ವಿಷಯಕ್ಕೆ ಹೋಗು

ಜಿ.ಎಸ್. ಘುರ್ಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಿ.ಎಸ್ ಘುರ್ಯೆ
ಜನನ(೧೮೯೩-೧೨-೧೨)೧೨ ಡಿಸೆಂಬರ್ ೧೮೯೩
ಮಲ್ವನ್, ಮಹಾರಾಷ್ಟ್ರ, ಭಾರತ
ಮರಣ೨೮ ಡಿಸೆಂಬರ್ ೧೯೮೩(ವಯಸ್ಸು ೯೦)
ಮುಂಬಯಿ, ಮಹರಾಷ್ಟ್ರ, ಭಾರತ.[]
ವಾಸಸ್ಥಳಮುಂಬಯಿ
ಪೌರತ್ವಭಾರತೀಯ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಸಮಾಜಶಾಸ್ತ್ರ, ಮಾನವಶಾಸ್ತ್ರ
ಸಂಸ್ಥೆಗಳುಮುಂಬಯಿ ವಿಶ್ವವಿದ್ಯಾನಿಲಯ
ಅಭ್ಯಸಿಸಿದ ವಿದ್ಯಾಪೀಠಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ
ಡಾಕ್ಟರೇಟ್ ಸಲಹೆಗಾರರುಡಬ್ಲ್ಯೂ.ಹೆಚ್.ರ್ ರಿವೆರ್ಸ್ ಮತ್ತು ಎ.ಸಿ ಹಾಡ್ಡನ್
ಪ್ರಭಾವಗಳುಡಬ್ಲ್ಯೂ.ಎಚ್.ಆರ್ ರಿವರ್ಸ್ ಆಂಡ್ ಎ. ಸಿ
ಸಂಗಾತಿಸಾಜುಬೈ ಘುರ್ಯೆ

ಗೋವಿಂದ ಸದಾಶಿವ ಘುರ್ಯೆ (೧೨ ಡಿಸೆಂಬರ್ ೧೮೯೩ - ೨೮ ಡಿಸೆಂಬರ್ ೧೯೮೩) ಅವರು ಭಾರತೀಯ ಶಿಕ್ಷಣತಜ್ಞರಾಗಿದ್ದರು. ಇವರು ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.[] ೧೯೨೪ ರಲ್ಲಿ, ಅವರು ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎರಡನೇ ವ್ಯಕ್ತಿಯಾದರು. ಇವರನ್ನು ಸಮಾಜಶಾಸ್ತ್ರ ಮತ್ತು ಭಾರತೀಯ ಸಮಾಜಶಾಸ್ತ್ರದ ಸಂಸ್ಥಾಪಕ ಎಂದು ಪರಿಗಣಿಸಲಾಗಿದೆ.

ಆರಂಭಿಕ ಜೀವನ

[ಬದಲಾಯಿಸಿ]

ಜಿ. ಎಸ್. ಘುರ್ಯೆ ಅವರು ಸಾರಸ್ವತ ಬ್ರಾಹ್ಮಣ ಸಮುದಾಯದಲ್ಲಿ ೧೨ ಡಿಸೆಂಬರ್ ೧೮೯೩ ರಂದು ಮಾಲ್ವಾನ್ (ಇಂದಿನ ಮಹಾರಾಷ್ಟ್ರ) ನಲ್ಲಿ ಜನಿಸಿದರು.[][] ಅವರು ತಮ್ಮ ಅರಂಭಿಕ ಶಿಕ್ಷಣವನ್ನು ಮುಂಬಯಿಯಲ್ಲಿರುವ ಆರ್ಯನ್ ಎಜುಕೇಶನ್ ಸೊಸೈಟಿ ಪ್ರೌಢಶಾಲೆ, ಗಿರ್ಗಾಂವ್‌ನಲ್ಲಿ ಮಾಡಿದರು. ನಂತರ ಪ್ರೌಢ ಶಿಕ್ಷಣವನ್ನು ಗುಜರಾತಿನ ಬಹದ್ದೂರ್ ಖಾನ್‌ಜಿ ಪ್ರೌಢಶಾಲೆ, ಜುನಾಗಢದಲ್ಲಿ ಮಾಡಿದರು.[]. ಅವರು ೧೯೧೨ ರಲ್ಲಿ, ಜುನಗಢ್‌ನಲ್ಲಿನ ಬಹೌದ್ದಿನ್ ಕಾಲೇಜಿಗೆ ಸೇರಿದರು, ಆದರೆ ಒಂದು ವರ್ಷದ ನಂತರ ಎಲ್ಫಿನ್ಸ್ಟೋನ್ ಕಾಲೇಜಿಗೆ ಸ್ಥಳಾಂತರಗೊಂಡರು. ಅಲ್ಲಿಂದ ತಮ್ಮ ಬಿ. ಎ. (ಸಂಸ್ಕೃತ) ಮತ್ತು ಎಮ್. ಎ. (ಸಂಸ್ಕೃತ) ಪದವಿಗಳನ್ನು ಪಡೆದರು.[]ಅವರು ತಮ್ಮ ಬಿ. ಎ. ವ್ಯಾಸಂಗ ಮಾಡುತಿದ್ದಾಗ ಭೌ ದಾಜಿ ಪ್ರಶಸ್ತಿಯನ್ನು ಗೆದ್ದರು ಮತ್ತು ಎಮ್. ಎ. ವ್ಯಾಸಂಗ ಮಾಡುತ್ತಿದ್ದಾಗ ಕುಲಪತಿಗಳ ಚಿನ್ನದ ಪದಕವನ್ನು ಗೆದ್ದರು.[] ತಮ್ಮ ಎಮ್. ಎ. ಮುಗಿಸಿದ ನಂತರ, ಘುರ್ಯೆ ಇಂಗ್ಲೆಂಡ್‌ನಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ವಿದ್ಯಾರ್ಥಿವೇತನವನ್ನು ಪಡೆದರು ಮತ್ತು ೧೯೨೨ ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ತಮ್ಮ ಪಿಎಚ್‌ಡಿ ಗಳಿಸಿದರು.[] ಘುರ್ಯೆ ಅವರು ತಮ್ಮ ಪಿಎಚ್‌ಡಿ ಮಾರ್ಗದರ್ಶಕರಾಗಿದ್ದ ಡಬ್ಲ್ಯೂ.ಎಚ್.ಆರ್. ರಿವರ್ಸ್‌‍ರಿಂದ ಆಳವಾಗಿ ಪ್ರಭಾವಿತರಾಗಿದ್ದರು.[] ೧೯೨೨ ರಲ್ಲಿ ರಿವರ್ಸ್ ಅವರ ಅಕಾಲಿಕ ಮರಣದ ನಂತರ, ಅವರು ಎ. ಸಿ. ಹ್ಯಾಡನ್ ಅವರ ಮುಂದಾಳತ್ವದಲ್ಲಿ ತಮ್ಮ ಪ್ರಬಂಧವನ್ನು ಪೂರ್ಣಗೊಳಿಸಿದರು.[]

ವೈಯಕ್ತಿಕ ಜೀವನ

[ಬದಲಾಯಿಸಿ]

ಘುರ್ಯೆ ಅವರು ಮಾಲ್ವಾನ್ ಬಳಿಯ ವೆಂಗುರ್ಲಾ ಪಟ್ಟಣದ, ಸಾಜುಬೈ ಅವರನ್ನು ವಿವಾಹವಾದರು.[] ಘುರ್ಯೆ ಅವರ ಮಗ, ಸುಧೀಶ್ ಘುರ್ಯೆ ಒಬ್ಬ ಗಣಿತಜ್ಞ ಹಾಗು ಸಂಖ್ಯಾಶಾಸ್ತ್ರಜ್ಞ. ಇವರ ಮಗಳು ಕುಮುದ್ ಜಿ. ಘುರ್ಯೆ ನ್ಯಾಯವಾದಿಯಾಗಿದ್ದರು.[]

ವೃತ್ತಿ

[ಬದಲಾಯಿಸಿ]

ಘುರ್ಯೆ ಅವರನ್ನು ೧೯೨೪ ರಲ್ಲಿ ಬಾಂಬೆ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. [] ೧೯೧೯ ರಲ್ಲಿ ಪ್ಯಾಟ್ರಿಕ್ ಗೆಡೆಸ್ ಅವರು ಸಮಾಜಶಾಸ್ತ್ರ ವಿಭಾಗವನ್ನು ಸ್ಥಾಪಿಸಿದ್ದರು.[] ಅದರ ಹೊಣೆಗಾರಿಕೆಯನ್ನು ಘುರ್ಯೆ ಅವರು ವಹಿಸಿಕೊಂಡಾಗ ಅದು ಮುಚ್ಚುವ ಹಂತದಲ್ಲಿತ್ತು. ಘುರ್ಯೆಯೊಂದಿಗೆ ಸಮಾಜಶಾಸ್ತ್ರ ವಿಭಾಗ ಮತ್ತೊಮ್ಮೆ ಜೀವಂತವಾಯಿತು. ಈಗ, ಘುರ್ಯೆ ಅವರನ್ನು ಅದರ ನಿಜವಾದ ಸಂಸ್ಥಾಪಕ ಎಂದು ಪರಿಗಣಿಸಲಾಗುತ್ತದೆ. ೧೯೫೯ ರಲ್ಲಿ ಘುರ್ಯೆ ಅವರು ನಿವೃತ್ತರಾದರು.[][೧೦]

ಅವರು ಇಂಡಿಯನ್ ಸೋಶಿಯಾಲಾಜಿಕಲ್ ಸೊಸೈಟಿ ಮತ್ತು ಅದರ ಸುದ್ದಿಪತ್ರವಾದ ಸಮಾಜಶಾಸ್ತ್ರೀಯ ಬುಲೆಟಿನ್ ಅನ್ನು ಸ್ಥಾಪಿಸಿದರು ಮತ್ತು ಎರಡಕ್ಕೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.[೧೧] ಅವರು ಕೆಲವು ವರ್ಷಗಳ ಕಾಲ ಬಾಂಬೆ ಆಂಥ್ರೊಪೊಲಾಜಿಕಲ್ ಸೊಸೈಟಿಯ ಮುಖ್ಯಸ್ಥರಾಗಿದ್ದರು.[೧೨]

ನಿವೃತ್ತಿಯ ನಂತರ, ಅವರು ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಗೌರವಾನ್ವಿತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು ಮತ್ತು ಕನಿಷ್ಠ ಮೂರು ಅಭಿನಂದನಾ ಗ್ರಂಥಗಳನ್ನು ಅವರ ಗೌರವಾರ್ಥವಾಗಿ ತಯಾರಿಸಲಾಯಿತು, ಅವುಗಳಲ್ಲಿ ಎರಡು ಅವರ ಜೀವಿತಾವಧಿಯಲ್ಲಿ ತಯಾರಿಸಲಾಯಿತು.[೧೩] ಅವರು ಒಟ್ಟು ೮೦ ಸಂಶೋಧನಾ ಪ್ರಬಂಧಗಳಿಗೆ ಮಾರ್ಗದರ್ಶನ ನೀಡಿದರು ಮತ್ತು ೩೨ ಪುಸ್ತಕಗಳು ಮತ್ತು ಹಲವಾರು ಇತರ ಪ್ರಬಂಧಗಳನ್ನು ಬರೆದಿದ್ದಾರೆ.[೧೪] ನಂತರ, ಅವರ ಬಗ್ಗೆ ಎರಡು ಪ್ರಬಂಧಗಳನ್ನು ಬರೆಯಲಾಯಿತು.[೧೫]

ಅವರ ವಿದ್ಯಾರ್ಥಿಗಳಲ್ಲಿ ಡಾ. ಉತ್ತಮರಾವ್ ಕೆ. ಜಾಧವ್,[೧೬] ಎ. ಜೆ. ಅಗರ್ಕರ್, ವೈ. ಎಮ್. ರೇಗೆ, ಎಲ್. ಎನ್. ಚಾಪೇಕರ್, ಎಮ್. ಜಿ. ಕುಲಕರ್ಣಿ, ಎಮ್. ಎಸ್. ಎ. ರಾವ್, ಇರಾವತಿ ಕರವೇ, ಸಿ. ರಾಜಗೋಪಾಲನ್, ವೈ. ಬಿ. ದಾಮ್ಲೆ, ಎಂ. ಎನ್.ಶ್ರೀನಿವಾಸ್, ಎ.ಆರ್.ದೇಸಾಯಿ, ಡಿ.ನರೇನ್, ಐ.ಪಿ.ದೇಸಾಯಿ, ಎಂ.ಎಸ್.ಗೋರ್, ಸುಮಾ ಚಿಟ್ನಿಸ್ ಮತ್ತು ವಿಕ್ಟರ್ ಡಿಸೋಜಾ ಸಮಾಜ ಸುಧಾರಕ ಮತ್ತು ಬುದ್ಧಿಜೀವಿಗಳಾಗಿದ್ದರು.[೧೭] ಅವರ ಗೌರವಾರ್ಥವಾಗಿ ರಚಿಸಿದ "ಡಾ. ಜಿ. ಎಸ್. ಘುರ್ಯೆ ಪ್ರಶಸ್ತಿ"ಯನ್ನು ನೋಡುವ ಅವಕಾಶವೂ ಅವರಿಗೆ ಸಿಕ್ಕಿತು.[೧೮] ಕಾಸ್ಟ್ ಆಂಡ್ ರೇಸ್ ಇನ್ ಇಂಡಿಯಾ ಎಂಬ ಅವರ ಪುಸ್ತಕವನ್ನು ಸಮಾಜಶಾಸ್ತ್ರ ಕ್ಷೇತ್ರದಲ್ಲಿ ಶ್ರೇಷ್ಠವೆಂದು ಪರಿಗಣಿಸಲಾಗಿದೆ.[೧೯]

ಪ್ರಕಟಣೆಗಳು

[ಬದಲಾಯಿಸಿ]
  • ಜಿ.ಎಸ್. ಘುರ್ಯೆ (೨೦೦೮) [೧೯೩೨]. Caste and Race in India. ಜನಪ್ರಿಯ ಪ್ರಕಾಶನ. ISBN 978-81-7154-205-5.[೧೯]
  • ಗೋವಿಂದ ಸದಾಶಿವ ಘುರ್ಯೆ (೧೯೪೩). The aborigines -"so-called" – and their future. ಡಿ.ಆರ್. ಗಾಡ್ಗೀಳ್.
  • ಜಿ.ಎಸ್. ಘುರ್ಯೆ (೧೯೫೧). Indian costume, bhāratīya veṣabhūsā. ಜನಪ್ರಿಯ ಬುಕ್ ಡಿಪೋಟ್.
  • ಗೋವಿಂದ ಸದಾಶಿವ ಘುರ್ಯೆ (೧೯೫೨). Race relations in Negro Africa. ಏಷ್ಯಾ ಪಬ್ಲಿಕೇಶನ್ ಹೌಸ್.
  • ಗೋವಿಂದ ಸದಾಶಿವ ಘುರ್ಯೆ (೧೯೯೫) [೧೯೫೩]. Indian Sadhus. ಜನಪ್ರಿಯ ಪ್ರಕಾಶನ, ಬಾಂಬೆ.
  • ಗೋವಿಂದ ಸದಾಶಿವ ಘುರ್ಯೆ (೧೯೫೬). Sexual Behaviour of the American Female. ಕರೆಂಟ್ ಬುಕ್ ಹೌಸ್.
  • ಗೋವಿಂದ ಸದಾಶಿವ ಘುರ್ಯೆ (೧೯೫೭). Caste and class in India. ಜನಪ್ರಿಯ ಬುಕ್ ಡಿಪೋ.
  • ಗೋವಿಂದ ಸದಾಶಿವ ಘುರ್ಯೆ (೧೯೫೮). Bhāratanāṭya and its costume. ಜನಪ್ರಿಯ ಬುಕ್ ಡಿಪೋ.
  • ಗೋವಿಂದ ಸದಾಶಿವ ಘುರ್ಯೆ (೧೯೬೦). After a century and a quarter: Lonikand then and now. ಜನಪ್ರಿಯ ಬುಕ್ ಡಿಪೋ.
  • ಗೋವಿಂದ ಸದಾಶಿವ ಘುರ್ಯೆ (೧೯೬೨). Cities and civilization. ಜನಪ್ರಿಯ ಪ್ರಕಾಶನ.
  • ಗೋವಿಂದ ಸದಾಶಿವ ಘುರ್ಯೆ (೧೯೬೨). Gods and men, by G. S. Ghurye.[ಶಾಶ್ವತವಾಗಿ ಮಡಿದ ಕೊಂಡಿ]
  • ಗೋವಿಂದ ಸದಾಶಿವ ಘುರ್ಯೆ (೧೯೬೨). Family and kin in Indo-European culture. ಜನಪ್ರಿಯ ಬುಕ್ ಡಿಪೋ.
  • ಗೋವಿಂದ ಸದಾಶಿವ ಘುರ್ಯೆ (೧೯೬೩). The Mahadev Kolis. ಜನಪ್ರಿಯ ಪ್ರಕಾಶನ.
  • ಗೋವಿಂದ ಸದಾಶಿವ ಘುರ್ಯೆ (೧೯೬೩). Anatomy of a rururban community. ಜನಪ್ರಿಯ ಪ್ರಕಾಶನ.
  • ಗೋವಿಂದ ಸದಾಶಿವ ಘುರ್ಯೆ (೧೯೬೩). Anthropo-sociological papers. ಜನಪ್ರಿಯ ಪ್ರಕಾಶನ.
  • ಗೋವಿಂದ ಸದಾಶಿವ ಘುರ್ಯೆ (೧೯೬೫). Religious consciousness. ಜನಪ್ರಿಯ ಪ್ರಕಾಶನ.
  • ಗೋವಿಂದ ಸದಾಶಿವ ಘುರ್ಯೆ (೧೯೬೮). Social tensions in India. ಜನಪ್ರಿಯ ಪ್ರಕಾಶನ.
  • ಗೋವಿಂದ ಸದಾಶಿವ ಘುರ್ಯೆ (೧೯೭೩). I and other explorations. ಜನಪ್ರಿಯ ಪ್ರಕಾಶನ.
  • ಗೋವಿಂದ ಸದಾಶಿವ ಘುರ್ಯೆ (೧೯೭೪). Whither India?. ಜನಪ್ರಿಯ ಪ್ರಕಾಶನ.
  • ಗೋವಿಂದ ಸದಾಶಿವ ಘುರ್ಯೆ; ಎಸ್.ದೇವದಾಸ್ ಪಿಳ್ಳೈ (೧೯೭೬). Aspects of changing India: studies in honour of Prof. G. S. Ghurye. ಜನಪ್ರಿಯ ಪ್ರಕಾಶನ.
  • ಗೋವಿಂದ ಸದಾಶಿವ ಘುರ್ಯೆ (೧೯೭೭). Indian acculturation: Agastya and Skanda. ಜನಪ್ರಿಯ ಪ್ರಕಾಶನ.
  • ಗೋವಿಂದ ಸದಾಶಿವ ಘುರ್ಯೆ (೧೯೭೮). India recreates democracy. ಜನಪ್ರಿಯ ಪ್ರಕಾಶನ. ISBN 9780842616072.
  • ಜಿ.ಎಸ್. ಘುರ್ಯೆ (ಡಿಸೆಂಬರ್ ೧೯೭೯). Legacy of the Ramayana. South Asia Books. ISBN 978-0-8364-5760-5.[ಶಾಶ್ವತವಾಗಿ ಮಡಿದ ಕೊಂಡಿ]
  • ಗೋವಿಂದ ಸದಾಶಿವ ಘುರ್ಯೆ (೧೯೭೯). Vedic India. ಜನಪ್ರಿಯ ಪ್ರಕಾಶನ.
  • ಗೋವಿಂದ ಸದಾಶಿವ ಘುರ್ಯೆ (೧೯೮೦) [೧೯೬೩]. The scheduled tribes of India. Transaction Publishers. pp. 1–. ISBN 978-0-87855-692-2.
  • ಗೋವಿಂದ ಸದಾಶಿವ ಘುರ್ಯೆ (೧೯೮೦). The burning caldron of north-east India. ಜನಪ್ರಿಯ ಪ್ರಕಾಶನ.
  • ಜಿ.ಎಸ್. ಘುರ್ಯೆ (೨೦೦೫). Rajput Architecture. ಜನಪ್ರಿಯ ಪ್ರಕಾಶನ. ISBN 978-81-7154-446-2.

ಗ್ರಂಥಸೂಚಿ

[ಬದಲಾಯಿಸಿ]

ಹೆಚ್ಚಿನ ಓದುವಿಕೆ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ ೧.೪ Pillai 1997, p. 101.
  2. Momin 1996, p. 4; Pillai 1997, p. 13.
  3. "Obituary GS Ghurye". Economic and Political Weekly (in ಇಂಗ್ಲಿಷ್). 19 (1): 7–8. 2015-06-05.
  4. ೪.೦ ೪.೧ Pillai 1997, p. 101; Tikekar & Ṭikekara 2006, p. 106.
  5. ೫.೦ ೫.೧ Momin 1996, pp. 2–3, Chapter author:M. N. Srinivas; Momin 1996, p. 20 Chapter author:Dhirendra Narain
  6. Pillai 1997, p. 102; Momin 1996, pp. 15, 27, Chapter author:Dhirendra Narain; Momin 1996, pp. 37 Chapter author:Sadanand Bhatkal
  7. Pillai 1997, p. 102; Pillai 1976, pp. 27–28; University of Mumbai & _.
  8. Pillai 1997, pp. 119–123; University of Mumbai & _.
  9. Pillai 1997, pp. 119–123.
  10. Srivastava, Vinay Kumar; Chaudury, Sukant K. (2009). "Anthropological Studies of Indian Tribes". In Atal, Yogesh (ed.). Sociology and Social Anthropology in India. Pearson Education India. p. 60. ISBN 9788131720349.
  11. Pillai 1997, pp. 102, 123–124; University of Mumbai & _.
  12. Pillai 1997, p. 102.
  13. Pillai 1997, pp. 14, 102–103; University of Mumbai & _.
  14. Pillai 1997, pp. 103, 126-; Pillai 1976, pp. 29–40 (a discussion of Ghurye's works, see list on p 40); University of Mumbai
  15. Pillai 1997, pp. 103, 392; University of Mumbai & _.
  16. Jadhav, Uttamrao (1972). Is Capital Punishment Necessary?. Mumbai: Anand Publications.
  17. Pillai 1997, pp. 111, 270; University of Mumbai & _.
  18. Pillai 1997, p. 124.
  19. ೧೯.೦ ೧೯.೧ Pillai 1976, p. 29.