ವಿಷಯಕ್ಕೆ ಹೋಗು

ಅಕ್ಷರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಕ್ಕರ ಇಲ್ಲಿ ಪುನರ್ನಿರ್ದೇಶಿಸುತ್ತದೆ. ವಿದ್ಯೆ ಲೇಖನಕ್ಕಾಗಿ ಇಲ್ಲಿ ನೋಡಿ.

ಅಕ್ಷರಮಾಲೆಯಲ್ಲಿ ಬರವಣಿಗೆಯ ರೂಪದಲ್ಲಿರುವ ಒಂದು ಲಿಖಿತ ಅಂಶವೇ ಅಕ್ಷರ.[] ಅಕ್ಷರಗಳು ಬಿಡಿಬಿಡಿಯಾಗಿರುತ್ತವೆ. ವಾಕ್ಯವೊಂದರಲ್ಲಿ ಹಲವಾರು ಪದಗಳಿರುತ್ತವೆ. ಪದವೊಂದರಲ್ಲಿ ಒಂದಕ್ಕಿಂತ ಹೆಚ್ಚು ಅಕ್ಷರಗಳಿರುತ್ತವೆ. ಅವುಗಳು ಸ್ವರ ಅಥವಾ ವ್ಯಂಜನ ಅಕ್ಷರಗಳಾಗಿರಬಹುದು. ಪದವು ಸ್ವರದಿಂದ ಅಥವಾ ವ್ಯಂಜನ ಅಕ್ಷರಗಳಿಂದ ಆರಂಭವಾಗುತ್ತದೆ. ಪ್ರತಿಯೊಂದು ಅಕ್ಷರಗಳು ಒಂದೊಂದು ಸಂಕೇತಗಳು. ಈ ಸಂಕೇತಗಳು ಆಯಾ ಭಾಷೆಯ ಲಿಪಿಗೆ ಅನುಗುಣವಾಗಿ ಬಳಕೆಯಾಗುತ್ತದೆ. ಪ್ರತಿಯೊಂದು ಅಕ್ಷರವನ್ನು ಒಂದು ಧ್ವನಿ ಎಂದು ಕರೆಯುತ್ತಾರೆ. ಹಾಗಾಗಿ ಅಕ್ಷರಮಾಲೆಯ ಪ್ರತಿಯೊಂದು ಅಕ್ಷರಗಳೂ ಒಂದೊಂದು ಧ್ವನಿಮಾಗಳಾಗುತ್ತವೆ. ಅಕ್ಷರವು ವಾಕ್ಯವೊಂದರ ಅತ್ಯಂತ ಕನಿಷ್ಟತಮ ಘಟಕವೂ ಆಗಬಹುದು. ಉದಾ: ಎಂದರೆ ಆ ಮನೆ. ಇಲ್ಲಿ ಅಕ್ಷರ ಒಂದು ಕನಿಷ್ಟತಮ ಘಟಕವೂ ಹೌದು. ಹಾಗೇನೆ ಅಕ್ಷರವು ಒಂದು ಪದದ ಸ್ಥಾನವನ್ನು ಹೊಂದುತ್ತದೆ.

ಅಕ್ಷರ ಪದನಿಷ್ಪತ್ತಿ

[ಬದಲಾಯಿಸಿ]

ಕ್ಷರ ಎಂದರೆ ಕ್ಷಯವಾಗು, ನಾಶವಾಗು, ಕ್ಷಯಿಸು, ಮುಗಿಯು ಎಂಬ ಅರ್ಥವನ್ನು ಹೊಂದಿದೆ. ಅ+ಕ್ಷರ ಎಂದಾಗ ನಾಶವಾಗದ, ಕ್ಷಯಿಸಲಾಗದ ಎಂಬ ಅರ್ಥವನ್ನು ಪಡೆದುಕೊಳ್ಳುತ್ತದೆ.

ಅಕ್ಷರ ಪದದ ಬಳಕೆ

[ಬದಲಾಯಿಸಿ]

ಯಾವುದೇ ಅಕ್ಷರ, ಅಕ್ಷರ ಅಳವಡಿಸು, ದಪ್ಪ ಅಕ್ಷರ, ದೊಡ್ಡ ಅಕ್ಷರ, ಬಿಡಿ ಅಕ್ಷರ, ಸ್ಪಷ್ಟ ಅಕ್ಷರ, ಅಕ್ಷರ ಸ್ಥಿತಿ ಸೂಕ್ಷ್ಮ, ಅಕ್ಷರ ಎಂದರೆ ಫಾಂಟ್, ಅಕ್ಷರ ರೂಪ, ಅಕ್ಷರ ಸ್ವರೂಪ, ಅಕ್ಷರ ನಕಾಶೆ, ಅಕ್ಷರ ಗಣ, ಅಕ್ಷರ ಸಮೂಹ, ಅಕ್ಷರ ಅಭ್ಯಾಸ[] ಇತ್ಯಾದಿ.

ವ್ಯಾಖ್ಯಾನ

[ಬದಲಾಯಿಸಿ]

ಅಕ್ಷರ' ವೆಂದರೆ ವರ್ಣಮಾಲೆಯಲ್ಲಿ ಬಿಂಬಿಸುವ ಬರವಣಿಗೆಯ ರೂಪದಲ್ಲಿರುವ ಒಂದು ಅಥವಾ ಜಾಸ್ತಿ ಶಬ್ದಗಳನ್ನು ಸ್ಫುರಿಸುವ ಒಂದು ಸಂವಹನೆಯ ಮಾಧ್ಯಮ. ಪ್ರತಿಯೊಂದು ಅಕ್ಷರವೂ ಒಂದು ಭಾಷೆಯಲ್ಲಿರುವ ವಿವಿಧ ಪದಗಳನ್ನು ಉಚ್ಚರಿಸುವ ವಿಧಾನಗಳನ್ನು ತಿಳಿಸುತ್ತದೆ. ಅಕ್ಷರವು ಬರವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಬಾಹ್ಯ ಕೊಂಡಿ

[ಬದಲಾಯಿಸಿ]
  1. https://en.wikipedia.org/wiki/Alphabet
  2. https://en.wiktionary.org/wiki/fant

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-03-04. Retrieved 2015-12-25.
  2. http://vijaykarnataka.indiatimes.com/religion/astro/-/articleshow/17708769.cms
"https://kn.wikipedia.org/w/index.php?title=ಅಕ್ಷರ&oldid=1052728" ಇಂದ ಪಡೆಯಲ್ಪಟ್ಟಿದೆ