ಇಲಿಯಾನಾ ಡಿ ಕ್ರೂಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಲೀನಾ ಡಿ'ಕ್ರುಜ್
ರೈಡ್ ಚಿತ್ರದ ಪ್ರಚಾರ ಸಂದರ್ಭದಲ್ಲಿ ಇಲಿನಾ(೨೦೧೮) .
Born೧ ನವೆಂಬರ್ ೧೯೮೭
Nationalityಪೋರ್ಚುಗೀಸ್
Occupation(s)ನಟಿ, ಮಾಡೆಲ್
Years active೨೦೦೬-
Parents
  • ರೊನಾಲ್ಡೊ ಡಿ'ಕ್ರುಜ್ (father)
  • ಸಮೀರಾ ಡಿ'ಚ್ರುಜ್ (mother)

ಇಲಿಯಾನಾ ಡಿ ಕ್ರೂಸ್ಇವರು ಭಾರತೀಯ ನಟಿ. ಇವರು ತೆಲುಗು ಹಾಗೂ ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ೧ ನವೆಂಬರ್ ೧೯೮೭ರಲ್ಲಿ ಜನಿಸಿದರು.[೧] ಇಲೀನಾ ರವರ ತವರು ಗೋವಾ ರಾಜ್ಯದ ಪಾರ್ರಾ ಎಂಬ ಊರು. ಇವರ ತಂದೆ ರೊನಾಲ್ಡೊ ಡಿ'ಕ್ರುಜ್, ತಾಯಿ ಸಮೀರಾ ಡಿ'ಕ್ರುಜ್. ಇಲೀನಾ ರವರ ಅಡ್ಡಹೆಸರು ಇಲ್ಲು ಇವರಿಗೆ ೨೦೦೬ ರಲ್ಲಿ ದೇವದಾಸು ತೆಲುಗು ಚಲನಚಿತ್ರಕ್ಕೆ ಫಿಲ್ಮ್ಫೇರ್ ಪ್ರಶಸ್ತಿ ದೊರಕಿದೆ.[೨] ಪೋಕಿರಿ, ಜಾಲ್ಸ, ಕಿಕ್, ಜುಲಾಯಿ ಚಿತ್ರಗಳಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಟಿ ಆದರು. ೨೦೧೨ ರಲ್ಲಿ ಅನುರಾಗ್ ಬಾಸು ನಿರ್ದೇಶಿಸಿದ ಬರ್ಫಿ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಿಸಿದರು. ಇವರಿಗೆ ತಮ್ಮ ಚೊಚ್ಚಲ ಚಿತ್ರಕ್ಕೆ ಅತ್ಯುತ್ತಮ ಮಹಿಳಾ ನಟಿ ಫಿಲ್ಮ್ಫೇರ್ ಪ್ರಶಸ್ತಿ ದೊರಕಿದೆ. ನಂತರ ಆಕ್ಷ್ಯನ್ ಹಾಸ್ಯಚಿತ್ರ ಫಟಾ ಪೊಸ್ಟರ್ ನಿಕ್ಳಾ ಹೀರೊ(೨೦೧೩)[೩], ಮೇ ತೇರಾ ಹೀರೊ(೨೦೧೪), ರುಸ್ತಮ್(೨೦೧೬)[೪] ಮತ್ತು ಬಾದಾಯಿಹೋ (೨೦೧೭) ಚಿತ್ರಗಳಲ್ಲಿ ನಟಿಸಿದ್ದಾರೆ.

ಆರಂಭಿಕ ಜೀವನ[ಬದಲಾಯಿಸಿ]

ಇಲಿಯಾನಾ ಗೋವಾದ ಕ್ಯಾಥೊಲಿಕ್ ಕುಟುಂಬದಲ್ಲಿ ಮುಂಬೈಯಲ್ಲಿ ಜನಿಸಿದರು. ಅವರ ತಮ್ಮ ಬಾಲ್ಯವನ್ನು ಮುಂಬೈ ಮತ್ತು ಗೋವಾದಲ್ಲಿ ಕಳೆದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಂತ. ಸವೆರರ ಶಾಲೆ, ಮಪುಸದಲ್ಲಿ ಪಡೆದರು .[೫] ಕಾಲೇಜು ಶಿಕ್ಷಣಕ್ಕೆ ಮುಂಬೈ ವಿಶ್ವವಿದ್ಯಾನಿಲಯ, ಮುಂಬೈನಲ್ಲಿ ಪಡೆದರು. ಇವರ ಮಾತೃ ಭಾಷೆ ಕೊಂಕಣಿ. ಆ ಸಮಯದಲ್ಲಿ, ಇವರ ಅಮ್ಮ ಕೆಲಸ ಮಾಡುತಿದ್ದ ಹೋಟೆಲ್ ವ್ಯವಸ್ಥಾಪಕ ಇವರ ಕಿರುನಗೆಯನ್ನು ನೋಡಿ ಮೋಡೆಲ್ಲಿಂಗ್ ಕ್ಷೇತ್ರಕ್ಕೆ ಹೋಗಲು ಸೂಚಿಸಿದರು. ಇದು ಇವರಿಗೆ ಮೊದಲ ಬಂಡವಾಳವಾಯಿತು.[೬]ನಂತರ ೨೦೧೪ ರಲ್ಲಿ ಪೋರ್ಚುಗೀಸ್ ರಾಷ್ಟ್ರೀಯತೆಯನ್ನು ಪಡೆದರು.

ವೃತ್ತಿ[ಬದಲಾಯಿಸಿ]

ಇವರು ಚಲಚಿತ್ರದಲ್ಲಿ ನಟಿಸುವ ಮೊದಲು ಅರುಣಾ ಭಿಕ್ಶೂರವರಲ್ಲಿ ನಟನಾ ತರಬೇತಿ ಪಡೆದರು. ೨೦೦೬ರಲ್ಲಿ ಬಂದ ದೇವದಾಸು ತೆಲುಗು ಚಿತ್ರ ಇವರು ಅಭಿನಯಿಸಿದ ಮೊದಲ ಚಿತ್ರ.ನಂತರ ಪೊಕಿರಿ ಚಿತ್ರದಲ್ಲಿ ಏರೋಬಿಕ್ಸ್ ಶಿಕ್ಷಕಿಯಾಗಿ ನಟಿಸಿ ಭ್ರಷ್ಟ ಪೋಲೀಸ್ ಅಧಿಕಾರಿ ಇಂದ ಹಿಂಸೆ ಒಳ ಪಡುವ ಪಾತ್ರವನ್ನು ಅಭಿನಯಿಸಿದರು. ೨೦೦೬ರಲ್ಲಿ ಕೇಡಿ ಚಿತ್ರದ ಮೂಲಕ ತಮಿಳು ಚಿತ್ರರಂಗವನ್ನು ಪ್ರವೇಶಿಸಿದರು. ೨೦೧೨ ರಲ್ಲಿ ಅನುರಾಗ್ ಬಾಸು ನಿರ್ದೇಶಿಸಿದ ಬರ್ಫಿ ಚಿತ್ರದ ಮೂಲಖ ಬಾಲಿವುಡ್ಅನ್ನು ಪ್ರವೆಶಿಸಿದರು. ೨೦೧೪ ರಲ್ಲಿ ವರುನ್ ದವಣ್ ಹಾಗು ನರ್ಗಿಸ್ ಫಕ್ರಿಯೊಡಣೆ ಮೇ ತೆರಾ ಹೀರೊ ಚಲನಚಿತ್ರದಲ್ಲಿ ನಟಿಸಿದರು. ಈ ಚಿತ್ರ ಸೆಮಿ-ಹಿಟ್ ಚಿತ್ರ ಆಗಿತ್ತು. ೨೦೧೪ ನವೆಂಬರಿನಲ್ಲಿ ಸೈಫ್ ಅಲಿ ಖಾನ್ ರವರೊಡನೆ ಹ್ಯಾಪಿ ಎನ್ಡಿಂಗ್ ಚಿತ್ರದಲ್ಲಿ ನಟಿಸಿದರು. ೨ ವರ್ಷ ನಂತರ ಅಕ್ಷಯ್ ಕುಮಾರ್ ರವರೊಡನೆ ರುಸ್ತಮ್ ಚಿತ್ರದಲ್ಲಿ ನಟಿಸಿ ಚಿತ್ರರಂಗಕ್ಕೆ ವಾಪಾಸ್ ಬಂದರು. ಜುಲೈ ೨೦೧೭ ರಲ್ಲಿ ಅರ್ಜುನ್ ಕಪೂರ್ ಹಾಗು ಅನಿಲ್ ಕಪೂರ್ ರವರೊಡನೆ ಮುಬಾರಕಾನ್ ಚಿತ್ರದಲ್ಲಿ ಅಭಿನಯಿಸಿ ಸಕಾರಾತ್ಮಕ ವಿಮರ್ಶೆಯನ್ನು ಗಳಿಸಿದರು. ನಂತರ ಅಜಯ್ ದೇವ್ ಗನ್ ರವರೊಡನೆ ಬಾದ್ಶಾಹೊ ಚಿತ್ರದಲ್ಲಿ ನಟಿಸಿದರು.[೭].[೮]

ಫಿಲ್ಮೋಗ್ರಾಫಿ[ಬದಲಾಯಿಸಿ]

Key
Films that have not yet been released Denotes films that have not yet been released
ವರ್ಷ ಶೀರ್ಷಿಕೆ ಪಾತ್ರ ನಿರ್ದೇಶಕ ಭಾಷೆ ಟಿಪ್ಪಣಿ ಉಲ್ಲೇಖ
೨೦೦೬ ದೇವದಾಸು ಭಾನು ವೈ.ವಿ.ಎಸ್.ಚೌದರಿ ತೆಲುಗು
ಪೋಕಿರಿ ಶ್ರುತಿ ಪುರಿ ಜಗನ್ನಾಧ್ ತೆಲುಗು
ಕೇಡಿ ಆರ್ತೀ ಜ್ಯೋತಿ ಕೃಷ್ಣ ತಮಿಳು
ಖತರ್ನಾಕ್ ನಕ್ಷತ್ರ ಅಮ್ಮ ರಾಜಶೇಖರ್ ತೆಲುಗು
ರಾಖಿ ತ್ರಿಪುರ ಕೃಷ್ಣ ವಂಶಿ ತೆಲುಗು
೨೦೦೭ ಮುನ್ನಾ ನಿಧಿ ವಂಸಿ ಪೈದಿಪಲ್ಲೈ ತೆಲುಗು
ಆಟ ಸತ್ಯ ವಿ.ಎನ್.ಆದಿತ್ಯ ತೆಲುಗು
೨೦೦೮ ಜಲ್ಸಾ ಭಾಗ್ಯಮತಿ/ಭಾಗೀ ತ್ರಿವಿಕ್ರಮ್ ಶ್ರೀನಿವಾಸ್ ತೆಲುಗು
ಭಾಲೆ ಡೊಂಗಲು ಜ್ಯೋತಿ ಕೆ.ವಿಜಯ್ ಭಸ್ಕರ್ ತೆಲುಗು [೯]
೨೦೦೯ ಕಿಕ್ ನೈನಾ ಸುರೇಂದ್ರ ರೆಡ್ಡಿ ತೆಲುಗು [೧೦]
ರೆಚಿಪೊ ಕೃಷ್ಣ ವೇನಿ ಪರಾಚುರಿ ಮುರ್ಳಿ ತೆಲುಗು [೧೧]
ಸಲೀಮ್ ಸತ್ಯಾವತಿ ವೈ.ವಿ.ಎಸ್.ಚೌದ್ರಿ ತೆಲುಗು [೧೨]
೨೦೧೦ ಹುಡುಗ ಹುಡುಗಿ ಸ್ವತಃ ಇಂದ್ರಜಿತ್ ಲಂಕೇಶ್ ಕನ್ನಡ ಕಿರು ಪಾತ್ರ [೧೩]
೨೦೧೧ ಶಕ್ತಿ ಐಶ್ರರ್ಯ ಮೆಹೆರ್ ರಮೇಶ್ ತೆಲುಗು [೧೪]
ನೇನು ನಾ ರಾಕ್ಷಸಿ ಮೀನಾಕ್ಷಿ/ಶ್ರಾವ್ಯ ಪುರಿ ಜಗಾನನ್ದ್ ತರಲುಗು [೧೫]
೨೦೧೨ ನನ್ಬನ್ ರಿಯಾ ಸಾಂತನಮ್ ಶಂಕರ್ ತಮಿಳು [೧೬]
ಜುಲಾಯ್ ಮಧು ತ್ರಿವಿಕ್ರಮ್ ಶ್ರೀನಿವಾಸ್ ತೆಲುಗು [೧೭]
ದೇವುಡು ಚೆಸಿನಾ ಮನ್ಸುಲು ಇಲಿಯಾನಾ ಪುರಿ ಜಗನ್ನಾಧ್ ತೆಲುಗು [೧೮][೧೯]
ಬರ್ಫಿ! ಶ್ರುತಿ ಘೋಶ್ ಸೇನ್ ಗುಪ್ತ ಅನುರಾಗ್ ಬಾಸು ಹಿಂದಿ [೨೦]
೨೦೧೩ ಫಟಾ ಪೋಸ್ಟರ್ ನಿಕ್ಲಾ ಹೀರೋ ಕಾಜಲ್ ರಾಜ್ಕುಮಾರ್ ಸಂತೋಷಿ ಹಿಂದಿ [೨೧]
೨೦೧೪ ಮೇ ತೇರಾ ಹೀರೋ ಸುನೈನಾ ಡೇವಿಡ್ ಧವನ್ ಹಿಂದಿ [೨೨]
ಹ್ಯಾಪಿ ಎನ್ಡಿಂಗ್ ಆನ್ಚಲ್ ರೆಡ್ಡಿ ರಾಜ್ ಮತ್ತು ಕೃಷ್ಣ ಡಿ.ಕೆ ಹಿಂದಿ [೨೩]
೨೦೧೬ ರುಸ್ತುಂ ಸೈನ್ಥಿಯಾ ಪಾವ್ರಿ ಟೀನು ಸುರೇಶ್ ದೇಸಾಯಿ ಹಿಂದಿ [೨೪]
೨೦೧೭ ಮುಬಾರಕಾನ್ ಸ್ವೀಟಿ/ ಸುಪ್ರೀತ್ ಗಿಲ್ ಅನೀಸ್ ಬಾಸ್ಮೀ ಹಿಂದಿ [೨೫]
ಬಾದ್ಶಾಹೊ ರಾಣಿ ಗೀತಾಂಜಲಿ ದೇವಿ ಮಿಲನ್ ಲುಥ್ರಿಯ ಹಿಂದಿ [೨೬]
೨೦೧೮ ರೇಡ್ ಮಾಳಿನಿ ಪಟ್ನಾಯಕ್ ರಾಜ್ ಕುಮಾರ್ ಗುಪ್ತಾ ಹಿಂದಿ [೨೭]
ಅಮರ್ ಅಕ್ಬರ್ ಆಂಥೊನಿ ಐಶ್ವರ್ಯ/ಪೂಜಾ/ತೆರೆಸಾ ಶ್ರೀನು ವೈಟ್ಲಾ ತೆಲುಗು [೨೮]
೨೦೧೯ ಪಾಗಲ್ಪಂತಿ ಸಂಜನಾ ಅನೀಸ್ ಬಾಸ್ಮೀ ಹಿಂದಿ [೨೯]
೨೦೨೦ ದ ಬಿಗ್ ಬುಲ್ Films that have not yet been released ಟಿಬಿಎ ಕೂಕಿ ಗುಲಾಟಿ ಹಿಂದಿ ಚಿತ್ರೀಕರಣ [೩೦]

ಪ್ರಶಸ್ತಿ[ಬದಲಾಯಿಸಿ]

೨೦೦೭-ದೇವದಾಸು ತೆಲುಗು ಚಲನಚಿತ್ರಕ್ಕೆ ಫಿಲ್ಮ್ಫೇರ್ ಪ್ರಶಸ್ತಿ ದೊರಕಿದೆ.[೩೧]

೨೦೦೯ ಜಲ್ಸ ಚಲನಚಿತ್ರಕ್ಕೆ ಸಂತೊಷಂ ಚಲನಚಿತ್ರ ಪ್ರಶಸ್ತಿ ಹಾಗೂ ಸೌಥ್ ಸ್ಕೊಪ್ ಸ್ಟೈಲ್ ಪ್ರಶಸ್ತಿ ಲಭಿಸಿದೆ.

೨೦೧೨-ನಾನ್ಬನ್ ಚಲನಚಿತ್ರಕ್ಕೆ ವೋಗ್ ಬ್ಯುಟಿ ಪ್ರಶಸ್ತಿ ಹಾಗು ಇಟಿಸಿ ಬಾಲಿವುಡ್ ಪ್ರಶಸ್ತಿ ಸಿಕ್ಕಿದೆ.[೩೨]

೨೦೧೩-ಬರ್ಫಿ ಚಿತ್ರಕ್ಕೆ ಫಿಲ್ಮ್ಫೆರ್ ಪ್ರಶಸ್ತಿಯನ್ನು ಬಾಚಿದ್ದಾರೆ. ಇದರೊಡನೆ ಸ್ಟಾರ್ ಡಸ್ಟ್ ಪ್ರಶಸ್ತಿ, ಜೀ ಸಿನೆ ಪ್ರಸಸ್ತಿ, ಸ್ಕ್ರೀನ್ ಅವರ್ಡ್, ಸ್ಟಾರ್ ಗಿಲ್ಡ್ ಪ್ರಶಸ್ತಿ ಲಭಿಸಿದೆ.[೩೩]

ಉಲ್ಲೆಖ[ಬದಲಾಯಿಸಿ]

  1. "Ileana D Cruz Birth Chart | Ileana D Cruz Kundli | Horoscope by Date of Birth Bollywood, Actor". www.astrosage.com. Retrieved 17 ಮಾರ್ಚ್ 2020.
  2. https://www.indiaglitz.com/channels/telugu/review/8001.html
  3. https://timesofindia.indiatimes.com/entertainment/hindi/movie-reviews/phata-poster-nikhla-hero/movie-review/22807611.cms
  4. https://timesofindia.indiatimes.com/entertainment/hindi/bollywood/news/Akshay-Kumar-begins-Rustom-with-a-strong-ensemble-cast/articleshow/50706361.cms
  5. https://starsunfolded.com/ileana-dcruz-height-weight-age/
  6. http://specials.rediff.com/movies/2008/apr/25slid1.htm
  7. http://www.dnaindia.com/entertainment/report-check-pic-ileana-d-cruz-wraps-up-baadshaho-shoot-2343372
  8. https://mumbaimirror.indiatimes.com/entertainment/bollywood/ileana-dcruz-and-ajay-devgn-eunite-for-raj-kumar-guptas-raid/articleshow/60128254.cms
  9. "Bhale Dongalu (2008) | Bhale Dongalu Movie | Bhale Dongalu Telugu Movie Cast & Crew, Release Date, Review, Photos, Videos". FilmiBeat (in ಇಂಗ್ಲಿಷ್). Retrieved 17 ಮಾರ್ಚ್ 2020.
  10. DelhiJuly 11, India Today Web Desk New; July 11, India Today Web Desk New; Ist, India Today Web Desk New. "Ileana D'Cruz shares racy photo, says f*ck their opinions". India Today (in ಇಂಗ್ಲಿಷ್). Retrieved 17 ಮಾರ್ಚ್ 2020.{{cite news}}: CS1 maint: numeric names: authors list (link)
  11. "Ileana D'Cruz". IMDb. Retrieved 17 ಮಾರ್ಚ್ 2020.
  12. "Saleem (2009) - Review, Star Cast, News, Photos". Cinestaan. Archived from the original on 2 ಮಾರ್ಚ್ 2021. Retrieved 17 ಮಾರ್ಚ್ 2020.
  13. "Bollywood is not a priority: Ileana D'Cruz - Times of India". The Times of India (in ಇಂಗ್ಲಿಷ್). Retrieved 17 ಮಾರ್ಚ್ 2020.
  14. "Ileana D Cruz Movies: Latest and Upcoming Films of Ileana D Cruz | eTimes". timesofindia.indiatimes.com. Retrieved 17 ಮಾರ್ಚ್ 2020.
  15. "Nenu Naa Rakshasi Movie: Showtimes, Review, Trailer, Posters, News & Videos | eTimes". Retrieved 17 ಮಾರ್ಚ್ 2020.
  16. DelhiJanuary 18, India Today Online New; January 18, India Today Online New; Ist, India Today Online New. "Nanban: Ileana steals the show". India Today (in ಇಂಗ್ಲಿಷ್). Retrieved 17 ಮಾರ್ಚ್ 2020.{{cite news}}: CS1 maint: numeric names: authors list (link)
  17. "Allu Arjun's sizzling chemistry with Ileana D'Cruz in Telugu film 'Julayi'". News18. 28 ಜುಲೈ 2012. Retrieved 17 ಮಾರ್ಚ್ 2020.
  18. "Telugu Release: Ravi Teja, Ileana D'Cruz starrer 'Devudu Chesina Manushulu'". News18. 16 ಆಗಸ್ಟ್ 2012. Retrieved 17 ಮಾರ್ಚ್ 2020.
  19. "Telugu Release: Ravi Teja, Ileana D'Cruz starrer 'Devudu Chesina Manushulu'". News18. 16 ಆಗಸ್ಟ್ 2012. Retrieved 17 ಮಾರ್ಚ್ 2020.
  20. "Delay in 'Barfi' did bother me: Ileana D'Cruz - Indian Express". archive.indianexpress.com. Retrieved 17 ಮಾರ್ಚ್ 2020.
  21. https://www.youtube.com/watch?v=IzWvJ4Ujz2A
  22. "Ileana D'cruz-Varun Dhawan shoot for MAIN TERA HERO's last song | News". Glamsham (in ಇಂಗ್ಲಿಷ್). Retrieved 17 ಮಾರ್ಚ್ 2020.
  23. https://www.youtube.com/watch?v=aF108_YsXIw
  24. https://movies.ndtv.com/topic/ileana-dcruz-rustom
  25. "ILEANA D CRUZ FOR MUBAARAKAN PROMOTIONS 2018". South India Fashion. Retrieved 17 ಮಾರ್ಚ್ 2020.
  26. DelhiJuly 20, India Today Web Desk New; July 20, India Today Web Desk New; Ist, India Today Web Desk New. "Baadshaho: Lovemaking scene between Ajay Devgn and Ileana D'Cruz trimmed?". India Today (in ಇಂಗ್ಲಿಷ್). Retrieved 17 ಮಾರ್ಚ್ 2020.{{cite news}}: CS1 maint: numeric names: authors list (link)
  27. "Ileana D'Cruz gives interesting details about her character in Raid". filmfare.com (in ಇಂಗ್ಲಿಷ್). Retrieved 17 ಮಾರ್ಚ್ 2020.
  28. "'Amar Akbar Anthony': Five reasons why Ravi Teja and Ileana D'Cruz starrer is worth a watch - Times of India ►". The Times of India (in ಇಂಗ್ಲಿಷ್). Retrieved 17 ಮಾರ್ಚ್ 2020.
  29. "Ileana D'Cruz turns heads in an interesting top for Pagalpanti promotions. See pics". India Today (in ಇಂಗ್ಲಿಷ್). Retrieved 17 ಮಾರ್ಚ್ 2020.
  30. "Abhishek Bachchan, Ileana D'Cruz Begin Filming Ajay Devgn's 'The Big Bull'". News 18. Archived from the original on 22 ಸೆಪ್ಟೆಂಬರ್ 2019. Retrieved 17 ಸೆಪ್ಟೆಂಬರ್ 2019.
  31. https://www.indiaglitz.com/channels/telugu/review/8001.html
  32. https://www.filmibeat.com/tamil/movies/nanban/awards.html
  33. http://www.imdb.com/event/ev0000245/2012/1