ನಾಗತಿಹಳ್ಳಿ ಚಂದ್ರಶೇಖರ್
- ಮಿಮಿಕ್ರಿ ದಯಾನಂದ್
- ಶಾಂತಮ್ಮ
- ಎಸ್. ಮಾಲತಿ
- ಬೇಬಿ ನಿಶಾ
- ಮಾಸ್ಟರ್ ಡಮರುಗೇಂದ್ರ
- ಮಾಸ್ಟರ್ ಅಭಿಷೇಕ್
- ನಾರಾಯಣರಾವ್
ಚಿತ್ರಸಂಗೀತ
[ಬದಲಾಯಿಸಿ]ಈ ಚಿತ್ರದ ಸಂಗೀತವನ್ನು ವಿಜಯಭಾಸ್ಕರ್ ಸಂಯೋಜಿಸಿದ್ದಾರೆ.
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
1. | "ಎತ್ತರ ಬಲು ಎತ್ತರ" | ಎಂ. ಎನ್. ವ್ಯಾಸರಾವ್, ನಾಗತಿಹಳ್ಳಿ ಚಂದ್ರಶೇಖರ್ | ರಾಜಕುಮಾರ್ ಭಾರತಿ |
ಪ್ರಶಸ್ತಿಗಳು
[ಬದಲಾಯಿಸಿ]ಈ ಚಿತ್ರವು 1990 ರಲ್ಲಿ ಅನೇಕ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸಿತು.
1989-90 :
- 3ನೇ ಅತ್ಯುತ್ತಮ ಚಲನಚಿತ್ರ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಮಾನಸ ಆರ್ಟ್ಸ್ ಗೆ
- ಉತ್ತಮ ಬಾಲನಟ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಮಾಸ್ಟರ್ ಡಮರುಗೇಂದ್ರನಿಗೆ
1990:
- ಉತ್ತಮ ಕನ್ನಡ ಚಲನಚಿತ್ರಕ್ಕಾಗಿ ಫಿಲಂಫೇರ್ ಪ್ರಶಸ್ತಿ - ಮಾನಸ ಆರ್ಟ್ಸ್ ಗೆ