ಕಮಲ ದೇವಾಲಯ
Bahá'í House of Worship | |
---|---|
ಸಾಮಾನ್ಯ ಮಾಹಿತಿ | |
ಮಾದರಿ | House of Worship |
ವಾಸ್ತುಶಾಸ್ತ್ರ ಶೈಲಿ | Expressionist |
ಸ್ಥಳ | ನವ ದೆಹಲಿ, India |
ಪೂರ್ಣಗೊಂಡಿದೆ | 1986 |
ತೆರೆಯುವ ದಿನಾಂಕ | December, 1986 |
Technical details | |
ರಚನಾತ್ಮಕ ವ್ಯವಸ್ಥೆ | Concrete frame & precast concrete ribbed roof |
Design and construction | |
ವಾಸ್ತುಶಿಲ್ಪಿ | Fariborz Sahba |
ರಚನಾತ್ಮಕ ಎಂಜಿನಿಯರ್ | Flint & Neill |
ಭಾರತದ, ದೆಹಲಿಯಲ್ಲಿ ಆರಾಧನೆಯ ಬಹಾಯಿ ಮನೆ ತನ್ನ ಹೂವಿನಂತಹ ಆಕಾರದ ಕಾರಣ ಕಮಲ ದೇವಾಲಯ ವೆಂದು ಜನಪ್ರಯವಾಗಿ ಹೆಸರಾದ, ಮನೆ ತನ್ನ ಹೂವಿನಂತಹ ಆಕಾರದ ಕಾರಣ ಕಮಲ ದೇವಾಲಯ ವೆಂದು ಜನಪ್ರಯವಾಗಿ ಹೆಸರಾದ, ಉಪಾಸನೆಯ ಒಂದು ಮನೆ ಹಾಗೂ ದೆಹಲಿಯಲ್ಲಿ ಒಂದು ಪ್ರಮುಖ ಆಕರ್ಷಣೆ.. ಈ ೧೯೮೬ ರಲ್ಲಿ ಅದು ಸಂಪೂರ್ವವಾಗಿ ಕಟ್ಟಿಮುಗಿಸಲಾಯತು ಮತ್ತು ಭಾರತ ಉಪಖಂಡದ ಮದರ್ ಟೆಂಪಲ್ ನಂತೆ ಸೇವೆ ಸಲ್ಲಿಸುತ್ತಿದೆ. ಹಲವು ಅನೇಕ ವಾಸ್ತುಶಿಲ್ಪೀಯ ಪ್ರಶಸ್ತಿಗಳು ಅದಕ್ಕೆ ಸಂದಿವೆ. ಹಾಗೂ ನೂರಾರು ದೈನಿಕ ಹಾಗೂ ಪತ್ರಿಕಾ ಲೇಖನಗಳಲ್ಲಿ ಈ ದೇವಾಲಯವು ಉಲ್ಲೇಖಿತವಾಗಿ ವರ್ಣಿಸಲ್ಪಟ್ಟಿದೆ.
ಪೂಜೆ
[ಬದಲಾಯಿಸಿ]ಇಲ್ಲಿಯೂ ಸಹ ಬೇರೆ ಎಲ್ಲಾ ಬಹಾಯಿಗಳ ಪೂಜೆಯ ಆರಾಧನೆಯ ಕಟ್ಟಡದಂತೆ, ಬಹಾಯಿ ಧೆರ್ಮಗ್ರಂಥಗಳಲ್ಲಿ ಸ್ಪಷ್ಟವಾಗಿ ಒತ್ತಿ ಹೇಳಿದಂತೆ, ಯಾವುದೇ ಬೇರೆ ಧರ್ಮ ಅಥವ ಇತರೆ ವ್ಯತ್ಯಾಸವಿಲ್ಲದೆ ಕಮಲ ದೇವಾಲಯದಲ್ಲೂ ಸಹ ಎಲ್ಲಾರಿಗೂ ಮುಕ್ತವಾಗಿ ತೆರೆಯಲ್ಪಟ್ಟಿದೆ. ಇಲ್ಲ ಎಲ್ಲಾ ಧರ್ಮಗಳ ಜನತೆಯು ಪರಮಾತ್ಮನನ್ನು ಹೆಸರು, ಜಾತಿ, ಮತ, ಪಂಗಡ, ಬಿರುದು ಹಾಗೂ ಕಟ್ಟುಪಾಡುಗಳಿಲ್ಲದೆ ಪೂಜಿಸಬಹುದಾದ ಒಂದು ಸ್ಥಾನವಾಗಿರಬೇಕೆಂದು ಆರಾಧನಾ ಕಟ್ಟಡದ ನಿಜವಾದ ಅರ್ಥವೆಂದು ಬಹಾಯಿ ಕಾನೂನು ಸ್ಪಷ್ಟವಾಗಿ ನಿರೂಪಿಸುತ್ತದೆ, ಬಹಾಯಿ ಧರ್ಮದ ಹಾಗೂ ಇತರೆ ದೇವರ ಬೇರೆ ದರ್ಮಗಳ ಪವಿತ್ರ ಸನಾತನ ಧರ್ಮದ ಗ್ರಂಥಗಳನ್ನು ಮಾತ್ರ ಒಳಗಡೆ ಯಾವುದೇ ಭಾಷೆಗಳಲ್ಲಿ ಓದಬಹುದು ಅಥವಾ ಮಂತ್ರವನ್ನು ಪಠಿಸಬಹುದು.[೧] ಅಲ್ಲಿ ಬಹಾಯಿ ಧರ್ಮದ ನಂಬಿಕೆ ವಾಚನಗಳು ಹಾಗೂ ಪ್ರಾರ್ಥನೆಗಳನ್ನು ವೃಂದ ಗಾಯನದವರಿಂದ ಸಂಗೀತಕ್ಕೆ ಅಳವಡಿಸಬಹುದು, ಆದರೆ ಯಾವುದೇ ಸಂಗೀತವಾದ್ಯಗಳನ್ನು ಒಳಗಡೆ ಬಾರಿಸುವುದಾಗಲಿ ಅಥವಾ ನುಡಿಸುವಂತಿಲ್ಲ. ಅದೂ ಅಲ್ಲದೆ ಯಾವುದೇ ಧರ್ಮ ಪ್ರವವಚನಗಳನ್ನು ಮಾಡುವಂತಿಲ್ಲ, ಮತ್ತು ಮತ್ಯಾವುದೇ ಧಾರ್ಮಿಕ ಕ್ರಿಯೆಗಳು, ಆಚಾರ ವಿಧಿ - ವಿಧಾನಗಳನ್ನು ಬಳಕೆ ಮಾಡುವಂತಿಲ್ಲವೆಂದು ಬಹಾಯಿ ಕಾನೂನು ಸ್ಪಷ್ಟವಾಗಿ ವಿದಿಶಮಾಡಿ ತಿಳಿಸಿದೆ. ಮತ್ತೆ ಅಲ್ಲಿ ಪ್ರವವಚನಗಳನ್ನು ವಾಚನಗಳನ್ನು ನೀಡುವಂತಿಲ್ಲ, ಮತ್ತು ಅಲ್ಲಿ ಯಾವುದೇ ಧಾರ್ಮಕ ಪದ್ಧತಿಯನ್ನು ಕಾರ್ಯಕಟ್ಟಲೆಗಳನ್ನು ಸಮಾರಂಭಗಳನ್ನು ಆಚರಿಸುವಂತಿಲ್ಲ.[೧]
ರಚನೆ
[ಬದಲಾಯಿಸಿ]ಕಮಲ ದೇವಾಲಯವೂ ಸೇರಿದಂತೆ, ಎಲ್ಲಾ ಬಹಾಯಿ ಪೂಜೆಯ ಮನೆಗಳೂ, ಕೆಲವು ವಾಸ್ತಶಿಲ್ಪದ ಮೂಲ ವಸ್ತುಗಳನ್ನು ಹಂಚಿಕೊಳ್ಳುತ್ತವೆ, ಮತ್ತು ಬಹಾಯಿಗಳಿಗೆಂದೇ ವಿಶೇಷವಾಗಿ ಬರೆದಿಟ್ಟ ಕಾನೂನುಗಳನ್ನು ಅನುಸರಿಸುತ್ತವೆ. ಅವುಗಳಲ್ಲಿ ಕೆಲವು ಬಹಾಯಿ ಧರ್ಮ ಗ್ರಂಥಗಳಲ್ಲಿ ನಿಖರವಾಗಿ ನಮೂದಿಸಲ್ಪಟ್ಟಿವೆ. ಅದು ಒಂಭತ್ತು ಭಾಗಗಳುಳ್ಳ ವೃತ್ತಾಕಾರ ಆಕಾರವನ್ನು ಹೊಂದಿರುವುದು ಅವಶ್ಯವೆಂದು, ಅದು ಆರಾಧನೆಯ ಮನೆಯ ಅಗತ್ಯವಾದ ವಾಸ್ತುಶಿಲ್ಪದ ಗುಣ ಲಕ್ಷಣವೆಂದು, ಆ ಧರ್ಮದ ಸಂಸ್ಥಾಪಕರ ಮಗ ಅಬ್ದುಲ್-ಬಹಾಯಿ ಗೊತ್ತು ಪಡಿಸಿದ್ದಾರೆ.[೨] ಕಮಲ ಪುಷ್ಪದಿಂದ ಸ್ಪೂರ್ತಿಗೊಂಡು, ಅದರ ವಿನ್ಯಾಸವು ಒಂಭತ್ತು ಭಾಗಗಳುಳ್ಳ ಮೂರರ ಗುಂಪುಗಳಲ್ಲಿ ಜೋಡಿಸಿರುವ ೨೭ - ಸ್ವತಂತ್ರವಾಗಿ - ನಿಂತಿರುವ ಅಮೃತಶಿಲೆ ಆಚ್ಛಾದಿತ 'ದಳಗಳು' ರಚಿತವಾಗಿವೆ[೩] ಪ್ರಚಲಿತ ಎಲ್ಲಾ ಬಹಾಯಿ ಆರ್ಚನೆಯ ಕಟ್ಟಡಗಳು ಒಂದು ಗುಮ್ಮಟವನ್ನು ಹೊಂದಿದ್ದರೂ ಅವು ಅವರ ವಾಸ್ತುಶಿಲ್ಪದ ಒಂದು ಅತ್ಯಗತ್ಯ ಭಾಗವೆಂದು ಪರಿಗಣಿಸಲ್ಪಟ್ಟಿಲ್ಲ.[೪] ಉಪಾಸನೆಯ ಮನೆಯ ಒಳಗಡೆ ಯಾವುದೇ ಚಿತ್ರಗಳು, ಪ್ರತಿಮೆಗಳು ಅಥವ ಮೂರ್ತಿಗಳನ್ನು ಪ್ರದರ್ಶಿಸ ಬಾರದೆಂದು ಸಹ ಬಹಾಯಿ ಧರ್ಮ ಗ್ರಂಥಗಳು ತಿಳಿಸುತ್ತವೆ ಹಾಗೂ ಯಾವುದೇ ಪ್ರವವಚನ ಪೀಠ ಅಥವ ಪವಿತ್ರ ಸ್ಥಾನವನ್ನು ವಾಸ್ತುಶಿಲ್ಪದ ವೈಶಿಷ್ಠ್ಯವನ್ನಾಗಿ ಸಂಯೋಜಿಸಬಾರದು (ವಾಚಕರು ಸಾಧಾರಣವಾಗಿ ಒಯ್ಯುಬಹುದಾದ ಭಾಷಣದ ಸ್ಟಾಂಡುಗಳ ಹಿಂದೆ ನಿಲ್ಲಬಹುದು).[೧] ಸುಮಾರು ೨,೫೦೦ ರರಷ್ಟು ಜನಗಳನ್ನು ತನ್ನಲಿ ಹೊಂದುವ ಸಾರ್ಥ್ಯವಿರುವ ಒಂದು ಕೇಂದ್ರ ಹಜಾರಕ್ಕೆ ಪ್ರತಿಯೊಂದು ದಳಗಳಂತಹ ಕಮಲದ ದಳಗಳಂತಹವು ಕಮಲ ದೇವಾಲಯದ ಒಂಭತ್ತು ಬಾಗಿಲುಗಳು ತೆರೆದುಕೊಳ್ಳುತ್ತವೆ. ಆ ಕಮಲದ ದೇವಸ್ಥಾನದ ಒಳಗಡೆ ಒಂದು ಕೇಂದ್ರ ಹಜಾರವು ೪೦ ಮೀಟರುಗಳಿಗಿಂತ[೫] ಸ್ವಲ್ಪ ಹೆಚ್ಚು ಎತ್ತರವಾಗಿದೆ ಹಾಗೂ ಅದರ ಮೇಲ್ಮೈ ಬಿಳಿ ಅಮೃತಶಿಲೆಯಿಂದ ಮಾಡಲ್ಪಟ್ಟಿದೆ. ಅಲ್ಲಿ ಉಪಯೋಗಿಸಿರುವ ಬಿಳಿಯ ಅಮೃತಶಿಲೆಗಳು ಗ್ರೀಸ್ ನಲ್ಲಿನ ಪೆಂಟಲಿ ಪರ್ವತದಿಂದ ತರಲ್ಪಟ್ಟಿವೆ, ಅದೇ ಶಿಲೆಯ ಸ್ಥಳದಿಂದಲೇ ವಿವಿಧ ಅನೇಕ ಪುರಾತನ ಸ್ಮಾರಕಗಳು ಹಾಗೂ ಇತರ ಬಹಾಯಿ ದೇವಾಲಯಗಳೂ ಸಹ ಕಟ್ಟಲ್ಪಟ್ಟಿವೆ.[೬] ಇಲ್ಲಿನ ಆರಾಧನೆಯ ಕಟ್ಟಡ, ಜೊತೆಗೆ ಒಂಭತ್ತು ಸುತ್ತುವರಿದಿರುವ ಕೊಳಗಳು ಹಾಗೂ ಅದರ ಸುತ್ತಲೂ ೨೬ ಎಕರೆ ತೋಟಗಳು ಇವೆ (೧೦೫,೦೦೦ ಚದುರ ಮೀಟರ್, ೧೦.೫ ಹೆಕ್ಟೇರ್ಸ್)
ರಾಷ್ಟ್ರೀಯ ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ, ಬಹಾಪುರ್ ಎಂಬ ಹಳ್ಳಿಯಲ್ಲಿ ಆ ಕಮಲದ ದೇವಸ್ಥಾನದ ತಾಣವಿದೆ. ಈಗ ಕೆನಡಾದಲ್ಲಿ ನೆಲೆಸಿ ವಾಸಿಸುತ್ತಿರುವ, ಫರಿಬೊರ್ಜ್ ಸಹ್ಜ ಎಂಬ ಹೆಸರಿನ, ಹಿಂದೆ ಇರಾನಿಯನ್ ಸಂಜಾತ ಈ ಕಟ್ಟಡದ ವಾಸ್ತುಶಿಲ್ಪಯಾಗಿದ್ದನು. ಅದನ್ನು ವಿನ್ಯಾಸ ಗೊಳಿಸಲು ಅವರನ್ನು ಭೇಟಿ ಮಾಡಲಾಯಿತು, ಮುಂದೆ ಅದರ ರಚನೆಯ ಮೇಲ್ವಿಚಾರಣೆಯನ್ನು ಅವರಾ ಮಾಡಿದರು ಹಾಗೂ ಯಾವ ಸ್ವದೇಶೀಯ ಗಿಡಗಳು ಮತ್ತು ಹೂವುಗಳು ಆ ಸ್ಥಳಕ್ಕೆ ಹೊಂದುತ್ತವೆ ಮತ್ತು ಆ ತಾಣಕ್ಕೆ ಸೂಕ್ತವಾದುದೆಂದು ಅಧ್ಯಯನ ಮಾಡಲು ಒಂದು ಹಸಿರು ಮನೆಯನ್ನು ನಿರ್ಮಿಸಲು ರಚನೆಯ ಬಡ್ಜೆಟ್ಟಿನಿಂದ ಹಣವನ್ನು ಅದಕ್ಕಿ ಉಳಿಸಿದರು.[೭] ೧೯೫೩ ರಲ್ಲಿ,ಹೆಚ್ಚಿನಭಾಗ ಈ ಭೂಮಿಯನ್ನು ಖರೀದಸಲು ಅಗತ್ಯವಾದ ಬಂಡವಾಳದ ಪ್ರಮುಖ ಭಾಗವನ್ನು ಹೈದ್ರಾಬಾದ್ ನಲ್ಲಿನ ಅರ್ದಶೀರ್ ರುಸ್ತುಂಪುರ್ ರವರು ತಮ್ಮ ಜೀವಮಾನದ ಸಂಪಾದನೆ ಮತ್ತು ಉಳಿತಾಯವನ್ನು ಈ ಕಾರ್ಯಕ್ಕಾಗಿ ಅವರು ದಾನ ರೂಪದಲ್ಲಿ ಕೊಟ್ಟರು.[೮]
ಪ್ರವಾಸೋದ್ಯಮ
[ಬದಲಾಯಿಸಿ]ಡಿಸೆಂಬರ್ ೧೯೮೬ ರಲ್ಲಿ, ಅದರ ಉದ್ಘಾಟನೆಯಾದಾಗಿನಿಂದ ಸಾರ್ವಜನಿಕ ಪೂಜೆಗೆ, ದೆಹಲಿಯ ಬಹಾಯಿ ಉಪಾಸನೆಯ ಕಟ್ಟಡವು, ೨೦೦೨ ನೇ ಇಸವಿಯ ಕೊನೆಯ ಹೊತ್ತಿಗೆ, ಇಡೀ ವಿಶ್ವದಲ್ಲೇ ಅತ್ಯಂತ ಅತಿಹೆಚ್ಚು ಪರ್ಯಟಕರು ಭೇಟಿಕೊಟ್ಟ ಕಟ್ಟಡದಲ್ಲಿ ಒಂದೆಂದು ಪರಿಗಣಿತವಾಗಿ, ೫೦ ಮಿಲಿಯನ್ ಗಿಂತಲೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿದೆ.[೯] ಆ ವರ್ಷಗಳ ಅವಧಿಯಲ್ಲಿ ಅದಕ್ಕೆ ಭೇಟಿಕೊಟ್ಟ ಪರ್ಯಟಕರ ಸಂಖ್ಯೆಯು ವಿಶ್ವದ ಇತರೆ ಪ್ರಖ್ಯಾತ ಐಫೆಲ್ ಟವರ್ ಹಾಗೂ ತಾಜ್ ಮಹಲ್‌ಗಳಿಗಿಂತಲೂ ಮೇರೆ ಮೀರಿಸಿ ನಿಂತಿತ್ತು. ಅದು ಹಿಂದೂ ಪವಿತ್ರ ದಿನಗಳಲ್ಲಿ, ಅದು ೧೫೦,೦೦೦ ರಷ್ಟು ಜನಗಳನ್ನು ತನ್ನತ್ತ ಆಕರ್ಶಿಸಿದೆ; ಅದು ಪ್ರತಿ ವರ್ಷವೂ ನಾಲ್ಕು ಮಿಲಿಯನ್ ಪ್ರವಾಸಿಗಳನ್ನು ತನ್ನಲ್ಲಿಗೆ ಸ್ವಾಗತಿಸುತ್ತದೆ (ಪ್ರತಿ ದಿನವೂ ಸುಮಾರು ೧೩,೦೦೦ ಅಥವ ಪ್ರತಿ ನಿಮಷವೂ ೯ ಜನಗಳು).
ಈ ಉಪಾಸನೆಯ ಕಟ್ಟಡವನ್ನು ಸಾಮಾನ್ಯವಾಗಿ "ಕಮಲದ ದೇವಸ್ಥಾನ" ಎಂದು ಸಾಧಾರಣವಾಗಿ ಕರೆಯಲಾಗುತ್ತದೆ. ಭಾರತದಲ್ಲಿ ಹಿಂದು ಉತ್ಸವ ಮತ್ತು ಪೂಜಾ ಕಾಲದಲ್ಲಿ ದುರ್ಗಾ ಪೂಜೆಯ ಸಂದರ್ಭದಲ್ಲಿ, ಕಮಲ ದೇವಾಲಯದ ಅನೇಕ ಪಟ್ಟುಗಳ ಒಂದು ಪ್ರತಿಕೃತಿಯು ಒಂದು ಚಪ್ಪರದಂತೆ ಮಾಡಲ್ಪಟ್ಟಿತ್ತು, ದುರ್ಗಾ ಮಾತೆಯನ್ನು ಪೂಜಿಸಲು ಒಂದು ತಾತ್ಕಾಲಿಕ ರಚನೆಯು ಸ್ಥಾಪಿಸಲ್ಪಟ್ಟಿತು.[೧೦] ಸಿಕ್ಕಿಂನಲ್ಲಿ ಶಿವನಿಗೆ ಸಮರ್ಪಿಸಲ್ಪಟ್ಟ, ಹಿಂದು ಸಮಾರೋಹೋತ್ಸದ ಪೆಂಡಾಲ್ ಮಂದಿರವು ಶಾಶ್ವತವಾದ ಪ್ರತಿಕೃತಿಯಾಗಿದೆ.[೧೧]
ವೈಶಿಷ್ಟ್ಯಗಳು
[ಬದಲಾಯಿಸಿ]ದೇವಾಲಯವು ವೃತ್ತಿಪರ ವಾಸ್ತುಶಿಲ್ಪ ಕಲೆ, ಕುಶಲ ಕಲೆ, ಧಾರ್ಮಿಕ, ಸರ್ಕಾರಿ ಹಾಗೂ ಇತರೆ ಸ್ಥಳಗಳಲ್ಲಿ ಗಮನದ ವಿಶಾಲ ವ್ಯಾಪ್ತಿಯನ್ನು ಗಳಿಸಿದೆ ಹಾಗೂ ನಮ್ಮ ಕಾರ್ಮಗಾರಿ ಜನರ ಅದ್ಭುತ ಕುಶಲ ಕೈಗಾರಿಕೆಯ ಬಗ್ಗ ತಿಳಿಯುತ್ತದೆ..
ಪ್ರಶಸ್ತಿಗಳು
[ಬದಲಾಯಿಸಿ]- ೧೯೮೭ ರಲ್ಲಿ, ಇರಾನಿ ಸಂಜಾತ ಮಿ. ಫರಿಬೊರ್ಜ್ ಸಹ್ಬ ಬಹಾಯಿಗಳ ಆರಾಧನೆಯ ಮಂದಿರದ ವಾಸ್ತುಶಿಲ್ಪಿಗೆ ಒಂದು ಪುಷ್ಪದ ಸೌಂದರ್ಯವನ್ನು ಮೀರಿಸಲು ಯತ್ನಿಸಿದರೂ ಹಾಗೂ ಅದರ ದೃಷ್ಟಿಯ ಪ್ರಭಾವದಲ್ಲಿ ಅಷ್ಟು ಅದ್ಭುತವಾದ ಒಂದು ಕಟ್ಟಡವನ್ನು ನಿರ್ಮಿಸಿದ್ದಕ್ಕೆ ಯು ಕೆ - ಆಧಾರಿತ ವಿನ್ಯಾಸಗಾರ ಇಂಜಿನೀರ್ ಗಳ ಸಂಸ್ಥೆಯಿಂದ "ಅ ಕಟ್ಟಡವು ಒಂದು ಪುಷ್ಪದ ಸೌಂದರ್ಯವನ್ನು ಮತ್ತು ನಮ್ಮ ದೃಷ್ಟಿಗೆ ನೇರವಾಗಿ ತಲುಪುವಂತಹ ಸೊಬಗನ್ನು ನಿರ್ಮಿಸಿದ್ದಾರೆ" ಹಾಗೂ ಧಾರ್ಮಿಕ ಕಲೆ ಹಾಗೂ ವಾಸ್ತುಶಿಲ್ಪದಲ್ಲಿ ಉತ್ಕೃಷ್ಠತೆಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.[೧೨]
- ೧೯೮೭ ರಲ್ಲಿ, ನವ ದೆಹಲಿ ಬಳಿಯ ಬಹಾಯಿಗಳ ಪೂಜೆಯ ಕಟ್ಟಡದ ವಿನ್ಯಾಸಕ್ಕಾಗಿ ಮಿ. ಎಫ್. ಸಹ್ಬ ರವರಿಗೆ ೧೯೮೭ ರ "ಎಕ್ಸಲೆನ್ಸ್ ಇನ್ ರಿಲಿಜಿಯಿಸ್ ಆರ್ಟ್ ಅಂಡ್ ಆರ್ಕಿಟೆಕ್ಚರ್" ವಾಶಿಂಗ್ಟನ್ ಡಿ.ಸಿ ಯ ಧರ್ಮ, ಕಲೆ ಮತ್ತು ಶಿಲ್ಪ ಕಲೆಯ ಇಂಟರ್ಫೇಯ್ತ್ ಫೂರಂ ಸಂಯೋಜನೆ ಮಾಡಿದ ಶಿಲ್ಪ ಕಲೆಗಾರರ ಅಮೇರಿಕಾದ ಸಂಸ್ಥೆಯು ತಮ್ಮ ಮೊದಲ ಗೌರವದ ಪ್ರಶಸ್ತಿಯನ್ನು ನೀಡಿ ಅವರನ್ನು ಗೌರವಿಸಿದರು.[೧೩]
- ೧೯೮೮ ರಲ್ಲಿ, ಬಾಹ್ಯ ಲೈಟಿಂಗ್ ಗಾಗಿ ವಿಶಿಷ್ಟ ಉದಾಹರಣೆಯ - ಪಾಲ್ ವಾಟರ್ಬರಿ ಹೊರಾಂಗಣ ಲೈಟಿಂಗ್ ಡಿಸೈನ್ ಗಾಗಿ ಪ್ರಶಸ್ತಿಯನ್ನುಉತ್ತರ ಅಮೇರಿಕಾ ದೀಪಾಲಂಕಾರದ ಎಂಜಿನೀರಿಂಗ್ ಸೊಸೈಟಿಯು ಉತ್ಕೃಷ್ಠತೆಗೆ ಪ್ರದಾನ ಮಾಡಿತು.[೧೩]
- ೧೯೮೯ ರಲ್ಲಿ, "ಕಾಂಕ್ರೀಟ್ ವಿನ್ಯಾಸದಲ್ಲಿ ಎಕ್ಸಲೆನ್ಸ" ಗಾಗಿ ಅಮೇರಿಕಾದ ಕಾಂಕ್ರೀಟ್ ಸಂಸ್ಥೆಯ ಅಂಗಸಂಸ್ಥೆ ಮಹರಾಷ್ಟ್ರ, ಭಾರತ ದಿಂದ ಒಂದು ಪ್ರಶಸ್ತಿಯನ್ನು ಮಂದಿರವು ಸ್ವೀಕರಿಸಿತು.[೧೩]
- ಬ್ರಿಟಾನಿಕ ವಿಶ್ವಕೋಶದ ೧೯೯೪ ರ ಆವೃತ್ತಿಯು, ತನ್ನ "ಶಿಲ್ಪಕಲೆ" ವಿಭಾಗದಲ್ಲೆ ತನ್ನ ಸಮಯದ ಪ್ರಸ್ತುತ ಪ್ರಮುಖ ಸಾಧನೆ ಎಂದು ಈ ದೇವಾಲಯಕ್ಕೆ ಅಂಗೀಕಾರವನ್ನು ಕೊಟ್ಟಿತು.[೧೩]
- ೨೦೦೦ ರದಲ್ಲಿ, "ವಿಶ್ವ ಶಿಲ್ಪಕಲೆ ೧೯೦೦ - ೨೦೦೦: ಒಂದು ವಿಮರ್ಶಾತ್ಮಕ ಮೋಸಾಯಿಕ್, ಸಂಪುಟ ಎಂಟು, ದಕ್ಷಿಣ ಏಷ್ಯಾದಲ್ಲಿ' ೨೦ ನೆಯ ಶತಮಾನದ ಶಾಸ್ತ್ರೋಕ್ತ ೧೦೦ ಅತ್ಭುತ ಕೆಲಸಗಳಲ್ಲಿ ಒಂದೆಂದು ಚೈನಾದ ವಾಸ್ತುಶಿಲ್ಪ ಸೊಸೈಟಿಯು ಇತ್ತೀಚೆಗೆ ಪ್ರಕಟಿಸಿದೆ.[೧೪]
- ೨೦೦೦, ವಿಶ್ವದಾದ್ಯಂತ ಯಾವುದೇ ಇತರೆ ವಾಸ್ತುಶಿಲ್ಪದ ಸ್ಮಾರಕದಿಂದ ಮೀರಲಾಗದ ಮಟ್ಟಕ್ಕೆ, ಎಲ್ಲಾ ರಾಷ್ಟ್ರಗಳ, ಧರ್ಮಗಳ ಹಾಗೂ ಸಾಮಾಜಿಕ ಹಂತದ ಜನತೆಯ ಒಗ್ಗಟ್ಟು ಮತ್ತು ಐಕ್ಯಮತ್ಯವನ್ನು ಪ್ರೋತ್ಸಾಹ ಮಾಡುವುದರಲ್ಲಿ ೨೦ ನೆ ಶತಮಾನದ ತಾಜ್ ಮಹಲ್ (ಈ) ನ ಸೇವೆಯ ಪರಿಮಾಣಕ್ಕೆ "ಕಮಲ ದೇವಾಲಯದ, ವಾಸ್ತುಶಿಲ್ಪಿ ಫರಿಬೊರ್ಜ್ ಸಹ್ಜ ರಿಗೆ "ಗ್ಲೋಬ್ ಆರ್ಟ ಅಕೆಡಮಿ ೨೦೦೦" ವಿಯುನ್ನಾದಲ್ಲಿನ ಗ್ಲೋಬ್ ಆರ್ಟ್ ಅಕೆಡಮಿ ಯು ಪ್ರಶಸ್ತಿಯನ್ನು ದಯಪಾಲಿಸಿತು.[೧೪]
ಪ್ರಕಟಣೆಗಳು
[ಬದಲಾಯಿಸಿ]ಲೇಖನಗಳು
[ಬದಲಾಯಿಸಿ]೨೦೦೩ ರ ಪ್ರಕಾರ ಅದನ್ನು ಭಾರತ, ರಷ್ಯಾ ಹಾಗೂ ಚೈನಾದಲ್ಲಿ ಸಂಪೂರ್ಣವಾಗಿ ದೂರದರ್ಶನ ಕಾರ್ಯಕ್ರಮಗಳಲ್ಲಿ ತೋರಿಸಲ್ಪಟ್ಟಿದೆ. ಬಹಾಯಿ ವಿಶ್ವ ಕೇಂದ್ರ ವಾಚನಾಲಯವು ೫೦೦ ಕ್ಕಿಂತ ಹೆಚ್ಚು ಪ್ರಕಟಣೆಗಳನ್ನು ಜೀರ್ಣೋದ್ಧಾರ ಮಾಡಿದೆ, ಇವೆಲ್ಲವೂ ರಚನೆಯ ಬಗ್ಗೆ ಹೊಗಳಿರುವ ಲೇಖನಗಳು ಹಾಗೂ ವಾಸ್ತಶಿಲ್ಪಿಯ ಜೊತೆ ಸಂದರ್ಶನಗಳೂ, ಚಿಕ್ಕ ಸಾಹಿತ್ಯಗಳ ರೂಪದಲ್ಲಿ ಕಮಲ ದೇವಾಲಯದ ಬಗ್ಗೆ ಮಾಹಿತಿಯನ್ನು ತಿಳಿಸುತ್ತವೆ.[೧೩]
- ಫ್ರಾನ್ಸ್ ನಲ್ಲಿ "ಆಕ್ಚುಲೈಟ್ ಡೆಸ್ ರಿಲಿಜೆನ್ಸ್" ಎಂಬ ಸಂಚಿಕೆಯು ಒಂದು ವಿಶೇಷ ಆವೃತ್ತಿಯಲ್ಲಿ "ಲೆಸ್ ರೆಲಿಜೆನ್ಸ್ ಎಟ್ ಲೆನ್ಸ್ ಚೆಫ್-ಡಿ'ಒಲಿವೆರ್ಸ್" (ಧರ್ಮಗಳು ಮತ್ತು ಅವುಗಳ ಅತ್ಯುತ್ತಮ ಕೃತಿಗಳು) ೨೦೦೦ ರ ಚಳಿಗಾಲದಲ್ಲಿ ಕಿಮಲ ಮಂದಿರದ ಬಗ್ಗೆ ನಾಲ್ಕು ಪುಟಗೋ ಪ್ರಮುಖ ಲೇಖನವನ್ನು ಪ್ರಕಟಿಸಿತು.[೧೫][೧೩]
- ಗಿನ್ನೆಸ್ ವಿಶ್ವ ದಾಖಲೆಗಳು ೨೦೦೧ ರಲ್ಲಿ ಪ್ರಕಟಣೆ.
- {{0}ಶಿಲ್ಪಕಲೆಗಳು (ನಿಯತಕಾಲಿಕೆ ಪತ್ರಿಕೆ) ಸೆಪ್ಟೆಂಬರ್ 1987.
- ಬೆಳಕಿನ ದೀಪದ ವಿನ್ಯಾಸ + ಅನ್ವಯಿಕೆ ಸಂಪುಟ 19, ನಂ:6, ವಿದ್ಯುದಲಂಕಾರ ಎಂಜಿನೀರಿಂಗ್ ಸೊಸೈಟಿ,ಉತ್ತರ ಅಮೇರಿಕಾದಿಂದ, "ಇಪ್ಪತ್ತನೇ ಶತಮಾನದ ತಾಜ್ ಮಹಲ್".
- ವಾಲ್ ಪೇಪರ್ ಅಕ್ಟೋಬರ್ 2002
- ಪ್ರಗತಿಪರ ವಾಸ್ತುಶಿಲ್ಪ , ಫೆಬ್ರುವರಿ ಹಾಗೂ ಪುನಃ ಡಿಸೆಂಬರ್ 1987[೧೩]
- ವಿಶ್ವ ವಾಸ್ತುಶಿಲ್ಪಿ: ಒಂದು ವಿಮರ್ಶಾತ್ಮಕ ಮೋಸಾಯುಕ್ 1900-2000, ಸಂಪುಟ 8, ಕೆನ್ನೆಥ್ ಫ್ರಂಪ್ಟನ್ ರವರಿಂದ, ಸ್ಪ್ರಿಂಗರ್ - ವೆರ್ಲೋ ವೈನ್ ಪ್ರಕಾಶಕರು, ನ್ಯೂಯಾರ್ಕ್ - "ಮಹಾನ್ ಸೌದರ್ಯದ ಒಂದು ಶಕ್ತಿಶಾಲಿ ಪ್ರತಿಮೆ ... ನಗರದ ಅರ್ಥ ಸೂಚಿಸುವ ಚಿನ್ಹೆ".
- ಧರ್ಮ ಮತ್ತು ಸಂಪ್ರದಾಯ - ವಾಸ್ತುಶಿಲ್ಪಿಗಳ ಅಮೇರಿಕಾದ ಸಂಸ್ಥೆಯ ಸಂಯೋಜನೆಯ IFRAA ಸಂಚಿಕೆ, ಸಂಪುಟ XXI "ಭಾವನೆಗಳ ಸೂಕ್ತತೆ ಹಾಗೂ ರಚನೆ, ವಿನ್ಯಾಸದ ಒಂದು ಅಸಾಧಾರಣ ಸಾಹಸ ಕಾರ್ಯ".
- ರಚನಾ ಎಂಜಿನೀರ್, ಯು ಕೆ (ವಾರ್ಷಿಕ) ಡಿಸೆಂಬರ್, 1987
- ಇರಾನಿಕಾ ವಿಶ್ವಕೋಶ 1989
ಪುಸ್ತಕಗಳು
[ಬದಲಾಯಿಸಿ]- ಎಂದೆಂದಿಗೂ ಲಾವಣ್ಯದಲ್ಲಿ: ಬಹಾಪುರ್ ನ ಕಮಲದ ಮಹಲ್, ರಘು ರೈ ರವರಿಂದ ಛಾಯಚಿತ್ರಗಳು, ರೋಜರ್ ವ್ಹೈಟ್ ರವರಿಂದ ಮೂಲ ಗ್ರಂಥ, ಟೈಮ್ ಬುಕ್ಸ್ ಇಂಟರ್ನಾಷನಲ್, 1992
- ದೇವರನ್ನು ನೆನಪಿನ ಆಕರ್ಷಣಾ ಸ್ಥಳ, ಥಾಂಮ್ಸನ್ ಪ್ರಸ್, 2002
ಅಂಚೆಚೀಟಿಗಳು
[ಬದಲಾಯಿಸಿ]ಸಂಗೀತ
[ಬದಲಾಯಿಸಿ]- ದೇವಾಲಯ ಸಮರ್ಪಣಾ ಸೇವೆ (1986)[೧೭]
- ಸೀಲ್ಸ್ ಮತ್ತು ಕ್ರೊಪ್ಟ್, ಲೆಲಿ ಎರಿಕ್ಸ್, ಹಾಗೂ ಇತರರು ರವರಿಂದ ಧ್ವನಿಗಳು ಅಥವ ಹಾಡುಗಳ ಸಹಿತ ಕೆನಡಾ ಆಂಟೊರಿಯಾದಲ್ಲಿ, ಡೋಂಟ್ ಬ್ಲಿಂಕ್ ಮ್ಯೂಸಿಕ್, ಇಂಕ್ ಗಾಗಿ ಕೀಬೋರ್ಡ್ ನುಡಿಸುವವ ಜಾಕ್ ಲೇಂಜ್ ರಿಂದ 1987 ರಲ್ಲಿ ತಯಾರಿಸಲ್ಪಟ್ಟ ಕಮಲದಲ್ಲಿ ಆಭರಣ (ಆಲ್ಬಮ್)[೧೮]
ಅತಿಹೆಚ್ಚು ಸಂದರ್ಶಕರು:
[ಬದಲಾಯಿಸಿ]- "ಸಿ ಎನ್ ಎನ್ ವರದಿಯಂತೆ, ವಿಶ್ವದಲ್ಲೆ ಅತಿಹೆಚ್ಚು ಜನಗಳಿಂದ ಸಂದರ್ಶಿಸಲ್ಪಟ್ಟ ಕಟ್ಟಡ"[೧೯]
- "ಪ್ರತಿ ವರ್ಷ ಸುಮಾರು 4.5 ಮಿಲಿಯನ್ ಸಂದರ್ಶಕರ ಸಹಿತ ತಾಜ್ ಮಹಲನ್ನು ಸಹ ಮೀರಿಸಿ, ಭಾರತದಲ್ಲಿ ಅತ್ಯಂತ ಹೆಚ್ಚು ಸಂದರ್ಶಿಸಲ್ಪಟ್ಟ ಕಟ್ಟಡ".[೨೦]
ಗಮನಾರ್ಹ ಸಂದರ್ಶಕರು
[ಬದಲಾಯಿಸಿ]- {{0}ಪಂಡಿತ್ ರವಿ ಶಂಕರ್ ಸಿತಾರ್ ನ ಪ್ರಖ್ಯಾತ ಕಲಾವಿದರು
- ಟಾನ್ಜಾನಿಯಾ, ಹಂಗರಿ, ಹಾಗೂ ಪನಾಮ ಗಳ ರಾಯಭಾರಿಗಳು
- ಬೆರ್ಮುಡಾ, ಹಂಗರಿ, ಭಾರತ, ಐವರಿ ಕೋಸ್ಟ್, ನೇಪಾಲ್, USSR/ರುಷಿಯಾ, ರೊಮಾನಿಯಾ, ಸಿಂಗಪೂರ್, ಟಜಾಕಿಸ್ತಾನ್, ಯೆಮೆನ್, ಯುಗೊಸ್ಲಾವಿಯಾ ಮತ್ತು ಝಾಂಬಿಯಾ ದೇಶಗಳ ಸರ್ಕಾರದ ಅಧಿಕಾರಿಗಳು (ಮಂತ್ರಿಗಳು, ಮುಖ್ಯಸ್ಥರು)
- ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು
- ಪ್ರಿನ್ಸ್ ನಿರಂಜನ್ ಶಾಹ್, ನೇಪಾಳದ
- ಡಾ. ಯುಟೊನ್ ಮುಚಟಾರ್ ರಾಫೈ, ಪ್ರಾಂತೀಯ ನಿರ್ದೇಶಕರು, ವಿಶ್ವ ಆರೋಗ್ಯ ಸಂಸ್ಥೆಗಳು
- ಐಸ್ ಲ್ಯಾಂಡಿನ ರಾಷ್ಟ್ರಾಧ್ಯಕ್ಷರು,[೨೩] ಒಲ್ಯಾಪುರ್ ರಂಗ್ನಾರ್ ಗ್ರಿಮ್ಸಸನ್ ರವರು ಮೊದಲ ಒಂದು ರಾಷ್ಟ್ರದ ಅಧ್ಯಕ್ಷರು ಇಲ್ಲಿಗೆ ಭೇಟಿಕೊಟ್ಟಿದವರು ಆಗಿದ್ದರು.[೨೩]
- ಶಾಸ್ತ್ರೀಯ ಭಾರತೀಯ ಸಂಗೀತಗಾರರು/ರಚನಾಕಾರರು ಆದ ಆಂಜದ್ ಆಲಿ ಖಾನ್[೨೪] ಭೇಟಿಕೊಟ್ಟವರು
- ರೊಮೇನಿಯಾ ದ ಪ್ರಿನ್ಸೆಸ್ ಆದ ಮಾರ್ಗರಿತಾ ಮತ್ತು ಆಕೆಯ ಪತಿ ಪ್ರಿನ್ಸ್ ರಾಡಿ ವೊನ್ ಹೊಹೆನ್ಜೊಲೆನ್-ವೆರಿನ್ಜೆನ್ ಭೇಟಿಕೊಟ್ಟಿದ್ದರು
- ಸಿಲ್ವಿಯಾ ಗ್ಯಾಸ್ಪರೊಕೊವಾ, ಮೊದಲ ಮಹಿಳೆಯಾಗಿದ್ದ ಸ್ಲೊವಾಕ್ ರಿಪಬ್ಲಿಕ್ ಗೆ
- {ಏಪ್ರಿಲ್ 2010 ರಲ್ಲಿ, {0}ಸತ್ಯ ಸಾಯಿ ಬಾಬ[೨೫]
ಇವನ್ನೂ ನೋಡಿ
[ಬದಲಾಯಿಸಿ]- ಭಾರತದಲ್ಲಿ ಬಹಾಯಿ ನಂಬಿಕೆ
ಟಿಪ್ಪಣಿಗಳು
[ಬದಲಾಯಿಸಿ]- ↑ ೧.೦ ೧.೧ ೧.೨ Rafati, V. (1989). "Bahai temples". Encyclopædia Iranica.
{{cite encyclopedia}}
: Unknown parameter|coauthors=
ignored (|author=
suggested) (help) - ↑ `Abdu'l-Bahá (1982) [1912]. The Promulgation of Universal Peace (Hardcover ed.). Wilmette, Illinois, USA: Bahá'í Publishing Trust. p. 71. ISBN 0877431728.
- ↑ ಬಹಾಯಿಗಳ ಆರಾಧನೆಯ ಕಟ್ಟಡದ ಸ್ಥಳದ ವಾಸ್ತುಶಿಲ್ಪಶಾಸ್ತ್ರ
- ↑ ಶೋನಘಿ ಎಫೆಂಡಿ ಇದು ಸ್ವತಂತ್ರ ವ್ಯಕ್ತಿಯ ತನ್ನ ನಂಬುಗೆ, ದೀಪಗಳ ಒಂದು ದೈವತ್ವದ ಮಾರ್ಗದರ್ಶಿ (ಸಂಪುಟ ೧) , ಪುಟ 311
- ↑ "Bahá'í Houses of Worship". Bahá'í International Community. 2006. Retrieved 2008-03-09.
- ↑ "Penteli marbles for Bahai temples". Dionyssos Marbles. 2010.
- ↑ "["Gardens of Worship"]". ["Recreating Eden"]. Season 03. Episode 30. 2006.
- ↑ Faizi, Gloria (1993). Stories about Bahá'í Funds. New Delhi, India: Bahá'í Publishing Trust. ISBN 8185091765.
- ↑ "ಕೆನಡಾದ ಬಹಾಯಿಯ ಸಮುದಾಯ". Archived from the original on 2004-10-27. Retrieved 2011-01-27.
- ↑ Chakraborty, Debarati. "Newsline 28 September 2006: Here's Delhi's Lotus Temple for you at Singhi Park!". Archived from the original on 2007-10-08. Retrieved 2007-05-29.
- ↑ ಉಪಗ್ರಹದಿಂದ ತೆಗೆದ ಛಾಯಾಚಿತ್ರ ನಲ್ಲಿ ವಿಕಿಮ್ಯಾಪಿಯಾ .
- ↑ ಒಂದು ಅತ್ಯಾಶ್ಚರ್ಯಕರ ವಾಸುಶಿಲ್ಪಶಾಸ್ತ್ರ ದಿ ತ್ಟಿಬ್ಯೂನ್, ಚಂಡೀಘಡ ದಲ್ಲಿ ಪ್ರಕಟಿಸಲಾಗಿದೆ ಇವರಿಂದ ಅನಿಲ್ ಸರ್ವಾಲ್.
- ↑ ೧೩.೦ ೧೩.೧ ೧೩.೨ ೧೩.೩ ೧೩.೪ ೧೩.೫ ೧೩.೬ ೧೩.೭ ಉಲ್ಲೇಖ ದೋಷ: Invalid
<ref>
tag; no text was provided for refs namedbahap
- ↑ ೧೪.೦ ೧೪.೧ ಭಾರತದಲ್ಲಿನ ಬಹಾಯಿ ದೇವಸ್ಥಾನವು ಅನೇಕ ಪ್ರಶಸ್ತಿಗಳು ಮತ್ತು ಸಮ್ಮತಿಯನ್ನು ಇಂದಿಗೂ ಪಡೆಯುತ್ತಿವದೆ ನವ ದೆಹಲಿ, ೫ ಡಿಸೆಂಬರ್ ೨೦೦೦ (BWNS)
- ↑ ವಾಸ್ತುಶಿಲ್ಪಶಾಸ್ತ್ರ ದ ಜಾಲತಾಣ (ಇದನ್ನು ಕೀ ಮಾಡಿ->ಪಬ್ಲಿಕೇಷನ್ಸ್)ಪಬ್ಲಿಕೇಷನ್ಸ್)
- ↑ ಬಹಾಯಿ ಗಳ ಅಂಚೆಚೀಟಿಗಳು
- ↑ ಬಹಾಯಿ ಗಳ ಭಕ್ತಿ ಗೀತೆಗಳು ಮತ್ತು ಹಾಡುಗಳು
- ↑ ಕಮಲದಲ್ಲಿನ ಒಂದು ವಜ್ರ ನೋಡಿರಿ
- ↑ "ವಾರ್ತೆಯಲ್ಲಿ ಕೆನಡಾದ ಬಹಾಯಿಗಳು - ಫರಿಬೊರ್ಜ್ ಸಹ್ಜ". Archived from the original on 2004-10-27. Retrieved 2011-01-27.
- ↑ ಚಿಕಾಗೋದಲ್ಲಿನ ಸಾರ್ವಜನಿಕ ಸ್ಮರೋತ್ಸವಗಳು ಆರಾಧನೆಯ ಮನೆಯ ಅಸಾಧಾರಣ ಪ್ರಭಾವವನ್ನು ಎತ್ತಿ ತೋರಿಸುತ್ತವೆ ಒಂದು ದೇಶ, ಸಂಪುಟ 15, ಸಂಚಿಕೆ 1 / ಏಪ್ರಿಲ್-ಜೂನ್ 2003
- ↑ ಒಂದು ವಾಸ್ತುಶಿಲ್ಪದ ಅದ್ಭುತ ಇವರಿಂದ ಪ್ರೊ. ಅನಿಲ್ ಸರ್ವಾಲ್ ಚಂಡೀಘರ್ ನಲ್ಲಿನ ದಿ ಟ್ರಿಬ್ಯೂನ್ ನಲ್ಲಿ ಮೊದಲು ಪ್ರಕಟಿಸಲ್ಪಟ್ಟಿತು
- ↑ ಹೆಸರಾಂತ ಸಂದರ್ಶಕರು ಬಹಾಯಿ ದೇವಾಲಯವನ್ನು ಶ್ಲಾಘಿಸಿದರು
- ↑ ೨೩.೦ ೨೩.೧ ಐಸ್ಲ್ಯಾಂಡಿನ ಅಧ್ಯಕ್ಷರು ನವ ದೆಹಲಿಯಲ್ಲಿನ ಬಹಾಯಿ ಮಂದಿರಕ್ಕೆ ಸಂದರ್ಶಿಸಿದರು ನವ ದೆಹಲಿ, ಭಾರತ, 14 ನವೆಂಬರ್ 2000 (BWNS)
- ↑ ಭಾರತೀಯ ಶಾಸ್ತ್ರೀಯ ಸಂಗೀತದ ದಿಗ್ಗಜ, ಅಂಜ್ಜದ್ ಅಲಿಖಾನ್ ರವರು, ನವ ದೆಹಲಿಯ ಬಹಾಯಿ ಕಮಲದ ಮಂದಿರದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟರು ನವ ದೆಹಲಿ, 22 ನವೆಂಬರ್ 2000 (BWNS)
- ↑ ದೆಹಲೊಇ ಹಾಗೂ ಸಿಮ್ಲಾಕ್ಕೆ ಶ್ರೀ ಸತ್ಯ ಸಾಯಿಬಾಬಾ ರವರ ಪ್ರವಾಸ 2010
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಧಿಕೃತ ಜಾಲತಾಣ
- ಹೊಸ ದಿಲ್ಲಿಯ, ಕಮಲ ದೇವಸ್ಥಾನದ, ಬಹಾಯಿಗಳ ಆರಾಧನೆಯ ಸ್ಥಳದ ವಾಸ್ತವಿಕ ಪ್ರವಾಸ (ಹೊರಗಿನ, ಒಳಗಿನ, ಹಗಲು ಮತ್ತು ರಾತ್ರಿಯ ಅವಲೋಕನ ಸಂವಹನದ ವಿಹಂಗಮ ನೋಟದ ದೃಷ್ಯಗಳು)
- Pages with reference errors
- CS1 errors: unsupported parameter
- Building using deprecated parameters
- Commons link is locally defined
- Commons category with page title different than on Wikidata
- ಬಹಾಯಿ ಸಂಗಸಂಸ್ಥೆಗಳು
- ಡೆಲ್ಲಿ ಒಳಗಿನ ಕಟ್ಟಡಗಳು ಮತ್ತು ರಚನೆಗಳು
- ಡೆಲ್ಲಿ ಯಲ್ಲಿನ ಧರ್ಮಗಳು
- ಭಾರತದಲ್ಲಿನ ಬಹಾಯ್ ಬಗ್ಗೆ ನಂಬಿಕೆಗಳು
- ಭಾರತದಲ್ಲಿನ ದೇವಸ್ಥಾನಗಳು
- ಡೆಲ್ಲಿ ಯಲ್ಲಿನ ಪೂಜಾ ಸ್ಥಳಗಳು
- ಪ್ರವಾಸಿ ತಾಣಗಳು