ವಿದ್ಯೆ
Jump to navigation
Jump to search
ವಿದ್ಯೆ | |
---|---|
![]() ಸರಸ್ವತಿ, ವಿದ್ಯೆ (ಜ್ಞಾನ)ದ ದೇವತೆ | |
ಲಿಂಗ | ಏಕಲಿಂಗ |
ಮೂಲ | |
ಶಬ್ದ/ಹೆಸರು | ಭಾರತ |
ಅರ್ಥ | ಸ್ಪಷ್ಟತೆ, ನಿಜವಾದ ಜ್ಞಾನ |
ಮೂಲದ ಪ್ರದೇಶ | ಭಾರತ |
ಸಂಸ್ಕೃತ, ಪಾಲಿ ಮತ್ತು ಸಿಂಹಲ ಭಾಷೆಯಂತಹ ಹಲವಾರು ದಕ್ಷಿಣ ಏಷ್ಯಾದ ಭಾಷೆಗಳಲ್ಲಿ, ವಿದ್ಯೆ ಎಂದರೆ "ಸರಿಯಾದ ಜ್ಞಾನ" ಅಥವಾ "ಸ್ಪಷ್ಟತೆ". ವಿದ್ಯಾ ಒಂದು ಜನಪ್ರಿಯ ಭಾರತೀಯ ಏಕಲಿಂಗ ಹೆಸರು ಕೂಡ.
ಹಿಂದೂ ಧರ್ಮದಲ್ಲಿ, ಅದನ್ನು ಆಗಾಗ್ಗೆ ಜ್ಞಾನ ಮತ್ತು ಕಲಿಕೆಯ ಪೌರಾಣಿಕ ಕಲ್ಪನೆಯನ್ನು ಸೂಚಿಸುವ ಒಂದು ಗೌರವಸೂಚಕವಾಗಿ ಬಳಸಲಾಗುತ್ತದೆ. ವಿದ್ಯೆಯ ವಿರುದ್ಧ ಪದ ಅವಿದ್ಯೆ (ಅಜ್ಞಾನ ಅಥವಾ ತಪ್ಪುಮಾಹಿತಿ). ವಿದ್ಯಾ ಎನ್ನುವುದು (ಹಿಂದೂ ನಂಬಿಕೆಗಳ ಪ್ರಕಾರ) ಬ್ರಹ್ಮನ ಪತ್ನಿಯಾದ ಹಿಂದೂ ದೇವತೆ ಸರಸ್ವತಿಯ ಒಂದು ಗುಣವಾಚಕ. ಅವಳು ವ್ಯಕ್ತಿಯನ್ನು ಶುದ್ಧೀಕರಿಸುವ, ಅಳವೀಯುವ, ಮತ್ತು ಉದ್ಧಾರ ಮಾಡುವ ಉನ್ನತ ಆಧ್ಯಾತ್ಮಿಕ ಸ್ತ್ರೀ ಶಕ್ತಿ —ಪರಮ ಪ್ರಕೃತಿಯನ್ನು— ಹೊಂದಿದ್ದಾಳೆ. ಹಾಗಾಗಿ, ಅವಳನ್ನು ಜ್ಞಾನದ ದೇವತೆಯೆಂದು ಕರೆಯಲಾಗುತ್ತದೆ.