ತಮಿಳುನಾಡು ವಿಧಾನಸಭೆ ಚುನಾವಣೆ ೨೦೧೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಐಎಡಿಎಂಕೆ ಅಧಿಕಾರಕ್ಕೆ[ಬದಲಾಯಿಸಿ]

ಜೆ.ಜಯಲಲಿತಾ (cropped)
ಎಂ.ಕರುಣಾನಿಧಿ
ತಮಿಳುನಾಡು ರಾಜ್ಯದ ವಿಧಾನಸಭೆ, 2011
  • ಎಐಎಡಿಎಂಕೆ: 150 ಸ್ಥಾನ;
  • ಡಿಎಂಡಿಕೆ: 29 ಸ್ಥಾನ;
  • ಡಿಎಂಕೆ: 23 ಸ್ಥಾನ;
  • ಸಿಪಿಐ (ಎಂ): 10 ಸ್ಥಾನ;
  • ಸಿಪಿಐ: 9 ಸ್ಥಾನ;
  • ಕಾಂಗ್ರೆಸ್: 5 ಸ್ಥಾನ;
  • ಪಿಎಮ್.ಕೆ: 3 ಸ್ಥಾನ;
  • ಎಮ್.ಎಮ್.ಎನ್: 2 ಸ್ಥಾನ;
  • ಪಿಟಿ: 2 ಸ್ಥಾನ;
  • ಎಐಎಫ್.ಬಿ.: 1 ಸ್ಥಾನವ
.
  • ಭಾರತದ ರಾಜ್ಯದ ತಮಿಳುನಾಡು ರಾಜ್ಯದ ವಿಧಾನಸಭೆಗೆ ಹದಿನಾಲ್ಕನೆಯ ಚುನಾವಣೆ 13 ಏಪ್ರಿಲ್ 2011 ರಂದು ನಡೆಯಿತು. 234 ಕ್ಷೇತ್ರಗಳ ಸದಸ್ಯರನ್ನು ಚುನಾಯಿಸಬೇಕಾಗಿತ್ತು . ಫಲಿತಾಂಶಗಳನ್ನು ಮೇ 13 ರಂದು ಬಿಡುಗಡೆ ಮಾಡಲಾಯಿತು. 2011 ಎರಡು ಪ್ರಮುಖ ಪಕ್ಷಗಳು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಇವುಗಳ ಬಹು ರಾಜಕೀಯ ಪಕ್ಷಗಳ ಒಕ್ಕೂಟಗಳು ಚುನಾವಣೆ ಎದುರಿಸಿದವು.
  • ಚುನಾವಣೆಯಲ್ಲಿ ರಾಜ್ಯದಲ್ಲಿ ಅತ್ಯಧಿಕ ಮತದಾನದಾಖಲಾಯಿತು. ಚುನಾವಣೆಯಲ್ಲಿ ಒಟ್ಟು ಮತದಾರರ 77,8% ಮತ ಚಲಾಯಿಸಿದರು. ಹಿಂದಿನ 1967ರ 76,57% ರ ಚುನಾವಣೆ ಮತದಾನವನ್ನು ಮೀರಿಸಿತ್ತು.
  • ಮುಂದೆ ಎಐಎಡಿಎಂಕೆ ಒಕ್ಕೂಟ ಚುನಾವಣೆಯಲ್ಲಿ 203 ಕ್ಷೇತ್ರಗಳಲ್ಲಿ ಗೆದ್ದು; ಎಐಎಡಿಎಂಕೆ ಪಕ್ಷ ಕೇವಲ 150 ಸ್ಥಾನಗಳನ್ನು ಗಳಿಸುವ ಮೂಲಕ ಸರಳ ಬಹುಮತ ಗಳಿಸಿತು. ಅದರ ಒಕ್ಕೂಟದ ಪಾಲುದಾರರ ಬೆಂಬಲ ಇಲ್ಲದೆಯೇ ಸರ್ಕಾರ ರಚಿಸಲು ಎಐಎಡಿಎಂಕೆ ಅರ್ಹ ಆಯಿತು. ಡಿಎಂಡಿಕೆ ಒಕ್ಕೂಟ 29 ಸ್ಥಾನಗಳಲ್ಲಿ ಜಯ ಸಾಧಿಸಿತು. ಡಿಎಂಕೆ 23 ಸ್ಥಾನಗಳನ್ನು ಗೆದ್ದು ಅಧಿಕೃತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಆಯ್ಕೆ ಮಾಡಿಕೊಂಡಿತು.
  • ಜೆ.ಜಯಲಲಿತಾ 33 ಮಂತ್ರಿಗಳ ಜೊತೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಮೇ 16,2011 ರಂದು ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದರು. ಗವರ್ನರ್ ಸುರ್ಜಿತ್ ಸಿಂಗ್ ಬರ್ನಾಲಾ ಪ್ರಮಾನ ವಚನ ಬೋಧಿಸಿದರು.

ಚುನಾವಣೆ ಎದುರಿಸಿದ ಒಕ್ಕೂಟಗಳು[ಬದಲಾಯಿಸಿ]

ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಸಮ್ಮಿಶ್ರ ಒಕ್ಕೂಟ
ಕ್ರ.ಸಂ. ಪಕ್ಷ ನಾಯಕ ಸ್ಥಾನಕ್ಕೆ-ಸ್ಪರ್ದೆ.
1 ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಜೆ.ಜಯಲಲಿತಾ 160
2 ದೇಸೀಯ ದ್ರಾವಿಡ ಕಳಗಂ ವಿಜಯಕಾಂತ್ 41
3 ಭಾರತೀಯಕಮ್ಯುನಿಸ್ಟ್ ಪಕ್ಷ ಥಾ ಪಾಂಡಿಯನ್ 10
4 ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಜಿ ರಾಮಕೃಷ್ಣನ್ 12
5 ಮಣಿತಾನೇಯ ಮಕ್ಕಳ್ ಕಚ್ಚಿ ಎಂ ಎಚ್ ಜವಾಹಿರುಲ್ಲಾ 3
6 ಪುಥಿಯಾ ತಮಿಳಕಂನ ಡಾ.ಕೃಷ್ಣಸ್ವಾಮಿ 2
7 ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಪಿ.ವಿ. ಕಥೀರವನ್ 1
ಎಐಎಡಿಎಂಕೆ ಟಿಕೆಟ್ ಅಡಿಯಲ್ಲಿ ಸ್ಪರ್ಧೆ (ನೋಂದಾಯಿಸದ ಪಕ್ಷಗಳು)
8 ಅಖಿಲ ಭಾರತ ಸಮತುವ ಮಕ್ಕಲ್ಕಚ್ಚಿ ಆರ್‍ಲ್ಶರತ್ ಕುಮಾರ್ 2
9 ಭಾರತ ರಿಪಬ್ಲಿಕನ್ ಪಕ್ಷ ಸಿ ಕೆ ತಮಿಜರಸನ್ 1
10 ಆಲ್ ಇಂಡಿಯಾ ಮೂವೆಂದರ್ ಮುನ್ನಾನಿಕಳಗಂ ಎನ್ ಸೇತುರಾಮನ್ 1
11 ತಮಿಳುನಾಡು ಕೊಂಗುನಿಲೈಗ್ನಾರ್ ಪರವಾಯಿ ಯು ತನಿಯರಸು. 1

ದ್ರಾವಿಡ ಮುನ್ನೇತ್ರ ಕಳಗಂ ಸಮ್ಮಿಶ್ರ ಒಕ್ಕೂಟ[ಬದಲಾಯಿಸಿ]

ಕ್ರ.ಸಂ. ಪಕ್ಷ ನಾಯಕ ಸ್ಥಾನಕ್ಕೆ ಸ್ಪರ್ಧೆ
1 ದ್ರಾವಿಡ ಮುನ್ನೇತ್ರ ಕಳಗಂ ಕಲೈಗ್ನಾರ್ ಕರುಣಾನಿಧಿ 119
2 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೆ.ವಿ.ತಂಗಬಾಲು 63
3 ಪಟ್ಟಲಿ ಮಕ್ಕಳ್ ಕಚ್ಚಿ ಡಾ ರಾಮದಾಸ್ 30
4 ವಿದುತಲೆai chiರತೈಗಲ್ ಕಚ್ thol ಲ್.thiರುಮವಲವನ್ 10
5 ಕೂಂಗಿನಾಡು'ಅತ್ಯುತ್ತಮ ಮುನ್ನೇತ್ರ ಕಳಗಂ '. ಎಸ್.ರಾಮಸ್ವಾಮಿ 7
ಡಿಎಂಕೆ ಟಿಕೆಟ್ ಅಡಿಯಲ್ಲಿ (ನೋಂದಾಯಿಸದ ಪಕ್ಷಗಳು)
6 ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್. ಕೆ.ಎಂ.ಖಾದರ್ ಮೊಹಿದೀನ್ 3
7 ಮೂವೇಂದರ್ ಮುನ್ನೇತ್ರ ಕಳಗಂ ಜಿ.ಎಂ.ರ್ಶ್ರೀಧರ ವಡೈಯರ್ 1

ಪ್ರಣಾಳಿಕೆ[ಬದಲಾಯಿಸಿ]

ವಿಧಾನಸಭೆಯಲ್ಲಿ ಎರಡು ದೊಡ್ಡ ಪಕ್ಷಗಳ ಮ್ಯಾನಿಫೆಸ್ಟೊ
ಡಿಎಂಕೆಯ ಪ್ರಣಾಳಿಕೆಯ ಭರವಸೆಗಳು:
  • ಚುನಾವಣೆಯಲ್ಲಿ- 'ಡಿಎಂಕೆಯ ಅಧ್ಯಕ್ಷ ಸಿ.ಎಮ್.ಕರುಣಾನಿಧಿ ನೀಡುತ್ತಾರೆ' ಎಂದು ತಿಳಿಸಿದ ಚುನಾವಣಾ ಪ್ರಣಾಳಿಕೆಯ ಬಿಡುಗಡೆ:
  • ಎಲ್ಲಾ ಮಹಿಳೆಯರಿಗೆ ಉಚಿತ ಬೀಸುವ ಗ್ರೈಂಡರ್ ಅಥವಾ ಮಿಕ್ಸರ್ ಮತ್ತು ಕಾಲೇಜು ವಿದ್ಯಾರ್ಥಿಗಳಿ ಉಚಿತ ಲ್ಯಾಪ್'ಟಾಪ್.
  • ಗ್ರಾಮೀಣ ಯೋಜನೆಗಳು ಮತ್ತು, ಕೊಯಿಮತ್ತೂರು ಮತ್ತು ಮಧುರೈಗೆ ಮೆಟ್ರೋ ರೈಲು.
ಎಐಎಡಿಎಂಕೆಯ ಪ್ರಣಾಳಿಕೆಯ ಭರವಸೆಗಳು:
  • ಪಡಿತರ ಕಾರ್ಡ್ ಹೊಂದಿರುವವರಿಗೆ ಉಚಿತ ಅಕ್ಕಿ 20 ಕೆಜಿ.
  • ೧೧ನೇ ತರಗತಿಗಳ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಉಚಿತ.
  • ಬಿಪಿಎಲ್ ಕುಟುಂಬಗಳಿಗೆ ಉಚಿತ ಖನಿಜ ನೀರು, ಮಿಕ್ಸರ್- ಗ್ರೈಂಡರ್,ಮತ್ತು
  • ಚನ್ನೈಗೆ ಮಾನೋರೈಲು .

ಫಲಿತಾಂಶ[ಬದಲಾಯಿಸಿ]

2011ರ ವಿಧಾನ ಸಭೆ ಚುನಾವಣೆ- 234 ಸ್ಥಾನಗಳು
ಕ್ರ.ಸಂ. ಒಕ್ಕೂಟ / ಪಕ್ಷ ಸ್ಥಾನ ಗಳಿಕೆ ಬದಲಾವಣೆ ಒಟ್ಟು ಮತ ಗಳಿಕೆ ಶೇಕಡ
1. ಎಐಎಡಿಎಂಕೆ ಮೈತ್ರಿ 203 +130 19,085,762 51.9%
2. ಎಐಎಡಿಎಂಕೆ 150 +93 14,150,289 38.4%
3. ಡಿಎಂಡಿಕೆ 29 +28 2,903,828 7.9%
4. ಸಿಪಿಐ (ಎಂ ) 10 +1 888,364 2.4%
5 ಸಿಪಿಐ 9 +3 727,394 2.0%
6 ಮುನಿತ್ತನೀಯ ಮಕ್ಕಳ್ ಕಚ್ಚಿ (ಒಒಏ) 2 +2 181,180 0.5%
7 ಪುಥಿಯಾ ತಮಿಲಗಮ್ (ಪಿಟಿ_ 2 +2 146,454 0.4%
8. ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ (AIFB) 1 +1 88,253 0.2%
9. ಡಿ.ಎಮ್.ಕೆ ಒಕ್ಕೂಟ 31 -126 14,530,215 39.5%
10 ಡಿ.ಎಮ್.ಕೆ. 23 -77 8,249,991 22.4%
11. ಇಂ.ನ್ಯಾ.ಕಾಂಗ್ರೆಸ್’ 5 -32 3,426,432 9.3%
12. ಪಿ.ಎಮ್.ಕೆ. 3 -15 1,927,783 5.2%
13. ವಿಸಿಕೆ 0 -2 555,965 1.5%
14. ಕೆ.ಎಂ.ಕೆ 0 370,044 1.0%
15. ಇತರೆ 0 -4 3,137,137 8.5%
16. ಬಿಜೆಪಿ 0 819,577 2.2%
17. ಎಮ/ಡಿ.ಎಮ್.ಕೆ -3
18. ಪಕ್ಷೇತರ -ಇತರೆ 0 -1 2,120,476 5.8%
19. ಒಟ್ಟು 234 36,753,114 100%

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  • Jayalalithaa sworn in Tamil Nadu Chief Minister". The Hindu. 16 March 2011.
  • Jayalalithaa allots 3 seats for Manithaneya Makkal Katchi". The Hindu. 21 February 2011.
  • CPI (M) announces alliance with AIADMK in TN".[[೧]] (The Hindu. 25 January 2011.)
  • NDTV. 4 March 2011.
  • "DMK, Congress clinch deal". The Hindu. 9 March 2011.
  • Election Results". Election Commission of India. 13 May 2011. Retrieved 13 May 2011.ತಮಿಳುನಾಡು