ವಿಷಯಕ್ಕೆ ಹೋಗು

ಹೊಂಗೆ ಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Millettia pinnata
Flowers
Scientific classification e
ಸಾಮ್ರಾಜ್ಯ: Plantae
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: Eudicots
ಏಕಮೂಲ ವರ್ಗ: Rosids
ಗಣ: Fabales
ಕುಟುಂಬ: Fabaceae
ಕುಲ: ಮಿಲ್ಲೇಟಿಯಾ
ಪ್ರಜಾತಿ:
M. pinnata
Binomial name
Millettia pinnata
Synonyms[][]
List
    • Cytisus pinnatus L.
    • Derris indica (Lam.) Bennet
    • Galedupa indica Lam.
    • Galedupa pinnata (L.) Taub.
    • Pongamia glabra Vent.
    • Pongamia mitis Kurz
    • Pongamia pinnata (L.) Pierre[][]

ಹೊಂಗೆ ಮರ ಬಹಳ ಹಿಂದಿನ ಕಾಲದಿಂದಲೂ ಭಾರತೀಯರಿಗೆ ಚಿರಪರಿಚಿತವಿರುವ ಮರ. ಭಾರತದೆಲ್ಲೆಡೆಯೂ ಈ ಮರವನ್ನು ಬೆಳೆಸುತ್ತಾರೆ. ರೈತರು ಗದ್ದೆ ಮತ್ತು ಹೊಲಗಳ ಬದಿಯಲ್ಲಿ ಈ ಮರವನ್ನು ಬೆಳೆಸುತ್ತಾರೆ. ನೀರಿನ ನಾಲೆಗಳ ಬದಿಯಲ್ಲಿ ಸ್ವಾಭಾವಿಕವಾಗಿಯೇ ಬೆಳೆಯುತ್ತದೆ. ಇದು ನಿತ್ಯಹಸುರಿನ ಮರ. ಕರಾವಳಿ ಪ್ರದೇಶಗಳಲ್ಲಿಯೂ ಬೆಳೆಯುತ್ತದೆ. ಒಳನಾಡಿನಲ್ಲಿ ತೋಪುಗಳಲ್ಲಿ ಸಾಲು ಮರಗಳಾಗಿ ಇದನ್ನು ವಿಶೇಷವಾಗಿ ಬೆಳೆಸುತ್ತಾರೆ. ಬರಡು ಪ್ರದೇಶಗಳಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ಅಲ್ಲಲ್ಲಿ ತೋಪುಗಳಲ್ಲಿ ಬೆಳೆಯುವುದುಂಟು. ಕುಳ್ಳು ಕಾಂಡದ ಇದು ಹರಡಿ ವಿಸ್ತಾರವಾಗಿ ಬೆಳೆಯುವುದು. ಇದರ ವೈಜ್ಞಾನಿಕ ಹೆಸರು ಪೊಂಗಾಮಿಯಾ ಪಿನ್ನಾಟ. ಇದು ಲೆಗ್ಯುಮಿನೋಸೀ ಸಸ್ಯಕುಟುಂಬಕ್ಕೆ ಸೇರಿದೆ.[][][] ಬೇಸಿಗೆಯಲ್ಲಿ ಇದರ ನೆರಳು ಬಹುಹಿತ.

ಬೇರೆ ಭಾಷೆಗಳಲ್ಲಿ

[ಬದಲಾಯಿಸಿ]
  • ಸಂಸ್ಕೃತ: ಕರಂಜ, ನಕ್ತಮಾಲ, ಉದಕೀರ್ಯ
  • ಆಂಗ್ಲ ಭಾಷೆಯಲ್ಲಿ ಇಂಡಿಯನ್ ಬೀಚ್
  • ಕನ್ನಡ: ಹೊಂಗೆ ಮರ
  • ಮಲಯಾಳಂ: ಉನ್ನು
  • ಮರಾಠಿ: ಕರಂಜ

ಪರಿಚಯ

[ಬದಲಾಯಿಸಿ]

ಇದು ಒಂದು ಮಧ್ಯಮ ಗಾತ್ರದ ಮರ. ಇದರ ಎಲೆಗಳು ಹಸಿರು ಮತ್ತು ಹೊಳಪಿನಿಂದ ಕೂಡಿರುತ್ತವೆ. ಹೂವುಗಳು ಗುಚ್ಛಾಕಾರವಾಗಿದ್ದು ಎಲೆಗಳ ನಡುವೆ ಕಂಗೊಳಿಸುತ್ತವೆ. ಹೂವುಗಳು ಗಾಢನೀಲಿವರ್ಣವನ್ನು ಹೊಂದಿರುತ್ತವೆ. ಕಾಯಿ ಗಟ್ಟಿಯಾಗಿದ್ದು ಉಬ್ಬಿರುತ್ತವೆ. ಬೀಜಗಳಿಂದ ಕಹಿಯಾದ ಎಣ್ಣೆಯನ್ನು ತೆಗೆಯುತ್ತಾರೆ.

ಬೀಜಬಿತ್ತಿ ಸುಲಭವಾಗಿ ಬೆಳೆಸಬಹುದು. ಏಪ್ರಿಲ್-ಮೇ ತಿಂಗಳಲ್ಲಿ ಇದರ ನೀಲಿ ಮಿಶ್ರಿತ ಬಿಳಿಯ ಹೂಗೊಂಚಲು ಮೂಡಿ, ಮುಂದಿನ ಮಾರ್ಚ್-ಮೇ ತಿಂಗಳಲ್ಲಿ ಕಾಯಿಗಳು ಮಾಗುತ್ತವೆ.

ಉಪಯುಕ್ತ ಅಂಗಗಳು

[ಬದಲಾಯಿಸಿ]

ಬೀಜ ಮತ್ತು ಎಲೆ

ಉಪಯೋಗ

[ಬದಲಾಯಿಸಿ]

ಹೊಂಗೆಯಿಂದ ಹಲವಾರು ಉಪಯೋಗಗಳಿವೆ. ಅವುಗಳು

  • ಇದನ್ನು ಮಧುಮೇಹ ನಿವಾರಣೆಯಲ್ಲಿ ಬಳಸುತ್ತಾರೆ.
  • ಹೇನು ಕೆರೆ, ಮೀಸೆ,ಗಡ್ಡ ಮತ್ತು ತಲೆಯಲ್ಲಿ ಕೂದಲಿನ ಉದುರಿವಿಕೆಯನ್ನು ತಡೆಯಲು, ಒಣಗಿದ ಹೊಂಗೆ ಬೀಜಗಳನ್ನು ನೀರಿನಲ್ಲಿ ತೇದು ಗಂಧವನ್ನು ಕೂದಲು ಉದುರುವ ಕಡೆ ಹಚ್ಚುವುದು.
  • ತಲೆನೋವಿನಲ್ಲಿ ಉಪಯೋಗಿಸುತ್ತಾರೆ
  • ಚರ್ಮ ಕಾಯಿಲೆಯಲ್ಲಿ ಅದರ ಬೀಜದ ಎಣ್ಣೆಯನ್ನು ಹಾಗೂ ಎಲೆಯ ಕಷಾಯವನ್ನು ಬಳಸುತ್ತಾರೆ.
  • ಕೈಕಾಲು ಮತ್ತು ಕೀಲು ನೋವಿಗೆ ಇದರ ಎಣ್ಣೆಯನ್ನು ಬಳಸುತ್ತಾರೆ
  • ಇದರ ಹೂಗಳು, ಎಲೆಗಳು ಉತ್ಕೃಷ್ಟವಾದ ಹಸಿರು ಗೊಬ್ಬರವನ್ನು ಒದಗಿಸುತ್ತದೆ. ಹೊಂಗೆ ಹಿಂಡಿಕೂಡ ಒಳ್ಳೆಯ ಗೊಬ್ಬರ.
  • ಬೀಜದಿಂದ ಹೊಂಗೆ ಎಣ್ಣೆ ಬರುತ್ತದೆ. ಎಣ್ಣೆಯನ್ನು ಡೀಸೆಲ್‌ಗೆ ಪರ್ಯಾಯವಾಗಿ ವಾಹನ ಇಂಧನವಾಗಿ ಬಳಸಬಹುದೆಂಬ ಕಾರಣದಿಂದ ಮರಕ್ಕೆ ಬೇಡಿಕೆ ಹೆಚ್ಚುತ್ತಿದೆ.
  • ಚೌಬೀನೆ ಹಳದಿಮಿಶ್ರಿತ ಬಿಳಿಯಬಣ್ಣ. ಬಾಳಿಕೆ ಬರುವುದಿಲ್ಲ. ಸೌದೆಗಾಗಿ ಉಪಯೋಗಿಸುವುದುಂಟು.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. Heyne, Karel (1987). Tumbuhan Berguna Indonesia 2: 1005. Jakarta: Badan Litbang Kehutanan, Departemen Kehutanan. Dutch version: [http://archive.org/stream/denuttigeplanten02heyn#page/306/mode/2up -1916- II: 306.
  2. ಉಲ್ಲೇಖ ದೋಷ: Invalid <ref> tag; no text was provided for refs named KV
  3. "Millettia pinnata". Germplasm Resources Information Network (GRIN). Agricultural Research Service (ARS), United States Department of Agriculture (USDA). Retrieved 2010-05-02.
  4. ಉಲ್ಲೇಖ ದೋಷ: Invalid <ref> tag; no text was provided for refs named RFK8
  5. http://www.prajavani.net/news/article/2011/11/24/115377.html
  6. "ಆರ್ಕೈವ್ ನಕಲು". Archived from the original on 2013-01-15. Retrieved 2016-11-18.
  7. ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂವ‍ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು ಸಂಪಾದಕರು: ವೈದ್ಯ ಎ.ಆರ್.ಎಂ. ಸಾಹೇಬ್ ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: