ಏರ್ ಇಂಡಿಯಾ ಉಡ್ಡಯನ 182
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (June 2010) |
ಏರ್ ಇಂಡಿಯಾ ಉಡ್ಡಯನ ೧೮೨ ಮಾಂಟ್ರಿಯಾಲ್ - ಲಂಡನ್ - ದೆಹಲಿ - ಮುಂಬಯಿ ಮಾರ್ಗದಲ್ಲಿ ಓಡಾಡುತ್ತಿದ್ದ ಏರ್ ಇಂಡಿಯಾ ಹಾರಾಟವಾಗಿತ್ತು. ೨೩ ಜೂನ್ ೧೯೮೫ ರಂದು, ಕನಿಷ್ಕ ಚಕ್ರವರ್ತಿಯ —ಹೆಸರಿನ (c/n 21473/330, reg VT-EFO) ಒಂದು ಬೋಯಿಂಗ್ 747-237B ಆ ಮಾರ್ಗವಾಗಿ ಕಾರ್ಯನಿರ್ವಹಿಸುತ್ತಿದ್ದ ವಿಮಾನವು —ಅದು ಐರಿಷ್ ವಾಯು ಸ್ಥಳದಲ್ಲಿರುವಾಗಲೇ ೩೧,೦೦೦ ಅಡಿ(೯,೪೦೦ ಮೀ) ಎತ್ತರದಲ್ಲಿ ಒಂದು ಬಾಂಬಿನಿಂದ ಸಿಡಿಸಲ್ಪಟ್ಟು, ಅಟ್ಲಾಂಟಿಕ್ ಸಮುದ್ರಕ್ಕೆ ಅಪ್ಪಳಿಸಿತು. ಬಹುಮಟ್ಟಿಗೆ ಹುಟ್ಟಿನಿಂದ ಭಾರತೀಯ ಅಥವಾ ಸಂಜಾತರಾದ ೨೮೦ ಕೆನೆಡಾದ ನಾಗರೀಕರು, ಹಾಗೂ ೨೨ ಭಾರತೀಯರನ್ನು ಒಳಗೊಂಡಂತೆ, ೩೨೯ ಜನಗಳು ಸಂಪೂರ್ಣವಾಗಿ ನಾಶವಾದರು.[೧] ಈ ಘಟನೆಯು ಆಧುನಿಕ ಕೆನೆಡಾದ ಇತಿಹಾಸದಲ್ಲೇ ಅತ್ಯಂತ ಹಿರಿದಾದ ಸಾಮೂಹಿಕ ಕೊಲೆಯಾಗಿತ್ತು. ಆ ವಾಹನದ ಸ್ಫೋಟ ಹಾಗೂ ಮುಳುಗಡೆಯು ಸಂಬಂಧಿಸಿದ ನರಿತ ಏರ್ ಪೋರ್ಟ ಬಾಂಬಿಂಗ್ ನ ಒಂದು ಘಂಟೆಯೊಳಗೆ ಸಂಭವಿಸಿತು.
ಸುಮಾರು CAD $೧೩೦ ಮಿಲಿಯನ್ ಗಳಷ್ಟು ವೆಚ್ಚದ, ಕೆನೆಡಾದ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ದುಬಾರಿಯ ನ್ಯಾಯ ವಿಚಾರಣೆಯಾಗಿದ್ದು, ತನಿಖೆ ಹಾಗೂ ಕಾನೂನು ಕ್ರಮವು ಹೆಚ್ಚು ಕಡಿಮೆ ೨೦ ವರ್ಷಗಳಷ್ಟು ಕಾಲ ತೆಗೆದುಕೊಂಡಿತು. ಒಂದು ವಿಶೇಷ ಸಮಿತಿಯು ಪ್ರತಿವಾದಿಗಳು ತಪ್ಪಿತಸ್ತರಲ್ಲವೆಂದು ನಿರ್ಧರಿಸಿತು ಹಾಗೂ ಅವರನ್ನು ಬಿಡುಗಡೆಮಾಡಿತು. ಮುಗ್ಧಜನರ ಸಾಮೂಹಿಕ ಸಂಹಾರಕ್ಕಾಗಿ ೨೦೦೩ ರಲ್ಲಿ ದೋಷಿಯೆಂದು ಪ್ರತಿಪಾದಿಸಲ್ಪಟ್ಟ ನಂತರ, ಬಾಂಬ್ ಸಿಡಿತದಲ್ಲಿ ಒಳಗೊಂಡಿರುವಂತೆ ಒಬ್ಬನೇ ಒಬ್ಬ ವ್ಯಕ್ತಿಯನ್ನು ತಪ್ಪಿತಸ್ತನೆಂದು ನಿರ್ಣಯಿಸಲಾಯಿತು. ೨೦೦೬ ರಲ್ಲಿ ಗವರ್ನರ್ ಜನರಲ್-ಇನ್-ಕೌನ್ಸಿಲ್ ಹಿಂದಿನ ಸುಪ್ರೀಮ್ ಕೋರ್ಟ್ ನ ನ್ಯಾಯಾಧೀಶ ಜಾನ್ ಮೇಜರ್ ರನ್ನು ತನಿಖೆಯ ಒಂದು ಸಮಿತಿ ನಡೆಸಲು ನೇಮಿಸಿತು, ಹಾಗೂ ಅವರ ವರದಿಯು ಸಂಪೂರ್ಣವಾಗಿ ಜೂನ್ ೧೭, ೨೦೧೦ ರಂದು ಬಿಡುಗಡೆಯಾಯಿತು. ಆ ವಿಚಾರಣೆಯಲ್ಲಿ ಕೆನೆಡಾದ ಸರ್ಕಾರ, ರಾಯಲ್ ಕೆನೇಡಿಯನ್ ಮೌಂಟೆಡ್ ಪೋಲಿಸ್, ಹಾಗೂ ಕೆನೇಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವೀಸ್ ನಿಂದ "ತಪ್ಪುಗಳ ಸರಣಿಯ ಒಂದು ಸರಮಾಲೆಯೇ ನಡೆದು" ಭಯೋತ್ಪಾದಕರ ಆಕ್ರಮಣಕ್ಕೆ ಅನುವುಮಾಡಿಕೊಟ್ಟಿದೆಯೆಂದು ತಿಳಿಯಲ್ಪಟ್ಟಿತು.[೨]
ಘಟನಾಪೂರ್ವದ ಕಾಲರೇಖೆ
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(June 2010) |
೨೬ ನೇ ಜೂನ್ ೧೯೭೮ ರಂದು ಏರ್ ಇಂಡಿಯಾಕ್ಕೆ ಬೋಯಿಂಗ್ 747-237B ಎಂಪರರ್ ಕನಿಷ್ಕ ಸಮರ್ಪಿಸಲ್ಪಟ್ಟು, AI181 ಎಂದು ಟೊರಾಂಟೊ ದಿಂದ ಮಾಂಟ್ರಿಯಾಲ್ ಗೆ ಹಾಗೂ AI182 ಎಂದು ಲಂಡನ್ ಮತ್ತು ದೆಹಲಿ ಮುಖಾಂತರ, ಮಾಂಟ್ರಿಯಾಲ್ ನಿಂದ ಮುಂಬಯಿಗೆ ತನ್ನ ಹಾರಾಟದಲ್ಲಿತ್ತು.
೨೦ ನೇ ಜೂನ್ ೧೯೮೫ ರಂದು, GMT ೦೧೦೦ ಸಮಯಕ್ಕೆ, ತನ್ನನ್ನು ಮಿ. ಸಿಂಗ್ ಎಂದು ಕರೆಯಲ್ಪಡುತ್ತಿದ್ದ ಒಬ್ಬ ವ್ಯಕ್ತಿ ೨೨ ನೇ ಜೂನ್ ರಂದು, ಎರಡು ಹಾರಾಟಗಳಿಗೆ ಜಾಗ ಕಾಯ್ದಿರಿಸಿದನು: ಒಂದು "ಜಸ್ವಂದ್ ಸಿಂಗ್" ಗೆ ಕೆನೇಡಿಯನ್ ಫೆಸಿಫಿಕ್ (CP) ಏರ್ ಲೈನ್ಸ್ ಫ್ಲೈಟ್ ೦೮೬ ರಲ್ಲಿ ವ್ಯಾಂಕುವಾರ್ ನಿಂದ ಟೊರಾಂಟೊಗೆ ಹಾರಲು ಹಾಗೂ ೦೦೩ CP ಏರ್ ಲೈನ್ಸ್ ಫ್ಲೈಟ್ ನಲ್ಲಿ ವ್ಯಾಂಕುವಾರ್ ನಿಂದ ಟೋಕಿಯೊಗೆ ಹಾರಲು "ಮೋಹಿಂದರ್ ಬೆಲ್ ಸಿಂಗ್" ಗೆ ಮತ್ತೊಂದು ಹಾಗೂ ಮುಂದುವರಿದು ಏರ್ ಇಂಡಿಯಾ (AI) ಫ್ಲೈಟ್ ೩೦೧ ನಲ್ಲಿ ಬ್ಯಾಂಕಾಕ್ ಗೆ ಜೋಡಿಸುವಂತೆ ಮೀಸಲಾತಿ ಮಾಡಿದನು. ಅದೇ ದಿನ GMT ೦೨೨೦ ಗೆ, CP ೦೮೬ ರಿಂದ CP ೦೬೦ ಗೆ ವ್ಯಾಂಕುವಾರ್ ನಿಂದ ಟೊರಾಂಟೊಗೇ ಪ್ರಯಾಣಿಸುತ್ತಿರುವ "ಜಸ್ವಂದ್ ಸಿಂಗ್" ಎಂಬ ವ್ಯಕ್ತಿಯ ಹೆಸರಿನಲ್ಲಿದ್ದ ಮೀಸಲಾತಿಯನ್ನು ಬದಲಾಯಿಸುವಂತೆ ಮತ್ತೊಂದು ಕರೆಯು ಮಾಡಲ್ಪಟ್ಟಿತು. AI ೧೮೧ ರಲ್ಲಿ ಟೊರಾಂಟೊದಿಂದ ಮಾಂಟ್ರಿಯಾಲ್ ಗೆ ಹಾಗೂ AI ೧೮೨ ರಲ್ಲಿ ಮಾಂಟ್ರಿಯಾಲ್ ನಿಂದ ಮುಂಬಯಿಗೆ ಕಾಯ್ದಿರುಸುವಿಕೆಯ ಪಟ್ಟಿಗೆ ಸೇರಿಸಬೇಕೆಂದು ಕರೆ ಮಾಡಿದ ವ್ಯಕ್ತಿಯು ಮುಂದುವರಿದು ಪ್ರಾರ್ಥಿಸಿದನು. GMT ೧೯೧೦ ರಲ್ಲಿ, ವ್ಯಾಂಕುವಾರ್ ನಲ್ಲಿನ CP ಟಿಕೆಟ್ ಕಚೇರಿಯಲ್ಲಿ ೩,೦೦೫ ಡಾಲರುಗಳ ನಗದು ಹಣವನ್ನು ಎರೆಡು ಟಿಕೆಟ್ ಗಳಿಗಾಗಿ ಒಬ್ಬ ವ್ಯಕ್ತಿಯು ಪಾವತಿಸಿದನು. ಕಾಯ್ದಿರಿಸುವಿಕೆಯ ಹೆಸರುಗಳು ಬದಲಾಯಿಸಲ್ಪಟ್ಟವು: "ಜಸ್ವಂದ್ ಸಿಂಗ್" ಹೋಗಿ "ಎಮ್. ಸಿಂಗ್" ಆದನು ಹಾಗೂ "ಮೋಹಿಂದರ್ ಬೆಲ್ ಸಿಂಗ್" ಹೋಗಿ "ಎಲ್. ಸಿಂಗ್" ಆದನು.
೨೨ ನೇ ಜೂನ್ ೧೯೮೫ ರಂದು, GMT ೧೩೩೦ ಕ್ಕೆ, AI ಫ್ಲೈಟ್ ೧೮೧/೧೮೨ ರಲ್ಲಿ ತನ್ನ ಮೀಸಲಾತಿಗಳನ್ನು ದೃಢಪಡಿಸಿಕೊಳ್ಳಲು "ಮಂಜಿತ್ ಸಿಂಗ್" ಎಂದು ತನ್ನನ್ನು ಕರೆದುಕೊಳ್ಳುತ್ತಿರುವ ಒಬ್ಬ ವ್ಯಕ್ತಿಯು ಕರೆಮಾಡಿದನು. ಅವನು ಇನ್ನೂ ಕಾಯ್ದಿರಿಸುವ ಪಟ್ಟಿಯಲ್ಲಿಯೇ ಇರುವುದಾಗಿಯೂ, ಹಾಗೂ ಪರ್ಯಾಯ ವ್ಯವಸ್ಥೆಗಳನ್ನು ಒದಗಿಸುವುದಾಗಿ ತಿಳಿಸಿದಾಗ, ಅವನು ಅದನ್ನು ತಿಸ್ಕರಿಸಿದನು.
ಬಾಂಬಿನಿಂದ ಸ್ಫೋಟ
[ಬದಲಾಯಿಸಿ]೨೨ ನೇ ಜೂನ್ ರಂದು ೧೫:೫೦ GMT ಗೆ, ಟೊರಾಂಟೊಗೆ ಹೋಗುವ ಕೆನೇಡಿಯನ್ ಫೆಸಿಫಿಕ್ ಏರ್ ಲೈನ್ಸ್ ಫ್ಲೈಟ್ ೬೦ ಕ್ಕೆ ವ್ಯಾಂಕುವಾರ್ ಇಂಟರ್ನಾಷನಲ್ ಏರ್ ಪೋರ್ಟ್ ನಲ್ಲಿ ಸಿಂಗ್ ನನ್ನು ಪರಿಶೀಲಿಸಿ, ೧೦B ಆಸನವು ಕೊಡಲ್ಪಟ್ಟಿತು. ಅವನು ತನ್ನ ಪೆಟ್ಟಿಗೆ, ಒಂದು ಕಪ್ಪು ಕಂದು ಬಣ್ಣದ್ದು, ಗಟ್ಟಿ ಪಕ್ಕಗಳಿರುವ ಸ್ಯಾಂಸೊನೈಟ್ ಪೆಟ್ಟಿಗೆ, ಏರ್ ಇಂಡಿಯಾ ಫ್ಲೈಟ್ ೧೮೧ ಕ್ಕೆ ಹಾಗೂ ನಂತರ ಫ್ಲೈಟ್ ೧೮೨ ಕ್ಕೆ ವರ್ಗಾಯಿಸಬೇಕೆಂದು ಕೇಳಿಕೊಂಡನು. ಒಬ್ಬ ಕೆನೇಡಿಯನ್ ಫೆಸಿಫಿಕ್ ಏರ್ ಲೈನ್ಸ್ ಪ್ರತಿನಿಧಿಯು ಮೊದಲು ಅವನ ಸಾಮಾನುಗಳನ್ನು ಪರಸ್ಪರ ವಿಮಾನಗಳಿಗೆ ಬದಲಾಯಿಸುವ ವಿನಂತಿಯನ್ನು ನಿರಾಕರಿಸಿದನು, ಏಕೆಂದರೆ ಟೊರಾಂಟೊದಿಂದ ಮಾಂಟ್ರಿಯಾಲ್ ಗೆ ಹಾಗೂ ಮಾಂಟ್ರಿಯಾಲ್ ನಿಂದ ಮುಂಬಯಿ ಗೆ ಅವನ ಆಸನವು ದೃಢೀಕರಿಸಲ್ಪಟ್ಟಿಲ್ಲವಾದ ಕಾರಣ ತಿರಸ್ಕರಿಸಿದನು, ಆದರೆ ನಂತರ ಒಪ್ಪಿಕೊಂಡನು.[೩]
೧೬:೧೮ GMT ಗೆ, ಕೆನೇಡಿಯನ್ ಫೆಸಿಫಿಕ್ ಏರ್ ಲೈನ್ಸ್ ಫ್ಲೈಟ್ ೬೯ ಯು ಟೊರಾಂಟೊ ಪಿಯರ್ಸನ್ ಇಂಟರ್ನಾಷನಲ್ ಏರ್ ಪೋರ್ಟ್ ಗೆ ಮಿ. ಸಿಂಗ್ ಇಲ್ಲದೆ ಪ್ರಯಾಣ ಬೆಳೆಸಿತು.
೨೦:೨೨ GMT ಗೆ, ಕೆನೇಡಿಯನ್ ಫೆಸಿಫಿಕ್ ಏರ್ ಲೈನ್ಸ್ ಫ್ಲೈಟ್ ೬೦ ಟೊರಾಂಟೊ ದಲ್ಲಿ ಹನ್ನೆರಡು ನಿಮಿಷ ತಡವಾಗಿ ಬಂದಿಳಿಯಿತು. ಮಿ. ಸಿಂಗ್ ನ ಪರಿಶೀಲನೆ ಮಾಡಿದ್ದ ಚೀಲವನ್ನೂ ಸೇರಿದಂತೆ, ಕೆಲವು ಪ್ರಯಾಣಿಕರು ಹಾಗೂ ಸಾಮಾನುಗಳು, ಏರ್ ಇಂಡಿಯಾ ಫ್ಲೈಟ್ ೧೮೧ ಕ್ಕೆ ವರ್ಗಾಯಿಸಲ್ಪಟ್ಟವು.
೦೦:೧೫ GMT ಗೆ, (ಈಗ ೨೩ ಜೂನ್), ಏರ್ ಇಂಡಿಯಾ ಫ್ಲೈಟ್ ೧೮೧ ಟೊರಾಂಟೊ ಪಿಯರ್ಸನ್ ಇಂಟರ್ನಾಷನಲ್ ಏರ್ ಪೋರ್ಟ ನಿಂದ ಮಾಂಟ್ರಿಯಾಲ್ ನ - ಮಿರಾಬೆಲ್ ಇಂಟರ್ನಾಷನಲ್ ಏರ್ ಪೋರ್ಟ್ ಕಡೆಗೆ ಒಂದು ಗಂಟೆ ೪೦ ನಿಮಿಷಗಳಷ್ಟು ತಡವಾಗಿ ಹೊರಟಿತು. ರಿಪೇರಿಗಾಗಿ ಭಾರತಕ್ಕೆ ಕಳುಹಿಸಬೇಕಾದ್ದರಿಂದ ಎಡಗಡೆ ರೆಕ್ಕೆಯ ಕೆಳಗಡೆ, ಒಂದು ಹೆಚ್ಚಿನ ಯಂತ್ರ, "ಫಿಫ್ತ್ ಪಾಡ್" ಜೋಡಿಸಲ್ಪಟ್ಟ ಕಾರಣ ವಿಮಾನವು ತಡವಾಯಿತು. ವಿಮಾನವು GMT ೦೧:೦೦ ಗೆ ಮಾಂಟ್ರಿಯಾಲ್ - ಮಿರಾಬೆಲ್ ಇಂಟರ್ನಾಷನಲ್ ಏರ್ ಪೋರ್ಟ್ ಗೆ ತಲುಪಿತು. ಮಾಂಟ್ರಿಯಾಲ್ ನಲ್ಲಿ, ಏರ್ ಇಂಡಿಯಾ ಫ್ಲೈಟ್ , ಫ್ಲೈಟ್ ೧೮೨ ಎಂದಾಯಿತು.
ಏರ್ ಇಂಡಿಯಾ ಫ್ಲೈಟ್ ೧೮೨ ದೆಹಲಿ ಹಾಗೂ ಮುಂಬಯಿ ಮಾರ್ಗವಾಗಿ ಹೋಗಲು, ಲಂಡನ್ ಗೆ ಮಾಂಟ್ರಿಯಾಲ್ ನಿಂದ ಹೊರಟಿತು. ವಿಮಾನದಲ್ಲಿದ್ದವರ ಸಂಖ್ಯೆ ೩೨೯ ಮಂದಿ; ೩೦೭ ಜನ ಪ್ರಯಾಣಿಕರು ಹಾಗೂ ೨೨ ವಿಮಾನದ ಸಿಬ್ಬಂದಿ. ಕ್ಯಾ. ಹಂಸೆ ಸಿಂಗ್ ನರೇಂದ್ರ ಕಮ್ಯಾಂಡರ್ ಆಗಿ,[೪] ಮತ್ತು ಕ್ಯಾ. ಸತೀಂದರ್ ಸಿಂಗ್ ಭಿಂದರ್ ಫಸ್ಟ್-ಆಫೀಸರ್ ಆಗಿ ಸೇವೆಸಲ್ಲಿಸುತ್ತಿದ್ದರು;[೫] ದಾರಾ ದುಮಾಷಿಯ ಫ್ಲೈಟ್ ಇಂಜಿನೀರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.[೬] ಪ್ರಯಾಣಿಕರಲ್ಲಿ ಅನೇಕರು ತಮ್ಮ ಕುಟುಂಬ ವರ್ಗ ಮತ್ತು ಸ್ನೇಹಿತರನ್ನು ಭೇಟಿಯಾಗಲು ಪ್ರಯಾಣಿಸುತ್ತಿದ್ದರು.[೭]
೦೭:೧೪:೦೧ GMT ಗೆ, ಬೋಯಿಂಗ್ ೭೪೭, "೨೦೦೫ ಭಯದ ಚೀತ್ಕಾರ ಮಾಡಿತು"[೮] (ಒಂದು ನಿರ್ಧಾರಿತ ಏವಿಯೇಷನ್ ಟ್ರಾಸ್ಪಾಂಡರ್ ನ ಚುರುಕುಗೊಳಿಸುವಿಕೆ), ದೃಶ್ಯದಿಂದ ಮರೆಯಾಯಿತು ಹಾಗೂ ವಿಮಾನವು ಮಧ್ಯ-ವಾಯುಮಾರ್ಗದಲ್ಲಿ ಚೂರುಚೂರಾಗಲು ಪ್ರಾರಂಭಿಸಿತು. ಯಾವುದೇ 'ಮೇ ಡೇ' ಕರೆಯೂ ಸಹ ಶನ್ನಾನ್ ಇಂಟರ್ನಾಷನಲ್ ಏರ್ ಪೋರ್ಟ್ ನ ಏರ್ ಟ್ರಾಫಿಕ್ ಕಂಟ್ರೋಲರ್ (ATC) ಗಳು ಪಡೆದಿರಲಿಲ್ಲ. ATC ಯು ಆ ಪ್ರದೇಶದಲ್ಲಿರುವ ವಿಮಾನಕ್ಕೆ ಏರ್ ಇಂಡಿಯಾವನ್ನು ಸಂಪರ್ಕಿಸಲು ಪ್ರಯತ್ನಿಸುವಂತೆ ಕೇಳಿಕೊಂಡಿತು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ೦೭:೩೦:೦೦ GMT ಯ ಗಂಟೆಯ ಹೊತ್ತಿಗೆ ATC ಯು ತುರ್ತುಪರಿಸ್ಥಿತಿಯನ್ನು ಘೋಷಿಸಿತು ಹಾಗೂ ಹತ್ತಿರದಲ್ಲಿರುವ ಸಾಮಾನು ಸಾಗಿಸುವ ಹಡಗುಗಳನ್ನು ಮತ್ತು ಐರಿಷ್ ನ್ಯಾವಲ್ ಸರ್ವೀಸ್ ನ ಹಡಗಾದ LE ಐಸ್ಲಿಂಗ್ ಅನ್ನು ವಿಮಾನವನ್ನು ಹುಡುಕಲು ವಿನಂತಿಸಿತು.
ಮುಂದಿದ್ದ ಕಾರ್ಗೋ ಹೋಲ್ಡ್ ನಲ್ಲಿದ್ದ ಒಂದು ಪೆಟ್ಟಿಗೆಯಲ್ಲಿಟ್ಟಿದ್ದ ಒಂದು ಸಾನ್ಯೋ ಟ್ಯೂನರ್ [೯] ನ ಒಳಗೆ ಸೇರಿಸಿದ್ದ ಬಾಂಬ್ ೩೧,೦೦೦ ಅಡಿಗಳಷ್ಟು ಮೇಲೆ ವಿಮಾನವು ಮಧ್ಯ-ಹಾರಾಟದಲ್ಲಿದ್ದಾಗ ಸಿಡಿಸಲ್ಪಟ್ಟಿತು51°3.6′N 12°49′W / 51.0600°N 12.817°W[೧೦]. ಬಾಂಬ್ ನ ಸಿಡಿತದಿಂದಾಗಿ ವಿಮಾನವು ಚೂರುಚೂರಾಯಿತು ಹಾಗೂ ಅದರಿಂದ ಎಲ್ಲರೂ ವೇಗವಾಗಿ ಹೊರಹಾಕಲ್ಪಟ್ಟರು. ಭಗ್ನಾವಶೇಷವು ೬,೭೦೦೦ ಅಡಿಗಳಷ್ಟು (೨,೦೦೦ ಮೀ) ಆಳದ ನೀರಿನಲ್ಲಿ ನೈಋತ್ಯ ಐರಿಷ್ ದಡದಿಂದ ೧೨೦ ಮೈಲಿಗಳ ದೂರದಲ್ಲಿ (೧೯೦ ಕಿ.ಮೀ) ಕೌಂಟಿ ಕಾರ್ಕ್ ನ ದಡದಾಚೆ ಮುಳುಗಿತು.
ಈ ವಿಮಾನವು ನಷ್ಟವಾದ ಐವತ್ತೈದು ನಿಮಿಷಗಳ ನಂತರ, ಇಬ್ಬರು ಬ್ಯಾಗೇಜ್ ಕಾರ್ಮಿಕರನ್ನು ಕೊಂದು ಹಾಗೂ ಹತ್ತಿರದಲ್ಲಿದ್ದ ನಾಲ್ಕು ಇತರೆ ವ್ಯಕ್ತಿಗಳನ್ನು ಗಾಯಗೊಳಿಸಿ, ಜಪಾನಿನ ನರಿತ ಏರ್ ಪೋರ್ಟ್ ನಲ್ಲಿ ಆರೋಪಿಸಲ್ಪಟ್ಟ ಅಪರಾಧಿಗಳಲೊಬ್ಬರ ಪರಿಶೀಲಿಸಿದ ಒಂದು ಪೆಟ್ಟಿಗೆಯು ಸಿಡಿಯಿತು. ಆ ಪೆಟ್ಟಿಗೆಯು ನರಿತದಲ್ಲಿ ಇನ್ನೊಂದು ವಿಮಾನಕ್ಕೆ ಹೋಗುವ ದಾರಿಯಲ್ಲಿತ್ತು.
ಪಡೆದುಕೊಳ್ಳುವಿಕೆ
[ಬದಲಾಯಿಸಿ]೦೯:೧೩:೦೦ GMT ನ ಗಂಟೆಗಳ ಹೊತ್ತಿಗೆ, ಕಾರ್ಗೋ ಹಡಗು ಲೌರೇನ್ಷಿಯನ್ ಫಾರೆಸ್ಟ್ ವಿಮಾನದ ಭಗ್ನಾವಶೇಷಗಳು ಹಾಗೂ ನೀರಿನಲ್ಲಿ ತೇಲುತ್ತಿರುವ ಅನೇಕ ದೇಹಗಳನ್ನು ಪತ್ತೆಹಚ್ಚಿತು.
ಆ ಬಾಂಬ್ ಎಲ್ಲಾ ೨೨ ಮಂದಿ ವಿಮಾದ ಸಿಬ್ಬಂದಿ ಮತ್ತು ೩೦೭ ಜನ ಪ್ರಯಾಣಿಕರನ್ನು ಕೊಂದುಬಿಟ್ಟಿತ್ತು. ಅಪಘಾತದ-ನಂತರದ ವೈದ್ಯಕೀಯ ವರದಿಗಳು ಪ್ರಯಾಣಿಕರ ಹಾಗೂ ಸಿಬ್ಬಂದಿಯ ಮರಣದ ಫಲಿತಾಂಶಗಳ ಸ್ಪಷ್ಟ ಚಿತ್ರಣವನ್ನು ನಿರೂಪಿಸಿತು. ವಿಮಾನದಲ್ಲಿದ್ದ ೩೨೯ ವ್ಯಕ್ತಿಗಳಲ್ಲಿ, ೧೩೨ ದೇಹಗಳು ಮರಳಿ ಪಡೆಯಲ್ಪಟ್ಟವು; ೧೯೮ ದೇಹಗಳು ಸಮುದ್ರದಲ್ಲಿಯೇ ಕಳೆದುಹೋದವು. ಎಂಟು ದೇಹಗಳು ಆ ವಿಮಾನವು ನೀರಿಗೆ ಬೀಳುವುದಕ್ಕೂ ಮುಂಚೆಯೇ ಅದರಿಂದ ಹೊರಗೆ ಎಸೆಯಲ್ಪಟ್ಟರೆಂದು ತೋರಿಸುತ್ತಾ, "ಕೋಲಿನಿಂದ ಹೊಡೆದ ರೀತಿಯ" ಗಾಯಗಳನ್ನು ಹೊಂದಿದ್ದರು. ಇದು ಸಹ, ವಿಮಾನವು ಮಧ್ಯ ಮಾರ್ಗದಲ್ಲಿಯೇ ಚೂರುಚೂರಾಗಿತ್ತು ಎಂದು ತೋರಿಸುವ ಒಂದು ಗುರುತು. ಇಪ್ಪತ್ತಾರು ದೇಹಗಳು ಉಸಿರುಗಟ್ಟಿದ (ಆಮ್ಲಜನಕದ ಕೊರತೆ)ಲಕ್ಷಣಗಳನ್ನು ತೋರಿಸಿದವು. ಇಪ್ಪತ್ತೈದು ದೇಹಗಳು, ಅತ್ಯಧಿಕವಾಗಿ ಎಲ್ಲರೂ ಕಿಟಕಿಯ ಬಳಿ ಕುಳಿತ ಬಲಿಪಶುಗಳು, ಸ್ಫೋಟಕದಿಂದಾದ ಛಿದ್ರತೆಗಳ ಸಂಕೇತಗಳನ್ನು ತೋರಿಸಿದವು. ಇಪ್ಪತ್ಮೂರು ಶವಗಳು "ಒಂದು ಲಂಬಶಕ್ತಿಯಿಂದಾದ ಗಾಯಗಳ" ಗುರುತುಗಳನ್ನು ಹೊಂದಿದ್ದವು. ಇಪ್ಪತ್ತೊಂದು ಪ್ರಯಾಣಿಕರ ದೇಹದ ಮೇಲೆ ಸ್ವಲ್ಪ ಇಲ್ಲವೇ ಉಡುಪೇ ಇಲ್ಲದಂತೆ ಕಂಡುಬಂದವು. [ಸೂಕ್ತ ಉಲ್ಲೇಖನ ಬೇಕು]
ಆ ವರದಿಯಲ್ಲಿ ಉಲ್ಲೇಖಿಸಲ್ಪಟ್ಟ ಒಬ್ಬ ಅಧಿಕಾರಿಯು ತಿಳಿಸಿದರು, "ಎಲ್ಲಾ ಬಲಿಪಶುಗಳು ಮರಣೋತ್ತರ ಪರಿಶೀಲನೆಯ ವರದಿಗಳಲ್ಲಿ ತಿಳಿಸಿದಂತೆ ವಿವಿಧ ರೀತಿಯ ಗಾಯಗಳಿಂದ ಮರಣಿಸಿದ್ದಾರೆ. ಸಾವನ್ನಪ್ಪಿದ ಇಬ್ಬರಲ್ಲಿ, ಒಂದು ಶಿಶು ಹಾಗೂ ಒಂದು ಮಗು, ಉಸಿರುಗಟ್ಟಿದ ಕಾರಣದಿಂದ ಮರಣಹೊಂದಿದ್ದಾರೆ ಎಂದು ವರದಿಮಾಡಲಾಯಿತು. ಶಿಶುವಿನ ಉಸಿರುಗಟ್ಟಿದ ಸಾವಿನ ಬಗ್ಗೆ ಯಾವ ಅನುಮಾನವೂ ಇಲ್ಲ. ಆದರೆ ಮತ್ತೊಂದು ಮಗುವಿನ ಸಂಗತಿಯಲ್ಲಿ (ದೇಹದ ಸಂಖ್ಯೆ ೯೩) ಪಾದಗಳ ಕೀಲಿನ ಲಂಗರು ಬಿಂದುವಿನ ಜೊತೆ ಮಗುವು ಎಡವಿ ಬಿದ್ದ ಇಲ್ಲವೇ ತಿರುಗಿಸಲ್ಪಟ್ಟ ಕಾರಣ ಮರಣ ಸಂಭವಿಸಿರಬಹುದಾದ ವಿಚಾರಣೆಗಳಲ್ಲಿ ಸ್ವಲ್ಪ ಅನುಮಾನವಿದೆ. ಇತರೆ ಮೂರು ಬಲಿಪಶುಗಳು ನಿಸ್ಸಂಶಯವಾಗಿ ಮುಳುಗಿದ ಕಾರಣ ಸಾವನ್ನಪ್ಪಿದ್ದಾರೆ."[೧೧]
ಫ್ಲೈಟ್-ಡಾಟಾ ರೆಕಾರ್ಡರ್ (FDR) ಹಾಗೂ ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ (CVR) ಪೆಟ್ಟಿಗೆಗಳನ್ನು ಕಂಡುಹಿಡಿಯಲು, ಫ್ರೆಂಚ್ ಕೇಬಲ್ ಹೊಂದಿಸುವ ಹಡಗು ಲಿಯಾನ್ ಥೆವೆನಿನ್ ಜೊತೆ ಅದರ ರೊಬೊಟ್ ಜಲಾಂತರ್ಗಾಮಿ ಹಡಗು ಸ್ಕಾರಬ್ ಹಾಗೂ ಯು.ಕೆ ಯಿಂದ ಗಾರ್ಡಲೈನ್ ಲೊಕೇಟರ್ ಹಡಗು ತನ್ನ ಅತ್ಯಾಧುನಿಕ ಸಲಕರಣೆಯುಳ್ಳ ಸೋನಾರ್ ಉಪಕರಣದ ಸಹಿತ ಹುಡುಕಾಟಕ್ಕೆ ಕಳುಹಿಸಲ್ಪಟ್ಟವು. ಪೆಟ್ಟಿಗೆಗಳನ್ನು ಹುಡುಕುವುದು ಬಹಳಷ್ಟು ಕಷ್ಟಕರವಾಗಿತ್ತು ಮತ್ತು ಆದಷ್ಟು ಜಾಗ್ರತೆ ಶೋಧನ ಕಾರ್ಯ ಪ್ರಾರಂಭಿಸುವುದು ಅತ್ಯಗತ್ಯವಾಗಿತ್ತು. ಜುಲೈ ೪ ರ ವೇಳೆಗೆ, ಗಾರ್ಡಲೈನ್ ಲೊಕೇಟರ್ ಉಪಕರಣವು ಸಮುದ್ರದ ತಳದಲ್ಲಿನ ಸಂಕೇತಗಳನ್ನು ಪತ್ತೆ ಹಚ್ಚಿತು ಹಾಗೂ ಜುಲೈ ೯ ರಂದು CVR ನಿಖರವಾಗಿ ಕಂಡುಹಿಡಿಯಲ್ಪಟ್ಟಿತು ಮತ್ತು ಸ್ಕಾರಬ್ ನಿಂದ ಮೇಲ್ಮೈಗೆ ಎತ್ತಲ್ಪಟ್ಟಿತು. ಮಾರನೆಯ ದಿನ FDR ಗುರುತಿಸಲ್ಪಟ್ಟಿತು ಮತ್ತು ಮರಳಿಪಡೆಯಲಾಯಿತು.
ಮರಣಹೊಂದಿದವರು
[ಬದಲಾಯಿಸಿ]ರಾಷ್ಟ್ರೀಯತೆ | ಪ್ರಯಾಣಿಕರು | ಸಿಬ್ಬಂದಿ | ಒಟ್ಟು | |||
ಕೆನಡಾ | ೨೭೦ | ೦ | ೨೭೦ | |||
ಯುನೈಟೆಡ್ ಕಿಂಗ್ಡಂ | ೨೭ | ೦ | ೨೭ | |||
ಭಾರತ | ೧ | ೨೧ | ೨೨ | |||
ಸೋವಿಯತ್ ಒಕ್ಕೂಟ | ೩ | ೦ | ೩ | |||
Brazil | ೨ | ೦ | ೨ | |||
ಅಮೇರಿಕ ಸಂಯುಕ್ತ ಸಂಸ್ಥಾನ | ೨ | ೦ | ೨ | |||
Spain | ೨ | ೦ | ೨ | |||
Finland | ೧ | ೦ | ೧ | |||
ಅರ್ಜೆಂಟೀನ | ೦ | ೧ | ೧ | |||
ಒಟ್ಟು | ೩೦೭ | ೨೨ | ೩೨೯ |
ಕೆನೇಡಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಶನ್ ನಿಂದ ಒದಗಿಸಲ್ಪಟ್ಟ ದುರ್ಘಟನೆಯ ಸಾವುನೋವುಗಳ ಪಟ್ಟಿ.[೧೨]
ಸಂದೇಹಾಸ್ಪದ ವ್ಯಕ್ತಿಗಳು
[ಬದಲಾಯಿಸಿ]ಬಾಬ್ಬರ್ ಖಲ್ಸಾ ಎಂದು ಕರೆಯಲ್ಪಡುವ (ಯುರೋಪಿನಲ್ಲಿ ಹಾಗೂ ಸಂಯುಕ್ತ ಸಂಸ್ಥಾನದಲ್ಲಿ ಬಹಿಷ್ಕರಿಸಲ್ಪಟ್ಟು ಗಡೀಪಾರು ಮಾಡಲ್ಪಟ್ಟ ಭಯೋತ್ಪಾದಕರ ತಂಡ) ಒಂದು ಸಿಖ್ ಪ್ರತ್ಯೇಕತಾ ತಂಡ ಮತ್ತು ಭಾರತದ ಪಂಜಾಬ್ ನಲ್ಲಿ, ಖಲಿಸ್ತಾನ್ ಎಂಬ ಹೆಸರಿನ ಒಂದು ಪ್ರತ್ಯೇಕ ಸಿಖ್ ರಾಜ್ಯಕ್ಕಾಗಿ ಚಳುವಳಿ ಹೂಡುತ್ತಿದ್ದ ಸಮಯದಲ್ಲಿ ಇದ್ದಂತಹ ಇತರೆ ಸಂಬಂಧಿಸಿದ ಗುಂಪುಗಳ ಸದಸ್ಯರು ಬಾಂಬ್ ಸ್ಫೋಟದಲ್ಲಿನ ಮುಖ್ಯ ಶಂಕಿತರಾಗಿದ್ದರು.[೧೩]
- ಬಾಬ್ಬರ್ ಖಲ್ಸಾದಲ್ಲಿ ಒಬ್ಬ ಉನ್ನತ ಶ್ರೇಣಿಯ ಅಧಿಕಾರಿಯಾಗಿದ್ದು ಬ್ರಿಟಿಷ್ ಕೊಲಂಬಿಯಾದಲ್ಲಿ ವಾಸಿಸುತ್ತಿದ್ದ, ಪಂಜಾಬ್ ನಲ್ಲಿ ಹುಟ್ಟಿ ಕೆನಾಡಾದ ನಾಗರಿಕನಾಗಿದ್ದ ತಲ್ವಿಂದರ್ ಸಿಂಗ್ ಪರ್ಮಾರ್ ಹಾಗೂ ಬಾಂಬ್ ಸಿಡಿತದ ಮುಂಚೆ ಮೂರು ತಿಂಗಳವರೆಗೆ ಕೆನೇಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವೀಸ್ (CSIS) ನಿಂದ ಆತನ ದೂರವಾಣಿಯು ಕದ್ದಾಲಿಸಲ್ಪಟ್ಟಿತು.[೧೪] ಅವನು ಬಂಧನದಲ್ಲಿರುವಾಗಲೆ ೧೯೯೨ ರಲ್ಲಿ ಪಂಜಾಬ್ ಪೋಲಿಸರಿಂದ ಕೊಲ್ಲಲ್ಪಟ್ಟನು.
- ಇಂದ್ರೆಜಿತ್ ಸಿಂಗ್ ರೆಯಾತ್ ವ್ಯಾಂಕುವಾರ್ ದ್ವೀಪದ ಡಂಕನ್ ನಲ್ಲಿ ವಾಸಿಸುತ್ತಿದ್ದನು ಹಾಗೂ ಆಟೋ ಯಂತ್ರಶಿಲ್ಪಿ ಮತ್ತು ವಿದ್ಯುತ್ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದನು.[೧೫]
- ರಿಪುದಮನ್ ಸಿಂಗ್ ಮಲಿಕ್ ವ್ಯಾಂಕುವಾರ್ ನ ಒಬ್ಬ ವ್ಯಾಪಾರಿ, ಇವನು ಒಂದು ಕ್ರೆಡಿಟ್ ಯೂನಿಯನ್ ಗೆ ಬಂಡವಾಳ ಒದಗಿಸಲು ಮತ್ತು ಅನೇಕ ಖಲ್ಸಾ ಶಾಲೆಗಳಿಗೆ ಸಹಾಯ ಮಾಡಿದನು. ಇತ್ತೀಚೆಗೆ ಬಾಂಬ್ ಸ್ಫೋಟದಲ್ಲಿ ಯಾವುದೇ ಪಾತ್ರವಿರಲಿಲ್ಲವೆಂದು ತಿಳಿದು, ಅವನು ತಪ್ಪಿತಸ್ಥನಲ್ಲವೆಂದು ತೀರ್ಮಾನಿಸಲಾಯಿತು.[೧೬]
- ಅಜಯಾಬ್ ಸಿಂಗ್ ಬಾಗ್ರಿ ಕಾಂಲೂಪ್ಸ್ ನಲ್ಲಿ ವಾಸಿಸುತ್ತಿದ್ದ ಒಬ್ಬ ಮಿಲ್ ಕಾರ್ಮಿಕ. ಇವನು, ರಿಪುದಮನ್ ಸಿಂಗ್ ಮಲಿಕ್ ಜೊತೆ ೨೦೦೭ ರಲ್ಲಿ ತಪ್ಪಿತಸ್ಥರಲ್ಲವೆಂದು ತೀರ್ಮಾನಿಸಲಾಯಿತು.[೧೭]
- ಸುರ್ಜನ್ ಸಿಂಗ್ ಗಿಲ್ ಖಲಿಸ್ತಾನದ ಕೌನ್ಸಲ್-ಜನರಲ್ ಎಂದು ಸ್ವತಃ ಘೋಷಿಸಿಕೊಂಡು ವ್ಯಾಂಕುವಾರ್ ನಲ್ಲಿ ವಾಸಿಸುತ್ತಿದ್ದನು. ಅವನು ನಂತರ ಕೆನೆಡ ಬಿಟ್ಟು ಓಡಿಹೋದನು ಮತ್ತು ಇಂಗ್ಲೆಂಡಿನ ಲಂಡನ್, ನಲ್ಲಿ ಅಡಗಿರಬಹುದೆಂದು ನಂಬಲಾಗಿದೆ.[೧೮]
- ಹರ್ದಯಾಲ್ ಸಿಂಗ್ ಜೊಹಲ್ ಹಾಗೂ ಮನಮೋಹನ್ ಸಿಂಗ್ ಇಬ್ಬರೂ ಪರ್ಮಾರ್ ನ ಹಿಂಬಾಲಕರು ಮತ್ತು ತಾನು ಬೋಧಿಸುತ್ತಿದ್ದ ಗುರುದ್ವಾರದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ೨೦೦೨ ನೇ ನವೆಂಬರ್ ೧೫ ರಂದು, ಜೊಹಲ್ ತನ್ನ ೫೫ ನೇ ವಯಸ್ಸಿನಲ್ಲಿ ಪ್ರಾಕೃತಿಕ ಕಾರಣಗಳಿಂದ ಮರಣಹೊಂದಿದನು. ವ್ಯಾಂಕುವಾರ್ ನ ಒಂದು ಶಾಲೆಯ ನೆಲಮಾಳಿಗೆಯಲ್ಲಿ ಬಾಂಬ್ ಗಳು ತುಂಬಿದ ಪೆಟ್ಟಿಗೆಗಳನ್ನು ಪುರಾವೆಯಿಲ್ಲದೆ ಅಡಗಿಸಿಟ್ಟಿದ್ದನೆಂದು ಆಪಾದಿಸಲ್ಪಟ್ಟನು, ಆದರೆ ಈ ವ್ಯಾಜ್ಯದಲ್ಲಿ ಎಂದಿಗೂ ವಿಚಾರಣೆಗೆ ಒಳಪಡಲಿಲ್ಲ.[೧೯]
- ದಲ್ಜಿತ್ ಸಂಧು ಬಾಂಬ್ ಸ್ಫೋಟಿಸಲು ಟಿಕೆಟ್ ಗಳನ್ನು ತೆಗೆದುಕೊಂಡ ವ್ಯಕ್ತಿಯೆಂದು ಕ್ರೌನ್ ಸಾಕ್ಷಿಯಿಂದ ನಂತರ ಹೆಸರಿಸಲ್ಪಟ್ಟನು. ನ್ಯಾಯವಿಚಾರಣೆಯ ವೇಳೆಯಲ್ಲಿ, ಕ್ರೌನ್ ಸಾಕ್ಷಿಯು ೧೯೮೯ ರ ಜನವರಿಯಿಂದ ಒಂದು ವಿಡಿಯೊವನ್ನು ತೋರಿಸಿದನು, ಅದರಲ್ಲಿ ಸಂಧು ಇಂದಿರಾ ಗಾಂಧಿ ಕೊಲೆಪಾತಕರ ಕುಟುಂಬಗಳನ್ನು ಅಭಿನಂದಿಸಿದ ಹಾಗೂ "ಅದು ಆಕೆಗೆ ಯೋಗ್ಯವಾಗಿತ್ತು ಮತ್ತು ಅದನ್ನು ಆಕೆಯೇ ಆಹ್ವಾನಿಸಿದ ಕಾರಣದಿಂದ ಆಕೆ ಅದನ್ನು ಪಡೆದಳು" ಎಂದು ಹೇಳಿದ್ದನು. ಸಂಧು ನ್ಯಾಯಾಧೀಶ ಜೋಸೆಫ್ಸನ್ ರಿಂದ ಅವರ ೧೬ ನೇ ಮಾರ್ಚ್ ತೀರ್ಪಿನಲ್ಲಿ ಖುಲಾಸೆಗೊಳಿಸಲ್ಪಟ್ಟನು.[೨೦]
- ಲಖ್ಬೀರ್ ಸಿಂಗ್ ಬ್ರಾರ್ ರೋಡ್, ಸಿಖ್ ಪ್ರತ್ಯೇಕತಾ ಸಂಸ್ಥೆ ಇಂಟರ್ನಾಷನಲ್ ಸಿಖ್ ಯೂತ್ ಫೆಡರೇಶನ್ (ISYF) ನ್ನಿನ ಮುಖಂಡ. ಪರ್ಮಾರ್ ನಿಂದ ಪುರಾವೆಯಿಲ್ಲದ ತಪ್ಪೊಪ್ಪಿಗೆಯು ಅವನೇ ಇದರ ಮುಖ್ಯ ರೂವಾರಿ ಎಂದು ತೋರಿಸುತ್ತದೆ,[೨೧] ಆದರೆ ವಿವರಗಳು ಇತರೆ ದೊರಕಿರುವ ಸಾಕ್ಷಿಗಳ ಜೊತೆ ಹೊಂದಾಣಿಕೆಯಾದಂತೆ ತೋರುವುದಿಲ್ಲ.[೨೨]
೧೯೮೫ ರ ನವೆಂಬರ್ ೬ ರಂದು RCMP ಯು ಊಹಿಸಲ್ಪಟ್ಟ ಸಿಖ್ ಪ್ರತ್ಯೇಕತಾವಾದಿಗಳಾದ, ತಲ್ವಿಂದರ್ ಸಿಂಗ್ ಪರ್ಮಾರ್, ಇಂದೆರ್ಜಿತ್ ಸಿಂಗ್ ರೇಯಾತ್, ಸುರ್ಜಾನ್ ಸಿಂಗ್ ಗಿಲ್, ಹರ್ದಯಾಲ್ ಸಿಂಗ್ ಜೊಹಾಲ್ ಮತ್ತು ಮನಮೋಹನ್ ಸಿಂಗ್ ರ ಮನೆಗಳ ಮೇಲೆ ದಾಳಿಮಾಡಿದರು.[೨೩]
೨೦೦೭ ರ ಸೆಪ್ಟೆಂಬರ್ ನಲ್ಲಿ, ಸಮಿತಿಯು ವರದಿಗಳನ್ನು ತನಿಖೆ ಮಾಡಿ, ಮೊಟ್ಟ ಮೊದಲು ಭಾರತೀಯ ತನಿಖಾ ವಾರ್ತೆಯ ಪತ್ರಿಕೆ ತೆಹೆಲ್ಕಾ [೨೪] ದಲ್ಲಿ ಇಲ್ಲಿಯವರೆಗೆ ಲಖ್ಬೀರ್ ಸಿಂಗ್ ಬ್ರಾರ್ ರೋಡ್ ಎಂದು ಹೆಸರಿಸದೆಯಿರುವ ಒಬ್ಬ ವ್ಯಕ್ತಿಯು ಈ ಬಾಂಬ್ ಸ್ಫೋಟಗಳ ಮುಖ್ಯ ರೂವಾರಿ ಎಂದು ಬಹಿರಂಗ ಪಟಿಸಿತು. ರಾಯಲ್ ಕೆನೇಡಿಯನ್ ಮೌಂಟೆಡ್ ಪೋಲಿಸ್ (RCMP) ಗೆ ತಿಳಿದಿರುವಂತಹ ಇತರೆ ಸಾಕ್ಷಿಗಳ ಜೊತೆಗೆ ಈ ವರದಿಯು ಹೊಂದಾಣಿಕೆಯಿಲ್ಲದಂತೆ ತೋರುತ್ತದೆ.[೨೨]
ಪರೀಕ್ಷೆಗಳು
[ಬದಲಾಯಿಸಿ]ಆರು ವರ್ಷಗಳಿಗೂ ಮಿಗಿಲಾದ ಆನಂತರದ ವಿಶ್ವವ್ಯಾಪಿ ಶೋಧನೆಗಳಲ್ಲಿ ಪಿತೂರಿಯ ಅನೇಕ ಎಳೆಗಳು ಬಯಲು ಮಾಡಲ್ಪಟ್ಟವು:
- ಈ ಬಾಂಬಿನ ಸ್ಫೋಟಕವು ಕೆನೆಡ, ಯು ಎಸ್ ಎ, ಇಂಗ್ಲೆಡ್,ಮತ್ತು ಭಾರತದಲ್ಲಿ ವ್ಯಾಪಕ ಸದಸ್ಯತ್ವಗಳನ್ನು ಹೊಂದಿರುವ ಕಡೇ ಪಕ್ಷ ಎರಡು ಸಿಖ್ ಭಯೋತ್ಪಾದಕ ಗುಂಪುಗಳ ಜಂಟಿ ಯೋಜನೆಯಾಗಿತ್ತು. ಜೂನ್ ೧೯೮೪ ಅಮೃತಸರದಲ್ಲಿನ ಅತ್ಯಂತ ಪವಿತ್ರವಾದ ಸಿಖ್ ದೇವಾಲಯ ಸುವರ್ಣ ಮಂದಿರದ ಮೇಲೆ ಆಕ್ರಮಣ ನಡೆಸಿದ್ದರಿಂದ ಅವರ ದ್ವೇಷದ ಜ್ವಾಲೆಗೆ ಕಿಡಿಸಿಡಿಸಿದಂತಾಯಿತು.[೨೫]
- ಎಮ್. ಸಿಂಗ್ ಹಾಗೂ ಎಲ್. ಸಿಂಗ್ ಎಂದು ಅವರ ಟಿಕೆಟ್ ಗಳಿಂದ ಗುರುತಿಸಲ್ಪಟ್ಟ, ಇಬ್ಬರು ವ್ಯಕ್ತಿಗಳು, ೨೨ ನೇ ಜೂನ್ ೧೯೮೫ ರಂದು ಕೆಲವೇ ಗಂಟೆಗಳ ವ್ಯತ್ಯಾಸದಲ್ಲಿ ವ್ಯಾಂಕುವಾರ್ ಇಂಟರ್ನಾಷನಲ್ ಏರ್ ಪೋರ್ಟ್ ನಲ್ಲಿ ಬಾಂಬ್ ಗಳು ತುಂಬಿದ್ದ ತಮ್ಮ ಚೀಲಗಳನ್ನು ಪರಿಶೀಲಿಸಿ ಹಾಕಿದರು. ಆ ಇಬ್ಬರು ವ್ಯಕ್ತಿಗಳು ವಿಮಾನದಲ್ಲಿ ತಮ್ಮ ಉಡ್ಡಯನವನ್ನು ಮಾಡಲು ವಿಫಲರಾದರು.[೨೬]
- ಎಮ್. ಸಿಂಗ್ ನಿಂದ ಪರೀಕ್ಷಿಸಲ್ಪಟ್ಟ ಚೀಲವು ಏರ್ ಇಂಡಿಯಾ ಫ್ಲೈಟ್ ೧೮೨ ವಿಮಾನವು ಹಾರುತ್ತಿರುವಾಗಲೇ ಸ್ಫೋಟಿಸಿತು.
- ಎಲ್. ಸಿಂಗ್ ನಿಂದ ಪರೀಕ್ಷಿಸಲ್ಪಟ್ಟ ಎರಡನೆಯ ಚೀಲವು, ಕೆನೇಡಿಯನ್ ಫೆಸಿಫಿಕ್ ಏರ್ ಲೈನ್ಸ್ ಫ್ಲೈಟ್ ೦೦೩ ಯಲ್ಲಿ ವ್ಯಾಂಕುವಾರ್ ನಿಂದ ಟೋಕಿಯೊ ಗೆ ಪ್ರಯಾಣ ಬೆಳೆಸಿತು. ಬ್ಯಾಂಕಾಕ್-ಡಾನ್ ಮ್ಯುಯಾಂಗ್ ಗೆ ೧೭೭ ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸಹಿತ ತಕ್ಷಣ ನಿರ್ಗಮಿಸ ಬೇಕಾಗಿದ್ದ ಏರ್ ಇಂಡಿಯಾ ಫ್ಲೈಟ್ ೩೦೧ ಅದರ ಮುಖ್ಯ ಗುರಿಯಾಗಿತ್ತು, ಆದರೆ ಅದು ನರಿತ ಏರ್ ಪೋರ್ಟ್ ಟರ್ಮಿನಲ್ ನಲ್ಲಿಯೇ ಸ್ಫೋಟಿಸಿತು. ಇಬ್ಬರು ಜಪಾನಿ ಬ್ಯಾಗೇಜ್ ಕಾರ್ಮಿಕರು ಕೊಲ್ಲಲ್ಪಟ್ಟರು ಮತ್ತು ಇತರೆ ನಾಲ್ಕು ವ್ಯಕ್ತಿಗಳು ಗಾಯಗೊಂಡರು.[೨೭]
- ಆ ಇಬ್ಬರು ವ್ಯಕ್ತಿಗಳ ಗುರುತುಗಳು ತಿಳಿಯದೇ ಹಾಗೇ ಉಳಿದಿದೆ.[ಸೂಕ್ತ ಉಲ್ಲೇಖನ ಬೇಕು]
- "ಮೂರನೆಯ ವ್ಯಕ್ತಿ" ಅಥವಾ "ಅಪರಿಚಿತ ಪುರುಷ" ನೆಂದು ನಾನಾ ವಿಧವಾಗಿ ಪೋಲಿಸರಿಗೆ ತಿಳಿದಂತಹ ಒಬ್ಬ ಮುಖ್ಯ ರೂವಾರಿ ೪ ನೇ ಜೂನ್ ೧೯೮೫ ರಂದು, ತಲ್ವಿಂದರ್ ಸಿಂಗ್ ಪರ್ಮಾರ್ ನನ್ನು ಹಿಂಬಾಲಿಸುತ್ತಿದ್ದ CSIS ಏಜೆಂಟರಿಂದ ವಿಚಾರಿಸಲ್ಪಟ್ಟನು. "ಯುವ ಪುರುಷ" ನೆಂದು ವರ್ಣಿಸಲ್ಪಟ್ಟ,[೨೫] ಅವನು ಪರ್ಮಾರ್ ಜೊತೆ ವ್ಯಾಂಕುವಾರ್ ನಿಂದ ವ್ಯಾಂಕುವಾರ್ ದ್ವೀಪದಲ್ಲಿರುವ ಡಂಕಾನ್ ಗೆ ಒಂದು ದೋಣಿ ವಿಹಾರಕ್ಕೆ ಹೋಗಿದ್ದನು, ಅಲ್ಲಿ ಅವನು ಮತ್ತು ಪರ್ಮಾರ್, ಇಂದೆರ್ಜಿತ್ ಸಿಂಗ್ ರೆಯಾತ್ ನಿಂದ ತಯಾರಿಸಲ್ಪಟ್ಟ ಒಂದು ಉಪಕರಣದ ಪರೀಕ್ಷಾ ಸ್ಫೋಟದಲ್ಲಿ ಭಾಗವಹಿಸಿದ್ದರು. ಆ ಮೂರನೆಯ ವ್ಯಕ್ತಿಯು "ಎಲ್. ಸಿಂಗ್" ಅಥವಾ "ಲಾಲ್ ಸಿಂಗ್" ಎಂಬ ಹೆಸರಿನಿಂದ ಟಿಕೇಟುಗಳನ್ನು ತಂದು ಪ್ರಯಾಣಿಸಿದ ಕಾರಣದಿಂದಲೂ ಸಹ ಸಂಬಂಧಿಸಿದ್ದಾನೆ.[೨೮]
ಏರ್ ಇಂಡಿಯಾ ನ್ಯಾಯ ವಿಚಾರಣೆ
[ಬದಲಾಯಿಸಿ]ಸಿಖ್ ಪ್ರತ್ಯೇಕತಾವಾದಿಗಳಾದ ರಿಪುದಮನ್ ಸಿಂಗ್ ಮಲಿಕ್ ಹಾಗೂ ಅಜೈಬ್ ಸಿಂಗ್ ಬಾಗ್ರಿಯವರ, ಬಾಂಬ್ ಸ್ಫೋಟದ ಬಗ್ಗೆ ಆಪಾದನೆಯ ನ್ಯಾಯ ವಿಚಾರಣೆಯು, "ಏರ್ ಇಂಡಿಯಾ ಟ್ರಯಲ್" ಎಂದು ಹೆಸರಾಯಿತು.[೨೯]
ಆಪಾದನೆಗಳು ಮತ್ತು ಅಪರಾಧ ನಿರ್ಣಯ
[ಬದಲಾಯಿಸಿ]೧೦ ನೇ ಮೇ ೧೯೯೧ ರಂದು, ಇಂಗ್ಲೆಂಡಿನಿಂದ ರೇಯಾತ್ ನನ್ನು ದೇಶದಿಂದ ಕರೆಸಿಕೊಳ್ಳಲು ಮಾಡಿದ ಸುದೀರ್ಘವಾದ ದಾವೆಗಳ ನಂತರ, ಅವನನ್ನು ನರಿತ ಏರ್ ಪೋರ್ಟ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ನಾಲ್ಕು ಸ್ಫೋಟಗಳು ಹಾಗೂ ಸಾಮೂಹಿಕ ನರಹತ್ಯೆಯ ಎರಡು ಎಣಿಕೆಗಳ ಆಪಾದನೆಗಳ ಮೇಲೆ ಬಂಧಿಸಲಾಯಿತು. ಅವನಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.[೩೦]
ಬಾಂಬ್ ಸ್ಫೋಟದ ಹದಿನೈದು ವರ್ಷಗಳ ನಂತರ, ೨೭ ನೇ ಅಕ್ಟೋಬರ್ ೨೦೦೦ ರಂದು, RCMP ಯು ಮಲಿಕ್ ಹಾಗೂ ಬಾಗ್ರಿಯನ್ನು ಬಂಧಿಸಿದರು. ಏರ್ ಇಂಡಿಯಾ ಫ್ಲೈಟ್ ೧೮೨ ರ ವಿಮಾನದಲ್ಲಿದ್ದ ಜನಗಳ ಸಾವಿನಲ್ಲಿ ಮೊದಲ ಶ್ರೇಣಿಯ ಕೊಲೆಯ ೩೨೯ ಎಣಿಕೆಗಳು, ಕೊಲೆ ಮಾಡಲು ಒಳಸಂಚು, ಜಪಾನಿನ ನ್ಯೂ ಟೋಕಿಯೊ ಇಂಟರ್ನಾಷನಲ್ ಏರ್ ಪೋರ್ಟ್ (ಈಗ ನರಿತ ಇಂಟರ್ನಾಷನಲ್ ಏರ್ ಪೋರ್ಟ್) ನಲ್ಲಿ ಕೆನೇಡಿಯನ್ ಫೆಸಿಫಿಕ್ ಫ್ಲೈಟ್ ನಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯ ಕೊಲೆಯ ಪ್ರಯತ್ನ ಮತ್ತು ನ್ಯೂ ಟೋಕಿಯೊ ಇಂಟರ್ನಾಷನಲ್ ಏರ್ ಪೋರ್ಟ್ ನಲ್ಲಿ ಬ್ಯಾಗೇಜ್ ಕಾರ್ಮಿಕರ ಕೊಲೆಯ ಎರಡು ಎಣಿಕೆಗಳ ಸಹಿತ ಅವರ ಮೇಲೆ ಆಪಾದನೆ ಪಟ್ಟಿ ಹೊರಿಸಲಾಯಿತು.[೩೧][೩೨]
೨೦೦೧ ನೇ ಜೂನ್ ೬ ರಂದು, RCMP ಯು ರೇಯಾತ್ ನನ್ನು ಕೊಲೆಯ, ಕೊಲೆಯ ಪ್ರಯತ್ನ ಹಾಗೂ ಏರ್ ಇಂಡಿಯಾ ಸ್ಫೋಟದಲ್ಲಿನ ಪಿತೂರಿಗಳ ಆಪಾದನೆಗಳ ಮೇಲೆ ಬಂಧಿಸಿತು. ೨೦೦೩ ನೇ ಫೆಬ್ರುವರಿ ೧೦ ರಂದು, ನರಹತ್ಯೆಯ ಒಂದು ಲೆಕ್ಕ ಮತ್ತು ಬಾಂಬ್ ತಯಾರಿಕೆಯಲ್ಲಿ ಸಹಾಯ ಮಾಡಿದ ದೋಷಾರೋಪಣೆಗೆ ಗುರುಪಡಿಸಿ ಅಪರಾಧಿಯೆಂದು ರೆಯಾತ್ ನನ್ನು ಪ್ರತಿಪಾದಿಸಲಾಯಿತು. ಅವನಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.[೩೩] ಮಲಿಕ್ ಮತ್ತು ಬಾಗ್ರಿಯ ನ್ಯಾಯವಿಚಾರಣೆಯ ಸಮಯದಲ್ಲಿ ಪ್ರತ್ಯಕ್ಷ ಸಾಕ್ಷಿಯನ್ನು ಒದಗಿಸಲು ಅವನಿಂದ ನಿರೀಕ್ಷಿಸಲಾಗಿತ್ತು, ಆದರೆ ವ್ಯಾಜ್ಯಹೂಡಿಕೆದಾರರು ಸರಿಯಾಗಿ ನಿರ್ಧರಿಸಲಿಲ್ಲ.[ಸೂಕ್ತ ಉಲ್ಲೇಖನ ಬೇಕು]
"ದಿ ಏರ್ ಇಂಡಿಯಾ ಕೋರ್ಟ್ ರೂಮ್" ಎಂದು ಹೆಚ್ಚು ಸಾಮಾನ್ಯವಾಗಿ ಕರೆಯಲ್ಪಡುವ ಕೋರ್ಟ್ ರೂಮ್ ೨೦ ರಲ್ಲಿ,[೩೪] ಏಪ್ರಿಲ್ ೨೦೦೩ ರಿಂದ ಡಿಸೆಂಬರ್ ೨೦೦೪ ರ ನಡುವೆ ನ್ಯಾಯವಿಚಾರಣೆಯ ಕಲಾಪಗಳು ನಡೆದವು. ೭.೨ ಮಿಲಿಯನ್ ಡಾಲರುಗಳ ವೆಚ್ಚದಲ್ಲಿ, ಹೆಚ್ಚು ಸುರಕ್ಷತೆಯುಳ್ಳ ವಿಚಾರಣಾ ಕೊಠಡಿಯು ಈ ನ್ಯಾಯವಿಚಾರಣೆಯ ಕಲಾಪಕ್ಕೆಂದೇ ವ್ಯಾಂಕುವಾರ್ ಲಾ ಕೋರ್ಟ್ ನಲ್ಲಿ ವಿಶೇಷವಾಗಿ ರಚಿಸಲಾಯಿತು.[೩೫]
೨೦೦೫ ರ ಮಾರ್ಚ್ ೧೬ ರಂದು, ನ್ಯಾಯಾಧೀಶರಾದ ಐಯಾನ್ ಜೋಸೆಫ್ ಸನ್ ರವರು ಸಾಕ್ಷಿಗಳು ಸಾಕಷ್ಟಿಲ್ಲದ ಕಾರಣ, ಮಲಿಕ್ ಮತ್ತು ಬಾಗ್ರಿಯನ್ನು ಎಲ್ಲಾ ಎಣಿಕೆಗಳಿಂದಲೂ ತಪ್ಪಿತಸ್ಥರಲ್ಲವೆಂದು ಘೋಷಿಸಿದರು:
ನ್ಯಾಯಕ್ಕಾಗಿ ಚೀರುತ್ತಿರುವ ಕಾಯ್ದೆಗಳು, ಭಯೋತ್ಪಾದನೆಯ ಈ ಹೇಯ ಕೃತ್ಯಗಳ ಭಯಂಕರ ಸ್ವರೂಪವನ್ನು ವರ್ಣಿಸುತ್ತಾ ನಾನು ಪ್ರಾರಂಭಿಸುತ್ತೇನೆ. ಒಂದು ಉಚಿತವಾದ ಅನುಮಾನದಾಚೆ ಸಾಕ್ಷಿಯು ಅವಶ್ಯವಾಗಿ ಬೇಕಾದ ಗುಣಮಟ್ಟಕ್ಕಿಂತ ಏನಾದರೂ ಕಡಿಮೆ ಆಧಾರದ ಮೇಲೆ ವ್ಯಕ್ತಿಗಳನ್ನು ಅಪರಾಧಿಯೆಂದು ತೀರ್ಮಾನಿಸಿದರೂ ನ್ಯಾಯವನ್ನು ಸಾಧಿಸಿದಂತಾಗುವುದಿಲ್ಲ. ಪೋಲಿಸರು ಹಾಗೂ ಕ್ರೌನ್ ರಿಂದ ಅತ್ಯಂತ ಶ್ರೇಷ್ಠ ಮತ್ತು ಅತ್ಯಂತ ಹೆಚ್ಚು ಪ್ರಾಮಾಣಿಕ ಪ್ರಯತ್ನಗಳೆಂದು ದೃಷ್ಟಿಗೆ ಗೋಚರವಾಗಿದ್ದಾಗ್ಯೂ, ಸಾಕ್ಷಿಯಲ್ಲಿ ಗಮನಾರ್ಹವಾಗಿ ಆ ಗುಣಮಟ್ಟದ ರೇಖೆಯನ್ನು ತಲುಪುವಲ್ಲಿ ವಿಫಲವಾಗಿದೆ.[೩೬]
ಬ್ರಿಟಿಷ್ ಕೊಲಂಬಿಯಾದ ಅಟಾರ್ನಿ ಜನರಲ್ ಗೆ ಬರೆದ ಒಂದು ಪತ್ರದಲ್ಲಿ, ತನ್ನ ಬಂಧನ ಮತ್ತು ನ್ಯಾಯಾಂಗ ವಿಚಾರಣೆಯಲ್ಲಿ ತಪ್ಪು ಕಾನೂನುಕ್ರಮ ಜರುಗಿಸಿದ ಕಾರಣ ಕೆನೇಡಿಯನ್ ಸರ್ಕಾರದಿಂದ ಮಲಿಕ್ ಪರಿಹಾರ ಧನವನ್ನು ಹಕ್ಕಿನಿಂದ ಕೇಳಿದನು. ಮಲಿಕ್ ಸರ್ಕಾರಕ್ಕೆ ೬.೪ ಮಿಲಿಯನ್ ಡಾಲರುಗಳು ಮತ್ತು ಬಾಗ್ರಿ ೯.೭ ಮಿಲಿಯನ್ ಡಾಲರುಗಳನ್ನು ನ್ಯಾಯಾಂಗ ಶುಲ್ಕವಾಗಿ ಬಾಕಿ ಉಳಿಸಿಕೊಂಡಿದ್ದರು.[೩೭]
ಜುಲೈ ೨೦೦೭ ರಲ್ಲಿ, ಭಾರತೀಯ ತನಿಖಾ ವರದಿಯ ವಾರ ಪತ್ರಿಕೆ, ತೆಹೆಲ್ಕಾ , ೧೫ ನೇ ಅಕ್ಟೋಬರ್ ೧೯೯೨ ರಂದು ಪಂಜಾಬ್ ಪೋಲಿಸರಿಂದ ಅವನನ್ನು ಕೊಲ್ಲುವ ಕೆಲವು ದಿನಗಳ ಮೊದಲು ಪಂಜಾಬ್ ಪೋಲಿಸರಿಗೆ ಭಯೋತ್ಪಾದಕ ತಲ್ವಿಂದರ್ ಸಿಂಗ್ ಪರ್ಮಾರ್ ನಿಂದ ಒಂದು ತಪ್ಪೊಪ್ಪಿಗೆಯಿಂದ ತಾಜಾ ಸಾಕ್ಷಿಯು ಹೊರಹೊಮ್ಮಿತು ಎಂದು ವರದಿ ಮಾಡಿತು.[೨೪] ಈ ವರದಿಯ ಪ್ರಕಾರ, ಏಳು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಪರ್ಮಾರ್ ನ ಸಹಚರರ ಸಂದರ್ಶನಗಳನ್ನು ಮಾಡುತ್ತಾ ಬಂದಿರುವಂತಹ ಒಂದು ಚಂಡೀಗಡದಲ್ಲಿ ನೆಲೆಯೂರಿರುವ ತಂಡವಾದ, ಪಂಜಾಬ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (PHRO) ದಿಂದ ಈ ಸಾಕ್ಷಿಯು ಸಂಗ್ರಹಿಸಲ್ಪಟ್ಟಿದೆ.
ಆನಂತರ, 24 ನೇ ಸೆಪ್ಟೆಂಬರ್ ನಲ್ಲಿ ತನಿಖಾ ಸಮಿತಿಗೆ ಆ ತಪ್ಪೊಪ್ಪಿಗೆಯ ಭಾಷಾಂತರದ ಪ್ರತಿಯನ್ನು ಪ್ರಸ್ತುತಪಡಿಸಲಾಯಿತು. "ಭೂಕಂಪಿಸುವಂತಹ ಸಾಕ್ಷಿಯೆಂದು" ಹೇಳಲ್ಪಟ್ಟ ಆ ತಪ್ಪೊಪ್ಪಿಗೆಯು, RCMP ಯವರಿಂದ ಈಗಾಗಲೆ ತನಿಖೆ ಮಾಡಲ್ಪಟ್ಟ ವಿಷಯಗಳನ್ನೂ ಹೊಂದಿದೆ ಹಾಗೂ ಕೆಲವೊಂದು ವಿವರಗಳು ಸುಳ್ಳೆಂದು ತಿಳಿಯಿತು.[೨೨]
ಹೆಸರಾಂತ ಸಿಖ್ ಭಯೋತ್ಪಾದಕ ಹಾಗೂ ಜರ್ನೇಲ್ ಸಿಂಗ್ ಭಿಂದ್ರನ್ವಾಲೆಯ ಸೋದರಳಿಯ, ಆ ನಿಗೂಢ ಮೂರನೆಯ ವ್ಯಕ್ತಿ ಅಥವಾ "ಮಿ. X" ನೇ ಲಖ್ಬೀರ್ ಸಿಂಗ್ ಬ್ರಾರ್ ರೋಡ್ ನೆಂದು ಆ ತಪ್ಪೊಪ್ಪಿಗೆಯು ಪತ್ತೆ ಹಚ್ಚಿತು. ಇನ್ಸಪೆಕ್ಟರ್ ಲೋರ್ನೆ ಸ್ಕಾವರ್ಟ್ಜ್ ರವರು, ೨೦೦೧ ರಲ್ಲಿ ಪಾಕೀಸ್ತಾನದಲ್ಲಿದ್ದ ಲಖ್ಬೀರ್ ನನ್ನು RCMP ಯು ಸಂದರ್ಶಿಸಿತ್ತೆಂದು ಹೇಳಿದರು. ಆ ಸಮಯದಲ್ಲಿ, ಅವನು ಬಾಂಬ್ ಸ್ಫೋಟದಲ್ಲಿ ಇತರೆ ಅನೇಕ ವ್ಯಕ್ತಿಗಳ ಕೈವಾಡವಿದೆಯೆಂದು ನಿರ್ದಿಷ್ಟವಾಗಿ ತಿಳಿಸಿದ್ದನು. ಅಲ್ಲದೆ, ಲಖ್ಬೀರ್ ನು "ಮಿ. X" ಆಗಲು ಸಾಧ್ಯವಿಲ್ಲವೆಂದು, ಸ್ಕಾವರ್ಟ್ಜ್ ಸ್ಪಷ್ಟವಾಗಿ ತಿಳಿಸಿದರು, ಏಕೆಂದರೆ ಮಿ. X ಸಾಕಷ್ಟು ಚಿಕ್ಕವನಂತೆ ಕಾಣಿಸುತ್ತಿದ್ದನು.[೨೧]
ಹಾಗೂ, RCMP ಯು ಅನೇಕ ವರ್ಷಗಳವರೆಗೆ ಆ ಹೇಳಲ್ಪಟ್ಟ ತಪ್ಪೊಪ್ಪಿಗೆಯ ಸಾರಾಂಶದ ಬಗ್ಗೆ ಅರಿತುಕೊಂಡಿತ್ತು. ಪರ್ಮಾರ್ ನು ಜೀವಂತವಾಗಿಯೇ ಬಂಧಿಸಲ್ಪಟ್ಟು, ಪ್ರಶ್ನಿಸಲ್ಪಪಟ್ಟು, ನಂತರವೇ ಕೊಲ್ಲಲ್ಪಟ್ಟನೆಂದು, ಅಧಿಕಾರಿಗಳ ನಿರಾಕರಣೆಯಿದ್ದಾಗ್ಯೂ, ಅವರು ನಂಬಿದರು.
ಈ ವಿಚಾರಣೆಯನ್ನು ಏಳು ವರ್ಷಗಳ ತನಕ ತನಿಖೆ ನಡೆಸಿದಂತಹ PHRO ದ ಅಧಿಕಾರಿಗಳಿಂದ ಹೊಸ ಸಾಕ್ಷಿಯನ್ನು ಹಾಜರು ಪಡಿಸಲಾಯಿತು. ವೈಯಕ್ತಿಕವಾಗಿ ಈ ತಪ್ಪೊಪ್ಪಿಗೆಯಲ್ಲಿ ಭಾಗಿಯಾಗಿದ್ದಂತಹ, ನಿವೃತ್ತ ಪಂಜಾಬ್ ಪೋಲಿಸ್ DSP ಹರ್ಮೇಲ್ ಸಿಂಗ್ ಚಾಂಡಿ, ಸಾಕ್ಷಿ ಹೇಳಲೇ ಇಲ್ಲ. ವಿಚಾರಣಾ ಕಮಿಶನ್ ಮುಂದೆ ಸಾಕ್ಷಿಗಳನ್ನು ಪ್ರಸ್ತುತ ಪಡಿಸಲು ಜೂನ್ ನಲ್ಲಿ ಕೆನೆಡಾಗೆ ಚಾಂಡಿ ಪ್ರಯಾಣ ಬೆಳೆಸಿದ್ದರೂ, ಅದರೆ ಅನಾಮಧೇಯತ್ವದ ಜಾಮೀನು ಸಿಗದೆಹೋದ ಕಾರಣದಿಂದ ಅವರಿಗೆ ಸಾಕ್ಷಿ ಹೇಳಲು ಸಾಧ್ಯವಾಗಲಿಲ್ಲ.[೨೧] ಅವರು ಭಾರತಕ್ಕೆ ಹಿಂದಿರುಗಿದ ನಂತರ ತೆಹೆಲ್ಕಾ ದಲ್ಲಿ ಆ ಕಥೆಯು ಸೋರಿಕೆಯಾಗಿ ಬಹಿರಂಗವಾಯಿತು.
"ತಲ್ವಿಂದರ್ ಸಿಂಗ್ ಪರ್ಮಾರ್ ನು ಸಂಪೂರ್ಣ ಭಯೋತ್ಪಾದನೆಯಿಂದ ತುಂಬಿರುವ ಒಂದು ಖಲಿಸ್ತಾನ್-ನಿಮಿತ್ತ ಸಂಸ್ಥೆ, ಬಾಬ್ಬರ್ ಖಲ್ಸಾದ ಮುಖಂಡನಾಗಿದ್ದನು, ಹಾಗೂ ಅವನು ಏರ್ ಇಂಡಿಯಾ ಉಡ್ಡಯನಗಳನ್ನು ಬಾಂಬ್ ಗಳಿಂದ ಸ್ಫೋಟಿಸುವ ಪಿತೂರಿಯ ಮುಖಂಡನಾಗಿದ್ದಾನೆಂದು ಈಗ ನಂಬಲಾಗಿದೆ" ಎಂದು ಏರ್ ಇಂಡಿಯಾ ಫ್ಲೈಟ್ ೧೮೨ ರ ಸ್ಫೋಟದ ವಿಚಾರಣಾ ಆಯೋಗದ ತನಿಖೆಯಲ್ಲಿ ತಮ್ಮ ಅಭಿಪ್ರಾಯವನ್ನು ಈ ಪ್ರಕರಣಕ್ಕೆ ಸಂಬಂಧಿಸಿದ ಕಾಗದ ಪತ್ರಗಳ ಕಡತದಲ್ಲಿ ವ್ಯಕ್ತಪಡಿಸಿದರು.[೩೮]
ರೇಯಾತ್ ನ ಸುಳ್ಳು ಸಾಕ್ಷ್ಯ ನ್ಯಾಯ ವಿಚಾರಣೆ
[ಬದಲಾಯಿಸಿ]ಫೆಬ್ರುವರಿ ೨೦೦೬ ರಲ್ಲಿ, ಇಂದೆರ್ಜಿತ್ ಸಿಂಗ್ ರೇಯಾತ್ ನನ್ನು ತನ್ನ ನ್ಯಾಯ ವಿಚಾರಣೆಯಲ್ಲಿ ಸಾಕ್ಷ್ಯಕ್ಕೆ ಸಂಬಂಧಿಸಿದ ಸುಳ್ಳು ಪ್ರಮಾಣಕ್ಕೊಸ್ಕರ ಆಪಾದಿಸಲ್ಪಟ್ಟನು.[೩೯] ದೋಷಾರೋಪಣೆಯು ಬ್ರಿಟಿಷ್ ಕೊಲಂಬಿಯಾದ ಸುಪ್ರೀಮ್ ಕೋರ್ಟ್ ನಲ್ಲಿ ದಾಖಲಿಸಲ್ಪಟ್ಟಿತು ಹಾಗೂ ತನ್ನ ಸಾಕ್ಷ್ಯಾವಧಿಯಲ್ಲಿ ಅವನು ಸುಳ್ಳು ನೆಪಹೇಳಿ ೨೭ ಪ್ರಕರಣಗಳಲ್ಲಿ ನ್ಯಾಯಾಲಯವನ್ನು ತಪ್ಪುದಾರಿಗೆ ಎಳೆದಿದ್ದಾನೆ ಎಂದು ಪಟ್ಟಿಮಾಡಿ ಆಪಾದಿಸಲಾಯಿತು. ರೇಯಾತ್ ಬಾಂಬ್ ತಯಾರಿಕೆಯಲ್ಲಿ ತಾನು ತಪ್ಪಿತಸ್ತನೆಂದು ಒಪ್ಪಿಕೊಂಡನು ಆದರೆ ತನಗೆ ಆ ಪಿತೂರಿಯ ಬಗ್ಗೆ ಏನೂ ತಿಳಿದಿಲ್ಲವೆಂದು ಪ್ರಮಾಣ ಸಹಿತ ನಿರಾಕರಿಸಿದನು.
ತಮ್ಮ ತೀರ್ಪಿನಲ್ಲಿ, ನ್ಯಾಯಾಧೀಶರಾದ ಐಯಾನ್ ಜೋಸೆಫ್ ಸನ್ ರವರು ತಿಳಿಸಿದರು: "ಪ್ರಮಾಣ ಮಾಡಿದರೂ ಕುಗ್ಗಿಸಲಾಗದ ಸುಳ್ಳುಗಾರನೆಂದು ನಾನು ಅವನನ್ನು ಬಲ್ಲೆ. ಅವನು ಸ್ಫಷ್ಟವಾಗಿ ಹೊಂದಿರುವ ಸಮಂಜಸವಾದ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸುತ್ತಾ, ಒಂದು ಉತ್ಕಟ ಶ್ರೇಣಿಗೆ ತನ್ನ ಶಿಕ್ಷಾರ್ಹ ಪಾಪಕೃತ್ಯದಲ್ಲಿ ತನ್ನ ಭಾಗವಹಿಸುವಿಕೆಯನ್ನು ಅತ್ಯಂತ ಕಡಿಮೆಗೊಳಿಸುವ ತನ್ನ ಪ್ರಯತ್ನದಲ್ಲಿ ಜೋಡಿಸಲ್ಪಟ್ಟ ಅವನ ಸಾಕ್ಷಿಯು ತೆರೆದಿಡುತ್ತದೆ ಹಾಗೂ ಕರುಣಾಜನಕವಾಗಿ ತಯಾರಿಸಲ್ಪಟ್ಟಿದೆ, ಎಂದು ನಾನು ತಿಳಿದಂತೆ, ಕೇವಲ ಅತ್ಯಂತ ಸಹಾನುಭೂತಿಯುಳ್ಳ ಕೇಳುಗರೂ ಸಹ ತೀರ್ಮಾನಿಸಬಹುದು."[೪೦]
೨೦೦೭ ನೇ ಜುಲೈ ೩ ರಂದು, ಸುಳ್ಳು ಸಾಕ್ಷ್ಯದ ವ್ಯಾಜ್ಯಗಳು ಇನ್ನೂ ಇತ್ಯರ್ಥವಾಗದೇಯಿರುವಾಗ ರೇಯಾತ್ ನಿಗೆ ನ್ಯಾಷನಲ್ ಪೇರೋಲ್ ಬೋರ್ಡ್ ನಿಂದ ಅವನು ಸಾರ್ವಜನಿಕರಿಗೆ ಮುಂದುವರಿದ ಒಂದು ಆಪತ್ತೆಂದು ತೀರ್ಮಾನಿಸಿ ಪೇರೋಲ್ ನಿರಾಕರಿಸಲಾಯಿತು. ೯ ಫೆಬ್ರುವರಿ ೨೦೦೮ ರಂದು ಮುಕ್ತಾಯವಾಗುವವರೆಗೂ ರೇಯಾತ್ ನು ತನ್ನ ಐದು ವರ್ಷಗಳ ಪೂರ್ಣ ಜೈಲು ಶಿಕ್ಷೆಯನ್ನು ಕಡ್ಡಾಯವಾಗಿ ಅನುಭವಿಸಲೇಬೇಕೆಂದು ಆ ತೀರ್ಮಾನದಿಂದ ದೃಢಪಟ್ಟಿತು.[೪೧]
ರೇಯಾತ್ ನ ಸುಳ್ಳು ಪ್ರಮಾಣದ ನ್ಯಾಯ ವಿಚಾರಣೆಯು ಮಾರ್ಚ್ ೨೦೧೦ ರಲ್ಲಿ ವ್ಯಾಕುವಾರ್ ನಲ್ಲಿ ಪ್ರಾರಂಭವಾಯಿತು, ಆದರೆ ಇದ್ದಕ್ಕಿದ್ದಂತೆ ಮಾರ್ಚ್ ೮, ೨೦೧೦ ರಂದು ವಜಾಮಾಡಲಾಯಿತು. ಒಬ್ಬ ನ್ಯಾಯಸಭಾ ಸದಸ್ಯೆಯಿಂದ ರೇಯಾತ್ ನ ಬಗ್ಗೆ 'ಪಕ್ಷಪಾತಪೂರ್ಣ' ಟೀಕೆಗಳ ನಂತರ ನ್ಯಾಯಾಧೀಶರ ಪೀಠವನ್ನು ತೆಗೆದುಹಾಕಲಾಯಿತು.[೪೨] ಒಬ್ಬ ಹೊಸ ನ್ಯಾಯಾಧೀಶರನ್ನು ಮಾರ್ಚ್ ೧೫ ರಂದು ಆರಿಸಲಾಗುವುದು.
ಒಳಸಂಚಿನ ವಿವರಗಳು
[ಬದಲಾಯಿಸಿ]ಆ ತಪ್ಪೊಪ್ಪಿಗೆಯ ತಾತ್ಪರ್ಯವು ಈ ಕೆಳಗಿನ ಕಥೆಯನ್ನು ಹಾಜರುಪಡಿಸಿತು:
- "೧೯೮೫ ರ ಮೇ ಸರಿಸುಮಾರಿಗೆ, ಇಂಟರ್ನಾಷನಲ್ ಸಿಖ್ ಯೂತ್ ಫೆಡರೇಶನ್ನಿನ ಒಬ್ಬ ಪದಾಧಿಕಾರಿಯು ನನ್ನ ಬಳಿ (ಪರ್ಮಾರ್) ಬಂದನು ಹಾಗೂ ತನ್ನನ್ನು ಸ್ವತಃ ಲಖ್ಬೀರ್ ಸಿಂಗ್ ಎಂದು ಪರಿಚಯಿಸಿಕೊಂಡನು ಮತ್ತು ಸಿಖ್ಖರ ಅಸಮಾಧಾನವನ್ನು ವ್ಯಕ್ತಪಡಿಸಲು ಕೆಲವು ಉಗ್ರಗಾಮಿ ಚಟುವಟಿಕೆಗಳನ್ನು ನಡೆಸುವುದಕ್ಕೆ ಸಹಾಯ ಮಾಡಬೇಕೆಂದು ನನ್ನನ್ನು ಕೇಳಿದನು. ಸಿಡಿಮದ್ದು ಹಾಗೂ ಬ್ಯಾಟರಿ ಇತ್ಯಾದಿಗಳನ್ನು ಹೊಂದಿಸಿ ವ್ಯವಸ್ಥೆ ಮಾಡಿಕೊಳ್ಳಬೇಕಾದ್ದರಿಂದ ನಾನು ಅವರಿಗೆ ಕೆಲವು ದಿನಗಳ ನಂತರ ಬರಲು ತಿಳಿಸಿದೆ. ಸ್ಫೋಟಕದ ಒಂದು ಪರೀಕ್ಷಾರ್ಥ ಪ್ರಯೋಗವನ್ನು ತಾನು ಮೊದಲು ನೋಡಲು ಬಯಸುವುದಾಗಿ ಅವನು ನನಗೆ ತಿಳಿಸಿದನು...ಸುಮಾರು ನಾಲ್ಕು ದಿನಗಳ ನಂತರ, ಲಖ್ಬೀರ್ ಸಿಂಗ್ ಹಾಗೂ ಮತ್ತೊಬ್ಬ ಯುವಕ, ಇಂದೆರ್ಜಿತ್ ಸಿಂಗ್ ರೇಯಾತ್, ಇಬ್ಬರೂ ನನ್ನ ಬಳಿ ಬಂದರು. ನಾವೆಲ್ಲರೂ ಕಾಡಿನೊಳಗೆ (ಬ್ರಿಟಿಷ್ ಕೊಲಂಬಿಯಾದ) ಹೋದೆವು. ಅಲ್ಲಿ ನಾವು ಒಂದು ಸಿಡಿಮದ್ದಿನ ಕಡ್ಡಿಯನ್ನು ಬ್ಯಾಟರಿಗೆ ಜೋಡಿಸಿ ಒಂದು ಸ್ಫೋಟನವನ್ನು ಕ್ರಿಯಾಶೀಲಗೊಳಿಸಿದೆವು....
- ನಂತರ ಲಖ್ಬೀರ್ ಸಿಂಗ್, ಇಂದೆರ್ಜಿತ್ ಸಿಂಗ್ ಹಾಗೂ ಅವರ ಸಹಾಪರಾಧಿ, ಮನ್ಜೀತ್ ಸಿಂಗ್, ಟೊರಾಂಟೊದಿಂದ ಲಂಡನ್ ಮೂಲಕ ದೆಹಲಿಗೆ ಹೋಗುವ ಏರ್ ಇಂಡಿಯಾ ವಿಮಾನದಲ್ಲಿ ಮತ್ತು ಟೋಕಿಯೊ ಮೂಲಕ ಬ್ಯಾಂಕಾಕ್ ಗೆ ಹೋಗುವ ಮತ್ತೊಂದು ಉಡ್ಡಯನದಲ್ಲಿ ಈ ಬಾಂಬ್ ಗಳನ್ನು ನೆಲೆಗೊಳಿಸಲು ಒಂದು ಉಪಾಯವನ್ನು ಮಾಡಿದರು. ಲಖ್ಬೀರ್ ಸಿಂಗ್ ನು ವ್ಯಾಂಕುವಾರ್ ನಿಂದ ಟೋಕಿಯೊಗೆ ಹಾಗೂ ನಂತರ ಅಲ್ಲಿಂದ ಮುಂದೆ ಬ್ಯಾಂಕಾಕ್ ಗೆ ಒಂದು ಆಸನವನ್ನು ಕಾಯ್ದಿರಿಸಿದರೆ, ಮನ್ಜೀತ್ ಸಿಂಗ್ ನು ವ್ಯಾಂಕುವಾರ್ ನಿಂದ ಟೋರಾಂಟೊಗೆ ಮತ್ತು ನಂತರ ಟೋರಾಂಟೊದಿಂದ ದೆಹಲಿಗೆ ಒಂದು ಸ್ಥಳವನ್ನು ಕಾಯ್ದಿರಿಸಿದನು. ಬ್ಯಾಟರಿ ಹಾಗೂ ಟ್ರಾನ್ಸಿಸ್ಟರ್ ಸಹಿತ ಜೋಡಿಸಲ್ಪಟ್ಟ ಸಿಡಿಮದ್ದುಗಳನ್ನು ತುಂಬಿರುವಂತಹ ಚೀಲಗಳನ್ನು ಉಡ್ಡಯನಕ್ಕೋಸ್ಕರ ಇಂದೆರ್ಜಿತ್ ನು ತಯಾರಿಸಿದನು." - ತಲ್ವಿಂದರ್ ಸಿಂಗ್ ಪರ್ಮಾರ್ ನ ತಪ್ಪೊಪ್ಪಿಗೆಯಿಂದ[೨೪]
ನಿಷೇಧಿಸಲ್ಪಟ್ಟ ಭಯೋತ್ಪಾದಕ ಸಂಸ್ಥೆ, ಇಂಟರ್ನಾಷನಲ್ ಸಿಖ್ ಯೂತ್ ಫೆಡರೇಶನ್ನಿನ ಮುಖಂಡನಾದ, ಲಖ್ಬೀರ್ ಸಿಂಗ್ ಬ್ರಾರ್ ರೋಡ್ ನು ತನ್ನ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ವಾರೆಂಟ್ A-೨೩/೧-೧೯೯೭ ಅನ್ನು ಹೊಂದಿದ್ದಾನೆ.[೨೪] ೧೯೯೮ ರಲ್ಲಿ, ಅವನು ನೇಪಾಳದ ಕಠಮಂಡುವಿನ ಬಳಿ, ೨೦ ಕೆ.ಜಿ ಗಳಷ್ಟು RDX ಸ್ಫೋಟಕವನ್ನು ಒಯ್ಯುತ್ತಿದ್ದನೆಂದು ಬಂಧಿಸಲ್ಪಟ್ಟನು.[೪೩] ಫ್ಲೈಟ್ ೧೮೨ ರ ಸಮಯದಲ್ಲಿ, ರೋಡ್ ಒಬ್ಬ ಭೂಗತ ಭಾರತೀಯ ಏಜೆಂಟ್ ನಾಗಿದ್ದನು ಹಾಗೂ ತನ್ನ ವ್ಯಕ್ತಿತ್ವವನ್ನು ಮತ್ತು ಆ ಬಾಂಬ್ ಸ್ಫೋಟನದಲ್ಲಿ ಭಾರತದ ಪಾತ್ರವನ್ನು ರಕ್ಷಿಸುವ ಸಲುವಾಗಿ ಪರ್ಮಾರ್ ನು ಕೊಲ್ಲಲ್ಪಟ್ಟನೆಂದು PHRO ಯು ತಿಳಿಸಿತು.[೨೪] ತನಿಖಾ ತಂಡಕ್ಕೆ ದೊರಕಿರುವ ಇತರೆ ಅನೇಕ ಸಾಕ್ಷ್ಯಗಳು ಈ ಕಥೆಯ ಅನೇಕ ವಿವರಗಳ ಜೊತೆ ಸಾಮ್ಯತೆ ಹೊಂದಿರುವಂತೆ ಕಂಡುಬರುವುದಿಲ್ಲ.[೨೨]
ಹಿಂದಿನ ಸರ್ಕಾರದ ಜ್ಞಾನ
[ಬದಲಾಯಿಸಿ]ಭಾರತ ಸರ್ಕಾರದಿಂದ ಕೆನೆಡಾ ಸರ್ಕಾರಕ್ಕೆ ಕೆನೆಡಾದಲ್ಲಿನ ಏರ್ ಇಂಡಿಯಾ ಉಡ್ಡಯನದ ವಿಮಾನಗಳಲ್ಲಿ ಭಯೋತ್ಪಾದನಾ ಬಾಂಬ್ ಗಳನ್ನು ಸಿಡಿಸುವ ಸಾಧ್ಯತೆಗಳ ಬಗ್ಗೆ ಎಚ್ಚರಿಸಲ್ಪಟ್ಟಿತ್ತು ಹಾಗೂ ಏರ್ ಇಂಡಿಯಾಕ್ಕೂ ಅಲ್ಲದೆ ಭಾರತೀಯ ರಾಯಭಾರ ಕಚೇರಿಗಳಿಗೂ ಸಹ ಕೆನೆಡಾದಲ್ಲಿ ಸಂಭವನೀಯ ಬೆದರಿಕೆಗಳು ಹೆಚ್ಚಾಗಿವೆಯೆಂದು, ವಿಮಾನವು ಅಪ್ಪಳಿಸುವ ಎರಡು ವಾರಗಳ ಮುಂಚೆಯೇ CSIS ಯು RCMP ಗೆ ವರದಿ ಮಾಡಿತ್ತು.[೪೪]
ನಾಶಗೊಳಿಸಲ್ಪಟ್ಟ ಸಾಕ್ಷಿಗಳು
[ಬದಲಾಯಿಸಿ]ಶಂಕಿತರ ನೂರಾರು ಧ್ವನಿಮುದ್ರಿತ ದೂರವಾಣಿ ಸಂಭಾಷಣೆಯ ಟೇಪ್ ಗಳು CSIS ನಿಂದ ನಾಶಗೊಳಿಸಲ್ಪಟ್ಟಾಗ,[೪೫] ತಮ್ಮ ತೀರ್ಪಿನಲ್ಲಿ ನ್ಯಾಯಾಧೀಶರಾದ ಜೋಸೆಫ್ ಸನ್ ರವರು "ಒಪ್ಪಲು ಶಕ್ಯವಲ್ಲದ ದುರ್ಲಕ್ಷ್ಯ"ವೆಂದು ಎತ್ತಿ ಹೇಳಿದರು. ಬಾಂಬ್ ಸ್ಫೋಟದ ಕೆಲವು ತಿಂಗಳುಗಳ ಮೊದಲು ಹಾಗೂ ನಂತರದ ಅವಧಿಯಲ್ಲಿ ಧ್ವನಿಮುದ್ರಿಸಲ್ಪಟ್ಟ ೨೧೦ ದೂರವಾಣಿ ಸಂಭಾಷಣೆಯ ಟೇಪ್ ಗಳಲ್ಲಿ, ೧೫೬ ಅನ್ನು ಅಳಿಸಿಹಾಕಲಾಯಿತು. ಈ ಬಾಂಬ್ ಸ್ಫೋಟದಲ್ಲಿ ಭಯೋತ್ಪಾದಕರು ಪ್ರಮುಖ ಶಂಕಿತರೆಂದು ಗುರುತಿಸಲ್ಪಟ್ಟ ನಂತರವೂ ಸಹ ಈ ಧ್ವನಿಮುದ್ರಿಕೆಯ ಸುರಳಿಗಳನ್ನು ನಾಶಪಡಿಸುವುದು ಮುಂದುವರಿಯುತ್ತಲೇ ಇತ್ತು.[೪೬]
"ಒಂದು ಯಶಸ್ವೀ ಕಾನೂನು ಕ್ರಮ ಜರುಗಿಸಲು ಕಡೇಪಕ್ಷ ಎರಡೂ ಬಾಂಬ್ ಸ್ಫೋಟನಗಳಲ್ಲಿ ಕೆಲವು ಮೂಲತತ್ವಗಳನ್ನಾದರೂ ಕೈಗೊಳ್ಳಬಹುದಿತ್ತೆಂದು, ೧೯೮೫ ರ ಮಾರ್ಚ್ ಹಾಗೂ ಆಗಸ್ಟ್ ರ ನಡುವೆ CSIS ಆ ಧ್ವನಿ ಸುರುಳಿಗಳನ್ನು ಉಳಿಸಿಕೊಳ್ಳುವ ದೃಢ ಸಂಭಾವ್ಯತೆ ಇತ್ತೆಂದು, ಹಾಗೂ ಒಂದು ಖಂಡಿತವಾದ ನ್ಯಾಯಾಂಗ ಶಿಕ್ಷೆಯನ್ನು ಸ್ಫೋಟದಲ್ಲಿನ ಕೆಲವು ಫ್ರಮುಖ ವ್ಯಕ್ತಿಗಳಿಗೆ ಕೊಡಬಹುದಿತ್ತೆಂದು", RCMP ಯಿಂದ ಒಂದು ಎಚ್ಚರಿಕೆಯ ಪತ್ರವು ತಿಳಿಸಿತು, ಆದರೆ CSIS ಆ ಧ್ವನಿಮುದ್ರಿಸಲ್ಪಟ್ಟ ಸಂಭಾಷಣೆಯ ಟೇಪುಗಳಲ್ಲಿ ಯಾವುದೇ ಸಮಂಜಸವಾದ ಸಂಬಂಧಪಟ್ಟ ಮಾಹಿತಿಗಳನ್ನು ಹೊಂದಿರಲೆಲ್ಲವೆಂದು ಘೋಷಿಸಿತು.[೪೭]
೧೯೮೫ ರ ಜೂನ್ ೪ ರಂದು, CSIS ನ ಪ್ರತಿನಿಧಿಗಳಾದ ಲ್ಯಾರಿ ಲೊವೆ ಮತ್ತು ಲಿನ್ ಮ್ಯಾಕ್ ಆಡಮ್ಸ್ ಅವರು ತಲ್ವಿಂದರ್ ಸಿಂಗ್ ಪರ್ಮಾರ್ ಮತ್ತು ಇಂದೆರ್ಜಿತ್ ಸಿಂಗ್ ರೇಯಾತ್ ರನ್ನು ವ್ಯಾಂಕುವಾರ್ ದ್ವೀಪಕ್ಕೆ ಹಿಂಬಾಲಿಸಿಕೊಂಡು ಹೋಗಿದ್ದರು. ತಾವು ಕಾಡಿನಲ್ಲಿ "ತೀವ್ರವಾದ ಗುಂಡುಹೊಡೆದಂತಹ" ಶಬ್ಧವನ್ನು ಕೇಳಿದುದಾಗಿ RCMP ಗೆ ಆ ಪ್ರತಿನಿಧಿಗಳು ವರದಿ ಮಾಡಿದರು. ಆ ತಿಂಗಳ ಕೊನೆಯಲ್ಲಿಯೇ ಫ್ಲೈಟ್ ೧೮೨ ಅನ್ನು ಬಾಂಬ್ ನಿಂದ ಸ್ಫೋಟಿಸಲಾಯಿತು. ಆ ಬಾಂಬ್ ಸ್ಫೋಟದ ನಂತರ RCMP ಯು ಆ ಸ್ಥಳಕ್ಕೆ ಹೋಗಿ ವಿದ್ಯುತ್ ನಿಂದ ಸ್ಫೋಟಮಾಡುವ ಕ್ಯಾಪ್ ನ ಅವಶೇಷಗಳನ್ನು ಕಂಡರು.[೪೪]
ತಾವು ಕಣ್ಗಾವಲಿನಲ್ಲಿದ್ದೇವೆಂದು ಆ ಬಾಂಬ್ ಸ್ಫೋಟನದ ಶಂಕಿತರಿಗೆ ಸುವ್ಯಕ್ತವಾಗಿ ಅರಿವಿತ್ತು, ಆದ್ದರಿಂದ ಅವರುಗಳು ಪೇ ಫೋನ್ ಗಳನ್ನು ಉಪಯೋಗಿಸುತ್ತಿದ್ದರು ಹಾಗೂ ಸಂಕೇತ ಭಾಷೆಯಲ್ಲಿ ಮಾತನಾಡುತ್ತಿದ್ದರು. ತಲ್ವಿಂದರ್ ಸಿಂಗ್ ಪರ್ಮಾರ್ ಮತ್ತು ಹರ್ದಯಾಲ್ ಸಿಂಗ್ ಜೊಹಾಲ್ ಎಂಬ ಒಬ್ಬ ಸಹಚರನ ಮಧ್ಯೆ ನಡೆದ ಧ್ವನಿಮುದ್ರಿತ ಸಂಭಾಷಣೆಯ ಟೇಪುಗಳ ಬಾಷಾಂತಕಾರರ ಟಿಪ್ಪಣಿಗಳು, ಈ ವಿನಿಮಯದ ಅದೇ ದಿನ ೨೦ ನೇ ಜೂನ್ ೧೯೮೫ ರಂದು ಟಿಕೇಟ್ ಗಳು ಖರೀದಿಸಲ್ಪಟ್ಟವು ಎಂದು ವರದಿ ಮಾಡುತ್ತದೆ.
ಪರ್ಮಾರ್: ಅವನು ಕಥೆ ಬರೆದಿದ್ದಾನೆಯೇ?
ಜೊಹಾಲ್: ಇಲ್ಲ ಅವನು ಬರೆದಿಲ್ಲ.
ಪರ್ಮಾರ್: ಆ ಕೆಲಸವನ್ನು ಮೊದಲು ಮಾಡು.[೪೮]
ಈ ಕರೆಯ ನಂತರ CP ಏರ್ ಲೈನ್ಸ್ ಗೆ ಒಬ್ಬ ವ್ಯಕ್ತಿಯು ಕರೆ ಮಾಡಿದನು ಹಾಗೂ ಟಿಕೇಟುಗಳನ್ನು ಕಾಯ್ದಿರಿಸಿದನು ಮತ್ತು ಜೊಹಾಲ್ ನ ದೂರವಾಣಿ ಸಂಖ್ಯೆಯನ್ನು ಕೊಟ್ಟನು. ಸ್ವಲ್ಪವೇ ಹೊತ್ತಿನ ನಂತರ, ಜೊಹಾಲ್ ನು ಪರ್ಮಾರ್ ನಿಗೆ ಕರೆಮಾಡಿದನು ಮತ್ತು ಅವನನ್ನು ಕೇಳಿದನು ಸಾಧ್ಯವಾದರೆ "ಅವನು ತನ್ನಲ್ಲಿಗೆ ಬರಬಹುದೆಂದೂ ಮತ್ತು ಅವನು ಕೇಳಿದ ಕಥೆಯನ್ನು ಓದಬಹುದೆಂದೂ ತಿಳಿಸಿದನು". ಪರ್ಮಾರ್ ನು ತಾನು ಆದಷ್ಟು ಜಾಗ್ರತೆ ಅಲ್ಲಿರುವುದಾಗಿ ತಿಳಿಸಿದನು.[ಸೂಕ್ತ ಉಲ್ಲೇಖನ ಬೇಕು]
ವಿಮಾನಗಳನ್ನು ಬಾಂಬ್ ನಿಂದ ಸ್ಫೋಟಿಸಲು ಉಪಯೋಗಿಸುವ ಟಿಕೇಟುಗಳನ್ನು ಕಾಯ್ದಿರಿಸಲು ಪರ್ಮಾರ್ ನಿಂದ ಈ ಸಂಭಾಷಣೆಯು ಒಂದು ಆಜ್ಞೆಯಂತೆ ತೋರುತ್ತದೆ.[೪೯] ಮೂಲ ಧ್ವನಿಮುದ್ರಿತ ಸಂಭಾಷಣೆಯ ಟೇಪ್ ಗಳು CSIS ನಿಂದ ಅಳಿಸಲ್ಪಟ್ಟ ಕಾರಣ, ಅವನ್ನು ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಒಪ್ಪಿಕೊಳ್ಳಲು ಅರ್ಹವಾಗಿರಲಿಲ್ಲ.[೫೦]
ಕೊಲೆಮಾಡಲ್ಪಟ್ಟ ಸಾಕ್ಷಿ
[ಬದಲಾಯಿಸಿ]ಬಾಂಬ್ ಸ್ಫೋಟನದಲ್ಲಿ ತನ್ನ ಸಕ್ರಿಯ ಪಾತ್ರವಿತ್ತೆಂದು ಬಾಗ್ರಿಯು ಒಪ್ಪಿಕೊಂಡಂತಹ ಒಂದು ಸಂಭಾಷಣೆಯು ನಡೆದ ಅವಧಿಯಲ್ಲಿ ತಾನೂ ಹಾಜರಿದ್ದುದಾಗಿ ಖಂಡಿತವಾಗಿ ಹೇಳುತ್ತಾ, ಆರ್ಡರ್ ಆಫ್ ಬ್ರಿಟಿಷ್ ಕೊಲಂಬಿಯಾ ದ ಒಬ್ಬ ಸದಸ್ಯ ಹಾಗೂ ಇಂಡೋ-ಕೆನೇಡಿಯನ್ ಟೈಮ್ಸ್ ನ ಪ್ರಕಾಶಕ, ತಾರಾ ಸಿಂಗ್ ಹಯೆರ್, ೧೯೯೫ ರಲ್ಲಿ RCMP ಗೆ ಒಂದು ಪ್ರಮಾಣಪತ್ರವನ್ನು ಒದಗಿಸಿದನು.[೫೧]
ಸಿಖ್ ವರ್ತಮಾನ ಪತ್ರಿಕಾ ಪ್ರಕಾಶಕ, ಸಹಚರ ತಾರ್ಸೆಮ್ ಸಿಂಗ್ ಪುರೆವಾಲ್ ನ ಜೊತೆ ಆತನ ಲಂಡನ್ ಕಚೇರಿಯಲ್ಲಿರಬೇಕಾದರೆ, ತಾನು ಪುರೆವಾಲ್ ಹಾಗೂ ಬಾಗ್ರಿಯ ನಡುವೆ ಒಂದು ವಿಚಾರವಿನಿಮಯ ನಡೆದುದನ್ನು ಕೇಳಿಸಿಕೊಂಡೆ ಎಂದು ಹಯೆರ್ ಘೋಷಿಸಿದನು. "ನಾವು ಯೋಜಿಸಿದಂತೆ ಎಲ್ಲವೂ ಸರಿಯಾಗಿ ನಡೆದಿದ್ದರೆ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಆ ವಿಮಾನವು ಅದರಲ್ಲಿ ಯಾವುದೇ ಪ್ರಯಾಣಿಕರು ಇಲ್ಲದೇಯಿರುವಾಗ ಬಾಂಬ್ ನಿಂದ ಸ್ಫೋಟಿಸಲ್ಪಡುತ್ತಿತ್ತೆಂದು" ಬಾಗ್ರಿ ಹೇಳಿದುದಾಗಿ ಹಯೆರ್ ಆ ಸಂಧರ್ಭದಲ್ಲಿ ಕೇಳಿಸಿಕೊಂಡುದುದಾಗಿ ತಿಳಿಸಿದನು. ಆದರೆ ಆ ವಿಮಾನವು ಅರ್ಧ ಗಂಟೆಯಿಂದ ಮುಕ್ಕಾಲು ಗಂಟೆಗಳಷ್ಟು ತಡವಾಗಿ ಸಂಚರಿಸುತ್ತಿದ್ದ ಕಾರಣದಿಂದ, ಅದು ಸಮುದ್ರದ ಮೇಲೆಯೇ ಸ್ಫೋಟಕ್ಕೆ ಒಳಗಾಯಿತು."[೫೨]
ಅದೇ ವರ್ಷ ೨೪ ನೇ ಜನವರಿಯಂದು, ಕೇವಲ ಹಯೆರ್ ನನ್ನು ಮಾತ್ರ ಉಳಿದ ಇನ್ನೊರ್ವ ಸಾಕ್ಷಿಯನ್ನಾಗಿ ಮಾಡಿ, ಇಂಗ್ಲೆಂಡಿನ, ಸೌಥ್ ಹಾಲ್ ನಲ್ಲಿನ ದೇಸ್ ಪರ್ದೇಸ್ ಪತ್ರಿಕಾ ಕಚೇರಿಯ ಬಳಿ ಪುರೆವಾಲ್ ಕೊಲ್ಲಲ್ಪಟ್ಟನು.[೫೩]
18 ನೇ ನವೆಂಬರ್ ೧೯೯೮ ರಂದು, ಸುರ್ರೆ ಯಲ್ಲಿನ ತನ್ನ ಮನೆಯ ಕಾರು ನಿಲ್ಲಿಸುವ ಜಾಗದಲ್ಲಿ ತನ್ನ ಕಾರಿನಿಂದ ಹೊರಬರುತ್ತಿರುವಾಗ ಹಯೆರ್ ಗುಂಡು ಹಾರಿಸಿ ಕೊಲ್ಲಲ್ಪಟ್ಟನು.[೫೪] ಹಯೆರ್ ಮೊದಲೊಮ್ಮೆ ೧೯೯೮ ರಲ್ಲಿ ತನ್ನ ಜೀವ ತೆಗೆಯುವುದಕ್ಕೆ ಮಾಡಲ್ಪಟ್ಟ ಹಿಂದಿನ ಪ್ರಯತ್ನದಿಂದ ಬದುಕುಳಿದಿದ್ದನು, ಆದರೆ ವಿಕಲಾಂಗನಾಗಿ ಅಲ್ಲಿಂದ ಮುಂದೆ ಗಾಲಿ ಕುರ್ಚಿ ಉಪಯೋಗಿಸುತ್ತಿದ್ದನು.[೫೪] ಅವನ ಕೊಲೆಯ ಪರಿಣಾಮವಾಗಿ, ಅವನಿಂದ ಸಲ್ಲಿಸಲ್ಪಟ್ಟ ಪ್ರಮಾಣ ಪತ್ರವು ಸಾಕ್ಷಿಯಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲವಾಯಿತು.[ಸೂಕ್ತ ಉಲ್ಲೇಖನ ಬೇಕು]
CSIS ಸಂಪರ್ಕಗಳು
[ಬದಲಾಯಿಸಿ]28 ನೇ ಅಕ್ಟೋಬರ್ ೨೦೦೦ ರಂದು ಬಾಗ್ರಿಯ ಜೊತೆ ಒಂದು ಸಂದರ್ಶನದ ಅವದಿಯಲ್ಲಿ, RMCP ಯ ಏಜೆಂಟರು ಸುರ್ಜಾನ್ ಸಿಂಗ್ ಗಿಲ್ ನನ್ನು CSIS ನ ಒಬ್ಬ ಏಜೆಂಟನೆಂದು ವರ್ಣಿಸಿದರು, ಏಕೆಂದರೆ ಅವನಿಗೆ CSIS ನಿರ್ವಾಹಕರು ಹಿಂದೆಗೆದುಕೊಳ್ಳುವಂತೆ ಹೇಳಿದ ಕಾರಣ ಬಬ್ಬರ್ ಖಾಲ್ಸಾದಿಂದ ರಾಜಿನಾಮೆ ಕೊಟ್ಟನು.[೫೫]
ನಂತರದ ಫ್ಲೈಟ್ ೧೮೨ ರ ಬಾಂಬ್ ಸ್ಫೋಟನವನ್ನು ತಡೆಯಲು CSIS ವಿಫಲವಾದ ಮೇಲೆ, CSIS ನ ಮೇಲಧಿಕಾರಿಯನ್ನು ರೀಡ್ ಮೋರ್ಡೆನ್ ರಿಂದ ಬದಲಾಯಿಸಲ್ಪಟ್ಟಿತು. ಸಿಬಿಸಿ ಟೆಲಿವಿಷನ್ ನ ವಾರ್ತಾ ಕಾರ್ಯಕ್ರಮದ ಒಂದು ಸಂದರ್ಶನದಲ್ಲಿ, ದಿ ನ್ಯಾಷನಲ್ ಗೆ, ಈ ವಾಜ್ಯವನ್ನು ನಡೆಸುವಿಕೆಯಲ್ಲಿ CSIS "ತಪ್ಪು ಮಾಡಿದೆಯೆಂದು" ಮೋರ್ಡೆನ್ ತಿಳಿಸಿದರು. ಯಾವುದೇ ತಪ್ಪುಮಾಡಿಲ್ಲವೆಂದು ಒಂದು ಸೆಕ್ಯುರಿಟಿ ಇಂಟೆಲಿಜೆನ್ಸ್ ರಿವ್ಯೂ ಕಮಿಟಿಯು CSIS ಅನ್ನು ಮುಕ್ತಗೊಳಿಸಿತು. ಆದಾಗ್ಯೂ, ಆ ವರದಿಯು ಇಂದಿನವರೆಗೂ ಗುಟ್ಟಾಗಿಯೇ ಉಳಿದಿದೆ. ಯಾವುದೇ ಕಪ್ಪು ಚುಕ್ಕೆಯ ಸಮಾವೇಶವಾಗಿಲ್ಲವೆಂದು ಇಂದಿಗೂ ಕೆನೆಡಾ ಸರ್ಕಾರವು ಒತ್ತಾಯಿಸುವುದನ್ನು ಮುಂದುವರಿಸುತ್ತಲೇ ಇದೆ.[೫೬]
ಸಾರ್ವಜನಿಕ ವಿಚಾರಣೆ
[ಬದಲಾಯಿಸಿ]ಮೇ ೧ ರ ೨೦೦೬ ರಂದು, ಪ್ರಧಾನ ಮಂತ್ರಿ ಸ್ಟೀಫನ್ ಹಾರ್ಪರ್ ರ ಸಲಹೆಯ ಮೇರೆಗೆ,[೫೭] "ಕೆನೆಡಾ ಇತಿಹಾಸದಲ್ಲಿಯೇ ಅತ್ಯಂತ ಹೇಯ ಸಾಮೂಹಿಕ ಹತ್ಯೆಯ ಬಗ್ಗೆ ಅನೇಕ ಮುಖ್ಯ ಪ್ರಶ್ನೆಗಳಿಗೆ ಉತ್ತರಗಳನ್ನು" ಕಂಡುಹಿಡಿಯುವ ಸಲುವಾಗಿ, ಸುಪ್ರೀಮ್ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಜಾನ್ ಮೇಜರ್ ಅವರ ಮುಖಂಡತ್ವದಲ್ಲಿ, ಬಾಂಬ್ ಸ್ಫೋಟದ ಒಂದು ಸಂಪೂರ್ಣ ಸಾರ್ವಜನಿಕ ವಿಚಾರಣೆಯ ಪ್ರಾರಂಭವನ್ನು, ದಿ ಕ್ರೌನ್-ಇನ್-ಕೌನ್ಸಿಲ್ ಘೋಷಿಸಿತು.[೫೮] ನಂತರ ಜೂನ್ ನಲ್ಲಿ ಪ್ರಾರಂಭಿಸಲ್ಪಟ್ಟು, ಕೆನೆಡಾ ದೇಶದ ಕಾನೂನು ಭಯೋತ್ಪಾದನಾ ತಂಡಗಳಿಗೆ[೫೯] ಹೇಗೆ ಬಂಡವಾಳವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂಬುದನ್ನು ಪರೀಕ್ಷಿಸಲು, ಆತಂಕವಾದಿ ವ್ಯಾಜ್ಯಗಳಲ್ಲಿ ಸಾಕ್ಷಿಯ ರಕ್ಷಣೆ ಎಷ್ಟು ಚೆನ್ನಾಗಿ ಒದಗಿಸಲ್ಪಟ್ಟಿತ್ತು, ಒಂದು ವೇಳೆ ಕೆನೆಡಾವು ತನ್ನ ಉಡ್ಡಯನ ಸುರಕ್ಷತೆಯನ್ನು ಮೇಲ್ದರ್ಜೆಗೇರಿಸಲು ಅವಶ್ಯಕವಾದರೆ, ಹಾಗೂ ರಾಯಲ್ ಕೆನೇಡಿಯನ್ ಮೌಂಟೆಡ್ ಪೋಲಿಸ್, ದಿ ಕೆನೇಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ್, ಮತ್ತು ಇತರೆ ಕಾನೂನು ಜಾರಿ ಮಾಡುವ ಸಂಸ್ಥೆಗಳ ನಡುವೆ ಸರ್ಕಾರದ ವ್ಯಾಜ್ಯಗಳ ತೀರ್ಮಾನದಲ್ಲಿ ಸಾಮರಸ್ಯವಿದೆಯೇ ಎಂಬುದನ್ನು ಏರ್ ಇಂಡಿಯಾ ಫ್ಲೈಟ್ ೧೮೨ ರ ಬಾಂಬ್ ಸ್ಫೋಟದ ತನಿಖೆಯ ವಿಚಾರಣಾ ಆಯೋಗವು ಪರೀಕ್ಷಿಸುವುದು. ಬಾಂಬ್ ಸಿಡಿತದ ಪರಿಣಾಮದ ಮೇಲೆ ಬಲಿಪಶುಗಳ ಕುಟುಂಬಗಳು ಸಾಕ್ಷಿ ಹೇಳಬಹುದಾದಂತಹ ಒಂದು ಸಾರ್ವಜನಿಕ ಸಭಾಸ್ಥಾನವನ್ನು ಸಹ ಅದು ಒದಗಿಸುವುದು ಹಾಗೂ ಯಾವುದೇ ಆಪಾದಿತ ನ್ಯಾಯ ವಿಚಾರಣೆಯನ್ನು ಪುನರುಚ್ಚರಿಸುವುದಿಲ್ಲ.[೬೦]
ವಿಚಾರಣೆಯ ತನಿಖೆಗಳು ಪೂರ್ಣಗೊಳಿಸಲ್ಪಟ್ಟು ೧೭ ನೇ ಜೂನ್ ೨೦೧೦ ರಂದು ಬಿಡುಗಡೆ ಮಾಡಲ್ಪಟ್ಟಿತು. ಕ್ರೌನ್ ಮಿನಿಸ್ಟ್ರೀಸ್, ದಿ ರಾಯಲ್ ಕೆನೇಡಿಯನ್ ಮೌಂಟೆಡ್ ಪೋಲಿಸ್, ಹಾಗೂ ದಿ ಕೆನೇಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ್ ನಿಂದ "ತಪ್ಪುಗಳ ಸರಣಿಗಳ ಜಲಪಾತವೇ" ನಡೆದು ಭಯೋತ್ಪಾದನಾ ಆಕ್ರಮಣವು ನಡೆಯಲು ಅನುವು ಮಾಡಿಕೊಟ್ಟಿತೆಂದು ಮೇಜರ್ ಅವರು ಕಂಡುಹಿಡಿದರು.[೨][೬೧]
ಹಿರೀಕರ ಕೊಡುಗೆ
[ಬದಲಾಯಿಸಿ]'ಕೆನಡಾದ ಒಂದು ದುರಂತ'
[ಬದಲಾಯಿಸಿ]ಏರ್ ಇಂಡಿಯಾ ಫ್ಲೈಟ್ ೧೮೨ ರ ಮುಳುಗಡೆಯ ಇಪ್ಪತ್ತು ವರ್ಷಗಳ ನಂತರ, ತಮ್ಮ ದುಃಖಾಚರಣೆಗೆ, ಐರ್ಲೆಂಡ್ ನ ಅಹಕಿಸ್ತಾ ದಲ್ಲಿ ಕುಟುಂಬಗಳು ಒಟ್ಟು ಸೇರಿದರು. ಗವರ್ನರ್ ಜನರಲ್ ಆಂಡ್ರಿಯೆನ್ನೆ ಕ್ಲಾರ್ಕಸನ್ ರವರು, ಪ್ರಧಾನ ಮಂತ್ರಿ ಪೌಲ್ ಮಾರ್ಟಿನ್ ರ ಸಲಹೆಯ ಮೇರೆಗೆ, ಆ ವಾರ್ಷಿಕೋತ್ಸವವನ್ನು ಒಂದು ರಾಷ್ಟ್ರೀಯ ಶೋಕಾಚರಣೆಯ ದಿನವೆಂದು ಘೋಷಿಸಿದರು. ವರ್ಷಾಚರಣೆಯ ಅವಧಿಯಲ್ಲಿ, ಬಾಂಬ್ ಸ್ಫೋಟವು ಕೆನೆಡಾ ದೇಶದ ಒಂದು ಸಮಸ್ಯೆಯಾಗಿದೆ, ಇದು ಪರದೇಶದ ಸಮಸ್ಯೆಯಲ್ಲ ಎಂದು ತಿಳಿಸುತ್ತಾ: "ಯಾವುದೇ ತಪ್ಪನ್ನು ಮಾಡಬೇಡಿ: ಉಡ್ಡಯನವು ಏರ್ ಇಂಡಿಯಾದ್ದಾಗಿರಬಹುದು, ಅದು ಐರ್ಲೆಂಡಿನ ದಡದಾಚೆ ಆಗಿರಬಹುದು, ಆದರೆ ಇದು ಕೆನೆಡಾ ಒಂದು ದುರ್ಘಟನೆ" ಎಂದು ಮಾರ್ಟಿನ್ ಹೇಳಿದರು.[೬೨]
ಮೇ ೨೦೦೭ ರಲ್ಲಿ, ಕೆನೆಡಾದವರು ಏರ್ ಇಂಡಿಯಾ ಬಾಂಬ್ ಸಿಡಿತವನ್ನು, ಕೆನೆಡಾದ್ದೆ ಅಥವಾ ಭಾರತೀಯ ದುರ್ಘಟನೆಯೇ ಎಂದು ಅವಲೋಕಿಸುವರು ಹಾಗೂ ಅದಕ್ಕಾಗಿ ಅವರು ಯಾರನ್ನು ಆಕ್ಷೇಪಿಸುವರೆಂದು ಸಾರ್ವಜನಿಕ ಅಭಿಪ್ರಾಯದ ಮತದಾನದ ಫಲಿತಾಂಶಗಳನ್ನು ಆಂಗುಸ್ ರೀಡ್ ಸ್ಟ್ರಾಟಜೀಸ್ ರವರು ಬಿಡುಗಡೆ ಮಾಡಿದರು. ಪ್ರತಿವಾದಿಗಳಲ್ಲಿ ಶೇಕಡಾ ನಲ್ವತ್ತೆಂಟು ಜನರು ಬಾಂಬ್ ಸ್ಫೋಟವು ಕೆನೆಡಾದ ಒಂದು ಘಟನೆಯೆಂದು ಪರಿಗಣಿಸಿದರೆ, ಬಹಳವಾಗಿ ಭಾರತೀಯ ವಿಷಯವಾಗಿ ಆತಂಕವಾದಿ ಆಕ್ರಮಣವೆಂದು ಶೇಕಡಾ ಇಪ್ಪತ್ತೆಂಟು ಜನರು ಭಾವಿಸಿದರು. ಅವರಲ್ಲಿ ಕೇಳಿದ ಶೇಕಡಾ ಮೂವತ್ನಾಲ್ಕು ಜನರು CSIS ಹಾಗೂ ವಿಮಾನ ನಿಲ್ದಾಣದ ಸುರಕ್ಷಾ ಸಿಬ್ಬಂದಿಯವರಿಬ್ಬರೂ ನಿಂದನೆಗೆ ಹೆಚ್ಚು ಪಾತ್ರರೆಂದು ಭಾವಿಸಿದರು, ಅದೂ ಅಲ್ಲದೆ ಶೇಕಡಾ ಇಪ್ಪತ್ತೆಂಟರಷ್ಟು ಜನಗಳು RMCP ಯನ್ನೇ ಹೆಚ್ಚಾಗಿ ಆಕ್ಷೇಪಿಸಬಹುದೆಂದು ನಂಬಿದರು. ಶೇಕಡಾ ಹದಿನೆಂಟರಷ್ಟು ಜನರು ಟ್ರಾನ್ಸಪೋರ್ಟ್ ಕೆನೆಡಾವನ್ನು ಹೆಸರಿಸಿದರು.[೬೩]
ಏರ್ ಇಂಡಿಯಾ ಬಾಂಬ್ ಸ್ಫೋಟವನ್ನು "ಕೆನೆಡಾದ ೯/೧೧" ಎಂದು ಪರಿಗಣಿಸಬಹುದೆಂದು ಮ್ಯಾಕ್ ಕ್ಲೀನ್ಸ್ ನ ಕೆನ್ ಮ್ಯಾಕ್ ಕ್ವೀನ್ ಮತ್ತು ಜಾನ್ ಗೆಡ್ಡೆಸ್ ತಿಳಿಸಿದರು. ಅವರು ಹೇಳಿದರು, "ಸತ್ಯಾಂಶದಲ್ಲಿ, ಅದು ಎಂದಿಗೂ ಅದಕ್ಕೆ ಹತ್ತಿರವಾಗಿಲ್ಲ. ಆ ದಿನಾಂಕ, ೨೩ ನೇ ಜೂನ್, ೧೯೮೫, ರಾಷ್ಟ್ರದ ಆತ್ಮದ ಮೇಲೆ ಆಳವಾದ ಗುರುತನ್ನೇನೂ ಮಾಡಿಲ್ಲ. ಆ ದಿನಗಳ ಘಟನೆಗಳು ನೂರಾರು ಮುಗ್ಧ ಜೀವನಗಳನ್ನು ನಾಶಗೊಳಿಸಿತು ಹಾಗೂ ಸಾವಿರಕ್ಕೂ ಮಿಗಿಲಾದವರ ಅದೃಷ್ಟವನ್ನೇ ಬದಲಾಯಿಸಿತು, ಆದರೆ ಅದು ಎಂದಿಗೂ ಸರ್ಕಾರದ ತಳಪಾಯವನ್ನು ಅಲುಗಾಡಿಸುವುದಾಗಲೀ ಅಥವಾ ಅದರ ರಾಜನೀತಿಗಳನ್ನು ಬದಲಾಯಿಸುವುದಾಗಲಿ ಮಾಡಲಿಲ್ಲ. ಅದು ಸಾಧ್ಯವಾಗದೇ ಇದ್ದರೂ, ಪ್ರಮುಖವಾಗಿ ಕೊನೆಗೆ, ಅಧಿಕಾರಯುತವಾಗಿ ಭಯೋತ್ಪಾದನೆಯ ಒಂದು ಕೃತ್ಯವೆಂದು ಒಪ್ಪಿಕೊಳ್ಳಲ್ಪಟ್ಟಿತು."[೬೪]
ಆ ದುರ್ಘಟನೆಯ ಬಲಿಪಶುಗಳ ಸ್ಮರಣಾರ್ಥ ಕೆನೆಡಾ ಮತ್ತು ಬೇರೆಲ್ಲಡೆಗಳಲ್ಲಿ ಸ್ಮಾರಕಗಳು ಸ್ಥಾಪಿಸಲ್ಪಟ್ಟವು ೧೯೮೬ ರಲ್ಲಿ, ಬಾಂಬ್ ಸ್ಫೋಟದ ಮೊದಲ ವಾರ್ಷಿಕೋತ್ಸವದಲ್ಲಿ, ಐರ್ಲೆಂಡ್, ವೆಸ್ಟ್ ಕಾರ್ಕ್ ನ ಅಹಕಿಸ್ತಾದಲ್ಲಿ ಸ್ಮಾರಕವು ಅನಾವರಣಗೊಳಿಸಲ್ಪಟ್ಟಿತು.[೬೫] ತದನಂತರ, ಬ್ರಿಟಿಷ್ ಕೊಲಂಬಿಯಾದ, ವ್ಯಾಂಕುವಾರ್ ನಲ್ಲಿ ಸ್ಟ್ಯಾನ್ಲೆ ಪಾರ್ಕ್ ನಲ್ಲಿ ಉದ್ಯಾನವನದಲ್ಲಿ ಒಂದು ಸ್ಮಾರಕದ ಭಾಗವಾಗುವಂತಹ ಒಂದು ಆಟದ ಮೈದಾನದಲ್ಲಿ ೧೧ ನೇ ಆಗಸ್ಟ್ ೨೦೦೬ ರಂದು ಅಡಿಪಾಯ ತೆಗೆಯುವ ಕೆಲಸ ನಡೆಯಿತು.[೬೬] ಕೊಲ್ಲಲ್ಪಟ್ಟ ಹೆಚ್ಚು ಜನಗಳು ವಾಸಿಸುತ್ತಿದ್ದ ನಗರ, ಟೋರಾಂಟೊ ದಲ್ಲಿ ೨೨ ನೇ ಜೂನ್ ೨೦೦೭ ರಂದು ಮತ್ತೊಂದು ಸ್ಮಾರಕವು ಅನಾವರಣಗೊಳಿಸಲ್ಪಟ್ಟಿತು. ಈ ಸ್ಮಾರಕವು ಎಲ್ಲಾ ರಾಜ್ಯಗಳು ಮತ್ತು ಸಂಸ್ಥಾನಗಳಿಂದ ಹಾಗೂ ಇತರೆ ಬಲಿಪಶುಗಳ ರಾಜ್ಯಗಳಿಂದಲೂ ಸಹ ಕಲ್ಲುಗಳನ್ನು ಹೊಂದಿರುವಂತಹ ತಳ, ಒಂದು ಸೂರ್ಯನ ನೆರಳಿನ ಗಡಿಯಾರ, ಐರ್ಲೆಂಡಿನ ಕಡೆ ಅಭಿಮುಖವಾಗಿರುವ ಮತ್ತು ಮರಣಿಸಿದವರ ಹೆಸರುಗಳನ್ನು ಹೊತ್ತಿರುವ ಒಂದು ಗೋಡೆಯ ವೈಶಿಷ್ಟ್ಯತೆಗಳನ್ನು ಹೊಂದಿದೆ.[೬೭]
೨೦೧೦ ರಲ್ಲಿ ಸಾರ್ವಜನಿಕ ತನಿಖೆಯ ನ್ಯಾಯಾಂಗೀಯ ನಿರ್ಣಯಗಳ ಬಿಡುಗಡೆಯ ನಂತರ, "ಅನುಸರಿಸಿದಂತಹ ವ್ಯಾಜ್ಯದಾರಿಕೆಯ ಕೈತಪ್ಪಿಹೋದ ತಪ್ಪುಗಳು, ಹಾಗೂ ಬಾಂಬ್ ಸ್ಫೋಟನಕ್ಕೆ ದಾರಿ ಮಾಡಿಕೊಟ್ಟಂತಹ ವಿಮಾನ ನಿಲ್ದಾಣದ ಸುರಕ್ಷತೆ ಮತ್ತು ಪೋಲಿಸಿನವರ, ಬೇಹುಗಾರಿಕೆಯ ಒಮ್ಮೆಲೆ ಅನಾಹತವನ್ನುಂಟು ಮಾಡಿದ ವಿಫಲತೆಗಳನ್ನು ಒಪ್ಪಿಕೊಳ್ಳುತ್ತೇನೆ" ಎಂದು ಅನಾಹುತದ ೩೫ ನೇಯ ವಾರ್ಷಿಕೋತ್ಸವದಲ್ಲಿ ಹಾಗೂ ಅಧಿಕಾರದಲ್ಲಿರುವ ಮಂತ್ರಿ ಮಂಡಲದ ಪರವಾಗಿ ಕ್ಷಮಾಪಣೆಯನ್ನು ಕೇಳುವುದಾಗಿ ಸಮೂಹ ಮಾಧ್ಯಮಗಳಲ್ಲಿ ಸ್ಟೀಫನ್ ಹಾರ್ಪರ್ ರವರು ಘೋಷಿಸಿದರು.[೫೭]
ಮಾಧ್ಯಮಗಳಲ್ಲಿ ಜ್ಞಾಪಕಗಳು
[ಬದಲಾಯಿಸಿ]ಕೆನೆಡಾದ ದೂರದರ್ಶನದ ವೀಕ್ಷಕರಿಗಾಗಿ ಬಾಂಬ್ ಸ್ಫೋಟದ ಬಗ್ಗೆ ಸಾಕ್ಷ್ಯಚಿತ್ರಗಳು ಮಾಡಲ್ಪಟ್ಟವು. ಸಿಬಿಸಿ ದೂರದರ್ಶನವು ಸ್ಟುರಿಯಾ ಗುನ್ನರ್ಸನ್ ರಿಂದ ನಿರ್ದೇಶಿಸಲ್ಪಟ್ಟ, ಆ ದುರ್ಘಟನೆಯ ಬಗ್ಗೆ ಒಂದು ಸಾಕ್ಷ್ಯಚಿತ್ರ, ಫ್ಲೈಟ್ ೧೮೨ ರ ಚಿತ್ರೀಕರಣದ ಪ್ರಾರಂಭದ ಬಗ್ಗೆ ಘೋಷಿಸಿತು.[೬೮] ಏಪ್ರಿಲ್ ೨೦೦೮ ರಲ್ಲಿ, ಟೋರಾಂಟೊ ದಲ್ಲಿನ ಹಾಟ್ ಡಾಕ್ಸ್ ಕೆನೇಡಿಯನ್ ಇಂಟರ್ನಾಷನಲ್ ಡಾಕ್ಯುಮೆಂಟರಿ ಫೆಸ್ಟಿವಲ್ ನಲ್ಲಿ ತನ್ನ ಮೊದಲ ಪ್ರದರ್ಶನದ ಮುಂಚೆ ಅದನ್ನು ಏರ್ ಇಂಡಿಯಾ ೧೮೨ ಎಂದು ಬದಲಾಯಿಸಲಾಯಿತು. ಆನಂತರ, ಅದನ್ನು ಜೂನ್ ನಲ್ಲಿ ಸಿಬಿಸಿ ದೂರದರ್ಶನದಲ್ಲಿ ಟಿವಿಯಲ್ಲಿ ಮೊದಲ ಪ್ರದರ್ಶನ ಮಾಡಲಾಯಿತು.[೬೯] ಅನೇಕ ಉಡ್ಡಯನದ ಅಪಘಾತಗಳು ಹಾಗೂ ಘಟನೆಗಳ ಬಗ್ಗೆ ತನಿಖೆ ಮಾಡುವ ಒಂದು ಟಿವಿ ಪ್ರದರ್ಶನ, ಮೇಡೇ, ಸಹ ತನ್ನ ಧಾರಾವಾಹಿಯ ಒಂದು ಕಂತಿನಲ್ಲಿ ಬಾಂಬ್ ಸ್ಫೋಟದ ಬಗ್ಗೆ "ಎಕ್ಸಪ್ಲೋಸಿವ್ ಎವಿಡೆನ್ಸ್" ಎಂಬ ಸಾಕ್ಷ್ಯಚಿತ್ರ ನಿರ್ಮಿಸಿತು.[೭೦]
ಅದು ನಡೆದಾಗಿನಿಂದ ದಶಕಗಳುದ್ದಕ್ಕೂ ಬಾಂಬ್ ಸಿಡಿತದ ಬಗ್ಗೆ ಅನೇಕ ಪತ್ರಕರ್ತರು ವಿಮರ್ಶೆಗಳನ್ನು ಮಾಡುತ್ತಲೇ ಇದ್ದಾರೆ. ಕೆನೆಡಾದ ಪತ್ರಕರ್ತರಾದ ಗ್ಲೋಬ್ ಮತ್ತು ಮೇಲ್ ನಿಂದ, ಬ್ರಿಯಾನ್ ಮ್ಯಾಕ್ ಆಂಡ್ರೂ ಜಾಗೂ ಜುಹೇರ್ ಕಾಶ್ಮೇರಿ ಸಾಫ್ಟ್ ಟಾರ್ಗೆಟ್ ಬರೆದರು. CSIS ಮತ್ತು ಕೆನೆಡಾದಲ್ಲಿನ ಇಂಡಿಯನ್ ಹೈ ಕಮಿಷನ್ ಗೆ ಈ ಮೊದಲೇ ಘಟನೆಯ ಬಗ್ಗೆ ತಿಳಿದಿತ್ತೆಂದು ಆಪಾದಿಸುತ್ತಾ ನಿಜವಾದ ಬಾಂಬ್ ಸ್ಫೋಟನದ ಮೊದಲು ನಡೆದ ಅನೇಕ ಚಟುವಟಿಕೆಗಳ ವಿವರಗಳನ್ನು ಪತ್ರಿಕೋದ್ಯಮಿಗಳು ಹಾಜರು ಪಡಿಸಿದರು. ಕೆನೆಡಾದಲ್ಲಿನ ಇಂಡಿಯನ್ ಹೈ ಕಮಿಷನ್ RCMP ಹಾಗೂ CSIS ಅನ್ನು ಅನೇಕ ವರ್ಷಗಳ ವರೆಗೆ ದಾರಿತಪ್ಪಿಸಿತೆಂದೂ ಮತ್ತು ಬೇಹುಗಾರಿಕೆ ನಡೆಸುವ ಹಾಗೂ ಕೆನೆಡಾದಲ್ಲಿನ ಸಿಖ್ ಸಮುದಾಯವನ್ನು ಅಸ್ಥಿರಗೊಳಿಸುವ ಕೆಲಸ ಮಾಡಿದರೆಂದು ಲೇಖಕರು ಸಹ ಆಪಾದಿಸುತ್ತಾರೆ. 1992 ರಲ್ಲಿ, ಏರ್ ಇಂಡಿಯಾ ಬಾಂಬ್ ಸ್ಫೋಟದಲ್ಲಿ ಭಾರತ ಸರ್ಕಾರವು ಭಾಗೀದಾರನಾಗಿತ್ತೆಂಬುದಕ್ಕೆ ಪುಸ್ತಕದಲ್ಲಿ ಮಾಡಲ್ಪಟ್ಟ ಆಪಾದನೆಗಳನ್ನು ಬೆಂಬಲಿಸಲು ಅದು ಯಾವುದೇ ಸಾಕ್ಷಿ ಹೊಂದಿರಲಿಲ್ಲವೆಂದು ರಾಯಲ್ ಕೆನೇಡಿಯನ್ ಮೌಂಟೆಡ್ ಪೋಲಿಸರು ನಿರ್ದೇಶಿಸಿದರು.[೭೧] ಬಾಂಬ್ ಸ್ಫೋಟದ ಎಂಟು ತಿಂಗಳ ನಂತರ, ಪ್ರಾವಿನ್ಸ್ ವರ್ತಮಾನ ಪತ್ರಿಕೆಯ ವರದಿಗಾರರಾದ ಸಲೀಮ್ ಜೀವ ಅವರು "ಡೆತ್ ಆಫ್ ಏರ್ ಇಂಡಿಯಾ ಫ್ಲೈಟ್ ೧೮೨" ಪ್ರಕಟಿಸಿದರು.[೭೨] ಮೇ ೨೦೦೫ ರಲ್ಲಿ ವ್ಯಾಂಕುವಾರ್ ಸನ್ ನ ವರದಿಗಾರರಾದ ಕಿಮ್ ಬೋಲಾನ್ ರಿಂದ, ಲಾಸ್ ಆಫ್ ಫೇಯಿತ್: ಹೌ ದಿ ಏರ್ ಇಂಡಿಯಾ ಬಾಂಬರ್ಸ್ ಗಾಟ್ ಅವೇ ವಿಥ್ ಮರ್ಡರ್ ಪ್ರಕಾಶಿಸಲ್ಪಟ್ಟಿತು.[೭೩] ಮೇ ೨೦೦೭ ರಲ್ಲಿ, ಜೀವ ಹಾಗೂ ಜೊತೆ ವರದಿಗಾರ ಡಾನ್ ಹೌಕ ರು ಮಾರ್ಜಿನ್ ಆಫ್ ಟೆರರ್: ಎ ರಿಪೋರ್ಟರ್ಸ್ ಟ್ವೆಂಟಿ-ಇಯರ್ ಒಡೆಸ್ಸಿ ಕವರಿಂಗ್ ದಿ ಟ್ರಾಜಿಡೀಸ್ ಆಫ್ ದಿ ಏರ್ ಇಂಡಿಯಾ ಬಾಂಬಿಂಗ್ ಪ್ರಕಟಿಸಿದರು.[೭೪]
ಪುಸ್ತಕಗಳೂ ಸಹ ಪ್ರಕಟಿಸಲ್ಪಟ್ಟವು. ಬಾಂಬ್ ಸ್ಫೋಟನದಲ್ಲಿ ತನ್ನ ಸಂಪೂರ್ಣ ಕುಟುಂಬದಲ್ಲಿನ ಎಲ್ಲರನ್ನೂ ಕಳೆದು ಕೊಂಡ ಭಾರತೀಯ ಮೂಲದ ಕೆನೆಡಾದ ಮಹಿಳೆ, ದಿ ಮಿಡ್ಲ್ ಮ್ಯಾನ್ ಆಂಡ್ ಅದರ್ ಸ್ಟೋರೀಸ್ ಎಂಬ ಸಂಗ್ರಹದಲ್ಲಿ ಭಾರತಿ ಮುಖರ್ಜಿ ಯವರಿಂದ 'ದಿ ಮ್ಯಾನೇಜ್ಮೆಂಟ್ ಆಫ್ ಗ್ರೀಫ್' ಎಂಬ ಪುಸ್ತಕದಲ್ಲಿ ಆಕೆ ತಮ್ಮ ಅನುಭವಗಳನ್ನು ವಿವರಿಸಿದ್ದಾರೆ. ಮುಖರ್ಜಿ ಯವರು ಸಹ ಲೇಖಕರಾಗಿ, ದಿ ಸಾರೋ ಆಂಡ್ ಟೆರರ್: ದಿ ಹೌಂಟಿಂಗ್ ಲೆಗಾಸಿ ಆಫ್ ದಿ ಏರ್ ಇಂಡಿಯಾ ಟ್ರಾಜಿಡಿ (೧೯೮೭) ತಮ್ಮ ಪತಿ ಕ್ಲಾರ್ಕ್ ಬ್ಲೇಸಿ ಯವರ ಜೊತೆ ಬರೆದಿದ್ದಾರೆ.[೭೫] ಏರ್ ಇಂಡಿಯಾ ದುರಂತದ ಕೆನೆಡಾದ ಸಾಂಸ್ಕೃತಿಕ ಮುಖ್ಯ ಆಚಾರವಿಚಾರಗಳ ನಿರಾಕರಣೆಯಿಂದ ಸ್ಫೂರ್ತಿಗೊಂಡು, ನೀಲ್ ಬಿಸೂನ್ಧಾತ್ , ದಿ ಸೋಲ್ ಆಫ್ ಆಲ್ ಗ್ರೇಟ್ ಡಿಜೈನ್ಸ್ ಎಂಬ ಪುಸ್ತಕವನ್ನು ಬರೆದರು.[೭೬]
ಘಟನೆಗಳ ಕಾಲರೇಖೆ
[ಬದಲಾಯಿಸಿ]- ಒಂದು ಸಂಕ್ಷಿಪ್ತ ಕಾಲರೇಖೆಗೆ, ಟೈಮ್ ಲೈನ್ ಆಫ್ ದಿ ಏರ್ ಇಂಡಿಯಾ ಫ್ಲೈಟ್ ೧೮೨ ರ ಅಫೇರ್ ಅನ್ನು ನೋಡಿರಿ.
ಇವನ್ನೂ ವೀಕ್ಷಿಸಿ
[ಬದಲಾಯಿಸಿ]- ಸಿಖ್ಖರ ಭಯೋತ್ಪಾದನೆ
- ವಾಣಿಜ್ಯದ ವಾಯುಯಾನದ ಅಪಘಾತಗಳು ಮತ್ತು ಘಟನೆಗಳ ಪಟ್ಟಿ
- ಇಂಡಿಯನ್ ಏರ್ ಲೈನ್ಸ್ ಉಡ್ಡಯನ ೮೧೪
- UTA ಉಡ್ಡಯನ ೭೭೨
- ಆಪರೇಶನ್ ಬ್ಲೂ ಸ್ಟಾರ್
- ಹರ್ಮಂದಿರ್ ಸಾಹಿಬ್
- ಇಂದಿರಾ ಗಾಂಧಿ
- ಕೆನಡಾದಲ್ಲಿನ ಸಿಖ್ಖರು
- ಯೆಲವರ್ತಿ ನಾಯುಡಮ್ಮ
- ಕೊರಿಯನ್ ಏರ್ ಲೈನ್ಸ್ ಉಡ್ಡಯನ ೦೦೭
ಉಲ್ಲೇಖಗಳು
[ಬದಲಾಯಿಸಿ]- ↑ ಇನ್ ಡೆಪ್ತ್ : ಏರ್ ಇಂಡಿಯಾ – ದಿ ವಿಕ್ಟಿಮ್ಸ್, ಸಿಬಿಸಿ ನ್ಯೂಸ್ ಆನ್ ಲೈನ್, ೧೬ ನೇ ಮಾರ್ಚ್ ೨೦೦೫
- ↑ ೨.೦ ೨.೧ CBC News (17 June 2010). "Air India case marred by 'inexcusable' errors". CBC. Archived from the original on 19 June 2010. Retrieved 22 June 2010.
- ↑ CBC News (5 May 2003). "Agent recalls checking fateful Air India bag". CBC. Retrieved 25 June 2010.
- ↑ "Keel, Paul (June 24, 1985). "Jumbo crashes killing 325". London: The Guardian.
{{cite news}}
: Unknown parameter|coauthors=
ignored (|author=
suggested) (help)[ಶಾಶ್ವತವಾಗಿ ಮಡಿದ ಕೊಂಡಿ] - ↑ "Two held for '85 Kanishka crash". The Tribune. Associated Press. October 28, 2000.
- ↑ "Special Report: Air India Flight 182". Archived from the original on 2009-10-07. Retrieved 2009-09-16.
- ↑ "ಎಕ್ಸಪ್ಲೋಸಿವ್ ಎವಿಡೆನ್ಸ್." ಮೇಡೇ .
- ↑ "CVR transcript Air India Flight 182 – 23 JUN 1985". http://aviation-safety.net/index.php Aviation Safety Network. Archived from the original on 2010-04-03. Retrieved 2008-07-21.
{{cite web}}
: External link in
(help)|publisher=
- ↑ Vancouver, The (2007-09-09). "Portrait of a bomber". Canada.com. Archived from the original on 2009-07-29. Retrieved 2010-06-18.
- ↑ ಏರ್ ಇಂಡಿಯಾ ಬೋಯಿಂಗ್ ೭೪೭ ಏರ್ ಕ್ರಾಫ್ಟ್ VT-EFO, "ಕಾನಿಷ್ಕ" ದ ಅಪಘಾತದ ಬಗ್ಗೆ ನ್ಯಾಯಾಲಯ ತನಿಖೆ ಮಾಡುವ ಆಕಸ್ಮಿಕದ ವರದಿ ೨೩ ನೇ ಜೂನ್ ೧೯೮೫ ರಂದು, ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ. ಬಿ. ಎನ್. ಕ್ರಿಪಾಲ್, ನ್ಯಾಯಾಧೀಶರು, ದೆಹಲಿ ಉಚ್ಚನ್ಯಾಯಾಲಯ , ೨೬ ನೇ ಫೆಬ್ರುವರಿ ೧೯೮೬
- ↑ "ಆರ್ಕೈವ್ ನಕಲು". Archived from the original on 2006-02-13. Retrieved 2010-09-08.
{{cite web}}
: CS1 maint: bot: original URL status unknown (link) - ↑ "The Victims". CBC. 16 March 2010. Archived from the original on 18 March 2005. Retrieved 24 June 2010.
- ↑ Raman, B. (20 June 2010). "AFTER KANISHKA, MUMBAI 26/11----AFTER 26/11 ?". South Asia Analysis Group. Retrieved 24 June 2010.
- ↑ Federal Court of Canada. "Affidavit of Archie M. Barr" (PDF). CBC. Archived from the original (PDF) on 30 March 2004. Retrieved 25 June 2010.
- ↑ "Canadian Judge Says Sikh Guilty In 2 Bomb Deaths". Orlando Sentinel. 11 May 1991. Archived from the original on 6 ಏಪ್ರಿಲ್ 2012. Retrieved 24 June 2010.
{{cite news}}
: Italic or bold markup not allowed in:|publisher=
(help) - ↑ "IN DEPTH: AIR INDIA Key characters". CBC News. 15 March 2005. Archived from the original on 18 March 2005. Retrieved 24 June 2010.
- ↑ "Air India suspects are not guilty". BBC. 16 March 2005. Retrieved 24 June 2010.
- ↑ "IN DEPTH: AIR INDIA Crime Files: The Mole". CBC News. 27 August 2003. Archived from the original on 5 February 2004. Retrieved 24 June 2010.
- ↑ Krauss, Clifford (17 March 2010). "Canadian Sikhs Are Cleared in 1985 Air India Bombing". ದ ನ್ಯೂ ಯಾರ್ಕ್ ಟೈಮ್ಸ್. Retrieved 24 June 2010.
{{cite news}}
: Italic or bold markup not allowed in:|publisher=
(help) - ↑ "Crown attacks credibility of defence witness at Air India trial". CBC News. 8 June 2004. Archived from the original on 15 August 2012. Retrieved 24 June 2010.
- ↑ ೨೧.೦ ೨೧.೧ ೨೧.೨ "Air India inquiry will hear of alleged Parmar confession". CBC News. 23 September 2007. Retrieved 2007-09-25.
- ↑ ೨೨.೦ ೨೨.೧ ೨೨.೨ ೨೨.೩ Kim Bolan, (25 September 2007). "Confession had false details, inquiry told: RCMP 'fully' checked out alleged Parmar confession, inspector tells commissioner". Vancouver Sun. Archived from the original on 22 ಅಕ್ಟೋಬರ್ 2007.
{{cite news}}
: CS1 maint: extra punctuation (link) - ↑ "Timeline". CTV News. Archived from the original on 22 ಮಾರ್ಚ್ 2012. Retrieved 24 June 2010.
- ↑ ೨೪.೦ ೨೪.೧ ೨೪.೨ ೨೪.೩ ೨೪.೪ Vikram Jit Singh (issue dated 2007-08-04). "Operation Silence". Tehelka. Archived from the original on 2012-09-12. Retrieved 2007-07-27.
{{cite news}}
: Check date values in:|date=
(help) - ↑ ೨೫.೦ ೨೫.೧ Salim Jiwa (28 April 2003). "Unsolved mysteries as Air India trial begins". flight182.com. Archived from the original on 21 ಅಕ್ಟೋಬರ್ 2007. Retrieved 8 ಸೆಪ್ಟೆಂಬರ್ 2010.
- ↑ Summers, Chris (16 March 2010). "Deadly puzzle remains a mystery". BBC. Retrieved 24 June 2010.
- ↑ "Key witness was spurred to get information: defence". The Tribune. 26 November 2003. Retrieved 24 June 2010.
{{cite news}}
: Italic or bold markup not allowed in:|publisher=
(help) - ↑ Robert Matas (26 August 2004). "Mystery men key to plot, Air-India defence says". The Globe and Mail Print Edition, Page A6. Retrieved 2007-09-24.
- ↑ Saklikar, Renee (23 June 2010). "The lesson from Air India Flight 182: Curiosity can save us". The Georgia Straight. Retrieved 24 June 2010.
{{cite news}}
: Italic or bold markup not allowed in:|publisher=
(help) - ↑ Fraser, Keith (10 August 2009). "Reyat's Air India perjury trial delayed to post-Olympics". The Province. Retrieved 24 June 2010.
{{cite news}}
: Italic or bold markup not allowed in:|publisher=
(help)[ಶಾಶ್ವತವಾಗಿ ಮಡಿದ ಕೊಂಡಿ] - ↑ "Malik, Bagri not guilty in Air India bombings". CTV News. 16 March 2005. Archived from the original on 3 ಅಕ್ಟೋಬರ್ 2006. Retrieved 24 June 2010.
- ↑ Fong, Petti (24 June 2010). "Air India families wait for answers 25 years later". Toronto Star.
{{cite news}}
: Italic or bold markup not allowed in:|publisher=
(help) - ↑ Bolan, Kim (8 March 2010). "Inderjit Singh Reyat Air India perjury trial postponed, no reasons disclosed". Vancouver Sun via Times-Colonist. Retrieved 24 June 2010.
{{cite news}}
: Italic or bold markup not allowed in:|publisher=
(help)[ಶಾಶ್ವತವಾಗಿ ಮಡಿದ ಕೊಂಡಿ] - ↑ ಕೋರ್ಟ್ ರೂಮ್ ೨೦: http://www.ag.gov.bc.ca/courts/court-room20/index.htm Archived 2007-01-25 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "Air India trial gets $7.2M high-tech courtroom". The Canadian Press via CP24. 16 August 2002. Archived from the original on 3 ಅಕ್ಟೋಬರ್ 2011. Retrieved 24 June 2010.
- ↑ "Supreme Court of British Columbia: Her Majesty the Queen Against Ripudaman Singh Malik and Ajaib Singh Bagri". Courts.gov.bc.ca. Retrieved 2009-08-10.
- ↑ "Malik, Bagri asked to pay Air India legal fees". CBC News. 25 November 2005. Retrieved 24 June 2010.
- ↑ https://web.archive.org/web/20080227111444/http://www.majorcomm.ca/documents/dossier2_ENG.pdf DOSSIER 2 ಟೆರೊರಿಸಮ್, ಇಂಟೆಲಿಜೆನ್ಸ್ ಮತ್ತು ಲಾ ಎನ್ಫೋರ್ಸಮೆಂಟ್ - ಸಿಖ್ ಭಯೋತ್ಪಾದನೆಗೆ ಕೆನೆಡಾದ ಪ್ರತಿಕ್ರಿಯೆ
- ↑ Ward, Doug (12 March 2010). "New jury for Inderjit Singh Reyat perjury case on May 17". Vancouver Sun via Calgary Herald. Archived from the original on 25 ಏಪ್ರಿಲ್ 2010. Retrieved 24 June 2010.
{{cite news}}
: Italic or bold markup not allowed in:|publisher=
(help) - ↑ Bolan, Kim (9 July 2008). "Released Air India bomber rejoins family". National Post. Retrieved 24 June 2010.
{{cite news}}
: Italic or bold markup not allowed in:|publisher=
(help)[ಶಾಶ್ವತವಾಗಿ ಮಡಿದ ಕೊಂಡಿ] - ↑ ಏರ್ ಇಂಡಿಯಾ ಬಾಂಬ್ ತಯಾರಕನಿಗೆ ಪೇರೋಲ್ ನಿರಾಕರಿಸಲಾಯಿತು, ಕೆನೆಡಾದ ಪತ್ರಿಕಾಲಯದಿಂದ ಕಡತಗಳ ಸಹಿತ ಸಿಬಿಸಿ ವಾರ್ತೆಗಳು, ೩ ನೇ ಜುಲೈ ೨೦೦೭.
- ↑ "Air India bomber's perjury trial stalled as jury dismissed". Thaindian.com. Archived from the original on 2010-05-20. Retrieved 2010-06-18.
- ↑ "The RDX Files". India Today,. 2001-02-01. Archived from the original on 2010-10-09. Retrieved 2010-09-08.
{{cite news}}
: CS1 maint: extra punctuation (link) - ↑ ೪೪.೦ ೪೪.೧ {{cite news |url=http://www.cbc.ca/news/background/airindia/documents/tab3.pdf |title=Air India Investigation: SIRC Breifing |author=[[Royal Canadian Mounted Police|date=11 February 1993 |work= |publisher=CBC |accessdate=24 June 2010|archiveurl=https://web.archive.org/web/20040330175108/http://www.cbc.ca/news/background/airindia/documents/tab3.pdf%7Carchivedate=30 March 2004}}
- ↑ "The Air India Trial" (PDF). University of Toronto Faculty of Law. June 2005. Archived from the original (PDF) on 28 ಜೂನ್ 2010. Retrieved 24 June 2010.
- ↑ Noronha, Charmaine (17 June 2010). "Canadian officials dropped ball before Air India bombing, inquiry finds". Associated Press via The Seattle Times. Retrieved 24 June 2010.
{{cite news}}
: Italic or bold markup not allowed in:|publisher=
(help) - ↑ "CBC News In Depth: Air India – Bombing of Air India Flight 182". Cbc.ca. Retrieved 2009-08-10.
- ↑ "Scanned Document" (PDF). CBC News. Archived from the original (PDF) on 2005-04-18. Retrieved 2009-08-10.
- ↑ Milewski, Terry (28 June 2007). "Sikh politics in Canada". CBC News. Retrieved 24 June 2010.
- ↑ "Former CSIS chief wishes tapes weren't erased". CTV News. 19 September 2007. Archived from the original on 25 ಸೆಪ್ಟೆಂಬರ್ 2011. Retrieved 24 June 2010.
- ↑ "Scanned Document" (PDF). CBC News. Archived from the original (PDF) on 2004-03-30. Retrieved 2009-08-10.
- ↑ "Terrorism & It's Effects". Google Books. Retrieved 24 June 2010.
- ↑ Summers, Chris (17 March 2005). "Call for police to solve Sikh murder". BBC. Retrieved 24 June 2010.
- ↑ ೫೪.೦ ೫೪.೧ Bolan, Kim (18 November 2009). "Tara Singh Hayer murder probe still active, 11 years later". The Vancouver Sun. Archived from the original on 12 ಮಾರ್ಚ್ 2010. Retrieved 24 June 2010.
{{cite news}}
: Italic or bold markup not allowed in:|publisher=
(help) - ↑ Vancouver Police Polygraph Unit (28 October 2000). "Interview of Bagri, Ajaib Singh" (PDF). CBC. Archived from the original (PDF) on 30 March 2004. Retrieved 24 June 2010.
- ↑ "Easter denies CSIS spied on Air India bombers". CTV News. 3 June 2003. Archived from the original on 27 ಜುಲೈ 2011. Retrieved 24 June 2010.
- ↑ ೫೭.೦ ೫೭.೧ MacCharles, Tonda (23 June 2010), "Stephen Harper will say 'sorry' to Air India families", Toronto Star, retrieved 23 June 2010
- ↑ CBC News (1 May 2006). "Harper launches Air India inquiry". CBC. Retrieved 22 June 2010.
- ↑ Government of Canada (May 1, 2006,). "ACommission of Inquiry into the Investigation of the Bombing of Air India Flight 182". Retrieved 23 June 2010.
{{cite news}}
: Check date values in:|date=
(help); line feed character in|title=
at position 74 (help)CS1 maint: extra punctuation (link) - ↑ CBC News (21 June 2006). "Air India inquiry will reassure victims' families, Major vows". CBC. Retrieved 22 June 2010.
- ↑ Government of Canada (May 1, 2006,). "A Commission of Inquiry into the Investigation of the Bombing of Air India Flight 182". Archived from the original on 20 ಜೂನ್ 2010. Retrieved 23 June 2010.
{{cite news}}
: Check date values in:|date=
(help); line feed character in|title=
at position 75 (help)CS1 maint: extra punctuation (link) - ↑ "Queen's Privy Council of Canada: Address by Prime Minister Paul Martin at the Air India Memorial Ceremony". Pco.gc.ca. 10 October 2008. Retrieved 8 October 2009.[ಶಾಶ್ವತವಾಗಿ ಮಡಿದ ಕೊಂಡಿ]
- ↑ ಏರ್ ಇಂಡಿಯಾ ಬಾಂಬ್ ಸ್ಫೋಟದಲ್ಲಿ ಕೆನೆಡಾದವರು ಆಕ್ಷೇಪಣೆಯನ್ನು ತೂಗಿನೋಡಿದರು Archived 2007-05-17 ವೇಬ್ಯಾಕ್ ಮೆಷಿನ್ ನಲ್ಲಿ., ಪತ್ರಿಕಾ ಪ್ರಕಟಣೆ, ಆಂಗುಸ್ ರೀಡ್, ಗ್ಲೋಬಲ್ ಮಾನಿಟರ್, 14 ಮೇ 2006ರಂದು ಪರಿಷ್ಕರಿಸಲಾಗಿದೆ.
- ↑ ಮ್ಯಾಕ್ ಕ್ವೀನ್, ಕೆನ್ ಮತ್ತು ಜಾನ್ ಗೆಡ್ಡೆಸ್. "ಏರ್ ಇಂಡಿಯಾ: 22 ವರ್ಷಗಳ ನಂತರ, ಸತ್ಯಕ್ಕೀಗ ಕಾಲ ಕೂಡಿಬಂದಿದೆ Archived 2011-09-16 ವೇಬ್ಯಾಕ್ ಮೆಷಿನ್ ನಲ್ಲಿ.." ಮ್ಯಾಕ್ ಲಿಯನ್ಸ್ . ೨೫ ಮೇ ೨೦೦೭, ೨೦೦೯ ಡಿಸೆಂಬರ್ ೧೨ ರಂದು ಪುನಃ ಸಂಪಾದಿಸಲಾಯಿತು.
- ↑ "Minister Martin to remember the victims of the 1985 bombing of Air India Flight 182". Department of Foreign Affairs. 23 June 2010. Retrieved 24 June 2010.
- ↑ CBC News (11 August 2006). "Vancouver groundbreaking held for Air India memorial". CBC. Retrieved 22 June 2010.
- ↑ ಏರ್ ಇಂಡಿಯಾ ಸ್ಮಾರಕವನ್ನು ಟೊರಾಂಟೊದಲ್ಲಿ ಅನಾವರಣಗೊಳಿಸಲಾಯಿತು Archived 2007-10-22 ವೇಬ್ಯಾಕ್ ಮೆಷಿನ್ ನಲ್ಲಿ., ಮಾರ್ಕ್ ಮೆಡ್ಲೆ ಅವರಿಂದ, ಕ್ಯಾನ್ ವೆಸ್ಟ್ ನ್ಯೂಸ್ ಸರ್ವೀಸ್, 22 ಜೂನ್ 2007
- ↑ ಏರ್ ಇಂಡಿಯಾ ಭೀಕರ ಅಪಘಾತದ ಬಗ್ಗೆ ಸಿಬಿಸಿ ಯಿಂದ ಮಾಡಲ್ಪಟ್ಟ ಸಾಕ್ಷ್ಯಚಿತ್ರ, ಸಿಬಿಸಿ ಆರ್ಟ್ಸ್, ೨೨ ಜೂನ್ ೨೦೦೭.
- ↑ "Air India 182". CBC News. 13 June 2010. Retrieved 24 June 2010.
- ↑ "Mayday : Explosive Evidence". Discovery Channel. Archived from the original on 24 ಫೆಬ್ರವರಿ 2010. Retrieved 24 June 2010.
- ↑ ಏರ್ ಇಂಡಿಯಾ ಫ್ಲೈಟ್ ೧೮೨ ರಿಂದ ಬಾಂಬ್ ಸಿಡಿತದ ತನಿಖೆಗೆ ನೇಮಿಸಲ್ಪಟ್ಟ ವಿಚಾರಣಾ ಆಯೋಗ, ಟೆರೊರಿಸಮ್, ಇಂಟೆಲಿಜೆನ್ಸ್ ಮತ್ತು ಲಾ ಎನ್ಫೋರ್ಸಮೆಂಟ್ - ಸಿಖ್ ಭಯೋತ್ಪಾದನೆಗೆ ಕೆನೆಡಾದ ಪ್ರತಿಕ್ರಿಯೆ [೧] ಡೋಸ್ಸಿಯರ್ 2)
- ↑ "The death of Air India Flight 182". Google Books. Retrieved 24 June 2010.
- ↑ ISBN 978-0-7710-1131-3
- ↑ ISBN 978-1-55263-772-2
- ↑ "American Author Bharati Mukherjee in Istanbul". United States Department of State. Archived from the original on 27 ಮೇ 2010. Retrieved 24 June 2010.
- ↑ ISBN 978-1-897151-32-7 "The Soul of All Great Designs at Cormorant Books". Cormorantbooks.com. Archived from the original on 2009-08-12. Retrieved 2009-08-10.
ಬಾಹ್ಯ ಕೊಂಡಿಗಳು
[ಬದಲಾಯಿಸಿ]This article contains embedded lists that may be poorly defined, unverified or indiscriminate. (August 2010) |
Photos of VT-EFO at Airliners.net |
- ಏರ್ ಇಂಡಿಯಾ ಕಮಿಷನ್ - ಕೆನೆಡಾ ಸರ್ಕಾರ
- ತೀರ್ಪು - ನ್ಯಾಯ ತೀರ್ಮಾನಕ್ಕೆ ಕಾರಣಗಳು, ಆರ್. ವಿ ಮಲಿಕ್ ಮತ್ತು ಬಾಗ್ರಿ
- ಏರ್ ಇಂಡಿಯಾ ಸ್ಫೋಟದ ಹಿನ್ನೆಲೆ - ಸಿಬಿಸಿ.ಸಿಎ
- ಏರ್ ಇಂಡಿಯಾದ ಅಪಘಾತದ ನಂತರ Archived 2007-11-10 ವೇಬ್ಯಾಕ್ ಮೆಷಿನ್ ನಲ್ಲಿ.- www. Canada.com ನ ಏರ್ ಇಂಡಿಯಾ ಪತ್ರಾಗಾರ
- ಫ್ಲೈಟ್ 182 ರಲ್ಲಿನ ಸಾವುಗಳ ಜಾಲತಾಣ - ವರದಿಗಾರ ಹಾಗೂ ಲೇಖಕ ಸಲೀಮ್ ಜೀವ ರಿಂದ ಸಾಮ್ಯದ ತಾಣ
- ಸಿಬಿಸಿ ಡಿಜಿಟಲ್ ಪತ್ರಾಗಾರ - ಏರ್ ಇಂಡಿಯಾ ತನಿಖೆ
- Criminal Occurrence description at the Aviation Safety Network
- ಏರ್ ಇಂಡಿಯಾ ಫ್ಲೈಟ್ 182 ರಲ್ಲಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರ ಹೆಸರುಗಳು Archived 2008-06-29 ವೇಬ್ಯಾಕ್ ಮೆಷಿನ್ ನಲ್ಲಿ.
- Pages using gadget WikiMiniAtlas
- Pages using duplicate arguments in template calls
- CS1 errors: unsupported parameter
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- CS1 errors: external links
- CS1 maint: bot: original URL status unknown
- CS1 errors: markup
- CS1 maint: extra punctuation
- CS1 errors: dates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: invisible characters
- Pages using ISBN magic links
- Orphaned articles from ಮಾರ್ಚ್ ೨೦೧೯
- Articles with invalid date parameter in template
- All orphaned articles
- Articles needing additional references from June 2010
- All articles needing additional references
- Coordinates on Wikidata
- Articles with unsourced statements from April 2008
- Articles with unsourced statements from June 2010
- Articles needing cleanup from August 2010
- All pages needing cleanup
- Wikipedia list cleanup from August 2010
- Commons link is locally defined
- 1985 ರಲ್ಲಿ ಐರ್ಲೆಂಡ್
- 1985 ರಲ್ಲಿ ಭಾರತ
- 1991 ರಲ್ಲಿ ಕಾನೂನು
- 2003 ರಲ್ಲಿ ಕಾನೂನು
- 2005 ರಲ್ಲಿ ಕಾನೂನು
- 1985 ರಲ್ಲಿ ಆದ ವಾಯುಯಾನ ಅಪಘಾತಗಳು ಮತ್ತು ಘಟನೆಗಳು
- 1985 ರಲ್ಲಿ ಆದ ಭಯೋತ್ಪಾದಕ ಕೃತ್ಯಗಳು
- ಏರ್ ಇಂಡಿಯಾ ಉಡ್ಡಯನ 182
- ರಾಯಲ್ ಕೆನೇಡಿಯನ್ ಮೌಂಟೆಡ್ ಪೋಲಿಸ್
- ದುರಂತಗಳು