ವಿಷಯಕ್ಕೆ ಹೋಗು

ಪುಲಿಕಾಟ್ ಸರೋವರ

ನಿರ್ದೇಶಾಂಕಗಳು: 13°33′57″N 80°10′29″E / 13.56583°N 80.17472°E / 13.56583; 80.17472
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುಲಿಕಾಟ್ ಸರೋವರ
ಸ್ಥಳCoromandel Coast
ನಿರ್ದೇಶಾಂಕಗಳು13°33′57″N 80°10′29″E / 13.56583°N 80.17472°E / 13.56583; 80.17472
brackish to salty
ಒಳಹರಿವುArani River, Kalangi River and Swarnamukhi River
ಹೊರಹರಿವುTo the Sea
Basin countriesIndia
ಗರಿಷ್ಠ ಉದ್ದ60 km (37.3 mi)
ಗರಿಷ್ಠ ಅಗಲ17.5 km (10.9 mi)
250–450 km2 (97–174 sq mi)
(from low tide to high tide)
ಸರಾಸರಿ ಆಳ1 m (3.3 ft)
ಗರಿಷ್ಠ ಆಳ10 m (32.8 ft) at the mouth
IslandsIrrukam, Venadu and several smaller ones
ವಸಾಹತುಗಳುChennai and Pulicat in ತಮಿಳುನಾಡು, Dugarājupatnam and Sullurpeta in ಆಂಧ್ರ ಪ್ರದೇಶ

ಪುಲಿಕಾಟ್ ಸರೋವರ (ತೆಲುಗು: ಪುಲಿಕಾಟ್ ಸರಸ್ಸು పులికాట్ సరస్సు, ತಮಿಳು:.ಪಳವೆರ್ಕಾಡು பழவேற்காடு ஏறி) ಭಾರತದ ಎರಡನೇ ಅತ್ಯಂತ ದೊಡ್ಡ ಚೌಳಾದ - ನೀರಿನ ಸರೋವರ ಅಥವಾ ಆವೃತ ಜಲಭಾಗವಾಗಿದೆ. ಇದು ದಕ್ಷಿಣ ಭಾರತದ ಕೊರಮಂಡಲ ಕರಾವಳಿಯ ಆಂಧ್ರಪ್ರದೇಶ ಹಾಗು ತಮಿಳು ನಾಡುರಾಜ್ಯಗಳ ಗಡಿಯಲ್ಲಿ ವ್ಯಾಪಿಸಿದೆ. ಸರೋವರವು ಪುಲಿಕಾಟ್ ಸರೋವರ ಪಕ್ಷಿಧಾಮವನ್ನು ಒಳಗೊಂಡಿದೆ. ಶ್ರೀಹರಿಕೋಟದ ಪ್ರತಿಬಂಧಕ ದ್ವೀಪವು ಸರೋವರವನ್ನು ಬಂಗಾಳ ಕೊಲ್ಲಿಯಿಂದ ಪ್ರತ್ಯೇಕಿಸುತ್ತದೆ. ದ್ವೀಪವು ಸತೀಶ್ ಧವನ್ ಸ್ಪೇಸ್ ಸೆಂಟರ್ಗೆ ನೆಲೆಯಾಗಿದೆ.[]

ಇತಿಹಾಸ

[ಬದಲಾಯಿಸಿ]
ಸುಮಾರು 1602ರಲ್ಲಿ ಕಂಡುಬಂದ ಪೆಲ್ಲಕಾಟದ ಒಂದು ವೈಮಾನಿಕ ದೃಶ್ಯಾವಳಿ[]
ಪುಲಿಕಾಟ್ ನಲ್ಲಿರುವ ಹಳೆಯ ಡಚ್ ಸ್ಮಶಾನದ ಪ್ರವೇಶ ದ್ವಾರ

ಒಂದನೇ ಶತಮಾನದಲ್ಲಿ, ಪೆರಿಪ್ಲಸ್ ಆಫ್ ದಿ ಎರಿತ್ರೆಯನ್ ಸೀ[[ಬರೆದ ಅನಾಮಧೇಯ ನಾವಿಕ ಪೊಡೌಕೆ(ಪುಲಿಕಾಟ್)ನ್ನು []]]ಭಾರತದ ದಕ್ಷಿಣ ಭಾಗದಲ್ಲಿರುವ ಮೂರು ಬಂದರುಗಳಲ್ಲಿ ಒಂದೆಂದು ವಿವರಿಸುತ್ತಾನೆ. ಎರಡನೇ ಶತಮಾನದಲ್ಲಿ, ಟಾಲಮಿ ಪಟ್ಟಿ ಮಾಡಿದ್ದ ಈ ಕರಾವಳಿಯ ಬಂದರುಗಳಲ್ಲಿ ಪೊಡೌಕೆ ಎಂಪೋರಿಯನ್ ಸಹ ಸೇರಿತ್ತು.[]

13ನೇ ಶತಮಾನದಲ್ಲಿ, ಹೊಸ ಧಾರ್ಮಿಕ ನೇತಾರ ಗೆ ಗೌರವ ಸಲ್ಲಿಸಲು ತಿರಸ್ಕರಿಸಿದಾಗ ಮೆಕ್ಕಾದಿಂದ ಬಹಿಷ್ಕೃತರಾದ ಅರಬ್ಬರು ಈ ಸರೋವರದ ತೀರಕ್ಕೆ ನಾಲ್ಕು ದೋಣಿಗಳಲ್ಲಿ ಬಂದಿಳಿದರು. ಅಲ್ಲಿನ ರಸ್ತೆಗಳಲ್ಲಿ ಕಂಡುಬರುವ ಶಿಥಿಲವಾದ ಕಲ್ಲಿನ ಮನೆಗಳನ್ನು ಒಂದೊಮ್ಮೆ ಈ ಅರೇಬಿಯಾದ ಮುಸ್ಲಿಮರು ಆಕ್ರಮಿಸಿಕೊಂಡಿದ್ದರು, ಈ ಮನೆಗಳೂ ಇಂದಿಗೂ ಅಲ್ಲಿ ಕಂಡುಬರುತ್ತವೆ. ಉಳಿದುಕೊಂಡಿರುವ ಕೆಲವು ಕುಟುಂಬಗಳು ಅರೇಬಿಕ್ ನಲ್ಲಿರುವ ದಾಖಲೆಗಳನ್ನು ಸಮರ್ಥಿಸಿ ಈ ಪ್ರದೇಶಕ್ಕೆ ಅವರ ವಲಸೆಯನ್ನು ರುಜುವಾತು ಮಾಡುತ್ತವೆ.[][]

ಮುಂದೆ ಇತಿಹಾಸದಲ್ಲಿ ದಾಖಲಾದ ವಿದೇಶಿ ವಸಾಹತುಗಾರರಲ್ಲಿ ಪೋರ್ಚುಗೀಸ್ ರು ಸೇರುತ್ತಾರೆ. ಮುಂದೆ 1515ರಲ್ಲಿ, ಅವರು ನೋಸ್ಸ ಸೇನ್ಹೊರ ಡಸ್ ಪ್ರಜೆರೆಸ್ ಗೆ(ಅವರ್ ಲೇಡಿ ಆಫ್ ಜಾಯ್ಸ್ ) ಅರ್ಪಿಸಿ ಒಂದು ಚರ್ಚ್ ನ್ನು ಕಟ್ಟುತ್ತಾರೆ, ಈಗ ಈ ಚರ್ಚ್ ಶಿಥಿಲಾವಸ್ಥೆಯಲ್ಲಿದೆ. ಪೋರ್ಚುಗೀಸರ ನಂತರ ಡಚ್ಚರು ಆಗಮಿಸಿದರು.

ಕರಿಮನಲ್ ಹಳ್ಳಿಯ ತೀರದಲ್ಲಿ ಸಿಲುಕಿಕೊಂಡ ತಮ್ಮ ಹಡಗುಗಳಿಂದಾಗಿ ಡಚ್ಚರು ಈ ಆವೃತ ಜಲಭಾಗಕ್ಕೆ ಬಂದರು, ಅವರು ಸರೋವರದ ನದಿಮುಖದ ವಿರುದ್ಧ ದಿಕ್ಕಿಗೆ ಬಂದಿಳಿದರು, ಅಲ್ಲಿಂದ ಸರೋವರದ ಗಡಿಯು 'ಕೋರಮಂಡಲ್' ಎಂಬ ಹೆಸರನ್ನು ಗಳಿಸಿತು. ಡಚ್ಚರ ಆಳ್ವಿಕೆಯ ಅವಧಿಯಲ್ಲಿ ಪುಲಿಕಾಟ್ ಪಲ್ಲೈಕಟ್ಟ [] ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಪುಲಿಕಾಟ್ ಇಂದು ಈ ವಾಸ್ತವಕ್ಕೆ ಡಚ್ ಕೋಟೆಯ ಅವಶೇಷದೊಂದಿಗೆ ಸಾಕ್ಷಿಯನ್ನು ಒದಗಿಸುತ್ತದೆ (ಸುಮಾರು 1606ರಿಂದ 1690ರ ಅವಧಿ) ಈ ಕೋಟೆಯೂ ಸುಮಾರು 1609ರಷ್ಟು ಹಳೆಯದಾಗಿದೆ, ಒಂದು ಡಚ್ ಚರ್ಚ್, 22 ಗೊರಿಗಳೊಂದಿಗೆ ಸಂರಕ್ಷಿಸಲಾದ ಡಚ್ ಸ್ಮಶಾನ (1631ರಿಂದ 1655) ಹಾಗು ಒಂದು ಡಚ್ ಸ್ಮಶಾನವನ್ನು 76 ಗೋರಿಗಳು ಹಾಗು ಸಮಾಧಿ ಸೌಧಗಳೊಂದಿಗೆ ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ (ASI) ಸಂರಕ್ಷಿಸಿದೆ. ಡಚ್ಚರು ಪುಲಿಕಾಟ್ ನಲ್ಲಿ ಗೆಲ್ಡ್ರಿಯ ಕೋಟೆ ಯನ್ನು ನಿರ್ಮಿಸಿದರು, ಇಲ್ಲಿಂದ ಅವರು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ ಹಾಗು ಪ್ರದೇಶದ ಇತರ ರಾಜ್ಯಗಳೊಂದಿಗೆ ವ್ಯವಹಾರ ನಡೆಸಿದರು.[][][]

ಆವೃತ ಜಲಭಾಗದ ಪರಾಗಶಾಸ್ತ್ರೀಯ ಗುಣಲಕ್ಷಣಗಳ ಒಂದು ವೈಜ್ಞಾನಿಕ ಅಧ್ಯಯನವನ್ನು ನಾಲ್ಕು ಪರೀಕ್ಷಾ ಗುಣಿಗಳಿಂದ ಸಂಚಿತ ಶಿಲೆಯ ಮಣ್ಣಿನ ಮಾದರಿಗಳನ್ನು ತೆಗೆದುಕೊಂಡು ನಡೆಸಲಾಯಿತು. ಅಧ್ಯಯನ ಪ್ರಕಾರ:[]

ಸಸ್ಯಾಂಗಾರ ಹಾಸುಗಳು ಪಶ್ಚಿಮದ ಸುಳ್ಳುರ್ ಪೇಟ ಹಾಗು ಕಾಸ್ಡ್ರೆಡಿನಿಲಿಂನಲ್ಲಿ ಕ್ರಮವಾಗಿ 4.98 metres (16.3 ft) a.m.s.l. ಹಾಗು 1 metre (3.3 ft) (a.m.s.l.) ಸಸ್ಯವರ್ಗದ ಪುನರ್ನಿರ್ಮಾಣವು ಪ್ರಾಚೀನ ಕಡಲ ತೀರಕ್ಕೆ ಸೂಚಿತವಾಗಿವೆ. ಸಮುದ್ರ ಮಟ್ಟವು 6650ಕ್ಕೂ ಅಧಿಕ ಅಥವಾ ಅದಕ್ಕಿಂತ ಕಡಿಮೆ ಮಟ್ಟವನ್ನು ಸುಳ್ಳುರ್ ಪೇಟದಲ್ಲಿ ಸುಮಾರು 110 ವರ್ಷ BPಯಲ್ಲಿ ಹೊಂದಿತ್ತು, 18 kilometres (11 mi)ಇದು ಇಂದಿನ ಕಡಲ ತೀರದ ಪಶ್ಚಿಮ ದಿಕ್ಕಿನಲ್ಲಿದೆ. ಕಾಸ್ಡ್ರೆಡ್ಡಿನಿಲೆಮ್ ನಲ್ಲಿರುವ ಸಸ್ಯಾಂಗಾರ ಹಾಸಿನ ರೇಡಿಯೋ ಕಾರ್ಬನ್ ಗಳು 4608ಕ್ಕೂ ಅಧಿಕ ಅಥವಾ ಕಡಿಮೆ 122 ವರ್ಷ BPಯದ್ದಾಗಿದೆ, ಇದು ಅಪಸರನತೆಯ ಘಟ್ಟದಲ್ಲಿ ಮ್ಯಾಂಗ್ರೋವ್ ರೇಖೆಯು ಪೂರ್ವಕ್ಕೆ ಬದಲಾಗಿದ್ದನ್ನು ಸೂಚಿಸುತ್ತದೆ.

ಭೂಗೋಳ ಹಾಗು ಭೂಪಟದ ವಿವರಣೆ

[ಬದಲಾಯಿಸಿ]
1957ರಲ್ಲಿ ತಮಿಳು ನಾಡು ಕರಾವಳಿಯು ತೋರುತ್ತಿರುವ ಪುಲಿಕಾಟ್ ಸರೋವರ

ಆವೃತ ಜಲಭಾಗದ ಗಡಿಯು 13.33° ರಿಂದ 13.66° N ಹಾಗು 80.23° ರಿಂದ 80.25°E ನಡುವೆ ಇದೆ, ಜೊತೆಗೆ ಆವೃತ ಜಲಭಾಗದ ಒಣಗಿದ ಭಾಗವು 14.0°Nವರೆಗೂ ವಿಸ್ತರಿಸಿದೆ; ಜೊತೆಗೆ ಆವೃತ ಜಲಭಾಗದಲ್ಲಿ 84%ರಷ್ಟು ಆಂಧ್ರಪ್ರದೇಶದಲ್ಲಿದ್ದರೆ 16%ರಷ್ಟು ತಮಿಳುನಾಡಿನಲ್ಲಿದೆ. ಆವೃತ ಜಲಭಾಗವು ಕರಾವಳಿ ತೀರಕ್ಕೆ ಎದುರಾಗಿ ಜೊತೆಗೂಡಿದ್ದು ಪಶ್ಚಿಮ ಹಾಗು ಪೂರ್ವ ಭಾಗಗಳು ಮರಳಿನ ದಿಬ್ಬದಿಂದ ಸುತ್ತುವರೆದಿದೆ. ಸರೋವರದ ಪ್ರದೇಶವು ಪ್ರವಾಹದೊಂದಿಗೆ ಬದಲಾಗುತ್ತದೆ; 450 square kilometres (170 sq mi)ರಷ್ಟು ಅಧಿಕ ಪ್ರವಾಹದಲ್ಲಿ ಹಾಗು 250 square kilometres (97 sq mi)ರಷ್ಟು ಕಡಿಮೆ ಹರಿವಿನ ಅವಧಿಯಲ್ಲಿರುತ್ತವೆ. ಇದರ ಉದ್ದ ಸುಮಾರು 60 kilometres (37 mi)ರಷ್ಟಿದ್ದರೆ ಅಗಲಳತೆ 0.2 kilometres (0.12 mi)ರಿಂದ 17.5 kilometres (10.9 mi)ರಷ್ಟು ಬದಲಾಗುತ್ತದೆ.

ಆವೃತ ಜಲಭಾಗದ ಕರಾವಳಿಯ ಹವಾಮಾನವನ್ನು ಉಷ್ಣವಲಯದ ಮಾನ್ಸೂನ್ ಗಳು ನಿಯಂತ್ರಿಸುತ್ತವೆ. ಗಾಳಿಯ ತಾಪಮಾನವು 15 °C (59 °F) ರಿಂದ 45 °C (113 °F)ರಷ್ಟು ಬದಲಾಗುತ್ತದೆ.[೧೦]

ದೊಡ್ಡದಾಗಿರುವ ತಿರುಗಚ್ಚಿನ ಆಕಾರದಲ್ಲಿರುವ ಪ್ರತಿಬಂಧಕ ದ್ವೀಪವಾದ ಶ್ರೀಹರಿಕೋಟವು ಸರೋವರವನ್ನು ಬಂಗಾಳ ಕೊಲ್ಲಿಯಿಂದ ಬೇರ್ಪಡಿಸುತ್ತದೆ. ಸತೀಶ್ ಧವನ್ ಸ್ಪೇಸ್ ಸೆಂಟರ್, ದ್ವೀಪದ ಉತ್ತರಭಾಗದ ಕೊನೆಯಲ್ಲಿ ನೆಲೆಯಾಗಿದೆ.[] ಭಾರತದ ಮೊದಲ ಯಶಸ್ವೀ ಚಂದ್ರ ಯಾನದ ಮಿಷನ್ ಚಂದ್ರಯಾನ-1ನ್ನು ಈ ಸ್ಥಳದಿಂದ ಉಡಾಯಿಸಲಾಯಿತು.[೧೧]

ಇರ್ಕಂ ಹಾಗು ವೆನಾಡಿನ ಮರಳಿನ ಪ್ರತಿಬಂಧಕ ದ್ವೀಪಗಳು ಹಾಗು ಉತ್ತರ ದಿಕ್ಕಿನಲ್ಲಿರುವ ಸಣ್ಣ ದ್ವೀಪಗಳು ಉತ್ತರ-ದಕ್ಷಿಣಕ್ಕೆ ಒಟ್ಟುಗೂಡಿರುವುದರ ಜೊತೆಗೆ ಪೂರ್ವ ಹಾಗು ಪಶ್ಚಿಮದ ಆವೃತ ಭಾಗಗಳನ್ನು ಇಬ್ಭಾಗಿಸುತ್ತದೆ. ಆವೃತ ಜಲಭಾಗಗಳ ಆಕೃತಿವಿಜ್ಞಾನವು ನಾಲ್ಕು ಮಾದರಿಗಳಲ್ಲಿ ವರ್ಗೀಕರಣಗೊಂಡಿದೆ ಜೊತೆಗೆ ದೊಡ್ಡ ಪ್ರದೇಶಗಳನ್ನು ಮಣ್ಣುದಂಡೆ ಹಾಗು ಮರಳುದಂಡೆಗಳೆಂದು ವಿಭಾಗಿಸಲಾಗಿದೆ.[][೧೦]

ಪುಲಿಕಾಟ್ ನ ಮೀನುಗಾರಿಕಾ ಹಳ್ಳಿಯು ಸರೋವರದ ದಕ್ಷಿಣ ತುದಿಯಲ್ಲಿದೆ. [೧೦][೧೨] ದುಗರಾಜುಪಟ್ಟಣಂ ಹಾಗು ಸುಳ್ಳುರ್ ಪೇಟ ಆವೃತ ಜಲಭಾಗದ ಹೊರವಲಯದಲ್ಲಿರುವ ಎರಡು ಪ್ರಮುಖ ಪಟ್ಟಣಗಳಾಗಿವೆ.[೧೩]

ಜಲಶಾಸ್ತ್ರ

[ಬದಲಾಯಿಸಿ]

ಆವೃತ ಜಲಭಾಗಕ್ಕೆ ನೀರನ್ನು ಪೂರೈಸುವ ಮೂರು ಪ್ರಮುಖ ನದಿಗಳೆಂದರೆ, ದಕ್ಷಿಣ ತುದಿಯಲ್ಲಿರುವ ಆರಣಿ ನದಿ, ವಾಯವ್ಯ ದಿಕ್ಕಿನಲ್ಲಿ ಹರಿಯುವ ಕಲಂಗಿ ನದಿ ಹಾಗು ಉತ್ತರದ ದಿಕ್ಕಿನ ತುದಿಯಲ್ಲಿರುವ ಸ್ವರ್ಣಮುಖಿ ನದಿ, ಇವುಗಳ ಜೊತೆಯಲ್ಲಿ ಕೆಲವು ಸಣ್ಣ ಹೊಳೆಗಳು. ಸಂಚಾರಿ ಕಾಲುವೆಯಾದ ಬಕಿಂಗ್ ಹ್ಯಾಮ್ ಕಾಲುವೆಯು, ಪಶ್ಚಿಮದಲ್ಲಿದ್ದು ಆವೃತ ಜಲಭಾಗದ ಭಾಗವಾಗಿದೆ. ಆವೃತ ಜಲಭಾಗದ ಬಂಗಾಳ ಕೊಲ್ಲಿಯೊಂದಿಗಿನ ನೀರಿನ ವಿನಿಮಯವು ಶ್ರೀಹರಿಕೋಟದ ಉತ್ತರದ ತುದಿಗಿರುವ ಒಂದು ಒಳಹರಿವಿನ ಕಾಲುವೆಯ ಮೂಲಕ ನಡೆಯುತ್ತದೆ. ಜೊತೆಗೆ ದಕ್ಷಿಣದ ತುದಿಗಿರುವ ಹೊರ ಹರಿವಿನ ಕಾಲುವೆಯು ಸುಮಾರು 200 metres (660 ft)ರಷ್ಟು ಅಗಲವಾಗಿದೆ, ಈ ಹರಿವುಗಳು ಕೇವಲ ಮಳೆಗಾಲದಲ್ಲಿ ಮಾತ್ರ ಭೋರ್ಗರೆಯುತ್ತವೆ.[][೧೦][೧೪][೧೫]

ಮಳೆಯಿಂದಾಗಿ ಪ್ರವಾಹದಿಂದ ತುಂಬಿರುವ ಪುಲಿಕಾಟ್ ಸರೋವರ

ಸರೋವರದ ನೀರಿನ ಮಟ್ಟವು ವಿವಿಧ ಋತುಗಳಲ್ಲಿ ವ್ಯಾಪಕವಾಗಿ ಬದಲಾಗುತ್ತದೆ - ಬೇಸಿಗೆ, ಮಾನ್ಸೂನಿಗೆ ಮುಂಚೆ, ಮಾನ್ಸೂನ್ ನಲ್ಲಿ ಹಾಗು ಮಾನ್ಸೂನ್ ನ ನಂತರ - ಸರೋವರ ನದಿಮುಖದ ಆಳ ಹಾಗು ಅಗಲ ಬದಲಾಗುತ್ತಿರುತ್ತದೆ. ಇದು ನೀರಿನ ಸಂಗಮ ಹಾಗು ಹರಿವಿನ ಒಂದು ಸಕ್ರಿಯ ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ಪರಿಣಾಮವಾಗಿ ಲವಣತ್ವದ ಬದಲಾವಣೆ ಹಾಗು DO (ಕರಗಿದ ಆಮ್ಲಜನಕ) ಈ ಸರೋವರದ ಪ್ರಾಥಮಿಕ ಉತ್ಪಾದನೆಗೆ, ಸಮುದ್ರ ಜೀವಿಗಳ ಬದುಕಿಗೆ, ಜೈವಿಕ ವೈವಿಧ್ಯತೆ ಹಾಗು ಮೀನುಗಾರಿಕೆಗೆ ಅಡ್ಡ ಪರಿಣಾಮವನ್ನು ಉಂಟುಮಾಡುತ್ತದೆ,

ಲವಣತ್ವದ ಪ್ರಮಾಣವು ಮಾನ್ಸೂನ್ ನಲ್ಲಿ ಸೊನ್ನೆಯಿಂದ ಹಿಡಿದು ಮೂನ್ಸೂನ್ ಗೆ ಮುಂಚಿನ ಅವಧಿ ಹಾಗು ನಂತರದ ಅವಧಿಯಲ್ಲಿ ಸುಮಾರು 52 ppmವರೆಗೂ (ಅಧಿಕ ಲವಣಾಂಶ) ಬದಲಾಗುತ್ತದೆ. ವ್ಯಾಪಕ ಈ ಬದಲಾವಣೆಗೆ ಹೊಂದಾಣಿಕೆಗಳು ಸರೋವರದ ಸೆಸೈಲ್(ತೊಟ್ಟು ಅಥವಾ ಕಾಂಡವಿಲ್ಲದೆ ಬುಡದಿಂದಲೇ ಅಂಟಿಕೊಂಡಿರುವ)ಹಾಗು ಜಡವಾದ ಜೀವಿಗಳಿಗೆ ಕಷ್ಟಕರವಾಗಿರುತ್ತದೆ. ಆದಾಗ್ಯೂ,(ವಿಶಿಷ್ಟ ಜಾತಿ ಮೀನು) ಯೂರಿಹಲಿನೆ ಜೀವಿಗಳು ಸರೋವರದಲ್ಲಿ ವಾಸಿಸುತ್ತವೆ.[]

ಈ ಆವೃತ ಜಲಭಾಗದಲ್ಲಿರುವ ಜಲತಳ ಜೀವಿಗಳು ಅಥವಾ ಸಸ್ಯ ಅಥವಾ ಪ್ರಾಣಿಯ ಸ್ವಾಭಾವಿಕ ನೆಲೆಯನ್ನು ಮೂರು ವಲಯಗಳಾಗಿ ವಿಂಗಡಿಸಲಾಗುತ್ತದೆ. ಮೊದಲ ವಲಯವಾದ ದಕ್ಷಿಣ ವಲಯವು ಮಣ್ಣು ಮಿಶ್ರಿತ ಮರಳಿನಿಂದ ಕೂಡಿದೆ. ಉತ್ತರ ಭಾಗದ ಎರಡನೇ ವಲಯವು ಸಂಪೂರ್ಣವಾಗಿ ಮಣ್ಣಿನಿಂದ ಕೂಡಿದೆ. ಮರಳು ಹಾಗು ಮಣ್ಣು ಸಮನಾಗಿರುವ ಮೂರನೇ ವಲಯವು ಕಲೆಗಳ ಅವಶೇಷದೊಂದಿಗೆ ವಿಪರೀತವಾಗಿ ಬೆಳೆದಿರುತ್ತವೆ. ಜೊತೆಗೆ ಇದು ಜಲತಳ ಜೀವಿಗಳ ಜೈವಿಕ ವೈವಿಧ್ಯತೆಯೊಂದಿಗೆ ಸಮೃದ್ಧವಾಗಿರುತ್ತದೆ.[]

ಭಾರ ಲೋಹಗಳಾದ ಮೆಗ್ನೀಸಿಯಂ, ಸೀಸ, ಸತು, ನಿಕಲ್, ಕ್ಯಾಡ್ಮಿಯಂ, ಅಲ್ಯೂಮಿನಿಯಂ ಹಾಗು ತಾಮ್ರದ ವಿಷತ್ವದ ಪ್ರಮಾಣಗಳು ಹಾಗು ಸರೋವರದಲ್ಲಿರುವ ರಾಸಾಯನಿಕಗಳಾದ ಅಮೋನಿಯ, ಸಲ್ಫೇಟ್ ಹಾಗು ಫ್ಲೋರೈಡ್ ಗಳು ಕಡಿಮೆ ಪ್ರಮಾಣದಲ್ಲಿರುತ್ತವೆ.[೧೬]

ಸಸ್ಯಸಂಪತ್ತು ಮತ್ತು ಪ್ರಾಣಿ ವೈವಿಧ್ಯ

[ಬದಲಾಯಿಸಿ]

ಆವೃತ ಜಲಭಾಗವು ಸಸ್ಯ ಸಂಪತ್ತು ಹಾಗು ಪ್ರಾಣಿ ವೈವಿಧ್ಯದಿಂದ ಸಮೃದ್ಧವಾಗಿದೆ, ಇದು ವಾಣಿಜ್ಯ ಮೀನುಗಾರಿಕೆಗೆ ಸಕ್ರಿಯವಾಗಿ ನೆರವಾಗುತ್ತದೆ. ಜೊತೆಗೆ ಒಂದು ದೊಡ್ಡ ಹಾಗು ವಿವಿಧ ಪಕ್ಷಿ ಸಂಕುಲಕ್ಕೆ ನೆಲೆಯಾಗಿದೆ.

ಸರೋವರ ವಿಜ್ಞಾನ

[ಬದಲಾಯಿಸಿ]
ಪುಲಿಕಾಟ್ ಸರೋವರದ ಪ್ರತಿಬಂಧಕ ದ್ವೀಪಗಳಲ್ಲಿರುವ ಪಾಮೈರ ಪಾಮ್ ಮರಗಳು ಹಾಗು ಮೀನುಗಾರಿಕೆ ಪ್ರದೇಶ

ಸರೋವರದ ಸುತ್ತಮುತ್ತಲಿನ ಹಲವು ಹಳ್ಳಿಗಳಿಗೆ ಹಾಗು ದ್ವೀಪಗಳಿಗೆ ಮೀನುಗಾರಿಕೆಯು ಒಂದು ಪ್ರಮುಖ ಕಸುಬಾಗಿದೆ.[೧೦].ಸರೋವರವು ಮೀನುಗಾರಿಕೆ ವೈವಿಧ್ಯತೆಯಿಂದ ಸಮೃದ್ಧವಾಗಿದೆ, ಬಹುತೇಕವಾಗಿ ಸಮುದ್ರದ ಜೀವಿಗಳು, ಕೆಲವು ಕೇವಲ ಚೌಳಾದ(ಜವಳು) ನೀರಿನಲ್ಲಿದ್ದರೆ ಕೆಲವು ತಾಜಾ ನೀರಿನ ಜೀವಿಗಳಾಗಿವೆ. ಮಲೆಟ್ ಗಳು(ಆಹಾರದಲ್ಲಿ ಬಳಕೆಯಾಗುವ ಮೀನು) ಹಾಗು ಬೆಕ್ಕುಮೀನುಗಳು ಪ್ರಮುಖವಾಗಿ ಚೌಳಾದ ನೀರಿನ ಮೀನುಗಳಾಗಿವೆ, ಇವುಗಳು ಜೀವನಾಧಾರಕ್ಕೆ ಮೀನುಗಾರಿಕೆ ನಡೆಸುವ ಸರೋವರದ ಮೀನುಗಾರರಿಗೆ ನೆರವಾಗಿವೆ. ಸರೋವರವು ಹಲವು ಜಾತಿಯ ಮೀನುಗಳಿಗೆ ಆಶ್ರಯ ನೀಡಿದೆ.[] ಸರೋವರ ಪ್ರದೇಶದ ಮೂರನೇ ಎರಡು ಭಾಗದಷ್ಟು ನೆಲೆಯು ತಮಿಳುನಾಡಿನಲ್ಲಿದೆ. ಅದಲ್ಲದೇ ಉಳಿದ ಭಾಗವು ಆಂಧ್ರಪ್ರದೇಶದಲ್ಲಿ ನೆಲೆಯೂರಿದೆ. 12,370ರಷ್ಟು ಮೀನುಗಾರರು ಸರೋವರದ ಮೀನುಗಾರಿಕೆಯ ಮೇಲೆ ಅವಲಂಬಿಸಿದ್ದಾರೆ. (ಆಂಧ್ರಪ್ರದೇಶದಲ್ಲಿ 6,000 ಹಾಗು ತಮಿಳುನಾಡಿನಲ್ಲಿ 6,370).[೧೭]

ವಾರ್ಷಿಕವಾಗಿ ಸರಾಸರಿ 1200 ಟನ್ ಗಳಷ್ಟು ಮೀನು ಹಾಗು ವಲ್ಕವಂತವರ್ಗದ(ಕಠಿಣ ಚರ್ಮದ) ಜೀವಿಗಳನ್ನು ಸಂಗ್ರಹಿಸಲಾಗುತ್ತದೆ, ಇದರಲ್ಲಿ ಪ್ರಾನ್ (ಸಮುದ್ರ ಜೀವಿಗಳಲ್ಲಿ ಒಂದು ಮೀನು ಜಾತಿ)ಗಳು 60%ನಷ್ಟಿದ್ದರೆ, ನಂತರದ ಸ್ಥಾನವನ್ನು ಮಲೆಟ್ ಗಳು ಆಕ್ರಮಿಸಿಕೊಂಡಿವೆ.[೧೦] ಬಿಳಿ ಹಾಗು ಟೈಗರ್ ಪ್ರಾನ್ ಗಳು, ಜೆಲ್ಲಿ ಮೀನು(ಲೋಳೆ ಮೀನು), ಫಿನ್ ಫಿಶ್ ಹಾಗು ಆವೃತ ಜಲಭಾದಲ್ಲಿ ವಾಸಿಸುವ ಹಸಿರು ಏಡಿಗಳು ಸಮುದ್ರಾಹಾರವಾಗಿ ರಫ್ತುಗೊಳ್ಳುತ್ತವೆ, ಇವೆಲ್ಲವೂ ಆವೃತ ಜಲಭಾಗದಿಂದ ಉಂಟಾಗುವ ಆರ್ಥಿಕ ಪ್ರಯೋಜನಗಳಾಗಿವೆ.[೧೮] ಒಟ್ಟಾರೆ 168 ಮೀನು ಜಾತಿಗಳನ್ನು ವರದಿ ಮಾಡಲಾಗಿದೆ.[] ಸತತವಾಗಿ ಕಂಡು ಬರುವ ಜೀವಿಗಳೆಂದರೆ ಮಲೆಟ್ ಗಳು: M. ಕುನ್ನೆಸಿಯಸ್ , M. ಜೆರ್ಡೋನಿ , M. ದುಸ್ಸುಮಿಯೇರಿ , M. ಸೆಫಲುಸ್ , M. ಬೋರ್ನೆನ್ಸಿಸ್ ಹಾಗು ಉಬ್ಬುಮೀನು T. ನಿಗ್ರೊ ಪಂಕ್ಟಾಟಸ್ , T. ಲಿಯೋಪಾರ್ಡಸ್ , ಬಾರ್ಬಸ್ ಡೋರ್ಸಲಿಸ್ , ಬೆಕ್ಕುಮೀನು, ಮಕ್ರೊನೆಸ್ ವಿಟ್ಟಟಸ್ , ಸರ್ಡಿನೆಸ್, ಸರ್ಡಿನೆಲ್ಲ ಫಿಂಬ್ರಿಯಾಟ ಹಾಗು ಮಿಲ್ಕ್ ಫಿಶ್. ಫಿನ್ ಫಿಶ್, ಹಸಿರು ಏಡಿಗಳು, ಮೃದ್ವಂಗಿಗಳು ಹಾಗು ಪ್ರಾನ್ ಗಳು ಆವೃತ ಜಲಭಾಗದಿಂದ ವ್ಯಾಣಿಜ್ಯಕವಾಗಿ ಬಳಕೆಯಾಗುವ ಮೀನುಗಳಾಗಿವೆ. ಅಪಾಯದ ಅಂಚಿನಲ್ಲಿರುವ ಹಸಿರು ಕಡಲಾಮೆಗಳು ಶ್ರೀಹರಿಕೋಟದ ಸಮುದ್ರ ತಟದಲ್ಲಿ ಕಂಡುಬರುತ್ತದೆ.[೧೦]

ಪ್ರಾನ್ ಗಳಲ್ಲದೆ ಉಪ್ಪನ್ನು ಸಹ ಆವೃತ ಜಲಭಾಗದಿಂದ ತಯಾರಿಸಲಾಗುತ್ತದೆ.[೧೩]

ಪಕ್ಷಿಸಂಕುಲ

[ಬದಲಾಯಿಸಿ]

ಅಧಿಕ ಆಳವಿಲ್ಲದ ಸರೋವರವು ನೀರಿನಲ್ಲಿ ವಾಸಿಸುವ ಪಕ್ಷಿ ವೈವಿಧ್ಯಕ್ಕೆ ಹೆಸರಾಗಿದೆ. ಜೊತೆಗೆ ವಲಸೆಯ ಬರುವ ಪಕ್ಷಿಗಳಿಗೆ ಇದೊಂದು ಪ್ರಮುಖ ನಡುವಣ ತಂಗುದಾಣವಾಗಿರುವುದರ ಜೊತೆಗೆ ವಲಸೆ ಬರುವ ನೀರಿನಲ್ಲಿ ವಾಸಿಸುವ ಪಕ್ಷಿಗಳಿಗೆ ಭಾರತದ ಪೂರ್ವ ಕರಾವಳಿಯ ಮೂರನೇ ಅತ್ಯಂತ ಪ್ರಮುಖ ತೇವಭೂಮಿಯಾಗಿದೆ, ವಿಶೇಷವಾಗಿ ವಸಂತ ಹಾಗು ಶರತ್ಕಾಲದಲ್ಲಿ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ. ಆವೃತ ಜಲಭಾಗದ ಸಮೃದ್ಧವಾದ ಪಕ್ಷಿಸಂಕುಲವನ್ನು ಗಮನದಲ್ಲಿರಿಸಿಕೊಂಡು, ಅಲ್ಲಿ ಎರಡು ಪಕ್ಷಿಧಾಮಗಳನ್ನು ಸ್ಥಾಪಿಸಲಾಗಿದೆ, ಕ್ರಮವಾಗಿ ಆಂಧ್ರಪ್ರದೇಶದಲ್ಲಿ ಒಂದು ಹಾಗು ತಮಿಳುನಾಡಿನಲ್ಲಿ ಒಂದು.[೧೫][೧೯]

ಆಂಧ್ರಪ್ರದೇಶದ ಭಾಗದಲ್ಲಿರುವ ಪುಲಿಕಾಟ್ ಸರೋವರದ ಪಕ್ಷಿಧಾಮವನ್ನು ಸೆಪ್ಟೆಂಬರ್ 1976ರಲ್ಲಿ ಸ್ಥಾಪಿಸಲಾಯಿತು, ಇದು ರಾಜ್ಯದಲ್ಲಿರುವ ಆವೃತ ಜಲಭಾಗದ ಒಟ್ಟಾರೆ ಪ್ರದೇಶದಲ್ಲಿ 172 square kilometres (66 sq mi)ರಷ್ಟು ಪ್ರದೇಶವನ್ನು ನೆಲ್ಲೂರು ಜಿಲ್ಲೆಯ ತಾಡಾ ತಾಲ್ಲೂಕಿನಲ್ಲಿ ಹೊಂದಿದೆ. ರಾಜ್ಯದ ವನ್ಯಜೀವಿಕುಲ ವಿಭಾಗವು ಪಕ್ಷಿಧಾಮದಲ್ಲಿರುವ ನೀರು ಹಾಗು ನೆಲದ ಮೇಲೆ ವಾಸಿಸುವ 115 ಪಕ್ಷಿವರ್ಗವನ್ನು ಪಟ್ಟಿ ಮಾಡಿದೆ.[]

ಆವೃತ ಜಲಭಾಗದ ತಮಿಳುನಾಡು ಭಾಗವು60 square kilometres (23 sq mi)ರಷ್ಟು ಪ್ರದೇಶವನ್ನು ಹೊಂದಿದೆ, ಇದು ತಿರುವಳ್ಳುವರ್ ಜಿಲ್ಲೆಯ ಪೋನ್ನೇರಿ ಹಾಗು ಗುಮ್ಮಿಡಿಪುಂಡಿ ತಾಲ್ಲೂಕುಗಳವರೆಗೆ ವಿಸ್ತರಿಸಿದೆ, ಇದನ್ನು ಒಂದು ಪಕ್ಷಿಧಾಮವೆಂದು ಅಧಿಕೃತವಾಗಿ ಅಕ್ಟೋಬರ್ 1980ರಲ್ಲಿ ಘೋಷಿಸಲಾಯಿತು.

ಪ್ರತಿ ವರ್ಷ ಸರಿಸುಮಾರು 15,000 ಭಾರಿ ಗಾತ್ರದ ಫ್ಲೆಮಿಂಗೋಗಳು ಸರೋವರಕ್ಕೆ ಬರುತ್ತವೆಂದು ವರದಿ ಮಾಡಲಾಗಿದೆ, ಇದರ ಜೊತೆಯಲ್ಲಿ ಪೆಲಿಕನ್ ಗಳು(ನೇರೆ ಹಕ್ಕಿ), ಮೀಂಚುಳ್ಳಿಗಳು, ಹೆರನ್ ಗಳು(ಕ್ರೌಂಚ ಪಕ್ಷಿ), ಬಣ್ಣದ ಕೊಕ್ಕರೆಗಳು, ಸ್ಪೂನ್ ಬಿಲ್ ಗಳು(ಚಮಚ ಕೊಕ್ಕಿನ ಹಕ್ಕಿಗಳು ಹಾಗು ಬಾತುಕೋಳಿ ಗಳು ಸೇರಿವೆ.[]

ಪುಲಿಕಾಟ್ ಸರೋವರದಲ್ಲಿ ಕಂಡುಬಂದ ಸ್ಪಾಟ್ ಬಿಲ್ಡ್ ಪೆಲಿಕನ್

ಆವೃತ ಜಲಭಾಗದಲ್ಲಿ ನೀರಿನ ಮಟ್ಟವು ಕಡಿಮೆ ಇರುವ ಜಾಗದಲ್ಲಿ ಫ್ಲೆಮಿಂಗೋಗಳು ಹೆಚ್ಚಾಗಿ ಕಂಡುಬರುತ್ತವೆ40 centimetres (16 in). ಅಧಿಕ ಶೈವಲ, ಮೀನು ಹಾಗು ಜಲತಳ ವೈವಿಧ್ಯವು ಇರುವ ಪ್ರದೇಶದಲ್ಲಿಯೂ ಫ್ಲೆಮಿಂಗೋಗಳು ಕಂಡುಬರುತ್ತವೆ.[೨೦] ಈ ಪ್ರದೇಶದಲ್ಲಿ ಕಂಡು ಬರುವ ನೀರಿನ ಇತರ ಪಕ್ಷಿಗಳೆಂದರೆ ಸ್ಪಾಟ್ ಬಿಲ್ಲ್ಡ್ ಪೆಲಿಕನ್, ಕ್ರೌಂಚ ಪಕ್ಷಿಗಳ ಏಳು ವರ್ಗಗಳು ಹಾಗು ಬೆಳ್ಳಕ್ಕಿಗಳು, ಬಣ್ಣದ ಕೊಕ್ಕರೆ, ಭಾರಿ ಗಾತ್ರದ ಫ್ಲೆಮಿಂಗೋಗಳು, ಬಾತುಕೊಳಿಗಳು, ಸಮುದ್ರ ತೀರದ ಹಕ್ಕಿಗಳ 20 ಜಾತಿಗಳು, ಉದ್ದ ರೆಕ್ಕೆಯ ಹಕ್ಕಿಗಳು, ಕಡಲ ಕಾಗೆಗಳು, ಸಣ್ಣ ಗಾತ್ರದ ಮುಳುಗು ಹಕ್ಕಿಗಳು, ಇಂಡಿಯನ್ ನೀರುಕಾಗೆ, ಸಣ್ಣ ನೀರುಕಾಗೆ, ಏಶಿಯನ್ ಓಪನ್ ಬಿಲ್ ಕೊಕ್ಕರೆ, ಕಪ್ಪು ತಲೆಯ ಬಾಗುಕೊಕ್ಕಿನ ಬೆಳ್ಳಕ್ಕಿ, ಯುರೇಷಿಯನ್ ಚಮಚ ಕೊಕ್ಕಿನ ಹಕ್ಕಿ, ಕಡಿಮೆ ಸದ್ದನ್ನು ಮಾಡುವ ಸಣ್ಣ ಬಾತುಕೋಳಿ, ಸ್ಪಾಟ್ ಬಿಲ್ ಬಾತುಕೋಳಿ, ಗ್ರೇಟ್ ಥಿಕ್-ನೀ ಹಾಗು ಸ್ಟೋನ್ ಕರ್ಲೆವ್.

ಚಳಿಗಾಲದ ನೀರಿನ ಹರಿವಿಗೆ ಹಲವಾರು ಪಕ್ಷಿಗಳು ವಲಸೆ ಬರುತ್ತವೆ ಇವರಲ್ಲಿ ಬಾರ್ ಹೆಡೆಡ್ ಹೆಬ್ಬಾತು, ರಡ್ಡಿ ಶೆಲ್ಡಕ್, ಯುರೇಷಿಯನ್ ವಿಜನ್, ಸಿಹಿನೀರಿನ ಬಾತುಕೋಳಿ,[ಸೂಕ್ತ ಉಲ್ಲೇಖನ ಬೇಕು] ಸಾಧಾರಣವಾದ ಸಣ್ಣ ಬಾತುಕೋಳಿ, ಉತ್ತರದ ಬಾತುಕೋಳಿ (ಗ್ರೌಸ್ ಹಕ್ಕಿ), ಗಾರ್ಗನಿ(ಸಿಹಿನೀರಿನ ಬಾತುಕೋಳಿ), ಉತ್ತರದ ಷವಲರ್(ಆನಾಸ್ ಕ್ಲಿಪಿಯಾಟ ಕುಲದ ಬಾತುಕೋಳಿ), ಸಾಧಾರಣವಾದ ಯೂರೋಪಿನ ಬಾತುಕೋಳಿ, ಕಂದು ಬಣ್ಣದ ತಲೆಯನ್ನು ಹೊಂದಿರುವ ಉದ್ದ ರೆಕ್ಕೆಯ ಹಕ್ಕಿ, ಕಪ್ಪು ಬಣ್ಣದ ತಲೆಯನ್ನು ಹೊಂದಿರುವ ಉದ್ದ ರೆಕ್ಕೆಯ ಹಕ್ಕಿ, ಕೂದಲು ಉಳ್ಳ ಕಡಲ ಕಾಗೆ, ಉದ್ದರೆಕ್ಕೆ-ಕೊಕ್ಕುಳ್ಳ ಕಡಲ ಕಾಗೆ ಹಾಗು ಕ್ಯಾಸ್ಪಿಯನ್ ಕಡಲ ಕಾಗೆ.

ಚಳಿಗಾಲದಲ್ಲಿ ಬೇಟೆಗಾಗಿ ಬರುವ ಇತರ ಹಕ್ಕಿಗಳೆಂದರೆ: ಬಿಳಿ ಬಣ್ಣದ ಉದರವನ್ನು ಹೊಂದಿರುವ ಸಮುದ್ರ ಹದ್ದು, ಕಡಲ ಡೇಗೆ, 'ಸರ್ಕಸ್' ಕುಲದ ಡೇಗೆಗಳು ಹಾಗು ಬೇಟೆಗಿಡುಗ ಗಳು.[೨೧][೨೨] ಹೆಚ್ಚಿನ ಪ್ರಮಾಣದ ಫ್ಲೆಮಿಂಗೋಗಳು ಆಂಧ್ರಪ್ರದೇಶದಲ್ಲಿರುವ ಪಕ್ಷಿಧಾಮದಲ್ಲಿ ವೆಂಡಾಡು ಹಾಗು ಇರುಕ್ಕಂ ದ್ವೀಪಗಳ ಸುತ್ತುಮುತ್ತ ಕಂಡುಬರುತ್ತವೆ.

ಆಂಧ್ರಪ್ರದೇಶದ ಭಾಗದಲ್ಲಿ, ಪಕ್ಷಿ ವೀಕ್ಷಣೆಗೆ ಇರುವ ಒಂದು ಅನುಕೂಲಕರ ಸ್ಥಳವೆಂದರೆ ಸುಳ್ಳುರ್ ಪೇಟ (ರಾಷ್ಟ್ರೀಯ ಹೆದ್ದಾರಿ 5 (ಭಾರತ))SHAR ರಸ್ತೆಯಿಂದ ಸರೋವರಕ್ಕೆ ಪೂರ್ವದಲ್ಲಿ ತಿರುಗಿದರೆ ನೀರು ಹಕ್ಕಿಗಳ ದಂಡು ತಿನ್ನುತ್ತಿರುವುದು ಕಂಡುಬರುತ್ತದೆ, ವಿಶೇಷವಾಗಿ ಫ್ಲೆಮಿಂಗೋಗಳ ದಂಡು.[]

ನೀರಿನಲ್ಲಿ ಬೆಳೆಯುವ ಸಸ್ಯವರ್ಗಗಳು

[ಬದಲಾಯಿಸಿ]

ನೀರಿನಲ್ಲಿ 59 ಬಗೆಯ ಸಸ್ಯವರ್ಗಗಳು ಬೆಳೆಯುತ್ತವೆಂದು ವರದಿ ಮಾಡಲಾಗಿದೆ, ಇದರಲ್ಲಿ ಎಂಟು ಕ್ಯಾನೋಫಿಸೆಯೆ , ಏಳು ಕ್ಲೋರ್ಫಿಸೆಯೆ ಹಾಗು ಎರಡು ರೋಡೊಫಿಸೆಯೆಗಳು ಸೇರಿವೆ. ಅವಶೇಷಗಳ ಉಳಿಕೆಗಳು, ಒಣಗಿದ, ಹಸಿರು ಕಾಡುಗಳು ಹಾಗು ಮೀನುಗಾರಿಕೆ ಮಾಡುವ ಹಳ್ಳಿಗಳ ಕಾಡು ಪ್ರದೇಶದಲ್ಲಿ ಆವರಿಸಿರುವ ಸರೋವರದ ದೃಶ್ಯವು ಮನಮೋಹಕವಾಗಿದ್ದು,ಅದರ ಗಡಿಯಲ್ಲಿನ ಹಳ್ಳಿಗಳು ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿವೆ. ಪ್ರೋಸೋಪಿಸ್ ಜುಲಿಫ್ಲೋರ , ಸ್ಪೈರುಲಿನ ಮಜೋರ್ , ಓಸ್ಸಿಲ್ಲಟೋರಿಯ spp. , ಅನಬೆನ spp. , ರಿಜೊಸೋಲೆನಿಯ ಕ್ಯಾಸ್ಟ್ರಕಾನೆಯಿ , ಯುಕಾಮ್ಪಿಯ ಕಾರ್ನುಟ ಹಾಗು ಕ್ಲಿಮಾಕೋಡಿಯಂ ಫ್ರವೆನ್ಫೆಲ್ಡಿಯಾನಂ ನ ಅತಿಕ್ರಮಣಶೀಲ ತೇಲುವಸಸ್ಯ ವರ್ಗಗಳು ಸರೋವರದ ಸುತ್ತಲಿನ ಆವರಣದಲ್ಲಿ ಕಂಡುಬಂದಿರುವುದು ದಾಖಲಾಗಿದೆ.[][೧೦]

ಸರೋವರವು ಎದುರಿಸುತ್ತಿರುವ ಅಪಾಯಗಳು

[ಬದಲಾಯಿಸಿ]

ಆಂಧ್ರಪ್ರದೇಶದಲ್ಲಿರುವ ಸರೋವರದ ಭಾಗದಲ್ಲಿನ ಆವೃತ ಜಲಭಾಗದಲ್ಲಿ ಹಲವಾರು ಅಪಾಯಗಳನ್ನು ಗುರುತಿಸಲಾಗಿದೆ. ಇವುಗಳೆಂದರೆ: ತ್ಯಾಜ್ಯದಿಂದ ಉಂಟಾಗುವ ಮಾಲಿನ್ಯ, ಕ್ರಿಮಿನಾಶಕಗಳು, ವ್ಯವಸಾಯಕ್ಕೆ ಬಳಸುವ ರಾಸಾಯನಿಕಗಳು ಹಾಗು ಕೈಗಾರಿಕೆಗಳಿಂದ ಹೊರಹೊಮ್ಮುವ ರಾಸಾಯನಿಕಗಳು - ಆರಣಿ ಹಾಗು ಕಲಂಗಿ ನದಿಗಳು ಸರೋವರಕ್ಕೆ ಸೇರುವುದರಿಂದ ಅವುಗಳಲ್ಲಿರುವ ರಸಗೊಬ್ಬರಗಳು ಹಾಗು ಕ್ರಿಮಿನಾಶಕಗಳು, ಇವುಗಳು ಕೃಷಿ ಭೂಮಿಯಿಂದ ನೇರವಾಗಿ ಕಾಲುವೆಗೆ ಹರಿಯುತ್ತದೆ, ಗೃಹಬಳಕೆಯಿಂದ ಬರುವ ತ್ಯಾಜ್ಯಗಳು, ಹಲವಾರು ಮೀನು ಸಂಸ್ಕರಣಾ ಘಟಕಗಳಿಂದ ಹೊರಬೀಳುವ ರಾಸಾಯನಿಕಗಳು; ಯಂತ್ರಚಾಲಿತ ಹಡಗುಗಳಿಂದ ಸೋರಿಕೆಯಾಗುವ ತೈಲಗಳು; ಪಕ್ಷಿಧಾಮದಿಂದ ಬಿಡುಗಡೆಯಾಗುವ 4,780 hectares (11,800 acres)ಸಮುದ್ರದ ರಾಸಾಯನಿಕಗಳು ಹಾಗು ಉಪ್ಪು ತಯಾರಿಕಾ ಕಾರ್ಖಾನೆ ಹಾಗು ಆವೃತ ಜಲಭಾಗದ ಪೂರ್ವ ಭಾಗದಲ್ಲಿ 1,000 acres (400 ha)ಕ್ಕೂ ಅಧಿಕ ಚಿಪ್ಪುಜೀವಿಗಳ ಸಾಕಣೆಯು ಪುಲಿಕಾಟ್ ಪಕ್ಷಿಧಾಮಕ್ಕೆ ಅಡ್ಡ ಪರಿಣಾಮವನ್ನು ಉಂಟುಮಾಡಿದೆ; 30,000 ಮೀನುಗಾರರು ಹಾಗು 20,000 ಕೃಷಿಕರ ಜೀವನವೂ ಸಹ ಹದಗೆಡುತ್ತದೆ (ಇವರೆಲ್ಲರಿಗೂ ಮೀನುಗಾರಿಕೆಯು ತಮ್ಮ ವೃತ್ತಿಯು ಮಂದವಾಗಿರುವ ಸಮಯದಲ್ಲಿ ಕೈಗೊಳ್ಳುವ ಆರ್ಥಿಕ ಚಟುವಟಿಕೆಯಾಗಿದೆ). ಈ ಚಟುವಟಿಕೆಯು ಜಲಜೀವಿ ಕೃಷಿಯ ಅಭಿವೃದ್ಧಿಗೆ ತೀವ್ರತರವಾದ ಪರಿಣಾಮವನ್ನು ಬೀರಬಹುದೆಂದು ವರದಿ ಮಾಡಲಾಗಿದೆ.[೧೫]

ತಮಿಳುನಾಡು ಭಾಗದ ಆವೃತ ಜಲಭಾಗಕ್ಕೆ ಎರಡು ಪ್ರಮುಖ ಮೂಲಗಳಿಂದ ಅಪಾಯಗಳಿವೆ. ಅವುಗಳೆಂದರೆ ಹೂಳು ತುಂಬುವಿಕೆ ಹಾಗು ಮಾಲಿನ್ಯ.

ಹೂಳು ತುಂಬುವಿಕೆ ಹಾಗು ಸಂಚಿತಶಿಲೆ ಸಾಗಣೆಯ ತೀವ್ರತರವಾದ ಪ್ರಕ್ರಿಯೆಯ ಕಾರಣದಿಂದ ನದಿಮುಖದ ಆವರ್ತಕ ಮುಚ್ಚುವಿಕೆಯು ಸರೋವರದ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದೆ. ಈ ಗಾತ್ರದ ಇಳಿಮುಖತೆ ಸಮುದ್ರದ ತಾಜಾ ನೀರಿನ ವಿನಿಮಯವನ್ನು ತಗ್ಗಿಸುವುದರ ಜೊತೆಗೆ ಸರೋವರದ ನೀರಿನ ಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ ರಾಡಿಗೊಳಿಸಿದೆ.

20ನೇ ಶತಮಾನದ ಪೂರ್ವದಲ್ಲಿದ್ದ ಸರೋವರದ 1.5 metres (4.9 ft)ರಷ್ಟು ಸರಾಸರಿ ಆಳವು, ಇದೀಗ ಆವೃತ ಜಲಭಾಗದ ಸುಮಾರು 1 metre (3.3 ft)ರಷ್ಟು ಕಡಿಮೆಯಾಗಿದೆ. ಇದರ ಪರಿಣಾಮವಾಗಿ ತೊಡಕುಗಳು ಉಂಟಾಗಿವೆ ಉದಾಹರಣೆಗೆ ನದಿಮುಖವು ಹೂಳು ತುಂಬುವಿಕೆಯಿಂದ ಮುಚ್ಚಿ ಹೋಗುತ್ತದೆ. ಅಲ್ಲದೇ ಬೇಸಿಗೆ ಕಾಲದಲ್ಲಿ ಮುಚ್ಚಿ ಹೋಗುತ್ತದೆ. (ಜೂನ್-ಜುಲೈ ನಿಂದ ಅಕ್ಟೊ-ನವೆಂ); ಮಳೆಗಾಲದಲ್ಲಿ ಪ್ರವಾಹ ಮಟ್ಟದಲ್ಲಿ ಏರಿಕೆಯಾಗುತ್ತದೆ; ಪ್ರತಿಬಂಧಕವು ಮುಚ್ಚಿದ ಪರಿಣಾಮವಾಗಿ ಸರೋವರವು ಒಂದು ದೊಡ್ಡ ಆವಿಯಾಗುವ ಜಲಾನಯನ ಭೂಮಿಯಾಗಿ ಕಾರ್ಯ ನಿರ್ವಹಿಸುತ್ತದೆ. ಪರಿಣಾಮವಾಗಿ ಹೂಳು ತುಂಬುವಿಕೆಯ ಮಟ್ಟವು ಇಳಿಕೆಯಾಗುತ್ತದೆ ಅಥವಾ ಸರೋವರವು ವಾಯವ್ಯ ಮಾನ್ಸೂನ್ ಅವಧಿಯಲ್ಲಿ ಹೆಚ್ಚಿನ ಪ್ರವಾಹವನ್ನು ಒಳಗೊಳ್ಳುತ್ತದೆ; ಸರೋವರದ ನೀರಿನ ಮಟ್ಟದಲ್ಲಿನ ಏರುಪೇರು ಸಸ್ಯಸಂಪತ್ತು, ಪ್ರಾಣಿಕೋಟಿ ಹಾಗು ಮೀನುಗಾರಿಕೆಗೆ ಅಡ್ಡ ಪರಿಣಾಮವನ್ನು ಬೀರುತ್ತದೆ.(ಸಮುದ್ರ ಮಟ್ಟಕ್ಕಿಂತ ಮೇಲೆ ಅಥವಾ ಕೆಳಗೆ); ಹೂಳು ತುಂಬುವಿಕೆಯು ಸರೋವರದ ನದಿಮುಖದಲ್ಲಿ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ಉಬ್ಬರವಿಳಿತದ ಅಂತಃಪ್ರವಾಹವು ಕಡಿಮೆಯಾಗುತ್ತದೆ, ತತ್ಪರಿಣಾಮವಾಗಿ ವಾಣಿಜ್ಯಕವಾಗಿ ಮುಖ್ಯವಾದ ಜೀವಿಗಳಾದ ಪ್ರಾನ್ ಗಳು ಹಾಗು ಮಲೆಟ್ ಗಳ ಸ್ಟಾಕಿಂಗ್ ಕುಗ್ಗುತ್ತದೆ.[][೧೯]

ಮಾಲಿನ್ಯ ಹಾಗು ಮಾನವನ ಪ್ರಭಾವಗಳೆಂದರೆ: ಆರಣಿ ಹಾಗು ಕಲಂಗಿ ನದಿಗಳು ಕೃಷಿ ಭೂಮಿಯಿಂದ ಹರಿಯುವ ಜಲ ನಿರ್ಗಮನವನ್ನು ಸರೋವರಕ್ಕೆ ಕೊಂಡೊಯ್ಯುತ್ತವೆ, ಇದು ಸರೋವರದಲ್ಲಿ ರಸಗೊಬ್ಬರಗಳು ಹಾಗು ಕ್ರಿಮಿನಾಶಕಗಳಿಂದ ಮಾಲಿನ್ಯವನ್ನು ಉಂಟುಮಾಡುತ್ತವೆ; ಗೃಹಬಳಕೆಯಿಂದ ಬಿಡುಗಡೆಯಾಗುವ ತ್ಯಾಜ್ಯಗಳೂ ಸಹ ಸರೋವರವನ್ನು ಸೇರುತ್ತವೆ; ಪೆಟ್ರೋರಾಸಾಯನಿಕಗಳ ಸಂಕೀರ್ಣ, ಶಕ್ತಿ ಕೇಂದ್ರ ಹಾಗು ಎನ್ನೋರೆ ಬಂದರಿನಲ್ಲಿರುವ ಒಂದು ಉಪಗ್ರಹ ಕೇಂದ್ರವು ಸಮಸ್ಯೆಯನ್ನು ಅಧಿಕಗೊಳಿಸಿದೆ;[೧೦] ದ್ವೀಪದ 14 ಹಳ್ಳಿಗಳು ಸರೋವರದಿಂದ ಪ್ರವಾಹದ ಅಪಾಯವನ್ನು ಎದುರಿಸುತ್ತಿವೆ;[೧೬] 2004ರ ಸುನಾಮಿಯ ನಂತರ, ಮೀನುಗಾರಿಕೆಗಾಗಿ ಬಳಸುವ ದೋಣಿಗಳ ಸಂಖ್ಯೆಯು ಅಧಿಕವಾಗಿದೆ. ಇದು ಮೀನು, ಪ್ರಾನ್ ಗಳು ಹಾಗು ಏಡಿಗಳ 'ಕ್ಯಾಚ್ ಪರ್ ಯೂನಿಟ್ ಎಫರ್ಟ್' ಆಗಿ ಪರಿಣಮಿಸಿದೆ. ಇದು 1000 ಟನ್ ಗಳಿಂದ ಸುಮಾರು 700 ಟನ್ ಗಳಿಗೆ ಇಳಿದಿದೆ;[೧೬] ಇದು ಸಮುದ್ರದ ಮೀನುಗಾರರು ಹಾಗು ಆವೃತ ಜಲಭಾಗದ ಮೀನುಗಾರರ ನಡುವೆ ಸಾಮಾಜಿಕ ಹಾಗು ಮೀನುಗಾರಿಕೆ ಹಕ್ಕಿನ ಘರ್ಷಣೆಗಳನ್ನು ಅಧಿಕಗೊಳಿಸಿದೆ.

2004ರ ಹಿಂದೂ ಮಹಾಸಾಗರದ ಭೂಕಂಪದಿಂದಾಗಿ, ಆವೃತ ಜಲಭಾಗದ ಮೀನುಗಾರಿಕೆಯ ಮೇಲೆ ಪ್ರತಿಕೂಲವಾದ ಪರಿಣಾಮ ಬೀರಿತು, ಜೊತೆಗೆ ಹಲವು ಮೀನುಗಾರಿಕಾ ಸಮುದಾಯಗಳು ಏಪ್ರಿಲ್ 2005ರವರೆಗೂ ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದವು, ಏಕೆಂದರೆ ಇದರಿಂದ ಉಂಟಾದ ಸಾವು-ನೋವುಗಳು, ಮನೆ ಹಾಗು ದೋಣಿಗಳ ನಾಶವು ಅವರನ್ನು ಸಮುದ್ರ ಹಾಗು ಸರೋವರದಲ್ಲಿ ಮೀನುಗಾರಿಕೆ ಮಾಡದಂತೆ ತಡೆಯಿತು. ಸರ್ಕಾರ ಹಾಗು ಇತರ ಮಾಧ್ಯಮಗಳು ಒದಗಿಸಿದ ಪರಿಹಾರ ಸಾಮಗ್ರಿಗಳ ಮೇಲೆ ಅವರು ಜೀವಿಸಿದ್ದರು. ಮೀನಿಗೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿದ್ದ ಹಲವರಿಗೂ ಇದು ಪರಿಣಾಮ ಬೀರಿತು.[೨೩] ಆದಾಗ್ಯೂ, ಸುನಾಮಿಯಿಂದ ಉಂಟಾದ ಒಂದು ಅನುಕೂಲವೆಂದರೆ ಆವೃತ ಜಲಭಾಗವು ವಿಸ್ತರಿಸುತ್ತಾ ಹೋಯಿತು.[೨೪]

ಪುನರುಜ್ಜೀವನ ಹಾಗು ಸಾಮಾಜಿಕ ಕ್ರಿಯಾ ಸಿದ್ಧಾಂತ

[ಬದಲಾಯಿಸಿ]

ಒಂದು ಪರಿಣತ ತಂಡವು "ವೈಲ್ಡ್ ಲೈಫ್ ಆಕ್ಷನ್ ಪ್ಲಾನ್ ಫಾರ್ ಕನ್ಸರ್ವೇಶನ್ ಮೆಶರ್ಸ್ ಆನ್ ದಿ ಪುಲಿಕಾಟ್ ಲೇಕ್ ಸ್ಯಾಂಚುರಿ"ಯನ್ನು ಸಿದ್ಧಪಡಿಸಿದೆ, ಇದು ಒಂದು ಜಲಜೀವವಿಜ್ಞಾನದ ಸಂಶೋಧನಾ ಕೇಂದ್ರ, ಪ್ರವಾಸಿ ಕೇಂದ್ರದ ಸ್ಥಾಪನೆಗೆ ಯೋಜಿಸಿದೆ. ಪಕ್ಷಿಧಾಮದ ಸಿಬ್ಬಂದಿಗೆ ಆವೃತ ಜಲಭಾಗವನ್ನು ಅದರ ಸುತ್ತ ಗಸ್ತು ತಿರುಗಲು ಹೆಚ್ಚಿಗೆ ಆಳವಿಲ್ಲದ ದೋಣಿಗಳನ್ನು ಒದಗಿಸುವುದು ಹಾಗು ಒಂದು ನಿರ್ವಹಣಾ ಯೋಜನೆಯನ್ನು ತಯಾರಿಸುವುದು ಹಾಗು ಸಂಪೂರ್ಣ ಪ್ರದೇಶದ ಸಂರಕ್ಷಣಾ ಕಾರ್ಯವಿಧಾನವನ್ನು ರೂಪಿಸುವುದು.

ಮೇಲೆ ಹೇಳಲಾಗಿರುವ ಕ್ರಿಯಾಯೋಜನೆಯಲ್ಲದೆ, ಒಂದು ಸರ್ಕಾರೇತರ ಸಂಸ್ಥೆಯಾದ (NGO) COPDANET ನಿಯಂತ್ರಕ ವಿಧಾನಗಳನ್ನು ರೂಪಿಸುವುದರ ಮೂಲಕ ಪರಿಣಾಮಕಾರಿ ಕಾರ್ಯವಿಧಾನಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ, ಇದರಂತೆ ಮೀನುಗಾರಿಕೆ ಸಮುದಾಯಗಳಲ್ಲಿ ಒಗ್ಗಟ್ಟು ಹಾಗು ಸ್ನೇಹವನ್ನು ಸೃಷ್ಟಿಸುವುದು, ಸಾಂಪ್ರದಾಯಿಕ "ನಿರ್ಧಿಷ್ಟ ವ್ಯವಸ್ಥೆಯ" ಉಳಿಕೆಗೆ ನಿಯಮಗಳ ಒಂದು ಪಟ್ಟಿಯನ್ನು ಘೋಷಿಸುವುದು, ಆವೃತ ಜಲಭಾಗದ ಮೀನುಗಾರ ಸಮುದಾಯವನ್ನು ನಿಷ್ಠೆಯಿಲ್ಲದ ಅಂಶಗಳು ಹಾಗು ಅವರ ಮೇಲೆ ಹೇರಲಾದ ಆಸಕ್ತಿಯಿಲ್ಲದ ಸಂಗತಿಗಳಿಂದ ರಕ್ಷಿಸುವುದು, ಪಾಡು ವ್ಯವಸ್ಥೆಯ ಮೂಲಕ ಮ್ಯಾಂಗ್ರೋವ್ ನ ಹರಡಿಕೆಗೆ ಪ್ರಯತ್ನಗಳನ್ನು ನಡೆಸುವುದು ಹಾಗು ಪರಿಸರ ವ್ಯವಸ್ಥೆಯನ್ನು ಮರುನಿರ್ಮಾಣವನ್ನು ಸರ್ಕಾರಿ ನಿಯೋಗದ ಮಧ್ಯಸ್ಥಿಕೆಯ ಮೂಲಕ 'ನದಿಯ ಮರಳುದಿಬ್ಬದಿಂದ ನದಿಮುಖ'ದವರೆಗೂ ನಿಯಮಿತವಾಗಿ ಹೂಳದಿರುವುದು. ಇದರ ಮುಖಾಂತರ ಸಾಕಷ್ಟು ಲವಣ ಹಾಗು ತಾಜಾ ನೀರಿನ ಮಿಶ್ರಣದಿಂದ ಆವೃತ ಜಲಭಾಗವು ಮೀನುಗಾರಿಕೆ ಸಂಪತ್ತನ್ನು ಹೆಚ್ಚಿಸಲು ಭರವಸೆ ನೀಡುವುದು.[೧೭]

ಆವೃತ ಜಲಭಾಗದಲ್ಲಿ ಸುನಾಮಿ ನಂತರ ಪುನರ್ವಸತಿ ಕಾರ್ಯದಲ್ಲಿ ಕೈಜೋಡಿಸಿದ NGOಗಳೆಂದರೆ ಸೆಂಟರ್ ಫಾರ್ ರಿಸರ್ಚ್ ಆನ್ ನ್ಯೂ ಇಂಟರ್ನ್ಯಾಷನಲ್ ಇಕನಾಮಿಕ್ ಆರ್ಡರ್ (CReNIEO), ಇದು 1984ರಿಂದಲೂ ಈ ನಿಟ್ಟಿನಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದೆ. ಇದರ ಮುಖ್ಯ ಉದ್ದೇಶವೆಂದರೆ ಭಾರತೀಯ ಸಮಾಜದ ಬಡ ವರ್ಗಗಳ ಕಲ್ಯಾಣಕ್ಕೆ ಪ್ರೋತ್ಸಾಹ ನೀಡುವುದು; ಇದರಲ್ಲಿ ಮಹಿಳೆ, ಮಕ್ಕಳು, ಮೀನುಗಾರರು ಹಾಗು ಬುಡಕಟ್ಟು ಸಮುದಾಯಗಳು ಸೇರಿವೆ, ಜೊತೆಗೆ ವಿಶೇಷವಾಗಿ ಪುಲಿಕಾಟ್ ಸರೋವರದ ಲಾಭದಾಯಕ ನೈಸರ್ಗಿಕ ಸಂಪತ್ತಿನ ನಿರ್ವಹಣೆಗೆ ಒತ್ತು ನೀಡುವುದು.[೨೩]

ಅಂತಾರಾಷ್ಟ್ರೀಯ ಬೆಂಬಲಿತ ಶ್ರೀಲಂಕಾ ಸರ್ಕಾರದ ಪ್ರಾಯೋಗಿಕ ಯೋಜನೆಗಳನ್ನು ಆಧರಿಸಿ, ಶ್ರೀಲಂಕಾ ಹಾಗು ಭಾರತದ ಸರೋವರ ಪ್ರದೇಶಗಳ ಸಮಸ್ಯೆಗಳು ಸದೃಶವೆಂದು ಪರಿಗಣಿಸಲಾಗಿದೆ, CReNIEO ಪುಲಿಕಾಟ್ ನ ಆವೃತ ಜಲಭಾಗದ ಪರಿಗ್ರಹಕ್ಕೆ "ಇಂಟಿಗ್ರೇಟೆಡ್ ಫಿಷರ್ಫೋಕ್ ಡೆವಲಪ್ಮೆಂಟ್ ಪ್ರಾಜೆಕ್ಟ್" ನ್ನು ಆರಂಭಿಸಿತು. ಗ್ಲೋಬಲ್ ನ್ಯಾಚುರಲ್ ಫಂಡ್ (GNF), CReNIEOದ ಯೋಜನೆಯನ್ನು ಬೆಂಬಲಿಸುತ್ತದೆ. ಇದು ಪುಲಿಕಾಟ್ ಪ್ರದೇಶದ ಹಳ್ಳಿಗಾಡಿನ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ. ಇದರ ಮುಖ್ಯ ಉದ್ದೇಶಗಳಲ್ಲಿ ಪರಿಸರದ ಬಗ್ಗೆ ಶಿಕ್ಷಣ, ಸಮರ್ಥನೀಯವಾಗಿ ಭೂಮಿಯ ಬಳಕೆ, ಹೊಸ ಉದ್ಯೋಗಾವಕಾಶಗಳು ಹಾಗು ಸರೋವರದಲ್ಲಿ ಹೆಚ್ಚಿನ ಮೀನುಗಾರಿಕೆಯನ್ನು ತಡೆಯಲು ಸಮರ್ಥನೀಯವಾಗಿ ಮೀನುಗಾರಿಕೆ ಮಾಡುವುದು ಸೇರಿವೆ.[೨೩][೨೫]

ಲೋಯೋಲ ಕಾಲೇಜ್, ಚೆನ್ನೈ ಹಾಗು ಪಳವೆರ್ಕಾಡು ಆಕ್ಷನ್ ನೆಟ್ವರ್ಕ್ (PAN) ಸಿದ್ಧಪಡಿಸಿದ "ಕಮ್ಯೂನಿಟಿ-ಬೇಸ್ಡ್ ಡಿಸಾಸ್ಟರ್ ಪ್ರಿಪೆರೆಡ್ನೆಸ್ಸ್, ವಲ್ನೆರಬಿಲಿಟಿ ಸ್ಟಡೀಸ್ ಹಾಗು ಎನ್ಹಾನ್ಸ್ಮೆಂಟ್ ಆಫ್ ಸಸ್ಟೈನಬಲ್ ಲೈವ್ಲಿಹುಡ್ ಫಾರ್ ದಿ ಇನ್ಹ್ಯಾಬಿಟನ್ಟ್ಸ್ ಆಫ್ ಪಳವೆರ್ಕಾಡು (ಪುಲಿಕಾಟ್)" ಎಂದು ಸಂಶೋಧನಾ ಅಧ್ಯಯನವನ್ನು ಕ್ಯಾಥೊಲಿಕ್ ಆರ್ಗನೈಸೇಶನ್ ಫಾರ್ ರಿಲೀಫ್ ಅಂಡ್ ಡೆವಲಪ್ಮೆಂಟ್ ಏಡ್ CORDAID - ದಿ ನೆದರ್ಲೆಂಡ್ಸ್ 2007ರಲ್ಲಿ ಬಿಡುಗಡೆ ಮಾಡಿತು, ಇದರ ವರದಿಯಂತೆ:[೧೬]

ಒಂದು ದಶಕದ ಹಿಂದೆ ಕೈಗಾರಿಕಾ ಮಾಲಿನ್ಯದ ಅತ್ಯಧಿಕತೆ ಹೊತ್ತ ಚೆನ್ನೈನ ಉತ್ತರ ಭಾಗದಲ್ಲಿರುವ ನೀರಿನ ಆಗರವಾದ ಪುಲಿಕಾಟ್ ಸರೋವರವು ಇಂದು ಪರಿಸರ ವಿಜ್ಞಾನವನ್ನು ತಿರುಗಮರುಗ ಮಾಡಿತು, ತನ್ನ ಪರಿದಿಯೊಳಗೆ ಹೆಚ್ಚಿನ ವಿಷತ್ವ ಪ್ರಮಾಣಗಳನ್ನು ವರದಿ ಮಾಡಿತು.

ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್ ನಿಂದ ಭಾರತಕ್ಕೆ ಸಾಲವನ್ನು ಪಡೆದುಕೊಂಡ "ಸುನಾಮಿ ಎಮರ್ಜೆನ್ಸಿ ಅಸ್ಸಿಸ್ಟೆನ್ಸ್ ಪ್ರಾಜೆಕ್ಟ್" ನಡಿಯಲ್ಲಿ (TEAP), ಪುಲಿಕಾಟ್ ಸರೋವರದ ಉದ್ದಕ್ಕೂ ಎತ್ತರ ಸೇತುವೆಗಳ ನಿರ್ಮಾಣದ ಜೊತೆಗೆ ಸರೋವರದ ಇಕ್ಕೆಲಗಳೂ ರಸ್ತೆಗೆ ಸಂಪರ್ಕವನ್ನು ಕಲ್ಪಿಸುತ್ತಿದ್ದವು, ಪುಲಿಕಾಟ್ ಹಳ್ಳಿಯಿಂದ ಆರಂಭಿಸಿ ಕುಪ್ಪಂ ನ ಬೆಳಕು ಮನೆಯವರೆಗೂ ಯೋಜಿಸಲಾಗಿರುವ ಇದರ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ. ನಿರ್ಮಾಣ ಕಾರ್ಯವು ಪೂರ್ಣಗೊಂಡ ನಂತರ ಇದು ದ್ವೀಪದಲ್ಲಿ ವಾಸಿಸುವ 50,000 ಜನರಿಗೆ ಒಂದು ಸುರಕ್ಷಿತ ಮಾರ್ಗವನ್ನು ಕಲ್ಪಿಸಿಕೊಡುತ್ತದೆ ಜೊತೆಗೆ ಭವಿಷ್ಯದಲ್ಲಿ ಕರಾವಳಿ ಪ್ರದೇಶಗಳಲ್ಲಿ ಉಂಟಾಗಬಹುದಾದ ನೈಸರ್ಗಿಕ ಪ್ರಕೋಪಗಳಿಗೆ ತುರ್ತಾಗಿ ಪ್ರತಿಕ್ರಯಿಸಲು ಜನಗಳು ಹಾಗು ಸಾಧನಗಳ ಸಂಚಾರಕ್ಕೆ ಸುಲಭ ಮಾರ್ಗವಾಗಬಹುದು.[೧೬]

ಇತ್ತೀಚಿಗೆ, ಹೈದರಾಬಾದ್ನ, ಆಂಧ್ರಪ್ರದೇಶದ ಬರ್ಡ್ ವಾಚರ್ಸ್ ಸೊಸೈಟಿಯ (BSAP) ಸುಮಾರು 21 ಸದಸ್ಯರು ಪುಲಿಕಾಟ್ ಸರೋವರಕ್ಕೆ ಭೇಟಿನೀಡಿ ಅಲ್ಲಿನ ನೆಲಪಟ್ಟು ಪಕ್ಷಿಧಾಮವನ್ನು ಸಂದರ್ಶಿಸಿ ವಿಭಿನ್ನ ಪಕ್ಷಿಗಳನ್ನು ವೀಕ್ಷಿಸಿದರು.ಪುಲಿಕಾಟ್ ಸರೋವರ ಸುನಾಮಿ ನಂತರದ ಆಗುಹೋಗೋಗಳ ಬಗ್ಗೆ ಈ ತಂಡ ಪರಿಶೀಲನೆ ನಡೆಸಿತು.[೨೬]

ಸರೋವರದ ಬಗ್ಗೆ ಕಾಳಜಿ ವಹಿಸುತ್ತಿರುವ ಮತ್ತೊಂದು NGO ಎಂದರೆ ಪುಲಿಕಾಟ್ ಲೇಕ್ ಬರ್ಡ್ ಲವರ್ಸ್ ಸೊಸೈಟಿ. http://www.pulicatlake.org/ Archived 2010-09-19 ವೇಬ್ಯಾಕ್ ಮೆಷಿನ್ ನಲ್ಲಿ.

PLBLS ಎಂಬ ಸ್ವಯಂಸೇವಕ ಸಂಸ್ಥೆಯು ಒಂದು ದಶಕಗಳಿಗೂ ಹೆಚ್ಚಿಗೆ ಪಕ್ಷಿಧಾಮದ ಸಂರಕ್ಷಣೆ, ವಿದ್ಯಾರ್ಥಿಗಳಿಗೆ ಶಿಕ್ಷಣ, ಹಾಗು ಅಪರೂಪವಾದ ಪಕ್ಷಿಗಳನ್ನು ಸಂರಕ್ಷಿಸಲು ಹಳ್ಳಿಗಳು ಹಾಗು ಕೃಷಿಕರಿಗೆ ಮಾಹಿತಿಯನ್ನು ನೀಡುತ್ತಿದೆ. PLBLS ಸಂಸ್ಥೆಯನ್ನು 18, 19 ವರ್ಷದ ನಾಲ್ಕು ಉತ್ಸಾಹಿ ಯುವಕರು ಆರಂಭಿಸಿದರು ಜೊತೆಗೆ ತೇವಭೂಮಿಯ ಮೇಲೆ ಅಂತಾರಾಷ್ಟ್ರೀಯ ವಿಚಾರಸಂಕಿರಣಗಳನ್ನು ಏರ್ಪಡಿಸಿದರು, ರೈತರು ಹಾಗು ವಿಧ್ಯಾರ್ಥಿಗಳಿಗೆ ಗದ್ದೆಗಳಿಗೆ ವಿಹಾರ & ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿದರು, ಪಕ್ಷಿ ವೀಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗು ಸಂಶೋಧಕರಿಗೆ ಮಾರ್ಗದರ್ಶನವನ್ನು ನೀಡಿದರು, ಚಿತ್ರ ಸಂಪುಟ ಹಾಗು ಚಿತ್ರ ಪ್ರದರ್ಶನವನ್ನು ಏರ್ಪಡಿಸಿದರು ಹಾಗು ಪ್ರತಿ ವರ್ಷ ಪ್ರಸಿದ್ಧ ವ್ಯಕ್ತಿಗಳು ಭಾವಹಿಸುವ ತಾಂತ್ರಿಕ ವಿಚಾರಸಂಕಿರಣವನ್ನು ಏರ್ಪಡಿಸುತ್ತಿದ್ದರು.
PLBLS 2004, 05, 06 & 07ರ ಫ್ಲೆಮಿಂಗೋ ಫೆಸ್ಟಿವಲ್ ನಲ್ಲಿ ಸಹಕಾರ ನೀಡಿದ್ದಕ್ಕಾಗಿ ಅತ್ಯುತ್ತಮ ಸಾಮಾಜಿಕ ಪ್ರಶಸ್ತಿಯನ್ನು ಗಳಿಸಿದೆ (ರಾಜ್ಯ ಸರ್ಕಾರವು ನಡೆಸುವ ಒಂದು ಪ್ರಮುಖ ಉತ್ಸವ). ಇಂಡಿಯನ್ ಬರ್ಡ್ ಕನ್ಸರ್ವೇಶನ್ ನೆಟ್ವರ್ಕ್ ನ ನಿಯತಕಾಲಿಕವಾದ ಮಿಸ್ಟ್ನೆಟ್ PLBLS ಬಗ್ಗೆ ತನ್ನ ಲೇಖನವನ್ನು ಪ್ರಕಟಿಸಿತು. ಇದರ ನಂತರ ಯಶಸ್ವಿಯಾಗಿ ಸಂಸ್ಥೆಯು ಈ ಚಟುವಟಿಕೆಯನ್ನು ಆರಂಭಿಸಿತು.

ಪಾಡು ವ್ಯವಸ್ಥೆ

[ಬದಲಾಯಿಸಿ]

ತಮಿಳುನಾಡಿನಲ್ಲಿರುವ ಆವೃತ ಜಲಭಾಗದ ದಕ್ಷಿಣ ದಿಕ್ಕಿನಲ್ಲಿ ಮೀನುಗಾರಿಕೆಯು ಬಹಳ ಹೇರಳವಾಗಿದೆ, ಎನ್ನೋರೆ ಗೆ ಸಮೀಪದಲ್ಲಿದ್ದು ಹಾಗು 5 kilometres (3.1 mi) ನದಿಮುಖ ಹಾಗು ಮರಳು ದಿಬ್ಬವನ್ನು (ಇಲ್ಲಿ ಸಮುದ್ರದ ನೀರು ಹಾಗು ಆವೃತ ಜಲಭಾಗದ ನೀರು ಒಂದಾಗುತ್ತವೆ) ಮೂರು ಪ್ರಮುಖ ಪುಲಿಕಾಟ್ ನ ಆವೃತ ಜಲಭಾಗದ ಹಳ್ಳಿಗಳಾದ ಕೊಟ್ಟೈ ಕುಪ್ಪಂ, ಚುಯಿಸ್ತಿನ್ ಕುಪ್ಪಂ ಹಾಗು ಆಡಿ ಕುಪ್ಪಂನ ಮೀನುಗಾರರು ನಿಯಂತ್ರಿಸುತ್ತಾರೆ. ಈ ಮೂರು ಹಳ್ಳಿಗಳ ನಿಯಂತ್ರಣದಲ್ಲಿರುವ ಮೀನುಗಾರಿಕೆ ವ್ಯವಸ್ಥೆಯನ್ನು ಪಾಡು ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಪುಲಿಕಾಟ್ ಆವೃತ ಜಲಭಾಗದಲ್ಲಿ ರೂಢಿಯಲ್ಲಿರುವ ಒಂದು ಪುರಾತನ ಪದ್ದತಿಯಾಗಿದೆ ಜೊತೆಗೆ ಇದನ್ನು ಶ್ರೀಲಂಕಾದ ಕರಾವಳಿ ಪ್ರದೇಶಗಳು ಹಾಗು ತಮಿಳುನಾಡಿನ ಇತರ ಕರಾವಳಿ ಪ್ರದೇಶದಲ್ಲಿಯೂ ಸಹ ಈ ಪದ್ಧತಿಯನ್ನು ಅನುಸರಿಸಲಾಗುತ್ತದೆ.[೧೭] ಪಾಡು ಎಂದರೆ:[೧೭]

ಒಂದು ನಿರ್ದಿಷ್ಟ ಸಮುದಾಯದ ಅರ್ಹ ಸದಸ್ಯರಿಗೆ ಮೀನುಗಾರಿಕಾ ಚಟುವಟಿಕೆಯನ್ನು ನಿರ್ದಿಷ್ಟವಾಗಿ ಗೊತ್ತುಪಡಿಸಿದ ಪ್ರದೇಶಗಳಲ್ಲಿ ನಿರ್ವಹಿಸಲು ಅಧಿಕಾರವನ್ನು ನೀಡುವಂತಹ ಸಾಂಪ್ರದಾಯಿಕ ವ್ಯವಸ್ಥೆಯಾಗಿದೆ. ಮೀನುಗಾರಿಕಾ ಪ್ರದೇಶಗಳು ಸರೋವರದ ನದಿಮುಖದಿಂದ 5 kilometres (3.1 mi)ನಷ್ಟು ವ್ಯಾಸದಲ್ಲಿರುವುದರ ಜೊತೆಗೆ ಸರೋವರದಲ್ಲಿ ನೀರು ಕಡಿಮೆ ಇರುವ ಸಂದರ್ಭದಲ್ಲೂ ಅದನ್ನು ಒಣಗದಂತೆ ಮಾಡುವ ಒಂದು ಉಪ್ಪುನೀರಿನ ಬಾವಿಯನ್ನು ಸಂರಕ್ಷಿಸಲಾಗಿದೆ.

ಆದಾಗ್ಯೂ, ಈ ಸಾಂಪ್ರದಾಯಿಕ ರೂಢಿಯು ಬಹಳ ಸಮೃದ್ಧ ಪ್ರದೇಶಗಳಲ್ಲಿ ನಿಯಂತ್ರಣದಲ್ಲಿರುವ ಜಾತಿ ವ್ಯವಸ್ಥೆಯನ್ನು ಅವಲಂಬಿಸಿದೆ ಆದರೆ ಇದನ್ನು ಪೂರ್ವದ ಹೆಚ್ಚಿನ ಮೀನುಗಾರರು ಉಲ್ಲಂಘಿಸುತ್ತಾರೆ. ಈ ವ್ಯವಸ್ಥೆಗೆ ಸಮುದ್ರ ತೀರದ ಹಳ್ಳಿಗಳೂ ಸಹ ಸವಾಲು ಹಾಕುತ್ತವೆ. ಇದರ ಪರಿಣಾಮವಾಗಿ, ಹಿಂಸಾಚಾರಕ್ಕೆ ಎಡೆ ಮಾಡಿಕೊಡುವ ಘರ್ಷಣೆಗಳು ವರದಿಯಾಗಿವೆ[೧೭]

ತಲುಪುವ ಮಾರ್ಗ

[ಬದಲಾಯಿಸಿ]

ತಮಿಳುನಾಡು ಭಾಗದ ಸರೋವರವು 60 kilometres (37 mi) ಚೆನ್ನೈನಿಂದ ಉತ್ತರ ದಿಕ್ಕಿನಲ್ಲಿದೆ. ಇದಕ್ಕೆ ಹತ್ತಿರದ ವಿಮಾನ ನಿಲ್ದಾಣ ಹಾಗು ರೈಲು ನಿಲ್ದಾಣವು ಚೆನ್ನೈನಲ್ಲಿದೆ. ಚೆನ್ನೈನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಲಿಕಾಟ್ ನ್ನು ತಲುಪಲು, ಉತ್ತರ ದಿಕ್ಕಿಗೆ ನೆಲ್ಲೂರಿನ ದಾರಿಯಲ್ಲಿ ಹೋಗಬೇಕು, ನಂತರ 30 kilometres (19 mi)ತತ್ಚೂರ್ ಕೂಟು ರಸ್ತೆಯ ಸುಂಕದ ಕಟ್ಟೆಯಿಂದ ಬಲಕ್ಕೆ ತಿರುಗಿ ಅಲ್ಲಿಂದ ಪೊನ್ನೇರಿ ಹಳ್ಳಿಗೆ ತಲುಪಿ ನಂತರ ಅಲ್ಲಿಂದ 18 km (11.2 mi) ಪುಲಿಕಾಟ್ ಹಳ್ಳಿಗೆ ಹೋಗಬಹುದಾಗಿದೆ.[೧೮]

ಆಂಧ್ರಪ್ರದೇಶ & ತಮಿಳುನಾಡಿನ ಮಧ್ಯಭಾಗದಲ್ಲಿ ಈಗ ತಾನೇ ಅಸ್ತಿತ್ವಕ್ಕೆ ಬರುತ್ತಿರುವ ಉಪಗ್ರಹ ನಗರವಾದ ಶ್ರೀಸಿಟಿ(ಶ್ರೀನಗರ)ಯು 1.5 kilometres (0.93 mi)ರಷ್ಟು ಅಂತರದಲ್ಲಿದೆ. ಸುಳ್ಳುರ್ ಪೇಟ ನಿಲ್ದಾಣವು ಶ್ರೀಹರಿಕೋಟದಿಂದ 17 kilometres (11 mi)ರಷ್ಟು ದೂರದಲ್ಲಿದೆ. ಉತ್ತರ ದಿಕ್ಕಿನಿಂದ, ರಾಷ್ಟ್ರೀಯ ಹೆದ್ದಾರಿ 5, ಒರಿಸ್ಸಾದ ಭಾರಗೊರದ ಮೂಲಕ ಹಾದು ಹೋಗುವುದರ ಜೊತೆಗೆ ಸುಳ್ಳುರ್ ಪೇಟೆಯ ಮೂಲಕ ಚೆನ್ನೈನ್ನು ತಲುಪುತ್ತದೆ.

ಆವೃತ ಜಲಭಾಗದಿಂದ ಪಶ್ಚಿಮ ದಿಕ್ಕಿನಲ್ಲಿರುವ ಬಕಿಂಗ್ ಹ್ಯಾಮ್ ಕಾಲುವೆಯಲ್ಲಿ ಸರಕು ಸಾಗಣೆ ಹಾಗು ಪ್ರಯಾಣಿಕರು ಸಂಚರಿಸುವ ದೋಣಿಗಳು ಸರೋವರದ ಮೂಲಕ ಪ್ರಯಾಣಕ್ಕಾಗಿ ಬಳಕೆಯಾಗುತ್ತದೆ.[೧೦]

ಚಿತ್ರ ಸಂಪುಟ

[ಬದಲಾಯಿಸಿ]

ಹೆಚ್ಚಿನ ಮಾಹಿತಿಗಾಗಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ "'Macrofauna of Pulicat Lake" by P. J. Sanjeeva Raj, National Biodiversity Authority, Chennai" (PDF). Archived from the original (pdf) on 2011-07-27. Retrieved 2010-08-24.
  2. [3] p.68
  3. O.K.Nambiar. ""AN ILLUSTRATED MARITIME HISTORY OF INDIAN OCEAN" HIGHLIGHTING THE MARITIME HISTORY OF THE EASTERN SEA BOARD". Archived from the original on 2009-06-19. Retrieved 2021-07-17.{{cite web}}: CS1 maint: bot: original URL status unknown (link)
  4. Francis, Peter (2002). Asia's Maritime Bead Trade: 300 B.C. to the Present. University of Hawaii Press. p. 33. ISBN 082482332X.
  5. ೫.೦ ೫.೧ ೫.೨ "Pulicat".
  6. ೬.೦ ೬.೧ "Alternative Development Paradigm". Archived from the original on 2008-11-20. Retrieved 2010-08-24.
  7. Azariah, Dr. Jayapaul (2007). "3. My Biography Paliacatte to Pulicat 1400 to 2007". Ch. 3, Pulicat Place Names Through History (PDF). Chennai, Tamil Nadu, India: CRENIEO. Archived from the original (PDF) on 2009-03-04. Retrieved 2008-11-21.
  8. Azariah, Dr. Jayapaul (2007). "5. My Biography Paliacatte to Pulicat 1400 to 2007". Ch. 5, Dutch Trade Relations (PDF). Chennai, Tamil Nadu, India: CRENIEO. Archived from the original (PDF) on 2009-03-04. Retrieved 2008-11-21.
  9. ೯.೦ ೯.೧ ೯.೨ "Holocene sea-level and climatic fluctuations: Pulicat lagoon – A case study" (PDF). Archived from the original (pdf) on 2011-06-07. Retrieved 2010-08-24.
  10. ೧೦.೦೦ ೧೦.೦೧ ೧೦.೦೨ ೧೦.೦೩ ೧೦.೦೪ ೧೦.೦೫ ೧೦.೦೬ ೧೦.೦೭ ೧೦.೦೮ ೧೦.೦೯ "Inventory of Wetlands" (PDF). Archived from the original (pdf) on 2016-03-03. Retrieved 2010-08-24.
  11. "Chandrayaan-1 Successfully Enters Lunar Orbit". ISRO. Retrieved 2008-11-08.
  12. "Pulicat Lake".
  13. ೧೩.೦ ೧೩.೧ "Pulicat-Lake Pulicat Lake Lagoon".
  14. ""My Biography Palliacatta - The Pulicat 1400 to 2007" authored by Prof. Dr. Jayapaul Azariah".
  15. ೧೫.೦ ೧೫.೧ ೧೫.೨ "Pulicat lake: Ecologically Important Areas of Andhra Pradesh Coast". Archived from the original on 2007-09-11. Retrieved 2010-08-24.
  16. ೧೬.೦ ೧೬.೧ ೧೬.೨ ೧೬.೩ ೧೬.೪ "At Pulicat lake, an ecological turnaround". Archived from the original on 2007-04-19. Retrieved 2010-08-24.
  17. ೧೭.೦ ೧೭.೧ ೧೭.೨ ೧೭.೩ ೧೭.೪ "Pulicat Lagoon Fishery Resources and Paadu System".
  18. ೧೮.೦ ೧೮.೧ "... and a placid Pulicat experience". ದಿ ಹಿಂದೂ. Archived from the original on 2010-08-26. Retrieved 2010-08-24.
  19. ೧೯.೦ ೧೯.೧ "Pulicat Lake: Ecologically Important Areas of Tamil Nadu Coast". Archived from the original on 2009-04-10. Retrieved 2010-08-24.
  20. ರಮೇಶ್, D.A., ರಾಮಚಂದ್ರನ್, S.(2005) ಭಾರತದ ಪುಲಿಕಾಟ್ ಆವೃತ ಜಲಭಾಗದ ಪರಿಸರ ವ್ಯವಸ್ಥೆಯಲ್ಲಿ ಫ್ಲೆಮಿಂಗೋನ(ಫೋನಿಕಾಪ್ಟೇರುಸ್ ರೋಸೆಯುಸ್ ) ಹಂಚಿಕೆಗೆ ಪ್ರಭಾವ ಬೀರುವ ಅಂಶಗಳು ವೆಟ್ ಲ್ಯಾಂಡ್ಸ್ ಇಕಾಲಜಿ ಅಂಡ್ ಮ್ಯಾನೇಜ್ಮೆಂಟ್ 13 (1):69-72
  21. "Bird Forum, Pulicat Lake (Andhra Pradesh) (2008)".
  22. "Pulicat Lake Bird Sanctuary". Tamil Nadu Forest Department. Archived from the original on 2017-01-04. Retrieved 2007-09-09.
  23. ೨೩.೦ ೨೩.೧ ೨೩.೨ "Post Tsunami Restoration of Mangroves, Education and Reestablishment of Livelihoods (EU Asia Pro-Eco II B Post Tsunami Project)".
  24. "Physics of the tsunami" (pdf). {{cite web}}: Text "page 33)" ignored (help)
  25. "PULICAT - PROJECTS". CRENIEO. 2004). Archived from the original on 2008-07-03. Retrieved 2010-08-24. {{cite web}}: Check date values in: |year= (help)CS1 maint: year (link)
  26. "India:Tsunami Emergency Assistance (Sector) Project" (PDF). Archived from the original (pdf) on 2007-10-28. Retrieved 2010-08-24.


ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Hydrology of Tamil Nadu