ಪ್ರಥಮ ಉಷಾಕಿರಣ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಥಮ ಉಷಾಕಿರಣ (ಚಲನಚಿತ್ರ)
ಪ್ರಥಮ ಉಷಾಕಿರಣ
ನಿರ್ದೇಶನಸುರೇಶ್ ಹೆಬ್ಳೀಕರ್
ನಿರ್ಮಾಪಕಮಾನಸ ಆರ್ಟ್ಸ್
ಪಾತ್ರವರ್ಗಸುರೇಶ್ ಹೆಬ್ಳೀಕರ್ ಗೀತಾ ಢಮರುಗೇಂದ್ರ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಪಿ.ರಾಜನ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಮಾನಸ್ ಆರ್ಟ್ಸ್


ಪ್ರಥಮ ಉಷಾಕಿರಣ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಅಶೋಕ ಪೈ ಬರೆದಿದ್ದು ಸುರೇಶ್ ಹೆಬ್ಲಿಕರ್ ನಿರ್ದೇಶಿಸಿದ್ದಾರೆ. ಇದು ಮಾನಸ ಆರ್ಟ್ಸ್ ಅಡಿ ನಿರ್ಮಾಣವಾಗಿದೆ. ಇದರ ಪ್ರಮುಖ ಪಾತ್ರಗಳಲ್ಲಿ ಸುರೇಶ್ ಹೆಬ್ಳೀಕರ್, ಗಿರೀಶ್ ಕಾರ್ನಾಡ್, ಗೀತಾ,ಪ್ರಮೀಳಾ ಜೋಷಾಯ್ ಮತ್ತು ವನಿತಾವಾಸು ಇದ್ದಾರೆ. ಈ ಚಿತ್ರದ ಸಂಗೀತವನ್ನು ವಿಜಯಭಾಸ್ಕರ್ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪಿ. ರಾಜನ್ ಅವರದು. ಚಿತ್ರವು ಮಕ್ಕಳ ಮನಶಾಸ್ತ್ರದ ಕುರಿತಾಗಿದ್ದು ವ್ಯಾಪಕ ಮೆಚ್ಚುಗೆಯನ್ನು ಗಳಿಸಿತು. 1989-90ರ ವರ್ಷದ ಕರ್ನಾಟಕ ರಾಜ್ಯದ ಚಲನಚಿತ್ರ ಪ್ರಶಸ್ತಿಗಳನ್ನು ಮತ್ತು 38ನೇ ದಕ್ಷಿಣದ ಫಿಲ್ಮ್ ಫೇರ್ ಅವಾರ್ಡ್ಸ್ ಗಳಿಸಿತು.ಅಷ್ಟೇ ಅಲ್ಲದೆ ಚಿತ್ರವೂ ಜಗತ್ತಿನ ಬೇರೆಬೇರೆ ಚಲನಚಿತ್ರೋತ್ಸವಗಳಲ್ಲಿ ತೆರೆಯನ್ನೂ ಕಂಡಿತು.

ಪಾತ್ರವರ್ಗ[ಬದಲಾಯಿಸಿ]


ಚಿತ್ರಸಂಗೀತ[ಬದಲಾಯಿಸಿ]

ಈ ಚಿತ್ರದ ಸಂಗೀತವನ್ನು ವಿಜಯಭಾಸ್ಕರ್ ಸಂಯೋಜಿಸಿದ್ದಾರೆ.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಎತ್ತರ ಬಲು ಎತ್ತರ"ಎಂ. ಎನ್. ವ್ಯಾಸರಾವ್, ನಾಗತಿಹಳ್ಳಿ ಚಂದ್ರಶೇಖರ್ರಾಜಕುಮಾರ್ ಭಾರತಿ 

ಪ್ರಶಸ್ತಿಗಳು[ಬದಲಾಯಿಸಿ]

ಈ ಚಿತ್ರವು 1990 ರಲ್ಲಿ ಅನೇಕ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸಿತು.

1989-90 :

  1. 3ನೇ ಅತ್ಯುತ್ತಮ ಚಲನಚಿತ್ರ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಮಾನಸ ಆರ್ಟ್ಸ್ ಗೆ
  2. ಉತ್ತಮ ಬಾಲನಟ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಮಾಸ್ಟರ್ ಡಮರುಗೇಂದ್ರನಿಗೆ



1990:

  1. ಉತ್ತಮ ಕನ್ನಡ ಚಲನಚಿತ್ರಕ್ಕಾಗಿ ಫಿಲಂಫೇರ್ ಪ್ರಶಸ್ತಿ - ಮಾನಸ ಆರ್ಟ್ಸ್ ಗೆ