ಇಡ್ಲಿ
ಮೂಲ | |
---|---|
ಪರ್ಯಾಯ ಹೆಸರು(ಗಳು) | Idly |
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ದಕ್ಷಿಣ ಭಾರತ |
ವಿವರಗಳು | |
ಸೇವನಾ ಸಮಯ | ಮುಖ್ಯ ಕೋರ್ಸ್ |
ಬಡಿಸುವಾಗ ಬೇಕಾದ ಉಷ್ಣತೆ | ಬಿಸಿ ಸಾಂಬಾರ್ ಅಥವಾ ಚಟ್ನಿ ಜೊತೆ. |
ಮುಖ್ಯ ಘಟಕಾಂಶ(ಗಳು) | ಉದ್ದಿನ ಬೇಳೆ (de-husked), ಅಕ್ಕಿ |
ಪ್ರಭೇದಗಳು | ಬಟನ್ ಇಡ್ಲಿ, ತಟ್ಟೆ ಇಡ್ಲಿ, ಸಣ್ಣ ಇಡ್ಲಿ, ಸಾಂಬಾರ್ ಇಡ್ಲಿ,ರವೆ ಇಡ್ಲಿ. |
ಇಡ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸುಗಳಲ್ಲಿ ಒಂದು. ಪ್ರಧಾನವಾಗಿ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲ್ಪಡುವ ಇಡ್ಲಿ ಸಾಮಾನ್ಯವಾಗಿ ತಿಂಡಿಯಾಗಿ ಬಳಸಲ್ಪಡುತ್ತದೆ. ಇಡ್ಲಿಯನ್ನು ಚಟ್ನಿ ಮತ್ತು ಸಾಂಬಾರ್ ಜೊತೆಗೆ ನೀಡಲಾಗುತ್ತದೆ.
ಇಡ್ಲಿ ದಕ್ಷಿಣ ಭಾರತದ ಪ್ರಾಚೀನ ತಿನಿಸುಗಳಲ್ಲಿ ಒಂದು. ಹಳೆಗನ್ನಡ ಲೇಖಕ ಶಿವಕೋಟ್ಯಾಚಾರ್ಯನ (ಕ್ರಿ.ಶ. ೯೨೦) ಬರಹಗಳಲ್ಲಿ ಇಡ್ಲಿಯ ಪ್ರಸ್ತಾಪ ಬಂದಿದೆ. ಸೇಡಿಯಾಪು ಕೃಷ್ಣಭಟ್ ಅವರ ಇಡ್ಲಿಯ ಇತಿಹಾಸ ಕತೆಯಲ್ಲಿ ಪ್ರಸ್ತಾಪವಿದೆ. ಆ ಕಾಲದಲ್ಲಿ ಇಡ್ಲಿಯನ್ನು ಮಾಡಲು ಉದ್ದಿನ ಬೇಳೆಯನ್ನು ಮಾತ್ರ ಬಳಸಿರುವುದು ಕಂಡು ಬರುತ್ತದೆ. ಕ್ರಿ.ಶ. ೧೦೨೫ ರ ಒಂದು ದಾಖಲೆಯಂತೆ ಉದ್ದಿನ ಬೇಳೆಯನ್ನು ಮಜ್ಜಿಗೆಯಲ್ಲಿ ನೆನೆಸಿ, ರುಬ್ಬಿ, ಮೆಣಸು, ಕೊತ್ತಂಬರಿ, ಇಂಗು ಮೊದಲಾದವನ್ನು ಸೇರಿಸಿ ಇಡ್ಲಿ ಹಿಟ್ಟನ್ನು ಸಿದ್ಧ ಪಡಿಸುತ್ತಿದ್ದರು. ಮೂರನೆಯ ಸೋಮೇಶ್ವರ ತನ್ನ ಸಂಸ್ಕೃತ ಗ್ರಂಥವಾದ ಮಾನಸೋಲ್ಲಾಸದಲ್ಲಿ (ಕ್ರಿ.ಶ. ೧೧೩೦) ಇಡ್ಲಿ ತಯಾರಿಸುವ ವಿಧಾನವನ್ನು ವರ್ಣಿಸಿದ್ದಾನೆ. ಇಡ್ಲಿ ತಯಾರಿಕೆಯಲ್ಲಿ ಅಕ್ಕಿಯನ್ನು ಉಪಯೋಗಿಸುವ ಪ್ರಸ್ತಾಪ ೧೭ ನೆಯ ಶತಮಾನದವರೆಗೆ ಯಾವ ದಾಖಲೆಗಳಲ್ಲೂ ಲಭ್ಯವಾಗಿಲ್ಲ ಎಂಬುದು ಕುತೂಹಲಕರ ಸಂಗತಿ.
ವಿವಿಧ ತರಹದ ಇಡ್ಲಿ
[ಬದಲಾಯಿಸಿ]ಇತ್ತೀಚಿನ ದಿನಗಳಲ್ಲಿ ಇಡ್ಲಿಯು ಅನೇಕ ರೂಪಾಂತರಗಳಲ್ಲಿ ಕಾಣಿಸಿ ಕೊಂಡಿವೆ:
- ರವೆ ಇಡ್ಲಿ
- ತಟ್ಟೆ ಇಡ್ಲಿ
- ಬಟನ್ ಇಡ್ಲಿ
- ಕಾಂಚೀಪುರಮ್ ಇಡ್ಲಿ, ಇತ್ಯಾದಿ.
ಬೇಕಾಗುವ ಸಾಮಗ್ರಿಗಳು
[ಬದಲಾಯಿಸಿ]- ಅಕ್ಕಿ - 2 ಕಪ್ಪು
- ಉದ್ದಿನಬೇಳೆ - 1 ಕಪ್ಪು
- ಉಪ್ಪು ನಾಲಗೆ ಬಯಸುವಷ್ಟು
- ಅಡುಗೆ ಸೋಡಾ .
ಮಾಡುವ ವಿಧಾನ
[ಬದಲಾಯಿಸಿ]ಚೆನ್ನಾಗಿ ತೊಳೆದ ಉದ್ದಿನಬೇಳೆ ಹಾಗೂ ಅಕ್ಕಿಯನ್ನು ಸರಿ ಸುಮಾರು ಎಂಟು ಗಂಟೆಗಳ ಕಾಲ ನೆನೆಸಿಡಿ. ಪ್ರತ್ಯೇಕವಾಗಿರಲಿ.ನಂತರ ಚನ್ನಾಗಿ ತೊಳೆಯಿರಿ . ಆನಂತರ, ಮಿಕ್ಸಿಯಲ್ಲಿ ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಿ ನಂತರ ಅದಕ್ಕೆ ಹಾಕಿ ರುಬ್ಬಿ. ಅಕ್ಕಿ ತರಿ-ತರಿಯಾಗಿರಲಿ, ಅಕ್ಕಿ- ಉದ್ದಿನ ಮಿಶ್ರಣ ಬೆರೆಸಿಡಿ. ಉಪ್ಪನ್ನು ಆಗಲೇ ಸೇರಿಸಬಹುದು. ಮಿಶ್ರಣದ ಪಾತ್ರೆ ಮುಚ್ಚಿಡಿ. ರಾತ್ರಿ ರುಬ್ಬಿಟ್ಟರೆ ಬೆಳಿಗ್ಗೆ ಇಡ್ಲಿ ಮಾಡಲು ಹಿಟ್ಟು ತಯಾರಾಗುತ್ತದೆ. ಇಡ್ಲಿ ಮಾಡುವ ಮೊದಲು ಹುದುಗು ಬಂದಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಇಡ್ಲಿ ತಯಾರಿಸುವಾಗ ತಟ್ಟೆಗಳಿಗೆ ಬಟ್ಟೆ ಹಾಕಬಹುದು ಅಥವಾ ಹಾಗೆ ಹಾಕಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಇಡ್ಲಿ ತಟ್ಟೆಗೆ ತುಪ್ಪ ಅಥವಾ ಅಡುಗೆ ಎಣ್ಣೆ ಹಚ್ಚಿ, ಹಿಟ್ಟನ್ನು ಇಡ್ಲಿ ಪಾತ್ರೆ ಮೇಲೆ ಇಡಿ.ಪಾತ್ರೆಯನ್ನು ಕುಕ್ಕರಿನಲ್ಲಿಟ್ಟು ಬೇಯಲಿಕ್ಕೆ ಬಿಡಬೇಕು. ಹತ್ತು ನಿಮಿಷದ ನಂತರ ಹಬೆಯಾಡುವ ಇಡ್ಲಿ ರೆಡಿಯಾಗುತ್ತದೆ.ಸೇವಿಸುವಾಗ ಚಟ್ನಿ, ಸಾಂಬಾರ್ ಮತ್ತು ತಾಜಾ ಬೆಣ್ಣೆ ಜೊತೆ ಸೇವಿಸಬಹುದು.[೧]
ಇಡ್ಲಿ ತಯಾರಿಸಲು ಬಳಸುವ ಪಾತ್ರೆಗಳು
[ಬದಲಾಯಿಸಿ]-
ಅಕ್ಕಿ, ಬೇಳೆ ರುಬ್ಬುವ ಕಲ್ಲು.
-
ರುಬ್ಬಿದ ಮಿಶ್ರಣವನ್ನು ಮುಚ್ಚಿಡುವ ಪಾತ್ರೆ .
-
ಕುಕ್ಕರ್ನಲ್ಲಿ ಇಡ್ಲಿ ತಯಾರಿಸಲು ಬಳಸುವ ಪಾತ್ರೆ
-
ತಯಾರಾದ ಬಿಸಿ ಇಡ್ಲಿ.
-
ಇಡ್ಲಿ ಅಚ್ಚು ಪಾತ್ರೆಯಿಂದ ಬೇಯ್ದ ಇಡ್ಲಿ ತೆಗೆಯುತ್ತಿರುವದು .
30 ಗ್ರಾಂ ಇಡ್ಲಿಯಲ್ಲಿರುವ ಪೌಷ್ಟಿಕಾಂಶಗಳು
[ಬದಲಾಯಿಸಿ]- ಶಕ್ತಿ ---167 ಕೆಜೆ (40 kcal).
- ಕಾರ್ಬೋಹೈಡ್ರೇಟ್ಗಳು--7,89 ಗ್ರಾಂ.
- ಆಹಾರದಲ್ಲಿನ ಫೈಬರ್ --1.5 ಗ್ರಾಂ.
- ಫ್ಯಾಟ್--0.19 ಗ್ರಾಂ.
- ಸ್ಯಾಚ್ಯುರೇಟೆಡ್-- 0,037 ಗ್ರಾಂ.
- ಮೊನೌನ್ಸತುರಟೆಡ್-- ೦.೦೩೫ ಜಿ.
- ಪೊಲ್ಯೂನ್ಸತುರಟೆಡ್ ೦.೦೪೩ ಜಿ.
- ಪ್ರೋಟೀನ್--1.91 ಗ್ರಾಂ
- ಮಿನರಲ್ಸ್
- ಪೊಟ್ಯಾಸಿಯಂ (೧%) ೬೩
- ಎಂಗ್ ಸೋಡಿಯಂ (೧೪%) ೨೦೭ ಮಗ್.[೨]