ಆಧುನಿಕ ಕಲೆ
ಆಧುನಿಕ ಕಲೆ ಎಂಬುದು ಸರಿಸುಮಾರಾಗಿ 1860ರ ದಶಕದಿಂದ 1970ರ ದಶಕದವರೆಗಿನ ವಿಸ್ತರಿತ ಅವಧಿಯ ಸಂದರ್ಭದಲ್ಲಿ ರೂಪುಗೊಂಡ ಕಲಾತ್ಮಕ ಕೃತಿಗಳಿಗೆ ಉಲ್ಲೇಖಿಸಲ್ಪಡುತ್ತದೆ ಮತ್ತು ಆ ಕಾಲದ ಅವಧಿಯಲ್ಲಿ ರೂಪುಗೊಂಡ ಕಲೆಯ ಶೈಲಿ ಮತ್ತು ತತ್ತ್ವವನ್ನು ಸೂಚಿಸುತ್ತದೆ.[೧] ಪ್ರಯೋಗಶೀಲತೆಯ ಒಂದು ಉತ್ಸಾಹದಲ್ಲಿ, ಗತಕಾಲದ ಸಂಪ್ರದಾಯಗಳು ಪಕ್ಕಕ್ಕೆ ಎಸೆಯಲ್ಪಡುವುದಕ್ಕೆ ಕಾರಣವಾದ ಕಲೆಯೊಂದಿಗೆ ಈ ಶಬ್ದವು ಸಾಮಾನ್ಯವಾಗಿ ಸಂಬಂಧಹೊಂದಿದೆ.[೨] ನೋಡುವಿಕೆಯ ಹೊಸ ವಿಧಾನಗಳೊಂದಿಗೆ ಮತ್ತು ಕಲೆಯ ಮೂಲದ್ರವ್ಯಗಳು ಹಾಗೂ ಕಾರ್ಯಚಟುವಟಿಕೆಗಳ ಸ್ವರೂಪದ ಕುರಿತಾದ ತಾಜಾ ಕಲ್ಪನೆಗಳೊಂದಿಗೆ ಆಧುನಿಕ ಕಲೆಯ ಕಲಾವಿದರು ಪ್ರಯೋಗ ನಡೆಸಿದರು. ಅಮೂರ್ತೀಕರಣದೆಡೆಗಿನ ಒಂದು ಒಲವು, ಬಹುಪಾಲು ಆಧುನಿಕ ಕಲೆಯ ವಿಶಿಷ್ಟ ಲಕ್ಷಣವಾಗಿದೆ. ತೀರಾ ಇತ್ತೀಚಿನ ಕಲಾತ್ಮಕ ನಿರ್ಮಾಣವನ್ನು ಅನೇಕವೇಳೆ ಸಮಕಾಲೀನ ಕಲೆ ಅಥವಾ ಆಧುನಿಕೋತ್ತರ ಕಲೆ ಎಂದು ಕರೆಯಲಾಗುತ್ತದೆ. ವಿನ್ಸೆಂಟ್ ವಾನ್ ಗೋಗ್, ಪಾಲ್ ಸೆಝೇನ್, ಪಾಲ್ ಗೌಗುಯಿನ್, ಜಾರ್ಜಸ್ ಸ್ಯೂರಾಟ್ ಮತ್ತು ಹೆನ್ರಿ ಡೆ ಟೌಲೌಸ್ ಲೌಟ್ರೆಕ್ ಮೊದಲಾದ ಚಿತ್ರಕಾರರ ಪರಂಪರೆಯೊಂದಿಗೆ ಆಧುನಿಕ ಕಲೆಯು ಪ್ರಾರಂಭವಾಗುತ್ತದೆ; ಈ ಎಲ್ಲಾ ಕಲಾವಿದರೂ ಆಧುನಿಕ ಕಲೆಯ ಅಭಿವೃದ್ಧಿಯಲ್ಲಿ ಮಹತ್ವಪೂರ್ಣವಾದ ಪಾತ್ರವನ್ನು ವಹಿಸಿದರು ಎಂಬುದು ಗಮನಾರ್ಹವಾದ ಅಂಶ. 20ನೇ ಶತಮಾನದ ಆರಂಭದಲ್ಲಿ, ಹೆನ್ರಿ ಮ್ಯಾಟಿಸ್ಸೆ ಮತ್ತು ಜಾರ್ಜಸ್ ಬ್ರಾಕೆ, ಆಂಡ್ರೆ ಡೆರೈನ್, ರಾವೌಲ್ ಡೂಫಿ ಹಾಗೂ ಮೌರೀಸ್ ಡೆ ವ್ಲಾಮಿನ್ಕ್‌ರಂಥ ಪೂರ್ವವರ್ತಿ-ಘನಾಕೃತಿ ಕಲಾವಾದಿಗಳನ್ನು ಒಳಗೊಂಡಂತಿದ್ದ ಇತರ ಹಲವಾರು ಕಿರಿಯ ಕಲಾವಿದರು, ಪ್ಯಾರಿಸ್ ಕಲಾಪ್ರಪಂಚದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿದರು; ಇದಕ್ಕಾಗಿ ಅವರು "ಸ್ವಚ್ಛಂದದ", ಬಹು-ವರ್ಣದಿಂದ ಕೂಡಿದ, ಭಾವಗರ್ಭಿತ ಭೂದೃಶ್ಯಗಳ ಮತ್ತು ಉಜ್ಜ್ವಲ ವರ್ಣಚಿತ್ರಣ ಎಂಬುದಾಗಿ ವಿಮರ್ಶಕರಿಂದ ಕರೆಸಿಕೊಂಡ ಆಕೃತಿ ಚಿತ್ರಕಲೆಗಳ ಕೊಡುಗೆಗಳನ್ನು ನೀಡಿದರು. ಹೆನ್ರಿ ಮ್ಯಾಟಿಸ್ಸೆ ರಚಿಸಿದ ದಿ ಡಾನ್ಸ್ ಕೃತಿಯ ಎರಡು ರೂಪಾಂತರಗಳು, ಅವನ ವೃತ್ತಿಜೀವನದಲ್ಲಿನ ಹಾಗೂ ಆಧುನಿಕ ಚಿತ್ರಕಲೆಯ ಅಭಿವೃದ್ಧಿಯಲ್ಲಿನ ಒಂದು ಮಹತ್ವದ ಘಟ್ಟವನ್ನು ಶ್ರುತಪಡಿಸಿದವು.[೩]
ಪುನರುಜ್ಜೀವನ ಕಾಲಕ್ಕೆ ಹಿಂದಿನ ಕಲೆಯೊಂದಿಗೆ ಮ್ಯಾಟಿಸ್ಸೆಯು ಹೊಂದಿದ್ದ ಆರಂಭದ ದಶೆಯ ಮೋಹಕತೆಯನ್ನು ಇದು ಪ್ರತಿಬಿಂಬಿಸಿತು: ಅಂದರೆ, ಮನಸ್ಸು ಕಲಕದ ನೀಲಿ-ಹಸಿರು ಹಿನ್ನೆಲೆಗೆ ಪ್ರತಿಯಾಗಿ ಆಕೃತಿಗಳ ಉತ್ಕಟವಾದ ಉದ್ದೀಪಿಸುವ ಬಣ್ಣ, ಮತ್ತು ಭಾವಾತ್ಮಕ ವಿಮೋಚನೆ ಹಾಗೂ ಭೋಗೈಕವಾದದ ಭಾವನೆಗಳನ್ನು ಹೊರಹೊಮ್ಮಿಸುವ ನರ್ತಿಸುತ್ತಿರುವ ನಗ್ನಚಿತ್ರಗಳ ಲಯಬದ್ಧವಾದ ಅನುಕ್ರಮವನ್ನು ಇದು ಪ್ರತಿಬಿಂಬಿಸಿತು.
ಟೌಲೌಸ್ ಲೌಟ್ರೆಕ್, ಗೌಗುಯಿನ್ ಮತ್ತು 19ನೇ ಶತಮಾನದ ಅಂತ್ಯದ ಇತರ ಹೊಸತನದ ಪ್ರವರ್ತಕರಿಂದ ಆರಂಭದಲ್ಲಿ ಪ್ರಭಾವಿಸಲ್ಪಟ್ಟ ಪ್ಯಾಬ್ಲೋ ಪಿಕಾಸೊ, ಸೆಝೇನ್‌ನ ಕಲ್ಪನೆಯನ್ನು ಆಧರಿಸಿ ತನ್ನ ಮೊದಲ ಘನಾಕೃತಿ ಕಲಾವಾದಿ ಚಿತ್ರಗಳನ್ನು ರೂಪಿಸಿದ; ಸ್ವಭಾವದ ಎಲ್ಲಾ ಚಿತ್ರಣವನ್ನೂ ಘನಾಕೃತಿ, ಗೋಳ ಮತ್ತು ಶಂಕುವಿನಾಕಾರದ ಘನವಸ್ತು ಎಂಬ ಮೂರು ಘನವಸ್ತುಗಳಿಗೆ ಇಳಿಸಬಹುದು ಎಂಬುದು ಸೆಝೇನ್‌ನ ಕಲ್ಪನೆಯಾಗಿತ್ತು. 1907ರಲ್ಲಿ ಬಂದ ಲೆಸ್ ಡೆಮೊಯ್‌ಸೆಲ್ಲೆಸ್ ಡಿ'ಅವಿಗ್ನಾನ್ ಎಂಬ ವರ್ಣಚಿತ್ರದೊಂದಿಗೆ, ಒಂದು ಹೊಸ ಮತ್ತು ಆಮೂಲಾಗ್ರ ಚಿತ್ರವನ್ನು ಪಿಕಾಸೊ ನಾಟಕೀಯವಾಗಿ ಸೃಷ್ಟಿಸಿದ; ಐದು ವೇಶ್ಯೆಯರನ್ನು ಒಳಗೊಂಡಿರುವ ಒಂದು ಕಚ್ಚಾ ಹಾಗೂ ಒಡ್ಡೊಡ್ಡಾದ ವೇಶ್ಯಾಗೃಹದ ದೃಶ್ಯ, ಆಫ್ರಿಕಾದ ಬುಡಕಟ್ಟಿನ ಮುಖವಾಡಗಳು ಮತ್ತು ಅವನದೇ ಸ್ವಂತದ ಹೊಸ ಘನಾಕೃತಿ ಕಲಾವಾದಿ ಆವಿಷ್ಕಾರಗಳನ್ನು ನೆನಪಿಗೆ ತರುವ ತೀವ್ರವಾಗಿ ಚಿತ್ರಿಸಲಾದ ಮಹಿಳೆ, ಇವೆಲ್ಲವೂ ಸದರಿ ಕೃತಿಯಲ್ಲಿ ಚಿತ್ರಿಸಲ್ಪಟ್ಟಿತು. ವಿಶ್ಲೇಷಣಾತ್ಮಕ ಘನಾಕೃತಿ ಕಲೆಯನ್ನು ಪ್ಯಾಬ್ಲೋ ಪಿಕಾಸೊ ಮತ್ತು ಜಾರ್ಜಸ್ ಬ್ರಾಕೆ ಜಂಟಿಯಾಗಿ ಅಭಿವೃದ್ಧಿಪಡಿಸಿದರು; ಅಷ್ಟೇ ಅಲ್ಲ, 1908ರಿಂದ ಮೊದಲ್ಗೊಂಡು 1912ರಾದ್ಯಂತ ವಯೊಲಿನ್ ಅಂಡ್ ಕ್ಯಾಂಡಲ್‌ಸ್ಟಿಕ್, ಪ್ಯಾರಿಸ್ ಕೃತಿಯ ಮೂಲಕ ವಿಶ್ಲೇಷಣಾತ್ಮಕ ಘನಾಕೃತಿ ಕಲೆಯು ನಿದರ್ಶನಾತ್ಮಕವಾಗಿ ರೂಪಿಸಲ್ಪಟ್ಟಿತು. ಘನಾಕೃತಿ ಕಲೆಯ ಮೊದಲ ಸ್ಪಷ್ಟ ಅಭಿವ್ಯಕ್ತಿಯಾದ ವಿಶ್ಲೇಷಣಾತ್ಮಕ ಘನಾಕೃತಿ ಕಲೆಯನ್ನು ಅನುಸರಿಸಿಕೊಂಡು ಕೃತಕ ಘನಾಕೃತಿ ಕಲೆಯು ಬಂದಿತು. ಬ್ರಾಕ್ವೆ, ಪಿಕಾಸೊ, ಫರ್ನಾಂಡ್ ಲೆಗರ್, ಜುವಾನ್ ಗ್ರಿಸ್, ಆಲ್ಬರ್ಟ್ ಗ್ಲೀಜೆಸ್, ಮಾರ್ಸೆಲ್ ಡ್ಯೂಚಾಂಪ್ ಹಾಗೂ 1920ರ ದಶಕದಲ್ಲಿ ಬಂದು ಸೇರಿಕೊಂಡ ಇತರ ಹಲವಾರು ಕಲಾವಿದರು ಈ ಪ್ರಕಾರವನ್ನು ಅಭ್ಯಾಸಮಾಡಿದರು. ವಿಭಿನ್ನ ರಚನಾ ಚಿತ್ರಣಗಳು, ಮೇಲ್ಮೈಗಳು, ತೇಪೆಚಿತ್ರದ ಅಂಶಗಳು, ಪೇಪಿಯರ್ ಕೊಲ್ಲೆ ಮತ್ತು ವಿಲೀನಗೊಂಡ ವಿಷಯದ ಒಂದು ಬೃಹತ್ ವೈವಿಧ್ಯತೆಯ ಪರಿಚಯ ಇವು ಕೃತಕ ಘನಾಕೃತಿ ಕಲೆಯ ವಿಶಿಷ್ಟ ಲಕ್ಷಣಗಳಾಗಿವೆ. ಆಧುನಿಕ ಕಲೆಯ ಎಣಿಕೆಯು ಆಧುನಿಕತಾ ಸಿದ್ಧಾಂತದೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದೆ.[೪]
ಆಧುನಿಕ ಕಲೆಯ ಇತಿಹಾಸ
[ಬದಲಾಯಿಸಿ]19ನೇ ಶತಮಾನದಲ್ಲಿನ ಮೂಲಗಳು
[ಬದಲಾಯಿಸಿ]ಆಧುನಿಕ ಶಿಲ್ಪಕಲೆ ಮತ್ತು ವಾಸ್ತುಶಿಲ್ಪಗಳು ಹತ್ತೊಂಬತ್ತನೇ ಶತಮಾನದ ಅಂತ್ಯದ ವೇಳೆಗೆ ಹೊರಹೊಮ್ಮಿದವು ಎಂಬುದಾಗಿ ಪರಿಗಣಿಸಲಾಗುತ್ತದೆಯಾದರೂ, ಆಧುನಿಕ ಚಿತ್ರಕಲೆಯ ಆರಂಭಗಳನ್ನು ಅದಕ್ಕಿಂತ ಮುಂಚಿತವಾಗಿ ಕಂಡುಕೊಳ್ಳಬಹುದು.[೫] 1863ರಲ್ಲಿ[೬] ಆಧುನಿಕ ಕಲೆಯ ಜನ್ಮವಾಯಿತು ಎಂಬುದರ ಗುರುತಾಗಿ ಅತ್ಯಂತ ಸಾಮಾನ್ಯವಾಗಿ ಗುರುತಿಸಲ್ಪಟ್ಟಿರುವ ದಿನಾಂಕವು ಪ್ರಾಯಶಃ, ಪ್ಯಾರಿಸ್‌ನಲ್ಲಿನ ಸಲೋನ್ ಡೆಸ್ ರೆಫ್ಯೂಸಸ್ ನಲ್ಲಿ ಎಡ್ವರ್ಡ್ ಮ್ಯಾನೆಟ್ ತನ್ನ ಚಿತ್ರವಾದ ಲೆ ಡೆಜ್ಯೂನರ್ ಸುರ್ ಐ'ಹರ್ಬೆ ಯನ್ನು ಪ್ರದರ್ಶಿಸಿದ ವರ್ಷವಾಗಿದೆ. ಇದಕ್ಕಿಂತಲೂ ಮುಂಚಿನ ದಿನಾಂಕಗಳೂ ಸಹ ಪ್ರಸ್ತಾವಿಸಲ್ಪಟ್ಟಿದ್ದು, ಅವುಗಳ ಪೈಕಿ 1855 (ಗಸ್ಟಾವೆ ಕೌರ್ಬೆಟ್ ತನ್ನ ದಿ ಆರ್ಟಿಸ್ಟ್ಸ್ ಸ್ಟುಡಿಯೊ ಎಂಬ ಕೃತಿಯನ್ನು ಪ್ರದರ್ಶಿಸಿದ ವರ್ಷ) ಮತ್ತು 1784 (ಜಾಕ್ವೆಸ್-ಲೂಯಿಸ್ ಡೇವಿಡ್ ತನ್ನ ದಿ ಓಥ್ ಆಫ್ ದಿ ಹೊರಾಟೈ ಎಂಬ ಚಿತ್ರವನ್ನು ಸಂಪೂರ್ಣಗೊಳಿಸಿದ ವರ್ಷ) ಸೇರಿವೆ.[೬] ಕಲಾ ಇತಿಹಾಸಕಾರನಾದ H. ಹಾರ್ವರ್ಡ್ ಆರ್ನಸನ್ ಮಾತುಗಳಲ್ಲೇ ಹೇಳುವುದಾದರೆ: "ಇವುಗಳ ಪೈಕಿಯ ಪ್ರತಿಯೊಂದು ದಿನಾಂಕವೂ ಆಧುನಿಕ ಕಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ, ಆದರೆ ಇವುಗಳ ಪೈಕಿ ಯಾವುದೂ ಸಂಪೂರ್ಣವಾಗಿ ಹೊಸದಾಗಿರುವ ಒಂದು ಆರಂಭವನ್ನು ನಿರಪೇಕ್ಷವಾಗಿ ಗುರುತುಮಾಡುವುದಿಲ್ಲ... ಒಂದು ನೂರು ವರ್ಷಗಳ ಕಾಲಾನುಕ್ರಮದಲ್ಲಿ ಒಂದು ಕ್ರಮೇಣವಾದ ರೂಪಾಂತರವು ಕಂಡುಬಂತು."[೬] ಆಧುನಿಕ ಕಲೆಯೆಡೆಗೆ ಅಂತಿಮವಾಗಿ ಕರೆದೊಯ್ದ ಚಿಂತನೆಯ ಎಳೆಗಳ ಮೂಲವು ದಾರ್ಶನಿಕ ಚಳವಳಿಯಲ್ಲಿರುವುದನ್ನು, ಮತ್ತು ಅದಕ್ಕೂ ಮುಂಚಿನ ಅವಧಿಯಾದ ಹದಿನೇಳನೇ ಶತಮಾನದಲ್ಲಿ ಇರುವುದನ್ನು ಗುರುತಿಸಬಹುದು.[೭] ಇದಕ್ಕೆ ಉದಾಹರಣೆಯಾಗಿ ಕ್ಲೆಮೆಂಟ್ ಗ್ರೀನ್‌ಬರ್ಗ್ ಎಂಬ ಪ್ರಮುಖ ಆಧುನಿಕ ಕಲಾ ವಿಮರ್ಶಕನು ಇಮ್ಯಾನ್ಯುಯೆಲ್ ಕ್ಯಾಂಟ್‌ನನ್ನು "ಮೊದಲ ನಿಜವಾದ ಆಧುನಿಕತಾ ಸಿದ್ಧಾಂತಿ" ಎಂಬುದಾಗಿ ಕರೆದನಾದರೂ, ಒಂದು ವೈಲಕ್ಷಣ್ಯವನ್ನೂ ಅವನು ಉಲ್ಲೇಖಿಸಿದ: "ದಾರ್ಶನಿಕ ಚಳವಳಿಯು ಹೊರಗಿನಿಂದ ಟೀಕಿಸಿತು... ಆಧುನಿಕತಾ ಸಿದ್ಧಾಂತವು ಒಳಗಿನಿಂದ ಟೀಕಿಸುತ್ತದೆ."[೮] ಶತ ಶತಮಾನಗಳವರೆಗೆ ಪ್ರಶ್ನೆಗೊಳಗಾಗದೆಯೇ ಸ್ವೀಕರಿಸಲ್ಪಟ್ಟಿದ್ದ ಹಾಗೂ, ಸಾರ್ವಜನಿಕರು ಹುರುಪಿನ ರಾಜಕೀಯ ಮತ್ತು ಸಾಮಾಜಿಕ ಚರ್ಚೆಯಲ್ಲಿ ತೊಡಗುವಂತೆ ರೂಢಿಮಾಡಿಸಿದ್ದ ಊಹನಗಳು ಮತ್ತು ಸ್ಥಾಪಿತ ಪದ್ಧತಿಗಳನ್ನು 1789ರಲ್ಲಿ ಕಂಡುಬಂದ ಫ್ರೆಂಚ್ ಕ್ರಾಂತಿಯು ಬುಡಮೇಲು ಮಾಡಿತು. ಕಲಾ ಇತಿಹಾಸಕಾರನಾದ ಅರ್ನ್ಸ್ಟ್ ಗೊಂಬ್ರಿಚ್ ಎಂಬಾತ ಕರೆದಂತೆ, "ಯಾರಾದರೊಬ್ಬರು ಒಂದು ಗೋಡೆಕಾಗದದ ಮಾದರಿಯನ್ನು ಆರಿಸುವಂತೆ ಜನರು ತಮ್ಮ ಕಟ್ಟಡದ ಶೈಲಿಯನ್ನು ಆರಿಸುವಂತೆ ಮಾಡಿದ ಒಂದು ಸ್ವಯಂ-ಪ್ರಜ್ಞೆಯ" ಉದಯಕ್ಕೆ ಇದು ಕಾರಣವಾಯಿತು."[೯] ರಮ್ಯತಾವಾದಿಗಳು, ವಾಸ್ತವವಾದಿಗಳು ಮತ್ತು ಚಿತ್ತಪ್ರಭಾವ ನಿರೂಪಣಾವಾದಿಗಳು ಆಧುನಿಕ ಕಲೆಯ ಪಥನಿರ್ಮಾಪಕರಾಗಿದ್ದರು.[೧೦] 19ನೇ ಶತಮಾನದ ಅಂತ್ಯದ ವೇಳೆಗೆ, ಆಧುನಿಕ ಕಲೆಯಲ್ಲಿ ಪ್ರಭಾವಶಾಲಿಯಾಗಿರುವಂತಿದ್ದ ಹೆಚ್ಚುವರಿ ಆಂದೋಲನಗಳು ಹೊರಹೊಮ್ಮಲು ಪ್ರಾರಂಭಿಸಿದವು: ಉತ್ತರೋತ್ತರದ ಕಲಾಪದ್ಧತಿ ಮಾತ್ರವೇ ಅಲ್ಲದೇ ಪ್ರತಿಮಾಪಂಥವು ಈ ಅವಧಿಯಲ್ಲಿ ಕಂಡುಬಂತು. ಈ ಆಂದೋಲನಗಳ ಮೇಲಿನ ಪ್ರಭಾವಗಳು ವೈವಿಧ್ಯತೆಯಿಂದ ಕೂಡಿದ್ದವು: ಪೌರಸ್ತ್ಯ ಅಲಂಕಾರಿಕ ಕಲೆಗಳಿಗೆ, ಅದರಲ್ಲೂ ನಿರ್ದಿಷ್ಟವಾಗಿ ಜಪಾನಿಯರ ಅಚ್ಚೊತ್ತುವಿಕೆಗೆ ಒಡ್ಡಿಕೊಳ್ಳುವುದರಿಂದ ಮೊದಲ್ಗೊಂಡು ಟರ್ನರ್ ಮತ್ತು ಡೆಲಾಕ್ರೋಯಿಕ್ಸ್‌ರವರ ವರ್ಣಚಿತ್ರಣದ ಹೊಸ ಮಾರ್ಪಾಟುಗಳವರೆಗೆ, ಅಲ್ಲಿಂದ ಜೀನ್-ಫ್ರಾಂಕೋಯಿಸ್ ಮಿಲೆಟ್‌ನಂಥ ಚಿತ್ರಕಾರರ ಕೃತಿಯಲ್ಲಿ ಕಂಡುಬರುವಂತೆ, ಸಾಮಾನ್ಯ ಜೀವನದ ಚಿತ್ರಣದಲ್ಲಿನ ಹೆಚ್ಚು ಯಥಾರ್ಥತೆಗೆ ಸಂಬಂಧಿಸಿದ ಒಂದು ಶೋಧನೆಯವರೆಗೆ ಈ ಪ್ರಭಾವಗಳ ವೈವಿಧ್ಯತೆಯಿತ್ತು. ಸಾರ್ವಜನಿಕರ ಮತ್ತು ಅಧಿಕಾರಿಶಾಹಿಯ ನೆರವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಸಂಪ್ರದಾಯ-ಆವೃತ ಸಂಪ್ರದಾಯಶರಣ ಕಲೆಯ ಕಲ್ಪನಾತ್ಮಕ ಪ್ರತಿಪಾದನೆಗೆ ಯಥಾರ್ಥತೆಯ ಪ್ರತಿಪಾದಕರು ಎದುರಾಗಿ ನಿಂತರು.[೧೧] ನಿಯೋಜನೆಗಳ ಮೂಲಕ ಅಥವಾ ತಮ್ಮದೇ ಸ್ವಂತ ಕೃತಿಯ ಬೃಹತ್ ಸಾರ್ವಜನಿಕ ಪ್ರದರ್ಶನಗಳ ಮೂಲಕ ಆ ಕಾಲದ ಅತ್ಯಂತ ಯಶಸ್ವಿ ಚಿತ್ರಕಾರರು ಕಾರ್ಯನಿರ್ವಹಿಸಿದರು. ಅಧಿಕೃತವಾದ, ಸರ್ಕಾರಿ-ಪ್ರಾಯೋಜಿತ ಚಿತ್ರಕಾರರ ಸಂಘಗಳು ಅಲ್ಲಿದ್ದವಾದರೂ, ಹೊಸ ಲಲಿತಕಲೆಗಳ ಮತ್ತು ಅಲಂಕಾರಿಕ ಕಲೆಗಳ ಸಾರ್ವಜನಿಕ ಪ್ರದರ್ಶನಗಳನ್ನು ಸರ್ಕಾರಗಳು ನಿಯತವಾಗಿ ಆಯೋಜಿಸಿದವು. ಜನರಿಗೆ ವಸ್ತುಗಳು ಕಾಣುತ್ತಿಲ್ಲ, ಅದರ ಬದಲಿಗೆ ಅವು ಪ್ರತಿಫಲಿಸುವ ಬೆಳಕು ಮಾತ್ರವೇ ಕಾಣಿಸುತ್ತಿದೆ ಎಂದು ವಾದಿಸಿದ ಚಿತ್ತಪ್ರಭಾವ ನಿರೂಪಣಾವಾದಿಗಳು, ಚಿತ್ರಕಾರರು ಸ್ಟುಡಿಯೋಗಳಲ್ಲಿ ಚಿತ್ರಗಳನ್ನು ರಚಿಸುವುದಕ್ಕಿಂತ ಸ್ವಾಭಾವಿಕ ಬೆಳಕಿನಲ್ಲಿ (ಗಾಳಿಗೆ ಪೂರ್ತಿ ಒಡ್ಡಿಕೊಂಡ ವಾತಾವರಣದಲ್ಲಿ) ರಚಿಸಬೇಕು ಮತ್ತು ತಮ್ಮ ಕೃತಿಯಲ್ಲಿ ಬೆಳಕಿನ ಪರಿಣಾಮಗಳನ್ನು ಸೆರೆಹಿಡಿಯಬೇಕು ಎಂಬುದಾಗಿ ಪ್ರತಿಪಾದಿಸಿದರು.[೧೨] ಸೊಸೈಟೆ ಅನೋನಿಮೆ ಕೋಆಪರೆಟಿವ್ ಡೆಸ್ ಆರ್ಟಿಸ್ಟ್ಸ್ ಪೆಯಿಂಟ್ರೆಸ್, ಸ್ಕಲ್ಪ್ಟಿಯರ್ಸ್, ಗ್ರೇವಿಯರ್ಸ್ ("ಚಿತ್ರಕಾರರು, ಮೂರ್ತಿಕಾರರು, ಮತ್ತು ಕೆತ್ತನೆಗಾರರ ಒಕ್ಕೂಟ") ಎಂಬ ಸಂಘಟನೆಯನ್ನು ಚಿತ್ತಪ್ರಭಾವದ ನಿರೂಪಣಾವಾದಿ ಕಲಾವಿದರು ರೂಪಿಸಿದರು; ಇದು ಆಂತರಿಕ ಬಿಕ್ಕಟ್ಟುಗಳ ಹೊರತಾಗಿಯೂ ಸ್ವತಂತ್ರ ಪ್ರದರ್ಶನಗಳ ಒಂದು ಸರಣಿಯನ್ನು ಏರ್ಪಡಿಸಿತು.[೧೩] ಒಂದು "ರಾಷ್ಟ್ರೀಯ" ಶೈಲಿಗೆ ಆದ್ಯತೆಯಾಗಿ ಪರಿಗಣಿಸುವ ಮೂಲಕ ವಿಭಿನ್ನ ರಾಷ್ಟ್ರಗಳಲ್ಲಿನ ಕಲಾವಿದರು ಈ ಶೈಲಿಯನ್ನು ಸ್ವೀಕರಿಸಿ ಅಳವಡಿಸಿಕೊಂಡರು. ಇದೊಂದು "ಆಂದೋಲನ"ವಾಗಿತ್ತು ಎಂಬ ಅಭಿಪ್ರಾಯವನ್ನು ಈ ಅಂಶಗಳು ನೆಲೆಗೊಳಿಸಿದವು. ಈ ವಿಶೇಷ ಲಕ್ಷಣಗಳು— ಅಂದರೆ ಕಲೆಗೆ ಅವಿಭಾಜ್ಯ ಅಂಗವಾಗಿ ಪರಿಣಮಿಸುವ ಕಾರ್ಯನಿರತ ವಿಧಾನವೊಂದರ ಸ್ಥಾಪನೆ, ಆಂದೋಲನವೊಂದರ ಅಥವಾ ಗೋಚರಿಸುವ ಸಕ್ರಿಯ ತಿರುಳಿನ ಬೆಂಬಲದ ಸ್ಥಾಪನೆ, ಹಾಗೂ ಅಂತರರಾಷ್ಟ್ರೀಯ ಅಂಗೀಕಾರ ಇವುಗಳು- ಕಲೆಯಲ್ಲಿನ ಆಧುನಿಕ ಅವಧಿಯಲ್ಲಿನ ಕಲಾತ್ಮಕ ಆಂದೋಲನಗಳಿಂದ ಪುನರಾವರ್ತಿಸಲ್ಪಡುತ್ತವೆ.
20ನೇ ಶತಮಾನದ ಆರಂಭಿಕ ಹಂತ
[ಬದಲಾಯಿಸಿ]20ನೇ ಶತಮಾನದ ಮೊದಲ ದಶಕದಲ್ಲಿ ವಿಕಸನಗೊಂಡ ಆಂದೋಲನಗಳ ಪೈಕಿ ಉಜ್ಜ್ವಲ ವರ್ಣಚಿತ್ರಣ, ಘನಾಕೃತಿ ಕಲೆ, ಅಭಿವ್ಯಕ್ತಿವಾದ, ಮತ್ತು ಭವಿಷ್ಯದ್ವಾದ ಇವು ಸೇರಿದ್ದವು. 1910ರ ವರ್ಷ ಹಾಗೂ Iನೇ ಜಾಗತಿಕ ಸಮರವು ಅಂತ್ಯವಾದ ವರ್ಷದ ನಡುವಿನ ಅವಧಿಯಲ್ಲಿ ಮತ್ತು ಘನಾಕೃತಿ ಕಲೆಯು ಉಚ್ಛ್ರಾಯ ಸ್ಥಿತಿಗೆ ತಲುಪಿದ ನಂತರ, ಪ್ಯಾರಿಸ್‌ನಲ್ಲಿ ಹಲವಾರು ಆಂದೋಲನಗಳು ಹೊರಹೊಮ್ಮಿದವು. 1911ರ ಜುಲೈನಲ್ಲಿ ಪ್ಯಾರಿಸ್‌ಗೆ ತೆರಳಿದ ಜಾರ್ಜಿಯೋ ಡೆ ಚಿರಿಕೊ, ಅಲ್ಲಿ ತನ್ನ ಸೋದರ ಆಂಡ್ರಿಯಾನನ್ನು (ಆಲ್ಬರ್ಟೋ ಸೆವಿನಿಯೊ ಎಂಬ ಹೆಸರಿನಿಂದ ಪ್ರಸಿದ್ಧನಾಗಿದ್ದ ಕವಿ ಮತ್ತು ಚಿತ್ರಕಾರ) ಸೇರಿಕೊಂಡ. ತನ್ನ ಸೋದರನ ಮೂಲಕ, ಸಲೊನ್ ಡಿ'ಆಟಮ್ನೆಯಲ್ಲಿನ ತೀರ್ಪುಗಾರರ ಮಂಡಲಿಯ ಓರ್ವ ಸದಸ್ಯನಾದ ಪಿಯರೆ ಲಪ್ರೇಡ್‌ನನ್ನು ಅವನು ಭೇಟಿಯಾದ ಮತ್ತು ಈ ತಾಣದಲ್ಲಿ ತನ್ನ ಸ್ವಪ್ನಸದೃಶ ಕೃತಿಗಳ ಪೈಕಿ ಮೂರು ಕೃತಿಗಳನ್ನು ಅವನು ಪ್ರದರ್ಶಿಸಿದ. ಅವುಗಳೆಂದರೆ: ಎನಿಗ್ಮ ಆಫ್ ದಿ ಒರಾಕಲ್ , ಎನಿಗ್ಮ ಆಫ್ ಆನ್ ಆಫ್ಟರ್‌ನೂನ್ ಮತ್ತು ಸೆಲ್ಫ್-ಪೋರ್ಟ್ರೇಟ್ . 1913ರ ಅವಧಿಯಲ್ಲಿ, ಸಲೊನ್ ಡೆಸ್ ಇಂಡಿಪೆಂಡೆಂಟ್ಸ್ ಮತ್ತು ಸಲೊನ್ ಡಿ'ಆಟಮ್ನೆಯಲ್ಲಿ ಆತ ತನ್ನ ಕೃತಿಯನ್ನು ಪ್ರದರ್ಶಿಸಿದ; ಪ್ಯಾಬ್ಲೋ ಪಿಕಾಸೊ ಮತ್ತು ಗಿಲ್ಲೌಮೆ ಅಪೊಲಿನೇರ್ ಹಾಗೂ ಇತರ ಹಲವು ಮಂದಿ ಅವನ ಕೃತಿಯನ್ನು ಗುರುತಿಸಿದರು.
ತೀವ್ರವಾಗಿ ಆಸಕ್ತಿಯನ್ನು ಕೆರಳಿಸುವಂತಿದ್ದ ಮತ್ತು ರಹಸ್ಯಗರ್ಭಿತವಾಗಿದ್ದ ಅವನ ವರ್ಣಚಿತ್ರಗಳು ಅತಿ ಯಥಾರ್ಥವಾದವು ಸಾಕಷ್ಟು ಮುಂಚಿತವಾಗಿ ಕಂಡುಬರಲು ಸಾಧನಭೂತವಾಗಿವೆ ಎಂದು ಪರಿಗಣಿಸಲ್ಪಟ್ಟಿವೆ. 1914ರಲ್ಲಿ ಬಂದ ಸಾಂಗ್ ಆಫ್ ಲವ್ ಎಂಬ ಕೃತಿಯು, ಡೆ ಚಿರಿಕೊನಿಂದ ಸೃಷ್ಟಿಸಲ್ಪಟ್ಟ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಒಂದೆನಿಸಿದೆ ಮತ್ತು ಇದನ್ನು 1924ರಲ್ಲಿ ಆಂಡ್ರೆ ಬ್ರೆಟನ್‌ನಿಂದ ಆಂದೋಲನವು "ಸಂಸ್ಥಾಪಿಸಲ್ಪಡುವುದಕ್ಕೆ" ಹತ್ತು ವರ್ಷಗಳಷ್ಟು ಮುಂಚಿತವಾಗಿ ಚಿತ್ರಿಸಲಾಗಿತ್ತಾದರೂ, ಇದು ಅತಿ ಯಥಾರ್ಥವಾದಿ ಶೈಲಿಯ ಒಂದು ಆರಂಭಿಕ ಉದಾಹರಣೆ ಎನಿಸಿಕೊಂಡಿದೆ.
Iನೇ ಜಾಗತಿಕ ಸಮರವು ಈ ಹಂತಕ್ಕೆ ಒಂದು ಸಮಾಪ್ತಿಯನ್ನು ಹಾಡಿತಾದರೂ, ಮಾರ್ಸೆಲ್ ಡ್ಯೂಚಾಂಪ್‌ನ ಕೃತಿಯನ್ನು ಮತ್ತು ಅತಿ ಯಥಾರ್ಥವಾದದ ಕೃತಿಯನ್ನು ಒಳಗೊಂಡಂತೆ, ಡಾಡಾದಂಥ ಹಲವಾರು ಕಲಾ-ವಿರೋಧಿ ಆಂದೋಲನಗಳ ಆರಂಭವನ್ನು ಸೂಚಿಸಿತು. ಕಲೆಗಳು, ವಾಸ್ತುಶಿಲ್ಪ, ವಿನ್ಯಾಸ, ಮತ್ತು ಕಲಾಶಿಕ್ಷಣಗಳ ನಡುವಿನ ಪರಸ್ಪರ ಸಂಬಂಧದ ಕುರಿತಾದ ಹೊಸ ಕಲ್ಪನೆಗಳನ್ನು ಡೆ ಸ್ಟಿಜ್ಲ್ ಮತ್ತು ಬೌಹೌಸ್ ರೀತಿಯ ಕಲಾವಿದರ ಗುಂಪುಗಳು ಅಭಿವೃದ್ಧಿಪಡಿಸಿದವು. 1913ರಲ್ಲಿ ನಡೆದ ಪರಿಕರಗಳ ಪ್ರದರ್ಶನದೊಂದಿಗೆ ಹಾಗೂ Iನೇ ಜಾಗತಿಕ ಸಮರದ ಅವಧಿಯಲ್ಲಿ U.S.ಗೆ ತೆರಳಿದ ಐರೋಪ್ಯ ಕಲಾವಿದರ ಮೂಲಕ, ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ಆಧುನಿಕ ಕಲೆಯು ಪರಿಚಯಿಸಲ್ಪಟ್ಟಿತು.
IIನೇ ಜಾಗತಿಕ ಸಮರದ ನಂತರದ ಅವಧಿ
[ಬದಲಾಯಿಸಿ]ಆದಾಗ್ಯೂ, IIನೇ ಜಾಗತಿಕ ಸಮರದ ನಂತರವಷ್ಟೇ U.S. ಹೊಸ ಕಲಾತ್ಮಕ ಆಂದೋಲನಗಳ ಕೇಂದ್ರಬಿಂದುವಾಗಿ ಹೊರಹೊಮ್ಮಿತು.[ಸೂಕ್ತ ಉಲ್ಲೇಖನ ಬೇಕು] 1950ರ ದಶಕ ಮತ್ತು 1960ರ ದಶಕಗಳು ಅನೇಕ ಕಲಾ-ಪ್ರಕಾರಗಳ ಹೊರಹೊಮ್ಮುವಿಕೆಗೆ ಸಾಕ್ಷಿಯಾದವು. ಕ್ರಿಯಾಚಿತ್ರಣ, ವರ್ಣಕ್ಷೇತ್ರದ ಚಿತ್ರಕಲೆ, ಜನಪ್ರಿಯ ಕಲೆ, ದೃಶ್ಯಕಲೆ, ಅಸಂಗತ-ಬದಲಾವಣೆಯ ಚಿತ್ರಕಲೆ, ಕನಿಷ್ಠೀಯ ಕಲೆ, ಭಾವಗೀತಾತ್ಮಕ ಅಮೂರ್ತೀಕರಣ, ಫ್ಲಕ್ಸಸ್, ಕನಿಷ್ಠೀಯತೆಯ-ನಂತರದ, ದ್ಯುತಿ-ಯಥಾರ್ಥತೆ ಮತ್ತು ಹಲವಾರು ಇತರ ಆಂದೋಲನಗಳು ಈ ಅವಧಿಯಲ್ಲಿ ಕಂಡುಬಂದವು. 1960ರ ದಶಕದ ಅಂತ್ಯ ಹಾಗೂ 1970ರ ದಶಕದಲ್ಲಿ, ನೆಲದ ಕಲೆ, ಪ್ರದರ್ಶನ ಕಲೆ, ಕಲ್ಪನಾತ್ಮಕ ಕಲೆ, ಮತ್ತು ಇತರ ಹೊಸ ಕಲಾಸ್ವರೂಪಗಳು, ಹೆಚ್ಚು ಸಾಂಪ್ರದಾಯಿಕ ಮಾಧ್ಯಮಗಳಿಗೆ ಹಾನಿಮಾಡುವ ಮೂಲಕ, ಪೋಷಕರು ಮತ್ತು ವಿಮರ್ಶಕರ ಗಮನವನ್ನು ಸೆಳೆದಿದ್ದವು.[೧೪] ಬೃಹತ್ತಾದ ನೆಲೆಗೊಳಿಸುವಿಕೆಗಳು ಮತ್ತು ಪ್ರದರ್ಶನಗಳು ವ್ಯಾಪಕವಾಗಿ ಹರಡಿದವು. ಸರಿಸುಮಾರು ಅದೇ ಅವಧಿಯಲ್ಲಿ, ಅನೇಕ ಕಲಾವಿದರು ಮತ್ತು ವಾಸ್ತುಶಿಲ್ಪಿಗಳು "ಆಧುನಿಕ" ಎಂಬ ಕಲ್ಪನೆಯನ್ನು ತಿರಸ್ಕರಿಸಲು ಶುರುಮಾಡಿದರು ಮತ್ತು ವಿಶಿಷ್ಟವೆಂಬಂತೆ ಆಧುನಿಕೋತ್ತರ ಕೃತಿಗಳನ್ನು ಸೃಷ್ಟಿಸಿದರು.[ಸೂಕ್ತ ಉಲ್ಲೇಖನ ಬೇಕು] 1970ರ ದಶಕದ ಅಂತ್ಯದ ವೇಳೆಗೆ, "ಚಿತ್ರಕಲೆಯ ಅಂತ್ಯ"ದ (ಡೊಗ್ಲಾಸ್ ಕ್ರಿಂಪ್‌ನಿಂದ 1981ರಲ್ಲಿ ಬರೆಯಲ್ಪಟ್ಟ ಒಂದು ಪ್ರಚೋದನಾತ್ಮಕ ಪ್ರಬಂಧದ ಶೀರ್ಷಿಕೆ) ಕುರಿತು ವಿಮರ್ಶಕರು ಮಾತಾಡುವುದನ್ನು ಪ್ರಾರಂಭಿಸಿದಾಗ, ಹೊಸ ಮಾಧ್ಯಮಗಳ ಕಲೆಯು ಸ್ವತಃ ತನ್ನೊಳಗೇ ಒಂದು ವರ್ಗವಾಗಿ ಹೊರಹೊಮ್ಮಿತು; ವಿಡಿಯೋ ಕಲೆಯಂಥ ತಂತ್ರಜ್ಞಾನದ ವಿಧಾನಗಳೊಂದಿಗೆ ಪ್ರಯೋಗ ನಡೆಸುತ್ತಿದ್ದ ಕಲಾವಿದರ ಸಂಖ್ಯೆಯು ಹೆಚ್ಚುತ್ತಾ ಹೋಗಿದ್ದೇ ಇದಕ್ಕೆ ಕಾರಣವಾಗಿತ್ತು.[೧೫] 1980ರ ದಶಕ ಮತ್ತು 1990ರ ದಶಕಗಳಲ್ಲಿ ಚಿತ್ರಕಲೆಯು ನವೀಕರಿಸಲ್ಪಟ್ಟ ಪ್ರಾಮುಖ್ಯತೆಯನ್ನು ಪಡೆಯಿತು; ನವ-ಅಭಿವ್ಯಕ್ತಿವಾದದ ಉದಯ ಹಾಗೂ ಆಕೃತಿಯ ಮೂಲಕ ರೂಪಿಸಿದ ಚಿತ್ರಕಲೆಯ ಪುನರುಜ್ಜೀವನ -ಇವು ಇದಕ್ಕೆ ಸಾಕ್ಷ್ಯವನ್ನು ಒದಗಿಸುತ್ತವೆ.[೧೬]
ಕಲಾ ಆಂದೋಲನಗಳು ಮತ್ತು ಕಲಾವಿದರ ಗುಂಪುಗಳು
[ಬದಲಾಯಿಸಿ](ಪಟ್ಟಿಮಾಡಲ್ಪಟ್ಟಿರುವ ಪ್ರತಿನಿಧಿ ಕಲಾವಿದರೊಂದಿಗೆ ಸರಿಸುಮಾರಾಗಿ ಕಾಲಾನುಕ್ರಮದಲ್ಲಿ ಜೋಡಿಸಿರುವಂಥದ್ದು.) ಆಧುನಿಕ ಕಲೆ
19ನೇ ಶತಮಾನ
[ಬದಲಾಯಿಸಿ]- ರಮ್ಯತಾವಾದ ಎಂಬ ರಮ್ಯತಾವಾದಿ ಆಂದೋಲನ - ಫ್ರಾನ್ಸಿಸ್ಕೊ ಡೆ ಗೋಯಾ, J. M. W. ಟರ್ನರ್, ಯೂಜೀನ್ ಡೆಲಾಕ್ರೋಯಿಕ್ಸ್
- ಯಥಾರ್ಥತೆ - ಗಸ್ಟಾವೆ ಕೌರ್ಬೆಟ್, ಕೆಮಿಲ್ಲೆ ಕೊರೊಟ್, ಜೀನ್-ಫ್ರಾಂಕೋಯಿಸ್ ಮಿಲೆಟ್
- ಚಿತ್ತಪ್ರಭಾವ ನಿರೂಪಣ - ಎಡ್ಗರ್ ಡೆಗಾಸ್, ಎಡ್ವರ್ಡ್ ಮ್ಯಾನೆಟ್, ಕ್ಲೌಡ್ ಮೊನೆಟ್, ಕೆಮಿಲ್ಲೆ ಪಿಸ್ಸಾರ್ರೊ, ಆಲ್‌ಫ್ರೆಡ್ ಸಿಸ್ಲೆ
- ಉತ್ತರೋತ್ತರದ ಕಲಾಪದ್ಧತಿ - ಜಾರ್ಜಸ್ ಸ್ಯೂರಾಟ್, ಪಾಲ್ ಸೆಝೇನ್, ಪಾಲ್ ಗೌಗುಯಿನ್, ವಿನ್ಸೆಂಟ್ ವಾನ್ ಗೋಗ್, ಹೆನ್ರಿ ಡೆ ಟೌಲೌಸೆ-ಲೌಟ್ರೆಕ್, ಹೆನ್ರಿ ರೌಸ್ಸೆಯು
- ಪ್ರತಿಮಾಪಂಥ - ಗುಸ್ಟೇವ್ ಮೊರಿಯು, ಒಡಿಲಾನ್ ರೆಡಾನ್, ಜೇಮ್ಸ್ ಎನ್ಸರ್
- ಲೆಸ್ ನ್ಯಾಬಿಸ್ - ಪಿಯರೆ ಬೊನ್ನಾರ್ಡ್, ಎಡ್ವರ್ಡ್ ವುಯಿಲಾರ್ಡ್, ಫೆಲಿಕ್ಸ್ ವ್ಯಾಲೊಟನ್
- ಆಧುನಿಕ ಶೈಲಿಯ-ಪೂರ್ವದ ಮೂರ್ತಿಕಾರರು - ಅರಿಸ್ಟೈಡ್ ಮೈಲಾಲ್, ಅಗಸ್ಟೆ ರೋಡಿನ್
20ನೇ ಶತಮಾನದ ಆರಂಭಿಕ ಹಂತ (Iನೇ ಜಾಗತಿಕ ಸಮರಕ್ಕೆ ಮುಂಚಿತವಾಗಿ)
[ಬದಲಾಯಿಸಿ]- ನವ್ಯಕಲೆ ಮತ್ತು ರೂಪಾಂತರಗಳು - ನಿಸರ್ಗಕಲೆ, ಆಧುನಿಕ ಶೈಲಿ, ಆಧುನಿಕತಾ ಸಿದ್ಧಾಂತ - ಔಬ್ರೆ ಬಿಯರ್ಡ್‌ಸ್ಲೆ, ಆಲ್ಫೋನ್ಸ್ ಮ್ಯೂಚಾ, ಗುಸ್ಟಾವ್ ಕ್ಲಿಮ್ಟ್,
- ನವ್ಯಕಲೆ ವಾಸ್ತುಶಿಲ್ಪ ಮತ್ತು ವಿನ್ಯಾಸ - ಆಂಟೊನಿ ಗೌದಿ, ಒಟ್ಟೊ ವ್ಯಾಗ್ನರ್, ವೈನರ್ ವೆರ್ಕ್‌ಸ್ಟಾಟೆ, ಜೋಸೆಫ್ ಹಾಫ್‌ಮನ್, ಅಡಾಲ್ಫ್ ಲೂಸ್, ಕೊಲೊಮನ್ ಮೋಸೆರ್
- ಘನಾಕೃತಿ ಕಲೆ - ಜಾರ್ಜಸ್ ಬ್ರಾಕೆ, ಪ್ಯಾಬ್ಲೋ ಪಿಕಾಸೊ
- ಉಜ್ಜ್ವಲ ವರ್ಣಚಿತ್ರಣ - ಆಂಡ್ರೆ ಡೆರೈನ್, ಹೆನ್ರಿ ಮ್ಯಾಟಿಸ್ಸೆ, ಮೌರೀಸ್ ಡೆ ವ್ಲಾಮಿನ್ಕ್
- ಅಭಿವ್ಯಕ್ತಿವಾದ - ಎಗಾನ್ ಸ್ಕೀಲೆ, ಒಸ್ಕರ್ ಕೊಕೊಷ್ಕಾ, ಎಡ್ವರ್ಡ್ ಮಂಚ್, ಎಮಿಲ್ ನೋಲ್ಡ್
- ಭವಿಷ್ಯದ್ವಾದ - ಜಿಯಾಕೊಮೊ ಬಲ್ಲಾ, ಅಂಬರ್ಟೊ ಬೊಸಿಯಾನಿ, ಕಾರ್ಲೋ ಕ್ಯಾರಾ
- ಡೈ ಬ್ರೂಕ್ - ಅರ್ನ್ಸ್ಟ್ ಲುಡ್‌ವಿಗ್ ಕಿರ್ಚ್‌ನರ್
- ಡೆರ್ ಬ್ಲೌ ರೀಟರ್ - ವಾಸಿಲಿ ಕಾಂಡಿನ್ಸ್ಕಿ, ಫ್ರಾಂಜ್ ಮಾರ್ಕ್
- ಆರ್ಫ್ಯೂಸನ ತತ್ತ್ವ - ರಾಬರ್ಟ್ ಡೆಲೌನೆ, ಸೋನಿಯಾ ಡೆಲೌನೆ, ಜಾಕ್ವೆಸ್ ವಿಲ್ಲಾನ್
- ಛಾಯಾಗ್ರಹಣ - ಚಿತ್ರಾತ್ಮಕತೆ, ನೇರವಾದ ಛಾಯಾಗ್ರಹಣ
- ಉತ್ತರೋತ್ತರದ ಕಲಾಪದ್ಧತಿ - ಎಮಿಲಿ ಕ್ಯಾರ್
- ಪೂರ್ವಭಾವಿ-ಅತಿ ಯಥಾರ್ಥವಾದ - ಜಾರ್ಜಿಯೋ ಡೆ ಚಿರಿಕೊ, ಮಾರ್ಕ್ ಚಾಗಲ್
- ರಷ್ಯಾದ ನವ್ಯ-ಪ್ರಯೋಗಿ - ಕಾಸಿಮಿರ್ ಮಾಲೆವಿಚ್, ನಟಾಲಿಯಾ ಗೊಂಚರೋವಾ, ಮಿಖಾಯಿಲ್ ಲ್ಯಾರಿನೋವ್
- ಶಿಲ್ಪಕಲೆ - ಪ್ಯಾಬ್ಲೋ ಪಿಕಾಸೊ, ಹೆನ್ರಿ ಮ್ಯಾಟಿಸ್ಸೆ, ಕಾನ್‌ಸ್ಟಾಂಟಿನ್ ಬ್ರಾಂಕುಸಿ
- ಸಿಂಕ್ರಮಿಸಂ - ಸ್ಟಾಂಟನ್ ಮ್ಯಾಕ್‌ಡೊನಾಲ್ಡ್-ರೈಟ್, ಮೋರ್ಗಾನ್ ರಸ್ಸೆಲ್
- ಆವರ್ತಪಂಥ - ವಿಂಡ್‌ಹ್ಯಾಮ್ ಲೆವಿಸ್
Iನೇ ಜಾಗತಿಕ ಸಮರದಿಂದ IIನೇ ಜಾಗತಿಕ ಸಮರದವರೆಗೆ
[ಬದಲಾಯಿಸಿ]- ಡಾಡಾ - ಜೀನ್ ಆರ್ಪ್, ಮಾರ್ಸೆಲ್ ಡ್ಯೂಚಾಂಪ್, ಮ್ಯಾಕ್ಸ್ ಅರ್ನ್ಸ್ಟ್, ಫ್ರಾನ್ಸಿಸ್ ಪಿಕಾಬಿಯಾ, ಕರ್ಟ್ ಷ್ವಿಟ್ಟರ್ಸ್
- ಕೃತಕ ಘನಾಕೃತಿ ಕಲೆ - ಜಾರ್ಜಸ್ ಬ್ರಾಕೆ, ಜುವಾನ್ ಗ್ರಿಸ್, ಫರ್ನಾಂಡ್ ಲೆಗರ್, ಪ್ಯಾಬ್ಲೋ ಪಿಕಾಸೊ
- ಪಿಟ್ಯುರಾ ಮೆಟಾಫಿಸಿಕಾ - ಜಾರ್ಜಿಯೋ ಡೆ ಚಿರಿಕೊ, ಕಾರ್ಲೋ ಕ್ಯಾರಾ
- ಡೆ ಸ್ಟಿಜ್ಲ್ - ಥಿಯೋ ವಾನ್ ಡೋಸ್‌ಬರ್ಗ್, ಪಿಯೆಟ್ ಮೋಂಡ್ರಿಯಾನ್
- ಅಭಿವ್ಯಕ್ತಿವಾದ - ಎಗಾನ್ ಸ್ಕೀಲೆ, ಅಮೆಡಿಯೋ ಮೊಡಿಗಿಲಾನಿ, ಚೈಮ್ ಸೌಟೀನ್
- ಹೊಸ ವಾಸ್ತವಿಕತೆ - ಮ್ಯಾಕ್ಸ್ ಬೆಕ್‌ಮನ್, ಒಟ್ಟೊ ಡಿಕ್ಸ್, ಜಾರ್ಜ್ ಗ್ರೋಸ್ಜ್
- ಆಕೃತಿಯ ಮೂಲಕ ರೂಪಿಸಿದ ಚಿತ್ರಕಲೆ - ಹೆನ್ರಿ ಮ್ಯಾಟಿಸ್ಸೆ, ಪಿಯರೆ ಬೊನ್ನಾರ್ಡ್
- ಅಮೆರಿಕಾದ ಆಧುನಿಕತಾ ಸಿದ್ಧಾಂತ - ಸ್ಟುವರ್ಟ್ ಡೇವಿಸ್, ಅರ್ಥರ್ G. ಡೋವ್, ಮಾರ್ಸ್‌ಡೆನ್ ಹಾರ್ಟ್ಲೆ, ಜಾರ್ಜಿಯಾ ಒ'ಕೀಫೆ
- ರಾಚನಿಕವಾದ - ನೌಮ್ ಗ್ಯಾಬೊ, ಗುಸ್ತಾವ್ ಕ್ಲುಟ್‌ಸಿಸ್, ಲಾಸ್‌ಜ್ಲೊ ಮೊಹೊಲಿ-ನ್ಯಾಗಿ, ಎಲ್ ಲಿಸ್ಸಿಟ್ಜ್‌ಕಿ, ಕಾಸಿಮಿರ್ ಮಾಲೆವಿಚ್, ವಾಡಿಮ್ ಮೆಲ್ಲರ್, ಅಲೆಕ್ಸಾಂಡರ್ ರಾಡ್‌ಚೆಂಕೊ, ವ್ಲಾಡಿಮಿರ್ ಟ್ಯಾಟ್ಲಿನ್
- ಅತಿ ಯಥಾರ್ಥವಾದ - ಜೀನ್ ಆರ್ಪ್, ಸಾಲ್ವೆಡಾರ್ ಡಾಲಿ, ಮ್ಯಾಕ್ಸ್ ಅರ್ನ್ಸ್ಟ್, ರೆನೀ ಮ್ಯಾಗ್ರಿಟೆ, ಆಂಡ್ರೆ ಮ್ಯಾಸನ್, ಜೋವನ್ ಮಿರೊ, ಮಾರ್ಕ್ ಚಾಗಲ್
- ಬೌಹೌಸ್ - ವಾಸಿಲಿ ಕಾಂಡಿನ್ಸ್ಕಿ, ಪಾಲ್ ಕ್ಲೀ, ಜೋಸೆಫ್ ಆಲ್ಬರ್ಸ್
- ಶಿಲ್ಪಕಲೆ - ಅಲೆಕ್ಸಾಂಡರ್ ಕ್ಯಾಲ್ಡರ್, ಆಲ್ಬರ್ಟೋ ಜಿಯಾಕೊಮೆಟ್ಟಿ, ಗ್ಯಾಸ್ಟನ್ ಲ್ಯಾಚೈಸ್, ಹೆನ್ರಿ ಮೂರ್, ಪ್ಯಾಬ್ಲೋ ಪಿಕಾಸೊ, ಜೂಲಿಯೊ ಗೊನ್‌ಜಾಲೆಜ್
- ಸ್ಕಾಟಿಷ್ ವರ್ಣಕುಶಲಿಗಳು - ಫ್ರಾನ್ಸಿಸ್ ಕ್ಯಾಡೆಲ್, ಸ್ಯಾಮ್ಯುಯೆಲ್ ಪೆಪ್ಲೋ, ಲೆಸ್ಲೀ ಹಂಟರ್, ಜಾನ್ ಡಂಕನ್ ಫರ್ಗ್ಯೂಸನ್
- ಸೂಪರ್‌ಮೇಟಿಸಂ - ಕಾಜಿಮಿರ್ ಮಾಲೆವಿಚ್, ಅಲೆಕ್ಸಾಂಡ್ರಾ ಎಕ್‌ಸ್ಟರ್, ಓಲ್ಗಾ ರೋಜನೋವಾ, ನಾಡೆಝ್ಡಾ ಉದಾಲ್ತ್ಸೋವಾ, ಇವಾನ್ ಕ್ಲಿಯುನ್, ಲ್ಯೂಬೊವ್ ಪೊಪೊವಾ, ನಿಕೋಲಾಯ್ ಸುಯೆಟಿನ್, ನೀನಾ ಗೆಂಕೆ-ಮೆಲ್ಲರ್, ಇವಾನ್ ಪುನಿ, ಕ್ಸೇನಿಯಾ ಬೊಗುಸ್ಲಾವ್ಸ್‌ಕಾಯಾ
IIನೇ ಜಾಗತಿಕ ಸಮರದ ನಂತರದ ಅವಧಿ
[ಬದಲಾಯಿಸಿ]- ಫಿಗರಾಟಿಫ್ಸ್ - ಬರ್ನಾರ್ಡ್ ಬಫೆಟ್, ಜೀನ್ ಕಾರ್ಜೌ, ಮೌರೀಸ್ ಬೋಯ್ಟೆಲ್, ಡೇನಿಯೆಲ್ ಡು ಜೇನ್‌ರಾಂಡ್, ಕ್ಲೌಡ್-ಮ್ಯಾಕ್ಸ್ ಲೊಚು
- ಶಿಲ್ಪಕಲೆ - ಹೆನ್ರಿ ಮೂರ್, ಡೇವಿಡ್ ಸ್ಮಿತ್, ಟೋನಿ ಸ್ಮಿತ್, ಅಲೆಕ್ಸಾಂಡರ್ ಕ್ಯಾಲ್ಡರ್, ಇಸಾಮು ನೊಗುಚಿ,[೧೭] ಆಲ್ಬರ್ಟೋ ಜಿಯಾಕೊಮೆಟ್ಟಿ, ಸರ್ ಆಂಟೊನಿ ಕಾರೊ, ಜೀನ್ ಡ್ಯೂಬಫೆಟ್, ಐಸಾಕ್ ವಿಟ್ಕಿನ್, ರೆನೀ ಇಷೆ, ಮರಿನೋ ಮಾರಿನಿ, ಲೂಯಿಸ್ ನೆವೆಲ್‌ಸನ್
- ಕ್ರಿಯಾಚಿತ್ರಣ - ವಿಲ್ಲೆಮ್ ಡೆ ಕೂನಿಂಗ್, ಜಾಕ್‌ಸನ್ ಪೊಲ್ಲಾಕ್, ಹಾನ್ಸ್ ಹಾಫ್‌ಮನ್, ಫ್ರಾಂಜ್ ಕ್ಲೈನ್, ರಾಬರ್ಟ್ ಮದರ್‌ವೆಲ್, ಕ್ಲಿಫೋರ್ಡ್ ಸ್ಟಿಲ್, ಲೀ ಕ್ರಾಸ್ನರ್
- ಅಮೆರಿಕಾದ ಅಮೂರ್ತ ಕಲಾವಿದರು - ಲೀ ಕ್ರಾಸ್ನರ್, ಇಬ್ರಾಂ ಲ್ಯಾಸ್ಸಾವ್, ಆಡ್ ರೀನ್‌ಹಾರ್ಡ್ಟ್, ಜೋಸೆಫ್ ಆಲ್ಬರ್ಸ್, ಬರ್ಗೋಯ್ನೆ ಡಿಲ್ಲರ್
- ಆರ್ಟ್ ಬ್ರಟ್ - ಅಡಾಲ್ಫ್ ವೋಲ್ಫ್ಲಿ, ಆಗಸ್ಟ್ ನ್ಯಾಟೆರರ್, ಫರ್ಡಿನೆಂಡ್ ಚೆವಾಲ್, ಮ್ಯಾಡ್ಜ್ ಗಿಲ್, ಪಾಲ್ ಸಾಲ್ವೇಟರ್ ಗೋಲ್ಡನ್‌ಗ್ರೀನ್
- ಆರ್ಟೆ ಪೊವೆರಾ - ಜಾನ್ನಿಸ್ ಕೌನೆಲ್ಲಿಸ್, ಲೂಸಿಯಾನೊ ಫ್ಯಾಬ್ರೊ, ಮಾರಿಯೋ ಮೆರ್ಜ್, ಪಿಯೆರೊ ಮಂಜೊನಿ, ಆಲಿಘೀರೋ ಬೊಯೆಟಿ
- ವರ್ಣಕ್ಷೇತ್ರದ ಚಿತ್ರಕಲೆ - ಬಾರ್ನೆಟ್ ನ್ಯೂಮನ್, ಗುರುತುಮಾಡು ರೊಥ್ಕೊ, ಸ್ಯಾಮ್ ಫ್ರಾನ್ಸಿಸ್, ಮಾರಿಸ್ ಲೂಯಿಸ್, ಹೆಲೆನ್ ಫ್ರಾಂಕೆನ್‌ಥ್ಯಾಲರ್
- ಭಾವಪ್ರಚೋದಕ ಚಿತ್ರಣ - ಜೀನ್ ಡ್ಯೂಬಫೆಟ್, ಪಿಯರೆ ಸೌಲ್ಯಾಜೆಸ್, ಹಾನ್ಸ್ ಹಾರ್ಟಂಗ್, ಲುಡ್ವಿಗ್ ಮೆರ್ವಾರ್ಟ್
- COBRA - ಪಿಯರೆ ಅಲೆಚಿನ್ಸ್ಕಿ, ಕಾರೆಲ್ ಅಪ್ಪೆಲ್, ಅಸ್ಗರ್ ಜೋರ್ನ್
- ನವ-ಡಾಡಾ - ರಾಬರ್ಟ್ ರೌಸ್‌ಚೆನ್‌ಬರ್ಗ್, ಜಾಸ್ಪರ್ ಜಾನ್ಸ್, ಜಾನ್ ಚಾಂಬರ್‌ಲೇನ್, ಜೋಸೆಫ್ ಬ್ಯೂಸ್, ಎಡ್ವರ್ಡ್ ಕಿಯೆನ್‌ಹೋಲ್ಜ್
- ಫ್ಲಕ್ಸಸ್ - ಜಾರ್ಜ್ ಮಾಸಿಯೂನಸ್, ಅಲನ್ ಕ್ಯಾಪ್ರೋ, ನ್ಯಾಮ್ ಜೂನ್ ಪೈಕ್, ಯೊಕೋ ಒನೊ, ಡಿಕ್ ಹಿಗ್ಗಿನ್ಸ್
- ಡೌ-ಅಲ್-ಸೆಟ್ - ಬಾರ್ಸಿಲೋನಾದಲ್ಲಿ ಕವಿ/ಕಲಾವಿದ ಜೋವನ್ ಬ್ರೊಸ್ಸಾನಿಂದ ಸಂಸ್ಥಾಪಿಸಲ್ಪಟ್ಟಿತು, - ಆಂಟೊನಿ ಟೇಪೀಸ್
- ಗ್ರುಪೋ ಎಲ್ ಪಾಸೊ - ಆಂಟೋನಿಯೋ ಸೌರಾ, ಪ್ಯಾಬ್ಲೋ ಸೆರ್ರಾನೊ ಎಂಬ ಕಲಾವಿದರಿಂದ ಮ್ಯಾಡ್ರಿಡ್‌ನಲ್ಲಿ ಸಂಸ್ಥಾಪಿಸಲ್ಪಟ್ಟಿತು
- ಜ್ಯಾಮಿತೀಯ ಅಮೂರ್ತೀಕರಣ - ವಾಸಿಲಿ ಕಾಂಡಿನ್ಸ್ಕಿ, ಕಾಜಿಮಿರ್ ಮಾಲೆವಿಚ್, ನಾಡಿರ್ ಅಫೊನ್ಸೊ, ಮನ್ಲಿಯೊ ರೋ, ಮಾರಿಯೋ ರಾಡೀಸ್, ಮಿನೊ ಅರ್ಗೆಂಟೊ
- ಅಸಂಗತ-ಬದಲಾವಣೆಯ ಚಿತ್ರಕಲೆ - ಜಾನ್ ಮೆಕ್‌ಲೌಘ್ಲಿನ್, ಎಲ್ಸ್‌ವರ್ತ್ ಕೆಲ್ಲಿ, ಫ್ರಾಂಕ್ ಸ್ಟೆಲ್ಲಾ, ಅಲ್ ಹೆಲ್ಡ್, ರೊನಾಲ್ಡ್ ಡೇವಿಸ್
- ಚಲನಾತ್ಮಕ ಕಲೆ - ಜಾರ್ಜ್ ರಿಕಿ, ಗೆಟುಲಿಯೋ ಆಲ್ವಿಯಾನಿ
- ನೆಲದ ಕಲೆ - ಕ್ರಿಸ್ಟೋ, ರಿಚರ್ಡ್ ಲಾಂಗ್, ರಾಬರ್ಟ್ ಸ್ಮಿತ್‌ಸನ್, ಮೈಕೇಲ್ ಹೀಜರ್
- ಲೆಸ್ ಆಟೋಮ್ಯಾಟಿಸ್ಟೆಸ್ - ಕ್ಲಾಡೆ ಗೌರೆಯೂ, ಜೀನ್-ಪಾಲ್ ರಯೋಪೆಲ್ಲೆ, ಪಿಯರೆ ಗೌರೆಯೂ, ಫರ್ನಾಂಡ್ ಲೆಡ್ಯುಕ್, ಜೀನ್-ಪಾಲ್ ಮೌಸ್ಸೆಯು, ಮಾರ್ಸೆಲ್ಲೆ ಫೆರಾನ್
- ಕನಿಷ್ಠೀಯ ಕಲೆ - ಸೋಲ್ ಲೆವಿಟ್, ಡೊನಾಲ್ಡ್ ಜೂಡ್, ಡ್ಯಾನ್ ಫ್ಲಾವಿನ್, ರಿಚರ್ಡ್ ಸೆರ್ರಾ, ಆಗ್ನೆಸ್ ಮಾರ್ಟಿನ್
- ಕನಿಷ್ಠೀಯತೆಯ-ನಂತರದ ಕಲೆ - ಎವಾ ಹೆಸ್ಸೆ, ಬ್ರೂಸ್ ನೌಮನ್, ಲಿಂಡಾ ಬೆಂಗ್ಲಿಸ್
- ಭಾವಗೀತಾತ್ಮಕ ಅಮೂರ್ತೀಕರಣ - ರೋನೀ ಲ್ಯಾಂಡ್‌ಫೀಲ್ಡ್, ಸ್ಯಾಮ್ ಗಿಲ್ಲಿಯಂ, ಲ್ಯಾರಿ ಝೊಕ್ಸ್, ಡ್ಯಾನ್ ಕ್ರಿಸ್ಟೆನ್‌ಸನ್
- ಆಕೃತಿಯ ಮೂಲಕ ರೂಪಿಸಿದ ನವ್ಯಕಲೆ - ಫರ್ನ್ಯಾಂಡೊ ಬೊಟೆರೊ, ಆಂಟೊನಿಯೊ ಬೆರ್ನಿ
- ನವ-ಅಭಿವ್ಯಕ್ತಿವಾದ - ಜಾರ್ಜ್ ಬಸೆಲಿಟ್ಜ್, ಆನ್‌ಸೆಲ್ಮ್ ಕೀಫರ್, ಫ್ರಾನ್ಸೆಸ್ಕೊ ಕ್ಲೆಮೆಂಟೆ, ಜೀನ್-ಮೈಕೇಲ್ ಬಾಸ್‌ಕ್ವಿಯಟ್
- ಹೊಸ ಯಥಾರ್ಥತೆ - ವೆಸ್ ಕ್ಲೈನ್, ಪಿಯರೆ ರೆಸ್ಟಾನಿ, ಅರ್ಮಾನ್
- ದೃಶ್ಯಕಲೆ - ವಿಕ್ಟರ್ ವಸಾರೆಲಿ, ಬ್ರಿಡ್‌ಗೆಟ್ ರಿಲೆ, ರಿಚರ್ಡ್ ಅನುಸ್‌ಜ್ಕೀವಿಕ್ಜ್
- ಹೊರಗಿನ ಕಲೆ - ಹೋವರ್ಡ್ ಫಿನ್‌ಸ್ಟರ್, ಗ್ರಾಂಡ್‌ಮಾ ಮೋಸೆಸ್, ಬಾಬ್ ಜಸ್ಟಿನ್
- ದ್ಯುತಿ-ಯಥಾರ್ಥತೆ - ಆಡ್ರೆ ಫ್ಲಾಕ್, ಚಕ್ ಕ್ಲೋಸ್, ಡ್ಯುವಾನ್ ಹಾನ್ಸನ್, ರಿಚರ್ಡ್ ಎಸ್ಟೆಸ್, ಮ್ಯಾಲ್ಕಮ್ ಮಾರ್ಲೆ
- ಜನಪ್ರಿಯ ಕಲೆ - ರಿಚರ್ಡ್ ಹ್ಯಾಮಿಲ್ಟನ್, ರಾಬರ್ಟ್ ಇಂಡಿಯಾನಾ, ಜಾಸ್ಪರ್ ಜಾನ್ಸ್, ರಾಯ್ ಲಿಕ್ಟೆನ್‌ಸ್ಟೀನ್, ರಾಬರ್ಟ್ ರೌಸ್‌ಚೆನ್‌ಬರ್ಗ್, ಆಂಡಿ ವಾರ್ಹಾಲ್, ಎಡ್ ರುಸ್ಚಾ, ಡೇವಿಡ್ ಹಾಕ್ನೆ
- ಯುದ್ಧಾನಂತರದ ಐರೋಪ್ಯ ಆಕೃತಿಯ ಮೂಲಕ ರೂಪಿಸಿದ ಚಿತ್ರಕಲೆ - ಲೂಸಿಯನ್ ಫ್ರ್ಯೂಡ್, ಫ್ರಾನ್ಸಿಸ್ ಬೇಕನ್, ಫ್ರಾಂಕ್ ಔವೆರ್‌ಬ್ಯಾಚ್
- ಆಕಾರಕೊಟ್ಟ ತೈಲಚಿತ್ರ - ಲೀ ಬೋಂಟೆಕೌ, ಫ್ರಾಂಕ್ ಸ್ಟೆಲ್ಲಾ, ಕೆನ್ನೆತ್ ನೊಲ್ಯಾಂಡ್, ರೋನ್ ಡೇವಿಸ್, ರಾಬರ್ಟ್ ಮ್ಯಾನ್‌ಗೋಲ್ಡ್.
- ಸೋವಿಯೆಟ್ ಒಕ್ಕೂಟದ ಕಲೆ - ಅಲೆಕ್ಸಾಂಡರ್ ಡೀನೆಕಾ, ಅಲೆಕ್ಸಾಂಡರ್ ಗೆರಾಸಿಮೊವ್, ಇಲ್ಯಾ ಕಬಕೊವ್, ಕೊಮಾರ್ & ಮೆಲಾಮಿಡ್, ಅಲೆಕ್ಸಾಂಡರ್ ಝಾಂಕೊವ್, ಲಿಯೋನಿಡ್ ಸೊಕೊವ್
- ದೈಶಿಕತ್ವ - ಲೂಸಿಯೋ ಫಾಂಟಾನಾ
- ಕಲ್ಪನಾವಿಹಾರಿ ಕಲೆ - ಅರ್ನ್ಸ್ಟ್ ಫ್ಯೂಕ್ಸ್, ಪಾಲ್ ಲ್ಯಾಫೊಲೆ, ಮೈಕೆಲ್ ಬೋವೆನ್
ಪ್ರಮುಖ ಆಧುನಿಕ ಕಲಾ ಪ್ರದರ್ಶನಗಳು ಮತ್ತು ವಸ್ತುಸಂಗ್ರಹಾಲಯಗಳು
[ಬದಲಾಯಿಸಿ]- ಒಂದು ಸಮಗ್ರ ಪಟ್ಟಿಗಾಗಿ ನೋಡಿ: ಮ್ಯೂಸಿಯಮ್ಸ್ ಆಫ್ ಮಾಡರ್ನ್ ಆರ್ಟ್ .
ಬೆಲ್ಜಿಯಂ
[ಬದಲಾಯಿಸಿ]- SMAK, ಘೆಂಟ್
ಬ್ರೆಜಿಲ್
[ಬದಲಾಯಿಸಿ]- MASP, ಸಾವೋ ಪಾಲೊ, SP
- MAM/SP, ಸಾವೋ ಪಾಲೊ, SP
- MAM/RJ, ರಯೋ ಡಿ ಜನೈರೋ, RJ
- MAM/BH, ಸಾಲ್ವೆಡಾರ್, ಬಹಿಯಾ
ಕೊಲಂಬಿಯಾ
[ಬದಲಾಯಿಸಿ]- MAMBO, ಬೊಗೊಟಾ
ಈಕ್ವೆಡಾರ್
[ಬದಲಾಯಿಸಿ]- ಮ್ಯೂಸಿಯೊ ಆಂಥ್ರೊಪಾಲೊಜಿಕೊ ವೈ ಡೆ ಆರ್ಟೆ ಕಾಂಟೆಂಪೊರಾನಿಯೊ, ಗುಯಾಕ್ವಿಲ್
ಫಿನ್ಲೆಂಡ್
[ಬದಲಾಯಿಸಿ]- EMMA, ಎಸ್ಪೂ,
- ಕಿಯಾಸ್ಮ, ಹೆಲ್ಸಿಂಕಿ,
- ಲಾಸಿ ಪಲಾಸೆ, ಹೆಲ್ಸಿಂಕಿ
ಫ್ರಾನ್ಸ್
[ಬದಲಾಯಿಸಿ]- ಸೆಂಟರ್ ಜಾರ್ಜಸ್ ಪಾಂಪಿಡೌ, ಪ್ಯಾರಿಸ್
- ಮ್ಯೂಸೀ ಡಿ'ಒರ್ಸೆ, ಪ್ಯಾರಿಸ್
- ಮ್ಯೂಸೀ ಡಿ'ಆರ್ಟ್ ಮಾಡರ್ನೆ ಡೆ ಲಾ ವಿಲ್ಲೆ ಡೆ ಪ್ಯಾರಿಸ್, ಪ್ಯಾರಿಸ್
- ಮ್ಯೂಸೀ ಪಿಕಾಸೊ, ಪ್ಯಾರಿಸ್
- ಮ್ಯೂಸಿಯಂ ಆಫ್ ಮಾಡರ್ನ್ ಅಂಡ್ ಕಾಂಟೆಂಪರರಿ ಆರ್ಟ್, ಸ್ಟ್ರಾಸ್‌ಬೋರ್ಗ್
ಜರ್ಮನಿ
[ಬದಲಾಯಿಸಿ]- ಡಾಕ್ಯುಮೆಂಟಾ, ಕಾಸ್ಸೆಲ್ (ಜರ್ಮನಿ), ಆಧುನಿಕ ಮತ್ತು ಸಮಕಾಲೀನ ಕಲೆಯ ಒಂದು ಐದು-ವರ್ಷದ ಪ್ರದರ್ಶನ
- ಮ್ಯೂಸಿಯಂ ಲುಡ್‌ವಿಗ್, ಕಲೋನ್
- ಪಿನಾಕೊಥೆಕ್ ಡೆರ್ ಮಾಡರ್ನೆ, ಮ್ಯೂನಿಚ್
ಭಾರತ
[ಬದಲಾಯಿಸಿ]- ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ - ನವದೆಹಲಿ,
- ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ - ಮುಂಬಯಿ,
- ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ - ಬೆಂಗಳೂರು,
- ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಂಗ್ರಹಾಲಯ - ಬೆಂಗಳೂರು, (ಇದರಲ್ಲಿ ನಿಕೊಲಸ್ ಮತ್ತು ಸ್ವೆಟಸ್ಲಾವ್ ರೋರಿಕ್ ಅವರುಗಳ ವರ್ಣಚಿತ್ರ, ರೇಖಾಚಿತ್ರ ಹಾಗೂ ಛಾಯಾಚಿತ್ರಗಳ, ಎಸ್.ಎಸ್.ಕುಕ್ಕೆಯವರ ಚಿತ್ರಕಲೆಯ, ಕೃಷ್ಣರೆಡ್ಡಿಯವರ ಗ್ರಾಫಿಕ್ ಕೃತಿಗಳ ಸಂಗ್ರಹಗಳಿವೆ)
- ಕೆ.ವೆಂಕಟಪ್ಪ ಕಲಾಶಾಲೆ - ಬೆಂಗಳೂರು, (ಇದರಲ್ಲಿ ಆಧುನಿಕ ಕರ್ನಾಟಕದ ಕಲಾವಿದರಾದ ಕೆ.ವೆಂಕಟಪ್ಪ, ಕೆ.ಕೆ.ಹೆಬ್ಬಾರ್ ಹಾಗೂ ರಾಜಾರಾಮರ ಕಲಾಕೃತಿಗಳ ಸಂಗ್ರಹವಿದೆ).
ಇರಾನ್
[ಬದಲಾಯಿಸಿ]- ಮ್ಯೂಸಿಯಂ ಆಫ್ ಕಾಂಟೆಂಪರರಿ ಆರ್ಟ್, ಟೆಹ್ರಾನ್
ಇಟಲಿ
[ಬದಲಾಯಿಸಿ]- ವೆನಿಸ್ ಬೈಎನಿಯಲ್, ವೆನಿಸ್
ಮೆಕ್ಸಿಕೋ
[ಬದಲಾಯಿಸಿ]- ಮ್ಯೂಸಿಯೊ ಡೆ ಆರ್ಟೆ ಮಾಡರ್ನೊ, ಮೆಕ್ಸಿಕೊ D.F.
ನೆದರ್ಲೆಂಡ್ಸ್
[ಬದಲಾಯಿಸಿ]- ಸ್ಟೆಡೆಲಿಜ್ಕ್ ಮ್ಯೂಸಿಯಂ, ಆಮ್ಸ್ಟರ್ಡ್ಯಾಂ
ಸ್ಪೇನ್
[ಬದಲಾಯಿಸಿ]- ಮ್ಯೂಸಿಯು ಡಿ'ಆರ್ಟ್ ಕಾಂಟೆಂಪೊರಾನಿ ಡೆ ಬಾರ್ಸಿಲೋನಾ, ಬಾರ್ಸಿಲೋನಾ
- ಮ್ಯೂಸಿಯು ನ್ಯಾಸಿಯೋನಲ್ ಸೆಂಟ್ರೊ ಡೆ ಆರ್ಟೆ ರೀನಾ ಸೋಫಿಯಾ, ಮ್ಯಾಡ್ರಿಡ್
- ಇನ್‌ಸ್ಟಿಟ್ಯೂಟ್ ವೇಲೆನ್ಸಿಯಾ ಡಿ'ಆರ್ಟ್ ಮಾಡರ್ನ್, ವೇಲೆನ್ಸಿಯಾ
ಸ್ವೀಡನ್
[ಬದಲಾಯಿಸಿ]- ಮಾಡರ್ನ ಮ್ಯುಸೀಟ್, ಸ್ಟಾಕ್‌ಹೋಮ್
ಯುಕೆ
[ಬದಲಾಯಿಸಿ]U.S.A.
[ಬದಲಾಯಿಸಿ]- ಆಲ್‌ಬ್ರೈಟ್-ನಾಕ್ಸ್ ಆರ್ಟ್ ಗ್ಯಾಲರಿ, ಬಫೆಲೊ, ನ್ಯೂಯಾರ್ಕ್
- ಆರ್ಟ್ ಇನ್‌ಸ್ಟಿಟ್ಯೂಟ್ ಆಫ್ ಚಿಕಾಗೊ, ಚಿಕಾಗೊ
- ಗಗ್ಗೆನ್‌ಹೀಮ್ ಮ್ಯೂಸಿಯಂ, ನ್ಯೂಯಾರ್ಕ್ ನಗರ ಮತ್ತು ವೆನಿಸ್ (ಇಟಲಿ); ತೀರಾ ಇತ್ತೀಚೆಗೆ ಬರ್ಲಿನ್ (ಜರ್ಮನಿ), ಬಿಲ್‌ಬಾವೊ (ಸ್ಪೇನ್) ಮತ್ತು ನೆವಡಾದ ಲಾಸ್ ವೆಗಾಸ್ ಇವೇ ಮೊದಲಾದ ಕಡೆಗಳಲ್ಲಿ ಸ್ಥಾಪಿಸಲ್ಪಟ್ಟಿತು
- ಹೈ ಮ್ಯೂಸಿಯಂ, ಅಟ್ಲಾಂಟಾ, ಜಾರ್ಜಿಯಾ
- ಲಾಸ್ ಏಂಜಲೀಸ್ ಕೌಂಟಿ ಮ್ಯೂಸಿಯಂ ಆಫ್ ಆರ್ಟ್, ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ
- ಮೆನಿಲ್ ಕಲೆಕ್ಷನ್, ಹೂಸ್ಟನ್
- ಮ್ಯೂಸಿಯಂ ಆಫ್ ಫೈನ್ ಆರ್ಟ್ಸ್, ಬಾಸ್ಟನ್, ಮ್ಯಾಸಚೂಸೆಟ್ಸ್
- ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್, ನ್ಯೂಯಾರ್ಕ್ ನಗರ
- ಸ್ಯಾನ್‌ಫ್ರಾನ್ಸಿಸ್ಕೊ ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್, ಸ್ಯಾನ್‌ಫ್ರಾನ್ಸಿಸ್ಕೊ
- ವಾಕರ್ ಆರ್ಟ್ ಸೆಂಟರ್, ಮಿನ್ನೆಯಾಪೊಲಿಸ್
- ವಿಟ್ನೆ ಮ್ಯೂಸಿಯಂ ಆಫ್ ಅಮೆರಿಕನ್ ಆರ್ಟ್, ನ್ಯೂಯಾರ್ಕ್ ನಗರ
ಇವನ್ನೂ ಗಮನಿಸಿ
[ಬದಲಾಯಿಸಿ]- ಆಧುನಿಕತಾ ಸಿದ್ಧಾಂತ
- ಆಧುನಿಕ ಕಲಾವಿದರ ಪಟ್ಟಿ
- 20ನೇ ಶತಮಾನದ ಕಲಾವಿದೆಯರ ಪಟ್ಟಿ
- 20ನೇ ಶತಮಾನದ ಕಲೆ
- 20ನೇ ಶತಮಾನದ ಪಾಶ್ಚಾತ್ಯ ಚಿತ್ರಕಲೆ
- ಕಲಾ ಪ್ರಣಾಳಿಕೆ
- ಕಲಾ ಆಂದೋಲನಗಳು
- ಕಲಾ ಅವಧಿಗಳು
- ಸಮಕಾಲೀನ ಕಲೆ
- ಚಿತ್ರಕಲೆಯ ಇತಿಹಾಸ
- ಆಧುನಿಕ ವಾಸ್ತುಶಿಲ್ಪ
- ಆಧುನಿಕೋತ್ತರ ಕಲೆ
- ಪಾಶ್ಚಾತ್ಯ ಚಿತ್ರಕಲೆ
ಟಿಪ್ಪಣಿಗಳು
[ಬದಲಾಯಿಸಿ]- ↑ ಅಟ್ಕಿನ್ಸ್ 1990, ಪುಟ 102.
- ↑ ಗೊಂಬ್ರಿಚ್ 1958, ಪುಟ 419.
- ↑ ರಸ್ಸೆಲ್ T. ಕ್ಲೆಮೆಂಟ್. ಫೋರ್ ಫ್ರೆಂಚ್ ಸಿಂಬಲಿಸ್ಟ್ಸ್ . ಗ್ರೀನ್‌ವುಡ್ ಪ್ರೆಸ್, 1996. ಪುಟ 114.
- ↑ "'ಆಧುನಿಕ,' 'ಆಧುನಿಕತೆ,' ಮತ್ತು 'ಆಧುನಿಕತಾ ಸಿದ್ಧಾಂತ' ಎಂಬ ಶಬ್ದಗಳು ಹೊಂದಿರುವ ಸಂಬಂಧವನ್ನು ಅರ್ಥೈಸಿಕೊಳ್ಳಲು ಇರುವ ಒಂದು ವಿಧಾನವೆಂದರೆ, ಸೌಂದರ್ಯಮೀಮಾಂಸೆಯ ಆಧುನಿಕತಾ ಸಿದ್ಧಾಂತವು ಉನ್ನತವಾದ ಅಥವಾ ಆಂತ್ಯಿಕ ಆಧುನಿಕತೆಯ ವಾಸ್ತವೀಕರಿಸಿದ ವಿಶಿಷ್ಟ ಲಕ್ಷಣವನ್ನು ಹೊಂದಿರುವ ಕಲೆಯ ಒಂದು ಸ್ವರೂಪವಾಗಿದೆ; ಸಾಮಾಜಿಕ, ಆರ್ಥಿಕ, ಮತ್ತು ಸಾಂಸ್ಕೃತಿಕ ಜೀವನವು ವ್ಯಾಪಕ ಅರ್ಥದಲ್ಲಿ ಆಧುನಿಕತೆಯ ದೆಸೆಯಿಂದ ಕ್ರಾಂತಿಕಾರಕ ಬದಲಾವಣೆಗೆ ಈಡಾದ ಅವಧಿಯನ್ನು ಇದು ಪ್ರತಿನಿಧಿಸುತ್ತದೆ... ಇದರರ್ಥ, ಹತ್ತೊಂಬತ್ತನೇ ಶತಮಾನದ ಅಂತ್ಯಭಾಗ ಮತ್ತು ಇಪ್ಪತ್ತನೇ ಶತಮಾನದ ಅವಧಿಯಲ್ಲಿದ್ದ ಆಧುನಿಕೀಕರಿಸಿದ ಸಮಾಜದ ಸನ್ನಿವೇಶದ ಹೊರಗೆ ಆಧುನಿಕ ಶೈಲಿಯ ಕಲೆಯು ಚಿಂತನೆಗೆ ಒಳಗಾಗುವುದು ಅತಿವಿರಳ. ಸಾಮಾಜಿಕ ಆಧುನಿಕತೆಯು ಆಧುನಿಕ ಶೈಲಿಯ ಕಲೆಗೆ ನೆಲೆಯಾಗಿದೆ; ಇದರ ವಿರುದ್ಧ ಕಲೆಯು ಬಂಡಾಯವೆದ್ದರೂ ಸಹ ಈ ಸ್ಥಿತಿ ಬದಲಾಗುವುದಿಲ್ಲ." ಕ್ಯಾಹೂನೆ 1996, ಪುಟ 13.
- ↑ ಆರ್ನಸನ್ 1998, ಪುಟ 10.
- ↑ ೬.೦ ೬.೧ ೬.೨ ಆರ್ನಸನ್ 1998, ಪುಟ 17.
- ↑ "ಹದಿನೇಳನೇ ಮತ್ತು ಹದಿನೆಂಟನೇ ಶತಮಾನಗಳ ಅವಧಿಯಲ್ಲಿ, ಪ್ರಪಂಚದ ಒಂದು ಹೊಸ ದೃಷ್ಟಿಕೋನ ದ ಹಿಂದೆ ಒಗ್ಗೂಡುವುದಕ್ಕೆ ಸಂಬಂಧಿಸಿದ ಆವೇಗವು ಕಂಡುಬಂದು, ಆಧುನಿಕ ಪ್ರಪಂಚ ಎಂದು ಕರೆಯಲ್ಪಡುವ ಒಂದು ಹೊಸ ಪ್ರಪಂಚ ವನ್ನು ಅದು ಅಂತಿಮವಾಗಿ ಸೃಷ್ಟಿಸಿತು". ಕ್ಯಾಹೂನೆ 1996, ಪುಟ 27.
- ↑ ಫ್ರಾಸ್ಕಿನ್ ಮತ್ತು ಹ್ಯಾರಿಸನ್ 1982, ಪುಟ 5.
- ↑ ಗೊಂಬ್ರಿಚ್ 1958, ಪುಟಗಳು 358-359.
- ↑ ಆರ್ನಸನ್ 1998, ಪುಟ 22.
- ↑ ಕೋರಿಂತ್, ಷುಸ್ಟರ್, ಬ್ರೌನರ್, ವಿಟಾಲಿ, ಮತ್ತು ಬಟ್ಸ್ 1996, ಪುಟ 25.
- ↑ ಕಾಗ್ನಿಯಾಟ್ 1975, ಪುಟ 61.
- ↑ ಕಾಗ್ನಿಯಾಟ್ 1975, ಪುಟಗಳು 43–49.
- ↑ ಮುಲಿನ್ಸ್ 2006, ಪುಟ 14.
- ↑ ಮುಲಿನ್ಸ್ 2006, ಪುಟ 9.
- ↑ ಮುಲಿನ್ಸ್ 2006, ಪುಟಗಳು 14–15.
- ↑ ಡೇವಿಡ್ ಲ್ಯಾಂಡರ್ Archived 2007-10-20 at Archive.is "ಫಿಫ್ಟೀಸ್ ಫರ್ನಿಚರ್: ದಿ ಸೈಡ್ ಟೇಬಲ್ ಆಸ್ ಸ್ಕಲ್ಪ್ಚರ್," ಅಮೆರಿಕನ್ ಹೆರಿಟೇಜ್ , ನವೆಂಬರ್/ಡಿಸೆಂಬರ್. 2006.
ಉಲ್ಲೇಖಗಳು
[ಬದಲಾಯಿಸಿ]- ಆರ್ನಸನ್, H. ಹಾರ್ವರ್ಡ್. 1998. ಹಿಸ್ಟರಿ ಆಫ್ ಮಾಡರ್ನ್ ಆರ್ಟ್: ಪೈಂಟಿಂಗ್, ಸ್ಕಲ್ಪ್ಚರ್, ಆರ್ಕಿಟೆಕ್ಷರ್, ಫೋಟೋಗ್ರಫಿ . ನಾಲ್ಕನೇ ಆವೃತ್ತಿ, ಮಾರ್ಲಾ F. ಪ್ರಾಥರ್‌ನಿಂದ ಪರಿಷ್ಕರಿಸಲ್ಪಟ್ಟಿತು, ಮೂರನೇ ಆವೃತ್ತಿಯ ನಂತರ, ಡೇನಿಯಲ್ ವೀಲರ್‌ನಿಂದ ಪರಿಷ್ಕರಿಸಲ್ಪಟ್ಟಿತು. ನ್ಯೂಯಾರ್ಕ್: ಹ್ಯಾರಿ N. ಅಬ್ರಾಮ್ಸ್, ಇಂಕ್. ISBN 0-8109-3439-6; ಅಪ್ಪರ್ ಸ್ಯಾಡಲ್ ರಿವರ್, ನ್ಯೂಜರ್ಸಿ: ಪ್ರೆಂಟೀಸ್-ಹಾಲ್. ISBN 0-13-183313-8; ಲಂಡನ್: ಥೇಮ್ಸ್ & ಹಡ್ಸನ್. ISBN 0-500-23757-3 [ಐದನೇ ಆವೃತ್ತಿ, ಪೀಟರ್ ಕಲ್ಬ್‌ನಿಂದ ಪರಿಷ್ಕರಿಸಲ್ಪಟ್ಟಿತು, ಅಪ್ಪರ್ ಸ್ಯಾಡಲ್ ರಿವರ್, N.J.: ಪ್ರೆಂಟೀಸ್ ಹಾಲ್; ಲಂಡನ್: ಪಿಯರ್‌ಸನ್/ಪ್ರೆಂಟೀಸ್ ಹಾಲ್, 2004. ISBN 0-13-184069-X]
- ಅಟ್ಕಿನ್ಸ್, ರಾಬರ್ಟ್. 1990. ಆರ್ಟ್‌ಸ್ಪೀಕ್: ಎ ಗೈಡ್ ಟು ಕಾಂಟೆಂಪರರಿ ಐಡಿಯಾಸ್, ಮೂವ್‌ಮೆಂಟ್ಸ್, ಅಂಡ್ ಬಜ್‌ವರ್ಡ್ಸ್ . ನ್ಯೂಯಾರ್ಕ್: ಆಬ್ಬೆವಿಲ್ಲೆ ಪ್ರೆಸ್. ISBN 1-55859-127-3
- ಕ್ಯಾಹೂನೆ, ಲಾರೆನ್ಸ್ E. 1996. ಫ್ರಂ ಮಾಡರ್ನಿಸಂ ಟು ಪೋಸ್ಟ್‌ಮಾಡರ್ನಿಸಂ: ಆನ್ ಆಂಥಾಲಜಿ . ಕೇಂಬ್ರಿಜ್, ಮಾಸ್: ಬ್ಲ್ಯಾಕ್‌ವೆಲ್. ISBN 1-55786-603-1
- ಕಾಗ್ನಿಯಾಟ್, ರೇಮಾಂಡ್. 1975. ಪಿಸ್ಸಾರ್ರೊ . ನ್ಯೂಯಾರ್ಕ್: ಕ್ರೌನ್. ISBN 0-517-52477-5.
- ಕೋರಿಂತ್, ಲೋವಿಸ್, ಪೀಟರ್-ಕ್ಲೌಸ್ ಷುಸ್ಟರ್, ಲೋಥರ್ ಬ್ರೌನರ್, ಕ್ರಿಸ್ಟೋಫ್ ವಿಟಾಲಿ, ಮತ್ತು ಬಾರ್ಬರಾ ಬಟ್ಸ್. 1996. ಲೋವಿಸ್ ಕೋರಿಂತ್ . ಮ್ಯೂನಿಚ್ ಮತ್ತು ನ್ಯೂಯಾರ್ಕ್: ಪ್ರೆಸ್ಟೆಲ್. ISBN 3-7913-1682-6
- ಫ್ರಾಸ್ಕಿನಾ, ಫ್ರಾನ್ಸಿಸ್, ಮತ್ತು ಚಾರ್ಲ್ಸ್ ಹ್ಯಾರಿಸನ್ (ಸಂಪಾದಿತ). 1982. ಮಾಡರ್ನ್ ಆರ್ಟ್ ಅಂಡ್ ಮಾಡರ್ನಿಸಂ: ಎ ಕ್ರಿಟಿಕಲ್ ಆಂಥಾಲಜಿ . ಮುಕ್ತ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಜೊತೆ ಪ್ರಕಟಿಸಲಾಯಿತು. ಲಂಡನ್: ಹಾರ್ಪರ್ ಅಂಡ್ ರೊ, ಲಿಮಿಟೆಡ್. ಪುನರ್‌ಮುದ್ರಿಸಲ್ಪಟ್ಟಿದ್ದು, ಲಂಡನ್: ಪೌಲ್ ಚಾಪ್‌ಮನ್ ಪಬ್ಲಿಷಿಂಗ್ ಲಿಮಿಟೆಡ್., 1982.
- ಫ್ರೇಜಿಯರ್, ನ್ಯಾನ್ಸಿ. 2001. ದಿ ಪೆಂಗ್ವಿನ್ ಕಾನ್‌ಸೈಸ್ ಡಿಕ್ಷ್‌ನರಿ ಆಫ್ ಆರ್ಟ್ ಹಿಸ್ಟರಿ . ನ್ಯೂಯಾರ್ಕ್: ಪೆಂಗ್ವಿನ್ ಬುಕ್ಸ್. ISBN 0-14-051420-1
- ಗೊಂಬ್ರಿಚ್, E. H. 1958. ದಿ ಸ್ಟೋರಿ ಆಫ್ ಆರ್ಟ್ . ಲಂಡನ್: ಫೈಡಾನ್. OCLC 220078463
- ಮುಲಿನ್ಸ್, ಚಾರ್ಲೊಟ್ಟ್. 2006. ಪೈಂಟಿಂಗ್ ಪೀಪಲ್: ಫಿಗರ್ ಪೈಂಟಿಂಗ್ ಟುಡೆ . ನ್ಯೂಯಾರ್ಕ್: D.A.P. ISBN 978-1-933045-38-2
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- ಆಡಮ್ಸ್, ಹ್ಯೂ. 1979. ಮಾಡರ್ನ್ ಪೈಂಟಿಂಗ್ . [ಆಕ್ಸ್‌ಫರ್ಡ್]: ಫೈಡಾನ್ ಪ್ರೆಸ್. ISBN 0-7148-1984-0 (ಬಟ್ಟೆಯ ಹೊದಿಕೆ) ISBN 0-7148-1920-4 (ಕಾಗದದ ರಕ್ಷಾಪುಟ)
- ಚೈಲ್ಡ್ಸ್, ಪೀಟರ್. 2000. ಮಾಡರ್ನಿಸಂ ಲಂಡನ್ ಮತ್ತು ನ್ಯೂಯಾರ್ಕ್: ರೌಟ್‌ಲೆಜ್. ISBN 0-415-19647-7 (ಬಟ್ಟೆಯ ಹೊದಿಕೆ) ISBN 0-415-19648-5 (ಕಾಗದದ ರಕ್ಷಾಪುಟ)
- ಕ್ರೌಚ್, ಕ್ರಿಸ್ಟೋಫರ್. 2000. ಮಾಡರ್ನಿಸಂ ಇನ್ ಆರ್ಟ್ ಡಿಸೈನ್ ಅಂಡ್ ಆರ್ಕಿಟೆಕ್ಷರ್ . ನ್ಯೂಯಾರ್ಕ್: ಸೇಂಟ್ ಮಾರ್ಟಿನ್ಸ್ ಪ್ರೆಸ್. ISBN 0-312-21830-3 (ಬಟ್ಟೆಯ ಹೊದಿಕೆ) ISBN 0-312-21832-X (ಕಾಗದದ ರಕ್ಷಾಪುಟ)
- ಡೆಂಪ್ಸೆ, ಅಮಿ. 2002. ಆರ್ಟ್ ಇನ್ ದಿ ಮಾಡರ್ನ್ ಎರಾ: ಎ ಗೈಡ್ ಟು ಸ್ಕೂಲ್ಸ್ ಅಂಡ್ ಮೂವ್‌ಮೆಂಟ್ಸ್ . ನ್ಯೂಯಾರ್ಕ್: ಹ್ಯಾರಿ A. ಅಬ್ರಾಮ್ಸ್. ISBN 0-8109-4172-4
- ಹಂಟರ್, ಸ್ಯಾಮ್, ಜಾನ್ ಜಾಕೋಬಸ್, ಮತ್ತು ಡೇನಿಯಲ್ ವೀಲರ್. 2004. ಮಾಡರ್ನ್ ಆರ್ಟ್ ಪರಿಷ್ಕರಿಸಲ್ಪಟ್ಟ ಮತ್ತು ನವೀಕರಿಸಲ್ಪಟ್ಟ 3ನೇ ಆವೃತ್ತಿ. ನ್ಯೂಯಾರ್ಕ್: ದಿ ವೆಂಡೋಮ್ ಪ್ರೆಸ್ [ಪಿಯರ್‌ಸನ್/ಪ್ರೆಂಟೀಸ್ ಹಾಲ್]. ISBN 0-13-189565-6 (ಬಟ್ಟೆಯ ಹೊದಿಕೆ) 0-13-150519-X (ಕಾಗದದ ರಕ್ಷಾಪುಟ)
- ಕೊಲೊಕೊಟ್ರೊನಿ, ವಾಸ್ಸಿಲಿಕಿ, ಜೇನ್ ಗೋಲ್ಡ್‌ಮನ್, ಮತ್ತು ಓಲ್ಗಾ ಟ್ಯಾಕ್ಸಿಡೌ (ಸಂಪಾದಿತ). 1998. ಮಾಡರ್ನಿಸಂ: ಆನ್ ಆಂಥಾಲಜಿ ಆಫ್ ಸೋರ್ಸಸ್ ಅಂಡ್ ಡಾಕ್ಯುಮೆಂಟ್ಸ್ . ಚಿಕಾಗೋ: ಯೂನಿವರ್ಸಿಟಿ ಆಫ್ ಚಿಕಾಗೋ ಪ್ರೆಸ್ ISBN 0-226-45073-2 (ಬಟ್ಟೆಯ ಹೊದಿಕೆ) ISBN 0-226-45074-0 (ಕಾಗದದ ರಕ್ಷಾಪುಟ)
- ಓಜೆನ್‌ಫ್ಯಾಂಟ್, ಅಮೆಡೀ. 1952. ಫೌಂಡೇಷನ್ಸ್ ಆಫ್ ಮಾಡರ್ನ್ ಆರ್ಟ್ . ನ್ಯೂಯಾರ್ಕ್: ಡೋವರ್ ಪಬ್ಲಿಕೇಷನ್ಸ್. OCLC 536109
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Webarchive template archiveis links
- Articles with hatnote templates targeting a nonexistent page
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from February 2008
- Commons category link is locally defined
- Commons category link is on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಆಧುನಿಕ ಕಲೆ
- Pages using ISBN magic links