ವಿಷಯಕ್ಕೆ ಹೋಗು

ತಮಿಳುನಾಡು ಸರ್ಕಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಮಿಳುನಾಡು-Tamil Nadu ಸರ್ಕಾರ
ವಿಧಾನ ಮಂಡಲಚೆನ್ನೈ
ಕಾರ್ಯಾಂಗ
ರಾಜ್ಯಪಾಲರುಬನ್ವಾರಿಲಾಲ್ ಪುರೋಹಿತ್
ಮುಖ್ಯಮಂತ್ರಿಕೆ ಪಳನಿಸ್ವಾಮಿ
ಉಪಮುಖ್ಯಮಂತ್ರಿಓ ಪನ್ನೀರಸೆಲ್ವಂ
ಶಾಸಕಾಂಗ
ಕರ್ನಾಟಕ ವಿಧಾನ ಸಭೆ
ಸಭಾಪತಿ_(ಸ್ಪೀಕರ್)ಪಿ ಧನಪಾಲ್
ಉಪಸಭಾಪತಿವಿ ಜಯರಾಮನ್
ವಿಧಾನ ಸಭೆ ಸದಸ್ಯರು೨೩೪
ನ್ಯಾಯಾಂಗ
ಉಚ್ಚನ್ಯಾಯಲಯಮದ್ರಾಸ್ ಹೈಕೋರ್ಟ್
ಮುಖ್ಯ_ನ್ಯಾಯಾಧೀಶರುಅಮರೇಶ್ವರ್ ಪ್ರತಾಪ್ ಸಾಹಿ

ತಮಿಳುನಾಡು ಸರ್ಕಾರ

[ಬದಲಾಯಿಸಿ]
ಫೋರ್ಟ್ ಸೇಂಟ್ ಜಾರ್ಜ್: ರಾಜ್ಯದ ಮುಖ್ಯ ಕಾರ್ಯದರ್ಶಿ ಕಾರ್ಯಾಲಯ Govt of Tamil Nadu

ತಮಿಳುನಾಡು ಸರ್ಕಾರವು ಭಾರತದ ತಮಿಳುನಾಡು ರಾಜ್ಯದ ಆಡಳಿತ ಅಧಿಕಾರವನ್ನು ಹೊಂದಿದೆ. ತಮಿಳುನಾಡಿನ ಶಾಸಕಾಂಗವು 1986 ರವರೆಗೆ ಉಭಯ ಸದನಗಳ ಆಗಿತ್ತು. ನಂತರ ಇದು ಭಾರತದ ಇತರೆ ರಾಜ್ಯಗಳಂತೆ ಏಕಸಭೆಯ ಶಾಸಕಾಂಗವಾಗಿ ಪರಿವರ್ತಿತವಾಯಿತು.

ರಾಜ್ಯಪಾಲರು ರಾಜ್ಯದ ಸಂವಿಧಾನ ಮುಖ್ಯಸ್ಥರಾಗಿರುತ್ತಾರೆ. ಮುಖ್ಯಮಂತ್ರಿ ಮಂತ್ರಿಮಂಡಲದಿಂದ ಮುಖ್ಯಸ್ಥರಾಗಿರುತ್ತಾರೆ. ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನ್ಯಾಯಾಂಗದ ಮುಖ್ಯಸ್ಥರಾಗಿರುತ್ತಾರೆ.[]

ಅಧಿಕಾರದಲ್ಲಿ

[ಬದಲಾಯಿಸಿ]

6-12-2016: ಪ್ರಸ್ತುತ ವಿದ್ಯಾಸಾಗರ್ ರಾವ್ ಗವರ್ನರ್ ಆಗಿದ್ದಾರೆ. ಮತ್ತು ಒ. ಪನ್ನೀರ್ ಸೆಲ್ವಂ ತಮಿಳುನಾಡಿನ ಮುಖ್ಯಮಂತ್ರಿ.. ಸಂಜಯ್ ಕಿಶನ್ ಕೌಲ್ ಮದ್ರಾಸ್ ಹೈಕೋರ್ಟ್ ಪ್ರಸಕ್ತ ನ್ಯಾಯಮೂರ್ತಿ. []

ಆಡಳಿತಾತ್ಮಕ ವಿಭಾಗಗಳು

[ಬದಲಾಯಿಸಿ]

ತಮಿಳುನಾಡು ರಾಜ್ಯದಲ್ಲಿ 2011 ರ ಜನಗಣತಿಯಂತೆ 7,21,38,958 ಜನಸಂಖ್ಯೆ ಇದೆ. ಮತ್ತು 1,30,058 ಚದರ ಕಿ.ಮೀ. ಪ್ರದೇಶ ವಿಸ್ತೀರ್ಣವನ್ನು ಹೊಂದಿದೆ. ರಾಜ್ಯದ ಪ್ರಮುಖ ಆಡಳಿತಾತ್ಮಕ ಘಟಕಗಳು 32 ಜಿಲ್ಲೆಗಳು, 76 ಆದಾಯ ವಿಭಾಗಗಳು 220 ತಾಲ್ಲೂಕುಗಳನ್ನು ಹೊಂದಿದೆ.ಅಲ್ಲದೆ 12 ಪುರಸಭಾ ಸಂಸ್ಥೆಗಳನ್ನು 148 ಪುರಸಭೆಗಳನ್ನು, 385 ಪಂಚಾಯತ್ ಒಕ್ಕೂಟಗಳನ್ನು (ಬ್ಲಾಕ್ಗಳನ್ನು), 561 ಪಟ್ಟಣ ಪಂಚಾಯತ್ ಮತ್ತು 12.524 ಗ್ರಾಮ ಪಂಚಾಯತ್ ಗಳನ್ನು ಹೊಂದಿದೆ.

ಇ-ಆಡಳಿತ

[ಬದಲಾಯಿಸಿ]

ತಮಿಳುನಾಡು ,‘ಇ-ಆಡಳಿತ ಏಜೆನ್ಸಿ ತಮಿಳುನಾಡು’, ಇ-ಆಡಳಿತವನ್ನು ಅನುವುಗೊಳಿಸುವ ಪ್ರಯತ್ನಗಳ ಘಟಕ. ಇ-ಆಡಳಿತ ಯೋಜನೆಯ ಒಂದು ಅಂಗವಾಗಿ, ಭೂಮಿಯ ಮಾಲೀಕತ್ವ ದಾಖಲೆಗಳು, ಈ ರೀತಿಯ ಸರ್ಕಾರದ ದಾಖಲೆಗಳ ಬಹುಭಾಗವನ್ನು ಡಿಜಿಟಲ್ ಮಾಡಲಾಗಿದೆ. ಸ್ಥಳೀಯ ಆಡಳಿತದಲ್ಲಿ ಸಂಸ್ಥೆಗಳು ಮತ್ತು ವಿವಿಧ ಸರ್ಕಾರಿ ಇಲಾಖೆಗಳು ಎಲ್ಲಾ ಪ್ರಮುಖ ಆಡಳಿತಾತ್ಮಕ ಕಚೇರಿಗಳನ್ನು ಗಣಕೀಕೃತ ಮಾಡಲಾಗಿದೆ. []

ಉಲ್ಲೇಖ

[ಬದಲಾಯಿಸಿ]
  1. ತಮಿಳುನಾಡು ಮುಖ್ಯಮಂತ್ರಿಯಾಗಿ ಪನ್ನೀರ್‌ಸೆಲ್ವಂ ಪ್ರಮಾಣ ವಚನ;6 Dec, 2016
  2. Chief Justice - Madras High Court
  3. ""Tamilnadu e-Governance Agency". TneGA, Govt. of Tamil Nadu". Archived from the original on 2016-06-12. Retrieved 2016-12-07.