ವಿಷಯಕ್ಕೆ ಹೋಗು

ಸದಸ್ಯ:Augustine preetham

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ,

ನನ್ನ ಈ ಪುಟಕ್ಕೆ ಭೇಟಿ ಕೊಟ್ಟಿದ್ದಕ್ಕೆ ವಂದನೆಗಳು.


ನನ್ನ ಕಿರು ಪರಿಚಯ

[ಬದಲಾಯಿಸಿ]

ನನ್ನ ಹೆಸರು ಅಗಸ್ಟೀನ್ ಪ್ರೀತಮ್. ಇದೀಗ ಕನ್ನಡ ವಿಕಿಪೀಡಿಯದ ಸದಸ್ಯನಾಗಿದ್ದೇನೆ.

ನನ್ನ ಉದ್ದೇಶ

[ಬದಲಾಯಿಸಿ]

ಕನ್ನಡವನ್ನು ಉಳಿಸಿ ಬೆಳೆಸುವುದು ನನ್ನ ಉದ್ದೇಶ. ಈ ವಿಷಯದಲ್ಲಿ ರೆ.ಫರ್ಡಿನ್ಯಾಂಡ್ ಕಿಟ್ಟೆಲ್ ಅವರು ನನ್ನ ಮೇಲೆ ಬಹಳ ಪ್ರಭಾವ ಬೀರಿದ ವ್ಯಕ್ತಿ. ನನ್ನ ತಿಳುವಳಿಕೆಯ ಮಟ್ಟಕ್ಕೂ ಮತ್ತು ಜ್ಞಾನದ ಮಿತಿಯವರೆಗೂ ನನಗೆ ತಿಳಿದಿರುವುದನ್ನು ಇತರರೊಂದಿಗೆ ವಿಕಿಪೀಡಿಯದ ಮೂಲಕ ಹಂಚಿಕೊಳ್ಳುವವನಾಗಿದ್ದೇನೆ.

ನನ್ನ ಹಿನ್ನೆಲೆ

[ಬದಲಾಯಿಸಿ]

ನಾನು ಹುಟ್ಟಿ ಬೆಳೆದ ಊರು ಬೆಂಗಳೂರು.

ನನ್ನ ಹವ್ಯಾಸಗಳು

[ಬದಲಾಯಿಸಿ]

ಪಟ್ಟಣದ ಹೊರಗೆ ಮೋಟರ್ ಬೈಕಿನ ಸವಾರಿ ನನ್ನ ಹವ್ಯಾಸಗಳಲ್ಲಿ ಒಂದು. ದೆಹಲಿಯಿಂದ ಭರತ್ ಪುರ ಮತ್ತು ಆಗ್ರಾಗೆ ಮೋಟರ್ ಬೈಕಿನಲ್ಲಿ ಸಂಚರಿಸಿದುದು ಬಹು ಸ್ಮರಣೀಯವಾಗಿದೆ. ಬೆಂಗಳೂರು ಪಟ್ಟಣದಂತಹ ಸರಹದ್ದಿನಲ್ಲಿ ಗಾಡಿ ಓಡಿಸುವುದು ಅಂದರೆ ಕೇಳಬೇಡಿ. ಇದಲ್ಲದೆ ಸಂಗೀತ ಕೇಳಿಸಿಕೊಳ್ಳುವುದು ಕೂಡ ಮತ್ತೊಂದು ಹವ್ಯಾಸ.

ವಿಕಿಪೀಡಿಯದಲ್ಲಿ ನನ್ನ ಕಾಣಿಕೆಗಳು

[ಬದಲಾಯಿಸಿ]

ಇದುವರೆಗೂ ಯಾರೂ ಈ ವಿಷಯಗಳ ಬಗ್ಗೆ ಬರೆಯದೆ ಇದ್ದದರಿಂದ ನನಗೆ ತಿಳಿದ ಮಟ್ಟಿಗೆ ಈ ಕೆಳಗಿನ ವಿಷಯಗಳ ಬಗ್ಗೆ ಹೊಸ ಲೇಖನಗಳನ್ನು ಬರೆದಿರುತ್ತೇನೆ.

  1. ಬೈಬಲ್
  2. ಹಳೆ ಒಡಂಬಡಿಕೆ
  3. ಹೊಸ ಒಡಂಬಡಿಕೆ
  4. ಗ್ರಹಮ್ ಸ್ಟೇನ್ಸ್

ನಿಮ್ಮಿಂದ ನನ್ನ ಅಪೇಕ್ಷೆ

[ಬದಲಾಯಿಸಿ]

ಈ ಮೇಲ್ಕಂಡ ವಿಷಯಗಳನ್ನು ಹಾಗು ಇತರ ಅನೇಕ ವಿಷಯಗಳನ್ನು ಕನ್ನಡ ವಿಕಿಪೀಡಿಯದಲ್ಲಿ ಉತ್ತಮವಾದ ಮಾಹಿತಿಗಳಿಂದ ಪೂರ್ಣಗೊಳಿಸುವ ಅಗತ್ಯವಿದೆ. ಈ ಕಾರಣದಿಂದ ಇದನ್ನು ಉತ್ತಮಗೊಳಿಸಲು ಏನಾದರು ಸಲಹೆಗಳಿದ್ದರೆ ಇಲ್ಲವೆ ನಾನು ಬರೆದುದರ ಬಗ್ಗೆ ಯಾವುದಾದರು ಪ್ರಶ್ನೆಗಳಿದ್ದರೆ ದಯವಿಟ್ಟು ನನ್ನನ್ನು ವಿ-ಅಂಚೆಯ ಮೂಲಕ ಸಂಪರ್ಕಿಸಿ.

ವಿಕಿಪೀಡಿಯದಲ್ಲಿ ನೀವು ಸಹ ಲೇಖನಗಳನ್ನು ತಿದ್ದಬಹುದು.


ಧನ್ಯವಾದ. ನಿಮಗೆಲ್ಲರಿಗೂ ನನ್ನ ಶುಭಾಷಯಗಳು.


ಇಂತಿ,

ಅಗಸ್ಟೀನ್ ಪ್ರೀತಮ್