ಪೌರಾಣಿಕ ಕಾಲಕ್ರಮ
ಪೌರಾಣಿಕ ಕಾಲಕ್ರಮವು ಹಿಂದೂ ಧರ್ಮಗ್ರಂಥಗಳ ಪ್ರಕಾರ ಹಿಂದೂ ಇತಿಹಾಸದ ಕಾಲಪಟ್ಟಿಯನ್ನು ಕೊಡುತ್ತದೆ. ಎರಡು ಪ್ರಧಾನ ದಿನಾಂಕಗಳೆಂದರೆ ಕುರುಕ್ಷೇತ್ರ ಯುದ್ಧ ಮತ್ತು ಕಲಿಯುಗದ ಆರಂಭ. ಈ ಕಾಲಕ್ರಮದ ಪ್ರಕಾರ ಕುರುಕ್ಷೇತ್ರ ಯುದ್ಧ ಕ್ರಿ.ಪೂ. 3139 ರಲ್ಲಿ ಸಂಭವಿಸಿತು ಮತ್ತು ಕಲಿಯುಗ ಕ್ರಿ.ಪೂ. 3102 ರಲ್ಲಿ ಶುರುವಾಯಿತು. ಮೂಲನಿವಾಸಿ ಆರ್ಯರ ಪ್ರತಿಪಾದಕರು ವೈದಿಕ ಯುಗದ ಹೆಚ್ಚು ಹಿಂದಿನ ಕಾಲಮಾನ, ಮತ್ತು ಭಾರತದ ಹೊರಗೆ ಇಂಡೊ-ಯೂರೋಪಿಯನ್ ಭಾಷೆಗಳ ಪ್ರಸರಣವನ್ನು ಪ್ರತಿಪಾದಿಸಲು ಪೌರಾಣಿಕ ಕಾಲಕ್ರಮವನ್ನು ಉಲ್ಲೇಖಿಸುತ್ತಾರೆ.
ಪುರಾಣಗಳು ವಿಶ್ವದ ಸೃಷ್ಟಿ ಮತ್ತು ಯುಗಗಳ ಬಗ್ಗೆ ಕಥೆಗಳನ್ನು ಹೊಂದಿವೆ. ಮಹಾಭಾರತ, ರಾಮಾಯಣ ಮತ್ತು ಪುರಾಣಗಳು ಭಾರತದ ಪ್ರಾಚೀನ ಇತಿಹಾಸದ ಸಾಂಪ್ರದಾಯಿಕ ಕಾಲಕ್ರಮಕ್ಕಾಗಿ ಬಳಸಲಾಗುವ ರಾಜರ ವಂಶಾವಳಿಯನ್ನೂ ಹೊಂದಿವೆ.[೧] ಒಬ್ಬ ವಿದ್ವಾಂಸನು ಈ ಪಠ್ಯಗಳ ವಿಶ್ವಾಸಾರ್ಹತೆಯನ್ನು ಅನುಮಾನಿಸುತ್ತಾನೆ, ಮತ್ತು ಅವರು ವೇದಗಳಿಂದ ತುಣುಕು ತುಣುಕಾಗಿ ವಂಶಾವಳಿಗಳನ್ನು (ಭಾಗಶಃ) ಎತ್ತಿರುವುದು ಸ್ಪಷ್ಟವಿದೆ ಮತ್ತು ಉಳಿದವುಗಳನ್ನು ಊಹಾತ್ಮಕ, ಇಲ್ಲದಿದ್ದರೆ ಅಜ್ಞಾತ ಸಂಪ್ರದಾಯಗಳಿಂದ, ಅಥವಾ ಮಹಾಭಾರತದ ವಿಷಯದಲ್ಲಿ ನೋಡಬಹುದಾದಂತೆ, ಕವಿತಾ ಕಲ್ಪನೆಯಿಂದ ತುಂಬಿಸಿದ್ದಾರೆ ಎಂದು ನಿರ್ಧರಿಸಿದ್ದಾನೆ.[೨]
ಒಬ್ಬ ವಿದ್ವಾಂಸನು ಬರೆದ ಪುರಾಣಗಳ ಏಳಿಗೆಯನ್ನು ಐತಿಹಾಸಿಕವಾಗಿ ಗುಪ್ತರ ಕಾಲದಲ್ಲಿ ನಿರ್ದಿಷ್ಟ ದೇವತೆಯ ಮೇಲೆ ಕೇಂದ್ರೀಕರಿಸಿದ ಭಕ್ತಿ ಪಂಥಗಳ ಏಳಿಗೆಯೊಂದಿಗೆ ಸಂಬಂಧಿಸಿದ್ದಾನೆ: ಪೌರಾಣಿಕ ಕೃತಿಸಮೂಹವು ವಿವಿಧ ಪೈಪೋಟಿಯ ಸಂಪ್ರದಾಯಗಳ ದೃಷ್ಟಿಕೋನಗಳನ್ನು ಮುನ್ನಡೆಸುವ ವಿಷಯದ ಒಂದು ಸಂಕೀರ್ಣವಾದ ಸಮಗ್ರಕಾಯವಾಗಿದೆ.[೩] ಒಬ್ಬ ವಿದ್ವಾಂಸೆ, ಭಾರತಾಧ್ಯಯನಕಾರರ ಅಧ್ಯಯನವನ್ನು ಆಧರಿಸಿ, ವಿವಿಧ ಪುರಾಣಗಳಿಗೆ ಅಂದಾಜಿನ ಕಾಲಗಳನ್ನು ನಿಗದಿಮಾಡುತ್ತಾಳೆ. ಅವಳ ಪ್ರಕಾರ: ಮಾರ್ಕಂಡೇಯ ಪುರಾಣ - ಕ್ರಿ.ಶ. ೨೫೦, ಮತ್ಸ್ಯ ಪುರಾಣ ಕ್ರಿ.ಶ. ೨೫೦ - ೫೦೦, ವಾಯು ಪುರಾಣ - ಕ್ರಿ.ಶ. ೩೫೦, ಹರಿವಂಶ ಮತ್ತು ವಿಷ್ಣು ಪುರಾಣ - ಕ್ರಿ.ಶ. ೪೫೦, ಬ್ರಹ್ಮಾಂಡ ಪುರಾಣ - ಕ್ರಿ.ಶ. ೩೫೦ - ೯೫೦, ವಾಮನ ಪುರಾಣ ಕ್ರಿ.ಶ. ೪೫೦ - ೯೦೦, ಕೂರ್ಮ ಪುರಾಣ ಕ್ರಿ.ಶ. ೫೫೦ - ೮೫೦, ಮತ್ತು ಲಿಂಗ ಪುರಾಣ ಕ್ರಿ.ಶ. ೬೦೦ - ೧೦೦೦.
ಮಹಾಭಾರತ ಯುದ್ಧದ ಐತಿಹಾಸಿಕತೆಯು ವಿದ್ವಾಂಸರಲ್ಲಿ ಚರ್ಚೆ ಮತ್ತು ವಿವಾದದ ವಿಷಯವಾಗಿದೆ.[೪] ಅಸ್ತಿತ್ವದಲ್ಲಿರುವ ಮಹಾಭಾರತ ಪಠ್ಯ ಬೆಳವಣಿಗೆಯ ಅನೇಕ ಪದರಗಳನ್ನು ಕಂಡಿದೆ, ಮತ್ತು ಬಹುತೇಕವಾಗಿ ಕ್ರಿ.ಪೂ ೫೦೦ ಮತ್ತು ಕ್ರಿ.ಶ. ೪೦೦ ರ ನಡುವಿನ ಅವಧಿಗೆ ಸೇರಿದೆ. ಮಹಾಭಾರತದ ಚೌಕಟ್ಟು ಕಥೆಯೊಳಗೆ, ಐತಿಹಾಸಿಕ ರಾಜರುಗಳಾದ ಪರೀಕ್ಷಿತ ಮತ್ತು ಜನಮೇಜಯರು ಕುರು ವಂಶದ ಕುಡಿಗಳೆಂದು ಗಮನಾರ್ಹವಾಗಿ ಪ್ರಾಧಾನ್ಯ ಪಡೆದಿದ್ದಾರೆ. ಮಹಾಕಾವ್ಯದ ಮುಖ್ಯ ಹಿನ್ನೆಲೆ ಕಬ್ಬಿಣ ಯುಗದ ವೈದಿಕ ಭಾರತದಲ್ಲಿ ಐತಿಹಾಸಿಕ ಪೂರ್ವನಿದರ್ಶನವನ್ನು ಹೊಂದಿದೆ ಎಂದು ಒಬ್ಬ ವಿದ್ವಾಂಸನು ನಿರ್ಧರಿಸಿದ್ದಾನೆ. ಕುರು ರಾಜವಂಶ ಸುಮಾರು ಕ್ರಿ.ಪೂ. ೧೨೦೦ ರಿಂದ ೮೦೦ರ ನಡುವಿನ ಅವಧಿಯಲ್ಲಿ ರಾಜಕೀಯ ಶಕ್ತಿಯ ಕೇಂದ್ರವಾಗಿತ್ತು. ಆದರೆ ಮತ್ತೊಬ್ಬ ವಿದ್ವಾಂಸನ ಪ್ರಕಾರ, ಮಹಾಭಾರತವು ಮೂಲಭೂತವಾಗಿ ಪೌರಾಣಿಕವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Trautman 2005, p. xx.
- ↑ Witzel 2001, p. 70.
- ↑ Flood 1996, p. 359.
- ↑ Singh, Upinder (2006). Delhi: Ancient History. Berghahn Books. p. 85.