ಐಫೆಲ್ ಗೋಪುರ


ಐಫೆಲ್ ಗೋಪುರ (ಫ್ರೆಂಚ್: Tour Eiffel) ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿರುವ ಕಬ್ಬಿಣದ ಗೋಪುರ. ಇದು ಪ್ಯಾರಿಸ್ ನಗರದ ಸಂಕೇತವಾಗಿದ್ದು ಪ್ರಪಂಚದ ಅತ್ಯಂತ ಪ್ರಸಿದ್ದ ಕಟ್ಟಡಗಳಲ್ಲಿ ಒಂದಾಗಿದೆ.
ಗುಸ್ತಾವ್ ಐಫೆಲ್ ಎಂಬ ವಾಸ್ತುಶಿಲ್ಪಿ ಈ ಗೋಪುರ ನಿರ್ಮಾಣದ ನಿರ್ವಹಣೆ ಹೊತ್ತಿದ್ದರಿಂದ ಆತನ ಹೆಸರನ್ನೇ ಈ ಗೋಪುರಕ್ಕೆ ಇಡಲಾಗಿದೆ. ೧೮೮೭-೧೮೮೯ರ ಮಧ್ಯೆ ನಿರ್ಮಿಸಲಾದ ಐಫೆಲ್ ಗೋಪುರಕ್ಕೆ ಕೇವಲ ಶ್ರೇಷ್ಟಮಟ್ಟದ ಕಬ್ಬಿಣವನ್ನು ಉಪಯೋಗಿಸಲಾಗಿದೆ.
ವಿವರ
[ಬದಲಾಯಿಸಿ]ಇಂದಿಗೆ ನೂರು ವರ್ಷ ದಾಟಿದರೂ ಇನ್ನೂ ಇದರ ಆಕರ್ಷಣಿ ಕುಂದಿಲ್ಲ ! ಫ್ರಾನ್ಸ್ ರಾಜಧಾನಿಯಾದ ಪ್ಯಾರಿಸ್ ಗೆ ಹೋದೋಡನೆ ಿದು ಎಲ್ಲಿದ್ದರೂ ಕಂಡುಬಿಡುತ್ತದೆ ಅಷ್ಟು ಎತ್ತರ ಇದು ೯೮೪ ಅಡಿಗೂ ಎತ್ತರವಾಗಿ ಇದು ಎದ್ದು ನಿಂತಿದೆ ೧೮೮೯ ರ ಮಾರ್ಚಿ ತಿಂಗಳಲ್ಲಿ ಇದರ ನಿರ್ಮಾಪಕ ಅಲೆಕ್ಸಾಂಡರ್ ಗಸ್ಟಾವ್ ಐಫೆಲ್ ಇದನ್ನು ಕಟ್ಟಿ ಪೂರ್ಣಗೊಳಿಸಿದ. ಇದು ಪರಿಪೂರ್ಣ ಕಬ್ಬಿಣದಿಂದ ಕಟ್ಟಲ್ಪಟ್ಟಿದೆ ಅಂದಿನ ಕಾಲದಲ್ಲಿ ನಿಜಕ್ಕೂ ಕಬ್ಬಿಣದಿಂದ ಇಂತಹ ನಿರ್ಮಾಣವನ್ನು ರಚಿಸುವುದಿರಲಿ, ಸೇತುವೆಗಳನ್ನು ಕಟ್ಟುವುದೂ ಕಷ್ಠ ಎಂದು ಮೇಧಾವಿಗಳೇ ಅಂದು ಕೊಳ್ಳುತ್ತಿದ್ದರು. ಇಂತಹ ಪ್ರತಿರೋಧ ಮಾತುಗಳಿಗೆಲ್ಲಾ ಕಿವಿಕೊಡದೆ ಐಫೆಲ್ ಇದನ್ನು ಕಬ್ಬಿಣದಿಂದಲೇ ಕಟ್ಟಿದ. ಈತನೇ ಪ್ರಥಮವಾಗಿ ರೈಲ್ವೆ ಸೇತುವೆಗಳನ್ನು ಕಬ್ಬಿಣದಿದಂದ ಕಟ್ಟುವುದನ್ನು ತೋರಿಸಿಕೊಟ್ಟ. ಈತ ಅಂದಿನ ಕಾಲಕ್ಕೆ ಅತಿ ಮೇಧಾವಿ ಎಂಜೀನೇರ್ ಎಂದು ಅನ್ನಿಸಿಕೊಡಿದ್ದರೂ, ಪಾಲಿಟೆಕ್ನಿಕ್ ಪರೀಕ್ಷೆಯಲ್ಲಿ ಈತ ಒಮ್ಮೆ ಫೇಲೂ ಆಗಿ ಬಿಟ್ಟಿದ್ದ. ಈ ಐಫೆಲ್ಲನೇ ಪ್ರೆಂಚ್ ನವರ ಕೊಡುಗೆಯಾದ ಅಮೇರಿಕಾದ ನ್ಯೂಯಾರ್ಕ್ ನಲ್ಲಿರುವ ತಾಮ್ರದ ಸ್ವತಂತ್ರ್ಯ ದೇವತೆಯ ಆಸ್ತಿಗಳ ನಿರ್ಮಾಪಕ ೧೫೦ ಅಡಿ ಎತ್ತರದ ಈ ಲೋಹದ ಮೂರ್ತಿಗಳಿಗೆ ಬೀಳದಿರಲು ಅದರ ಮೈಯೊಳಗೆ ಕಬ್ಬಿಣದ ಚೌಕಟ್ಟುಗಳನ್ನು ಈತನೇ ರಚಿಸಿದ ಆ ಸಮಯದಲ್ಲೆ ಈತನಿಗೆ ಈ ಗೋಪುರದ ಕನಸು ಬಿದ್ದಿದ್ದು ಈ ಗೋಪುರಕ್ಕೆ ೭೦೦೦ ಟನ್ ಗಿಂತಲೂ ಹೆಚ್ಚಿನ ಕಬ್ಬಿಣ ಉಪಯೋಗಿಸಲ್ಪಟ್ಟಿದೆ. ಇಲ್ಲಿ ಉಪಯೋಗಿಸಿದ ಕಬ್ಬಿಣದ ತೊಲೆಗಳು ೧೫೦೦೦ ಇನ್ನು ಈ ತೊಲೆಗಳನ್ನು ಕೂಡಿಸಲು ೨೫ ಲಕ್ಷ ಬೋಲ್ಟ್ ಗಳನ್ನು ಜೋಡಿಸಲಾಗಿದೆ. ಈ ಇಡೀ ಭಾರವನ್ನು ನಾಲ್ಕು ೩೧ ಚದರ ಗಜದ ಕಲ್ಲು ಕಂಬಗಳ ಮೇಲೆ ನಿಲ್ಲಿಸಲಾಗಿದೆ. ಈ ಗೋಪುರದ ನಾಲ್ಕು ಪ್ರಚಂಡ ಕಾಲುಗಳ ಉದ್ದ ಒಂದೊಂದು ೩೩೬ ಅಡಿಗಳು ಈ ಕಬ್ಬಿಣದ ಕಾಲುಗಳು ಆಧಾರವಾದ ಕಲ್ಲು ಕಂಬಗಳ ತಳಕ್ಕೂ ಇಳಿದಿವೆ. ಈ ಕಾಲುಗಳು ೫೯೦ ಅಡಿ ಮೇಲ್ಭಾಗದಲ್ಲಿ ಒಂದಕ್ಕೊಂದು ಕೂಡಿಕೊಂಡಿದೆ. ಈ ಗೋಪುರದದಲ್ಲಿ ಮೂರು ಬೇರೆಬೇರೆ ಹಂತದ ವೀಕ್ಷಕ ಮಾಳಿಗೆಗಳಿವೆ. ಇದರ ತುತ್ತ ತುದಿ ತನಕ ಆರಲು ಲಿಪ್ಟ್ ಗಳಿವೆ ಇದು ೧೮೮೭ ರಲ್ಲಿ ಕಟ್ಟಲು ಪ್ರಾರಂಭವಾಗಿ ಎರಡು ವರ್ಷಗಳಲ್ಲಿ ಮುಗಿಸಲ್ಪಟ್ಟಿತ್ತು. ಇದರ ನಿರ್ಮಾಣ ್ಂದಿನ ಖರ್ಚು ೨ ಲಕ್ಷ ಪೌಂಡುಗಳು. ಈ ಬಾಬ್ತುನಲ್ಲಿ ೬೦ ಸಾವಿರ ಪೌಂಡುನ್ನು ಸರ್ಕಾರ ಕೊಟ್ಟಿತ್ತು. ಮಿಕ್ಕ ೧ ಲಕ್ಷ ೪೦ ಸಾವಿರ ಪೌಂಡು ಐಫೆಲ್ ನೇ ಸಾಲ ಮಾಡಿ ಸಂಗ್ರಹಿಸಿದ.
ನೋಡಿ
[ಬದಲಾಯಿಸಿ]ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಅಧಿಕೃತ ಅಂತರಜಾಲ ತಾಣ (ಫ್ರೆಂಚ್)
- ಅಧಿಕೃತ ತಾಣ ಆಂಗ್ಲ ಭಾಷೆಯಲ್ಲಿ
- ಐಫೆಲ್ ಗೋಪುರಕ್ಕೆ ಗುಂಡು ನಿರೋಧಕ ಗಾಜಿನ ಕವಚದ ಭದ್ರತೆ;10 Feb, 2017