ವಿಷಯಕ್ಕೆ ಹೋಗು

ಚಿಕ್ಕೋಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿಕ್ಕೋಡಿ

ಚಿಕ್ಕೋಡಿ
ರಾಜ್ಯ
 - ಜಿಲ್ಲೆ
[[ಕರ್ನಾಟಕ]]
 - ಬೆಳಗಾವಿ
ನಿರ್ದೇಶಾಂಕಗಳು 16.1667° N 74.8333° E
ವಿಸ್ತಾರ 33.05 km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
67170
 - 2032.38/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 591 201
 - +08338
 - 

ಚಿಕ್ಕೋಡಿ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಚಿಕ್ಕೋಡಿ ಕರ್ನಾಟಕ ರಾಜ್ಯದ ಮಹಾರಾಷ್ಷ್ರ ಗಡಿಯಲ್ಲಿರುವ ಒಂದು ಸುಂದರ ನಗರ. ಸುತ್ತಲು ಬೆಟ್ಟ ಗುಡ್ಡಗಳಿಂದ ಆವೃತವಾದ ಸೃಷ್ಟಿ ಸೊಬಗನು ಚೆಲುವಿನ ಚಿತ್ತಾರದಂತೆ ಮೈನರಳಿಸಿಕೊಂಡು ಮಲಗಿರುವ ನಿಸಗ೯ದ ಸೌಂದರ್ಯ ಸಿರಿ ನೋಡುವುದೆ ಒಂದು ಭಾಗ್ಯ.ಇನ್ನು ಹೊಲ ಗದ್ದೆಗಳತ್ತ ಕಣ್ಣು ಹಾಯಿಸಿದರೆ ಸಾಕು ಹಚ್ಚು ಹಸಿರಾಗಿ ಕಾಣುವ ಕಬ್ಬಿನ ಗದ್ದೆಗಳು ಅಲ್ಲೊಂದು ಇಲ್ಲೊಂದು ಕಾಣುವ ವೀಳ್ಯದೆಲೆ ತೋಟಗಳನ್ನು ನೋಡಿ ಮನ ತನಿಸದೆ ಇರಲಾರದು . ಇನ್ನು ನಗರ ವೈಭವ ನಗರದ ಆಗ್ನೇಯ ದಿಕ್ಕನು ಪ್ರವೇಶಿಸುತ್ತಿದ್ದಂತೆ ಕಾಣುವ ಸುಂದರ ಹಾಗೂ ಭವ್ಯವಾದ ಮಿನಿ ವಿಧಾನ ಸೌಧವಿದೆ. ಚಿಕ್ಕೋಡಿ ನಗರ ಜಿಲ್ಲಾ ಕೇಂದ್ರದ ಎಲ್ಲ ಅರ್ಹತೆ ಸ್ಠಾನಮಾನವನ್ನು ಹೊಂದಿದರೂ ಕೂಡಾ ಇನ್ನುವರಿಗೂ ರಾಜ್ಯ ಸರಕಾರ ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡದೇ ಇರುವುದು ಒಂದು ವಿಪರ್ಯಾಸವೇ ಸರಿ. ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಅನ್ನುವುದು ಇಲ್ಲಿನ ಜನರ ಬಹುದಿನದ ಬೇಡಿಕೆಯಾಗಿದೆ. ಇಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳಿವೆ.

ಭೂಗೋಳ

[ಬದಲಾಯಿಸಿ]

೨೦೦೧ ಭಾರತದ ಜನಗಣತಿಯ ಪ್ರಕಾರ ಚಿಕ್ಕೋಡಿಯು ೫೧% ಪುರುಷರು ಮತ್ತು ೪೯% ಮಹಿಳೆಯರೊಂದಿಗೆ ೩೨,೮೨೦ ಜನಸಂಖ್ಯೆಯನ್ನು ಹೊಂದಿತ್ತು. ಇಲ್ಲಿ ಜೈನ ಸಮುದಾಯ, ಮರಾಠಾ, ಮುಸ್ಲಿಮರು ಹಾಗು ಇತರ ಸಮುದಾಯಗಳು ಇವೆ. ಈ ತಾಲುಕಿನ ಬಹಳಷ್ಟು ಜನರು ಕೃಷಿ ಮೇಲೆ ಅವಲಂಬಿತವಾಗಿದ್ದಾರೆ, ಕಬ್ಬು ಇಲ್ಲಿನ ಪ್ರಮುಖ ಬೆಳೆ. ವೇದಗಂಗಾ, ದೂಧಗಂಗಾ, ಕೃಷ್ಣಾ ನದಿಗಳು ತಾಲುಕಿನ ಪ್ರಮುಖ ನದಿಗಳು. ಒಕ್ಕಲುತನ ಇಲ್ಲಿಯ ಮುಖ್ಯ ಕಸಬು; ಕಬ್ಬು, ತಂಬಾಕು, ಸೋಯಾಬಿನ್, ಜೋಳ, ಕಡಲೆ ಮತ್ತು ಇನ್ನಿತರ ವಾನಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ.

ಇತಿಹಾಸ

[ಬದಲಾಯಿಸಿ]

ಸುಮಾರು ೨೦೦ ವರ್ಷಗಳ ಹಿಂದೆ ಇದನ್ನು ಚಿಕ್ಕ-ಕೋಡಿ ಎಂದು ಕರೆಯುತ್ತಿದ್ದರು ಹಾಗು ಪಕ್ಕದಲ್ಲಿ ಇರುವ ಗ್ರಾಮಕ್ಕೆ ಹೀರೆ-ಕೋಡಿ ಎಂದು ಕರೆಯುತ್ತಿದ್ದರು.

ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು

[ಬದಲಾಯಿಸಿ]
  • ಭಾರತೀಯ ಸ್ಟೇಟ್ ಬ್ಯಾಂಕ್
  • ವಿಜಯಾ ಬ್ಯಾಂಕ್
  • ಇಂಡಿಯನ್ ಓವರ್ಸೀಸ್ ಬ್ಯಾಂಕ್
  • ಕಾರ್ಪೋರೆಶನ್ ಬ್ಯಾಂಕ್
  • ಫೆಡರಲ್ ಬ್ಯಾಂಕ್
  • ಎಕ್ಸಿಸ್ ಬ್ಯಾಂಕ್
  • ಆಯ್ ಡಿ ಬಿ ಆಯ್ ಬ್ಯಾಂಕ್

ದೇವಸ್ಥಾನಗಳು

[ಬದಲಾಯಿಸಿ]
  • ಜೈನ ಮಂದಿರ
  • ರಾಮ ಮಂದಿರ
  • ಗಣಪತಿ ಮಂದಿರ
  • ಹನುಮಾನ ಮಂದಿರ
  • ಸಾಯಿ ಮಂದಿರ
  • ಬನಶಂಕರಿ ದೇವಿ ಮಂದಿರ
  • ಮಹಾದೇವ ಮಂದಿರ

ಸಂಸ್ಕೃತಿ

[ಬದಲಾಯಿಸಿ]

ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಂತೆ ಚಿಕ್ಕೋಡಿ ಕೂಡ ಹಲವು ಭಾಷಿಕರ ಹಾಗು ಹಲವು ಧರ್ಮೀಯರ ನೆಲೆಬೀಡು. ಕನ್ನಡ (ಆಡಳಿತ ಭಾಷೆ), ಹಿಂದಿ, ಮರಾಠಿ ಇಲ್ಲಿ ಮಾತನಾಡಲ್ಪಡುವ ಪ್ರಮುಖ ಭಾಷೆಗಳು. ಉತ್ತರ ಕರ್ನಾಟಕದ ಸೊಗಡು ಇಲ್ಲಿಯ ಜೀವನ ಶೈಲಿಯ ವಿಶೇಷತೆ.

ರಸ್ತೆ ಹಾಗೂ ಸಾರಿಗೆ

[ಬದಲಾಯಿಸಿ]

ರಾಜ್ಯ ಹೆದ್ದಾರಿ ಸಂಖ್ಯೆ ೧೨ ಮತ್ತು ೧೮ ಸಂಪರ್ಕಿಸುತ್ತವೆ. ವಾಯುವ್ಯ ಸಾರಿಗೆ ಸಂಸ್ಠೆ ಬಸ್ಸುಗಳು ಇಲ್ಲಿನ ಮೂಲ ರಸ್ತೆ ಸಾರಿಗೆ. ನಿಪ್ಪಾಣಿಯಿಂದ ೨೪ ಕಿಮಿ ದೂರದಲ್ಲಿದೆ (ರಾಷ್ಟ್ರಿಯ ಹೆದ್ದಾರಿ - ೪).

ಇದನ್ನೂ ನೋಡಿ

[ಬದಲಾಯಿಸಿ]