ವಿಷಯಕ್ಕೆ ಹೋಗು

ಗ್ವಾಟೆಮಾಲ

ನಿರ್ದೇಶಾಂಕಗಳು: 15°30′N 90°15′W / 15.500°N 90.250°W / 15.500; -90.250
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗ್ವಾಟೆಮಾಲ ಗಣರಾಜ್ಯ
República de Guatemala
ರಿಪುಬ್ಲಿಕಾ ದೆ ಗ್ವಾಟೆಮಾಲ
Flag of ಗ್ವಾಟೆಮಾಲ
Flag
Coat of arms of ಗ್ವಾಟೆಮಾಲ
Coat of arms
Motto: "Libre Crezca Fecundo"
"ಸ್ವತಂತ್ರವಾಗಿ ಮತ್ತು ಫಲವತ್ತಾಗಿ ಬೆಳೆ"
Anthem: Himno Nacional de Guatemala
Location of ಗ್ವಾಟೆಮಾಲ
Capitalಗ್ವಾಟೆಮಾಲ ನಗರ
Largest cityರಾಜಧಾನಿ
Official languagesಸ್ಪ್ಯಾನಿಷ್
Demonym(s)Guatemalan
Governmentರಾಷ್ಟ್ರಪತಿ ಆಡಳಿತ ಗಣರಾಜ್ಯ
• ರಾಷ್ಟ್ರಪತಿ
ಆಸ್ಕರ್ ಬೆರ್ಗೆರ್
• ಮುಂದಿನ ರಾಷ್ಟ್ರಪತಿ
ಆಲ್ವಾರೊ ಕೊಲೊಮ್
ಸ್ವಾತಂತ್ರ್ಯ 
• ದಿನಾಂಕ
ಸೆಪ್ಟೆಂಬರ್ ೧೫, ೧೮೨೧
• Water (%)
0.4
Population
• ಜುಲೈ ೨೦೦೫ estimate
13,000,000 (70th)
• ಜುಲೈ ೨೦೦೭ census
12,728,111
GDP (PPP)೨೦೦೫ estimate
• Total
$63.78 billion (71st)
• Per capita
$4,155 (116th)
Gini (2002)55.1
high
HDI (೨೦೦೪)0.673
medium · 117th
Currencyಕ್ವೆಟ್ಜಾಲ್ (GTQ)
Time zoneUTC-6
Calling code502
Internet TLD.gt

ಗ್ವಾಟೆಮಾಲ ಗಣರಾಜ್ಯ (República de Guatemala), ಮಧ್ಯ ಅಮೇರಿಕದ ಒಂದು ದೇಶ. ವಾಯುವ್ಯಕ್ಕೆ ಮೆಕ್ಸಿಕೊ, ನೈರುತ್ಯಕ್ಕೆ ಶಾಂತ ಮಹಾಸಾಗರ, ಈಶಾನ್ಯಕ್ಕೆ ಬೆಲೀಝ್ ಮತ್ತು ಕೆರಿಬ್ಬಿಯನ್ ಸಮುದ್ರ ಹಾಗು ಆಗ್ನೇಯಕ್ಕೆ ಹೊಂಡುರಾಸ್ ಮತ್ತು ಎಲ್ ಸಾಲ್ವಡಾರ್ಗಳನ್ನು ಈ ದೇಶ ಹೊಂದಿದೆ.

ಮಧ್ಯ ಅಮೇರಿಕದ ಅತ್ಯಂತ ಹೆಚ್ಚು ಜನಸಂಖ್ಯೆ ಉಳ್ಳ ದೇಶವಾದ ಇದು ಪ್ರಜಾತಂತ್ರವಾಗಿದೆ. ಇದರ ರಾಜಧಾನಿ ಗ್ವಾಟೆಮಾಲ ನಗರ.

ಭೌಗೋಳಿಕ

[ಬದಲಾಯಿಸಿ]

ಗ್ವಾಟಿಮಾಲ- ಮಧ್ಯ ಅಮೆರಿಕದ ಅತ್ಯಂತ ಉತ್ತರದ ಗಣರಾಜ್ಯ.15°30′N 90°15′W / 15.500°N 90.250°W / 15.500; -90.250 ನಡುವೆ ಇದೆ. ಮೆಕ್ಸಿಕೋ, ಬ್ರಿಟಿಷ್ ಹಾಂಡುರಸ್, ಹಾಂಡುರಸ್, ಕ್ಯಾರಿಬೀಯನ್ ಸಮುದ್ರ, ಎಲ್‍ಸಾಲ್ವಡಾರ್, ಪೆಸಿಫಿಕ್ ಸಾಗರ-ಇವು ಇದರ ಮೇರೆಗಳು. ಪೂರ್ವದಲ್ಲಿ ಇದಕ್ಕೆ 55ಮೈ. ಕ್ಯಾರಿಬೀಯನ್ ಸಮುದ್ರತೀರವೂ ದಕ್ಷಿಣದಲ್ಲಿ 180ಮೈ. ಪೆಸಿಫಿಕ್ ಸಾಗರತೀರವೂ ಇವೆ.

ಭೌತಲಕ್ಷಣ

[ಬದಲಾಯಿಸಿ]
A map of Guatemala.
Guatemala map of Köppen climate classification.
The highlands of Quetzaltenango.

ಗ್ವಾಟಿಮಾಲವನ್ನು ಭೌಗೋಳಿಕವಾಗಿ ಐದು ಪ್ರದೇಶಗಳಾಗಿ ವಿಂಗಡಿಸಬಹುದು. 1. ಫೆಸಿಫಿಕ್ ಕರಾವಳಿಯ ತಗ್ಗು ನೆಲ, 2. ಸೆಯೆರ ಮಾದ್ರೆ ಪರ್ವತ ಶ್ರೇಣಿ, 3. ಈ ಶ್ರೇಣೀಗೆ ಉತ್ತರದಲ್ಲಿರುವ ಪ್ರಸ್ಥಭೂಮಿ, 4. ಅಂಟ್ಲಾಂಟಿಕ್ ಸಾಗರತೀರದ ಇಳಿಮೇಡಿನ ಪರ್ವತ ಪ್ರದೇಶ ; ಮತ್ತು ಪೆಟೇನ್ ಬಯಲು.

  1. . ಮೆಕ್ಸಿಕೊದ ಚ್ಯಾಪಾಸ್ ಕರಾವಳಿ ಗ್ವಾಟಿಮಾಲದಲ್ಲಿ ಸು 150ಮೈ ಸಾಗಿ ಎಲ್ ಸಾಲ್ವಡಾರಿನಲ್ಲಿ ಮುಂದುವರಿಯುತ್ತದೆ. ಮೆಕ್ಸಿಕೊ- ಗ್ವಾಟಿಮಾಲ ಗಡಿಯ ಬಳಿ ಇದರ ಅಗಲ 25ಮೈ. ಕರಾವಳಿಯ ಅಂಚಿನಲ್ಲಿ ಉದ್ದಕ್ಕೂ ಮರಳ ಪಟ್ಟೆಗಳಿವೆ. ತೀರ ಹೆಚ್ಚು ಅಂಕುಡೊಂಕಾಗಿಲ್ಲ. ಅಲ್ಲಲ್ಲಿ ಲಗೂನುಗಳಿವೆ. ಇದರಿಂದಾಚೆಗೆ ನೆಲ ಕ್ರಮೇಣ ಏರುತ್ತ ಸಾಗುತ್ತದೆ.
  2. . ಫೆಸಿಫಿಕ್ ಸಾಗರದ ಅಂಚಿನಲ್ಲಿ ಸಾಗುವ ಸಿಯೆರ ಮಾದ್ರೆ ಪರ್ವತಶ್ರೇಣಿ ಅಕ್ಕಪಕ್ಕದ ಮೆಕ್ಸೊಕೊ ಮತ್ತು ಸಾಲ್ವಡಾರ್ ರಾಜ್ಯಗಳತ್ತ ಚಾಚಿಕೊಂಡಿದೆ. ಹದಿಮೂರು ಪ್ರಮುಖ ನದಿಗಳು ಇಲ್ಲಿ ಉಗಮಿಸುತ್ತವೆ. ಈ ಶ್ರೇಣಿಯ ದಕ್ಷಿಣ ತಪ್ಪಲಲ್ಲಿ ಅಗ್ನಿಪರ್ವತಗಳುಂಟು. ಇವುಗಳಲ್ಲಿ ಮುಖ್ಯವಾದದ್ದು ತಾಹೂಮೂಲ್ಕೊ (13,812) ಇದು ಮಧ್ಯ ಅಮೆರಿಕದ ಅತ್ಯಂತ ಎತ್ತರದ ಶಿಖರ. ಇತರ ಕೆಲವು ಪರ್ವತಗಳು (12,972) ಅಕಾಟಿನಂಗೊ (12,972) ಫ್ವೇಗೋ (12,581) ಸಾಂತ ಮರಿಯೂ ಕ್ವೆಜಾಲ್ಟಿನಂಗೊ (12,361) ಮತ್ತು ಆಗುವ ಜûುನಿಲ್ (11.558) ಅಟಿಲಾನ್ ಮತ್ತು ಪಕಾಯ (8.344) ಒಟ್ಟು 30 ಅಗ್ನಿಪರ್ವತಗಳ ಪೈಕಿ ಎರಡು ಈಗಲೂ ಜೀವಂತವಾಗಿವೆ. ಈ ರಾಜ್ಯದಲ್ಲಿ ಭೂಕಂಪಗಳು ಹೆಚ್ಚು.
  3. . ಸಿಯೆರ ಮಾದ್ರೆ ಪರ್ವತ ಶ್ರೇಣಿಯ ಉತ್ತರದಲ್ಲಿಯ ಎತ್ತರವಾದ ಪ್ರಸ್ಥಭೂಮಿ ಬೆಟ್ಟಗಳಿಂದ ಆವೃತ್ತವಾಗಿವೆ. ಫೆಸಿಫಿಕ್ ಸಾಗರಕ್ಕೆ ಬೀಳುವ ಕೆಲವು ನದಿಗಳು ಇಲ್ಲಿ ಉಗಮಿಸುತ್ತವೆ.
  4. . ಅಟ್ಲಾಂಟಿಕ್ ಸಾಗರ ತೀರದ ಪರ್ವತಗಳು ಪೂರ್ವಪಶ್ಚಿಮವಾಗಿ ಹಬ್ಬಿ ಮಧ್ಯೆ ದಕ್ಷಿಣಕ್ಕೆ ಚಾಚಿಕೊಂಡಿದೆ. ಸಿಯೆರ ಚಾಮ ಪರ್ವತ ಪೂರ್ವಾಭಿಮುಖವಾಗಿ ಬ್ರಿಟಿಷ್ ಹಾಂಡುರಸ್ ರಾಜ್ಯದ ಕಡೆ ಸಾಗಿ ಕಾಕ್ಸ್‍ಕೂಂಬ್ ಪರ್ವತವನ್ನು ಮುಟ್ಟುತ್ತದೆ. ಸಿಯೆರದ ಸಾಂತ ಕ್ರುಜ್. ಪರ್ವತಶ್ರೇಣಿ ಪೂರ್ವದತ್ತ ಪೋಲೊಚೀಕ್ ಮತ್ತು ಸಾಸ್ರ್ಟೂನ್ ನದಿಗಳ ನಡುವೆ ಸಾಗಿ ಕೊಕೋಲಿ ಭೂಶಿರವನ್ನು ಸೇರುತ್ತದೆ. ಮತ್ತೊಂದು ಪರ್ವತಶ್ರೇಣಿ ಸಿಯೆರದ ಲಾಸ್ ಮೀನಾಸ್, ಪೋಲೊಚೀಕ್ ಮತ್ತು ಮೊಟಾಗ್ವಾ ನದಿಗಳ ನಡುವಣ ಪ್ರದೇಶದಲ್ಲಿ ಹಬ್ಬಿದೆ.
  1. . ಪೆಟೇನ್ ಬಯಲು ಗ್ವಾಟಿಮಾಲ ರಾಜ್ಯದ 3/1 ಭಾಗವನ್ನು ಆವರಿಸಿದೆ. ಇಲ್ಲಿ ಹುಲ್ಲುಗಾವಲು ಮತ್ತು ಅರಣ್ಯಗಳು ಹೆಚ್ಚು. ಭೂಮಿ ಫಲವತ್ತಾಗಿದೆ. ನೀರು ಸಮೃದ್ಧವಾಗಿದೆ. ಪ್ರಾಚೀನ ಮಾಯ ನಾಗರಿಕತೆ ಇಲ್ಲಿ ಹಬ್ಬಿತ್ತು. ಗ್ವಾಟಿಮಾಲದಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳು ಸಣ್ಣವು ; ಪೂರ್ವಭಾಗದಲ್ಲಿ ದೊಡ್ಡವು. ಮೊಟಾಗ್ವಾ ನದಿ 250 ಮೈ. ಹರಿದು ಕ್ಯಾರಿಬೀಯನ್ ಸಮುದ್ರವನ್ನು ಸೇರುತ್ತದೆ. ಅದರ ಮೇಲೆ 90ಮೈ.ಗಳಷ್ಟು ದೂರ ಹಡಗುಗಳು ಸಂಚರಿಸುತ್ತವೆ. ಪೋಲೊಚೀಕ್ ನದಿಯ ಉದ್ದ 180 ಮೈ. ಇತರ ನದಿಗಳಪೈಕಿ ಊಸೂಮಾ ಸೀಂಟಾ, ಚಿಕ್ಸಾಯ್, ಮೊಟಾಗ್ವಾ ಮತ್ತು ಸಾಸ್ರ್ಟೂನ್ ಮುಖ್ಯವಾದವು. ಪೆಟೇನ್, ಗಾಲ್ಫೊ, ಡುಲ್ಸೆ, ಆಟಿನಾಳ್-ಇವು ಇಲ್ಲಿಯ ಸರೋವರಗಳು.

ವಾಯುಗುಣ

[ಬದಲಾಯಿಸಿ]

ಪರ್ವತಮಯವಾದ ಈ ರಾಜ್ಯದ ವಾಯುಗುಣ ಸಂಕೀರ್ಣವಾದದ್ದು. ಫೆಸಿಫಿಕ್ ತೀರದಲ್ಲೂ ಪರ್ವತ ಪ್ರದೇಶದಲ್ಲೂ ಮಾನ್ಸೂನ್ ವಾಯುಗುಣ ; ಬೇಸಗೆಯಲ್ಲಿ (ಮೇ-ಅಕ್ಟೋಬರ್) ಹೆಚ್ಚು ಮಳೆ; ಚಳಿಗಾಲ ಶುಷ್ಕ. ಕ್ಯಾರಿಬೀಯನ್ ತೀರದಲ್ಲಿ ವರ್ಷವೆಲ್ಲ ಮಳೆ. ಉಷ್ಣತೆ ಎತ್ತರಕ್ಕೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ಆದರೆ ಅತಿಯಾದ ಚಳಿ ಇಲ್ಲ. ಕರಾವಳಿಯಲ್ಲಿ ವಾರ್ಷಿಕ ಸರಾಸರಿ ಉಷ್ಣತೆ 770 ಫ್ಯಾ, ಚಳಿಗಾಲ-ಬೇಸಗೆ ಕಾಲಗಳ ನಡುವೆ ಹೆಚ್ಚು ವ್ಯತ್ಯಾಸವಿಲ್ಲ. ಪಶ್ಚಿಮ ಗ್ವಾಟಿಮಾಲದ ಎತ್ತರ ಪ್ರದೇಶಗಳಲ್ಲಿ ಉಷ್ಣತೆ 55.40 ಫ್ಯಾ-66.40 ಫ್ಯಾ,

ಸಸ್ಯಪ್ರಾಣಿಜೀವನ

[ಬದಲಾಯಿಸಿ]

ಎತ್ತರಕ್ಕೆ ಅನುಗುಣವಾಗಿ ಸಸ್ಯಗಳು ವ್ಯತ್ಯಾಸವಾಗುತ್ತವೆ. ಕ್ಯಾರಿಬೀಯನ್ ಕರಾವಳಿಯಲ್ಲಿ ಉಷ್ಣವಲಯದ ನಿತ್ಯಹಸಿರು ಕಾಡೂ ಪಶ್ಚಿಮದಲ್ಲಿ ಉಷ್ಣವಲಯದ ಪರ್ಣಪಾತಿ ಕಾಡೂ ಇವೆ. ಅಲ್ಲಲ್ಲಿ ಸವನ್ನವಿದೆ. ಎತ್ತರ ಏರಿದಂತೆಲ್ಲ ಸಸ್ಯವರ್ಗ ಬದಲಾಗುತ್ತದೆ. ಅತ್ಯಂತ ಎತ್ತರದಲ್ಲಿ ಬರ್ಫದ ಮುಸುಕಿದೆ. ದನ, ಕುರಿ, ಹಂದಿಗಳು ಸಾಕುಪ್ರಾಣಿಗಳು, ಜಿಂಕೆ, ಕೋತಿ, ಪೆಕರಿ ಸಾಮಾನ್ಯವಾಗಿದೆ. ಜಾಗ್ವಾರ್, ಟಾಫಿರ್, ಫ್ಯೂಮ ಅಪರೂಪ. ಪೋಲೊಚೀಕ್ ನದಿಯಲ್ಲಿ ಮೊಸಳೆಗಳಿವೆ. ಪಕ್ಷಿಸಂಕುಲ ವೈವಿಧ್ಯಮಯವಾದದ್ದು. ಕಾಡು ಟರ್ಕಿ ಕೋಳಿ, ಬಾತು, ಪಾರಿವಾಳ, ಜೀವಂಜೀವ ವಿಫುಲವಾಗಿವೆ. ಆಕರ್ಷಕವಾದ ಪುಕ್ಕವುಳ್ಳ ಹಕ್ಕಿ ಕ್ವೆಟ್ಜಾóಲ್ ಬಹುತೇಕ ನಷ್ಟಜೀವಿ. ಅದನ್ನು ರಾಷ್ಟ್ರದ ಲಾಂಛನವಾಗಿ ಆರಿಸಲಾಗಿದೆ.

ಇತಿಹಾಸ

[ಬದಲಾಯಿಸಿ]

ಗ್ವಾಟಿಮಾಲ ರಾಜ್ಯದ ಮೇಲೆ ಪ್ರಭಾವ ಬೀರಿದ ಇತಿಹಾಸದ ಹಂತಗಳು ಮೂರು : 1 ಸ್ಥಳೀಯ ಮಾಯ ಜನಾಂಗದ ಇತಿಹಾಸ. 2 ಸ್ಪೇನ್ ವಸಾಹತು ಇತಿಹಾಸ ಮತ್ತು ಆಧುನಿಕ ಗಣರಾಜ್ಯದ ಇತಿಹಾಸ. ಈಮೂರು ಐತಿಹಾಸಿಕ ಹಂತಗಳ ಕುರುಹುಗಳನ್ನೂ ಗ್ವಾಟಿಮಾಲ ರಾಜ್ಯದ ನಾಗರಿಕ ಜೀವನದಲ್ಲಿ ಕಾಣಬಹುದು.

Maya city of Tikal

ಕೊಲಂಬಸ್ ಅಮೆರಿಕ ಖಂಡವನ್ನು ಕಂಡುಹಿಡಿಯುವುದಕ್ಕೆ ಅನೇಕ ಶತಮಾನಗಳ ಹಿಂದೆಯೇ ಗ್ವಾಟಿಮಾಲ ರಾಜ್ಯವಿರುವ ಪ್ರದೇಶದಲ್ಲಿ ಮಾಯ ಇಂಡಿಯನ್ ಆದಿವಾಸಿಗಳು ಜೀವಿಸುತ್ತಿದ್ದರು. ಇವರ ಸಂಸ್ಕøತಿ, ಕಲೆ, ಶಿಲ್ಪ, ಸಂಗೀತ, ಬರೆಹ, ಶೂನ್ಯದ ಬಳಕೆಯೂ ಸೇರಿದಂತೆ ಅವರ ಗಣಿತ, 365ದಿನಗಳ ಪಂಚಾಂಗ-ಇವೆಲ್ಲ ಇವರ ಉನ್ನತ ನಾಗರಿಕತೆಯನ್ನು ವ್ಯಕ್ತಪಡಿಸುತ್ತವೆ. ಕ್ರಿ. ಪೂ.12 ನೆಯ ಶತಮಾನದ ಹೊತ್ತಿಗೆ ಇದರ ವೈಭವ ಅವನತಿ ಹೊಂದಿತು. ಈ ಜನ ಅನೇಕ ಬಣಗಳಾಗಿ ಒಡದರು. 1524 ರಲ್ಲಿ ಸ್ಪೇನಿನಿಂದ ಇಲ್ಲಿಗೆ ಬಂದ ಪೇದ್ರೂ ದೆ ಆಲ್ವಾರಾದೊ ಎಂಬುವನ ದಾಳಿಗಳನ್ನು ಪ್ರಥಮತಃ ಎದುರಿಸಿದವರು ಈ ಜನ. 1550 ರ ಹೊತ್ತಿಗೆ ಸ್ಪೇನ್ ದೇಶ ಮಾಯ ಜನರ ಮೇಲೆ ಪೂರ್ಣ ಪ್ರಭುತ್ವ ಸ್ಥಾಪಿಸಿತು.

ಆಲ್ವಾರಾದೊ ಗ್ವಟಿಮಾಲ ನಗರವನ್ನು 1524 ರಲ್ಲಿ ಸ್ಥಾಪಿಸಿದ. 1524 ರಿಂದ 1821 ರ ವರೆಗೆ ಗ್ವಾಟಿಮಾಲ ಸ್ಪೇನ್ ವಸಾಹತು ಸರ್ಕಾರದ ಕೇಂದ್ರವಾಯಿತು. ಅದರ ಅಧಿಕಾರವ್ಯಾಪ್ತಿಗೆ ಯೂಕಟ್ಯಾನಿನಿಂದ ಪನಾಮಾ ವರೆಗಿನ ಪ್ರದೇಶವೆಲ್ಲ ಸೇರಿತ್ತು.

Painting of a bearded man in early 16th-century attire including prominent ruff collar, wearing a decorative breastplate, with his right hand resting on his hip and his left hand grasping a cane or riding crop.
The Conquistador Pedro de Alvarado led the initial Spanish efforts to conquer Guatemala.[]

1821 ರಲ್ಲಿ ಮಧ್ಯಪ್ರದೇಶ ಸ್ಪೇನಿನಿಂದ ಸ್ವತಂತ್ರವಾಯಿತು. 1822 -23 ರಲ್ಲಿ ಮಧ್ಯ ಅಮೇರಿಕದ ಈಗಿನ ಗಣರಾಜ್ಯಗಳಾದ ಗ್ವಾಟಿಮಾಲ, ಹಾಂಡುರಸ್, ನಿಕರಾಗ್ವ, ಎಲ್ ಸಾಲ್ವಡಾರ್, ಕಾಸ್ಟ ರೀಕ - ಇವು ಮೆಕ್ಸಿಕೊ ದೇಶದ ಅಡಿಗೆ ಬಂದುವು. ಮೆಕ್ಸಿಕೊ ಚಕ್ರವರ್ತಿ ಈ ಟೂರ್ವೀದೆ ಅಧಿಕಾರ ಕಳೆದುಕೊಂಡಾಗ ಇವು ಪ್ರತ್ಯೇಕವಾದುವು. ಮಧ್ಯ ಅಮೆರಿಕ ಸಂಯುಕ್ತ ಸಂಸ್ಥಾನಗಳ ಗಣರಾಜ್ಯ ಸ್ಥಾಪಿತವಾಯಿತು.

Criollos rejoice upon learning about the declaration of independence from Spain on September 15, 1821.
The Federal Republic of Central America (1823–1838) with its capital in Guatemala City.

ಇದಕ್ಕೆ ಗ್ವಾಟಿಮಾಲ ನಗರವೇ ಆಡಳಿತ ಕೇಂದ್ರ. ಪ್ರಥಮ ಅಧ್ಯಕ್ಷ 1829 ರಲ್ಲಿ ಬಂದ. ಕ್ಷಿಪ್ರಾಕ್ರಮಣದಿಂದ ಇವನಿಂದ ಅಧಿಕಾರ ಕಸಿದುಕೊಂಡು (1838) ಇನ್ನೊಬ್ಬ ಅಧ್ಯಕ್ಷನಾದ. ಆದರೆ ಶೀಘ್ರದಲ್ಲೆ ಅಲ್ಲಿ ಒಡಕುಗಳುಂಟಾಗಿ ಅಂತರ್ಯುದ್ಧ ಆರಂಭವಾಯಿತು. ಮುರುವರ್ಷ ಗ್ವಾಟಿಮಾಲ ಪ್ರತ್ಯೇಕ ರಾಜಕೀಯ ಘಟಕವಾಯಿತು. ರಾಫೇಲ್ ಕಾರೆರಾ ಅಧ್ಯಕ್ಷನಾದ. ಅವನ ಅನಂತರ ಬಂದ (1872) ಮೇರಿಯ ರೀನ ಬ್ಯಾರಿಯೋ 1898 ರಲ್ಲಿ ಕೊಲೆಯಾದ. ಆಮೇಲೆ ಬಂದ ಕಾವ್ರೆರಾನನ್ನು ವಿಧಾನಸಭೆ ಹುಚ್ಚನೆಂದು 1920 ರಲ್ಲಿ ಘೋಷಿಸಿ ಅಧಿಕಾರದಿಂದಿಳಿಸಿತು. ಅನಂತರ ಅನುಕ್ರಮವಾಗಿ ಹಲವರು ಅಧ್ಯಕ್ಷರಾಗಿದ್ದರು. 1970 ರಲ್ಲಿ ನಡೆದ ಚುನಾವಣೆಯಲ್ಲಿ ಕಾರ್ಲೊ ಅರಾನ ಒಸೋರಿಯೋ ಸಂಮಿಶ್ರ ಪಕ್ಷದ ಬೆಂಬಲದಿಂದ ಅಧ್ಯಕ್ಷನಾದ.

ಸಂವಿಧಾನ, ಸರ್ಕಾರ

[ಬದಲಾಯಿಸಿ]

ಗ್ವಾಟಿಮಾಲ ಒಂದು ಗಣರಾಜ್ಯ. ಹೊಸ ಸಂವಿಧಾನದಲ್ಲಿ (1966) ಹಿಂದಿನ ಸಂವಿಧಾನದ (1936) ಮೂಲ ನಿಯಮಗಳೇ ಇವೆ. ಅಧ್ಯಕ್ಷನ ಅಧಿಕಾರಾವಧಿ 6 ವರ್ಷ. ನ್ಯಾಷನಲ್ ಕಾಂಗ್ರೆಸ್ ಸದಸ್ಯರು ನಾಲ್ಕು ವರ್ಷಗಳಿಗೊಮ್ಮೆ ಆಯ್ಕೆಯಾಗುತ್ತಾರೆ. ನ್ಯಾಷನಲ್ ಕಾಂಗ್ರೆಸ್ ಏಕಸದನ ವಿಧಾನಮಂಡಲ.

ಆಡಳಿತಾಂಗ

[ಬದಲಾಯಿಸಿ]
The Congress of the Republic of Guatemala.

[[File:GuatemalaProvs.PNG|thumb|250px|Guatemala's internal departments. ಗ್ವಾಟಿಮಾಲ 22 ವಿಭಾಗಗಳಾಗಿ ವಿಂಗಡವಾಗಿದೆ. ಪ್ರತಿಯೊಂದು ವಿಭಾಗಕ್ಕೂ ಒಬ್ಬೊಬ್ಬ ಗವರ್ನರ್ ರಾಷ್ಟ್ರಾಧ್ಯಕ್ಷನಿಂದ ನೇಮಕವಾಗುತ್ತಾನೆ. ಪ್ರತಿ ಜಿಲ್ಲೆಯೂ ಮುನಿಸಿಪಾಲಿಟಿಗಳಾಗಿ ವಿಭಜಿಸಲ್ಪಟ್ಟಿದೆ. ಒಟ್ಟು 324 ಮುನಿಸಿಪಾಲಿಟಿಗಳಿವೆ.

ಜನಜೀವನ

[ಬದಲಾಯಿಸಿ]

ಈ ರಾಜ್ಯದ ಜನಸಂಖ್ಯೆ 51,70,000 (1970). ಪ್ರಜೆಗಳು ಮುಖ್ಯವಾಗಿ ಇಂಡಿಯನ್ ಜನಾಂಗದವರು; ಮತ್ತು ಅಪ್ಪಟ ಸ್ಪೇನಿಗರು. 2% ನೀಗ್ರೋ ಮತ್ತು 8ಳಿ % ಸಂಮಿಶ್ರ ಜನ. ರಾಜ್ಯದ ಜನಸಾಂದ್ರತೆ ಚದರ ಮೈಲಿಗೆ 122. ದಕ್ಷಿಣದಲ್ಲಿ ಸಾಂದ್ರತೆ ಹೆಚ್ಚು. ಗ್ರಾಮದ ಜನಸಂಖ್ಯೆ 64%. ನಗರದ್ದು 36 % . ಆಡಳಿತ ಭಾಷೆ ಸ್ಪ್ಯಾನಿಷ್. ಮಾಯ ಇಂಡಿಯನರಲ್ಲಿ 6 ಮುಖ್ಯ ಭಾಷೆಗಳೂ 21 ಪ್ರದೇಶ ಭಾಷೆಗಳೂ ಇವೆ. ಬಹುತೇಕ ಜನ ರೋಮ ಕ್ಯಾಥೋಲಿಕರು. ಸುಮಾರು 4 % ಪ್ರೊಟೆಸ್ಟಂಟರು. ಪ್ರಾಥಮಿಕ ಶಿಕ್ಷಣ ಉಚಿತ ಮತ್ತು ಕಡ್ಡಾಯ. 1970 ರಲ್ಲಿ 4,735 ಪ್ರಾಥಮಿಕ ಶಾಲೆಗಳು, 360 ಸೆಕೆಂಡರಿ ಶಾಲೆಗಳು, 139 ತಾಂತ್ರಿಕ ಶಿಕ್ಷಕ ತರಬೇತು ಶಾಲೆಗಳು ಇದ್ದುವು. ಅಲ್ಲಿಯ ಸ್ಯಾಂಗ್ ಕಾರ್ಲೊಸ್ ವಿಶ್ವವಿದ್ಯಾಲಯ 1676 ರಲ್ಲಿ ಸ್ಥಾಪಿತವಾಯಿತು.

ವ್ಯವಸಾಯ ಕೈಗಾರಿಕೆ

[ಬದಲಾಯಿಸಿ]
A proportional representation of Guatemala's exports.

[[File:Fields in Quetzaltenango.jpg|thumb|250px|Fields in Quetzaltenango.]]

An indoor market in the regional city of Zunil.
A ship picking up Guatemalan bananas for export.

ಗ್ವಾಟಿಮಾಲ ರಾಜ್ಯದ ಒಟ್ಟು ನೆಲದಲ್ಲಿ 14% ವ್ಯವಸಾಯ ಯೋಗ್ಯ; 64% ಅರಣ್ಯ, 5% ಗೋಮಾಳ. ವ್ಯವಸಾಯ ಯೋಗ್ಯ ಭೂಮಿಯಲ್ಲಿ 1/3 ಭಾಗದಷ್ಟು ಭೂಮಿ ಕೃಷಿಗೆ ಒಳಪಟ್ಟಿದೆ. 1945 ರಿಂದ 1962 ರ ವರೆಗೆ ಸರ್ಕಾರ 17,346 ಮಂದಿ ರೈತರಿಗೆ ಭೂಮಿಯನ್ನು ಹಂಚಿತು. 1968 ರಿಂದ ವ್ಯವಸಾಯೋತ್ಪನ್ನ ಹೆಚ್ಚಿದೆ. ಮುಖ್ಯ ಬೆಳೆಗಳು ಕಾಫಿ, ಬಾಳೆ, ಹತ್ತಿ, ಕೋಕೋ, ಸೆಣಬನ. ಕಾಫಿ ಮೇಲುನಾಡಿನ ಭಾಗಗಳಲ್ಲಿ ಬೆಳೆಯಾಗುತ್ತದೆ; ಬಾಳೆ ಬೆಳೆಯುವುದು ಪೆಸಿಫಿಕ್ ಸಾಗರ ತೀರಗಳಲ್ಲಿ. ಹೈನುಗಾರಿಕೆ ಅಭಿವೃದ್ಧಿಯಾಗುತ್ತಿದೆ. ಪಶ್ಚಿಮದ ಕುರಿ ಸಾಕುವ ಕೇಂದ್ರಗಳಿಂದ ಗ್ವಾಟಿಮಾಲದ ಪ್ರಸಿದ್ಧ ನೇಕಾರರಿಗೆ ಉಣ್ಣೆ ಸರಬರಾಯಿ ಆಗುತ್ತದೆ. ಪೆಸಿಫಿಕ್ ಮತ್ತು ಕ್ಯಾರಿಬೀಯನ್ ತೀರಗಳಲ್ಲಿ ಹಲವು ಜಾತಿಯ ಮೀನುಗಳಿವೆ. ಕರಾವಳಿಯಲ್ಲಿರುವ ಮೀನುಗಾರಿಕೆ ಸಂಸ್ಥೆಗಳು ಹೊರದೇಶಗಳಿಗೆ ಮೀನು ರಫ್ತು ಮಾಡುತ್ತವೆ. ಗ್ವಾಟಿಮಾಲದಲ್ಲಿ ಸಿಮೆಂಟ್, ಮೇಣದ ಬತ್ತಿ, ರಾಸಾಯನಿಕ ವಸ್ತುಗಳು, ಸಿಗರೇಟ್, ಆಹಾರ ವಸ್ತುಗಳು, ಟೈರು, ಬಟ್ಟೆ ಕೈಗಾರಿಕೆಗಳಿವೆ. ಬಹುತೇಕ ಕೈಗಾರಿಕೆಗಳು ಸಣ್ಣ ಗಾತ್ರದವು. ಸೀಸ, ತವರ, ಕ್ರೋಮ್ ಮತ್ತು ಬೆಳ್ಳಿ ಇಲ್ಲಿಂದ ರಫ್ತಾಗುತ್ತದೆ. ಚಿನ್ನ ವಸಾಹತು ಕಾಲದಲ್ಲಿ ಹೇರಳವಾಗಿತ್ತು. ಈಗ ರಫ್ತಾಗುವಷ್ಟು ಪರಿಮಾಣದಲ್ಲಿ ಉತ್ಪನ್ನವಾಗುತ್ತಿಲ್ಲ.

ಸಾರಿಗೆ, ಸಂಪರ್ಕ

[ಬದಲಾಯಿಸಿ]

1970 ರಲ್ಲಿ 8,000 ಮೈಲಿಗಳಷ್ಟು ಹೆದ್ದಾರಿಗಳಿದ್ದುವು. ರೂಸ್ವೆಲ್ಟ್ ಹೆದ್ದಾರಿ ಮತ್ತು ಪೆಸಿಫಿಕ್ ತೀರದ ಹೆದ್ದಾರಿ - ಈ ಎರಡು ಅಂತರ ರಾಷ್ಟ್ರೀಯ ಹೆದ್ದಾರಿಗಳು ರಾಜ್ಯವನ್ನು ಹಾದುಹೋಗುತ್ತವೆ. ಗ್ವಾಟಿಮಾಲ ನಗರದಿಂದ ಪ್ವೆರ್ಟೊ ವಾರ್ಯೊಸ್ ಮತ್ತು ಮಾಟಿಯಾಸ್ ದ ಗಾಲ್ವೆeóï ರೇವುಗಳಿಗೂ ಸಂಪರ್ಕ ಕಲ್ಪಿಸುವ 180 ಮೈಲಿಗಳ ಅಟ್ಲಾಂಟಿಕ್ ಹೆದ್ದಾರಿ 1959 ರಲ್ಲಿ ಸಂಚಾರಕ್ಕೆ ತೆರೆಯಿತು. ಈ ದೇಶದಲ್ಲಿ ಸು. 800 ಮೈಲಿಗಳಷ್ಟು ರೈಲು ಮಾರ್ಗಗಳಿವೆ. ಕೆಲವು ನದಿಗಳು ಮತ್ತು ಸರೋವರಗಳು ಜಲಸಂಚಾರಕ್ಕೆ ಹಾಗೂ ಸರಕುಗಳ ಸಾಗಣೆಗೆ ಅನುಕೂಲವಾಗಿವೆ. ಗ್ವಾಟಿಮಾಲದ ಮುಖ್ಯ ಬಂದರು ಕ್ಯಾರಿಬೀಯನ್ ತೀರದಲ್ಲಿರುವ ಪ್ವೆರ್ಟೊ ವಾರ್ಯೊಸ್, ಸ್ಯಾಂಗ್ ಹೋಸೇ ಇನ್ನೊಂದು ಬಂದರು. ಇದು ಪೆಸಿಫಿಕ್ ತೀರದಲ್ಲಿದೆ. ಪ್ರಮುಖ ವಿಮಾನ ನಿಲ್ದಾಣ ಗ್ವಾಟಿಮಾಲ ನಗರದ ಬಳಿ ಇದೆ. ಇದಲ್ಲದೆ 46 ಸಣ್ಣ ವಿಮಾನ ನಿಲ್ದಾಣಗಳು ಗ್ವಾಟಿಮಾಲದ ಮುಖ್ಯ ನಗರಗಳಲ್ಲಿವೆ. ಗ್ವಾಟಿಮಾಲದಲ್ಲಿ 92 ಆಕಾಶವಾಣಿ ಪ್ರಸಾರ ಕೇಂದ್ರಗಳು, 3 ಟೆಲಿವಿಷನ್ ಕೇಂದ್ರಗಳೂ ಇವೆ.

ಗ್ವಾಟಿಮಾಲದ ಮುಖ್ಯ ನಗರಗಳು

[ಬದಲಾಯಿಸಿ]

ಗ್ವಾಟಿಮಾಲದ ನಗರ, ಎಸ್ಕ್ವೀಂಟ್ಲಾ ) ಕೆಸಾಲ್ಪೆನಾಂಗೊ , ವಿಟಾಲ್ಹ್ಯೂಲು , ಕೊವಾನ್ , ಪೆರ್ಟೊ ವಾರ್ಯೊಸ್ , ಮತ್ತು ಸಾಕಾಪ).

ಗ್ವಾಟಿಮಾಲದ ಮುಖ್ಯ ಕ್ರೀಡೆಗಳು ಫುಟ್ ಬಾಲ್, ಬೇಸ್ ಬಾಲ್, ಈಜು, ಬ್ಯಾಸ್ಕೆಟ್ ಬಾಲ್. ಇಲ್ಲಿಯ ನಾಣ್ಯ ಕೆಟ್ಸಾಲ್ (100) ಸೆಂಟಾವೋಗಳು.)

ಉಲ್ಲೇಖಗಳು

[ಬದಲಾಯಿಸಿ]
  1. Lovell 2005, p. 58.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: