ಹೊಂಗೆ ಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊಂಗೆಮರ
ಹೂ ಗೊಂಚಲು
ಹೂವು
ಹಸಿಕಾಯಿ

ಬಹಳ ಹಿಂದಿನ ಕಾಲದಿಂದಲೂ ಭಾರತೀಯರಿಗೆ ಚಿರಪರಿಚಿತವಿರುವ ಮರ. ಭಾರತದೆಲ್ಲೆಡೆಯೂ ಈ ಮರವನ್ನು ಬೆಳೆಸುತ್ತಾರೆ. ರೈತರು ಗದ್ದೆ ಮತ್ತು ಹೊಲಗಳ ಬದಿಯಲ್ಲಿ ಈ ಮರವನ್ನು ಬೆಳೆಸುತ್ತಾರೆ. ನೀರಿನ ನಾಲೆಗಳ ಬದಿಯಲ್ಲಿ ಸ್ವಾಭಾವಿಕವಾಗಿಯೇ ಬೆಳೆಯುತ್ತದೆ. ಇದರ ವೈಜ್ಞಾನಿಕ ಹೆಸರು ಪೊಂಗಾಮಿಯಾ ಪಿನ್ನಾಟ. ಇದು ಪ್ಯಾಪಿಲಿಯೋನೇಸೀ ಸಸ್ಯಕುಟುಂಬಕ್ಕೆ ಸೇರಿದೆ. [೧], [೨][೩]

ಬೇರೆ ಭಾಷೆಗಳಲ್ಲಿ[ಬದಲಾಯಿಸಿ]

 • ಸಂಸ್ಕೃತ: ಕರಂಜ, ನಕ್ತಮಾಲ, ಉದಕೀರ್ಯ
 • ಆಂಗ್ಲ ಭಾಷೆಯಲ್ಲಿ ಇಂಡಿಯನ್ ಬೀಚ್
 • ಕನ್ನಡ: ಹೊಂಗೆ ಮರ
 • ಮಲಯಾಳಂ: ಉನ್ನು
 • ಮರಾಠಿ: ಕರಂಜ

ಪರಿಚಯ[ಬದಲಾಯಿಸಿ]

ಇದು ಒಂದು ಮಧ್ಯಮ ಗಾತ್ರದ ಮರ. ಇದರ ಎಲೆಗಳು ಹಸಿರು ಮತ್ತು ಹೊಳಪಿನಿಂದ ಕೂಡಿರುತ್ತವೆ. ಹೂವುಗಳು ಗುಚ್ಚಾಕಾರವಾಗಿದ್ದು ಎಲೆಗಳ ನಡುವೆ ಕಂಗೊಳಿಸುತ್ತವೆ. ಹೂವುಗಳು ಗಾಢನೀಲಿವರ್ಣವನ್ನು ಹೊಂದಿರುತ್ತವೆ. ಕಾಯಿ ಗಟ್ಟಿಯಾಗಿದ್ದು ಉಬ್ಬಿರುತ್ತವೆ, ಬೀಜಗಳಿಂದ ಕಹಿಯಾದ ಎಣ್ಣೆಯನ್ನು ತೆಗೆಯುತ್ತಾರೆ.

ಉಪಯುಕ್ತ ಅಂಗಗಳು[ಬದಲಾಯಿಸಿ]

ಬೀಜ ಮತ್ತು ಎಲೆ

ಉಪಯೋಗ[ಬದಲಾಯಿಸಿ]

ಹೊಂಗೆಯಿಂದ ಹಲವಾರು ಉಪಯೋಗಗಳಿವೆ. ಅವುಗಳು

 • ಇದನ್ನು ಮಧುಮೇಹ ನಿವಾರಣೆಯಲ್ಲಿ ಬಳಸುತ್ತಾರೆ.
 • ಹೇನು ಕೆರೆ, ಮೀಸೆ,ಗಡ್ಡ ಮತ್ತು ತಲೆಯಲ್ಲಿ ಕೂದಲಿನ ಉದುರಿವಿಕೆಯನ್ನು ತಡೆಯಲು, ಒಣಗಿದ ಹೊಂಗೆ ಬೀಜಗಳನ್ನು ನೀರಿನಲ್ಲಿ ತೇದು ಗಂಧವನ್ನು ಕೂದಲು ಉದುರುವ ಕಡೆ ಹಚ್ಚುವುದು.
 • ತಲೆನೋವಿನಲ್ಲಿ ಉಪಯೋಗಿಸುತ್ತಾರೆ
 • ಚರ್ಮ ಕಾಯಿಲೆಯಲ್ಲಿ ಅದರ ಬೀಜದ ಎಣ್ಣೆಯನ್ನು ಹಾಗೂ ಎಲೆಯ ಕಷಾಯವನ್ನು ಬಳಸುತ್ತಾರೆ.
 • ಕೈಕಾಲು ಮತ್ತು ಕೀಲು ನೋವಿಗೆ ಇದರ ಎಣ್ಣೆಯನ್ನು ಬಳಸುತ್ತಾರೆ

ಉಲ್ಲೇಖ[ಬದಲಾಯಿಸಿ]

 1. http://www.prajavani.net/news/article/2011/11/24/115377.html[permanent dead link]
 2. http://www.vartamaana.com/2012/10/07/%E0%B2%87%E0%B2%82%E0%B2%A7%E0%B2%A8-%E0%B2%B8%E0%B3%8D%E0%B2%B5%E0%B2%BE%E0%B2%B5%E0%B2%B2%E0%B2%82%E0%B2%AC%E0%B2%A8%E0%B3%86%E0%B2%97%E0%B3%86-%E0%B2%B9%E0%B3%8A%E0%B2%82%E0%B2%97%E0%B3%86/
 3. ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂವ‍ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು ಸಂಪಾದಕರು: ವೈದ್ಯ ಎ.ಆರ್.ಎಂ. ಸಾಹೇಬ್ ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು