ಜಿ.ಎಸ್. ಘುರ್ಯೆ
ಜಿ.ಎಸ್ ಘುರ್ಯೆ | |
---|---|
ಜನನ | ಮಲ್ವನ್, ಮಹಾರಾಷ್ಟ್ರ, ಭಾರತ | ೧೨ ಡಿಸೆಂಬರ್ ೧೮೯೩
ಮರಣ | ೨೮ ಡಿಸೆಂಬರ್ ೧೯೮೩(ವಯಸ್ಸು ೯೦) ಮುಂಬಯಿ, ಮಹರಾಷ್ಟ್ರ, ಭಾರತ.[೧] |
ವಾಸಸ್ಥಳ | ಮುಂಬಯಿ |
ಪೌರತ್ವ | ಭಾರತೀಯ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಸಮಾಜಶಾಸ್ತ್ರ, ಮಾನವಶಾಸ್ತ್ರ |
ಸಂಸ್ಥೆಗಳು | ಮುಂಬಯಿ ವಿಶ್ವವಿದ್ಯಾನಿಲಯ |
ಅಭ್ಯಸಿಸಿದ ವಿದ್ಯಾಪೀಠ | ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ |
ಡಾಕ್ಟರೇಟ್ ಸಲಹೆಗಾರರು | ಡಬ್ಲ್ಯೂ.ಹೆಚ್.ರ್ ರಿವೆರ್ಸ್ ಮತ್ತು ಎ.ಸಿ ಹಾಡ್ಡನ್ |
ಪ್ರಭಾವಗಳು | ಡಬ್ಲ್ಯೂ.ಎಚ್.ಆರ್ ರಿವರ್ಸ್ ಆಂಡ್ ಎ. ಸಿ |
ಸಂಗಾತಿ | ಸಾಜುಬೈ ಘುರ್ಯೆ |
ಗೋವಿಂದ ಸದಾಶಿವ ಘುರ್ಯೆ (೧೨ ಡಿಸೆಂಬರ್ ೧೮೯೩ - ೨೮ ಡಿಸೆಂಬರ್ ೧೯೮೩) ಅವರು ಭಾರತೀಯ ಶಿಕ್ಷಣತಜ್ಞರಾಗಿದ್ದರು. ಇವರು ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.[೨] ೧೯೨೪ ರಲ್ಲಿ, ಅವರು ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎರಡನೇ ವ್ಯಕ್ತಿಯಾದರು. ಇವರನ್ನು ಸಮಾಜಶಾಸ್ತ್ರ ಮತ್ತು ಭಾರತೀಯ ಸಮಾಜಶಾಸ್ತ್ರದ ಸಂಸ್ಥಾಪಕ ಎಂದು ಪರಿಗಣಿಸಲಾಗಿದೆ.
ಆರಂಭಿಕ ಜೀವನ
[ಬದಲಾಯಿಸಿ]ಜಿ. ಎಸ್. ಘುರ್ಯೆ ಅವರು ಸಾರಸ್ವತ ಬ್ರಾಹ್ಮಣ ಸಮುದಾಯದಲ್ಲಿ ೧೨ ಡಿಸೆಂಬರ್ ೧೮೯೩ ರಂದು ಮಾಲ್ವಾನ್ (ಇಂದಿನ ಮಹಾರಾಷ್ಟ್ರ) ನಲ್ಲಿ ಜನಿಸಿದರು.[೧][೩] ಅವರು ತಮ್ಮ ಅರಂಭಿಕ ಶಿಕ್ಷಣವನ್ನು ಮುಂಬಯಿಯಲ್ಲಿರುವ ಆರ್ಯನ್ ಎಜುಕೇಶನ್ ಸೊಸೈಟಿ ಪ್ರೌಢಶಾಲೆ, ಗಿರ್ಗಾಂವ್‌ನಲ್ಲಿ ಮಾಡಿದರು. ನಂತರ ಪ್ರೌಢ ಶಿಕ್ಷಣವನ್ನು ಗುಜರಾತಿನ ಬಹದ್ದೂರ್ ಖಾನ್‌ಜಿ ಪ್ರೌಢಶಾಲೆ, ಜುನಾಗಢದಲ್ಲಿ ಮಾಡಿದರು.[೧]. ಅವರು ೧೯೧೨ ರಲ್ಲಿ, ಜುನಗಢ್‌ನಲ್ಲಿನ ಬಹೌದ್ದಿನ್ ಕಾಲೇಜಿಗೆ ಸೇರಿದರು, ಆದರೆ ಒಂದು ವರ್ಷದ ನಂತರ ಎಲ್ಫಿನ್ಸ್ಟೋನ್ ಕಾಲೇಜಿಗೆ ಸ್ಥಳಾಂತರಗೊಂಡರು. ಅಲ್ಲಿಂದ ತಮ್ಮ ಬಿ. ಎ. (ಸಂಸ್ಕೃತ) ಮತ್ತು ಎಮ್. ಎ. (ಸಂಸ್ಕೃತ) ಪದವಿಗಳನ್ನು ಪಡೆದರು.[೪]ಅವರು ತಮ್ಮ ಬಿ. ಎ. ವ್ಯಾಸಂಗ ಮಾಡುತಿದ್ದಾಗ ಭೌ ದಾಜಿ ಪ್ರಶಸ್ತಿಯನ್ನು ಗೆದ್ದರು ಮತ್ತು ಎಮ್. ಎ. ವ್ಯಾಸಂಗ ಮಾಡುತ್ತಿದ್ದಾಗ ಕುಲಪತಿಗಳ ಚಿನ್ನದ ಪದಕವನ್ನು ಗೆದ್ದರು.[೪] ತಮ್ಮ ಎಮ್. ಎ. ಮುಗಿಸಿದ ನಂತರ, ಘುರ್ಯೆ ಇಂಗ್ಲೆಂಡ್‌ನಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ವಿದ್ಯಾರ್ಥಿವೇತನವನ್ನು ಪಡೆದರು ಮತ್ತು ೧೯೨೨ ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ತಮ್ಮ ಪಿಎಚ್‌ಡಿ ಗಳಿಸಿದರು.[೧] ಘುರ್ಯೆ ಅವರು ತಮ್ಮ ಪಿಎಚ್‌ಡಿ ಮಾರ್ಗದರ್ಶಕರಾಗಿದ್ದ ಡಬ್ಲ್ಯೂ.ಎಚ್.ಆರ್. ರಿವರ್ಸ್‌ರಿಂದ ಆಳವಾಗಿ ಪ್ರಭಾವಿತರಾಗಿದ್ದರು.[೫] ೧೯೨೨ ರಲ್ಲಿ ರಿವರ್ಸ್ ಅವರ ಅಕಾಲಿಕ ಮರಣದ ನಂತರ, ಅವರು ಎ. ಸಿ. ಹ್ಯಾಡನ್ ಅವರ ಮುಂದಾಳತ್ವದಲ್ಲಿ ತಮ್ಮ ಪ್ರಬಂಧವನ್ನು ಪೂರ್ಣಗೊಳಿಸಿದರು.[೫]
ವೈಯಕ್ತಿಕ ಜೀವನ
[ಬದಲಾಯಿಸಿ]ಘುರ್ಯೆ ಅವರು ಮಾಲ್ವಾನ್ ಬಳಿಯ ವೆಂಗುರ್ಲಾ ಪಟ್ಟಣದ, ಸಾಜುಬೈ ಅವರನ್ನು ವಿವಾಹವಾದರು.[೧] ಘುರ್ಯೆ ಅವರ ಮಗ, ಸುಧೀಶ್ ಘುರ್ಯೆ ಒಬ್ಬ ಗಣಿತಜ್ಞ ಹಾಗು ಸಂಖ್ಯಾಶಾಸ್ತ್ರಜ್ಞ. ಇವರ ಮಗಳು ಕುಮುದ್ ಜಿ. ಘುರ್ಯೆ ನ್ಯಾಯವಾದಿಯಾಗಿದ್ದರು.[೬]
ವೃತ್ತಿ
[ಬದಲಾಯಿಸಿ]ಘುರ್ಯೆ ಅವರನ್ನು ೧೯೨೪ ರಲ್ಲಿ ಬಾಂಬೆ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. [೭] ೧೯೧೯ ರಲ್ಲಿ ಪ್ಯಾಟ್ರಿಕ್ ಗೆಡೆಸ್ ಅವರು ಸಮಾಜಶಾಸ್ತ್ರ ವಿಭಾಗವನ್ನು ಸ್ಥಾಪಿಸಿದ್ದರು.[೮] ಅದರ ಹೊಣೆಗಾರಿಕೆಯನ್ನು ಘುರ್ಯೆ ಅವರು ವಹಿಸಿಕೊಂಡಾಗ ಅದು ಮುಚ್ಚುವ ಹಂತದಲ್ಲಿತ್ತು. ಘುರ್ಯೆಯೊಂದಿಗೆ ಸಮಾಜಶಾಸ್ತ್ರ ವಿಭಾಗ ಮತ್ತೊಮ್ಮೆ ಜೀವಂತವಾಯಿತು. ಈಗ, ಘುರ್ಯೆ ಅವರನ್ನು ಅದರ ನಿಜವಾದ ಸಂಸ್ಥಾಪಕ ಎಂದು ಪರಿಗಣಿಸಲಾಗುತ್ತದೆ. ೧೯೫೯ ರಲ್ಲಿ ಘುರ್ಯೆ ಅವರು ನಿವೃತ್ತರಾದರು.[೯][೧೦]
ಅವರು ಇಂಡಿಯನ್ ಸೋಶಿಯಾಲಾಜಿಕಲ್ ಸೊಸೈಟಿ ಮತ್ತು ಅದರ ಸುದ್ದಿಪತ್ರವಾದ ಸಮಾಜಶಾಸ್ತ್ರೀಯ ಬುಲೆಟಿನ್ ಅನ್ನು ಸ್ಥಾಪಿಸಿದರು ಮತ್ತು ಎರಡಕ್ಕೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.[೧೧] ಅವರು ಕೆಲವು ವರ್ಷಗಳ ಕಾಲ ಬಾಂಬೆ ಆಂಥ್ರೊಪೊಲಾಜಿಕಲ್ ಸೊಸೈಟಿಯ ಮುಖ್ಯಸ್ಥರಾಗಿದ್ದರು.[೧೨]
ನಿವೃತ್ತಿಯ ನಂತರ, ಅವರು ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಗೌರವಾನ್ವಿತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು ಮತ್ತು ಕನಿಷ್ಠ ಮೂರು ಅಭಿನಂದನಾ ಗ್ರಂಥಗಳನ್ನು ಅವರ ಗೌರವಾರ್ಥವಾಗಿ ತಯಾರಿಸಲಾಯಿತು, ಅವುಗಳಲ್ಲಿ ಎರಡು ಅವರ ಜೀವಿತಾವಧಿಯಲ್ಲಿ ತಯಾರಿಸಲಾಯಿತು.[೧೩] ಅವರು ಒಟ್ಟು ೮೦ ಸಂಶೋಧನಾ ಪ್ರಬಂಧಗಳಿಗೆ ಮಾರ್ಗದರ್ಶನ ನೀಡಿದರು ಮತ್ತು ೩೨ ಪುಸ್ತಕಗಳು ಮತ್ತು ಹಲವಾರು ಇತರ ಪ್ರಬಂಧಗಳನ್ನು ಬರೆದಿದ್ದಾರೆ.[೧೪] ನಂತರ, ಅವರ ಬಗ್ಗೆ ಎರಡು ಪ್ರಬಂಧಗಳನ್ನು ಬರೆಯಲಾಯಿತು.[೧೫]
ಅವರ ವಿದ್ಯಾರ್ಥಿಗಳಲ್ಲಿ ಡಾ. ಉತ್ತಮರಾವ್ ಕೆ. ಜಾಧವ್,[೧೬] ಎ. ಜೆ. ಅಗರ್ಕರ್, ವೈ. ಎಮ್. ರೇಗೆ, ಎಲ್. ಎನ್. ಚಾಪೇಕರ್, ಎಮ್. ಜಿ. ಕುಲಕರ್ಣಿ, ಎಮ್. ಎಸ್. ಎ. ರಾವ್, ಇರಾವತಿ ಕರವೇ, ಸಿ. ರಾಜಗೋಪಾಲನ್, ವೈ. ಬಿ. ದಾಮ್ಲೆ, ಎಂ. ಎನ್.ಶ್ರೀನಿವಾಸ್, ಎ.ಆರ್.ದೇಸಾಯಿ, ಡಿ.ನರೇನ್, ಐ.ಪಿ.ದೇಸಾಯಿ, ಎಂ.ಎಸ್.ಗೋರ್, ಸುಮಾ ಚಿಟ್ನಿಸ್ ಮತ್ತು ವಿಕ್ಟರ್ ಡಿಸೋಜಾ ಸಮಾಜ ಸುಧಾರಕ ಮತ್ತು ಬುದ್ಧಿಜೀವಿಗಳಾಗಿದ್ದರು.[೧೭] ಅವರ ಗೌರವಾರ್ಥವಾಗಿ ರಚಿಸಿದ "ಡಾ. ಜಿ. ಎಸ್. ಘುರ್ಯೆ ಪ್ರಶಸ್ತಿ"ಯನ್ನು ನೋಡುವ ಅವಕಾಶವೂ ಅವರಿಗೆ ಸಿಕ್ಕಿತು.[೧೮] ಕಾಸ್ಟ್ ಆಂಡ್ ರೇಸ್ ಇನ್ ಇಂಡಿಯಾ ಎಂಬ ಅವರ ಪುಸ್ತಕವನ್ನು ಸಮಾಜಶಾಸ್ತ್ರ ಕ್ಷೇತ್ರದಲ್ಲಿ ಶ್ರೇಷ್ಠವೆಂದು ಪರಿಗಣಿಸಲಾಗಿದೆ.[೧೯]
ಪ್ರಕಟಣೆಗಳು
[ಬದಲಾಯಿಸಿ]- ಜಿ.ಎಸ್. ಘುರ್ಯೆ (೨೦೦೮) [೧೯೩೨]. Caste and Race in India. ಜನಪ್ರಿಯ ಪ್ರಕಾಶನ. ISBN 978-81-7154-205-5.[೧೯]
- ಗೋವಿಂದ ಸದಾಶಿವ ಘುರ್ಯೆ (೧೯೪೩). The aborigines -"so-called" – and their future. ಡಿ.ಆರ್. ಗಾಡ್ಗೀಳ್.
- ಜಿ.ಎಸ್. ಘುರ್ಯೆ (೧೯೫೧). Indian costume, bhāratīya veṣabhūsā. ಜನಪ್ರಿಯ ಬುಕ್ ಡಿಪೋಟ್.
- ಗೋವಿಂದ ಸದಾಶಿವ ಘುರ್ಯೆ (೧೯೫೨). Race relations in Negro Africa. ಏಷ್ಯಾ ಪಬ್ಲಿಕೇಶನ್ ಹೌಸ್.
- ಗೋವಿಂದ ಸದಾಶಿವ ಘುರ್ಯೆ (೧೯೯೫) [೧೯೫೩]. Indian Sadhus. ಜನಪ್ರಿಯ ಪ್ರಕಾಶನ, ಬಾಂಬೆ.
- ಗೋವಿಂದ ಸದಾಶಿವ ಘುರ್ಯೆ (೧೯೫೬). Sexual Behaviour of the American Female. ಕರೆಂಟ್ ಬುಕ್ ಹೌಸ್.
- ಗೋವಿಂದ ಸದಾಶಿವ ಘುರ್ಯೆ (೧೯೫೭). Caste and class in India. ಜನಪ್ರಿಯ ಬುಕ್ ಡಿಪೋ.
- ಗೋವಿಂದ ಸದಾಶಿವ ಘುರ್ಯೆ (೧೯೫೮). Bhāratanāṭya and its costume. ಜನಪ್ರಿಯ ಬುಕ್ ಡಿಪೋ.
- ಗೋವಿಂದ ಸದಾಶಿವ ಘುರ್ಯೆ (೧೯೬೦). After a century and a quarter: Lonikand then and now. ಜನಪ್ರಿಯ ಬುಕ್ ಡಿಪೋ.
- ಗೋವಿಂದ ಸದಾಶಿವ ಘುರ್ಯೆ (೧೯೬೨). Cities and civilization. ಜನಪ್ರಿಯ ಪ್ರಕಾಶನ.
- ಗೋವಿಂದ ಸದಾಶಿವ ಘುರ್ಯೆ (೧೯೬೨). Gods and men, by G. S. Ghurye.[permanent dead link]
- ಗೋವಿಂದ ಸದಾಶಿವ ಘುರ್ಯೆ (೧೯೬೨). Family and kin in Indo-European culture. ಜನಪ್ರಿಯ ಬುಕ್ ಡಿಪೋ.
- ಗೋವಿಂದ ಸದಾಶಿವ ಘುರ್ಯೆ (೧೯೬೩). The Mahadev Kolis. ಜನಪ್ರಿಯ ಪ್ರಕಾಶನ.
- ಗೋವಿಂದ ಸದಾಶಿವ ಘುರ್ಯೆ (೧೯೬೩). Anatomy of a rururban community. ಜನಪ್ರಿಯ ಪ್ರಕಾಶನ.
- ಗೋವಿಂದ ಸದಾಶಿವ ಘುರ್ಯೆ (೧೯೬೩). Anthropo-sociological papers. ಜನಪ್ರಿಯ ಪ್ರಕಾಶನ.
- ಗೋವಿಂದ ಸದಾಶಿವ ಘುರ್ಯೆ (೧೯೬೫). Religious consciousness. ಜನಪ್ರಿಯ ಪ್ರಕಾಶನ.
- ಗೋವಿಂದ ಸದಾಶಿವ ಘುರ್ಯೆ (೧೯೬೮). Social tensions in India. ಜನಪ್ರಿಯ ಪ್ರಕಾಶನ.
- ಗೋವಿಂದ ಸದಾಶಿವ ಘುರ್ಯೆ (೧೯೭೩). I and other explorations. ಜನಪ್ರಿಯ ಪ್ರಕಾಶನ.
- ಗೋವಿಂದ ಸದಾಶಿವ ಘುರ್ಯೆ (೧೯೭೪). Whither India?. ಜನಪ್ರಿಯ ಪ್ರಕಾಶನ.
- ಗೋವಿಂದ ಸದಾಶಿವ ಘುರ್ಯೆ; ಎಸ್.ದೇವದಾಸ್ ಪಿಳ್ಳೈ (೧೯೭೬). Aspects of changing India: studies in honour of Prof. G. S. Ghurye. ಜನಪ್ರಿಯ ಪ್ರಕಾಶನ.
- ಗೋವಿಂದ ಸದಾಶಿವ ಘುರ್ಯೆ (೧೯೭೭). Indian acculturation: Agastya and Skanda. ಜನಪ್ರಿಯ ಪ್ರಕಾಶನ.
- ಗೋವಿಂದ ಸದಾಶಿವ ಘುರ್ಯೆ (೧೯೭೮). India recreates democracy. ಜನಪ್ರಿಯ ಪ್ರಕಾಶನ. ISBN 9780842616072.
- ಜಿ.ಎಸ್. ಘುರ್ಯೆ (ಡಿಸೆಂಬರ್ ೧೯೭೯). Legacy of the Ramayana. South Asia Books. ISBN 978-0-8364-5760-5.[permanent dead link]
- ಗೋವಿಂದ ಸದಾಶಿವ ಘುರ್ಯೆ (೧೯೭೯). Vedic India. ಜನಪ್ರಿಯ ಪ್ರಕಾಶನ.
- ಗೋವಿಂದ ಸದಾಶಿವ ಘುರ್ಯೆ (೧೯೮೦) [೧೯೬೩]. The scheduled tribes of India. Transaction Publishers. pp. 1–. ISBN 978-0-87855-692-2.
- ಗೋವಿಂದ ಸದಾಶಿವ ಘುರ್ಯೆ (೧೯೮೦). The burning caldron of north-east India. ಜನಪ್ರಿಯ ಪ್ರಕಾಶನ.
- ಜಿ.ಎಸ್. ಘುರ್ಯೆ (೨೦೦೫). Rajput Architecture. ಜನಪ್ರಿಯ ಪ್ರಕಾಶನ. ISBN 978-81-7154-446-2.
ಗ್ರಂಥಸೂಚಿ
[ಬದಲಾಯಿಸಿ]- ಶ್ರೀನಿವಾಸ್, ಎಮ್. ಎನ್; ಭದ್ರ, ಆರ್. ಕೆ; ಭಟ್ಕಳ್, ಸದಾನಂದ್; ಬೋಸ್, ಪ್ರದೀಪ್ ಕುಮಾರ್; et al. (೧೯೯೬). ಮೊಮಿನ್, ಎ. ಆರ್ (ed.). The legacy of G.S. Ghurye: a centennial festschrift. Popular Prakashan. ISBN 978-81-7154-831-6.
- ಪಿಳ್ಳೈ, ಎಸ್. ದೇವದಾಸ್ (೧೯೯೭). Indian sociology through Ghurye, a dictionary. Popular Prakashan. ISBN 978-81-7154-807-1. Retrieved 7 October 2011.
- ಪಿಳ್ಳೈ, ಎಸ್. ಡಿ (೧೯೭೬). Studies in Honour of Prof. G.S. Ghurye. Popular Prakashan. ISBN 978-81-7154-157-7. Retrieved 9 October 2011.
- ಟಿಕೇಕರ್, ಅರೂನ್; ಟಿಕೆಕಾರ, ಅರುಣ (೨೦೦೬) [೧೯೮೪]. The cloister's pale: a biography of the University of Mumbai. By Popular Prakashan for The University of Mumbai. ISBN 978-81-7991-293-5. Retrieved 10 October 2011.
- ಮುಂಬೈ ವಿಶ್ವವಿದ್ಯಾಲಯ. "Department of Sociology:About the department". Archived from the original on 23 September 2011.
ಹೆಚ್ಚಿನ ಓದುವಿಕೆ
[ಬದಲಾಯಿಸಿ]- ಜಯರಾಮ, ಎನ್. (ಮೇ–ಆಗಸ್ಟ್ ೨೦೧೩). "The 'Bombay School' and Urban Sociology in India". Sociological Bulletin. 62 (2): 311–323. doi:10.1177/0038022920130208. JSTOR 23621067. S2CID 151447109.
{{cite journal}}
: CS1 maint: date format (link) - ವೇಣುಗೋಪಾಲ್, ಸಿ. ಎನ್. (೨೦೧೩). "G. S. Ghurye on Culture and Nation-Building". In Modi, Ishwar (ed.). Readings in Indian Sociology: Volume X: Pioneers of Sociology in India. SAGE Publishing. ISBN 978-8-13211-844-2.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Professor G.S. Ghurye (1893–1983) Archived 8 February 2012 ವೇಬ್ಯಾಕ್ ಮೆಷಿನ್ ನಲ್ಲಿ.
- Malvancity: Dr. G S Ghurye Archived 17 March 2012 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ Pillai 1997, p. 101.
- ↑ Momin 1996, p. 4; Pillai 1997, p. 13 .
- ↑ "Obituary GS Ghurye". Economic and Political Weekly (in ಇಂಗ್ಲಿಷ್). 19 (1): 7–8. 2015-06-05.
- ↑ ೪.೦ ೪.೧ Pillai 1997, p. 101 ; Tikekar & Ṭikekara 2006, p. 106 .
- ↑ ೫.೦ ೫.೧ Momin 1996, pp. 2–3, Chapter author:M. N. Srinivas; Momin 1996, p. 20 Chapter author:Dhirendra Narain
- ↑ Pillai 1997, p. 102 ; Momin 1996, pp. 15, 27, Chapter author:Dhirendra Narain; Momin 1996, pp. 37 Chapter author:Sadanand Bhatkal
- ↑ Pillai 1997, p. 102 ; Pillai 1976, pp. 27–28 ; University of Mumbai & _ .
- ↑ Pillai 1997, pp. 119–123 ; University of Mumbai & _ .
- ↑ Pillai 1997, pp. 119–123.
- ↑ Srivastava, Vinay Kumar; Chaudury, Sukant K. (2009). "Anthropological Studies of Indian Tribes". In Atal, Yogesh (ed.). Sociology and Social Anthropology in India. Pearson Education India. p. 60. ISBN 9788131720349.
- ↑ Pillai 1997, pp. 102, 123–124 ; University of Mumbai & _ .
- ↑ Pillai 1997, p. 102.
- ↑ Pillai 1997, pp. 14, 102–103 ; University of Mumbai & _ .
- ↑ Pillai 1997, pp. 103, 126- ; Pillai 1976, pp. 29–40 (a discussion of Ghurye's works, see list on p 40); University of Mumbai
- ↑ Pillai 1997, pp. 103, 392 ; University of Mumbai & _ .
- ↑ Jadhav, Uttamrao (1972). Is Capital Punishment Necessary?. Mumbai: Anand Publications.
- ↑ Pillai 1997, pp. 111, 270 ; University of Mumbai & _ .
- ↑ Pillai 1997, p. 124.
- ↑ ೧೯.೦ ೧೯.೧ Pillai 1976, p. 29.
- Pages using the JsonConfig extension
- Harv and Sfn no-target errors
- CS1 ಇಂಗ್ಲಿಷ್-language sources (en)
- All articles with dead external links
- Articles with dead external links from ಫೆಬ್ರವರಿ 2024
- Articles with invalid date parameter in template
- Articles with permanently dead external links
- CS1 maint: date format
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ
- ಶಿಕ್ಷಣ ತಜ್ಞರು
- ಸಮಾಜಶಾಸ್ತ್ರ